Tag: ಕೊಲಂಬೊ

  • ಶ್ರೀಲಂಕಾದೊಂದಿಗೆ ತನ್ನ ವಿನಿಮಯಕ್ಕೆ ತೊಂದರೆ ಮಾಡುವುದನ್ನು ನಿಲ್ಲಿಸಿ – ಭಾರತಕ್ಕೆ ಚೀನಾ ಮನವಿ

    ಶ್ರೀಲಂಕಾದೊಂದಿಗೆ ತನ್ನ ವಿನಿಮಯಕ್ಕೆ ತೊಂದರೆ ಮಾಡುವುದನ್ನು ನಿಲ್ಲಿಸಿ – ಭಾರತಕ್ಕೆ ಚೀನಾ ಮನವಿ

    ಬೀಜಿಂಗ್: ಆಯಕಟ್ಟಿನ ಹಂಬಂಟೋಟಾ ಬಂದರಿನಲ್ಲಿ ಚೀನಾದ ಉನ್ನತ ತಂತ್ರಜ್ಞಾನದ ಸಂಶೋಧನಾ ನೌಕೆಯ ಯೋಜಿತ ಡಾಕಿಂಗ್ ಅನ್ನು ಮುಂದೂಡಲು ಶ್ರೀಲಂಕಾದ ಮನವಿಯಿಂದ ರೊಚ್ಚಿಗೆದ್ದ ಚೀನಾ, ಕೊಲಂಬೊದ ಮೇಲೆ ಒತ್ತಡ ಹೇರುವುದು ಅರ್ಥಹೀನ ಎಂದು ಸೋಮವಾರ ಭಾರತವನ್ನು ಕೇಳಿಕೊಂಡಿದೆ.

    ಕೊಲಂಬೊದ ವರದಿಗಳ ಪ್ರಕಾರ, ಭಾರತವು ಭದ್ರತಾ ಕಳವಳ ವ್ಯಕ್ತಪಡಿಸಿದೆ. ಈ ಕಾರಣ ಆಗಸ್ಟ್ 11 ರಿಂದ 17 ರವರೆಗೆ ಹಂಬನ್‍ತೋಟ ಬಂದರಿನಲ್ಲಿ ಡಾಕಿಂಗ್ ಮಾಡಲು ನಿಗದಿಯಾಗಿದ್ದ ಚೀನಾದ ಬಾಹ್ಯಾಕಾಶ ಮತ್ತು ಉಪಗ್ರಹ ಟ್ರ್ಯಾಕಿಂಗ್ ಸಂಶೋಧನಾ ನೌಕೆ ‘ಯುವಾನ್ ವಾಂಗ್ 5’ ಆಗಮನವನ್ನು ಮುಂದೂಡುವಂತೆ ಶ್ರೀಲಂಕಾ ಬೀಜಿಂಗ್‍ಗೆ ಕೇಳಿಕೊಂಡಿದೆ. ಇದನ್ನೂ ಓದಿ: ಅಕ್ರಮ ಗೋಹತ್ಯೆ ಮನೆ ಮೇಲೆ ದಾಳಿ – ವಿದ್ಯುತ್ ಸಂಪರ್ಕ ಕಟ್, ಶರಣಾಗಲು ಸೂಚನೆ 

    ವರದಿಗಳಿಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಬೀಜಿಂಗ್ ವರದಿಗಳನ್ನು ಗಮನಿಸಿದೆ. ಚೀನಾ ಮತ್ತು ಶ್ರೀಲಂಕಾ ನಡುವಿನ ಸಹಕಾರವು ಎರಡು ದೇಶಗಳ ಸ್ವತಂತ್ರ ಆಯ್ಕೆಯಾಗಿದೆ. ಎರಡು ದೇಶಗಳು ಸಾಮಾನ್ಯ ಹಿತಾಸಕ್ತಿಗಳನ್ನು ಪೂರೈಸುತ್ತದೆ. ಇದು ಯಾವುದೇ ಮೂರನೇ ವ್ಯಕ್ತಿಯನ್ನು ಗುರಿಯಾಗಿಸಿಲ್ಲ ಎಂದು ಟೀಕಿಸಿದರು.

    China Seeks Urgent Meeting After Sri Lanka Relents To India Pressure: Report

    ಭದ್ರತಾ ಕಾಳಜಿಯ ವಿಷಯವನ್ನು ಉಲ್ಲೇಖಿಸಿ ಶ್ರೀಲಂಕಾದ ಮೇಲೆ ಒತ್ತಡ ಹೇರುವುದು ಅರ್ಥಹೀನವಾಗಿದೆ. ಶ್ರೀಲಂಕಾ ಸಾರ್ವಭೌಮ ರಾಷ್ಟ್ರವಾಗಿದೆ. ಅದು ತನ್ನ ಸ್ವಂತ ಅಭಿವೃದ್ಧಿ ಹಿತಾಸಕ್ತಿಗಳ ಬೆಳಕಿನಲ್ಲಿ ಇತರ ದೇಶಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು. ಇದನ್ನೂ ಓದಿ:  ಉಕ್ರೇನ್ ಯುದ್ಧದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ವೀಡಿಯೋ ಶೇರ್ ಮಾಡಿದ ರಷ್ಯಾ

    Live Tv
    [brid partner=56869869 player=32851 video=960834 autoplay=true]

  • ರಾಜೀನಾಮೆಗೂ ಮುನ್ನವೇ ಮಾಲ್ಡೀವ್ಸ್‌ಗೆ ಹಾರಿದ ಗೊಟಬಯ ರಾಜಪಕ್ಸೆ

    ರಾಜೀನಾಮೆಗೂ ಮುನ್ನವೇ ಮಾಲ್ಡೀವ್ಸ್‌ಗೆ ಹಾರಿದ ಗೊಟಬಯ ರಾಜಪಕ್ಸೆ

    ಕೊಲಂಬೋ: ಶ್ರೀಲಂಕಾದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಜನರು ಒಂದು ತಿಂಗಳಿನಿಂದ ವ್ಯಾಪಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆ ನೀಡುವ ಮುನ್ನವೇ ದೇಶದಿಂದ ಮಾಲ್ಡೀವ್ಸ್‌ಗೆ ಹಾರಿದ್ದಾರೆ.

    ಶನಿವಾರ ರಾಜಪಕ್ಸೆಯವರ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ನುಗ್ಗಿ ದಾಂಧಲೆ ನಡೆಸಿದ್ದರು. ದೇಶದ ಆರ್ಥಿಕತೆ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆ ರಾಜಪಕ್ಸೆ ತಮ್ಮ ನಿವಾಸ ತೊರೆದು ಬುಧವಾರ ರಾಜೀನಾಮೆ ನೀಡುವುದಾಗಿ ಶನಿವಾರ ಭರವಸೆ ನೀಡಿದ್ದರು. ಇದನ್ನೂ ಓದಿ: ರಾಜಪಕ್ಸೆ U-turn? ಕುಟುಂಬ ಸುರಕ್ಷಿತ ಸ್ಥಳ ತಲುಪುವವರೆಗೆ ರಾಜೀನಾಮೆ ನೀಡಲ್ಲ

    ಆದರೀಗ ಬಂಧನದ ಭೀತಿಯಿಂದ ರಾಜೀನಾಮೆ ನೀಡುವುದಕ್ಕೂ ಮುನ್ನವೇ ರಾಜಪಕ್ಸೆ ಗೊಟಬಯ ಅವರು ಮಾಲ್ಡೀವ್ಸ್‌ಗೆ ತಮ್ಮ ಪತ್ನಿ ಹಾಗೂ ಇಬ್ಬರು ಅಂಗರಕ್ಷಕರೊಂದಿಗೆ ಲಂಕಾ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‍ನ ರಾಜಧಾನಿ ಮಾಲೆಗೆ ಹೊರಟಿದ್ದಾರೆ ಎಂದು ಏಜೆನ್ಸಿಗಳು ವರದಿ ಮಾಡಿವೆ. ಇದನ್ನೂ ಓದಿ: ಶಾರ್ಟ್‌ಕಟ್‌ ರಾಜಕೀಯದ ಮೂಲಕ ಮತಗಳನ್ನು ಸೆಳೆಯುವುದು ತುಂಬಾ ಸುಲಭ: ಪ್ರಧಾನಿ ಮೋದಿ

    ಈ ಕುರಿತಂತೆ ಪ್ರತಿಕ್ರಿಯಿಸಿರುವ ವಲಸೆ ಅಧಿಕಾರಿಯೊಬ್ಬರು, ಅವರ ಪಾಸ್‍ಪೋರ್ಟ್‍ಗಳನ್ನು ಸ್ಟ್ಯಾಂಪ್ ಮಾಡಲಾಗಿದ್ದು, ವಿಶೇಷ ವಾಯುಪಡೆಯ ವಿಮಾನ ಮೂಲಕ ತೆರಳಿದರು. ವಿಮಾನಕ್ಕಾಗಿ 24 ಗಂಟೆ ಕಾದು ರಾಜಪಕ್ಸೆ ಗೊಟಬಯ ಅವರು ವಾಣಿಜ್ಯ ವಿಮಾನದಲ್ಲಿ ದುಬೈಗೆ ಹೋಗಬೇಕೆಂದುಕೊಂಡರು. ಆದರೆ ವಿಮಾನ ನಿಲ್ದಾಣ ಸಿಬ್ಬಂದಿ ಗೊಟಬಯ ರಾಜಪಕ್ಸೆ ಅವರಿಗೆ ವಿಐಪಿ ಸೇವೆಗಳನ್ನು ನೀಡಲು ನಿರಾಕರಿಸಿದರು ಮತ್ತು ಎಲ್ಲಾ ಪ್ರಯಾಣಿಕರಂತೆ ಸಾರ್ವಜನಿಕ ಕೌಂಟರ್ ಮೂಲಕ ಹೋಗಬೇಕೆಂದು ಒತ್ತಾಯಿಸಿದರು ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಯ 3 ಓವರ್‌ಗಳಲ್ಲಿ 59 ರನ್ ಚಚ್ಚಿ ದಾಖಲೆಯ ಚೇಸಿಂಗ್ – ಲಂಕಾ ತಂಡದ ಹೀರೋ ಆದ ಶನಕ

    ಕೊನೆಯ 3 ಓವರ್‌ಗಳಲ್ಲಿ 59 ರನ್ ಚಚ್ಚಿ ದಾಖಲೆಯ ಚೇಸಿಂಗ್ – ಲಂಕಾ ತಂಡದ ಹೀರೋ ಆದ ಶನಕ

    ಕೊಲಂಬೊ: ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ 3 ಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡವು ಚೇಸಿಂಗ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೆಚ್ಚೆದೆಯ ದಾಖಲೆಯ ಚೇಸಿಂಗ್ ಮೂಲಕ ಪಂದ್ಯದ ಕೊನೆಯ ಒಂದು ಬಾಲ್ ಬಾಕಿ ಇರುವಾಗಲೇ ಗೆಲ್ಲುವ ಮೂಲಕ ವೈಟ್ ವಾಶ್ ಮುಖಭಂಗವನ್ನು ತಪ್ಪಿಸಿಕೊಂಡಿದೆ.

    3 ಪಂದ್ಯಗಳ ಟಿ-20 ಸರಣಿಯಲ್ಲಿ 2-1ರಲ್ಲಿ ಕಾಂಗರೂ ಪಡೆ ಸರಣಿಯನ್ನು ವಶಪಡಿಸಿಕೊಂಡಿದೆ. ಪಲ್ಲೆಕೆಲೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿ ಆತಿಥೇಯ ಶ್ರೀಲಂಕಾ ತಂಡಕ್ಕೆ 177 ರನ್‍ಗಳ ಕಠಿಣ ಗುರಿಯನ್ನು ನೀಡಿತ್ತು.

    ಇತ್ತ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತು ವೈಟ್ ವಾಶ್ ಮುಖಭಂಗದ ಒತ್ತಡದೊಂದಿಗೆ ಕಣಕ್ಕಿಳಿದಿದ್ದ ಶ್ರೀಲಂಕಾ ತಂಡದ ನಾಯಕ ದಾಸನ್ ಶನಕ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 19.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿ 4 ವಿಕೆಟ್‍ಗಳ ರೋಚಕ ಜಯ ಸಾಧಿಸಿ ಮುಖಭಂಗದಿಂದ ಪಾರಾಗಿದೆ.

    ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಾಸನ್ ಶನಕ ಹೇಜಲ್ ವುಡ್ ಎಸೆದ 18ನೇ ಓವರ್‌ನಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಬಾರಿಸುವದರ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟರು. ಆ ಒಂದು ಓವರ್‍ನಲ್ಲಿಯೇ 22 ರನ್ ಹರಿದು ಬಂದ ಕಾರಣ ಆಸ್ಟ್ರೇಲಿಯಾ ಪರ ಇದ್ದ ಪಂದ್ಯ ತಿರುವು ಪಡೆದುಕೊಂಡಿತು.

    17 ನೇ ಓವರ್‌ಗೂ ಮುನ್ನ 18 ಎಸೆತಗಳಿಗೆ 59 ರನ್ ಅಗತ್ಯವಿತ್ತು ಆದರೆ ಓವರ್ ಮುಕ್ತಾಯದ ನಂತರ 12 ಎಸೆತಗಳಿಗೆ 37 ರನ್ ಬಾರಿಸಬೇಕಾದ ಅಗತ್ಯ ಎದುರಾಯಿತು. ನಂತರ 19ನೇ ಓವರ್‌ನಲ್ಲಿಯೂ ಅಬ್ಬರಿಸಿದ ಶನಕ ಜೇ ರಿಚರ್ಡ್ ಸನ್ ಎಸೆತಗಳಿಗೆ 1 ಸಿಕ್ಸರ್ ಮತ್ತು 1 ಬೌಂಡರಿ ಹಾಗೂ ಕರುಣರತ್ನೆ ಸಹ 1 ಬೌಂಡರಿ ಚಚ್ಚಿದ್ದರು. ಈ ಮೂಲಕ ಅಂತಿಮ 6 ಎಸೆತಗಳಲ್ಲಿ ತಂಡಕ್ಕೆ ಗೆಲ್ಲಲು 19 ರನ್ ಬೇಕಾಗಿತ್ತು.

    ಈ ಸಂದರ್ಭದಲ್ಲಿ ಶನಕ ಓವರ್‌ನ ಮೂರನೇ ಎಸೆತಕ್ಕೆ ಬೌಂಡರಿ, ನಾಲ್ಕನೇ ಎಸೆತಕ್ಕೆ ಬೌಂಡರಿ ಮತ್ತು 5ನೇ ಎಸೆತಕ್ಕೆ ಸಿಕ್ಸರ್ ಚಚ್ಚಿದರು. ಈ ಮೂಲಕ ಲಂಕಾಗೆ ಕೊನೆಯ ಎಸೆತದಲ್ಲಿ ಗೆಲ್ಲಲು 1 ರನ್ ಬೇಕಿತ್ತು ಹಾಗೂ ಕೇನ್ ರಿಚರ್ಡ್ ಸನ್ ವೈಡ್ ಎಸೆದ ಪರಿಣಾಮ ಲಂಕಾ ಜಯದ ನಗೆ ಬೀರಿತು. ಹೀಗೆ ಎಲ್ಲಿಯೂ ಎದೆಗುಂದದೆ ಮುಂದೆ ನಿಂತು ಹೋರಾಡಿದ ದಾಸನ್ ಶನಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸರಣಿಯುದ್ದಕ್ಕೂ ಉತ್ತಮ ಆಟವಾಡಿದ ಆಸ್ಟ್ರೇಲಿಯಾದ ನಾಯಕ ಆರನ್ ಫಿಂಚ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

  • ಸಂಕಷ್ಟದಲ್ಲಿರುವ ಲಂಕಾಕ್ಕೆ ಭಾರತದಿಂದ ಪೆಟ್ರೋಲ್

    ಸಂಕಷ್ಟದಲ್ಲಿರುವ ಲಂಕಾಕ್ಕೆ ಭಾರತದಿಂದ ಪೆಟ್ರೋಲ್

    ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಕ್ಕೆ ಭಾರತದಿಂದ ಪೆಟ್ರೋಲ್ ಸರಬರಾಜು ಮಾಡಲಾಗುತ್ತಿದ್ದು, ಸದ್ಯ ಲಂಕಾ ಬಿಕ್ಕಟ್ಟಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ

    ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಕೇವಲ ಒಂದು ದಿನಕ್ಕೆ ಸಾಕಾಗುವಷ್ಟು ಪೆಟ್ರೋಲ್ ಸ್ಟಾಕ್ ಇದೆ ಎಂದು ಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹೇಳಿದ್ದರು. ಇದನ್ನೂ ಓದಿ: ದಂಪತಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಮಾಂಗಲ್ಯ, ಹಣ ಸುಲಿಗೆ ಮಾಡಿ ಪರಾರಿ

    ಇದೀಗ ಭಾರತದಿಂದ 2 ಹಂತಗಳಲ್ಲಿ ಪೆಟ್ರೋಲ್ ಸರಬರಾಜು ಮಾಡಲಾಗುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ವಿಕ್ರಮ ಸಿಂಘೆ, ದೇಶದಲ್ಲಿ ಕೇವಲ ಒಂದು ದಿನದ ಪೆಟ್ರೋಲ್ ಸ್ಟಾಕ್ ಮಾತ್ರ ಉಳಿದಿತ್ತು. ಆದರೆ, ಭಾರತೀಯ ಕ್ರೆಡಿಟ್ ಲೈನ್ ಅಡಿಯಲ್ಲಿ ಮೇ 18 ಮತ್ತು 29 ರಂದು ಬರಲಿದೆ. ಜೂನ್ 1 ರಂದು 2ನೇ ಹಂತವಾಗಿ 2 ಶಿಪ್‌ಮೆಂಟ್ ಪೆಟ್ರೋಲ್ ರಫ್ತಾಗಲಿದೆ. ಇದರಿಂದಾಗಿ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದ್ದಾರೆ.

    ದೇಶದ ಪರಿಸ್ಥಿತಿ ಸರಿದೂಗಿಸಲು ಸುಮಾರು 75 ಮಿಲಿಯನ್ ಯುಎಸ್ ಡಾಲರ್ ಅವಶ್ಯವಿದೆ. ಹಾಗಾಗಿ ನಾವು ಮುಕ್ತ ಮಾರುಕಟ್ಟೆಯ ಡಾಲರ್‌ಗಳನ್ನು ಪಡೆಯಲು ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಪಠ್ಯಕ್ರಮದಲ್ಲಿ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ – ಶೀಘ್ರವೇ ಹಿಂತೆಗೆಯಲು ಕ್ಯಾಂಪಸ್ ಫ್ರಂಟ್ ಒತ್ತಾಯ

    ಹಿನ್ನೆಲೆ ಏನು? – ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ದೇಶದಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಅಗತ್ಯ ವಸ್ತುಗಳ ಆಮದಿಗೆ ನಮ್ಮಲ್ಲಿ ಡಾಲರ್ ಕೊರತೆಯಿದೆ ಎಂದು ರಾನಿಲ್ ವಿಕ್ರಮಸಿಂಘೆ ನಿನ್ನೆ ತಿಳಿಸಿದ್ದರು.

    ನಮ್ಮಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಸದ್ಯ ಕೇವಲ ಒಂದು ದಿನಕ್ಕೆ ಸಾಕಾಗುವಷ್ಟು ಪೆಟ್ರೋಲ್ ಸ್ಟಾಕ್ ಇದೆ. ಮುಂದಿನ ತಿಂಗಳಲ್ಲಿ ದೇಶದ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ತೀವ್ರಗತಿಗೆ ಮುಂದುವರಿಯುವ ಸಾಧ್ಯತೆ ಎಂದೂ ಎಚ್ಚರಿಕೆ ನೀಡಿದ್ದರು.

  • ಭಾರತದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಲು ಬಯಸುತ್ತೇವೆ : ವಿಕ್ರಮಸಿಂಘೆ

    ಭಾರತದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಲು ಬಯಸುತ್ತೇವೆ : ವಿಕ್ರಮಸಿಂಘೆ

    ಕೊಲಂಬೊ: ಶ್ರೀಲಂಕಾದ ನೂತನ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ತಮ್ಮ ಅವಧಿಯಲ್ಲಿ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ದೇಶವು ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ದೇಶಕ್ಕೆ ಆರ್ಥಿಕ ನೆರವು ನೀಡಿದ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

    ಗುರುವಾರ ಶ್ರೀಲಂಕಾದ 26ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ಆರ್ಥಿಕತೆಯನ್ನು ಸ್ಥಿರಗೊಳಿಸಲು ಮತ್ತು ರಾಜಕೀಯ ಪ್ರಕ್ಷುಬ್ಧತೆಗೆ ಅಂತ್ಯ ಹಾಡುವು ಭಾಗವಾಗಿ ಶ್ರೀಲಂಕಾದಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ನನಗೆ ಅವಕಾಶ ಕೊಟ್ಟಿದ್ದು, ಬೆನ್ನೆಲುಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ

    ಪ್ರಮಾಣ ವಚನ ಸ್ವೀಕರಿಸಿದ ನಂತರ ನಿನ್ನೆ ರಾತ್ರಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ನಮಗೆ ಭಾರತದೊಂದಿಗೆ ಉತ್ತಮ ಬಾಂಧವ್ಯದ ಅಗತ್ಯವಿದೆ. ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವುದರ ಕಡೆಗಷ್ಟೇ ನಮ್ಮ ಗಮನ. ಜನರಿಗೆ ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸಲು ಬಯಸುತ್ತೇನೆ ಎಂದು ಹೇಳಿದರು.  ಇದನ್ನೂ ಓದಿ: ಕಾಂಗ್ರೆಸ್‍ನಿಂದಲೇ ಟ್ರೋಲ್‍ಗೆ ಕರೆ – ನನ್ನನ್ನು ನಾನೇ ಟ್ರೋಲ್ ಮಾಡ್ಕೋತಿನಿ ಎಂದ ರಮ್ಯಾ

    ಭಾರತವು ಈ ವರ್ಷದ ಜನವರಿಯಿಂದ ಶ್ರೀಲಂಕಾಕ್ಕೆ ಸಾಲಗಳು, ಕ್ರೆಡಿಟ್ ಲೈನ್‍ಗಳು ಮತ್ತು ಕ್ರೆಡಿಟ್ ಸ್ವಾಪ್‍ಗಳಂತಹ ಹಲವು ರೂಪಗಳಲ್ಲಿ 3 ಶತಕೋಟಿಗಿಂತ ಹೆಚ್ಚು ನೆರವು ನೀಡಿದೆ. ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಅನುಗುಣವಾಗಿ ರಚನೆಯಾದ ಶ್ರೀಲಂಕಾದ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಭಾರತ ಗುರುವಾರ ಹೇಳಿದೆ. ದ್ವೀಪ ರಾಷ್ಟ್ರದ ಜನರ ಬಗೆಗಿನ ಭಾರತದ ಬದ್ಧತೆ ಮುಂದುವರೆಯಲಿದೆ ಎಂದು ಹೇಳಿತ್ತು.

  • ಜನಾಂಗ, ಧರ್ಮ, ಪಕ್ಷವನ್ನು ಬದಿಗಿರಿಸಿ ದೇಶಕ್ಕಾಗಿ ಒಂದಾಗಿ: ಮುತ್ತಯ್ಯ ಮುರುಳೀಧರನ್

    ಜನಾಂಗ, ಧರ್ಮ, ಪಕ್ಷವನ್ನು ಬದಿಗಿರಿಸಿ ದೇಶಕ್ಕಾಗಿ ಒಂದಾಗಿ: ಮುತ್ತಯ್ಯ ಮುರುಳೀಧರನ್

    ಕೊಲಂಬೊ: ಜನಾಂಗ, ಧರ್ಮ, ಪಕ್ಷವನ್ನು ಬದಿಗಿಟ್ಟು ನಾವೆಲ್ಲ ಒಂದೇ ಎಂಬ ಭಾವನೆಯಿಂದ ಒಗ್ಗೂಡಿ ದೇಶದ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಮನವಿ ಮಾಡಿದರು.

    ತಮ್ಮ ದೇಶದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭುಗಿಲೆದ್ದಿರುವ ಬಿಕ್ಕಟ್ಟನ್ನು ನಿಭಾಯಿಸಲು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಹಣಕಾಸು ತಜ್ಞರು ಒಟ್ಟಾಗಿ ಕುಳಿತುಕೊಂಡು ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಬೆಳಗಾವಿ ಜಿಲ್ಲೆ ವಿಭಜನೆ ಮಾಡುವಂತೆ ಮತ್ತೆ ಉಮೇಶ ಕತ್ತಿ ಒತ್ತಾಯ

    ಬಿಕ್ಕಟ್ಟಿಗೆ ಕಾರಣವಾದ ಹಲವಾರು ಅಂಶಗಳಿವೆ. ಇದು ಒಂದೇ ದಿನದಲ್ಲಿ ಬಂದಿಲ್ಲ. ಇದು ಸಾಂಕ್ರಾಮಿಕ ಸಮಯ. ಉದ್ಯೋಗಗಳು ಕಳೆದುಹೋಗಿವೆ. ತೈಲ ಬೆಲೆಗಳು ಹೆಚ್ಚಾಗುತ್ತಿವೆ. ಸಹಜವಾಗಿ, ದುರಾಡಳಿತವೂ ಇದೆ. ಆದರೂ ದೇಶದಲ್ಲಿ ಇನ್ನೂ ಸಹ ದುರಾಡಳಿತ ತಪ್ಪಿಲ್ಲ ಎಂದರು.

    ಈಗಾಗಲೇ ಶ್ರೀಲಂಕಾದ ನೆರೆಹೊರೆಯವರಾದ ಭಾರತ ಮತ್ತು ಚೀನಾ ಸಹಾಯಕ್ಕಾಗಿ ಮುಂದೆ ಬಂದಿವೆ. ನಮಗೆ ಭಾರತ ಮತ್ತು ಚೀನಾದಂತಹ ನಮ್ಮ ನೆರೆಹೊರೆಯವರಿಂದ ಸಹಾಯ ಬೇಕು ಎಂದು ಐಎಮ್‍ಎಫ್ ನಂತಹ ಏಜೆನ್ಸಿಗಳಿಗೆ ಮನವಿ ಮಾಡಿಕೊಂಡರು. ಇದನ್ನೂ ಓದಿ: ಸೌಹಾರ್ದತೆ ಕೆಡಿಸುವ ಕೆಲಸ ಬಿಜೆಪಿಗೆ ತಿರುಗುಬಾಣ ಆಗುತ್ತೆ: ಸಿದ್ದರಾಮಯ್ಯ

    ಶ್ರೀಲಂಕಾದಲ್ಲಿ ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಒಂದೇ ದಿನದಲ್ಲಿ ಉದ್ಭವಿಸಿಲ್ಲ. ದೇಶದಲ್ಲಿ ಸದಾ ಈ ರೀತಿಯಾದಂತಹ ಬಿಕ್ಕಟ್ಟುಗಳು ನಿರ್ಮಾಣವಾಗುತ್ತಲೇ ಇವೆ. ನಮ್ಮ ದೇಶವು ಹೆಚ್ಚು ಆಮದು ಮತ್ತು ಕಡಿಮೆ ರಫ್ತು ಹೊಂದಿರುವ ಸಣ್ಣ ಆರ್ಥಿಕತೆಯ ರಾಷ್ಟ್ರವಾಗಿದೆ ಎಂದು ಹೇಳಿದರು.

  • ಒಂದು ಮೊಟ್ಟೆಗೆ 30 ರೂಪಾಯಿ- ಶ್ರೀಲಂಕಾದಲ್ಲಿ ದಿನಸಿ ಬೆಲೆ ಏರಿಕೆ

    ಒಂದು ಮೊಟ್ಟೆಗೆ 30 ರೂಪಾಯಿ- ಶ್ರೀಲಂಕಾದಲ್ಲಿ ದಿನಸಿ ಬೆಲೆ ಏರಿಕೆ

    ಕೊಲಂಬೊ: ಹಣದುಬ್ಬರದಿಂದಾಗಿ ಶ್ರೀಲಂಕಾದಲ್ಲಿ ಸರಕುಗಳ ಬೆಲೆಗಳನ್ನು ಗಗನಕ್ಕೇರಿದೆ. ಜನರು ಇಂಧನ, ಆಹಾರ ಮತ್ತು ಔಷಧಿಗಳನ್ನು ಖರೀದಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.

    ಶ್ರೀಲಂಕಾದಲ್ಲಿ ತರಕಾರಿಗಳ ಬೆಲೆಗಳು ದ್ವಿಗುಣಗೊಂಡಿವೆ. ಆದರೆ ಅಕ್ಕಿ ಮತ್ತು ಗೋಧಿಯಂತಹ ಪ್ರಮುಖ ಪದಾರ್ಥಗಳು ಕ್ರಮವಾಗಿ ಕೆಜಿಗೆ 220 ರೂ. ಮತ್ತು ಕೆಜಿಗೆ 190 ರೂ.ಗೆ ಮಾರಾಟವಾಗುತ್ತಿವೆ. ಒಂದು ಕೆಜಿ ಸಕ್ಕರೆ ಬೆಲೆ 240 ರೂ. ಆಗಿದ್ದು  1 ಲೀಟರ್‌ ತೆಂಗಿನ ಎಣ್ಣೆ  850 ರೂ. ಆಗಿದೆ. ಒಂದು ಮೊಟ್ಟೆಯ ಬೆಲೆ 30 ಹಾಗೂ 1 ಕೆಜಿ ಹಾಲಿನ ಪುಡಿಯ ಪ್ಯಾಕ್ ಈಗ 1,900 ರೂ.ಗೆ ಮಾರಾಟವಾಗುತ್ತದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಶ್ರೀಲಂಕಾ ಜನತೆ- ಪ್ರತಿಭಟನೆಗೆ ಪ್ರಮುಖ ಕಾರಣಗಳೇನು?

    ಫೆಬ್ರವರಿಯಲ್ಲಿಯೇ ಶ್ರೀಲಂಕಾದ ಚಿಲ್ಲರೆ ಹಣದುಬ್ಬರವು ಶೇಕಡಾ 17.5 ಕ್ಕೆ ತಲುಪಿದೆ ಮತ್ತು ಆಹಾರ ಹಣದುಬ್ಬರವು ಶೇಕಡಾ 25 ಕ್ಕಿಂತ ಹೆಚ್ಚಿದೆ. ಇದು ಆಹಾರ ಮತ್ತು ಧಾನ್ಯಗಳ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಔಷಧಿಗಳು ಮತ್ತು ಹಾಲಿನ ಪುಡಿಯ ದೊಡ್ಡ ಕೊರತೆಯೂ ಇದೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆಯೇ ಹಿಂಸಾತ್ಮಕ ಪ್ರತಿಭಟನೆ – ವಾಹನಗಳು ಸುಟ್ಟು ಭಸ್ಮ

    ಅಗತ್ಯ ವಸ್ತುಗಳ ಕೊರತೆ ಮತ್ತು ದೀರ್ಘಾವಧಿಯ ವಿದ್ಯುತ್ ಕಡಿತಕ್ಕೆ ಸರ್ಕಾರ ವಿರುದ್ಧ ಸಾರ್ವಜನಿಕರ ಆಕ್ರೋಶ ಹೊರಹಾಕುತ್ತಿದ್ದಾರೆ. ಶ್ರೀಲಂಕಾ ಪ್ರಸ್ತುತ ಇತಿಹಾಸದಲ್ಲಿ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ.

  • ನಿಷೇಧಾಜ್ಞೆ ಜಾರಿ, ಸಾಮಾಜಿಕ ಜಾಲತಾಣಗಳ ಮೇಲೂ ನಿರ್ಬಂಧ- ಶ್ರೀಲಂಕಾದಲ್ಲಿ ಪರಿಸ್ಥಿತಿ ಹೇಗಿದೆ?

    ನಿಷೇಧಾಜ್ಞೆ ಜಾರಿ, ಸಾಮಾಜಿಕ ಜಾಲತಾಣಗಳ ಮೇಲೂ ನಿರ್ಬಂಧ- ಶ್ರೀಲಂಕಾದಲ್ಲಿ ಪರಿಸ್ಥಿತಿ ಹೇಗಿದೆ?

    ನವದೆಹಲಿ: ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ನಿರುದ್ಯೋಗ, ಅಗತ್ಯ ವಸ್ತುಗಳ ಕೊರತೆ, ಅಗತ್ಯ ಆಮದಿಗೆ ವಿದೇಶಿ ಕರೆನ್ಸಿ ಕೊರತೆ ಸೇರಿದಂತೆ ಮೊದಲಾದ ಕಾರಣಗಳಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಪರಿಸ್ಥಿತಿ ದಿನೇ ದಿನೇ ಉದ್ವಿಗ್ನಗೊಳ್ಳುತ್ತಿದೆ. ಎಲ್ಲೆಡೆ ಜನರು ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಶನಿವಾರ ಸಂಜೆ 6 ರಿಂದ ಸೋಮವಾರ ಬೆಳಗ್ಗೆ 6ರ ವರೆಗೆ ಕರ್ಫ್ಯೂ ವಿಧಿಸಲಾಗಿದೆ.

    ಸಾಮಾಜಿಕ ಜಾಲತಾಣಗಳ ಮೇಲೂ ನಿಷೇಧ ಹೇರಲಾಗಿದೆ. ಪ್ರತಿಭಟನೆಗಳನ್ನು ತಡೆಗಟ್ಟಲು ಮಿಲಿಟರಿ ಮಾದರಿಯ ಕಠಿಣ ಕ್ರಮಗಳನ್ನು ವಿಧಿಸಿ ಕರ್ಫ್ಯೂ ಜಾರಿಗೊಳಿಸಲಾಗಿರುವುದರಿಂದ, ಅಗತ್ಯ ವಸ್ತುಗಳ ಸೇವೆಗೆ ಮಾತ್ರ ಹೊರಗೆ ಬರಬೇಕಿದೆ. ಶಂಕಿತರನ್ನು ವಿಚಾರಣೆಯಿಲ್ಲದೇ ಬಂಧಿಸುವಂತೆ ಸರ್ಕಾರ ಆದೇಶ ನೀಡಿದೆ. 

    curfew

    ಜಾಲತಾಣಗಳ ಮೇಲೆ ನಿರ್ಬಂಧ
    ಶ್ರೀಲಂಕಾ ಸರ್ಕಾರವು ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಯೂಟ್ಯೂಬ್ ಸೇರಿದಂತೆ ಎಲ್ಲ ಸಾಮಾಜಿಕ ಮಾಧ್ಯಮ ಸೈಟ್‌ಗಳ ಮೇಲೆ ನಿರ್ಬಂಧ ಹೇರಿದೆ. ಈ ಮೂಲಕ ತಪ್ಪು ಮಾಹಿತಿಯ ಹರಿದಾಡುವಿಕೆ ಹಾಗೂ ದೇಶದಲ್ಲಿ ಪ್ರತಿಭಟನೆಗಳನ್ನು ಸಂಘಟಿಸಲು ಜನರನ್ನು ಸಜ್ಜುಗೊಳಿಸುವುದನ್ನು ತಡೆಯುತ್ತಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಶ್ರೀಲಂಕಾ ಜನತೆ- ಪ್ರತಿಭಟನೆಗೆ ಪ್ರಮುಖ ಕಾರಣಗಳೇನು?

    ಸಾರಿಗೆ ದುರ್ಬಲ
    ಡೀಸೆಲ್ ಕೊರತೆಯಿಂದ ಸಾರ್ವಜನಿಕ ಸಾರಿಗೆ ಹಾಗೂ ಖಾಸಗಿ ವಾಹನಗಳಿಗೆ ಇಂಧನ ಲಭ್ಯವಿಲ್ಲದಂತಾಗಿದೆ. ಇದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ದುರ್ಬಲಗೊಳಿಸಿದಂತಾಗಿದೆ.

    ಭಾರತದಿಂದ ತುರ್ತು ಸಹಾಯ
    ಕೊಲಂಬೊ, ಹೊಸದಿಲ್ಲಿಯಿಂದ ಕ್ರೆಡಿಟ್ ಲೈನ್ ಅನ್ನು ಪಡೆದುಕೊಂಡ ನಂತರ ಭಾರತೀಯ ಟ್ರೇಡರ್ಸ್ಗಳು ಶ್ರೀಲಂಕಾಕ್ಕೆ 40 ಸಾವಿರ ಟನ್ ಅಕ್ಕಿಯನ್ನು ತ್ವರಿತವಾಗಿ ನೀಡಲು ಮುಂದಾಗಿದ್ದಾರೆ. ಇಂಧನ ಕೊರತೆ ನೀಗಿಸಲು 40 ಸಾವಿರ ಮೆಟ್ರಿಕ್ ಟನ್ ಡಿಸೇಲ್ ಅನ್ನು ಶನಿವಾರವೇ ಪೂರೈಕೆ ಮಾಡಿದೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆಯೇ ಹಿಂಸಾತ್ಮಕ ಪ್ರತಿಭಟನೆ – ವಾಹನಗಳು ಸುಟ್ಟು ಭಸ್ಮ

    sri lanka diesel

    ಸರ್ವಪಕ್ಷ ರಚನೆಗೆ ಕರೆ
    ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಶುಕ್ರವಾರ ತುರ್ತು ಪರಿಸ್ಥಿತಿ ಘೋಷಿಸಿ, ಭದ್ರತಾ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ. ಈ ನಡುವೆ ದೇಶದ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಫ್ರೀಡಂ ಪಾರ್ಟಿಯು, ಬಿಕ್ಕಟ್ಟನ್ನು ನಿವಾರಿಸಲು ಸರ್ವಪಕ್ಷ ಸರ್ಕಾರ ರಚಿಸುವಂತೆ ಕರೆ ನೀಡಿದ್ದಾರೆ.

    ಮಿಲಿಟರಿ ಕಾನೂನು
    ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ತನ್ನ ಉಚ್ಚಾಟನೆಗೆ ಕರೆ ನೀಡುವ ಪ್ರದರ್ಶನಗಳು ಕಂಡುಬಂದರೆ ಶಂಕಿತರನ್ನು ದೀರ್ಘಾವಧಿಯ ವರೆಗೆ ಬಂಧಿಸಲು ಅನುಮತಿ ನೀಡಲಾಗಿದೆ. ಶಂಕಿತರನ್ನು ಬಂಧಿಸಲು ಮಿಲಿಟರಿ ಮಾದರಿಯ ಕಠಿಣ ಕಾನೂನುಗಳನ್ನು ವಿಧಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು ಪ್ರತಿಭಟನೆ ನಡುವೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಮುಖ್ಯರಸ್ತೆಯಲ್ಲಿ ಸಂಚಾರ ಸ್ಥಗಿತ
    ಇಲ್ಲಿನ ದಕ್ಷಿಣ ಭಾಗದ ಗಾಲ್ಲೆ, ಮಾತಾರಾ ಮತ್ತು ಮೊರಟುವಾ ಪಟ್ಟಣಗಳಲ್ಲೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಜೊತೆಗೆ ಮಧ್ಯಪ್ರದೇಶದಲ್ಲೂ ಇದೇ ರೀತಿಯ ಘಟನೆಗಳು ವರದಿಯಾಗಿವೆ. ಆದ್ದರಿಂದ ಮುಖ್ಯರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಿದ್ದಾರೆ.

     

  • ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆಯೇ ಹಿಂಸಾತ್ಮಕ ಪ್ರತಿಭಟನೆ – ವಾಹನಗಳು ಸುಟ್ಟು ಭಸ್ಮ

    ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆಯೇ ಹಿಂಸಾತ್ಮಕ ಪ್ರತಿಭಟನೆ – ವಾಹನಗಳು ಸುಟ್ಟು ಭಸ್ಮ

    ಕೊಲಂಬೊ: ಸುಮಾರು ಒಂದು ವಾರದಿಂದಲೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ತೈಲ ಪೂರೈಕೆಯಲ್ಲಿ ಕೊರತೆಯುಂಟಾಗಿದ್ದು ಡೀಸೆಲ್ ಮಾರಾಟವನ್ನೇ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರ ಆಕ್ರೋಶವು ಮಿತಿ ಮೀರಿದ್ದು, ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದೆ.

    ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಅಡುಗೆ ಅನಿಲ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಗೆ ಲಂಕಾ ಅಧ್ಯಕ್ಷ ರಾಜಪಕ್ಸೆ ಅವರ ನೀತಿಗಳೇ ಕಾರಣ ಎಂದು ಆರೋಪಿಸಿ ಗುರುವಾರ ತಡರಾತ್ರಿ 5 ಸಾವಿರಕ್ಕೂ ಹೆಚ್ಚು ಮಂದಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ನಿವಾಸದ ಮುಂದೆ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಅವರ ರಾಜೀನಾಮೆಗೂ ಒತ್ತಾಯಿಸಿರುವ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಡೀಸೆಲ್‌ ಮಾರಾಟ ಸ್ಥಗಿತ- ಗ್ಯಾರೇಜ್‌ಗಳಲ್ಲಿರುವ ಬಸ್‌ಗಳಿಂದ ಇಂಧನ ತೆಗೆದು ಬಳಕೆ

    Shrilanka

    ಪ್ರತಿಭಟನೆಯನ್ನು ಹತ್ತಿಕ್ಕಲು ಅರೆಸೇನಾ ಪೊಲೀಸ್ ಘಟಕ, ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಸಿಡಿಸಲಾಗಿದೆ. ಆಕ್ರೋಶಭರಿತ ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಟಲಿ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಐವರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ ಪೊಲೀಸ್ ಜೀಪ್, 2 ಬೈಕ್‌ಗಳು ಹಾಗೂ ವಾಟರ್ ಕೆನನ್ ಟ್ರಕ್ ಅನ್ನು ಸುಟ್ಟುಹಾಕಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಆರ್ಥಿಕ ನೆರವು ನೀಡಿದ ಭಾರತಕ್ಕೆ ಧನ್ಯವಾದ ಸಲ್ಲಿಸಿದ ಶ್ರೀಲಂಕಾ

    Shrilanka

    1948ರ ಸ್ವಾತಂತ್ರ‍್ಯದ ಬಳಿಕ ಶ್ರೀಲಂಕಾ ಸರ್ಕಾರ ಈಗ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಹಣದುಬ್ಬರದಿಂದ ಡೀಸೆಲ್ ಬೆಲೆ ದ್ವಿಗುಣವಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ 45 ಮಂದಿಯನ್ನು ಬಂಧಿಸಲಾಗಿದ್ದು, ಓರ್ವ ಮಹಿಳೆಯೂ ಇದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರ್ಕಾರ, ಉಗ್ರಗಾಮಿಗಳ ಗುಂಪೊಂದು ಈ ರೀತಿಯ ಹಿಂಸಾತ್ಮಕ ಪ್ರತಿಭಟನೆಗೆ ಕರೆ ಕೊಟ್ಟಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರನ್ನು ಬಂಧಿಸಲಾಗಿದೆ ಎಂದು ಹೇಳಿದೆ.

     

  • ಪೇಪರ್ ಕೊರತೆಯಿಂದ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ ಸರ್ಕಾರ

    ಪೇಪರ್ ಕೊರತೆಯಿಂದ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ ಸರ್ಕಾರ

    ಕೊಲಂಬೊ: ಶ್ರೀಲಂಕಾದಲ್ಲಿ ಮುದ್ರಣ ಕಾಗದಕ್ಕೆ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಎಲ್ಲ ಅಂದುಕೊಂಡಂತೆಯೇ ಆಗಿದ್ದರೆ ದೇಶಾದ್ಯಂತ ಸುಮಾರು 45 ಲಕ್ಷ ಮಂದಿ ಶಾಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಆದರೆ ಹಾಗಾಗಲಿಲ್ಲ. ದೇಶದಲ್ಲಿ ಪೇಪರ್ ಕೊರತೆ ಕಂಡುಬಂದಿದ್ದರಿಂದ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿದೆ. ಇದನ್ನೂ ಓದಿ: ಪರೀಕ್ಷೆಗೆ ಗೈರಾದ್ರೆ ಅಲ್ಲಿಗೇ ಮುಗೀತು, ಅವಕಾಶ ನೀಡಲ್ಲ: ಬಿ.ಸಿ.ನಾಗೇಶ್

    ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದು ಜಗತ್ತಿಗೆ ಗೊತ್ತಿದೆ. ಇತ್ತೀಚಿಗಷ್ಟೆ ಭಾರತ ಸರ್ಕಾರ ಕೋಟ್ಯಂತರ ರೂಪಾಯಿ ನೆರವನ್ನು ಶ್ರೀಲಂಕಾಗೆ ನೀಡುವುದಾಗಿ ಘೋಷಿಸಿತ್ತು. 1948ರಲ್ಲಿ ಸ್ವಾತಂತ್ರ್ಯ ಗಿಟ್ಟಿಸಿಕೊಂಡ ನಂತರ ಇದೇ ಮೊದಲ ಬಾರಿ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಹೀಗಾಗಿ ಪರಿಸ್ಥಿತಿ ಹದಗೆಡುತ್ತಿದ್ದು, ಅಗತ್ಯ ವಸ್ತೈಗಳಿಗೂ ಭಾರೀ ಕೊರತೆ ಉಂಟಾಗಿದೆ. ಇದರ ಬೆನ್ನಲ್ಲೇ ಈ ಮುಗ್ಗಟ್ಟು ಪರೀಕ್ಷೆಯ ಮೆಲೂ ಪರಿಣಾಮ ಸೃಷ್ಟಿಸಿದೆ.

    ಶ್ರೀಲಂಕಾದಲ್ಲಿ ವಿದೇಶಿ ವಿನಿಮಯದ ಕೊರತೆ ಉಂಟಾಗಿದ್ದು, ಸರ್ಕಾರದ ಬಳಿ ಮುದ್ರಣ ಕಾಗದ ಹಾಗೂ ಶಾಯಿಯನ್ನು ಖರೀದಿಸುವಷ್ಟೂ ಹಣವಿಲ್ಲ. ಹೀಗಾಗಿ ಇಂದು ನಡೆಯಬೇಕಾಗಿದ್ದ ಪರೀಕ್ಷೆಗಳು ಅನಿರ್ದಿಷ್ಟ ಅವರೀಗೆ ಮುಂದೂಡಲಾಗಿದೆ. ಇದರಿಂದ ಸುಮಾರು 30 ಲಕ್ಷ ಮಕ್ಕಳ ಭವಿಷ್ಯದ ಮೇಲೆ ತೂಗುಕತ್ತಿ ನೇತಾಡುತ್ತಿದೆ. ಇದನ್ನೂ ಓದಿ: ಪರ್ವತಕ್ಕೆ ಅಪ್ಪಳಿಸಿದ 133 ಪ್ರಯಾಣಿಕರಿದ್ದ ಚೀನಾ ವಿಮಾನ – ಹೊತ್ತಿ ಉರಿದ ಅರಣ್ಯ ಪ್ರದೇಶ

    ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ನೆರವಿಗಾಗಿ ವಿಶ್ವ ಬ್ಯಾಂಕ್ ಅನ್ನೂ ಸಂಪರ್ಕಿಸಿದ್ದಾರೆ. ಈ ಬಗ್ಗೆ ವಿಶ್ವ ಬ್ಯಾಂಕ್ ಇದುವರೆಗೂ ಏನನ್ನೂ ಹೇಳಿಲ್ಲ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವಾಗ ಕೈಗೊಳ್ಳಲಾಗುವುದು ಎಂಬುದರ ಬಗ್ಗೆ ಸರ್ಕಾರ ಇನ್ನೂ ಖಚಿತವಾಗಿ ಹೇಳಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.