Tag: ಕೊರೊನಾ ವಾರಿಯರ್ಸ್

  • ಕೊರೊನಾ ವಾರಿಯರ್ಸ್‍ಗೆ 4 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ

    ಕೊರೊನಾ ವಾರಿಯರ್ಸ್‍ಗೆ 4 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ

    ಬೀದರ್: ಕೋವಿಡ್-19 ಸಮಯದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದ ಕೊರೊನಾ ವಾರಿಯರ್ಸ್ ಗೆ ನಾಲ್ಕು ತಿಂಗಳಿನಿಂದ ಸರ್ಕಾರ ಸಂಬಳ ನೀಡುತ್ತಿಲ್ಲ. ಜೊತೆಗೆ ಕೋವಿಡ್ ಭತ್ಯೆಯನ್ನು ನೀಡದ ಕಾರಣ ಬ್ರೀಮ್ಸ್ ನಲ್ಲಿ ಕೆಲಸ ಮಾಡುವ 200ಕ್ಕೂ ಹೆಚ್ಚು ಡಿ ಗ್ರೂಪ್ ನೌಕರರು ಜೀವನ ನಿರ್ವಹಣೆ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಮನೆ ಹಾಗೂ ಕುಟುಂಬವನ್ನು ಬಿಟ್ಟು ಕೊರೊನಾ ಸೋಂಕು ಅಂಟಿದರೂ ಭಯ ಬೀಳದೇ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ್ರು. ಇಂಥಾ ಕೊರೊನಾ ವಾರಿಯರ್ಸ್ ಗೆ ಇಂದು ನಾಲ್ಕು ತಿಂಗಳಿನಿಂದ ಸರ್ಕಾರ ಸಂಬಳ ನೀಡದೇ ಜೊತೆ ಕೋವಿಡ್ ಭತ್ಯೆ ನೀಡದೇ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ

    ಈ ಕುರಿತು ಮಾತನಾಡಿದ ಕೊರೊನಾ ವಾರಿಯರ್ಸ್, ಮನೆ, ಮಕ್ಕಳು ಬಿಟ್ಟು ಜೀವದ ಹಂಗು ತೊರೆದು ನಾವು ಕೋವಿಡ್ ಸಮಯದಲ್ಲಿ ಕೆಲಸ ಮಾಡಿದ್ದೇವೆ. ಹೀಗಿದ್ದರೂ ನಮಗೆ ಸರ್ಕಾರ ನಾಲ್ಕು ತಿಂಗಳಿನಿಂದ ಸಂಬಳ ಜೊತೆಗೆ ಕೋವಿಡ್ ಭತ್ಯೆ ಕೂಡಾ ನೀಡಿಲ್ಲ. ಮನೆ ಬಾಡಿಗೆ ನೀಡದ ಕಾರಣ ಮನೆ ಖಾಲಿ ಮಾಡುವಂತೆ ಮಾಲೀಕರು ಹೇಳುತ್ತಿದ್ದಾರೆ. ಜೊತೆಗೆ ಮಕ್ಕಳ ಶುಲ್ಕ ಕಟ್ಟಲಾಗದೆ ನೊಂದು ಹೋಗಿದ್ದೇವೆ ಎಂದು ಸರ್ಕಾರ ಮತ್ತು ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಕೋವಿಡ್-19 ಕರ್ತವ್ಯ ನಿರತ ಆರೋಗ್ಯ ಇಲಾಖೆ ಸಿಬ್ಬಂದಿಗೆ ವೇತನ ನೀಡದ ಸರ್ಕಾರ

    ಕೋವಿಡ್-19 ಕರ್ತವ್ಯ ನಿರತ ಆರೋಗ್ಯ ಇಲಾಖೆ ಸಿಬ್ಬಂದಿಗೆ ವೇತನ ನೀಡದ ಸರ್ಕಾರ

    -7 ತಿಂಗಳ ಸಂಬಳ ನೀಡಲು ಇಲಾಖೆ ಬಜೆಟ್ ಕೊರತೆ

    ರಾಯಚೂರು: ಕೋವಿಡ್ ಮೂರನೇ ಅಲೆಯ ಆತಂಕ ಈಗ ಎಲ್ಲೆಡೆ ಮತ್ತೇ ಹೆಚ್ಚಾಗುತ್ತಿದೆ. ಕೋವಿಡ್ ಪ್ರಕರಣಗಳು ಕೂಡ ಅಲ್ಲಲ್ಲಿ ಪತ್ತೆಯಾಗಲು ಶುರುವಾಗಿದೆ. ಆದರೆ ಕೋವಿಡ್ ಎರಡನೇ ಅಲೆಯಲ್ಲಿ ಪ್ರಾಣವನ್ನು ಒತ್ತೆಯಿಟ್ಟು ದುಡಿದ ಡಿ ಗ್ರೂಪ್ ನೌಕರರಿಗೆ 7 ತಿಂಗಳಾದ್ರೂ ಸಂಬಳವಿಲ್ಲ. ಮೊಸಳೆ ಕಣ್ಣಿನ ಸರ್ಕಾರದ ವರ್ತನೆಗೆ ರಾಯಚೂರು ಸೇರಿ ರಾಜ್ಯದ ಸಾವಿರಾರು ಬಡ ನೌಕರರು ಊಟಕ್ಕೂ ತೊಂದರೆ ಪಡುವಂತಾಗಿದೆ.

    ಕೋವಿಡ್ ಸಮಯದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಡಿ ಗ್ರೂಪ್ ನೌಕರರಿಗೆ ಈ ವರೆಗೂ ಸನ್ಮಾನ ಬಿಟ್ಟರೆ ಸಂಬಳ ಅಂತ ಬಿಡಿಗಾಸು ಸಿಕ್ಕಿಲ್ಲ. ರಾಯಚೂರು ಜಿಲ್ಲೆಯಲ್ಲಿ 80 ಜನರನ್ನು ನೇಮಕ ಮಾಡಿಕೊಂಡು ರಿಮ್ಸ್ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಸಿಬ್ಬಂದಿ ನೇಮಕ ಮಾಡಲಾಗಿತ್ತು. ಇದೀಗ ಏಳು ತಿಂಗಳಾದರೂ ಒಂದು ತಿಂಗಳ ಸಂಬಳವನ್ನೂ ನೀಡಿಲ್ಲ. ಹೆಸರಿಗೆ ಕೋವಿಡ್ ವಾರಿಯರ್ಸ್ ಅಂತ ಕರೆದ ಸರ್ಕಾರ ಸಂಬಳ ಕೊಡದೆ ಸತಾಯಿಸುತ್ತಿದೆ. ರಾಯಚೂರು ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಜನ ಸಂಬಳವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಹೊಸ ವೈರಸ್ B.1.1.529 ಪತ್ತೆ – ಭಾರತದಲ್ಲಿ ಆತಂಕ

    ಕೋವಿಡ್ ಸಮಯದಲ್ಲಿ ಪ್ರಾಣ ಒತ್ತೆಯುಟ್ಟು ಟಾರ್ಗೆಟ್ ಒತ್ತಡದಲ್ಲಿ ಕೆಲಸ ಮಾಡಿದ ಸಿಬ್ಬಂದಿ ಈಗ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ತಲುಪಿದ್ದಾರೆ. ಕಳೆದ ಏಳುತಿಂಗಳಿಂದ ತಮ್ಮ ಸ್ವಂತ ಖರ್ಚಿನಲ್ಲೇ ಓಡಾಡಿಕೊಂಡು ದುಡಿಯುತ್ತಿದ್ದಾರೆ. ಎಆರ್‍ಸಿ ಕಡೆಯಿಂದ ನೇಮಕ ಮಾಡಿಕೊಳ್ಳಲಾದ ಸಿಬ್ಬಂದಿಗೆ ಬಜೆಟ್ ಕೊರತೆ ಕಾರಣ ಹೇಳಿ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ. ಕೋವಿಡ್ ರಿಸ್ಕ್ ಅಲೊಯನ್ಸ್ ನೀಡುವುದಾಗಿ ಸರ್ಕಾರ ಹೇಳಿತ್ತು, ಆದರೆ ಅದನ್ನು ಪೂರ್ಣಾವಧಿ ನೌಕರರಿಗೆ ಹಾಕಿ ಗುತ್ತಿಗೆ ನೌಕರರನ್ನು ಕಡೆಗಣಿಸಲಾಗಿದೆ. ಹೀಗಾಗಿ ನೌಕರರು ಸಂಬಳಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಇನ್ನೂ ಅಧಿಕಾರಿಗಳು ಮಾತ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಎನ್ನುತ್ತಿದ್ದಾರೆ. ಅನುದಾನ ಕೊರತೆಯಿದೆ, ಒಂದೆರಡು ಜಿಲ್ಲೆಯಲ್ಲಿ ಸಂಬಳ ಕೊಟ್ಟಿರಬಹುದು ಬಹುತೇಕ ಜಿಲ್ಲೆಗಳಿಗೆ ಹಣ ಬಿಡುಗಡೆಯಾಗಿಲ್ಲ. ಅನುದಾನದ ಪ್ರಸ್ತಾವನೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಅಂತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಹೇಳಿದ್ದಾರೆ. ಇದನ್ನೂ ಓದಿ: ಪೆನ್ಸಿಲ್ ನಿಬ್ ಕದ್ದ ಬಾಲಕನ ವಿರುದ್ಧ ದೂರು ದಾಖಲಿಸಲು ಠಾಣೆಗೆ ಹೋದ ಪುಟಾಣಿ

    ಒಟ್ನಲ್ಲಿ, ಕೋವಿಡ್ ಸಮಯದಲ್ಲಿ ಡಿ ಗ್ರೂಪ್ ನೌಕರರನ್ನೂ ದೇವರಂತೆ ಬಿಂಬಿಸಿದ ಸರ್ಕಾರ ಈಗ ಅವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಕಷ್ಟ ಕಾಲದಲ್ಲಿ ದುಡಿದವರು ಈಗ ಸಂಬಳವಿಲ್ಲದೆ ಕಷ್ಟ ಎದುರಿಸುತ್ತಿದ್ದಾರೆ. ಈಗಲಾದ್ರೂ ಸರ್ಕಾರ ಎಚ್ಚೆತ್ತು ಸಿಬ್ಬಂದಿ ಸಂಬಳ ಬಿಡುಗಡೆ ಮಾಡಬೇಕಿದೆ.

  • ಆರ್​ಸಿಬಿ ಹಸಿರು ಬಣ್ಣ ಬಿಟ್ಟು ತಿಳಿನೀಲಿ ಜೆರ್ಸಿ ತೊಟ್ಟಿದ್ಯಾಕೆ ಗೊತ್ತಾ?

    ಆರ್​ಸಿಬಿ ಹಸಿರು ಬಣ್ಣ ಬಿಟ್ಟು ತಿಳಿನೀಲಿ ಜೆರ್ಸಿ ತೊಟ್ಟಿದ್ಯಾಕೆ ಗೊತ್ತಾ?

    ದುಬೈ: ಅರಬ್ ನಾಡಿನಲ್ಲಿ ನಡೆಯುತ್ತಿರುವ ಐಪಿಎಲ್‍ನ ಮೊದಲ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಎಂದಿನ ಕೆಂಪು, ಕಪ್ಪು ಜೆರ್ಸಿ ಬಿಟ್ಟು ಈ ಬಾರಿ ತಿಳಿ ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದಾರೆ. ಈ ತಿಳಿ ನೀಲಿ ಜೆರ್ಸಿ ಧರಿಸಿದ ಹಿಂದೆ ಆರ್​ಸಿಬಿ ಮಹತ್ವದ ಗುರಿ ಹೊಂದಿದೆ.

    ಆರ್​ಸಿಬಿ ಪಿಪಿಇ ಕಿಟ್‍ನಂಥ ತಿಳಿ ನೀಲಿ ಬಣ್ಣದ ಈ ಜೆರ್ಸಿಯೊಂದಿಗೆ ಕೆಕೆಆರ್ ವಿರುದ್ಧ ಕಣ್ಣಕ್ಕಿಳಿದು ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಿದೆ. ಇದಲ್ಲದೆ ಪಂದ್ಯದ ಬಳಿಕ ಎಲ್ಲಾ ಆಟಗಾರರ ಜೆರ್ಸಿಯನ್ನು ಹರಾಜು ಹಾಕಲಾಗುತ್ತಿದ್ದು, ಇದರಿಂದ ಬಂದ ಹಣವನ್ನು ಭಾರತದಲ್ಲಿ ಕೊರೊನಾ ಲಸಿಕೆ ನೀಡಲು ಆರ್​ಸಿಬಿ ಫ್ರಾಂಚೈಸ್ ಮುಂದಾಗಿದೆ. ಈ ಮೂಲಕ ಸಮಾಜಸೇವೆಗೆ ತಮ್ಮ ಒಂದು ಪಂದ್ಯವನ್ನು ಮೀಸಲಿಟ್ಟಿದೆ.

    ಈ ಹಿಂದೆ ಆರ್‍ಸಿಬಿ ತಂಡ ಪರಿಸರ ಜಾಗೃತಿಗಾಗಿ 1 ಪಂದ್ಯದಲ್ಲಿ ಹಸಿರು ಜೆರ್ಸಿತೊಟ್ಟು ಆಡುತ್ತಿತ್ತು. ಆದರೆ ಈ ಬಾರಿ ಹಸಿರು ಬಣ್ಣದ ಬದಲಾಗಿ ತಿಳಿ ನೀಲಿ ಬಣ್ಣದ ವಸ್ತ್ರದೊಂದಿಗೆ ಇಳಿದಿದೆ. ಇದನ್ನೂ ಓದಿ: ಆರ್​ಸಿಬಿಯಿಂದ ಹೀನಾಯ ಪ್ರದರ್ಶನ – ಕೆಕೆಆರ್​ಗೆ 9 ವಿಕೆಟ್‍ಗಳ ಭರ್ಜರಿ ಜಯ

  • ಕೋವಿಡ್ ಏಂಜಲ್ಸ್ ಕುಟುಂಬಗಳಿಗೆ ವಂಡರ್‌ಲಾ ವತಿಯಿಂದ ಉಚಿತ ಪಾಸ್

    ಕೋವಿಡ್ ಏಂಜಲ್ಸ್ ಕುಟುಂಬಗಳಿಗೆ ವಂಡರ್‌ಲಾ ವತಿಯಿಂದ ಉಚಿತ ಪಾಸ್

    ಬೆಂಗಳೂರು: ಕೋವಿಡ್‍ಗಾಗಿ ಹಗಲಿರುಳು ಶ್ರಮಿಸುತ್ತಿರುವ ಕೋವಿಡ್ ಫ್ರಂಟ್‍ಲೈನ್ ವಾರಿಯರ್ಸ್ ಗಳಿಗಾಗಿ (ಕೋವಿಡ್ ಏಂಜಲ್ಸ್) ವಂಡರ್‍ಲಾ ಹಾಲಿಡೇಸ್ ಗೌರವಾರ್ಥವಾಗಿ ಉಚಿತ ವಂಡರ್‍ಲಾ ಪಾರ್ಕ್ ಪಾಸ್ ನೀಡಲು ಮುಂದಾಗಿದೆ.

    ವೈದ್ಯರು, ನರ್ಸ್ ಗಳು, ಸಹಾಯಕ ಸಿಬ್ಬಂದಿ, ಮಾಧ್ಯಮ ವರದಿಗಾರರು, ಪೊಲೀಸರು, ಸ್ಮಶಾನದಲ್ಲಿ ಕೆಲಸ ಮಾಡುವವರು, ಆಶಾ ಕಾರ್ಯಕರ್ತೆಯರು ಈ ಕೊಡುಗೆಗೆ ಅರ್ಹರಾಗಿದ್ದಾರೆ. ಜೊತೆಗೆ ಸಾಮಾಜಿಕ ಕಾರ್ಯಕರ್ತರಿಗೂ ಸಹ ಉಚಿತ ಪಾಸ್ ನೀಡಲು ನಿರ್ಧರಿಸಿದೆ. ಈ ಉಚಿತ ಪಾಸ್ ಒಟ್ಟು 1,500 ಕೋವಿಡ್ ಏಂಜಲ್ಸ್‍ಗಳು ಹಾಗೂ ಅವರ ಕುಟುಂಬವೂ ಸೇರಿದಂತೆ ಒಟ್ಟು 6 ಸಾವಿರ ಮಂದಿಗೆ ಸಿಗಲಿದೆ. ಜೊತೆಗೆ ಭೋಜನ, ಚಹಾ ಹಾಗೂ ಎಲ್ಲಾ ರೈಡ್‍ಗಳ ಬಳಕೆಗೂ ಉಚಿತ ಅವಕಾಶವಿರಲಿದೆ.

    ಇದರ ಉಪಯೋಗ ಪಡೆಯಲು ಅರ್ಹರು http://www.wonderla.com ವಂಡರ್‍ಲಾ ವೆಬ್‍ಸೈಟ್‍ನಲ್ಲಿ ಭೇಟಿ ನೀಡಬಹುದು. ಅಥವಾ ತಮ್ಮ ಸುತ್ತಮುತ್ತಲು ಇರುವ ಈ ವಾರಿಯರ್ಸ್‍ಗಳ ಕೆಲಸಗಳನ್ನು ಎತ್ತಿ ತೋರಿಸುವ ವಿಡಿಯೋ ಹಾಗೂ ಫೋಟೋಗಳನ್ನು @wonderla_in ಅಥವಾ wonderla @ facebook.com/ Wonderla ಫೇಸ್‍ಬುಕ್ ಪೇಜ್‍ಗೆ ಟ್ಯಾಗ್ ಮಾಡಬಹುದು. ಇದನ್ನೂ ಓದಿ: ಐವರ ಮುಡಿಗೇರಿದ ಮಿಸೆಸ್ ಸೌತ್ ಇಂಡಿಯಾ 2021 ಕಿರೀಟ

    ಈ ಕೊಡುಗೆಯು ಆಗಸ್ಟ್ 2ರಿಂದ 8ರವರೆಗೆ ಇರಲಿದ್ದು, ಈ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳಬಹುದು. ಅಥವಾ 08037230333 ಮತ್ತು 080 35073966 ಇಲ್ಲಿಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು. ಆಯ್ಕೆಯಾದ 1500 ಕೋವಿಡ್ ಏಂಜಲ್ಸ್ ಕುಟುಂಬಗಳಿಗೆ (6000 ಜನ) ಉಚಿತ ಪಾಸ್ ಜೊತೆಗೆ ಇತರೆ ಸೌಲಭ್ಯ ಹಾಗೂ ಗೌರವಗಳು ಸಲ್ಲಲಿದೆ.

  • ಜೂನ್ 21ರಿಂದ ಕೇಂದ್ರದಿಂದ ಎಲ್ಲರಿಗೂ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ

    ಜೂನ್ 21ರಿಂದ ಕೇಂದ್ರದಿಂದ ಎಲ್ಲರಿಗೂ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ

    – ದೀಪಾವಳಿವರೆಗೂ ಉಚಿತ ಪಡಿತರ

    ನವದೆಹಲಿ: ಜೂನ್ 21ರಿಂದ ಕೇಂದ್ರದಿಂದಲೇ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಇದೇ ವೇಳೆ ದೀಪಾವಳಿವರೆಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯಲ್ಲಿ ಉಚಿತ ಪಡಿತರ ವಿತರಿಸಲಾಗುವುದು ಎಂದು ತಿಳಿಸಿದರು.

    ಮೋದಿ ಭಾಷಣದಲ್ಲಿ ಹೇಳಿದ್ದೇನು?: ಕೊರೊನಾ ಎರಡನೇ ಅಲೆಯ ವಿರುದ್ಧ ಭಾರತ ಹೋರಾಡುತ್ತಿದೆ. ಅನೇಕ ಕುಟುಂಬಗಳು ತಮ್ಮವರನ್ನು ಕಳೆದುಕೊಂಡಿದ್ದಾರೆ. ಇದು 100 ವರ್ಷಗಳಲ್ಲಿಯೇ ಅತಿ ದೊಡ್ಡ ಮಹಾಮಾರಿ. ಕೋವಿಡ್ ವಿರುದ್ಧ ಹೋರಾಟದ ವೇಳೆ ದೇಶದಲ್ಲಿಯೇ ಹೊಸ ಆರೋಗ್ಯ ವ್ಯವಸ್ಥೆ ನಿರ್ಮಾಣವಾಗಿದೆ. ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಉತ್ಪನ್ನಗಳಿಗಾಗಿ ಯುದ್ಧನೋಪಾದಿಯಲ್ಲಿ ಕೆಲಸ ಮಾಡಲಾಯ್ತು. ವಿಶ್ವದ ಯಾವುದೇ ಭಾಗದಲ್ಲಿ ಲಭ್ಯವಿರುವ ಔಷಧಗಳನ್ನು ತರಲಾಯ್ತು. ಈ ಹೋರಾಟದಲ್ಲಿ ಯಾವುದೇ ನಿರ್ಲಕ್ಷ್ಯ ಮಾಡಿಲ್ಲ.

    ಕೊರೊನಾ ವಿರುದ್ಧ ಹೋರಾಟದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಲಸಿಕೆ ಈ ಮಹಾಮಾರಿಗೆ ಸಂಜೀವಿನಿ. ವಿಶ್ವದಲ್ಲಿ ಲಸಿಕೆ ಉತ್ಪಾದಿಸುವ ಕಂಪನಿಗಳು ಕಡಿಮೆ ಸಂಖ್ಯೆಯಲ್ಲಿವೆ. ಲಸಿಕೆಗೆ ಇಡೀ ವಿಶ್ವದಲ್ಲಿ ಬೇಡಿಕೆ ಹೆಚ್ಚಿವೆ. ಈ ಹಿಂದೆ ವ್ಯಾಕ್ಸಿನ್ ಗಾಗಿ ದಶಕಗಳವರೆಗೂ ಕಾಯಬೇಕಿತ್ತು. ವಿದೇಶದಲ್ಲಿ ಲಸಿಕೆ ಸಿಕ್ಕರೂ ನಮಗೆ ಸಿಗುತ್ತಿರಲಿಲ್ಲ. ಆದ್ರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಲಸಿಕೆ ಹಂಚಿಕೆಯಲ್ಲಿ ಭಾರತ ಮುಂದಿದೆ.

    ಮಿಷನ್ ಇಂದ್ರ ಧನುಷ್ ಯೋಜನೆ ಮೂಲಕ ಲಸಿಕೆ ನೀಡಲಾಗುತ್ತಿದೆ. ನಮಗೆ ಬಡ ಮಕ್ಕಳ ಬಗ್ಗೆ ಚಿಂತೆ ಇತ್ತು. ದೇಶದ ವಿಜ್ಞಾನಿಗಳು ಒಂದೇ ವರ್ಷದಲ್ಲಿ ಎರಡು ಲಸಿಕೆ ತಯಾರಿಸುವ ಮೂಲಕ ವಿದೇಶಗಳಿಗಿಂತ ಹಿಂದೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ರು. ಲಸಿಕೆಯ ನೀತಿ ಸ್ಪಷ್ಟವಾಗಿದ್ದು, ಇದುವರೆಗೂ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕೊರೊನಾ ಎರಡನೇ ಅಲೆಗೂ ಮುನ್ನವೇ ಭಾರತದಲ್ಲಿ ಲಸಿಕಾಕರಣ ಆರಂಭವಾಗಿತ್ತು.

    ಲಸಿಕೆ ಸಂಶೋಧನೆಯ ಎಲ್ಲ ಹೆಜ್ಜೆಯಲ್ಲೂ ಸರ್ಕಾರ ಜೊತೆಯಾಗಿತ್ತು. ದೇಶದಲ್ಲಿ ಏಳು ಕಂಪನಿಗಳು ವಿಭಿನ್ನ ಲಸಿಕೆ ತಯಾರಿಕೆಗೆ ಮುಂದಾಗಿದೆ. ಮೂರು ಲಸಿಕೆಗಳ ಟ್ರಯಲ್ ಸಹ ನಡೆಸಲಾಗುತ್ತಿದೆ. ಮಕ್ಕಳಿಗೆ ಕೊರೊನಾಂತಕ ಹಿನ್ನೆಲೆ ಎರಡು ವ್ಯಾಕ್ಸಿನ್ ಗಳ ಟ್ರಯಲ್ ನಡೆಯುತ್ತಿದೆ.

    ಲಸಿಕೆ ತಯಾರಿಸಿದ ಬಳಿಕವೂ ಕಡಿಮೆ ದೇಶಗಳಲ್ಲಿ ಲಸಿಕಾಕರಣ ಆರಂಭವಾಯ್ತು. ಮೊದಲಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಯ್ತು. ಎರಡನೇ ಅಲೆ ಆರಂಭಕ್ಕೂ ಮುನ್ನ ನಮ್ಮ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಹಾಗಾಗಿ ಆರೋಗ್ಯ ಸಿಬ್ಬಂದಿ ಸೋಂಕಿತರ ಆರೈಕೆಯಲ್ಲಿ ತೊಡಗಿಕೊಂಡರು.

    ಜನವರಿ 16ರಿಂದ ಏಪ್ರಿಲ್ ಅಂತ್ಯದವರೆಗೆ ಲಸಿಕಾಕರಣ ಕೇಂದ್ರದ ಕಣ್ಗಾವಲಿನಲ್ಲಿಯೇ ನಡೆಯಿತು. ಆದ್ರೆ ಲಸಿಕೆ ಸಂಬಂಧ ಟೀಕೆಗಳು ಕೇಳಿ ಬಂದಿದ್ದವು. ದೇಶದ ಒಂದು ವರ್ಗದ ಬಗ್ಗೆ ಲಸಿಕೆ ಬಗ್ಗೆ ಕ್ಯಾಂಪೇನ್ ಸಹ ನಡೆಸಿದವು. ಕೇಂದ್ರ ಲಸಿಕೆ ನೀಡುವ ಕಾರ್ಯಕ್ರಮವನ್ನ ಕೇಂದ್ರಿಕರಣ ಮಾಡಿಕೊಳ್ಳುತ್ತಿದೆ ಎಂದು ಹಲವು ರಾಜ್ಯ ಸರ್ಕಾರಗಳು ಆರೋಪಿಸಿದವು. ಹಾಗಾಗಿ ಅವರಿಗೂ ಶೇ.50ರಷ್ಟು ಜವಾಬ್ದಾರಿಯನ್ನ ನೀಡಲಾಯ್ತು. ಮೇನಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕೆಲ ರಾಜ್ಯಗಳು ಮೊದಲಿನ ವ್ಯವಸ್ಥೆಯೇ ಚೆನ್ನಾಗಿತ್ತು ಎಂದು ಹೇಳಲಾರಂಭಿಸಿದವು. ಹಾಗಾಗಿ ಲಸಿಕೆಯ ಪೂರ್ಣ ಹಂಚಿಕೆಯನ್ನ ಕೇಂದ್ರವೇ ತೆಗೆದುಕೊಳ್ಳಲಿದೆ. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಭಾರತ ಸರ್ಕಾರ ಕೊರೊನಾ ಲಸಿಕೆ ನೀಡಲಿದೆ.

    ಭಾರತ ಸರ್ಕಾರವೇ ಕೊರೊನಾ ಲಸಿಕೆ ಖರೀದಿಸಿ, ರಾಜ್ಯಗಳಿಗೆ ನೀಡಲಾಗುತ್ತದೆ. ಲಸಿಕೆಗಾಗಿ ರಾಜ್ಯಗಳು ಹಣ ನೀಡುವಂತಿಲ್ಲ. ಈ ಸಂಬಂಧ ಶೀಘ್ರವೇ ಮಾರ್ಗಸೂಚಿ ಪ್ರಕಟಿಸಲಾಗುವುದು.

    ಖಾಸಗಿ ಆಸ್ಪತ್ರೆಗಳಿಗೆ ಶೇ.25ರಷ್ಟು ಖರೀದಿ ನಿಯಮದಲ್ಲಿ ಬದಲಾವಣೆ ಇಲ್ಲ. ಖಾಸಗಿ ಆಸ್ಪತ್ರೆಗಳು 125 ರೂ.ಗಿಂತ ಹೆಚ್ಚಿನ ಸರ್ವಿಸ್ ಚಾರ್ಜ್ ಪಡೆಯುವಂತಿಲ್ಲ. ಕೋವಿನ್ ಆ್ಯಪ್ ಬಗ್ಗೆ ವಿಶ್ವದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಅವರೂ ಸಹ ನಮ್ಮ ಮಾದರಿಯಲ್ಲಿಯೇ ಲಸಿಕೆ ವಿತರಣೆ ಮಾಡಲು ಮುಂದಾಗಿವೆ ಎಂದು ತಿಳಿಸಿದರು.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಎಂಟು ತಿಂಗಳು ಉಚಿತವಾಗಿ ನೀಡಲಾಗಿತ್ತು. ಕೊರೊನಾ ಎರಡನೇ ಅಲೆ ಆರಂಭದಲ್ಲಿ ಏಪ್ರಿಲ್ ಮತ್ತು ಮೇನಲ್ಲಿ ಉಚಿತ ಪಡಿತರ ನೀಡಲಾಗಿತ್ತು. ಈಗ ಈ ಯೋಜನೆಯಲ್ಲಿ ದೀಪಾವಳಿವರೆಗೂ ಅಂದ್ರೆ ನವೆಂಬರ್ ವರೆಗೂ ಉಚಿತ ಪಡಿತರ ಲಭ್ಯವಾಗಲಿದೆ.

    ಕೊರೊನಾಗೆ ಸಂಬಂಧಿಸಿದಂತೆ ಕೆಲವು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಹಾಗಾಗಿ ಜನತೆ ಎಚ್ಚರದಿಂದ ಇರಬೇಕು. ಕೊರೊನಾ ಸಂಖ್ಯೆ ಇಳಿಕೆಯಾದ್ರೂ ಎಚ್ಚರಿಕೆಯಿಂದ ಇರಬೇಕು ಎಂದು ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡರು.

  • ನಿಖಿಲ್ ಕುಮಾರಸ್ವಾಮಿಯಿಂದ ಕೊರೊನಾ ವಾರಿಯರ್ಸ್‍ಗೆ ಗೌರವಧನ ವಿತರಣೆ

    ನಿಖಿಲ್ ಕುಮಾರಸ್ವಾಮಿಯಿಂದ ಕೊರೊನಾ ವಾರಿಯರ್ಸ್‍ಗೆ ಗೌರವಧನ ವಿತರಣೆ

    ಬೆಂಗಳೂರು: ಕೊರೊನಾ ವೈರಸ್‍ನಿಂದ ಸಂಕಷ್ಟದಲ್ಲಿರುವ ಜನರಿಗಾಗಿ ಪ್ರತಿನಿತ್ಯ ಶ್ರಮಪಟ್ಟು ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್‍ಗೆ ನಟ ನಿಖಿಲ್ ಕುಮಾರ್ ಸ್ವಾಮಿ ಸಹಾಯ ಮಾಡಿದ್ದಾರೆ.

    ರಾಮನಗರದ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 430 ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರು, ಸ್ಟಾಫ್ ನರ್ಸ್‍ಗಳಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿಯವರು ಗೌರವಧನ ನೀಡಿ, ನೆಬ್ಯುಲೈಜೇಷನ್ ಮೆಷಿನ್ ವಿತರಿಸುವ ಮೂಲಕ ನೆರವು ನೀಡಿದ್ದಾರೆ. ಇದನ್ನು ಓದಿ:ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಲಾಕ್‍ಡೌನ್ ಮುಂದುವರಿಸಿ- ರಾಜುಗೌಡ

    ಇತ್ತೀಚೆಗೆ ಲಾಕ್‍ಡೌನ್ ವೇಳೆ ನಿಖಿಲ್ ಕುಮಾರಸ್ವಾಮಿಯವರು ರಾಮನಗರದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದರು. ಕೆಲವು ದಿನಗಳ ಹಿಂದೆ ನಿಖಿಲ್ ಕುಮಾರ್ ಸ್ವಾಮಿ ಹಾಗೂ ಅವರ ತಂದೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರಿಗೆ ಕೊರೊನಾ ಸೋಂಕು ಧೃಡಪಟ್ಟಿತ್ತು. ಇದೀಗ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ಸದ್ಯ ನಿಖಿಲ್ ಕುಮಾರಸ್ವಾಮಿ ಸೀತಾರಾಮ ಕಲ್ಯಾಣ ಸಿನಿಮಾದ ನಂತರ ರೈಡರ್ ಸಿನಿಮಾದಲ್ಲಿ ಅಭಿನಯಿಸಿದ್ದು, ಸಿನಿಮಾದ ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಪ್ರತಿ ಚಿತ್ರದಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡುವ ನಿಖಿಲ್ ಈ ಚಿತ್ರದಲ್ಲಿ ಹೇಗೆ ನಟಿಸಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಇದನ್ನು ಓದಿ: ಸಿಎಂ ಬಿಎಸ್‍ವೈಗೆ ಹೈಕಮಾಂಡ್ ಬಿಗ್ ರಿಲೀಫ್ – ಸಕ್ರಿಯರಲ್ಲದ ಸಚಿವರಿಗೆ ಕೊಕ್ ಸಾಧ್ಯತೆ

  • ಕೊರೊನಾ ವಾರಿಯರ್ಸ್‌ಗೆ ಸಚಿವ ಪ್ರಭು ಚವ್ಹಾಣ್ ಸನ್ಮಾನ

    ಕೊರೊನಾ ವಾರಿಯರ್ಸ್‌ಗೆ ಸಚಿವ ಪ್ರಭು ಚವ್ಹಾಣ್ ಸನ್ಮಾನ

    ಬೀದರ್: ಚಿಟಗುಪ್ಪಾ ತಾಲ್ಲೂಕಿಗೆ ಭೇಟಿ ನೀಡಿ ಅಲ್ಲಿನ ಕೊರೊನಾ ಕೊರೊನಾ ವಾರಿಯರ್ಸ್‌ಗೆ ಸಚಿವ ಸನ್ಮಾನ ಪ್ರಭು ಚವ್ಹಾಣ್ ಸನ್ಮಾನ ಮಡಿದ್ದಾರೆ.

    ವೈದ್ಯಾಧಿಕಾರಿಗಳು, ಶುಶ್ರೂಷಕರು, ಡಾಟಾ ಎಂಟ್ರಿ ಆಪರೇಟರ್, ಲ್ಯಾಬ್ ಟೆಕ್ನಿಷಿಯನ್, ಪೊಲೀಸ್, ಕಂದಾಯ ಇಲಾಖೆಯ ಕೊರೊನಾ ವಾರಿಯರ್ಸ್ ಸೇರಿದಂತೆ ಒಟ್ಟು 64 ಜನರಿಗೆ ಸಚಿವರು ಶಾಲು ಹೋದಿಸಿ,ಗೌರವಿಸಲಾಗಿದೆ. ಇದನ್ನೂ ಓದಿ:  ವೈದ್ಯರ ಸಲಹೆ ಮೇರೆಗೆ ಸಿದ್ದರಾಮಯ್ಯ 2 ದಿನ ಆಸ್ಪತ್ರೆಗೆ ದಾಖಲು

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಳೆದ ವರ್ಷ 2020ರಲ್ಲಿ ಒಕ್ಕರಿಸಿದ ಕೊರೊನಾ ವೈರಸ್ ಜನರಲ್ಲಿ ಸಾಕಷ್ಟು ಆತಂಕವನ್ನು ಸೃಷ್ಟಿಸಿದೆ. ಅದೇ ರೀತಿ ಈ ವರ್ಷವು ಕೂಡ 2ನೇ ಅಲೆಯ ರೂಪದಲ್ಲಿ ಜನರನ್ನು ಕಾಡುತ್ತಿದೆ. ಈ ಕೊರೊನಾ ವೈರಸ್ ಮಹಾಮಾರಿಯಿಂದಾಗಿ ನಾವು ಕೆಲವರನ್ನು ಕಳೆದುಕೊಂಡಿದ್ದೇವೆ. ಈ ವೈರಸ್‍ನ್ನು ನಿಯಂತ್ರಿಸಲು ಜಿಲ್ಲಾಡಳಿತ, ತಾಲೂಕಾ ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಬಹಳಷ್ಟು ಇಲಾಖೆಗಳು ಮಂಚೂಣಿಯಲ್ಲಿ ನಿಂತು ಕೆಲಸ ಮಾಡಿವೆ ಎಂದಿದ್ದಾರೆ.

    ತಮ್ಮ ಜೀವಕ್ಕೆ ಹೆದರದೆ ಕೊರೊನಾ ಸೋಂಕಿತರ ಸೇವೆ ಮಾಡಿದ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಗೆ ಗೌರವಿಸಿ ನಾವು ಅವರನ್ನು ಕೊರೊನಾ ವಾರಿಯರ್ಸ್ ಎಂದು ಸನ್ಮಾನ ಮಾಡುತ್ತಿದ್ದೇವೆ ಎಂದು ಪ್ರಭು ಚವ್ಹಾಣ್ ತಿಳಿಸಿದರು.

    ಹುಮ್ನಬಾದ್ ಶಾಸಕರಾದ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಬಿಜೆಪಿ ಮುಖಂಡರಾದ ಸುಭಾಷ್ ಕಲ್ಲೂರ ಹಾಗೂ ಪುರಸಭೆಯ ಅಧಿಕಾರಿಗಳು,ತಹಸೀಲ್ದಾರರು ಸೇರಿದಂತೆ ಇನ್ನೀತರರು ಉಪಸ್ಥಿತಿ ಇದ್ದರು.

  • ಸತೀಶ್ ಜಾರಕಿಹೊಳಿ ಹುಟ್ಟುಹಬ್ಬ- 10 ಸಾವಿರ ಮಾಸ್ಕ್, ಸ್ಯಾನಿಟೈಸರ್ ವಿತರಣೆ

    ಸತೀಶ್ ಜಾರಕಿಹೊಳಿ ಹುಟ್ಟುಹಬ್ಬ- 10 ಸಾವಿರ ಮಾಸ್ಕ್, ಸ್ಯಾನಿಟೈಸರ್ ವಿತರಣೆ

    ಬೆಳಗಾವಿ: ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಜನ್ಮದಿನದ ನಿಮಿತ್ತ ಇಂದು ಜಾರಕಿಹೊಳಿ ಬೆಂಬಲಿಗರು ತಾಲೂಕಿನ ಕೊರೊನಾ ವಾರಿಯರ್ಸ್‍ಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿದರು.

    ಕೊರೊನಾ ವೇಳೆ ಹಗಲಿರುಳು ಶ್ರಮಿಸುತ್ತಿರುವ ಸತೀಶ್ ಜಾರಕಿಹೊಳಿ ಫೌಂಡೇಶನ್ ಹಾಗೂ ಸತೀಶ್ ಶುಗರ್ಸ್ ವತಿಯಿಂದ ಕೊರೊನಾ ವಾರಿಯರ್ಸ್‍ಗಳಾದ ಪೊಲೀಸ್ ಇಲಾಖೆ ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಬೆಂಬಲಿಗರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ಕರೆದೊಯ್ದ ಪುತ್ರ ಯತೀಂದ್ರ

    ಈ ವೇಳೆ ಮಾತನಾಡಿದ ಜಾರಕಿಹೊಳಿ ಆಪ್ತ ಸಹಾಯಕ ಕಿರಣ ರಜಪೂತ, ಸತೀಶ್ ಜಾರಕಿಹೊಳಿ ಅವರ ಜನ್ಮದಿನದ ಅಂಗವಾಗಿ ಜಿಲ್ಲೆಯಾದ್ಯಂತ ಕೊರೊನಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ವಾರಿಯರ್ಸ್‍ಗಳಿಗೆ ಜಿಲ್ಲೆಯಾದ್ಯಂತ ಸೂಮಾರು 10 ಸಾವಿರಾರ ಸ್ಯಾನಿಟೈಸರ್ 10 ಸಾವಿರ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ. ಇದಲ್ಲದೇ ಸತೀಶ್ ಜಾರಕಿಹೊಳಿ ಫೌಂಡೇಶನ್ ಹಾಗೂ ಸತೀಶ್ ಶುಗರ್ಸ್ ತಾಲೂಕಿನಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳನ್ನು ಆಯಾ ಧರ್ಮದ ಅನುಸಾರ ಸರಕಾರದ ನಿಯಮದ ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ ಎಂದು ಹೆಳಿದರು. ಇದನ್ನೂ ಓದಿ: ನಾವು ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡಲ್ಲ: ಡಿಕೆಶಿ

    ಈ ಸಂಧರ್ಭದಲ್ಲಿ ಯಮಕನಮರಡಿ ಬ್ಲಾಕ್ ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ ವಿನಯ ಪಾಟೀಲ, ಇಲಿಯಾಸ ಇನಾಮದಾರ, ಅಕ್ಷಯ ವಿರಮುಖ, ಸಂಜು ಗಂಡ್ರಾಳಿ, ಜಿ.ಪಂ ಸದಸ್ಯ ಮಹಾಂತೇಶ ಮಗದುಮ್ಮ ಸೇರಿದಂತೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಇದ್ದರು.

  • ಕೊರೊನಾ ವಾರಿಯರ್ಸ್‍ಗೆ ಚಿಕನ್ ಬಿರಿಯಾನಿ ವಿತರಿಸಿದ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ

    ಕೊರೊನಾ ವಾರಿಯರ್ಸ್‍ಗೆ ಚಿಕನ್ ಬಿರಿಯಾನಿ ವಿತರಿಸಿದ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ

    ಚಿಕ್ಕಬಳ್ಳಾಪುರ: ನಗರದಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲಿ ವಾರಿಯರ್ಸ್ ಆಗಿ ಸೇವೆ ಮಾಡುತ್ತಿರುವವರಿಗೆ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ ಗಜೇಂದ್ರ ದಂಪತಿಗಳು ಇಂದು ಬಿರಿಯಾನಿ ಮಾಡಿ ವಿತರಿಸಿದ್ದಾರೆ.

    ಚಿಕ್ಕಬಳ್ಳಾಪುರದ ನಾಲ್ಕನೇ ವಾರ್ಡ್ ಸದಸ್ಯರಾಗಿರುವ ಗಜೇಂದ್ರರವರು ಕಳೆದೆರೆಡು ದಿನಗಳಿಂದ ಪೊಲೀಸರು, ಹೋಂ ಗಾಡ್ರ್ಸ್, ನಗರಸಭೆ ಹಾಗೂ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವವರಿಗೆ ಉಚಿತವಾಗಿ ಊಟ, ತಿಂಡಿ ಕೊಡುವ ಕೆಲಸ ಮಾಡುತ್ತಿದ್ದಾರೆ.

    ಇಂದು ವಿಶೇಷವಾಗಿ ಚಿಕನ್ ಬಿರಿಯಾನಿ ವಿತರಿಸಿ ಸಂಕಷ್ಟದ ದಿನಗಳಲ್ಲಿ ಸಮಾಜಕ್ಕಾಗಿ ಸೇವೆ ಸಲ್ಲಿಸುವ ವಾರಿಯರ್ಸ್‍ಗೆ ಜನ ಕೈಲಾದ ಸಹಾಯ ಮಾಡಬೇಕು. ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಜನ ಸಹಕರಿಸಬೇಕೆಂದು ಮನವಿ ಮಾಡಿದರು. ಪ್ರತಿ ದಿನ ತಮ್ಮ ಮನೆ ಬಳಿಯೇ ಅಡುಗೆ ತಯಾರಿ ಮಾಡಿ ಪ್ಯಾಕ್ ಮಾಡಿ ನಗರದಲ್ಲಿ ಸಂಚಾರ ಮಾಡಿ ಆಸ್ಪತ್ರೆ, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದವರಿಗೆ ಊಟ ವಿತರಣೆ ಮಾಡುತ್ತಿದ್ದಾರೆ.

  • ಸ್ವರ್ಣ ಸಮೂಹ ಸಂಸ್ಥೆಯಿಂದ ಪೊಲೀಸರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

    ಸ್ವರ್ಣ ಸಮೂಹ ಸಂಸ್ಥೆಯಿಂದ ಪೊಲೀಸರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

    ಹುಬ್ಬಳ್ಳಿ: ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಫ್ರಂಟ್ ಲೈನ್ ವಾರಿಯರ್ಸ್‍ಗಳಾಗಿರುವ ಪೊಲೀಸ್ ಇಲಾಖೆಗೆ ಸ್ವರ್ಣ ಉದ್ಯಮ ಸಮೂಹ ಸಂಸ್ಥೆಯು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಾಕ್ಸ್ ಗಳನ್ನ ದೇಣಿಗೆಯಾಗಿ ನೀಡಿ ಸಾಮಾಜಿಕ ಕಾರ್ಯ ಕೈಗೊಂಡಿದೆ.

    ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ ಪ್ರಸಾದ್ ಅವರು 2100 ಮಾಸ್ಕ್ ಮತ್ತು 2100 ಸ್ಯಾನಿಟೈಸರ್ ಬಾಕ್ಸ್ ಗಳನ್ನು ವಿತರಣೆ ಮಾಡುವ ಮೂಲಕ ಪೊಲೀಸ್ ಸಿಬ್ಬಂದಿಗೆ ನೆರವು ನೀಡಿದ್ದಾರೆ.

    ನವನಗರದಲ್ಲಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಡಿಸಿಪಿ ಕೆ. ರಾಮರಾಜನ್ ಅವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಾಕ್ಸ್ ದೇಣಿಗೆಯಾಗಿ ನೀಡಿದ ವಿ.ಎಸ್.ವಿ ಪ್ರಸಾದ್ ಕೋವಿಡ್ ನಿರ್ಮೂಲನೆಯಾಗುವವರೆಗೂ ಪೊಲೀಸ್ ಇಲಾಖೆಗೆ ಇನ್ನೂ ಹೆಚ್ಚಿನ ಸಹಾಯ ಸಹಕಾರ ನೀಡುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಕೊರೊನಾ ಕಷ್ಟಕಾಲದಲ್ಲಿ ಸ್ವರ್ಣ ಸಮೂಹ ಸಂಸ್ಥೆಯೊಂದು ಸಾಮಾಜಿಕ ಕಾರ್ಯ ಕೈಗೊಂಡಿರುವುದು ಪೊಲೀಸ್ ಸಿಬ್ಬಂದಿಯ ಮೆಚ್ಚುಗೆಗೆ ಪಾತ್ರವಾಗಿದೆ.