Tag: ಕೊರೊನಾ ವ್ಯಾಕ್ಸಿನ್

  • ನಾಳೆಯಿಂದ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ವ್ಯಾಕ್ಸಿನ್

    ನಾಳೆಯಿಂದ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ವ್ಯಾಕ್ಸಿನ್

    ಬೆಳಗಾವಿ: ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್-19ರ ಲಸಿಕಾಕರಣದ ಕಾರ್ಯಕ್ರಮದಡಿ ಕಾರ್ಬಿವ್ಯಾಕ್ಸ್ ಲಸಿಕಾ ಅಭಿಯಾನ ಮಾಡಲಾಗುತ್ತಿದೆ.

    ನಗರದ ಬೀಮ್ಸ್ ಮಹಾವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮವನ್ನು ನಗರದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಉದ್ಘಾಟನೆ ಮಾಡಿ, ನೇರವೇರಿಸಲಿದ್ದಾರೆ. ಈ ವೇಳೆ 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕಾಕರಣ ಕಾರ್ಯಕ್ರಮದಡಿ ನಡೆಯುವ ಕಾರ್ಬಿವ್ಯಾಕ್ಸ್ ಲಸಿಕಾ ಅಭಿಯಾನ ಹಾಗೂ 60 ವಯಸ್ಸಿನ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕ ಕ್ರಮವಾಗಿ ಲಸಿಕಾ ಅಭಿಯಾನ ನಡೆಯುತ್ತಿದೆ. ಇದನ್ನೂ ಓದಿ: ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು, ಆದರೆ…: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ

    ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಶಶಿಕಾಂತ ಮುನ್ಯಾಳ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಧಿಕಾರಿ ಡಾ. ಈಶ್ವರ ಗಡದ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಆಯ್ದ 20 ಮಕ್ಕಳಿಗೆ ಲಸಿಕೆಯನ್ನು ನೀಡಲಾಗುತ್ತದೆ. ಉಳಿದ ಎಲ್ಲಾ ಮಕ್ಕಳಿಗೆ ಅವರ ಶಾಲೆಗಳು ಹಾಗೂ ನಗರ ಮತ್ತು ಗ್ರಾಮದಲ್ಲಿ ಲಸಿಕಾ ಕೇಂದ್ರಗಳಲ್ಲಿ ನೀಡಲಾಗುವದು ಎಂದು ತಿಳಿಸಿದ್ದಾರೆ.

  • ಲಸಿಕೆ ಬಗ್ಗೆ ಮುಂದುವರಿದ ಮೌಢ್ಯತೆ – ಅಧಿಕಾರಿಗಳಿಗೆ ಕುಂಟು ನೆಪ ಹೇಳಿ ಎಸ್ಕೇಪ್

    ಲಸಿಕೆ ಬಗ್ಗೆ ಮುಂದುವರಿದ ಮೌಢ್ಯತೆ – ಅಧಿಕಾರಿಗಳಿಗೆ ಕುಂಟು ನೆಪ ಹೇಳಿ ಎಸ್ಕೇಪ್

    – ಚಪ್ಪಲಿ ಕೈಯಲ್ಲಿಡಿದು ಕೆಸರು ಗದ್ದೆಯಲ್ಲೇ ಓಡಿದ ಯುವಕ

    ಯಾದಗಿರಿ: ಕೊರೊನಾ ಲಸಿಕೆ ಬಗ್ಗೆ ಇರುವ ಮೌಢ್ಯತೆ ಮುಂದುವರಿದಿದ್ದು, ಇದಕ್ಕೆ ಪೂರ ಎಂಬಂತೆ ಯಾದಗಿರಿಯಲ್ಲಿ ಜನ ಅಧಿಕಾರಿಗಳ ಮುಂದೆ ಕುಂಟು ನೆಪ ಹೇಳಿ ಎಸ್ಕೇಪ್ ಆದ ಪ್ರಸಂಗ ಇಂದು ನಡೆದಿದೆ.

    ಹೌದು. ಜಿಲ್ಲೆಯ ಜನರಿಗೆ ಕೋವಿಡ್ ಲಸಿಕೆ ಹಾಕಲು ಜಿಲ್ಲಾಡಳಿತದ ಹರಸಹಾಸ ಮತ್ತೆ ಮುಂದುವರಿದಿದೆ. ವ್ಯಾಕ್ಸಿನ್ ಹಾಕಲು ಬಂದ ಅಧಿಕಾರಿಗಳನ್ನ ನೋಡಿ ಎತ್ತಿನ ಬಂಡಿ ಇಳಿದು ಯುವಕ ಓಡಿದ ಘಟನೆ ಸೇರಿದಂತೆ, ಅಧಿಕಾರಿಗಳ ಮತ್ತು ಆರೋಗ್ಯ ಸಿಬ್ಬಂದಿ ನಡುವೆ ಗ್ರಾಮೀಣ ಭಾಗದ ಜನ ಮಾತಿನ ಚಕಮಕಿ ನಡೆಸಿದ್ದಾರೆ.

    ಲಸಿಕೆ ಹಾಕಲು ಬಂದ ಅಧಿಕಾರಿಗಳನ್ನು ನೋಡಿ ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಕೆಸರು ಗದ್ದೆಯಲ್ಲೇ ಯುವಕನೋರ್ವ ಓಡಿದ್ದಾನೆ. ಅಲ್ಲದೆ ಬೇರೆ ಟ್ಯಾಬ್ಲೇಟ್ ತಗೊಂಡಿದ್ದೀನಿ, ನಾನು ಎಣ್ಣೆ ಹೊಡಿಯೋಕೆ ಹೋಗಬೇಕು. ನಾಳೆ ಬಂದು ವ್ಯಾಕ್ಸಿನ್ ತಗೊತೀನಿ ಅಂತ ನಾನಾ ಕಾರಣಗಳನ್ನು ಜನ ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ಇದನ್ನೂ ಓದಿ: ಮೈಸೂರಲ್ಲಿ ಮತ್ತೊಂದು ಅಮಾನವೀಯ ಘಟನೆ- ತಿಂಡಿ ಆಸೆ ತೋರಿಸಿ 12ರ ಬಾಲೆ ಮೇಲೆ ಲೈಂಗಿಕ ದೌರ್ಜನ್ಯ

    ಯಾದಗಿರಿ ತಾಲೂಕಿನ ಹೆಡಗಿಮುದ್ರಾ ಗ್ರಾಮದಲ್ಲಿನ ಜನ ಕೋವಿಡ್ ವ್ಯಾಕ್ಸಿನ್ ಕಂಡು ಮಾರುದ್ದ ಓಡುತ್ತಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳೆ ಖುದ್ದಾಗಿ ಮನೆ ಮನೆಗೆ ಹೋಗಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಹೀಗಿದ್ದರೂ ಸಹ ಜನ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಬದಲಾಗಿ ಅಧಿಕಾರಿಗಳೊಂದಿಗೆ ವಾದ ಮಾಡುತ್ತಿದ್ದಾರೆ. ಜನರ ಈ ವರ್ತನೆಯಿಂದ ಜಿಲ್ಲಾಡಳಿತ ಕಂಗಾಲಾಗಿದೆ.

  • ಜನವರಿ ವೇಳೆಗೆ ಮಕ್ಕಳ ಲಸಿಕೆ ಲಭ್ಯವಾಗಬಹುದು: ಆದಾರ್ ಪೂನಾವಾಲಾ

    ಜನವರಿ ವೇಳೆಗೆ ಮಕ್ಕಳ ಲಸಿಕೆ ಲಭ್ಯವಾಗಬಹುದು: ಆದಾರ್ ಪೂನಾವಾಲಾ

    ನವದೆಹಲಿ: ಮಕ್ಕಳ ಮೇಲೆ ನಡೆಯುತ್ತಿರುವ ಕೊವೊವ್ಯಾಕ್ಸ್ ಲಸಿಕೆ ಪ್ರಯೋಗ ಸುಗಮವಾಗಿದ್ದು, ಅಂದುಕೊಂಡಂತೆ ಆದರೆ ಜನವರಿ ಅಥಾವ ಫೆಬ್ರವರಿಯಲ್ಲಿ ಬಳಕೆಗೆ ಮುಕ್ತವಾಗಬಹುದು ಎಂದು ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲಾ ತಿಳಿಸಿದ್ದಾರೆ.

    ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತದಲ್ಲಿ ವ್ಯಾಕ್ಸಿನ್ ಪ್ರಯೋಗ ಹಂತದಲ್ಲಿದ್ದು, ಬಹಳಷ್ಟು ಸ್ವಯಂ ಸೇವಕರಿಗೆ ನೀಡಲಾಗಿದೆ. ಅದನ್ನು ವಿಮರ್ಶೆ ಮಾಡಲಾಗುತ್ತಿದೆ. ಡಿಸೆಂಬರ್ ವೇಳೆಗೆ ವ್ಯಾಕ್ಸಿನ್ ಪರಿಣಾಮಗಳ ಬಗ್ಗೆ ನಡೆಯುತ್ತಿರುವ ಪರಾಮರ್ಶೆ ಅಂತ್ಯವಾಗಲಿದ್ದು, ಬಳಿಕ ಸಾರ್ವಜನಿಕ ಬಳಕೆಗೆ ಮುಕ್ತ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಸ ಶಿಕ್ಷಣ ನೀತಿಯಲ್ಲಿ ಕಾಂಬಿನೇಶನ್‍ನಿಂದ ಕೋರ್ಸ್, ಸಬ್ಜೆಕ್ಟ್‌ಗೆ ಬದಲಾಯಿಸಲಾಗಿದೆ: ಅಶ್ವಥ್ ನಾರಾಯಣ್

    3-4 ತಿಂಗಳ ಅವಧಿಯಲ್ಲಿ ವ್ಯಾಕ್ಸಿನ್ ಪ್ರತಿಕ್ರಿಯೆಯನ್ನು ಅಧ್ಯಯನ ಮಾಡಲಾಗುತ್ತಿದೆ. ವ್ಯಾಕ್ಸಿನ್ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ನಡೆದಿದ್ದು, ಹಂತ ಹಂತವಾಗಿ ಈ ಬಗ್ಗೆ ವರದಿಗಳು ಬರಲಿದೆ ಎಂದು ಪೂನಾವಾಲಾ ಹೇಳಿದರು.

    ಅಮೇರಿಕದ ಲಸಿಕೆ ತಯಾರಕ ಸಂಸ್ಥೆ ನೊವೊವಾಕ್ಸ್ ಇಂಕ್ ಮಕ್ಕಳಿಗಾಗಿ ಓಗಿಘಿ-ಅoಗಿ2373 ಹೆಸರಿನ ಲಸಿಕೆ ಅಭಿವೃದ್ಧಿ ಪಡಿಸಿದೆ. ಇದು ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ, ಪ್ರಯೋಗಗಳನ್ನು ನಡೆಸಲಾಗುತ್ತಿದೆ. 2 ರಿಂದ 17 ವರ್ಷದ ಮಕ್ಕಳ ಮೇಲೆ ಪ್ರಯೋಗ ನಡೆಯುತ್ತಿದ್ದು, ದೇಶದ ಹತ್ತು ಪ್ರದೇಶಗಳಲ್ಲಿ 910 ಸ್ವಯಂ ಸೇವಕರು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.

  • ಬೆಂಗಳೂರು ಗ್ರಾಮಾಂತರದಲ್ಲಿ ವ್ಯಾಕ್ಸಿನ್ ಸಮಸ್ಯೆ ಇಲ್ಲ: ಎಂಟಿಬಿ

    ಬೆಂಗಳೂರು ಗ್ರಾಮಾಂತರದಲ್ಲಿ ವ್ಯಾಕ್ಸಿನ್ ಸಮಸ್ಯೆ ಇಲ್ಲ: ಎಂಟಿಬಿ

    ನೆಲಮಂಗಲ(ಬೆಂಗಳೂರು): ಕೊರೊನಾ ಮೂರನೇ ಅಲೆಯ ನಡುವೆ ದಿನೇದಿನೇ ವ್ಯಾಕ್ಸಿನ್ ಸಮಸ್ಯೆ ಉಲ್ಬಣಗೊಂಡು ಜನರು ಸರತಿ ಸಾಲಿನಲ್ಲಿ ನಿಂತು ಕೊನೆಗೆ ವ್ಯಾಕ್ಸಿನ್ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.  ಆದರೆ ಸಚಿವ ಎಂಟಿಬಿ ನಾಗರಾಜ್ ಅವರು ಮಾತ್ರ ಬೆಂಗಳೂರು ಗ್ರಾಮಾಂತರದಲ್ಲಿ ವ್ಯಾಕ್ಸಿನ್ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಚಿವ ಎಂಟಿಬಿ ನಾಗರಾಜು ಇಂದು ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಜನಾರ್ಶೀವಾದ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ನೆಲಮಂಗಲ ನಗರದ ವ್ಯಾಕ್ಸಿನ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವ್ಯಾಕ್ಸಿನ್ ಸಮಸ್ಯೆ ಇಲ್ಲವೇ ಇಲ್ಲ ಎಂದಿದ್ದಾರೆ. ಇತ್ತ ನಮ್ಮ ಜಿಲ್ಲೆಯಲ್ಲಿ ಸಮರ್ಪಕವಾಗಿ ವ್ಯಾಕ್ಸಿನ್ ಸರಬರಾಜು ಹಾಗುತ್ತಿದೆ ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.58 ವ್ಯಾಕ್ಸಿನ್ ಪೂರ್ಣಗೊಂಡಿದೆ. ಒಂದು ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್ ಬರುತ್ತಿದೆ. ಪ್ರತಿನಿತ್ಯ ಜನರು ಪರದಾಡುತ್ತಿಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನವರಿಗೆ ಬಾರ್ ಗೊತ್ತಿಲ್ವಾ? ಯಾರೂ ಹೋಗೋದೇ ಇಲ್ವಾ- ಬಿಸಿ ಪಾಟೀಲ್ ಪ್ರಶ್ನೆ

    ಇತ್ತ ಪ್ರತಿನಿತ್ಯ ಜನರು ಮೊದಲನೇ ಹಾಗೂ ಎರಡನೇ ಲಸಿಕೆ ಪಡೆಯಲು ವ್ಯಾಕ್ಸಿನ್ ಕೇಂದ್ರದ ಮುಂದೆ ಪರದಾಡಿ ವೈದ್ಯರು ಹಾಗೂ ಪೊಲೀಸರ ಜೊತೆಗೆ ಗಲಾಟೆ ಮಾಡುವ ದೃಶ್ಯಗಳನ್ನ ಸಚಿವರಿಗೆ ಅರಿವಿಲ್ಲವೇ ಎಂಬ ಪ್ರಶ್ನೆ ಮೂಡಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತೀ ಕಡಿಮೆ ವ್ಯಾಕ್ಸಿನ್ ನೆಲಮಂಗಲ ತಾಲೂಕಿಗೆ ಸರಬರಾಜು ಹಾಗಿದ್ದು ಅಧಿಕಾರಿಗಳ ಸಹ ಸರಿಯಾದ ಮಾಹಿತಿಯನ್ನ ಸಚಿವರಿಗೆ ನೀಡಿಲ್ವ ಎಂಬುದು ಸಾಬೀತಾಗಿದೆ. ನಂತರ ಕೂಡಲೇ ಸಮರ್ಪಕವಾಗಿ ಲಸಿಕೆ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: 83 ತಾಲೂಕುಗಳು ಪ್ರವಾಹಪೀಡಿತ ಎಂದು ಘೋಷಣೆ: ಆರ್.ಅಶೋಕ್

  • ಕೊರೊನಾ ಮೂರನೇ ಅಲೆ ಆತಂಕದ ನಡುವೆ ನೆಲಮಂಗಲದಲ್ಲಿ ವ್ಯಾಕ್ಸಿನ್ ಕೊರತೆ

    ಕೊರೊನಾ ಮೂರನೇ ಅಲೆ ಆತಂಕದ ನಡುವೆ ನೆಲಮಂಗಲದಲ್ಲಿ ವ್ಯಾಕ್ಸಿನ್ ಕೊರತೆ

    ನೆಲಮಂಗಲ(ಬೆಂಗಳೂರು): ಕೊರೊನಾ ಮೂರನೇ ಅಲೆಯ ಆತಂಕದ ನಡುವೆ ವ್ಯಾಕ್ಸಿನ್ ಗಾಗಿ ಹಾಹಾಕಾರ ಶುರುವಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯ ಮುಂದಿನ ಸರ್ಕಾರಿ ಶಾಲೆಯಲ್ಲಿನ ವ್ಯಾಕ್ಸಿನ್ ಕೇಂದ್ರದ ಮುಂದೆ ಹಾಹಾಕಾರ ಶುರುವಾಗಿದ್ದು, ಲಸಿಕೆ ಸಿಗದೆ ಜನರು ಪರದಾಡುವಂತಾಗಿದೆ.

    ಇಂದು ಮೊದಲ ಡೋಸ್ ವ್ಯಾಕ್ಸಿನ್ ಪಡೆಯುವವರಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗುತ್ತದೆ. ನಾಳೆ ವ್ಯಾಕ್ಸಿನ್ ಲಭ್ಯವಿಲ್ಲ ಎಂಬ ನಾಮಫಲಕ ಹಾಕಿದ ಅಧಿಕಾರಿಗಳು, ಕೋವಿಶೀಲ್ಡ್ ಮಾತ್ರ ಲಭ್ಯವಿರುವುದಾಗಿ ತಿಳಿಸಿದ್ದಾರೆ. ವ್ಯಾಕ್ಸಿನ್ ಬಂದ ಕೂಡಲೇ ಜನರು ಓಡೋಡಿ ಬಂದು ವ್ಯಾಕ್ಸಿನ್ ಕೇಂದ್ರದ ಮುಂದೆ ನೂಕುನುಗ್ಗಲು ಉಂಟಾಗಿದ್ದು, ಜನಸಾಮಾನ್ಯರು ವ್ಯಾಕ್ಸಿನ್ ಸಮರ್ಪಕವಾಗಿ ಪೂರೈಕೆ ಆಗದ ಹಿನ್ನೆಲೆಯಲ್ಲಿ ಪರದಾಡುವಂತಾಗಿದೆ. ಇದನ್ನೂ ಓದಿ: ನಿನ್ನೆ ಬಿಎಸ್‍ವೈ, ಇಂದು ಡಿಕೆಶಿ – ದೇಗುಲಗಳಲ್ಲಿ ರಾಜಕಾರಣಿಗಳಿಗಿಲ್ವಾ ಕೊರೊನಾ ರೂಲ್ಸ್?

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತೀ ಕಡಿಮೆ ವ್ಯಾಕ್ಸಿನ್ ನೆಲಮಂಗಲ ತಾಲೂಕಿಗೆ ಪೂರೈಕೆಯಾಗುತ್ತಿದೆ. ಹೀಗಾಗಿ ಕೂಡಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಸಮರ್ಪಕವಾಗಿ ವ್ಯಾಕ್ಸಿನ್ ಪೂರೈಕೆ ಮಾಡುವಂತೆ ಜನರು ಆಗ್ರಹಿಸಿದ್ದಾರೆ.

  • ಮಕ್ಕಳ ಮೊದಲ ಲಸಿಕೆಗೆ ಕೇಂದ್ರ ಗ್ರೀನ್ ಸಿಗ್ನಲ್?

    ಮಕ್ಕಳ ಮೊದಲ ಲಸಿಕೆಗೆ ಕೇಂದ್ರ ಗ್ರೀನ್ ಸಿಗ್ನಲ್?

    ಬೆಂಗಳೂರು: 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಈ ವಾರ ಸಮ್ಮತಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಅಹಮದಾಬಾದ್ ನ ಜೈಡಸ್ ಕ್ಯಾಡಿಲಾ ಕಂಪನಿಯ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ. 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ದೊರೆತರೆ ದೇಶದಲ್ಲಿ ಮಕ್ಕಳಿಗೆ ಮೊದಲ ಸಲ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಲಿದೆ.

    ಜೈಡಸ್ ಕ್ಯಾಡಿಲಾ ಕಂಪನಿಯು ಜೈಕೋವ್ ಡಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೋರಿ ಜುಲೈ 1 ರಂದು ಅರ್ಜಿ ಸಲ್ಲಿಸಲಾಗಿದೆ. ಇಂಜೆಕ್ಷನ್ ಬಳಕೆ ಮಾಡದೆ ಚರ್ಮದ ಮೂಲಕ ದೇಹದ ಒಳಗೆ ಲಸಿಕೆ ಸೇರಿಸುವುದು ಈ ಲಸಿಕೆಯ ವಿಶೇಷತೆಯಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಾರತದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ

  • ಮಳೆಯಲ್ಲೇ ವ್ಯಾಕ್ಸಿನ್‍ಗಾಗಿ ಕ್ಯೂ ನಿಂತ ಜನ – ಸರ್ಕಾರದ ವ್ಯವಸ್ಥೆಗೆ ಹಿಡಿಶಾಪ

    ಮಳೆಯಲ್ಲೇ ವ್ಯಾಕ್ಸಿನ್‍ಗಾಗಿ ಕ್ಯೂ ನಿಂತ ಜನ – ಸರ್ಕಾರದ ವ್ಯವಸ್ಥೆಗೆ ಹಿಡಿಶಾಪ

    ಬೆಂಗಳೂರು: ಕೊರೋನಾವನ್ನು ಮುಕ್ತ ಮಾಡಲು ಇರೋ ಮಾರ್ಗ ವ್ಯಾಕ್ಸಿನ್. ವ್ಯಾಕ್ಸಿನ್ ಪಡೆಯಲು ಮೊದಮೊದಲು ಜನ ಹಿಂಜರಿಕೆ ತೋರುತ್ತಿದ್ದರು. ಆದರೆ ಎರಡನೇ ಅಲೆ ಬಂದ್ಮೇಲೆ ವ್ಯಾಕ್ಸಿನ್ ಪಡೆಯೋದು ಎಷ್ಟು ಮುಖ್ಯ.

    ವ್ಯಾಕ್ಸಿನ್ ಹೇಗೆ ಕೊರೋನಾ ವೈರಸ್ ಗೆ ಮಾರಕವಾಗಿದೆ ಅಂತಾ ಜನ ತಿಳಿದುಕೊಂಡಿದ್ದಾರೆ. ಹಾಗಾಗಿ ವ್ಯಾಕ್ಸಿನ್ ಪಡೆಯಲು ಜನ ಮಳೆಯನ್ನೂ ಲೆಕ್ಕಿಸದೇ ಕ್ಯೂ ನಿಂತಿದ್ದಾರೆ. ಬೆಳಗ್ಗೆ 9 ಗಂಟೆಯ ಬಳಿಕ ವ್ಯಾಕ್ಸಿನ್ ಹಾಕುವ ಕಾರ್ಯ ಶುರುವಾಗುತ್ತೆ. ಆದರೆ ವ್ಯಾಕ್ಸಿನ್ ಪಡೆಯಲು ಜನ ಬೆಳಗ್ಗಿನ ಜಾವ 5 ಗಂಟೆಯಿಂದಲೇ ಮಲ್ಲೇಶ್ವರಂನ ವ್ಯಾಕ್ಸಿನ್ ಸೆಂಟರ್ ಮುಂದೆ ಬಂದಿದ್ದಾರೆ.

    ಮೊನ್ನೆಯಿಂದಲೂ ಬೆಂಗಳೂರಿನಲ್ಲಿ ಮಳೆ ಆಗ್ತಿದೆ. ಇಂದು ಸಹ ತುಂತುರು ಮಳೆಯಾಗ್ತಿದೆ. ಮಳೆ ಬಂದ್ರೂ ಪರವಾಗಿಲ್ಲ ವ್ಯಾಕ್ಸಿನ್ ಪಡೆಯಲೇ ಬೇಕು ಅಂತಾ ಜನ ಮಳೆಯನ್ನೂ ಲೆಕ್ಕಿಸದೇ ಕ್ಯೂ ನಿಂತಿದ್ದಾರೆ. ಮಳೆ ಬರ್ತಿದೆ, ವ್ಯಾಕ್ಸಿನ್ ಕೊಡೋದನ್ನ ಬೇಗ ಶುರು ಮಾಡಿದ್ರೆ ಒಳ್ಳೆಯದು, ಸರ್ಕಾರ ವ್ಯಾಕ್ಸಿನ್ ಕೊಡದಕ್ಕೆ ಒಂದು ವರ್ಷ ಮಾಡೋ ಆಗೆ ಕಾಣ್ತಿದೆ. ಸರಿಯಾದ ವ್ಯವಸ್ಥೆ ಮಾಡಿ ಬೇಗ ಬೇಗವಾಗಿ ವ್ಯಾಕ್ಸಿನ್ ಕೊಟ್ರೆ ಉತ್ತಮ, ಸರ್ಕಾರದವರು ಆರಾಮವಾಗಿ ಮನೆಯಲ್ಲಿ ಇದ್ದಾರೆ.

    ನಾವೂ ವ್ಯಾಕ್ಸಿನ್ಗಾಗಿ ಹೀಗೆ ಮಳೆಯಲ್ಲಿ ನೆನೆಯಬೇಕಾಗಿದೆ. ಕೊನೆ ಪಕ್ಷ ವ್ಯಾಕ್ಸಿನ್ ಸೆಂಟರ್ ಒಳಕ್ಕಾದ್ರೂ ಬಿಡಬೇಕು, ಅದು ಸಹ ಮಾಡೋಲ್ಲ, ಸರ್ಕಾರ ಇದಕ್ಕೆಲ್ಲ ಸರಿಯಾದ ವ್ಯವಸ್ಥೆ ಮಾಡಿದ್ರೆ ಉತ್ತಮ ಅಂತಾ ಜನ ಮಳೆಯಲ್ಲೇ ನಿಂತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಚಳಿ ಗಾಳಿ ಲೆಕ್ಕಿಸದೇ ಬೆಳಂಬೆಳಗ್ಗೆಯೇ ವ್ಯಾಕ್ಸಿನ್‍ಗಾಗಿ ಕ್ಯೂ ನಿಂತ ಜನ

    ಚಳಿ ಗಾಳಿ ಲೆಕ್ಕಿಸದೇ ಬೆಳಂಬೆಳಗ್ಗೆಯೇ ವ್ಯಾಕ್ಸಿನ್‍ಗಾಗಿ ಕ್ಯೂ ನಿಂತ ಜನ

    ಬೆಂಗಳೂರು: ಕೊರೋನಾ ವೈರಸ್ ನಿಂದ ಬಚಾವ್ ಆಗಬೇಕಾದ್ರೇ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಎಷ್ಟು ಮುಖ್ಯವೋ ವ್ಯಾಕ್ಸಿನ್ ಕೂಡ ಅಷ್ಟೇ ಮುಖ್ಯ. ವ್ಯಾಕ್ಸಿನ್ ಪಡೆದವರ ಮೇಲೆ ಕೊರೋನಾ ಪ್ರಭಾವ ಕಡಿಮೆ, ಹಾಗಾಗಿ ವ್ಯಾಕ್ಸಿನ್ ಪಡೆಯಲು ಜನ ಚಳಿ, ಗಾಳಿ, ಮಳೆಯನ್ನ ಲೆಕ್ಕಿಸದೇ ಬೆಳ್ಳಂಬೆಳಗ್ಗೆಯೇ ಬಂದು ಕ್ಯೂ ನಲ್ಲಿ ನಿಲ್ಲುತ್ತಿದ್ದಾರೆ.

    ಬೆಂಗಳೂರಿನ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯ ಆವರಣದ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರೋ ವ್ಯಾಕ್ಸಿನ್ ಡ್ರೈವ್ ಗೆ ಬೆಳಗ್ಗೆ 6 ಗಂಟೆಗೇ ಜನ ಸೇರಿದ್ದಾರೆ. 9 ಗಂಟೆಯ ನಂತರ ಶುರುವಾಗೋ ವ್ಯಾಕ್ಸಿನ್ ಡ್ರೈವ್ ಗಾಗಿ ಜನ ಬೆಳ್ಳಂಬೆಳಗ್ಗೆಯೇ ಬಂದು ಸರತಿಸಾಲಿನಲ್ಲಿ ನಿಂತಿದ್ದಾರೆ.  ಇದನ್ನೂ ಓದಿ: ಸ್ವಾಭಿಮಾನಿ ಪಕ್ಷ ಸ್ಥಾಪಿಸ್ತಾರಾ ಸಂಸದೆ ಸುಮಲತಾ ಅಂಬರೀಶ್..?

    ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದರೂ ಚಳಿ ಗಾಳಿಯನ್ನು ಸಹ ಲೆಕ್ಕಿಸದೇ ವ್ಯಾಕ್ಸಿನ್ ಸಿಕ್ಕಿದ್ರೇ ಸಾಕು ಅಂತಾ ಕ್ಯೂ ನಲ್ಲಿ ನಿಂತಿದ್ದಾರೆ. ಆದರೆ ವ್ಯಾಕ್ಸಿನ್ ಪಡೆಯೋ ಉತ್ಸಾಹದಲ್ಲಿ ಜನ ಸಾಮಾಜಿಕ ಅಂತರವನ್ನ ಸಂಪೂರ್ಣವಾಗಿ ಮರೆತಿದ್ದಾರೆ. ಇದನ್ನೂ ಓದಿ: ಪಕ್ಷೇತರರಾಗಿ ಅಖಾಡಕ್ಕಿಳೀತಾರಾ ಜಿಟಿಡಿ..?

  • ಕಾರವಾರದಲ್ಲಿ ವ್ಯಾಕ್ಸಿನ್ ಖಾಲಿ – ಬಾಗಿಲು ತಳ್ಳಿ ಲಸಿಕಾ ಕೇಂದ್ರಕ್ಕೆ ನುಗ್ಗಿದ ಜನ

    ಕಾರವಾರದಲ್ಲಿ ವ್ಯಾಕ್ಸಿನ್ ಖಾಲಿ – ಬಾಗಿಲು ತಳ್ಳಿ ಲಸಿಕಾ ಕೇಂದ್ರಕ್ಕೆ ನುಗ್ಗಿದ ಜನ

    ಕಾರವಾರ: ರಾಜ್ಯಾದ್ಯಂತ ಕೊರೊನಾ ಲಸಿಕೆಯ ಅಭಾವ ಮಿತಿಮೀರಿದ್ದು ಗಡಿ ಜಿಲ್ಲೆ ಉತ್ತರ ಕನ್ನಡವನ್ನೂ ಬಿಟ್ಟಿಲ್ಲ. 15 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಇದುವರೆಗೆ 3,81000 ಜನ ಮೊದಲ ಹಂತದ ಲಸಿಕೆ ಪಡೆದಿದ್ದಾರೆ. 77000 ಜನ ಎರಡನೇ ಹಂತದ ಲಸಿಕೆ ಸಹ ನೀಡಲಾಗಿದೆ. ಆದರೆ ಇದೀಗ ರಾಜ್ಯ ಹಾಗೂ ಕೇಂದ್ರದಿಂದ ಬರಬೇಕಾದ ಪ್ರಮಾಣದಲ್ಲಿ ಲಸಿಕೆ ಬರುತ್ತಿಲ್ಲ.

    ಕಳೆದ ಮೂರು ದಿನದಿಂದ ಜಿಲ್ಲೆಯಲ್ಲಿ ಲಸಿಕೆ ಅಭಾವ ಸಹ ಆಗಿದ್ದು, ಜಿಲ್ಲಾಡಳಿತದಿಂದ ನಿಗದಿ ಮಾಡಿದವರನ್ನು ಹೊರತುಪಡಿಸಿ ಉಳಿದವರಗೆ ನೀಡುತ್ತಿಲ್ಲ. ಆದರೆ ನಿಗದಿ ಮಾಡಿದ ಜನರಿಗೂ ಇದೀಗ ಲಸಿಕೆ ಅಭಾವದ ಬಿಸಿ ತಟ್ಟಿದ್ದು ಇಂದು ಕಾರವಾರದಲ್ಲಿ ವ್ಯಾಕ್ಸಿನ್ ಖಾಲಿಯಾಗಿ ಜನ ವ್ಯಾಕ್ಸಿನ್ ಗಾಗಿ ತಳ್ಳಾಟ ನೂಕಾಟ ನಡೆಸಿದರು.

    ಇಂದು ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ನೀಡುತಿದ್ದು, ಹೆಚ್ಚಿನ ಜನ ವ್ಯಾಕ್ಸಿನ್ ತೆಗೆದುಕೊಳ್ಳಲು ಆಗಮಿಸಿದ್ದರು. ಆದರೆ ಲಸಿಕಾ ಕೇಂದ್ರದಲ್ಲಿ 150 ಡೋಸ್ ಮಾತ್ರ ಇದ್ದು ಐನೂರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಇದರಿಂದಾಗಿ ನೂಕು ನುಗ್ಗಾಟ ನಡೆದಿದ್ದು ಜನ ಲಸಿಕಾ ಕೇಂದ್ರದಲ್ಲಿ ಬಾಗಿಲು ಮುರಿದು ಒಳಬರಲು ಪ್ರಯತ್ನಿಸಿದರು. ಇದನ್ನೂ ಓದಿ: ಸೋಮವಾರದಿಂದ ದೇವಾಲಯಕ್ಕೆ ಭಕ್ತರಿಗೆ ಅವಕಾಶ ಸಾಧ್ಯತೆ – ದೇವಾಲಯದ ಶುದ್ಧಿ ಕಾರ್ಯ

    ಈ ವೇಳೆ ಪೊಲೀಸರು ಜನರನ್ನು ನಿಯಂತ್ರಿಸಿ ಸಮಾಧಾನಪಡಿಸಿ ಲಸಿಕೆಯ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟ ನಂತರ ಜನರು ಲಸಿಕಾ ಕೇಂದ್ರದಿಂದ ತೆರಳಿದರು. ಸದ್ಯ ಜಿಲ್ಲೆಗೆ ಬರಬೇಕಾದ ಲಸಿಕೆ ಕಳೆದ ಎರಡು ದಿನದಿಂದ ಜಿಲ್ಲೆಗೆ ಆಗಮಿಸಿಲ್ಲ. ಹೀಗಾಗಿ ಬಹುತೇಕ ಲಸಿಕಾ ಕೇಂದ್ರಗಳು ಮುಚ್ಚಿವೆ.

  • ಸರ್ಕಾರದ ಬಳಿ ಲಸಿಕೆ ದಾಸ್ತಾನು ಇಲ್ಲ, ಸುಳ್ಳು ಹೇಳ್ತಿದೆ: ಸಿದ್ದರಾಮಯ್ಯ

    ಸರ್ಕಾರದ ಬಳಿ ಲಸಿಕೆ ದಾಸ್ತಾನು ಇಲ್ಲ, ಸುಳ್ಳು ಹೇಳ್ತಿದೆ: ಸಿದ್ದರಾಮಯ್ಯ

    ದಾವಣಗೆರೆ: ಜನರನ್ನು ಕೋವಿಡ್ ನಿಂದ ಕಾಪಾಡಬೇಕು ಎಂದರೆ ಸರಿಯಾದ ಸಮಯಕ್ಕೆ ಲಸಿಕೆ ನೀಡಬೇಕು. ಆದರೆ ಸರ್ಕಾರದ ಬಳಿ ಲಸಿಕೆ ದಾಸ್ತಾನು ಇಲ್ಲ, ಸರಿಯಾಗಿ ಪೂರೈಕೆ ಮಾಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.

    ನಗರದ ದುರ್ಗಾಂಬಿಕ ದೇವಸ್ಥಾನ ಬಳಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಲಸಿಕೆ ನೀಡುತ್ತಿದ್ದು, ಲಸಿಕಾ ಕೆಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದರು. ಸರ್ಕಾರ ಮಾಡುವ ಕೆಲಸವನ್ನು ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಮಾಡುತ್ತಿದ್ದು, ಅರ್ಹ ಪ್ರತಿಯೊಬ್ಬರಿಗೂ ಲಸಿಕೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸಕಾಲಕ್ಕೆ ಲಸಿಕೆ ನೀಡದ ಕಾರಣ ಈ ಕೆಲಸವನ್ನು ಶಾಮನೂರು ಶಿವಶಂಕರಪ್ಪ ಮಾಡುತ್ತಿದ್ದಾರೆ. ಸರ್ಕಾರದ ಬಳಿ ವ್ಯಾಕ್ಸಿನ್ ಇಲ್ಲ, ದಾಸ್ತಾನು ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಮುಂದಿನ ಸಿಎಂ ಸಿದ್ದರಾಮಯ್ಯ
    ಜಿಲ್ಲೆಯ ಹರಿಹರ ಕ್ಷೇತ್ರದ ಶಾಸಕ ಎಸ್.ರಾಮಪ್ಪ ಅವರ ಪುತ್ರಿಯ ವಿವಾಹಕ್ಕೆ ಸಿದ್ದರಾಮಯ್ಯ ಆಗಮಿಸಿದ್ದು, ಈ ವೇಳೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕಾರ್ಯಕರ್ತರು ಕೂಗಿದ್ದಾರೆ.

    ಸಿದ್ದರಾಮಯ್ಯನವರು ಕಲ್ಯಾಣ ಮಂಟಪಕ್ಕೆ ಆಗಮಿಸುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಎಂದು ಕಾರ್ಯಕರ್ತರು ಕೂಗಿದರು. ಶಾಸಕ ರಾಮಪ್ಪ ಅವರ ಮಗಳ ಮದುವೆಯಲ್ಲಿ ಸಾಮಾಜಿಕ ಅಂತರ ಮಾಯ ಆಗಿದ್ದು, ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಘೋಷಣೆ ಕೂಗಿದರು. ಜನ ಗುಂಪು ಸೇರಿದರು. ಅಲ್ಲದೆ ಮದುವೆಗೆ ಕೇವಲ 40 ಜನರಿಗೆ ಮಾತ್ರ ಅವಕಾಶ ಇದೆ. ಆದರೆ ಶಾಸಕರ ಮಗಳ ಮದುವೆಯಲ್ಲಿ ಹೆಚ್ಚು ಜನ ಸೇರಿದ್ದರು. ಈ ಮೂಲಕ ಜನಪ್ರತಿನಿಧಿಗಳೇ ಕೋವಿಡ್ ನಿಯಮವನ್ನು ಗಾಳಿಗೆ ತೂರಿದ್ದಾರೆ.