Tag: ಕೊರೊನಾ ವಾರಿಯರ್ಸ್

  • ತಬ್ಲಿಘಿಗಳ ಬಗ್ಗೆ ಸತ್ಯ ಬಿಚ್ಚಿಟ್ಟ ಫೀಲ್ಡ್ ವಾರಿಯರ್ಸ್

    ತಬ್ಲಿಘಿಗಳ ಬಗ್ಗೆ ಸತ್ಯ ಬಿಚ್ಚಿಟ್ಟ ಫೀಲ್ಡ್ ವಾರಿಯರ್ಸ್

    ಬೆಂಗಳೂರು: ಸಿಲಿಕಾನ್ ಸಿಟಿಗೆ ನಿಜಾಮುದ್ದೀನ್ ಕಂಟಕ ತಲೆನೋವಾಗಿದ್ದು, ಇದೀಗ ತಬಿಘಿಗಳ ಬಗ್ಗೆ ಫೀಲ್ಡ್ ವಾರಿಯರ್ಸ್ ಸತ್ಯ ಬಿಚ್ಚಿಟ್ಟಿದ್ದಾರೆ.

    ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಆಶಾ ಕಾರ್ಯಕರ್ತೆಯರು ಎಲ್ಲಾ ಮನೆಗಳ ಸರ್ವೇ ಮಾಡುತ್ತಿದ್ದಾರೆ. ಈ ವೇಳೆ ಅವರು ಎದರಿಸಿದ ಸಂಕಷ್ಟಗಳನ್ನು ಪಬ್ಲಿಕ್ ಟಿವಿ ಮುಂದೆ ಹಂಚಿಕೊಂಡಿದ್ದಾರೆ.

    ನಿಜಾಮುದ್ದೀನ್ ಗೆ ಹೋದವರು ನಾವು ಅವರ ಮನೆಗೆ ತೆರಳಿದಾಗ ಡೋರ್ ಲಾಕ್ ಮಾಡ್ತಾರೆ. ಈ ಮೂಲಕ ದೆಹಲಿ ಸಮಾವೇಶಕ್ಕೆ ಹೋಗಿ ಬಂದವರ ಬಗ್ಗೆ ಫೀಲ್ಡ್ ನಲ್ಲಿ ಮಾಹಿತಿ ಕಲೆ ಹಾಕೋಕೆ ಮನೆ ಮನೆಗೆ ಹೋದರೆ ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಡೋರ್ ರಪ್ ಅಂತ ಹಾಕಿದ್ರೆ ನಾವೇನು ಮಾಡೋಕೆ ಆಗುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇಡೀ ಏರಿಯಾಗೆ ಸೋಂಕು ಹಂಚಿಕೆಯಾಗುತ್ತಿದೆ. ಬೆಂಗಳೂರು ತೀರಾ ಡೇಂಜರ್ ನಲ್ಲಿದೆ. ನಿಜಾಮುದ್ದೀನ್ ಲೆಕ್ಕ ಸರಿಯಾಗಿ ಸಿಗ್ತಿಲ್ಲ. ಅವರು ಸಹಕಾರ ಕೊಡ್ತಿಲ್ಲ. ನಮ್ಮ ಪೇಪರ್ ಗಳನ್ನು ಹರಿದು ಹಾಕ್ತಾರೆ. ರಸ್ತೆಗೆ ಎಂಟ್ರಿ ಕೊಡೋಕೆ ಬಿಡಲ್ಲ. ನಿಮಗ್ಯಾರು ಬರೋಕೆ ಹೇಳಿದ್ದು ಅಂತಾರೆ. ಇದರಿಂದ ಸೋಂಕು ಬೇರೆಯವರಿಗೆ ಹಬ್ಬುತ್ತಿದೆ. ಯಾರು ಹೋಗಿ ಬಂದವರು ಅಂತಾನೇ ತಿಳಿಯುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಿಂದ ತಬ್ಲಿಘಿಗೆ ಹೋದವರು ಎಷ್ಟು? – ಸವಾಲಾಗಿದೆ ಪತ್ತೆ ಕಾರ್ಯ

    ಮೌಲ್ವಿಗಳು ಬಂದರಷ್ಟೇ ಮಾಹಿತಿ..!
    ಮಸೀದಿಯಲ್ಲಿ ಅನೌನ್ಸ್ ಮಾಡಿದ ಮೇಲಷ್ಟೆ ಏರಿಯಾಗೆ ತೆರಳಲು ಬಿಡುತ್ತಾರೆ. ನಾವು ಬಂದಾಗ ಏರಿಯಾಗೆ ಮನೆಗೆ ಬಿಡಲ್ಲ. ಯಾರಾದರೂ ಮೌಲ್ವಿಗಳು ಬಂದಾಗ ಅವರು ಜನರಿಗೆ ಹೇಳಿದ ಮೇಲೆ ನಮ್ಮನ್ನು ಬಿಡುತ್ತಾರೆ. ಆಯಾಯ ಮಸೀದಿಯಲ್ಲಿ ಅನೌನ್ಸ್ ಮಾಡಬೇಕು. ಇಲ್ಲದೇ ಇದ್ದರೆ ನಮಗೆ ಎಂಟ್ರಿ ಇಲ್ಲ. ನಮಗೆ ಸಹಕಾರ ಕೊಡದೇ ಇರೋದ್ರಿಂದ ಬೆಂಗಳೂರಿನ ಅಸಲಿ ಕೊರೊನಾ ಲೆಕ್ಕವೇ ಸಿಗ್ತಿಲ್ಲ ಎಂದು ಕಹಿ ಸತ್ಯ ಬಿಚ್ಚಿಟ್ಟಿದ್ದಾರೆ.

  • ರಾಮನಗರದಲ್ಲಿ ಕೊರೊನಾ ವಾರಿಯರ್ಸ್‍ಗೆ 5 ಸಾವಿರ ರೂ. ಪ್ರೋತ್ಸಾಹ ಧನ

    ರಾಮನಗರದಲ್ಲಿ ಕೊರೊನಾ ವಾರಿಯರ್ಸ್‍ಗೆ 5 ಸಾವಿರ ರೂ. ಪ್ರೋತ್ಸಾಹ ಧನ

    ರಾಮನಗರ: ಕೊರೊನಾ ವಾರಿಯರ್ಸ್ ಗೆ ಇಂದು ಸನ್ಮಾನ ಮಾಡಲಾಯ್ತು. ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ರಾಮನಗರ ತಾಲೂಕಿನ ಕೊರೊನಾ ವಾರಿಯರ್ಸ್ ಗೆ ಶಾಲು ಹಾರ ಹಾಕಿ ಸನ್ಮಾನಿಸಿ ತಲಾ 5 ಸಾವಿರ ರೂಪಾಯಿಗಳ ನಗದು ನೀಡುವಂತಕ ಕೆಲಸ ಮಾಡಲಾಯ್ತು.

    ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್ ನೇತೃತ್ವದಲ್ಲಿ ಮೊದಲ ಹಂತದಲ್ಲಿ ಮಾಯಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸನ್ಮಾನ ನಡೆಸಲಾಯಿತು. ಸನ್ಮಾನದ ಮೂಲಕ ಎಲ್ಲ ಕೊರೊನಾ ವಾರಿಯರ್ಸ್ ಗೆ ಧನ್ಯವಾದ ಹೇಳಲಾಯ್ತು. ಸಾಂಕೇತವಾಗಿ ಮಾಯಾಗನಹಳ್ಳಿಯಲ್ಲಿನ ತಮ್ಮ ನಿವಾಸದ ಬಳಿಯಲ್ಲಿ ಇಬ್ಬರು ದಾದಿಯರು, 7 ಮಂದಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಿ, ಥ್ಯಾಂಕ್ಯೂ ಎನ್ನುವ ಮೂಲಕ ತಲಾ 5 ಸಾವಿರ ರೂಪಾಯಿಗಳ ಚೆಕ್ ವಿತರಣೆ ಮಾಡಿದರು.

    ರಾಮನಗರ ತಾಲೂಕಿನಲ್ಲಿ 200ಕ್ಕೂ ಹೆಚ್ಚು ಮಂದಿ ಕೊರೊನಾ ವಾರಿಯರ್ಸ್ ಸೇವೆ ಸಲ್ಲಿಸುತ್ತಿದ್ದಾರೆ. ಇವರುಗಳು ಮನೆ-ಮಠ ಬಿಟ್ಟು ನಮಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾವಿನೊಂದಿಗೆ ಸೆಣೆಸಾಟ ನಡೆಸುತ್ತಿರುವ ಇಂತಹ ರಿಯಲ್ ಹೀರೋಗಳಿಗೆ ಸ್ಥೈರ್ಯ ತುಂಬುವುದರೊಂದಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರುವ ಕೆಲಸಗಳು ಹಾಲಿನ ಡೈರಿಗಳ ನಡೆಯುತ್ತಿರುವುದು ವಿಶೇಷವಾಗಿದೆ.

    ತಾಲೂಕಿನಲ್ಲಿರುವ ದಾದಿಯರು, ಆಶಾ ಕಾರ್ಯಕರ್ತೆರುಗಳಿಗೆ ಹಾರ ಹಾಕಿ, ಶಾಲು ಹೊದಿಸಿ, 5 ಸಾವಿರ ರೂ.ಗಳ ಚೆಕ್ ನೀಡುವ ಮೂಲಕ ಯು ಸೇವ್ಡ್ ಮೈ ಲೈಫ್ ಥಾಂಕ್ಯೂ ಎನ್ನುವ ಕೆಲಸ ನಡೆಯಲಿದೆ. ಇಂತಹ ಕಾರ್ಯಕ್ರಮಗಳಿಂದಾಗಿ ಹಗಲಿರುಳು ಸೇವೆ ಸಲ್ಲಿಸುತ್ತರುವ ವಾರಿಯರ್ಸ್ ಗಳಿಗೆ ಇನ್ನಷ್ಟು ಪ್ರೋತ್ಸಾಹ ತುಂಬಬಹುದು ಎನ್ನುತ್ತಾರೆ ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್.