Tag: ಕೊರೊನಾ ವೈರಸ್. ಕೋವಿಡ್ 19

  • ಕೆಲಸದಲ್ಲಿ ನಿರತರಾಗಿದ್ದ ಬಾಲ ಕಾರ್ಮಿಕರ ರಕ್ಷಣೆ – ಪೋಷಕರಿಂದ ಠಾಣೆ ಮುಂದೆ ಹೈಡ್ರಾಮ

    ಕೆಲಸದಲ್ಲಿ ನಿರತರಾಗಿದ್ದ ಬಾಲ ಕಾರ್ಮಿಕರ ರಕ್ಷಣೆ – ಪೋಷಕರಿಂದ ಠಾಣೆ ಮುಂದೆ ಹೈಡ್ರಾಮ

    ನೆಲಮಂಗಲ: ಮಹಾಮಾರಿ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಇನ್ನೂ ಶಾಲೆಗಳು ಓಪನ್ ಇಲ್ಲ ಈ ನಡುವೆ ಪುಟಾಣಿ ಮಕ್ಕಳು ಪೋಷಕರ ಜೊತೆಗೆ ಕೆಲಸದಲ್ಲಿ ನಿರತರಾಗಿದ್ದರು. ಇದನ್ನ ಗಮನಿಸಿದ ಗ್ಯಾರೇಜ್ ಹಾಗೂ ಅಂಗಡಿಗಳ ಮೇಲೆ ಜಿಲ್ಲಾ ಮಕ್ಕಳ ರಕ್ಷಣೆ ಘಟಕದ ಅಧಿಕಾರಿಗಳು ದಾಳಿ ನಡೆಸಿ ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಬಳಿ ದಾಳಿ ನಡೆಸಿದ ಅಧಿಕಾರಿಗಳಿಗೆ, ಮಕ್ಕಳ ಪೋಷಕರಿಂದ ಮುತ್ತಿಗೆ ಹಾಕಿ ಘೆರಾವ್ ಮಾಡಿದ ಪ್ರಸಂಗ ಕೂಡ ಜರುಗಿದೆ. ರಕ್ಷಣೆ ಮಾಡಿದ ಮಕ್ಕಳಿಗೆ ಅಧಿಕಾರಿಗಳು ಬೆಳಗ್ಗೆಯಿಂದ ತಿಂಡಿ ಊಟ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪೋಷಕರು, ನಮ್ಮ ಮಕ್ಕಳ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಗಲಾಟೆ ಮಾಡಿದ್ದಾರೆ.

    ಕೊರೊನಾ ಬಂದಾಗಿನಿಂದ ಶಾಲೆ ಇಲ್ಲ ಮಕ್ಕಳು ಪೋಲಿ ಬೀಳುತ್ತಾರೆ ನಮ್ಮ ಕೆಲಸದಲ್ಲಿ ಇದ್ದಾರೆ. ಅವರು ಯಾವ ಕೆಲಸದಲ್ಲಿ ನಿರತರಾಗಿಲ್ಲ, ಕೊರೊನಾ ಬಂದಾಗಿನಿಂದ ಅಂದಿನಿಂದ ಅಧಿಕಾರಿಗಳು ಏನ್ ಮಾಡ್ತಿದ್ರಿ ಎಂದು ಪೋಷಕರು ಪ್ರಶ್ನೆ ಮಾಡಿದಾಗ ತಬ್ಬಿಬ್ಬಾದ ಅಧಿಕಾರಿಗಳು ನಂತರ ನೆಲಮಂಗಲ ಟೌನ್ ಪೊಲೀಸರ ಮೊರೆ ಬಂದಿದ್ದಾರೆ. ಇದನ್ನೂ ಓದಿ: ಕೋಗಿಲೆ ಕಂಠದ ರಾನು ಮಂಡಲ್ ಜೀವನ ಆಧರಿಸಿ ಬರಲಿದೆ ಬಯೋಪಿಕ್

    ರಕ್ಷಣೆ ಮಾಡಿದ ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ಕರೆತಂದಾಗ ಗಲಾಟೆ ಜೋರಾಗಿ ನೆಲಮಂಗಲ ಟೌನ್ ಪೊಲೀಸರು ರಕ್ಷಣೆಗೆ ನಿಂತಾಗ, ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಮುಂದೆ ಹೈಡ್ರಾಮ ನಡೆಸಿ ನೆಲದಲ್ಲಿ ಬಿದ್ದು ಒದ್ದಾಡಿದ ಪೋಷಕರು ತಮ್ಮ ಅಳಲನ್ನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆದ್ದಾರಿ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಟೀಲ್ ಸೂಚನೆ

  • ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಇಲ್ಲ- ಆರೋಗ್ಯ ಇಲಾಖೆ ನಿರ್ಲಕ್ಷ್ಯ, ಕೊರೊನಾ ವಾರಿಯರ್ಸ್‌ಗೆ ಟೆನ್ಶನ್

    ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಇಲ್ಲ- ಆರೋಗ್ಯ ಇಲಾಖೆ ನಿರ್ಲಕ್ಷ್ಯ, ಕೊರೊನಾ ವಾರಿಯರ್ಸ್‌ಗೆ ಟೆನ್ಶನ್

    ಹಾವೇರಿ: ಕೊರೊನಾ ವಾರಿಯರ್ಸ್‍ಗಳಿಗೂ ಸೋಂಕು ತಗುಲಿದೆ. ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಷ್ಕಾಳಜಿ ತೋರುತ್ತಿದೆ. ಅದರಲ್ಲೂ ಈ ಜಿಲ್ಲೆಯಲ್ಲಿನ ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರ ತಪಾಸಣೆ ಮಾಡೋ ಸಿಬ್ಬಂದಿಯಂತೂ ಕಾಳಜಿಯನ್ನೆ ವಹಿಸ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

    ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಆಗಿರೋ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿದೆ. ಅದರಲ್ಲೂ ಹಾವೇರಿ ಜಿಲ್ಲೆಯಲ್ಲಿ ದೃಢಪಟ್ಟಿರೋ ಬಹುತೇಕ ಪ್ರಕರಣಗಳು ಸಾಂಸ್ಥಿಕ ಕ್ವಾರಂಟೈನ್ ಆಗಿದ್ದವರು. ಹೀಗಿದ್ದರೂ ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರ ತಪಾಸಣೆ ಮಾಡೋ ಸಿಬ್ಬಂದಿ ಬಗ್ಗೆಯಂತೂ ಆರೋಗ್ಯ ಇಲಾಖೆ ಕಾಳಜಿಯನ್ನೆ ವಹಿಸ್ತಿಲ್ಲ. ಇದರಿಂದ ಕೊರೋನಾ ವಾರಿಯರ್ಸ್‍ಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

    ಹಾವೇರಿ ಜಿಲ್ಲೆಯಲ್ಲಿ ಹೊರ ಜಿಲ್ಲೆಯಲ್ಲಿ ಹೊರ ರಾಜ್ಯಗಳಿಂದ ಬಂದವರನ್ನ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗ್ತಿದೆ. ಬಹುತೇಕ ಸರ್ಕಾರಿ ಹಾಸ್ಟೇಲ್‍ಗಳನ್ನ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಜಿಲ್ಲೆಯಲ್ಲಿ ದೃಢಪಟ್ಟಿರೋ 44 ಪ್ರಕರಣಗಳ ಪೈಕಿ ಕೆಲ ಪ್ರಕರಣಗಳನ್ನ ಹೊರತುಪಡಿಸಿದರೆ ಬಹುತೇಕ ಸಾಂಸ್ಥಿಕ ಕ್ವಾರಂಟೈನ್ ಆಗಿದ್ದವರಲ್ಲಿ ದೃಢಪಟ್ಟಿರೋ ಪ್ರಕರಣಗಳು. ಹೀಗಿದ್ದರೂ ಕ್ವಾರಂಟೈನ್‍ನಲ್ಲಿರುವ ಸಿಬ್ಬಂದಿ ಹ್ಯಾಂಡ್ ಗ್ಲೌಸ್, ತಲೆಗವಸು ಸೇರಿದಂತೆ ಮುಂಜಾಗೃತಾ ಕ್ರಮಗಳನ್ನ ಕೈಗೊಂಡಿಲ್ಲ. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಕೂಡ ಈ ಬಗ್ಗೆ ಕಾಳಜಿ ವಹಿಸಿಲ್ಲ. ಕ್ವಾರಂಟೈನ್‍ನಲ್ಲಿ ಸಿಬ್ಬಂದಿ ಕೂಡ ಸ್ವಯಂ ಸುರಕ್ಷತಾ ಕ್ರಮಗಳನ್ನ ಅನುಸರಿಸುತ್ತಿಲ್ಲ.

    ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ ಹೋಗೋರು ಹೆಚ್ಚಿನ ರಕ್ಷಣಾ ಕ್ರಮಗಳನ್ನ ಕೈಗೊಳ್ಳಬೇಕು. ಆದರೆ ದಿನಕ್ಕೆ ಎರಡ್ಮೂರು ಬಾರಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ ಹೋಗಿ ಅಲ್ಲಿನ ಜನರ ತಪಾಸಣೆ ಮಾಡಿ ಬರುತ್ತಿರೋ ಕೆಲವು ವೈದ್ಯರು ಮತ್ತು ಸಿಬ್ಬಂದಿ ಅಷ್ಟಾಗಿ ಸುರಕ್ಷತಾ ಕ್ರಮಗಳನ್ನ ಅನುಸರಿಸ್ತಿಲ್ಲ. ಜಿಲ್ಲಾಡಳಿತದ ನಿರ್ದೇಶನದಂತೆ ಎನ್95 ಮಾಸ್ಕ್ ಧರಿಸೋದರಿಂದ ಪಾಲಿಸಬೇಕಾದ ನಿಯಮಗಳನ್ನ ಪಾಲಿಸ್ತಿಲ್ಲ. ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿರೋ ಜನರಿಗೆ ಕೆಲವು ವೈದ್ಯರು ಮತ್ತು ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳದೆ ತಪಾಸಣೆ ಮಾಡ್ತಿದ್ದಾರೆ.

    ಜಿಲ್ಲಾಡಳಿತ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರ ತಪಾಸಣೆಗೆ ಹೋಗೋ ವೈದ್ಯರು ಮತ್ತು ಸಿಬ್ಬಂದಿಗೆ ಸುರಕ್ಷತಾ ಕ್ರಮಗಳನ್ನ ಕಟ್ಟುನಿಟ್ಟಾಗಿ ಅನುಸರಿಸಬೇಕಿದೆ. ಇಲ್ಲದಿದ್ರೆ ಕೊರೊನಾ ಸೋಂಕು ಮತ್ತಷ್ಟು ಹರಡೋದ್ರಲ್ಲಿ ಎರಡು ಮಾತಿಲ್ಲ.