Tag: ಕೊಲಂಬೊ

  • ಜೈಲಿನಲ್ಲಿ ಗಲಾಟೆ- 8 ಕೈದಿಗಳು ಸಾವು, 37 ಜನರಿಗೆ ಗಾಯ

    ಜೈಲಿನಲ್ಲಿ ಗಲಾಟೆ- 8 ಕೈದಿಗಳು ಸಾವು, 37 ಜನರಿಗೆ ಗಾಯ

    ಕೊಲಂಬೊ: ಶ್ರೀಲಂಕಾ ಜೈಲಿನಲ್ಲಿ ನಡೆದ ಗಲಾಟೆಯ ಪರಿಣಾಮ 8 ಕೈದಿಗಳು ಸಾವನ್ನಪ್ಪಿದ್ದು, 37 ಜನರಿಗೆ ಗಾಯವಾಗಿರುವ ಘಟನೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆದಿದೆ.

    ಕೊಲಂಬೋದ ಹೊರವಲಯದಲ್ಲಿರುವ ಜೈಲಿನಲ್ಲಿ ಭಾನುವಾರ ರಾತ್ರಿ ಗಲಾಟೆ ಆಗಿದೆ. ಈ ವೇಳೆ ಕೆಲವು ಕೈದಿಗಳು ಬಲವಂತವಾಗಿ ಬಾಗಿಲು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಗಲಭೆಯ ನಡುವೆ ಎಂಟು ಮಂದಿ ಕೈದಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಹಾಗೆಯೇ 37 ಜನಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲಂಬೋದಿಂದ 15 ಕಿ.ಮೀ ದೂರದಲ್ಲಿರುವ ಮಹರಾ ಜೈಲಿನಲ್ಲಿ 10,000 ಜನ ಕೈದಿಗಳಿರುವ ಸೌಲಭ್ಯವಿದೆ. ಆದರೆ 26,000ಕ್ಕೂ ಮೀರಿದ ಕೈದಿಗಳನ್ನು ಇರಿಸಲಾಗಿದೆ. ಕೋವಿಡ್ ಕಾರಣ ಕೆಲವರು ಅಸ್ವಸ್ಥರಾಗಿದ್ದರು. ಈ ಜೈಲಿನಲ್ಲಿದ್ದ 175ಕ್ಕೂ ಹೆಚ್ಚು ಜನರಿಗೆ ಕೋವಿಡ್ ಸೋಂಕು ತಗುಲಿತ್ತು. ಕೆಲವರು ಪ್ರಾಣ ಕಳೆದುಕೊಂಡಿದ್ದರು. ಪ್ರಾಣಭೀತಿಯಿಂದಾಗಿ ಆಕ್ರೋಶಗೊಂಡು ಗಲಾಟೆ ನಡೆದಿತ್ತು ಎಂದು ಪೊಲೀಸ್ ವಕ್ತಾರ ಅಜಿತ್ ರೋಹಾನ್ ಹೇಳಿದ್ದಾರೆ.

    ಇದೇ ವೇಳೆ ಅನೇಕರು ಜೈಲಿನಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದರು. ಆ ಸಮಯದಲ್ಲಿ ಅವರನ್ನು ತಡೆಯಲು ಹೋದ ಇತರರು ಸೇರಿ ಒಟ್ಟು 37 ಜನರು ಗಾಯಗೊಂಡಿದ್ದಾರೆ. ಕೈದಿಗಳು ಅಡುಗೆ ಕೋಣೆ ಮತ್ತು ದಾಖಲೆ ಪತ್ರಗಳಿರುವ ಕೋಣೆಗೆ ಬೆಂಕಿ ಹಚ್ಚಿದ್ದಾರೆ. ಈ ಅವಘಡದಲ್ಲಿ ಗಾಯಗೊಂಡವರನ್ನು ಸ್ಥಳೀಯ ರಾಗಮಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.

    ಕೊರೊನಾವೈರಸ್ ಹರಡುವುದನ್ನು ತಡೆಯಲು ಶ್ರೀಲಂಕಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಾಂಕ್ರಾಮಿಕ ವೈರಸ್‍ನಿಂದ 22,988 ಪ್ರಕರಣಗಳು ಮತ್ತು 109 ಸಾವುಗಳು ವರದಿಯಾಗಿವೆ ಎಂದು ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

  • ಫೋನ್ ಬಚ್ಚಿಟ್ಟ ತಾಯಿ – ಬೆಂಕಿ ಹಚ್ಚಿಕೊಂಡು ಮಗಳು ಸಾವು

    ಫೋನ್ ಬಚ್ಚಿಟ್ಟ ತಾಯಿ – ಬೆಂಕಿ ಹಚ್ಚಿಕೊಂಡು ಮಗಳು ಸಾವು

    – ಪ್ರಿಯಕರನೊಂದಿಗೆ ದೂರವಿರುವಂತೆ ತಾಯಿ ವಾರ್ನ್
    – ಮನವಿ ಮಾಡಿಕೊಂಡ್ರೂ ಮೊಬೈಲ್ ಕೊಡದ ತಾಯಿ

    ಕೊಲಂಬೊ: ಪ್ರಿಯಕರನಿಗೆ ಫೋನ್ ಮಾಡುವುದನ್ನು ತಡೆಯಲು ತಾಯಿ ಮೊಬೈಲ್ ಫೋನ್ ಕಿತ್ತುಕೊಂಡಿದ್ದಕ್ಕೆ ಯುವತಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.

    20 ವರ್ಷದ ಡಿ.ಹಾಶಿನಿ ಪಿಯಮಿಕಾ ಮೃತ ಯುವತಿ. ಶ್ರೀಲಂಕಾದ ಪುಟ್ಟಲಂನಲ್ಲಿ ಈ ಘಟನೆ ನಡೆದಿದ್ದು, ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಯುವತಿ ಮೃತಪಟ್ಟಿದ್ದಾಳೆ.

    ಮೃತ ಹಾಶಿನಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಇದು ತಾಯಿಗೆ ಇಷ್ಟ ಇರಲಿಲ್ಲ. ಹೀಗಾಗಿ ತಮ್ಮ ಪ್ರೀತಿಯ ಸಂಬಂಧವನ್ನು ಮುರಿದುಕೊಳ್ಳುವಂತೆ ಮಗಳಿಗೆ ತಾಯಿ ಅನೇಕ ಬಾರಿ ಹೇಳಿದ್ದರು. ಆದರೂ ಹಾಶಿನಿ ಮೊಬೈಲ್‍ನಲ್ಲಿ ಪ್ರಿಯಕರನೊಂದಿಗೆ ನಿರಂತರವಾಗಿ ಮಾತನಾಡುತ್ತಲೇ ಇದ್ದಳು.

    ಇದರಿಂದ ಕೋಪಗೊಂಡ ತಾಯಿ ಮಗಳಿಂದ ಮೊಬೈಲ್ ಕಿತ್ತುಕೊಂಡು ಬಚ್ಚಿಟ್ಟಿದ್ದರು. ಆಗ ಹಾಶಿನಿ ಮೊಬೈಲ್ ಹಿಂದಿರುಗಿಸುವಂತೆ ಕೇಳಿದ್ದಾಳೆ. ಆದರೆ ತಾಯಿ ಫೋನ್‍ನನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ. ಇದೇ ವಿಚಾರಕ್ಕೆ ತಾಯಿ ಮತ್ತು ಮಗಳ ನಡುವೆ ತೀವ್ರ ವಾಗ್ವಾದ ನಡೆದಿದೆ.

    ಕೊನೆಗೆ ಮೊಬೈಲ್ ಫೋನ್ ಹಿಂದಿರುಗಿಸುವಂತೆ ತಾಯಿಯ ಬಳಿ ಹಾಶಿನಿ ಮನವಿ ಮಾಡಿಕೊಂಡಿದ್ದಾಳೆ. ಆದರೂ ತಾಯಿ ಫೋನ್ ಕೊಟ್ಟಿಲ್ಲ. ಇದೇ ನೋವಿನಿಂದ ಹಾಶಿನಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹಾಶಿನಿ ಸಾವನ್ನಪ್ಪಿದ್ದಾಳೆ.

    ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • 2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ- ಶ್ರೀಲಂಕಾ ಮಾಜಿ ಸಚಿವರ ಸಮರ್ಥನೆ

    2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ- ಶ್ರೀಲಂಕಾ ಮಾಜಿ ಸಚಿವರ ಸಮರ್ಥನೆ

    – ಸಂಗಕ್ಕಾರ, ಮಹೇಲಾ ಜಯವರ್ಧನೆ ತಿರುಗೇಟು

    ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದಿದ್ದ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಮೇಲಿನ ಫಿಕ್ಸಿಂಗ್ ಆರೋಪ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದ್ದ ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಳುತಗಾಮೆಗೆ ತಮ್ಮ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡಿ ಸಮರ್ಥಿಸಿಕೊಂಡಿದ್ದಾರೆ.

    ಫಿಕ್ಸಿಂಗ್ ಆರೋಪದಲ್ಲಿ ನಾನು ಯಾವುದೇ ಆಟಗಾರರ ಹೆಸರನ್ನು ಉಲ್ಲೇಖ ಮಾಡಿಲ್ಲ. ಆದರೆ ಮಾಜಿ ಆಟಗಾರರಾದ ಸಂಗಕ್ಕಾರ, ಜಯವರ್ಧನೆ ಅವರು ಏಕೆ ಇಷ್ಟು ತೀಷ್ಣವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಮಹಿಂದಾನಂದ ಪ್ರಶ್ನಿಸಿದ್ದಾರೆ.

    ಸರ್ಕಸ್ ಆರಂಭವಾಗಿದೆ ಎಂದು ಜಯವರ್ಧನೆ ಹೇಳುತ್ತಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಏಕೆ ಇದಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ. ಅಲ್ಲದೇ ಫಿಕ್ಸಿಂಗ್ ಕುರಿತ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಕೂಡ ಬಹಿರಂಗವಾಗಿಯೇ ಫಿಕ್ಸಿಂಗ್ ಕುರಿತು ಹೇಳಿದ್ದರು ಎಂದು ಮಹಿಂದಾನಂದ ಹೇಳಿದ್ದಾರೆ.

    ಇತ್ತ ಮಹಿಂದಾನಂದ ಹೇಳಿಕೆಗಳ ಕುರಿತು ಮತ್ತೊಮ್ಮೆ ಪ್ರತಿಕ್ರಿಯೆ ನೀಡಿ ಅಸಮಾಧಾನ ಹೊರ ಹಾಕಿರುವ ಜಯವರ್ಧನೆ, ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಮಾಡುವುದು ಅಷ್ಟು ಸುಲಭದ ವಿಚಾರವಲ್ಲ. ಆದರೆ ಪಂದ್ಯದ ಆಡುವ 12ರ ಬಳಗದಲ್ಲಿರೋ ಆಟಗಾರರು ಫಿಕ್ಸಿಂಗ್‍ನಲ್ಲಿ ಭಾಗಿಯಾಗದೆ ಹೇಗೆ ಫಿಕ್ಸಿಂಗ್ ನಡೆಸುತ್ತಾರೆ ಎಂಬುವುದೇ ತಿಳಿಯುತ್ತಿಲ್ಲ. ವಿಶ್ವಕಪ್ ಟೂರ್ನಿ ನಡೆದ 9 ವರ್ಷಗಳ ಬಳಿಕ ಈಗ ಆದರೂ ನಮಗೆ ಜ್ಞಾನೋದಾಯ ಕಲ್ಪಿಸಿ ಎಂದು ಆರೋಪಗಳಿಗೆ ತಿರುಗೇಟು ನೀಡಿದ್ದರು. ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಂದು ತಂಡದಲ್ಲಿದ್ದ ಜಯವರ್ಧನೆ ಶತಕ (103 ರನ್) ಸಿಡಿಸಿದ್ದರು.

    ಇತ್ತ ಮಾಜಿ ಕ್ರೀಡಾ ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಸರ್ಕಾರ ಆರೋಪಗಳ ಕುರಿತು ತನಿಗೆ ಆದೇಶಿಸಿತ್ತು. ಫಿಕ್ಸಿಂಗ್‍ನಲ್ಲಿ ಆಟಗಾರ ಆಟಗಾರರ ಪಾತ್ರವಿಲ್ಲ. ಆದರೆ ಕೆಲ ಪಾರ್ಟಿಗಳು ಈ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿವೆ ಎಂದು ಮಹಿಂದಾನಂದ ಮಾಡಿದ್ದ ಆರೋಪಗಳ ಸತ್ಯಾಸತ್ಯತೆ ಅರಿಯಲು ಶ್ರೀಲಂಕಾ ಸರ್ಕಾರ ತನಿಖೆಗೆ ಆದೇಶಸಿದೆ. ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಬೀಸಿ 275 ರನ್ ಗುರಿ ನೀಡಿತ್ತು. ಸವಾಲಿನ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ಗೌತಮ್ ಗಂಭಿರ್ 97 ರನ್, ಧೋನಿ 91 ರನ್‍ಗಳ ಬ್ಯಾಟಿಂಗ್ ನೆರವಿನಿಂದ ಭಾರತ ಗೆಲುವು ಪಡೆದಿತ್ತು.

  • ಬ್ಯಾಟಿಂಗ್ ವೇಳೆ ಟ್ರೆಂಟ್ ಬೌಲ್ಟ್ ಹೆಲ್ಮೆಟ್‍ನಲ್ಲಿ ಸಿಕ್ಕಿಬಿದ್ದ ಬಾಲ್ – ವಿಡಿಯೋ ವೈರಲ್

    ಬ್ಯಾಟಿಂಗ್ ವೇಳೆ ಟ್ರೆಂಟ್ ಬೌಲ್ಟ್ ಹೆಲ್ಮೆಟ್‍ನಲ್ಲಿ ಸಿಕ್ಕಿಬಿದ್ದ ಬಾಲ್ – ವಿಡಿಯೋ ವೈರಲ್

    ಕೊಲಂಬೋ: ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಮೊದಲನೇ ಟೆಸ್ಟ್ ಪಂದ್ಯದ 2ನೇ ದಿನ ಹಾಸ್ಯಾಸ್ಪದ ಪ್ರಸಂಗವೊಂದು ನಡೆದಿದೆ.

    ಗಾಲೆಯಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಶ್ರೀಲಂಕಾ ಸ್ಪಿನ್ನರ್ ಲಸಿತ್ ಎಂಬುಲ್ಡೆನಿಯಾ ಎಸೆದ ಚೆಂಡು ಬ್ಯಾಟಿಂಗ್ ಮಾಡುತ್ತಿದ್ದ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅವರ ಹೆಲ್ಮೆಟ್‍ಗೆ ಸಿಕ್ಕಿ ಹಾಕಿಕೊಂಡಿತ್ತು.

    https://twitter.com/ooccricket/status/1161998041714438144

    ಇನ್ನಿಂಗ್ಸ್ ನ 82 ಓವರ್ ನ ಮೊದಲ ಎಸೆತದಲ್ಲಿ ನಡೆದಿದ್ದು, ಎಂಬುಲ್ಡೆನಿಯಾ ಎಸೆದ ಚೆಂಡನ್ನು ಹಿಂದಕ್ಕೆ ಹೊಡೆಯಲು ಟ್ರೆಂಡ್ ಬೌಲ್ಟ್ ಯತ್ನಿಸಿದಾಗ ಅವರ ಬ್ಯಾಟ್ ತುದಿಗೆ ತಗಲಿದ ಚೆಂಡು ಬೌಲ್ಟ್ ಅವರ ಹೆಲ್ಮೆಟ್‍ನ ಮುಂದಿನ ಭಾಗದಲ್ಲಿ ಹೋಗಿ ಸಿಕ್ಕಿ ಹಾಕಿಕೊಳ್ಳುತ್ತದೆ.

    ಬ್ಯಾಟ್‍ಗೆ ತಗಲಿ ನೇರವಾಗಿ ಮುಖದ ಕಡೆ ಬಂದ ಚೆಂಡನ್ನು ಕಂಡು ಸ್ವಲ್ಪ ಮಟ್ಟಿಗೆ ಗಾಬರಿಯ ಬೌಲ್ಟ್, ತನ್ನ ಸುತ್ತ ಸುತ್ತಿಗೊಂಡಿರುವ ಶ್ರೀಲಂಕಾ ಆಟಗಾರರನ್ನು ನೋಡಿ ನಗುತ್ತಾರೆ. ಈ ವಿಚಿತ್ರ ದೃಶ್ಯವನ್ನು ಕಂಡು ಕಾಮೆಂಟ್ರಿ ಹೇಳುವವರು ಕೂಡ ನಗುತ್ತಾರೆ.

    ಈ ಪಂದ್ಯದಲ್ಲಿ ಬೌಲ್ಟ್ ಅವರು 18 ರನ್ ಹೊಡೆದು ಸುರಂಗ ಲಕ್ಮಲ್ ಅವರಿಗೆ ಔಟ್ ಆಗುತ್ತಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‍ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ 267 ರನ್ ಹೊಡೆದು ಆಲೌಟ್ ಆಗಿದೆ.

    ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದೆ. ಇನ್ನೂ 2 ದಿನದ ಆಟ ಬಾಕಿಯಿದೆ.

  • ಶ್ರೀಲಂಕಾ ಪೊಲೀಸರಿಂದ ಭಾರತದ ಪತ್ರಕರ್ತನ ಬಂಧನ

    ಶ್ರೀಲಂಕಾ ಪೊಲೀಸರಿಂದ ಭಾರತದ ಪತ್ರಕರ್ತನ ಬಂಧನ

    ಕೊಲಂಬೊ: ಈಸ್ಟರ್ ಭಾನುವಾರದ ಸರಣಿ ಬಾಂಬ್ ಸ್ಫೋಟದ ನಂತರ ಶ್ರೀಲಂಕಾ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಸಮಯದಲ್ಲಿ ಅನಧಿಕೃತವಾಗಿ ಶಾಲೆಯೊಂದಕ್ಕೆ ಪ್ರವೇಶಿಸಲು ಯತ್ನಿಸಿದ ಭಾರತ ಮೂಲದ ಪತ್ರಕರ್ತನನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಪತ್ರಕರ್ತನನ್ನು ಭಾರತದ ದೆಹಲಿ ಮೂಲದ ಸಿದ್ದಿಕ್ ಅಹ್ಮದ್ ಡ್ಯಾನಿಶ್ ಎಂದು ಗುರುತಿಸಲಾಗಿದೆ. ಇವರು ನ್ಯೂಸ್ ಏಜೆನ್ಸಿಯೊಂದರಲ್ಲಿ ಛಾಯಾಚಿತ್ರ ಗ್ರಾಹಕರಾಗಿದ್ದಾರೆ. ಇದನ್ನು ಓದಿ ಸರಣಿ ಸ್ಫೋಟದ ಬಳಿಕ ಶ್ರೀಲಂಕಾದಲ್ಲಿ ಬುರ್ಕಾ ನಿಷೇಧ

    ಸಿದ್ದಿಕ್ ಅಹ್ಮದ್ ಏಪ್ರಿಲ್ 21 ರಂದು ನಡೆದ ಸರಣಿ ಬಾಂಬ್ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಆದ ಪರಿಣಾಮದ ಬಗ್ಗೆ ವರದಿ ಮಾಡಲು ಹೋಗಿದ್ದರು. ಸೇಂಟ್ ಸೆಬಾಸ್ಟಿಯಾನ್ ಚರ್ಚ್‍ನಲ್ಲಿ ಬಾಂಬ್ ಬ್ಲಾಸ್ಟ್ ಆದಾಗ ಅಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆಯಲು ಶಾಲೆಗೆ ಹೋಗಿದ್ದಾರೆ. ಆ ಶಾಲೆಗೆ ಹೋಗಲು ಅನುಮತಿ ಇಲ್ಲದಿದ್ದರೂ ಅನಧಿಕೃತವಾಗಿ ಶಾಲೆಗೆ ಪ್ರವೇಶ ಬಯಸಿದ ಕಾರಣ ಶ್ರೀಲಂಕಾ ಪೊಲೀಸರು ಸಿದ್ದಿಕ್ ನನ್ನು ಬಂಧಿಸಿದ್ದಾರೆ. ಇದನ್ನು ಓದಿ  ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ -ಸಿಲಿಕಾನ್ ಸಿಟಿಯಲ್ಲಿ ತೀವ್ರ ಕಟ್ಟೆಚ್ಚರ!

    ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ದಿನ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಸುಮಾರು 250 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

  • ಅಂಡರ್ 19 ಟೆಸ್ಟ್ – ದ್ವಿಶತಕ ಸಿಡಿಸಿ ದಾಖಲೆ ಬರೆದ ಪವನ್ ಶಾ

    ಅಂಡರ್ 19 ಟೆಸ್ಟ್ – ದ್ವಿಶತಕ ಸಿಡಿಸಿ ದಾಖಲೆ ಬರೆದ ಪವನ್ ಶಾ

    ಕೊಲಂಬೊ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೀಂ ಇಂಡಿಯಾ ಅಂಡರ್-19 ಟೆಸ್ಟ್ ಪಂದ್ಯದಲ್ಲಿ ಪವನ್ ಶಾ ಅಕರ್ಷಕ 282 ರನ್ ಸಿಡಿಸಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಶ್ರೀಲಂಕಾ ವಿರುದ್ಧ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಪವನ್ ಶಾ 282 ರನ್(332 ಎಸೆತ, 33 ಬೌಂಡರಿ, 1 ಸಿಕ್ಸರ್) ಸಿಡಿಸಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್ ನ ಅಂಡರ್ 19 ಟೆಸ್ಟ್ ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ಈ ಪಟ್ಟಿಯಲ್ಲಿ ಆಸೀಸ್ ಆಟಗಾರ ಸಿ ಪೀಕೆ ಮೊದಲ ಸ್ಥಾನದಲ್ಲಿ ಇದ್ದು, ಭಾರತದ ವಿರುದ್ಧವೇ ಪೀಕೆ ಅಜೇಯ 304 ರನ್ ಗಳಿಸಿದ್ದರು. ಇನ್ನು ಟೀಂ ಇಂಡಿಯಾ ಪರ ಗೌತಮ್ ಗಂಭೀರ್ (212), ಚೇತೇಶ್ವರ ಪೂಜಾರ ಮತ್ತು ಅಭಿನವ್ ಮುಕುಂದ್ (205ರನ್) ದ್ವಿಶತಕ ಸಿಡಿಸಿದ ಪ್ರಮುಖ ಆಟಗಾರರಾಗಿದ್ದಾರೆ.

    ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಪವನ್ ಶಾ ಅವರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಲಾಗಿತ್ತು. ಆರಂಭಿಕರಾಗಿ ಕಣಕ್ಕೆ ಇಳಿದ ಅಥರ್ವ 177ರನ್ (172 ಎಸೆತ, 20 ಬೌಂಡರಿ, 3 ಸಿಕ್ಸರ್) ಹೊಡೆದರು. ಇವರಿಬ್ಬರ ಅಮೋಘ ಆಟದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಎಂಟು ವಿಕೆಟ್ ನಷ್ಟಕ್ಕೆ ಬರೋಬ್ಬರಿ 613 ರನ್ ಗಳಿಸಿದೆ.

    ಅಂಡರ್ 19 ಟೆಸ್ಟ್ ದ್ವಿಶತಕ :
    ಪವನ್ ಶಾ – 282 ರನ್ (2018)
    ಶ್ರೀವಾಸ್ತವಾ – 220 ರನ್ (2007)
    ಗೌತಮ್ ಗಂಭೀರ್ – 212 ರನ್ (2001)
    ಚೇತೇಶ್ವರ ಪೂಜಾರ – 21 ರನ್ (2005)
    ಅಭಿನವ್ ಮುಕುಂದ್ – 205 ರನ್ (2007)
    ವಿನಾಯಕ್ ಮಾನೆ – 201 ರನ್ (2001)

  • ಆಹಾರಕ್ಕಾಗಿ ಪ್ರವಾಸಿಗರ ಜೀಪ್ ಒಳಗಡೆ ಸೊಂಡಿಲು ಹಾಕಿದ ಆನೆ!- ಫೋಟೋಗಳಲ್ಲಿ ನೋಡಿ

    ಆಹಾರಕ್ಕಾಗಿ ಪ್ರವಾಸಿಗರ ಜೀಪ್ ಒಳಗಡೆ ಸೊಂಡಿಲು ಹಾಕಿದ ಆನೆ!- ಫೋಟೋಗಳಲ್ಲಿ ನೋಡಿ

    ಕೊಲಂಬೊ: ಆಹಾರಕ್ಕಾಗಿ ಆನೆಯೊಂದು ಸಫಾರಿಗೆ ಬಂದಿದ್ದ ಜೀಪನ್ನೇ ಅಡ್ಡಹಾಕಿ ಅದರೊಳಗೆ ಸೊಂಡಿಲು ಹಾಕುವ ಮೂಲಕ ಪ್ರವಾಸಿಗರನ್ನು ಭಯಭೀತಗೊಳಿಸಿದ ಅಚ್ಚರಿಯ ಘಟನೆಯೊಂದು ಶ್ರೀಲಂಕಾದಲ್ಲಿ ನಡೆದಿದೆ.

    ಯಲಾ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ರಸ್ತೆಯ ಸಮೀಪ ಮರಗಳಿಂದ ಎಲೆ ಮತ್ತು ಹುಲ್ಲು ತಿನ್ನುತ್ತಿತ್ತು. ಈ ವೇಳೆ ಎದುರುಗಡೆಯಿಂದ ಜೀಪ್ ಬರುತ್ತಿರುವುದನ್ನು ನೋಡಿದೆ. ಅಲ್ಲದೇ ಜೀಪೊಳಗಡೆ ಆಹಾರವಿರುವುದು ಆನೆಯ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಆನೆ ಜೀಪ್ ಬಳಿ ತೆರಳಿ ಅಡ್ಡಹಾಕಿ, ಅದರೊಳಗೆ ತನ್ನ ಸೊಂಡಿಲನ್ನು ಹಾಕಿದೆ. ಇದರಿಂದ ಭಯಗೊಂಡ ಚಾಲಕ ಆನೆಯಿಂದ ತಪ್ಪಿಸಿಕೊಳ್ಳಲೆಂದು ಜೀಪನ್ನು ವೇಗವಾಗಿ ಚಲಾಯಿಸಲು ಯತ್ನಿಸಿದ್ದಾನೆ. ಆದರೆ ಜೀಪಿನಲ್ಲಿ ಕುಳಿತಿದ್ದ ಕೆಲ ಪ್ರಯಾಣಿಕರು ಭಯದಿಂದಲೇ ಆನೆಯನ್ನು ಕಂಡು ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಆನೆಗೆ ಮತ್ತಷ್ಟು ಕೋಪ ಬಂದಿದೆ. ಪರಿಣಾಮ ಓರ್ವ ಪ್ರವಾಸಿಗ ಆನೆಯಿಂದ ರಕ್ಷಿಸಿಕೊಳ್ಳಲೆಂದು ಜೀಪ್ ನಿಂದ ಹಾರಲು ರೆಡಿಯಾಗಿದ್ದಾನೆ.

    ಈ ಭಯಾನಕ ದೃಶ್ಯಗಳನ್ನು ರಷ್ಯಾದ ವನ್ಯಜೀವಿ ಫೋಟೋಗ್ರಾಫರ್ ಸರ್ಗಿ ಅವರು ತನ್ನ ಪತ್ನಿ ಜೊತೆ ಸಫಾರಿ ಹೋಗುತ್ತಿದ್ದ ಸೆರೆಹಿಡಿದಿದ್ದಾರೆ. ಆ ಘಟನೆ ಅದ್ಭುತ ಮತ್ತು ಭಯಹುಟ್ಟಿಸುವಂತಿತ್ತು ಅಂತ ಅವರು ಹೇಳಿದ್ದಾರೆ.

    ಆನೆ ಜೋರಾಗಿ ಘೀಳಿಡುತ್ತಿತ್ತು. ಅಲ್ಲದೇ ತನ್ನ ಕಾಲಿನಿಂದ ಜೀಪನ್ನು ಉರುಳಿಸಲು ಯತ್ನಿಸುತ್ತಿತ್ತು. ತನ್ನ ಕಾಲನ್ನು ಸಿಟ್ಟಿನಿಂದ ನೆಲಕ್ಕಿಡುವಾಗ ಧೂಳು ಬರುತಿತ್ತು. ಆದ್ರೆ ಜೀಪ್ ತುಂಬಾ ಪ್ರವಾಸಿಗರು ಇದ್ದುದರಿಂದ ಆನೆಗೆ ಜೀಪನ್ನು ಉರುಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಜೀಪನ್ನು ಆನೆ ತಿರುಗಿಸಲು ಆರಂಭಿಸಿತು. ಆಗ ಜೀಪಿನಲ್ಲಿದ್ದ ಪ್ರಯಾಣಿಕರು ಕಿರಿಚಾಡಲು ಶುರುಮಾಡಿದ್ದು, ಅವರ ಕಿರಿಚೋದು, ಅಳುವುದನ್ನು ಕೇಳಿದ ಸ್ಥಳೀಯ ನಿವಾಸಿಗಳ ಗುಂಪು ಸ್ಥಳಕ್ಕೆ ದೌಡಾಯಿಸಿತ್ತು. ನಂತರ ಆನೆಯನ್ನು ಓಡಿಸಿ ಅವರನ್ನು ರಕ್ಷಿಸಿದ್ದಾರೆ.

    ಈ ಆನೆ ಏಷ್ಯಾದ ಆನೆಯಾಗಿದ್ದು, ಇದು ಖಂಡದ ದೊಡ್ಡ ಸಸ್ತನಿಗಳಾಗಿವೆ. ಇದು 9 ಅಡಿ ಎತ್ತರವಾಗಿದ್ದು, ಐದು ಟನ್‍ಗಳಷ್ಟು ತೂಕವಿರುತ್ತದೆ.

  • ಡ್ರೆಸಿಂಗ್ ರೂಮ್ ಗ್ಲಾಸ್ ಡೋರ್ ಒಡೆದಿದ್ದು ಬಾಂಗ್ಲಾ ನಾಯಕ ಶಕೀಬ್?

    ಡ್ರೆಸಿಂಗ್ ರೂಮ್ ಗ್ಲಾಸ್ ಡೋರ್ ಒಡೆದಿದ್ದು ಬಾಂಗ್ಲಾ ನಾಯಕ ಶಕೀಬ್?

    ಕೊಲಂಬೊ: ನಿದಾಸ್ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾ ನಡುವಿನ ಪಂದ್ಯದ ವೇಳೆ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಡ್ರೆಸ್ಸಿಂಗ್ ರೂಮ್ ಗ್ಲಾಸ್ ಡೋರ್ ಒಡೆದಿದ್ದಾರೆ ಎಂದು ಶ್ರೀಲಂಕಾ ಮಾಧ್ಯಮವೊಂದು ವರದಿ ಮಾಡಿದೆ.

    ಪಂದ್ಯದ ರೆಫರಿಯಾಗಿ ಕಾರ್ಯನಿರ್ವಹಿಸಿದ್ದ ಕ್ರಿಸ್ ಬ್ರಾಡ್ ಪಂದ್ಯ ನಂತರ ಉಂಟಾದ ಅನುಚಿತ ವರ್ತನೆ ಕುರಿತು ಮೈದಾನದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಅಲ್ಲದೇ ಘಟನೆಯನ್ನು ಕಣ್ಣರೇ ಕಂಡಿದ್ದ ಕ್ರೀಂಡಾಗಣದ ಸಿಬ್ಬಂದಿ ಹೇಳಿಕೆ ಪಡೆದು, ಸಿಸಿಟಿವಿ ದೃಶ್ಯಗಳನ್ನು ಪರೀಶಿಲನೆ ನಡೆಸಲಾಗಿತ್ತು. ಈ ವೇಳೆ ಬಾಂಗ್ಲಾ ನಾಯಕ ಶಕೀಬ್ ಬದಲವಂತವಾಗಿ ರೂಮ್ ನ ಬಾಗಿಲನ್ನು ತಳ್ಳಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಪಂದ್ಯದ ವೇಳೆ ಮೈದಾನದಲ್ಲಿ ಅನುಚಿತ ವರ್ತನೆ ತೋರಿದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಹಾಗೂ ನುರುಲ್ ಹಸನ್‍ಗೆ ಐಸಿಸಿ ಪಂದ್ಯ ಶುಲ್ಕದಲ್ಲಿ ಶೇ.25ರಷ್ಟು ದಂಡ ಹಾಗೂ ಇಬ್ಬರು ಆಟಗಾರಿಗೂ ತಲಾ ಒಂದು ಡಿಮೆರಿಟ್ ಅಂಕ ನೀಡಿತ್ತು. ಇದನ್ನು ಓದಿ: ದಿನೇಶ್ ಕಾರ್ತಿಕ್ ಗೆ ಕ್ಷಮೆ ಕೋರಿದ ಅಮಿತಾಬ್ ಬಚ್ಚನ್!

    ಪಂದ್ಯದ ಅಂತಿಮ ಓವರ್ ವೇಳೆ ಬಾಂಗ್ಲಾದ ಮಹಮದುಲ್ಲ ಮತ್ತು ಮುಸ್ತಫಿಜೂರ್ ರೆಹ್ಮಾನ್ ಜೋಡಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಲಂಕಾ ವೇಗಿ ಉದಾನ ಸತತ 2 ಬೌನ್ಸರ್ ಹಾಕಿದರು. 2ನೇ ಎಸೆತದಲ್ಲಿ ಮುಸ್ತಫಿಜೂರ್ ರನೌಟಾದರು. ಒಂದು ಓವರ್ ನಲ್ಲಿ ಒಂದು ಬೌನ್ಸರ್ ಗೆ ಮಾತ್ರ ಅಕಾಶವಿದ್ದರೂ 2ನೇ ಬೌನ್ಸರನ್ನು ಅಂಪೈರ್ ನೋಬಾಲ್ ಎಂದು ಪರಿಗಣಿಸಲಿಲ್ಲ. ಇದರಿಂದ ಸಿಟ್ಟಾದ ಬಾಂಗ್ಲಾ ಆಟಗಾರು ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ಅಸಮಾಧಾನ ವ್ಯಕಪಡಿಸಿ ವಾಗ್ವಾದ ನಡೆಸಿದ್ದರು. ಇದನ್ನು ಓದಿ:  ಬಾಂಗ್ಲಾ ಅಭಿಮಾನಿಗಳೇ ನನ್ನನ್ನು ಕ್ಷಮಿಸಿ: ಬೌಲರ್ ರುಬೆಲ್

  • ದಿನೇಶ್ ಕಾರ್ತಿಕ್ ಕೊನೆಯ ಸಿಕ್ಸರ್ ನೋಡಿಲ್ಲ ಯಾಕೆ ಅನ್ನೋದನ್ನು ಹೇಳಿದ್ರು ರೋಹಿತ್

    ದಿನೇಶ್ ಕಾರ್ತಿಕ್ ಕೊನೆಯ ಸಿಕ್ಸರ್ ನೋಡಿಲ್ಲ ಯಾಕೆ ಅನ್ನೋದನ್ನು ಹೇಳಿದ್ರು ರೋಹಿತ್

    ಕೊಲಂಬೊ: ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಾಂಗ್ಲಾ ವಿರುದ್ಧ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಡಿಸಿದ ಸಿಕ್ಸ್ ಹೊಡೆತವನ್ನು ನಾನು ನೋಡಿಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

    ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಕಾರ್ತಿಕ್ ಕೊನೆಯ ಸಿಕ್ಸರ್ ನೋಡಲು ಸಾಧ್ಯವಾಗಲಿಲ್ಲ. ಪಂದ್ಯ ಡ್ರಾ ಆಗುತ್ತದೆ ಎಂದು ತಿಳಿದು ಸೂಪರ್ ಓವರ್ ಗೆ ಸಿದ್ಧತೆ ನಡೆಸಲು ಡ್ರೆಸ್ಸಿಂಗ್ ರೂಮ್ ಗೆ ತೆರಳಿ ಪ್ಯಾಡ್ ಧರಿಸಿದ್ದಾಗಿ ತಿಳಿಸಿದರು. ಅಲ್ಲದೇ ದಿನೇಶ್ ಅವರ ಪ್ರದರ್ಶನ ನೋಡಲು ಸಂತಸ ಉಂಟಾಯಿತು. ಈ ಮೂಲಕ ದಿನೇಶ್ ತಮ್ಮ ಸಾಮರ್ಥ್ಯವನ್ನು ತೊರಿಸಿದ್ದಾರೆ ಎಂದು ಹೊಗಳಿದರು.

    ಇದೇ ವೇಳೆ ದಿನೇಶ್ ಭಿನ್ನ ಹಾಗೂ ಭಾರೀ ಹೊಡೆತಗಳನ್ನು ಸಿಡಿಸುವ ಕೌಶಲ್ಯ ಹೊಂದಿದ್ದಾರೆ. ಅದ್ದರಿಂದಲೇ ಅವರಿಗೆ ಹಿಂಬಡ್ತಿ ನೀಡಲಾಯಿತು. ಈ ನಿರ್ಧಾರದ ಕುರಿತು ನನಗೆ ಹೆಮ್ಮೆಯಾಗುತ್ತಿದೆ ಎಂದು ರೋಹಿತ್ ತಿಳಿಸಿದರು.

    ನಿದಾಸ್ ತ್ರಿಕೋನ ಟಿ20 ಸರಣಿಯ ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್ ಶರ್ಮಾ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ರನ್ನು ಏಳನೇ ಕ್ರಮಾಂಕದಲ್ಲಿ ಕಳುಹಿಸಿದ್ದರು. ಈ ವೇಳೆ ಸಂಕಷ್ಟದಲ್ಲಿದ್ದ ತಂಡಕ್ಕೆ ತಮ್ಮ ಭರ್ಜರಿ ಬ್ಯಾಟಿಂಗ್ ನಿಂದ ದಿನೇಶ್ ತಿರುವು ನೀಡಿದರು. ಮಿಂಚಿನ ಆಟವಾಡಿದ ದಿನೇಶ್ ಕಾರ್ತಿಕ್ ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದರು. ಇದನ್ನೂ ಓದಿ: ಸಿಕ್ಸರ್ ಸಿಡಿಸಲು ಅಭ್ಯಾಸ ನಡೆಸುತ್ತಿದ್ದೆ: ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್

    ಭಾರತದ ಪರವಾಗಿ ರೋಹಿತ್ ಶರ್ಮಾ 56, ಪಾಂಡೆ 28 ರನ್ ಗಳಿಸಿದರು. ಬಾಂಗ್ಲಾ ಪರವಾಗಿ ಶಬ್ಬಿರ್ ರೆಹಮಾನ್ 77, ಶಕೀಬ್ ಅಲ್ ಹಸನ್ 7, ಮುಷ್ಫಿಕುರ್ ರಹೀಮ್ 09, ಮಹಮ್ಮದುಲ್ಲಾ 21, ತಮೀಮ್ ಇಕ್ಬಾಲ್ 15 ರನ್ ಗಳಿಸಿದ್ದರು.

  • ಸಿಕ್ಸರ್ ಸಿಡಿಸಲು ಅಭ್ಯಾಸ ನಡೆಸುತ್ತಿದ್ದೆ: ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್

    ಸಿಕ್ಸರ್ ಸಿಡಿಸಲು ಅಭ್ಯಾಸ ನಡೆಸುತ್ತಿದ್ದೆ: ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್

    ಕೊಲಂಬೊ: ನಿದಾಸ್ ತ್ರಿಕೋನ ಸರಣಿಯ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಗೆ ರೋಚಕ ಗೆಲುವು ತಂದುಕೊಟ್ಟ ದಿನೇಶ್ ಕಾರ್ತಿಕ್, ಬಹಳ ದಿನಗಳಿಂದ ಈ ರೀತಿಯ ಹೊಡೆತ ಬಾರಿಸುವುದನ್ನು ಅಭ್ಯಾಸ ಮಾಡುತ್ತಿದೆ ಎಂದು ಹೇಳಿದ್ದಾರೆ.

    ಟೀಂ ಇಂಡಿಯಾ 133 ರನ್ ಗೆ 5 ವಿಕೆಟ್ ಕಳೆದು ಕೊಂಡಿದ್ದ ಸಂಕಷ್ಟದ ವೇಳೆಯಲ್ಲಿ ಮೈದಾನ ಪ್ರವೇಶಿದ ಕಾರ್ತಿಕ್ ಮೊದಲ 3 ಎಸೆತಗಳಲ್ಲಿ ಎರಡು ಸಿಕ್ಸರ್, ಒಂದು ಬೌಂಡರಿ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವನ್ನು ತಂದುಕೊಟ್ಟಿದ್ದರು.

    ಪಂದ್ಯದ ಬಳಿಕ ಮಾತನಾಡಿದ ಕಾರ್ತಿಕ್ ನಾನು ಈ ರೀತಿಯ ಹೊಡೆತಗಳನ್ನು ಸಿಡಿಸಲು ಅಭ್ಯಾಸ ಮಾಡಿದ್ದೆ. ಕ್ರಿಸ್ ನಲ್ಲಿ ಬಲವಾಗಿ ನೆಲೆಯೂರಿ ಚೆಂಡನ್ನು ಬೌಂಡರಿ ಬಾರಿಸಲು ಸಮರ್ಥನಾಗಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ತನ್ನನ್ನು ಬೆಂಬಲಿಸಿದ ಎಲ್ಲ ಸಿಬ್ಬಂದಿಗೂ ಧನ್ಯವಾದ ತಿಳಿಸಿದ್ದಾರೆ.

    ಯುವ ಆಟಗಾರರೇ ತುಂಬಿದ್ದ ಟೀಂ ಇಂಡಿಯಾ ಸರಣಿಯಲ್ಲಿ ಗೆಲುವು ಪಡೆಯುವುದರೊಂದಿಗೆ ನ್ಯಾಯ ನೀಡಿದೆ. ಗೆಲುವಿನೊಂದಿಗೆ ಸರಣಿ ಮುಕ್ತಾಯ ಗೊಳಿಸುತ್ತಿರುವುದು ಸಂತೋಷ ಉಂಟು ಮಾಡಿದೆ ಎಂದು ಹೇಳಿದರು.

    ಗೆಲುವಿನ 167 ರನ್ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಪರ ಕ್ಯಾಪ್ಟನ್ ರೋಹಿತ್ ಶರ್ಮಾ (56) ಅರ್ಧಶತಕ ಸಿಡಿಸಿದರು. ಮಾಧ್ಯಮ ಕ್ರಮಾಂಕದ ಆಟಗಾರ ಮನೀಶ್ ಪಾಂಡೆ (28) ಕಾಣಿಕೆ ನೀಡಿದ ಬಳಿಕ ಸೋಲಿನ ಸುಳಿಗೆ ಸಿಲುಕಿತ್ತು. ಕೊನೆಯ ಎರಡು ಓವರ್ ಗಳಲ್ಲಿ ಗೆಲುವಿಗೆ 34 ರನ್‍ಗಳ ಅಗತ್ಯವಿತ್ತು.

    ಈ ವೇಳೆ ಬ್ಯಾಟಿಂಗ್ ಬಂದ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 29 ರನ್ ಸಿಡಿಸಿ ಟೀ ಇಂಡಿಯಾ ಗೆಲುವಿಗೆ ಕಾರಣರಾದರು. ಅಲ್ಲದೇ ಪಂದ್ಯದ ಕೊನೆಯ ಎಸೆತದಲ್ಲಿ 5 ರನ್ ಅಗತ್ಯವಿತ್ತು. ಈ ವೇಳೆ ಸಿಕ್ಸರ್ ಸಿಡಿಸಿ ಹೀರೋ ಎನಿಸಿಕೊಂಡರು.