Tag: ಕೊಲಂಬಿಯಾ ಗ್ಯಾಂಗ್

  • ನಟ ಶಿವರಾಜ್ ಕುಮಾರ್ ಮನೆ ಬಳಿ ಕಳ್ಳತನ- ಖರ್ತನಾಕ್ ಕೊಲಂಬಿಯಾ ಗ್ಯಾಂಗ್ ಅರೆಸ್ಟ್

    ನಟ ಶಿವರಾಜ್ ಕುಮಾರ್ ಮನೆ ಬಳಿ ಕಳ್ಳತನ- ಖರ್ತನಾಕ್ ಕೊಲಂಬಿಯಾ ಗ್ಯಾಂಗ್ ಅರೆಸ್ಟ್

    – ಆರು ಕೆಜಿ ಚಿನ್ನ ಕಳ್ಳತನ ಮಾಡಿರೋ ಗ್ಯಾಂಗ್
    – ಕೃತ್ಯ ಎಸಗಲು ಗ್ಯಾಸ್‌ ಕಟ್ಟರ್‌, ವಾಕಿಟಾಕಿ ಬಳಕೆ

    ಬೆಂಗಳೂರು: ನಟ ಶಿವರಾಜ್ ಕುಮಾರ್ ಪಕ್ಕದ ಮನೆಯಲ್ಲಿ ಕಳ್ಳತನ ಮಾಡಿದ್ದ ಕೊಲಂಬಿಯಾ ದೇಶದ ಖರ್ತನಾಕ್ ಕಳ್ಳರ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ.

    ವಿಲಿಯನ್ ಪಡಿಲ್ಲಾ, ಸ್ಟೆಫಾನಿಯಾ, ಕ್ರಿಶ್ಚಿಯನ್ ಇನಿಸ್ ಬಂಧಿತ ಆರೋಪಿಗಳಿದ್ದು, ಕೊಲಂಬಿಯಾ ಮೂಲದವರಾಗಿದ್ದಾರೆ. ಪಿಪಿಇ ಕಿಟ್ ಧರಿಸಿ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಪೊಲೀಸರ ಬೀಟ್ ವ್ಯವಸ್ಥೆ ವೇಳೆ ಕಳ್ಳತನ ಮಾಹಿತಿ ಪತ್ತೆಯಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಖರ್ತನಾಕ್ ಗ್ಯಾಂಗ್‍ಅನ್ನು ಬಂಧಿಸಿದ್ದಾರೆ. ಕಳೆದ 6 ತಿಂಗಳಿನಿಂದ ಈ ಗ್ಯಾಂಗ್ ಬೆಂಗಳೂರಿನಲ್ಲಿ ಸಕ್ರಿಯವಾಗಿತ್ತು ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ.

    ನಗರದ ಹಲವು ಭಾಗಗಳಲ್ಲಿ ಕಳ್ಳತನ ಮಾಡಿದ್ದ ಈ ಗ್ಯಾಂಗ್ ಸದಸ್ಯರು ಸೈಕಲ್‍ನಲ್ಲಿ ಓಡಾಟ ನಡೆಸಿ ಕಳ್ಳತನ ಮಾಡಬೇಕಿದ್ದ ಮನೆಗಳನ್ನು ಗುರುತು ಮಾಡಿಕೊಳ್ಳುತ್ತಿದ್ದರು. ಸುಮಾರು 15 ಅಡಿ ಎತ್ತರದ ಗೋಡೆಗಳನ್ನು ಸುಲಭವಾಗಿ ಜಿಗಿಯುವ ತರಬೇತಿ ಪಡೆದಿದ್ದ ಆರೋಪಿಗಳು, ಅತ್ಯಾಧುನಿಕ ಸಲಕರಣೆಗಳನ್ನ ಬಳಸಿ ಕೃತ್ಯ ಎಸಗುತ್ತಿದ್ದರು.

    ಗ್ಯಾಂಗ್‍ನಲ್ಲಿದ್ದ ಯುವತಿ ಸ್ಟೆಫಾನಿಯಾ ಮೊದಲು ಕಳ್ಳತನ ಮಾಡಬೇಕಿದ್ದ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತುತ್ತಿದ್ದಳು. ಈ ವೇಳೆ ಮನೆಯಿಂದ ಹೊಸ ಬಂದ ವ್ಯಕ್ತಿಗಳಿಗೆ ಸ್ಪ್ರೇ ಮಾಡಿ ಮೂರ್ಚೆ ಹೋಗುವಂತೆ ಮಾಡುತ್ತಿದ್ದಳು. ಬಳಿಕ ವಾಕಿಟಾಕಿಯಲ್ಲಿ ಸ್ನೇಹಿತರನ್ನು ಕರೆಸಿಕೊಂಡು ಕಳ್ಳತನ ಮಾಡುತ್ತಿದ್ದರು. ಅಲ್ಲದೇ ಮನೆಯವರು ಬೇರೆಯಾವರಿಗೆ ಮಾಹಿತಿ ನೀಡಬಾರದು ಎಂಬ ಕಾರಣಕ್ಕೆ ಮೊಬೈಲ್ ನೆಟ್‍ವರ್ಕ್ ಜಾಮರ್ ಬಳಕೆ ಮಾಡುತ್ತಿದ್ದರು.

    ಪೊಲೀಸರ ಬೀಟ್ ವ್ಯವಸ್ಥೆ ವೇಳೆ ಕಳ್ಳತನ ಮಾಹಿತಿ ಪತ್ತೆಯಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಆನ್ ಲೈನ್ ಫುಡ್ ಡೆಲವರಿ ಮಾಡಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಇದೇ ಗ್ಯಾಂಗ್ ಈ ಹಿಂದೆ ಜಯನಗರದಲ್ಲಿ ಕಳ್ಳತನ ಮಾಡಿ ಸಿಕ್ಕಿತ್ತು ಎಂಬ ಮಾಹಿತಿ ಲಭಿಸಿದೆ. ಇದುವರೆಗೂ ಈ ಗ್ಯಾಂಗ್ ಸುಮಾರು ಆರು ಕೆಜಿ ಚಿನ್ನ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.