Tag: ಕೊರೋನಾ

  • ಕೊರೋನಾ ಏರಿಕೆ –  ಮತ್ತೆ ಆತಂಕದಲ್ಲಿ ಚಿತ್ರೋದ್ಯಮ

    ಕೊರೋನಾ ಏರಿಕೆ – ಮತ್ತೆ ಆತಂಕದಲ್ಲಿ ಚಿತ್ರೋದ್ಯಮ

    ರ್ನಾಟಕದ ಬೆಂಗಳೂರು ಸೇರಿದಂತೆ ಹಲವು ಕಡೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮಾಸ್ಕ್, ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಈಗಾಗಲೇ ಸರಕಾರ ಆದೇಶ ಹೊರಡಿಸಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

    ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಚಿತ್ರೋದ್ಯಮ ಪಡಬಾರದ ಕಷ್ಟಪಟ್ಟಿದೆ. ಈಗಾಗಲೇ ಬಿಡುಗಡೆಗಾಗಿ ಐನೂರಕ್ಕೂ ಹೆಚ್ಚು ಚಿತ್ರಗಳು ರೆಡಿ ಇವೆ. ಮತ್ತಷ್ಟು ಚಿತ್ರಗಳು ತಯಾರಾಗುತ್ತಿವೆ. ಈ ಸಂದರ್ಭದಲ್ಲಿ ಪ್ರಕರಣಗಳು ಹೆಚ್ಚಾಗಿ ಮತ್ತೆ ಲಾಕ್ ಡೌನ್, ಸೆಮಿ ಲಾಕ್ ಡೌನ್ ರೀತಿಯ ರೂಲ್ಸ್ ಜಾರಿಯಾದರೆ ಏನು ಮಾಡುವುದು ಅನ್ನುವ ಆತಂಕ ಚಿತ್ರ ತಯಾರಕರದ್ದು.

    ಸುದೀಪ್ ನಟನೆಯ ವಿಕ್ರಾಂತ್ ರೋಣ, ಶರಣ್ ನಟನೆಯ ಅವತಾರ ಪುರುಷ, ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777, ಜಗ್ಗೇಶ್ ನಟನೆಯ ತೋತಾಪುರಿ, ರಿಷಭ್ ನಟನೆಯ ಕಾಂತಾರ, ಸತೀಶ್ ನೀನಾಸಂ ನಟನೆಯ ಪೆಟ್ರೊಮ್ಯಾಕ್ಸ್ ಹೀಗೆ ಸಾಕಷ್ಟು ಭಾರಿ ಬಜೆಟ್ ಚಿತ್ರಗಳು ರಿಲೀಸ್ಗೆ ಸಿದ್ಧವಾಗಿದೆ. ಈ ಹೊತ್ತಿನಲ್ಲಿ ಚಿತ್ರಮಂದಿರಗಳಿಗೆ ಟಫ್ ರೂಲ್ಸ್ ಜಾರಿಯಾದರೆ ಏನು ಮಾಡುವುದು ಎನ್ನುವ ಆತಂಕ ನಿರ್ಮಾಪಕರದ್ದು. ಇದನ್ನೂ ಓದಿ : ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ

    ಶೇ.50 ರಷ್ಟು ಆಸನ ಮಿತಿ ಕೊಟ್ಟಾಗ ನಿರ್ಮಾಪಕರು ಸಾಕಷ್ಟು ಹಾನಿಯನ್ನು ಕಂಡಿದ್ದಾರೆ. ಅದನ್ನು ತೆರೆವುಗೊಳಿಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಕೆಜಿಎಫ್ 2 ಸಿನಿಮಾದಿಂದಾಗಿ ಕನ್ನಡ ಚಿತ್ರೋದ್ಯಮದ ಮಾರುಕಟ್ಟೆ ಹಿಗ್ಗಿದೆ. ಈ ಹೊತ್ತಿನಲ್ಲಿ ಕೋವಿಡ್ ಚಿತ್ರೋದ್ಯಮಕ್ಕೆ ಕಾಡದಿರಲಿ ಎನ್ನುವುದು ನಿರ್ಮಾಪಕರ ಪ್ರಾರ್ಥನೆಯಾಗಿದೆ.

  • ಕೋವಿಡ್ ನಂತರ ನಿದ್ರಾ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಖ್ಯಾತ ನಟಿ ಶ್ರುತಿ ಹಾಸನ್

    ಕೋವಿಡ್ ನಂತರ ನಿದ್ರಾ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಖ್ಯಾತ ನಟಿ ಶ್ರುತಿ ಹಾಸನ್

    ಮಲ್ ಹಾಸನ್ ಪುತ್ರಿ, ನಟಿ ಶ್ರುತಿ ಹಾಸನ್ ವಿಚಿತ್ರ ಸಮಸ್ಯೆಯೊಂದರಿಂದ ಹೈರಾಣಾಗಿದ್ದಾರಂತೆ. ಕೋವಿಡ್ ಗಿಂತಲೂ ಈ ಸಮಸ್ಯೆ ತುಂಬಾ ಬಾಧಿಸುತ್ತಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಕಳೆದ ಒಂದು ತಿಂಗಳ ಹಿಂದೆ ಶ್ರುತಿ ಹಾಸನ್ ಅವರಿಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅವರು ಕೊರೋನಾಗೆ ಬೇಕಾದ ಅಗತ್ಯ ಚಿಕಿತ್ಸೆಯನ್ನು ಪಡೆದುಕೊಂಡರು. ಬರೋಬ್ಬರಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದರು. ಆದರೂ, ಕೋವಿಡ್ ನಂತರ ಅವರಿಗೆ ಬೇರೆ ಬೇರೆ ಸಮಸ್ಯೆಗಳು ಕಾಣಿಸಿಕೊಂಡಿವೆಯಂತೆ. ಇದನ್ನೂ ಓದಿ : ಪುನೀತ್ ಅಭಿಮಾನಿಗಳಿಗೆ ಭಾರೀ ನಿರಾಸೆ : ಮೆರವಣಿಗೆ ಇಲ್ಲ, ಹೆಲಿಕಾಪ್ಟರ್ ಗೆ ಅನುಮತಿ ಕೊಟ್ಟಿಲ್ಲ

    ಕೋವಿಡ್ ಗೆ ಚಿಕಿತ್ಸೆ ಪಡೆದುಕೊಂಡ ನಂತರ ವಿಪರೀತ ತಲೆನೋವು ಶುರುವಾಗಿದೆ. ದೇಹ ಆಯಾಸಗೊಳ್ಳುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿದ್ದೇವೆ. ಇದರಿಂದಾಗಿ ಬೇರೆ ಬೇರೆ ಸಮಸ್ಯೆಗಳು ನನ್ನಲ್ಲಿ ಶುರುವಾಗಿವೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಕೋವಿಡ್ ನಿಂದಾದ ಪರಿಣಾಮನಾ ಇದು ಎಂದು ಕೇಳಿದ್ದಾರೆ. ಇದನ್ನೂ ಓದಿ : ದುನಿಯಾ ವಿಜಯ್ ನಟನೆಯ ತೆಲುಗು ಸಿನಿಮಾದ ಫಸ್ಟ್ ಲುಕ್ ರಿಲೀಸ್ : ಯಾರದು ಪ್ರತಾಪ್ ರೆಡ್ಡಿ?

    ತೆಲುಗು ಮತ್ತು ತಮಿಳು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶ್ರುತಿ, ಈಗ ಅವುಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯ. ಈ ಸಮಸ್ಯೆಗಳ ನಡುವೆಯೂ ಅವು ನಿರಂತರವಾಗಿ ವ್ಯಾಯಾಮ ಮಾಡುತ್ತಿದ್ದಾರಂತೆ. ಆದರೆ, ನಿದ್ರೆ ಸಮಸ್ಯೆಯೇ ಅವರನ್ನು ಗಂಭೀರವಾಗಿ ಕಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

  • ಮಾರ್ಚ್‌ನಲ್ಲಿ ಬೆಲ್ ಬಾಟಮ್ 2 ಪಕ್ಕಾ

    ಮಾರ್ಚ್‌ನಲ್ಲಿ ಬೆಲ್ ಬಾಟಮ್ 2 ಪಕ್ಕಾ

    ಒಂದೂವರೆ ವರ್ಷಗಳ ಹಿಂದೆ ಮುಹೂರ್ತ ಕಂಡ ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಮ್ 2’ ಸಿನಿಮಾ, ಆನಂತರ ಕೊರೋನಾದಿಂದಾಗಿ ಶೂಟಿಂಗ್ ಆರಂಭಿಸಿರಲಿಲ್ಲ. ಸದ್ದಿಲ್ಲದೇ ಚಿತ್ರ ತಂಡ ಇದೀಗ ಶೂಟಿಂಗ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಹೊತ್ತಿಗೆ ಚಿತ್ರೀಕರಣ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ನಿರ್ಮಾಪಕ ಸಂತೋಷ್ ಕುಮಾರ್.

    ನಿರ್ದೇಶಕ ಜಯತೀರ್ಥ ‘ಬನಾರಸ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟ ರಿಷಭ್ ಶೆಟ್ಟಿ ‘ಕಾಂತಾರ’ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಹರಿಪ್ರಿಯಾ ಕೂಡ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಾರ್ಚ್ ಅಥವಾ ಏಪ್ರಿಲ್ ಹೊತ್ತಿಗೆ ಇವರೆಲ್ಲರ ಶೂಟಿಂಗ್ ಡೇಟ್ ಹೊಂದಾಣಿಕೆ ಆಗುವುದರಿಂದ ಚಿತ್ರೀಕರಣಕ್ಕೆ ತಂಡ ಹೊರಟಿದೆ.

    ಬೆಲ್ ಬಾಟಮ್ 1ರಲ್ಲಿ ನಟಿಸಿದ ಬಹುತೇಕ ಕಲಾವಿದರೇ ಈ ಸಿನಿಮಾದಲ್ಲಿ ಇರಲಿದ್ದು, ಹರಿಪ್ರಿಯಾ ಅವರ ಪಾತ್ರಕ್ಕೆ ಮತ್ತಷ್ಟು ಜೀವ ತುಂಬುವ ಕೆಲಸ ಮಾಡಲಾಗಿದೆ. ನಾಯಕ ಡಿಟೆಕ್ಟಿವ್ ದಿವಾಕರ್ ಈ ಬಾರಿ ವಿಶೇಷ ಪ್ರಕರಣವೊಂದನ್ನು ಬೆನ್ನತ್ತುವುದು ವಿಶೇಷ. ಪೇದೆಯಾಗಿದ್ದ ದಿವಾಕರ್ ಈ ಸಿನಿಮಾದಲ್ಲಿ ಪ್ರಮೋಷನ್ ಪಡೆಯುತ್ತಾರಾ ಅಥವಾ ಅದೇ ಪೇದೆಯಾಗಿಯೇ ಪ್ರಕರಣ ಬೆನ್ನು ಹತ್ತುತ್ತಾರೆ ಎನ್ನುವುದು ಕುತೂಹಲ. ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸಿನಿಮಾಗೆ ಬಪ್ಪಿ ಲಹರಿ ಹಾಡು

    2019ರಲ್ಲಿ ತೆರೆಕಂಡ ‘ಬೆಲ್ ಬಾಟಮ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಆಗಿತ್ತು. 25ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನ ಪ್ರದರ್ಶನ ಕಂಡಿತ್ತು. 80ರ ದಶಕದಲ್ಲಿ ನಡೆಯುವ ಕಥೆಯನ್ನು ಅಷ್ಟೇ ಸೊಗಸಾಗಿ ನಿರೂಪಿಸಿದ್ದರು ನಿರ್ದೇಶಕ ಜಯತೀರ್ಥ. ಟಿ.ಕೆ. ದಯಾನಂದ್ ಬರೆದ ಕಥೆಯು ಡಿಟೆಕ್ಟಿವ್ ದಿವಾಕರನ ಜಾಣ್ಮೆಯನ್ನು ತೋರುತ್ತಿತ್ತು. ಇದನ್ನೂ ಓದಿ: ಚೆಂಬೆಳಕಿನ ಕವಿಯನ್ನು ಸಿನಿಮಾ ರಂಗ ಅಪ್ಪಿಕೊಳ್ಳಲಿಲ್ಲ

  • ಮೊಟ್ಟೆ ತಿನ್ನಲು ಒತ್ತಡ ಹೇರಲ್ಲ: ನಾಗೇಶ್

    ಮೊಟ್ಟೆ ತಿನ್ನಲು ಒತ್ತಡ ಹೇರಲ್ಲ: ನಾಗೇಶ್

    ಮಂಡ್ಯ: ಶಾಲಾ ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರುವುದಿಲ್ಲ ಎಂದು ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ಅವರು, ಮಕ್ಕಳು ಅಪೌಷ್ಟಿಕತೆಯಿಂದ ಒದ್ದಾಡುತ್ತಿದ್ದಾರೆ. ತಜ್ಞರ ಸಲಹೆಯ ಮೇರೆಗೆ ನಾವು ವಿದ್ಯಾರ್ಥಿಗಳಿಗೆ ಮೊಟ್ಟೆಯನ್ನು ನೀಡಲು ನಿರ್ಧರಿಸಿದ್ದೇವೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣನ್ನು ನೀಡುತ್ತೇವೆ. ಹೀಗೆ ಪ್ರೋಟಿನ್‍ಯುಕ್ತ ಆಹಾರಗಳನ್ನು ಆಯ್ಕೆ ಮಾಡಿದ್ದು, ತಜ್ಞರ ಒಪ್ಪಿಗೆಯ ಬಳಿಕ ಮುಂದಿನ ದಿನಗಳಲ್ಲಿ ಜಾರಿಗೆ ತರಲಿದ್ದೇವೆ ಎಂದರು.

    ಕೊರೋನಾ ಹೆಚ್ಚಾಗಿಲ್ಲ. ಕೊರೋನಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಸಿಟಿವ್ ಬಂದಿರುವ ಮಕ್ಕಳು ಆರೋಗ್ಯವಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಶಾಲಾ-ಕಾಲೇಜುಗಳನ್ನು ಮುಚ್ಚುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಕಣ್ಣಿನಿಂದ ಇನ್ನೊಬ್ಬರಿಗೆ ದೃಷ್ಟಿ ಬರುವುದೇ ಬದುಕಿನ ಸಾಕ್ಷಾತ್ಕಾರ: ಡಾ.ಕೆ.ಸುಧಾಕರ್

    1 ಕೋಟಿ 20 ಲಕ್ಷ ಮಕ್ಕಳಲ್ಲಿ 102 ಮಕ್ಕಳಿಗೆ ಮಾತ್ರವೇ ಸೋಂಕು ಇದೆ. ಅದರಲ್ಲೂ ರೆಸಿಡೆನ್ಸಿ ಶಾಲೆಗಳಲ್ಲಿ ಪಾಸಿಟಿವ್ ಬಂದಿದೆ. ಓಪನ್ ಶಾಲೆಗಳಲ್ಲಿ ಯಾವುದೇ ಮಕ್ಕಳಿಗೂ ಪಾಸಿಟಿವ್ ಬಂದಿಲ್ಲ. ಇದೀಗ ಯಾವುದೇ ರೀತಿಯ ಉದಾಸಿನ ಮಾಡದೇ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಜೊತೆಗೆ ಮಹತ್ವದ ಜವಾಬ್ದಾರಿ ಹೊರಿಸಿದ ಬಿಸಿಸಿಐ

    ಶಿಕ್ಷಕರ ನೇಮಕ: ಅನೇಕ ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಇದಕ್ಕಾಗಿ 12 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ ನೀಡಲಾಗಿದೆ. ಹೀಗೆ 12 ಸಾವಿರ ಪೋಸ್ಟ್‍ಗಳನ್ನು ಪೂರ್ಣ ಮಾಡಲಾಗುತ್ತದೆ. ಇದರೊಂದಿಗೆ ಶಾಲಾಕೊಠಡಿಗಳ ಕೊರತೆಯನ್ನೂ ಸರಿಪಡಿಸಲಿದ್ದೇವೆ. ಮುಂದಿನ ವರ್ಷದ ಅಕಾಡೆಮಿಕ್ ಇಯರ್ ಒಳಗಾಗಿ ಎಲ್ಲವನ್ನೂ ಅನುಷ್ಟಾನಕ್ಕೆ ತರಲಿದ್ದೇವೆ ಎಂದು ಹೇಳಿದರು.

  • ಸೋಂಕಿನ ಪ್ರಮಾಣ ಸೊನ್ನೆ ಇದ್ದರೂ, ಡೇತ್ ರೇಟ್‍ನಲ್ಲಿ ಹಾವೇರಿ ಜಿಲ್ಲೆ ನಂಬರ್ 1

    ಸೋಂಕಿನ ಪ್ರಮಾಣ ಸೊನ್ನೆ ಇದ್ದರೂ, ಡೇತ್ ರೇಟ್‍ನಲ್ಲಿ ಹಾವೇರಿ ಜಿಲ್ಲೆ ನಂಬರ್ 1

    ಹಾವೇರಿ: ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ತೀರ ಕಡಿಮೆ ಇದ್ದರೂ, ಕಳೆದ ನಾಲ್ಕು ತಿಂಗಳಿನಿಂದ ಡೇತ್ ರೇಟ್ ಮಾತ್ರ ಕಡಿಮೆಯಾಗಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣದಲ್ಲಿ ನಂಬರ್ 1 ಸ್ಥಾನ ಕಾಯ್ದುಕೊಂಡಿದೆ. ಪ್ರಸ್ತುತ ಡೇತ್ ರೇಟ್ ಶೇ.2.92 ಇದ್ದು, ಸೋಂಕಿನ ಪ್ರಮಾಣ ಕಡಿಮೆ ಆಗಿದೆ.

    ಜಿಲ್ಲೆಯಲ್ಲಿ ಪ್ರತಿದಿನ ಒಂದು, ಎರಡು ಕೇಸ್‍ಗಳು ದಾಖಲಾಗುತ್ತಿದ್ದು, ಒಂದೊಂದು ದಿನ ಯಾವುದೇ ಪಾಸಿಟಿವ್ ಪ್ರಕರಣಗಳು ಬರುವುದಿಲ್ಲ. ಅದ್ರೂ ಸತತ 4 ತಿಂಗಳಿಂದ ಡೆತ್ ರೇಟ್ ಕಡಿಮೆ ಆಗಿಲ್ಲ. ಕೋವಿಡ್ ನಿಂದ ಮೃತ ಪಡುವವರ ಸಂಖ್ಯೆ ಕಡಿಮೆ ಆದರೂ ಶೇಕಡಾವಾರು ಮರಣ ಪ್ರಮಾಣದಲ್ಲಿ ಹಾವೇರಿ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿದೆ. ಹಾವೇರಿಯಲ್ಲಿ ಅತಿ ಹೆಚ್ಚು ಮರಣ ಪ್ರಮಾಣ ಸಂಭವಿಸಿದ ಬಗ್ಗೆ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಇದನ್ನೂ ಓದಿ:ಬಾಲ ಮಂದಿರದಲ್ಲಿದ್ದ 35 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್

    ವೈದ್ಯರು ನಿರಂತರವಾಗಿ ಕೆಲಸ ಮಾಡಿದ್ದು, ಸರಿಯಾದ ಸಮಯಕ್ಕೆ ರೋಗಿಗಳು ಆಸ್ಪತ್ರೆಗೆ ಬಾರದೇ ಇರುವ ಕಾರಣ ಹಾಗೂ ಆಕ್ಸಿಜನ್ ಸಮಸ್ಯೆಯಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ತಜ್ಞರ ಸಮಿತಿ ವರದಿ ಸಲ್ಲಿಸಿದೆ. ಇದನ್ನೂ ಓದಿ:ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಆರೋಪ – ಚರ್ಚೆಗೆ ಆಗ್ರಹಿಸಿ ಸಾರಾ ಮಹೇಶ್ ಪ್ರತಿಭಟನೆ

    ಇದುವರೆಗೂ ವರದಿ ಕುರಿತು ನಿರ್ಲಕ್ಷ್ಯ ತೋರಿದವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯ ಡೇತ್ ರೇಟ್ ಶೇ.2.92 ಇದೆ. ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಸದ್ಯ ಸಾವಿನ ಪ್ರಮಾಣ ಕಡಿಮೆ ಇದೆ. ಹಿಂದೆ ಅವಧಿಯಲ್ಲಿ ಹೆಚ್ಚು ಸಾವಿನ ಪ್ರಮಾಣವಾಗಿತ್ತು. ಸದ್ಯ ಹಾವೇರಿ ಜಿಲ್ಲೆ ಸಂಖ್ಯೆ ಲೆಕ್ಕಾಚಾರ ಪ್ರಕಾರ ನಂಬರ್ 1 ಇದೆ. ಮೂರನೇ ಅಲೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಆಕ್ಸಿಜನ್ ಘಟಕ ಹಾಗೂ ವೈದ್ಯರ ನೇಮಕ ಮಾಡಿಕೊಂಡಿದ್ದೇವೆ. ಈಗ ಯಾವುದೇ ಸಾವಿನ ಪ್ರಮಾಣ ಹೆಚ್ಚಿಲ್ಲ. ಸೋಂಕಿನ ಪ್ರಮಾಣದ ಸಹ ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ.

  • ಬಾಲ ಮಂದಿರದಲ್ಲಿದ್ದ 35 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್

    ಬಾಲ ಮಂದಿರದಲ್ಲಿದ್ದ 35 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳನ್ನು ಓಪನ್ ಮಾಡಲು ಈಗಾಗಲೇ ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿರುವ ವೇಳೆಯಲ್ಲಿ ಮಡಿಕೇರಿ ನಗರದ ಬಾಲಕಿಯರ ಬಾಲ ಮಂದಿರದ 35 ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್ ದೃಢಪಡಿಟ್ಟಿದೆ.

    ಬಾಲಮಂದಿರಲ್ಲಿ ಇರುವ ಒಟ್ಟು 47 ವಿದ್ಯಾರ್ಥಿಗಳ ಪೈಕಿ 35 ವಿದ್ಯಾರ್ಥಿನಿಯರಿಗೆ ಪಾಸಿಟಿವ್ ದೃಢವಾಗಿದೆ. ಬಾಲ ಮಂದಿರದಲ್ಲಿ ಇಬ್ಬರು ಪಿಯು ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗಿ ಬಂದಿದ್ದ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿನಿಯರಿಗೆ ಸೋಂಕು ಬಂದಿತ್ತು. ಅವರಿಂದ ಉಳಿದ 33 ವಿದ್ಯಾರ್ಥಿನಿಯರಿಗೆ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಒಟ್ಟೋಟಿಗೆ ಗುಂಪು ಗುಂಪಾಗಿ ವಿದ್ಯಾರ್ಥಿನಿಯರು ಬಾಲಮಂದಿರದಲ್ಲಿರುವುದು ಸೋಂಕು ಹರಡಿರುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: 10-14 ವಾರಗಳ ಅಂತರದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆಯುವುದು ಉತ್ತಮ- ಅಧ್ಯಯನ ವರದಿ

    ಬಾಲ ಮಂದಿರದಲ್ಲಿ ಕೋವಿಡ್ ನಿಯಮಗಳು ಸರಿಯಾದ ರೀತಿಯಲ್ಲಿ ಪಾಲನೆ ಅಗದೇ ಇರುವುದರಿಂದ ಒಂದೇ ಬಾರೀ 33 ವಿದ್ಯಾರ್ಥಿನಿಯರಿಗೆ ಪಾಸಿಟಿವ್ ಬಂದಿದ್ದು, ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್ ಪತ್ತೆಯಾದ ತಕ್ಷಣ ಬಾಲ ಮಂದಿರದ ಸಿಬ್ಬಂದಿ ಉಳಿದ ಮಕ್ಕಳಿಗೆ ಬೇರೆ ಕೊಠಡಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಡಿದ್ದಾರೆ.  ಇದನ್ನೂ ಓದಿ:ಗುಟ್ಕಾ ಸಾಲ ಕೊಡದ್ದಕ್ಕೆ ಪಾನ್ ಶಾಪ್ ಮಾಲೀಕನನ್ನೇ ಕೊಂದ 

    ಈಗಾಗಲೇ ಬಾಲಮಂದಿರದ 12 ಸಿಬ್ಬಂದಿಗಳಿಗೂ ಆರೋಗ್ಯ ಇಲಾಖೆಯಿಂದ ಕೋವಿಡ್ ಟೆಸ್ಟ್ ಮಾಡಲಾಗಿದೆ. ಸದ್ಯ ಎಲ್ಲಾ ವಿದ್ಯಾರ್ಥಿಗಳನ್ನು ಬಾಲ ಮಂದಿರದಲ್ಲೇ ಕ್ವಾರಂಟೈನ್ ಮಾಡಲಾಗಿದ್ದು, ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಅರೋಗ್ಯ ಇಲಾಖೆ ಒದಗಿಸುತ್ತಿದೆ. ಒಟ್ಟಿನಲ್ಲಿ ಶಾಲೆ ಕಾಲೇಜಿಗೆ ಶುಕ್ರವಾರದಿಂದ ಮಕ್ಕಳನ್ನು ಕಳುಹಿಸಲು ಯೋಚನೆ ಮಾಡಿದ ಪೊಷಕರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

     

  • ಐ ಡೋಂಟ್ ವಾಂಟ್ ಟು ರಿಯಾಕ್ಟ್ ವಿಜಯೇಂದ್ರ : ಸಿದ್ದರಾಮಯ್ಯ

    ಐ ಡೋಂಟ್ ವಾಂಟ್ ಟು ರಿಯಾಕ್ಟ್ ವಿಜಯೇಂದ್ರ : ಸಿದ್ದರಾಮಯ್ಯ

    ಕೊಪ್ಪಳ: ಐ ಡೋಂಟ್ ವಾಂಟ್ ಟು ರಿಯಾಕ್ಟ್ ವಿಜಯೇಂದ್ರ. ನಾನು ಯಾವುದೇ ಕಾರಣಕ್ಕೂ ವಿಜಯೇಂದ್ರ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ.

    ಕೊಪ್ಪಳದ ಕಾರಟಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಜಯೇಂದ್ರಗೆ ಯಾವ ಅರ್ಹತೆ ಇದೆ? ಅವರೇನಾದ್ರೂ ಸಚಿವರಾಗಿದ್ರಾ ಅಥವಾ ಸಿಎಂ ಆಗಿದ್ರಾ? ಯಡಿಯೂರಪ್ಪನವರ ಮಗ ಅನ್ನೋದು ಬಿಟ್ರೆ ಬೇರೆ ಯಾವ ಕ್ವಾಲಿಫಿಕೇಶನ್ ಇದೆ? ವಿಜಯೇಂದ್ರ ರಾಜಕೀಯದಲ್ಲಿ ಏನೂ ಅಲ್ಲ ಎಂದು ಹೇಳಿದರು.

    ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಒಬ್ಬ ಪೆದ್ದ. ಅವನಿಗೆ ಬ್ರೈನ್‍ಗೂ ನಾಲಿಗೆಗೂ ಲಿಂಕ್ ಇಲ್ಲ. ಬಾಯಿಗೆ ಬಂದಂತೆ ಮಾತಾಡ್ತಾನೆ. ನಾನು ಹೇಗೆ ಕಾಂಗ್ರೆಸ್ ಪಾರ್ಟಿ ಸೇರಿದೆ ಎಂದು ನಿಮಗೆ ಗೊತ್ತಾ? ನನ್ನನ್ನು ಜೆಡಿಎಸ್‍ನಿಂದ ಹೊರಹಾಕಿದರು. ಬಳಿಕ ನಾನು ಒಂದು ವರ್ಷ ಅಹಿಂದಾ ಸಂಘಟನೆ ಮಾಡುತ್ತಿದ್ದೆ. ಆಮೇಲೆ ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ನನಗೆ ಕಾಂಗ್ರೆಸ್ ಸೇರಲು ಆಹ್ವಾನ ನೀಡಿದ ಮೇಲೆ ನಾನು ಕಾಂಗ್ರೆಸ್ ಪಕ್ಷ ಸೇರಿಕೊಂಡೆ. ಬಿಜೆಪಿ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಪಕ್ಷ ಸೇರಿಕೊಂಡೆ. ಈಶ್ವರಪ್ಪನಿಗೆ ಇದ್ಯಾವುದೂ ಗೊತ್ತಿಲ್ಲ ಎಂದು ಟೀಕಿಸಿದರು.

    ಕೊರೊನಾ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ಒಂದೇ ದಿನ 10 ಸಾವಿರಕ್ಕೂ ಅಧಿಕ ಕೇಸ್ ಬಂದಿವೆ. ಸರ್ಕಾರ ಬಿಗಿ ಕ್ರಮ ಕೈಗೊಂಡಿಲ್ಲ. ಸರ್ಕಾರದ ತಪ್ಪಿನಿಂದ ಎರಡನೇ ಅಲೆಯಲ್ಲಿ ಕೇಸ್‍ಗಳು ಹೆಚ್ಚುತ್ತಿವೆ. ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ. ಬಿಗಿ ಕ್ರಮ ಕೈಗೊಳ್ಳಬೇಕು. ಸರಿಯಾಗಿ ಕೋವಿಡ್ ಟೆಸ್ಟ್ ನಡೆಸಬೇಕು. ಗಡಿ ಭಾಗಗಳಲ್ಲಿ ಸರಿಯಾಗಿ ಟೆಸ್ಟ್ ನಡೆಸುತ್ತಿಲ್ಲ. ಮಹಾರಾಷ್ಟ್ರ, ಕೇರಳದಿಂದ ಬರುತ್ತಿರುವವರಿಗೆ ಸರಿಯಾಗಿ ಕೋವಿಡ್ ಟೆಸ್ಟ್ ಮಾಡುತ್ತಿಲ್ಲ. ಸರ್ಕಾರ ದುಡ್ಡು ಹೊಡೆಯೋದ್ರಲ್ಲಿ ಕಾಲಹರಣ ಮಾಡುತ್ತಿದೆ ಎಂದು ದೂರಿದರು.

    ನಳೀನ್ ಕುಮಾರ್ ಕಟೀಲ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಳೀನ್ ಕುಮಾರ್ ಕಟೀಲ್ ಒಬ್ಬ ವಿಧೂಷಕ. ಜೋಕರ್ ಇದ್ದ ಹಾಗೆ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

    ಮಂಗಳಾ ಅಂಗಡಿ ಬಗ್ಗೆ ಸಿದ್ದರಾಮಯ್ಯ ಮಾತನಾಡಿ, ನಾನು ಮಂಗಳಾ ಅಂಗಡಿಯವರಿಗೆ ಅವಮಾನ ಮಾಡಿಲ್ಲ. ಸುರೇಶ್ ಅಂಗಡಿಯೇ ರಾಜ್ಯ ಸರ್ಕಾರಕ್ಕೆ ಬರಬೇಕಾದ ಹಣವನ್ನು ಕೇಳಿಲ್ಲ. ಇನ್ನೂ ಈ ಅಮ್ಮ ಎಲ್ಲಿ ಕೇಳ್ತಾರೆ ಎಂದು ಹೇಳಿದ್ದೆ ಅಷ್ಟೇ. ಸುರೇಶ್ ಅಂಗಡಿಗೆ 4 ಬಾರಿ ವೋಟ್ ಹಾಕಿದ್ದೀರಿ. ಈ ಬಾರಿ ಬದಲಾವಣೆ ಇರಲಿ ಎಂದು ಸತೀಶ್ ಜಾರಕಿಹೊಳಿಗೆ ವೋಟ್ ಹಾಕಿ ಎಂದಿದ್ದೆ. ಈ ಬಗ್ಗೆ ಜಗದೀಶ್ ಶೆಟ್ಟರ್ ಏನೇ ಹೇಳಬಹುದು. ಅದಕ್ಕೆಲ್ಲಾ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ನಾನು ಸ್ಟೇಟ್ ಮೆಂಟ್ ನೀಡುವುದು ಜನರಿಗೆ, ಶೆಟ್ಟರ್‍ ಗಳಲ್ಲ ಎಂದರು.

  • ಬೆಂಗಳೂರು ಅಪಾರ್ಟ್‍ಮೆಂಟ್‍ನಲ್ಲಿ 103 ಮಂದಿಗೆ ಕೊರೊನಾ

    ಬೆಂಗಳೂರು ಅಪಾರ್ಟ್‍ಮೆಂಟ್‍ನಲ್ಲಿ 103 ಮಂದಿಗೆ ಕೊರೊನಾ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೊರೊನಾ ಆರ್ಭಟವಾಗಿದ್ದು ಒಂದೇ ಅಪಾರ್ಟ್‍ಮೆಂಟ್‍ನಲ್ಲಿದ್ದ 103 ಮಂದಿಗೆ ಕೊರೊನಾ ಬಂದಿದೆ.

    ಬಿಳೇಕಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ 103 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. 50 ವರ್ಷ ಮೇಲ್ಪಟ್ಟವರು 96 ಜನರಿಗೆ ಕೊರೊನಾ ಪಾಸಿಟಿವ್ ಹಾಗೂ ಡಯಾಬಿಟಿಕ್ ಇರುವ 43 ಮಂದಿಗೂ ಬಂದಿದೆ ಎಂದು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ವಿಜಯೇಂದ್ರ ಹೇಳಿದ್ದಾರೆ.

    ಫೆ.6 ರಂದು 40 ಜನ ಬೊಮ್ಮನಹಳ್ಳಿ ಬಿಳೇಕಳ್ಳಿಯ ಖಾಸಗಿ ಅಪಾರ್ಟ್‍ಮೆಂಟ್‍ನಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದವರಿಗೆ ಮತ್ತು ಭಾಗವಹಿಸಿದವರಿಂದ ಒಟ್ಟು 103 ಮಂದಿಗೆ ಕೊರೊನಾ ಬಂದಿದೆ.

    ಜ್ವರ ,ಕೆಮ್ಮು ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡುವಂತೆ ಅಪಾರ್ಟ್‍ಮೆಂಟ್‍ನಿಂದ ಕರೆ ಬಂದಿತ್ತು. ಕರೆ ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿದಾಗ ಸೋಂಕು ಬಂದಿರುವುದು ದೃಢಪಟ್ಟಿದೆ. ಒಟ್ಟು 2 ಸಾವಿರ ಮಂದಿ ಅಪಾರ್ಟ್‍ಮೆಂಟ್‍ನಲ್ಲಿದ್ದಾರೆ.

    ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಆರೋಗ್ಯ ಸಿಬ್ಬಂದಿ ಸೋಮವಾರದಿಂದ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಈ ವೇಳೆ 103 ಮಂದಿಗೆ ಸೋಂಕು ಇರುವುದು ತಿಳಿದುಬಂದಿದೆ.

  • 9 ತಿಂಗಳ ನಂತರ ಕೊರೋನಾದಿಂದ ಗುಣಮುಖಳಾದ 4ರ ಬಾಲಕಿ

    9 ತಿಂಗಳ ನಂತರ ಕೊರೋನಾದಿಂದ ಗುಣಮುಖಳಾದ 4ರ ಬಾಲಕಿ

    ಮೆಕ್ಸಿಕೊ: 9 ತಿಂಗಳಿಂದ ಕೊರೋನಾದಿಂದ ಬಳಲುತ್ತಿದ್ದ 4ರ ಬಾಲಕಿ ಗುಣಮುಖಳಾಗಿ ಆಸ್ಪತ್ರೆಯಿಂದ ಬರುತ್ತಿರುವಾಗ ಆಸ್ಪತ್ರೆ ಸಿಬ್ಬಂದಿ ಸಾಲಾಗಿ ನಿಂತು ಚಪ್ಪಾಳೆ ತಟ್ಟಿ ಕಳುಹಿಸಿ ಕೊಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನ್ಯೂ ಮೆಕ್ಸಿಕೊ ಆರೋಗ್ಯ ವಿಜ್ಞಾನ ಆಸ್ಪತ್ರೆಯಲ್ಲಿ 9 ವರ್ಷದ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಳು. ಆಸ್ಪತ್ರೆಗೆ ದಾಖಲಾದ ಆರಂಭದಲ್ಲಿ 5 ತಿಂಗಳ ಕಾಲ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ನಂತರ ಬಾಲಕಿ ಚಿಕಿತ್ಸೆಗೆ ಸ್ಪಂದಿಸಿದ್ದು, ಇದೀಗ ಆಸ್ಪತ್ರೆಯಿಂದ ಸಂಪೂರ್ಣವಾಗಿ ಗುಣಮುಖಳಾಗಿ ಬಂದಿದ್ದಾಳೆ.

    ವೀಡಿಯೋದಲ್ಲಿ ಏನಿದೆ?
    ಬಾಲಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರುವಾಗ ಬಾಲಕಿ ಎಡ ಮತ್ತು ಬಲ ಭಾಗದಲ್ಲಿ ಆಸ್ಪತ್ರೆಯ ಸಿಬ್ಬಂದಿ ನಿಂತು ಚಪ್ಪಾಳೆ ತಟ್ಟಿ ಹೃದಯಸ್ಪರ್ಶಿ ವಿದಾಯ ಹೇಳಿದ್ದಾರೆ. ಈ ವೀಡಿಯೋ ಸಾಮಾಜಿ ಕಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ವೈದ್ಯರು ಒಬ್ಬ ರೋಗಿಗೆ ತೋರಿಸುತ್ತಿರುವ ಪ್ರೀತಿ ಮತ್ತು ಅಲ್ಲಿಯ ಆಸ್ಪತ್ರೆಯ ಸಿಬ್ಬಂದಿ ಕಾರ್ಯವನ್ನು ಹೊಗಳಿ ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ. 24 ಸೆಕೆಂಡ್ಸ್ ಈ ವೀಡಿಯೋ ನೋಡುವವರ ಹೃದಯ ತುಂಬಿಬರುತ್ತದೆ.

  • ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಲಸಿಕೆ ಅಭಿಯಾನ ಸ್ಥಗಿತ

    ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಲಸಿಕೆ ಅಭಿಯಾನ ಸ್ಥಗಿತ

    ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾವು ತನ್ನ ಆರೋಗ್ಯ ಕಾರ್ಯಕರ್ತರಿಗೆ ಅಸ್ಟ್ರಾಜೆನೆಕಾ  ಲಸಿಕೆ ನೀಡುತ್ತಿದ್ದ ಅಭಿಯಾನವನ್ನು ಸ್ಥಗಿತಗೊಳಿಸಿದೆ.

    ದಕ್ಷಿಣ ಆಫ್ರಿಕಾ ಕಳೆದ ವಾರ ಹತ್ತು ಲಕ್ಷ ಡೋಸ್ ಅಸ್ಟ್ರಾಜೆನೆಕಾ ಲಸಿಕೆಗಳನ್ನು ಪಡೆದುಕೊಂಡಿದ್ದು, ಫೆಬ್ರುವರಿ ತಿಂಗಳ ಮಧ್ಯದಿಂದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲು ಉದ್ದೇಶಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್‍ನ ಪ್ರಕರಣಗಳು ಹೆಚ್ಚಾಗಿದ್ದು, ಅಸ್ಟ್ರಾಜೆನೆಕಾ ಲಸಿಕೆಯು ಇದರಿಂದ ಸ್ವಲ್ಪ ಮಟ್ಟದ ಸುರಕ್ಷತೆಯನ್ನು ಮಾತ್ರ ನೀಡುತ್ತದೆ ಎಂದು ದಕ್ಷಿಣ ಆಫ್ರಿಕಾ ನಡೆಸಿದ ಪ್ರಾಥಮಿಕ ಅಧ್ಯಯನದಲ್ಲಿ ತಿಳಿದುಬಂದಿದೆ.

    ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರಗೊಂಡ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಕೋವಿಡ್ ಪ್ರಕರಣಗಳ ಪೈಕಿ ಶೇಕಡ 90 ರಷ್ಟು ರೂಪಾಂತರಗೊಂಡ ಕೊರೊನಾ ಸೋಂಕು ಹೆಚ್ಚಾಗಿವೆ ಎಂದು ಅಲ್ಲಿನ ಆರೋಗ್ಯ ಸಚಿವ ಜ್ವೆಲಿ ಮ್ಮೈಜ್ ಅವರು ತಿಳಿಸಿದ್ದಾರೆ. ಅಸ್ಟ್ರಾಜೆನೆಕಾ ಲಸಿಕೆಯು ಕೇವಲ ಮೂಲ ಕೊರೊನಾ ವೈರಸ್‍ನ ವಿರುದ್ಧ ಪರಿಣಾಮಕಾರಿಯಾಗಿದೆ. ಇದು ರೂಪಾಂತರಗೊಂಡ ಕೊರೊನಾದ ಮೇಲೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಹಾಗಾಗಿ ಸದ್ಯಕ್ಕೆ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮ್ಮೈಜ್ ಹೇಳಿದರು.


    ಕ್ಲಿನಿಕಲ್ ಟ್ರಯಲ್‍ಗೆ 2,000 ಮಂದಿಯನ್ನು ಒಳಪಡಿಸಲಾಗಿತ್ತು. ಇದರಲ್ಲಿ ಭಾಗಿಯಾದವರಲ್ಲಿ ಹೆಚ್ಚಿನವರು ಯುವಕರು ಮತ್ತು ಆರೋಗ್ಯವಂತರಾಗಿದ್ದರು. ಇದರಲ್ಲಿ ಭಾಗಿಯಾಗಿದ್ದ ಸ್ವಯಂಸೇವಕರ ಸರಾಸರಿ ವಯಸ್ಸು 31 ಆಗಿದೆ. ದಕ್ಷಿಣ ಆಫ್ರಿಕಾವು ನಡೆಸಿದ ಕ್ಲಿನಿಕಲ್ ಪ್ರಯೋಗದಲ್ಲಿ ಅಸ್ಟ್ರಾಜೆನೆಕಾ ಲಸಿಕೆಯು ಲಘು ಮತ್ತು ಪ್ರಬಲ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿಲ್ಲ ಎಂಬುದು ತಿಳಿದುಬಂದಿದೆ. ವಿಜ್ಞಾನಿಗಳು ಈ ಬಗ್ಗೆ ಅಧ್ಯಯನವನ್ನು ನಡೆಸುತ್ತಿದ್ದಾರೆ. ಈ ಬಳಿಕ ಸರ್ಕಾರ ಲಸಿಕೆ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗುತ್ತಿದೆ.