Tag: ಕೊರೊನ ಲಸಿಕೆ

  • ಲಸಿಕೆ ಪಡೆಯದವರಿಗೆ ಇಲ್ಲ ಹೇರ್ ಕಟ್ಟಿಂಗ್, ಶೇವಿಂಗ್ – ಸಲೂನ್ ಮಾಲೀಕರ ನಿರ್ಧಾರ

    ಲಸಿಕೆ ಪಡೆಯದವರಿಗೆ ಇಲ್ಲ ಹೇರ್ ಕಟ್ಟಿಂಗ್, ಶೇವಿಂಗ್ – ಸಲೂನ್ ಮಾಲೀಕರ ನಿರ್ಧಾರ

    – ವ್ಯಾಕ್ಸಿನ್ ಪಡೆದ ಮೆಸೇಜ್ ತೋರಿಸಿ ಒಳಗೆ ಬನ್ನಿ

    ಭೋಪಾಲ್: ಕೊರೊನಾ ಲಸಿಕೆ ಪಡೆದುಕೊಳ್ಳದವರಿಗೆ ಹೇರ್ ಕಟ್ಟಿಂಗ್ ಮತ್ತು ಶೇವಿಂಗ್ ಮಾಡಬಾರದು ಎಂದು ಮಧ್ಯ ಪ್ರದೇಶದ ಛಿಂದ್ವಾಡಾ ಸಲೂನ್ ಮಾಲೀಕರು ನಿರ್ಧರಿಸಿದ್ದಾರೆ.

    ಕೊರೊನಾ ಲಸಿಕೆ ಪಡೆಯದವರಿಗೆ ಕ್ಷೌರ ಸೇರಿದಂತೆ ಯಾವುದೇ ಸೇವೆಗಳನ್ನು ನೀಡಲ್ಲ. ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಅಥವಾ ಮೆಸೇಜ್ ತೋರಿಸಿಯೇ ಸೇವೆ ಪಡೆಯಬೇಕು. ಈ ಮೂಲಕ ಜನರು ವ್ಯಾಕ್ಸಿನ್ ಪಡೆದುಕೊಳ್ಳುವಂತಾಗಲಿ. ಕೊರೊನಾ ಲಸಿಕೆ ಅಭಿಯಾನಕ್ಕೆ ನಾವು ಸಾಥ್ ನೀಡಿದ್ದೇವೆ ಎಂದು ಸಲೂಲ್ ಮಾಲೀಕರ ಸಂಘ ಹೇಳಿದೆ.

    ಸಲೂನ್ ಮಾಲೀಕರ ಸಂಘದ ಸಭೆಯಲ್ಲಿ ಸರ್ವಸಮ್ಮತಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕ್ಷೌರ ಮಾಡುವಾವ ಗ್ರಾಹಕರ ಸಮೀಪಕ್ಕೆ ಹೋಗಬೇಕಾಗುತ್ತದೆ . ಮುಂಜಾಗ್ರತ ಕ್ರಮ ತೆಗೆದುಕೊಂಡ್ರೂ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸಲೂನ್ ಸಂಘ ಈ ನಿರ್ಧಾರಕ್ಕೆ ಬಂದಿದೆ. ಇದನ್ನೂ ಓದಿ: ಎರಡು ದಿನದ SSLC ಪರೀಕ್ಷೆ ದಿನಾಂಕ ಪ್ರಕಟ

    ಕಷಾಯ ಕುಡಿದ್ರೆ ಟಿಫನ್:
    ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಇಡೀ ಊರಿಗೆ ಊರೇ ಕೊರೊನಾ ವಿರುದ್ಧ ಟೊಂಕಕಟ್ಟಿ ನಿಂತಿದೆ. ಹೆಮ್ಮಾರಿ ಕೊರೊನಾ ಹಿಮ್ಮೆಟ್ಟಿಸಲು ಗ್ರಾಮ ಪಂಚಾಯ್ತಿ ಮಾಡಿರೋ ಮಾಸ್ಟರ್ ಪ್ಲಾನ್‍ನಿಂದಾಗಿ ಗ್ರಾಮಸ್ಥರು ಆರೋಗ್ಯವೇ ಭಾಗ್ಯ ಅಂತಿದ್ದಾರೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಮಾಜಿ ಪ್ರಿಯಕರನ ದುಬಾರಿ ಬೈಕ್‍ಗೆ ಬೆಂಕಿ ಇಟ್ಟ ಮಹಿಳೆ

    ಗ್ರಾಮದಲ್ಲಿ ಯಾವುದೇ ಹೋಟೆಲ್‍ಗೆ ಹೋದ್ರೂ ಮೊದಲು ಒಂದು ಲೋಟ ಕಷಾಯ ಕೊಡ್ತಾರೆ. ಆಮೇಲೆ ಊಟ, ತಿಂಡಿ ಏನ್ ಬೇಕು ಅಂತ ಕೇಳ್ತಾರೆ. ಕಷಾಯಕ್ಕೆ ಆಯುರ್ವೇದಲ್ಲಿ ವಿಶೇಷ ಸ್ಥಾನ ಇದೆ. ಗಂಟಲಿನಲ್ಲಿನ ವೈಸರ್ಗಳನ್ನು ಕೊಲ್ಲಬಲ್ಲ, ರೋಗನಿರೋಧಕ ಶಕ್ತಿಯನ್ನ ಹೆಚ್ವಿಸುವಲ್ಲೂ ಕಷಾಯ ಸಹಕಾರಿ. ಹೀಗಾಗಿ ಅಬ್ಬಿಗೇರಿ ಗ್ರಾಮ ಪಂಚಾಯ್ತಿ ಗ್ರಾಮದ ಪ್ರತಿ ಹೋಟೆಲ್‍ಗಳಲ್ಲಿ ಕಷಾಯ ನೀಡುವಂತೆ ಮನವಿ ಮಾಡಿದೆ. ಟೀ ಅಂಗಡಿಗೆ ಹೋದ್ರೂ ಅಲ್ಲೂ ಮೊದಲಿಗೆ ಒಂದು ಕಪ್ ಕಷಾಯ ಕೊಡ್ತಾರೆ. ಹೋಟೆಲ್‍ಗಳಲ್ಲಿ ಒಂದು ವೇಳೆ ಕಷಾಯ ಬೇಡಪ್ಪ ಅಂದ್ರೆ ಎದ್ದು ಮುಂದಕ್ಕೆ ಹೋಗಯ್ಯ ಅಂತಾರೆ. ಇನ್ನು ಎಲ್ಲೇ ಕಷಾಯ ಕುಡಿದ್ರೂ ಹಣ ಪಡೆಯಲ್ಲ.

  • ವಾಕ್ಸಿನ್ ಹಾಕುವುದರಲ್ಲಿ ರಾಜ್ಯಕ್ಕೆ ಮೈಸೂರು ನಂಬರ್ ಒನ್

    ವಾಕ್ಸಿನ್ ಹಾಕುವುದರಲ್ಲಿ ರಾಜ್ಯಕ್ಕೆ ಮೈಸೂರು ನಂಬರ್ ಒನ್

    ಮೈಸೂರು: 45 ವರ್ಷ ಮೇಲ್ಪಟ್ಟ 10 ಲಕ್ಷಕ್ಕೂ ಅಧಿಕ ಜನರಿಗೆ ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಲಸಿಕೆ ನೀಡಲಾಗಿದೆ. ಕೊರೊನಾ ಸೋಂಕಿನ ಮೂರನೇ ಅಲೆ ಬರುವ ಮುನ್ನವೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿ ಕ್ಷಿಪ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ 34,06,521 ಜನಸಂಖ್ಯೆಯಲ್ಲಿ – 24,75,988 ಜನರಿಗೆ ಲಸಿಕೆ ನೀಡಬೇಕಾಗಿದ್ದು, ಇಲ್ಲಿವರೆಗೂ 10,30,825 ಮಂದಿಗೆ ನೀಡಲಾಗಿದೆ. 45 ವರ್ಷ ಮೇಲ್ಪಟವರಿಗೆ ಮೊದಲ ಡೋಸ್‍ನಲ್ಲಿ ಶೇ. 73.54ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲಿ ಮೈಸೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಎರಡನೇ ಡೋಸ್ 1,24,674 ಮಂದಿಗೆ ಹಾಕಲಾಗಿದೆ.

    ಅದೇ ರೀತಿ 18ರಿಂದ 44 ವರ್ಷದೊಳಗಿನವರಲ್ಲಿ ಇದುವರೆಗೂ 1,34,277 ಲಸಿಕೆ ಹಾಕಲಾಗಿದೆ. ಲಸಿಕೆ ಪಡೆದರೆ ಜನರ ಜೀವ ಸುರಕ್ಷಿತವಾಗಿರಲಿದ್ದು ಸೋಂಕು ತಗುಲಿದರೂ ಚಿಕಿತ್ಸೆ ನೀಡುವುದು ಸುಲಭವಾಗಲಿದೆ. ಹೀಗಾಗಿ ನಿತ್ಯ ಗರಿಷ್ಠ ಮಟ್ಟದಲ್ಲಿ ಲಸಿಕೆ ನೀಡುವ ಗುರಿ ನಿಗದಿಪಡಿಸಿಕೊಂಡಿದ್ದು, ಪ್ರಸ್ತುತ ಲಸಿಕೆ ಲಭ್ಯತೆ ಪ್ರಕಾರ ದಿನ ಸುಮಾರು 6,000 ಮಂದಿಗೆ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ.

    170 ಪ್ರಾಥಮಿಕ ಆರೋಗ್ಯ ಕೇಂದ್ರ, 6 ಸಾರ್ವಜನಿಕರ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಆಸ್ಪತ್ರೆ, ಇಎಸ್‍ಐ, ರೈಲ್ವೆ ಹಾಗೂ ಬೀಡಿ ಕಾರ್ಮಿಕರ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ನಿತ್ಯವೂ ಲಸಿಕೆ ಲಭ್ಯತೆ ಆಧಾರದ ಮೇಲೆ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ನಿಗದಿತ ಸಮಯದೊಳಗೆ ಗುರಿ ತಲುಪಲು ಜಿಲ್ಲಾಡಳಿತ ಶ್ರಮಿಸುತ್ತಿದೆ.

    ವೈದ್ಯರು, ಪೊಲೀಸರು, ಆರೋಗ್ಯ ಕಾರ್ಯಕರ್ತೆಯರು, ಪತ್ರಕರ್ತರು ಸೇರಿದಂತೆ ಹಲವರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಉಳಿದಂತೆ ವಿಶೇಷಚೇತನರು, ಕೈದಿಗಳು, ಶವಾಗಾರದಲ್ಲಿ ಕಾರ್ಯನಿರ್ವಹಿಸುವವರು, ಸ್ವಯಂಸೇವಕರು, ಶಿಕ್ಷಕರು, ಸಾರಿಗೆ ಇಲಾಖೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು, ಸೆಸ್ಟ್ ಸಿಬ್ಬಂದಿ, ನೀರು ಸರಬರಾಜು ಇಲಾಖೆ, ಅಗ್ನಿಶಾಮಕ ದಳ, ಅಂಚೆ ಇಲಾಖೆ, ಬೀದಿಬದಿ ವ್ಯಾಪಾರಿಗಳು, ಭದ್ರತಾ ಸಿಬ್ಬಂದಿ, ನ್ಯಾಯಾಲಯ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಸ್ಪತ್ರೆಗಳಿಗೆ ಔಷಧಗಳನ್ನು ನೀಡುತ್ತಿರುವವರಿಗೆ ವ್ಯಾಕ್ಸಿನ್ ಹಾಕಲಾಗುತ್ತಿದೆ.

    ಮೇನಲ್ಲಿ ಸಾವಿರಕ್ಕೂ ಅಧಿಕ ಸಾವು:
    ಕೋವಿಡ್ ಎರಡನೇ ಅಲೆಯ ಅಬ್ಬರದಲ್ಲಿ ಮೈಸೂರು ನಗರದಲ್ಲೇ ಮೇ ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚು. ವಿವಿಧ ಅಂಕಿ ಅಂಶಗಳ ಪ್ರಕಾರ ಈ ಸಂಖ್ಯೆ ಸತ್ಯವಾಗಿದೆ. ಮೈಸೂರು ನಗರದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಒಂದು ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರ ನಡೆದಿದೆ. ಇದನ್ನೂ ಓದಿ: ಮೈಸೂರಲ್ಲಿ ಕೊರೊನಾ ಡೆತ್ ರೇಟ್ ಹೆಚ್ಚಾಗೋಕೆ ಕಾರಣ ತಿಳಿಸಿದ ಡಿಸಿ ಬಗಾದಿ ಗೌತಮ್

    ಮೈಸೂರು ಮಹಾನಗರ ಪಾಲಿಕೆಯ ಜನನ-ಮರಣ ವಿಭಾಗದ ದಾಖಲಾತಿಯ ಪ್ರಕಾರ ಮೇ ತಿಂಗಳಲ್ಲಿ ಒಂದು ಸಾವಿರ ಜನ ಮೃತಪಟ್ಟಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ 372 ಸೋಂಕಿತರ ಶವ ಸಂಸ್ಕಾರ ನಡೆದಿದೆ. ಜೂನ್ 6ರವರೆಗೂ 129 ಜನೆ ಅಂತ್ಯಸಂಸ್ಕಾರ 129 ಮಂದಿಯ ಮಾಡಲಾಗಿದೆ. ಇದನ್ನೂ ಓದಿ: 2 ರಿಂದ 4 ವಾರದ ಒಳಗಡೆ ಮೂರನೇ ಕೊರೊನಾ ಅಲೆ – ತಜ್ಞರ ಎಚ್ಚರಿಕೆ

    ಕೋವಿಡ್‍ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿಯೇ ಪಾಲಿಕೆ ಆಡಳಿತ ಹಿಂದೂಗಳಿಗೆ ಮೂರು, ಮುಸ್ಲಿಮರಿಗೆ ಎರಡು, ಕ್ರಿಶ್ಚಿಯನ್ನರಿಗೆ ನಾಲ್ಕು ಒಟ್ಟು 9 ಸ್ಮಶಾನಗಳನ್ನು ಮೀಸಲಿಟ್ಟಿದೆ. ಇಲ್ಲಿ ನಡೆದಿರುವ ಅಂತ್ಯ ಸಂಸ್ಕಾರಗಳ ಲೆಕ್ಕವೇ ಮೇ ತಿಂಗಳಲ್ಲಿ ಒಂದು ಸಾವಿರ ದಾಟಿದೆ. ಕೋವಿಡ್‍ನಿಂದ ಮೃತಪಟ್ಟರೂ ಪಾಲಿಕೆ ವ್ಯಾಪ್ತಿಯ ಯಾವೊಂದು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸದೆ ತಮ್ಮ ಜಮೀನು, ಊರಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಿದವರ ಲೆಕ್ಕ ಇದರಲ್ಲಿ ಸೇರ್ಪಡೆಯಾಗಿಲ್ಲ. ಇದನ್ನೂ ಓದಿ: ದೇಶದಲ್ಲಿ 74 ದಿನಗಳ ನಂತ್ರ ಅತಿ ಕಡಿಮೆ ಸಕ್ರಿಯ ಪ್ರಕರಣ -ಗುಣಮುಖರ ಪ್ರಮಾಣ ಶೇ.96.16

    ಮೈಸೂರಿನ ಆಸ್ಪತ್ರೆಗಳಿಗೆ ದಾಖಲಾಗಿದ್ದ ಜಿಲ್ಲೆಯ ಗ್ರಾಮೀಣ ಪ್ರದೇಶದವರು ಹಾಗೂ ಹೊರ ಜಿಲ್ಲೆಯ ಕೆಲವು ಕೋವಿಡ್ ಪೀಡಿತರು ಮೃತಪಟ್ಟ ಬಳಿಕ ಪಾಲಿಕೆಯ ಸ್ಮಶಾನಗಳಲ್ಲೇ ಅಂತ್ಯಸಂಸ್ಕಾರ ನಡೆಸಲಾಗಿದೆ.  ಇದನ್ನೂ ಓದಿ: ವಿಶ್ವ ನಾಯಕರ ಪೈಕಿ ಶೇ.66 ಅಂಕದೊಂದಿಗೆ ಮೋದಿ ನಂಬರ್ 1

  • ರಾಜ್ಯ ಸರ್ಕಾರ ಉಚಿತ ಲಸಿಕೆ ನೀಡಲು ವಿಫಲ-ಐವನ್ ಡಿಸೋಜಾ ನೇತೃತ್ವದಲ್ಲಿ ಪ್ರತಿಭಟನೆ

    ರಾಜ್ಯ ಸರ್ಕಾರ ಉಚಿತ ಲಸಿಕೆ ನೀಡಲು ವಿಫಲ-ಐವನ್ ಡಿಸೋಜಾ ನೇತೃತ್ವದಲ್ಲಿ ಪ್ರತಿಭಟನೆ

    ಮಂಗಳೂರು: ರಾಜ್ಯ ಸರ್ಕಾರ ಉಚಿತ ಲಸಿಕೆ ನೀಡುತ್ತೇವೆಂದು ಜನರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಳಗ್ಗೆ 4.30 ರಿಂದ ಸಾಲಿನಲ್ಲಿ ನಿಲ್ಲುವ 500 ಜನರಲ್ಲಿ ಕೇವಲ 150 ಜನರಿಗೆ ಟೋಕನ್ ಗಳನ್ನು ನೀಡಲಾಗುತ್ತದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಜನರನ್ನು ಸಂಕಟಕ್ಕೀಡು ಮಾಡುತ್ತಿರುವುದನ್ನು ವಿರೋಧಿಸಿ ಮಾಜಿ ಶಾಸಕ ಐವನ್ ಡಿಸೋಜರವರು ಇಂದು ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಮ್ಮ ತಂಡದೊಂದಿಗೆ ಭೇಟಿ ನೀಡಿ ಪ್ರತಿಭಟನೆಯನ್ನು ನಡೆಸಿದರು.

    ಸರ್ಕಾರ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಖಾಸಗಿಯಲ್ಲಿ ಲಸಿಕೆ ಸಿಗುತ್ತಿದ್ದು, ಸರ್ಕಾರದ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆಗೆ ರೇಷನ್ ರೀತಿಯಲ್ಲಿ ನೀಡುತ್ತಿರುವುದು ಖಂಡನೀಯ. ಜನರು ಲಸಿಕೆ ಇಲ್ಲದೆ ಸಾಯುತ್ತಿದ್ದರೂ ಬಿಜೆಪಿ ಮಾತ್ರ ವ್ಯಾಪಾರ ಮಾಡುತ್ತಿದೆ. ಸಂಭ್ರಮ ಆಚರಣೆ ಮಾಡುತ್ತಿದೆ. ಬಿಜೆಪಿಗೆ ಜನ ಬುದ್ಧಿ ಕಲಿಸುತ್ತಾರೆ ಜನರನ್ನು ನಿರ್ಲಕ್ಷಿಸಿದರೆ ಜನರು ಸುಮ್ಮನೆ ಇರುವುದಿಲ್ಲ. ನಮಗೆ ಜನರ ಪ್ರಾಣ ಮುಖ್ಯ ಎಂದು ಐವನ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

    ಪ್ರತಿಭಟನಾ ವೇಳೆ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ನವೀನ್ ಡಿಸೋಜ,ಮಾಜಿ ಕಾರ್ಪೊರೇಟರ್ ರಜನೀಶ್, ಪ್ರಕಾಶ್ ಸಾಲಿಯನ್, ಅಪ್ಪಿ, ಅಶೋಕ್ ಡಿ.ಕೆ, ಮಹಮ್ಮದ್ ಕುಂಜತಬೈಲ್, ಭಾಸ್ಕರ್ ರಾವ್, ರಾಜ್ಯ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿ ಆಶಿತ್ ಪಿರೇರಾ, ಜಿಲ್ಲಾ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ್, ಅಲಿಸ್ತಿನ್ ಡಿ’ಕುನಾ, ಸ್ಥಳೀಯರು ಉಪಸ್ಥಿತರಿದ್ದರು.