Tag: ಕೊರೊನಾ 4ನೇ ಅಲೆ

  • ಕೊರೊನಾ 4ನೇ ಅಲೆ ನಿಯಂತ್ರಣಕ್ಕೆ 3’ಟಿ’ ಸೂತ್ರ ನೀಡಿದ ಪ್ರಧಾನಿ ಮೋದಿ

    ಕೊರೊನಾ 4ನೇ ಅಲೆ ನಿಯಂತ್ರಣಕ್ಕೆ 3’ಟಿ’ ಸೂತ್ರ ನೀಡಿದ ಪ್ರಧಾನಿ ಮೋದಿ

    ಬೆಂಗಳೂರು: ಕೊರೊನಾ 4ನೇ ಅಲೆ ನಿಯಂತ್ರಣಕ್ಕೆ ಮತ್ತೆ ಟಿ3 ಸೂತ್ರಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮೊರೆ ಹೋಗಿದ್ದಾರೆ. ಕೊರೊನಾ ನಿಯಂತ್ರಣ ಸಂಬಂಧ ಎಲ್ಲಾ ರಾಜ್ಯಗಳ ಜೊತೆ ನಡೆದ ಸಭೆಯಲ್ಲಿ ಎಲ್ಲಾ ರಾಜ್ಯಗಳು 3ಟಿ ಸೂತ್ರ ಅಳವಡಿಸಿ ಅಂತ ಸಲಹೆ ನೀಡಿದ್ದಾರೆ.

    ಕೊರೊನಾ 3ನೇ ಅಲೆಗಳ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ ಮೆಂಟ್ ಸೂತ್ರ ಪ್ರಸ್ತಾಪ ಮಾಡಿ ಯಶಸ್ವಿಯಾಗಿ ಕೊರೊನಾ ನಿಯಂತ್ರಣ ಮಾಡಿದ್ದರು. ಶೀಘ್ರವೇ ಟೆಸ್ಟ್ ಮಾಡುವುದು, ಟೆಸ್ಟ್ ಮಾಡಿದ ಬಳಿಕ ಸೋಂಕಿತರನ್ನು ಟ್ರೇಸ್ ಮಾಡುವುದು ಮತ್ತು ಸೋಂಕಿತರಿಗೆ ಶೀಘ್ರವೇ ಚಿಕಿತ್ಸೆ ಕೊಡಲು ಕ್ರಮವಹಿಸುವುದು 3ಟಿ ಸೂತ್ರ. ಇದನ್ನು ಎಲ್ಲಾ ರಾಜ್ಯಗಳು ಮತ್ತೊಮ್ಮೆ ಅನುಷ್ಠಾನ ಮಾಡುವಂತೆ ಪ್ರಧಾನಿಗಳು ಸಲಹೆ ನೀಡಿದರು. ಇದನ್ನೂ ಓದಿ: ಹನುಮಾನ್ ಚಾಲೀಸಾ ವಿಚಾರದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ: ಸಂಜಯ್ ರಾವತ್

    ಪ್ರಧಾನಿಗಳ ಸಲಹೆಗಳನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲೂ 3ಟಿ ಸೂತ್ರ ಅನುಷ್ಠಾನಕ್ಕೆ ಮುಂದಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡುವುದಿಲ್ಲ. ಆದರೆ ಪ್ರಧಾನಿಗಳು ನೀಡಿದ 3ಟಿ ಸೂತ್ರ ಅನುಷ್ಠಾನ ಮಾಡುತ್ತೇವೆ. ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ ಮೆಂಟ್ ಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ತಿಳಿಸಿದರು. ಇದನ್ನೂ ಓದಿ: ನಡು ರಸ್ತೆಯಲ್ಲಿ ಜಡೆ ಜಗಳ – ಎರಡು ಗುಂಪಿನ ವಿದ್ಯಾರ್ಥಿನಿಯರ ಜಗಳ ಬಿಡಿಸಲು ಜನ ಹರಸಾಹಸ

  • ಜೂನ್‌ನಲ್ಲಿ ಕೊರೊನಾ 4ನೇ ಅಲೆ ಸಾಧ್ಯತೆ – IIT ಸಂಶೋಧಕರಿಂದ ಮಾಹಿತಿ

    ಜೂನ್‌ನಲ್ಲಿ ಕೊರೊನಾ 4ನೇ ಅಲೆ ಸಾಧ್ಯತೆ – IIT ಸಂಶೋಧಕರಿಂದ ಮಾಹಿತಿ

    ಲಕ್ನೋ: ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ನಾಲ್ಕನೇ ಅಲೆಯೂ ಜೂನ್ 22ರ ಸುಮಾರಿಗೆ ಪ್ರಾರಂಭವಾಗಬಹುದು ಮತ್ತು ಆಗಸ್ಟ್ ಮಧ್ಯದ ವೇಳೆ ಅಂತ್ಯವಾಗಬಹುದು ಎಂದು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕಾನ್ಪುರದ ಸಂಶೋಧಕರು ನಡೆಸಿದ ಅಧ್ಯಯನ ಮಾದರಿಯಲ್ಲಿ ಸೂಚಿಸಲಾಗಿದೆ.

    ಕೊರೊನಾ ನಾಲ್ಕನೇ ಅಲೆಯೂ ಸರಿಸುಮಾರು ನಾಲ್ಕು ತಿಂಗಳುಗಳವರೆಗೆ ಇರುತ್ತದೆ ಮತ್ತು ಮೊದಲ ಮತ್ತು ಎರಡನೇ ವ್ಯಾಕ್ಸಿನ್ ಡೋಸ್‍ಗಳನ್ನು ಸ್ವೀಕರಿಸಿದ್ದರು ಸಹ ಕೊರೊನಾ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಐಐಟಿ ಕಾನ್ಪುರದ ಹಿರಿಯ ಸಂಶೋಧಕರು ಹೇಳಿದ್ದಾರೆ. ಐಐಟಿ ಕಾನ್ಪುರದ ಗಣಿತ ವಿಭಾಗದ ಸಬರ ಪರ್ಷದ್ ರಾಜೇಶ್‍ಭಾಯ್, ಸುಭ್ರಾ ಶಂಕರ್ ಧರ್ ಮತ್ತು ಶಲಭ್ ಈ ಅಧ್ಯಯನದ ನೇತೃತ್ವ ವಹಿಸಿದ್ದರು. ಇದನ್ನೂ ಓದಿ: ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ: ವೊಲೊಡಿಮಿರ್ ಝೆಲೆನ್ಸ್ಕಿ

    ಇತ್ತೀಚೆಗಷ್ಟೇ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಸಲಾದ ಮತ್ತೊಂದು ಅಧ್ಯಯನದಲ್ಲಿ ಮುಂದೆ ಕೋವಿಡ್ ರೂಪಾಂತರಿ ವೈರಸ್ ಎರಡು ವಿಭಿನ್ನ ರೀತಿಯಲ್ಲಿ ಹೊರಹೊಮ್ಮಬಹುದು ಎಂದು ತಿಳಿಸಿದೆ ಮತ್ತು ಹೊಸ ರೂಪಾಂತರವು ಹಿಂದೆ ಇದ್ದ ವೈರಸ್‍ಗಳಿಗಿಂತ ಕಡಿಮೆ ತೀವ್ರತೆಯದಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದರು. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ