Tag: ಕೊರೊನಾ ವರದಿ

  • ರಾಜ್ಯದಲ್ಲಿಂದು 46,426 ಮಂದಿಗೆ ಕೊರೊನಾ, 32 ಸಾವು – ಬೆಂಗಳೂರಿನಲ್ಲಿ 21,569 ಪ್ರಕರಣ ದೃಢ

    ರಾಜ್ಯದಲ್ಲಿಂದು 46,426 ಮಂದಿಗೆ ಕೊರೊನಾ, 32 ಸಾವು – ಬೆಂಗಳೂರಿನಲ್ಲಿ 21,569 ಪ್ರಕರಣ ದೃಢ

    ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 46,426 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಅವಧಿಯಲ್ಲಿ ಸೋಂಕಿನಿಂದಾಗಿ 32 ಮೃತಪಟ್ಟಿದ್ದಾರೆ.

    ರಾಜ್ಯದಲ್ಲಿ ಇಂದು 41,703 ಮಂದಿ ಸೇರಿದಂತೆ ಈವರೆಗೆ 31,62,977 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು 3,62,487 ಇದೆ. ಸೋಂಕಿನಿಂದಾಗಿ ಇದುವರೆಗೆ 38,614 ಮಂದಿ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ವಿಷ ಕೊಟ್ಬಿಡ್ರಿ ಆದ್ರೆ ಲಸಿಕೆ ಮಾತ್ರ ಬೇಡ: ಆರೋಗ್ಯ ಸಿಬ್ಬಂದಿಗೆ ಮಹಿಳೆ ಖಡಕ್‌ ಮಾತು

    ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 21,569 ಕೋವಿಡ್‌ ಪ್ರಕರಣ ವರದಿಯಾಗಿದೆ. ಮೈಸೂರಿನಲ್ಲಿ 4,105 ಮಂದಿಗೆ ಸೋಂಕು ತಗುಲಿದೆ. ಇಂದು ಏಳು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 1 ಸಾವಿರದ ಗಡಿ ದಾಟಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 291, ಬಳ್ಳಾರಿ 817, ಬೆಳಗಾವಿ 625, ಬೆಂಗಳೂರು ಗ್ರಾಮಾಂತರ 1,607, ಬೆಂಗಳೂರು ನಗರ 21,569, ಬೀದರ್ 284, ಚಾಮರಾಜನಗರ 656, ಚಿಕ್ಕಬಳ್ಳಾಪುರ 905, ಚಿಕ್ಕಮಗಳೂರು 144, ಚಿತ್ರದುರ್ಗ 642, ದಕ್ಷಿಣ ಕನ್ನಡ 655, ದಾವಣಗೆರೆ 467, ಧಾರವಾಡ 1,407, ಗದಗ 257, ಹಾಸನ 1,908, ಹಾವೇರಿ 304, ಕಲಬುರಗಿ 379, ಕೊಡಗು 657, ಕೋಲಾರ 661, ಕೊಪ್ಪಳ 525, ಮಂಡ್ಯ 1,837, ಮೈಸೂರು 4,105, ರಾಯಚೂರು 281, ರಾಮನಗರ 288, ಶಿವಮೊಗ್ಗ 537, ತುಮಕೂರು 2,960, ಉಡುಪಿ 677, ಉತ್ತರ ಕನ್ನಡ 626, ವಿಜಯಪುರ 270 ಮತ್ತು ಯಾದಗಿರಿಯಲ್ಲಿ 85 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರತದಲ್ಲಿ ಮುಂಬರುವ ವಾರಗಳಲ್ಲಿ ಓಮಿಕ್ರಾನ್ ಅಲೆ ತೀವ್ರಗೊಳ್ಳಬಹುದು ಎಂದ ತಜ್ಞರು!

  • ಪತ್ನಿಯಿಂದ ದೂರವಿರಲು ಕೋವಿಡ್ ಪಾಸಿಟಿವ್ ನಕಲಿ ವರದಿ ಮನೆಗೆ ಕಳಿಸಿದ

    ಪತ್ನಿಯಿಂದ ದೂರವಿರಲು ಕೋವಿಡ್ ಪಾಸಿಟಿವ್ ನಕಲಿ ವರದಿ ಮನೆಗೆ ಕಳಿಸಿದ

    ಇಂದೋರ್: ಪತ್ನಿಯಿಂದ ದೂರವಿರಲು 26 ವರ್ಷದ ವ್ಯಕ್ತಿ ಭರ್ಜರಿ ನಾಟಕವಾಡಿದ್ದು, ತನಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಕೋವಿಡ್ ಪಾಸಿಟಿವ್ ರಿಪೋರ್ಟ್ ಮನೆಗೆ ಕಳುಹಿಸಿದ್ದಾನೆ.

    ಮಧ್ಯ ಪ್ರದೇಶದ ಮಹೌ ನಿವಾಸಿ ಇದೇ ವರ್ಷ ಫೆಬ್ರವರಿಯಲ್ಲಿ ವಿವಾಹವಾಗಿದ್ದು, ವೈಯಕ್ತಿಕ ಕಾರಣಗಳಿಂದಾಗಿ ತನ್ನ ಪತ್ನಿಯೊಂದಿಗೆ ದೂರವಿರಲು ಬಯಸಿದ್ದಾನೆ. ಹೀಗಾಗಿ ಪತ್ನಿಯಿಂದ ದೂರವಿರಲು ಕೊರೊನಾ ಪಾಸಿಟಿವ್ ನಾಟಕವಾಡಿದ್ದಾನೆ. ಖಾಸಗಿ ಆಸ್ಪತ್ರೆಯ ವೆಬ್‍ಸೈಟ್ ಮೂಲಕ ಬೇರೆ ವ್ಯಕ್ತಿಯ ಕೊರೊನಾ ಪಾಸಿಟಿವ್ ರಿಪೋರ್ಟ್ ಡೌನ್‍ಲೋಡ್ ಮಾಡಿಕೊಂಡು, ಅದಕ್ಕೆ ತನ್ನ ಹೆಸರನ್ನು ಸೇರಿಸಿದ್ದಾನೆ ಎಂದು ಛೋಟಿ ಗ್ವಾಲ್‍ಟೋಲಿ ಪೊಲೀಸ್ ಠಾಣೆಯ ಇನ್‍ಚಾರ್ಜ್ ಸಂಜಯ್ ಶುಕ್ಲಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

    ತನ್ನ ಕೊರೊನಾ ಪಾಸಿಟಿವ್ ನಕಲಿ ವರದಿಯನ್ನು ಕುಟುಂಸ್ಥರಿಗೆ ಕಳುಹಿಸಿದ್ದು, ಬಳಿಕ ಮನೆಯಿಂದ ನಾಪತ್ತೆಯಾಗಿದ್ದಾನೆ. ವ್ಯಕ್ತಿಗೆ ಕೊರೊನಾ ಲಕ್ಷಣಗಳು ಇರಲಿಲ್ಲ, ಪಾಸಿಟಿವ್ ಆಗಲು ಹೇಗೆ ಸಾಧ್ಯ ಎಂದು ಮನೆಯವರಿಗೆ ಅನುಮಾನ ಮೂಡಿದೆ.

    ವಾಟ್ಸಪ್ ಮೂಲಕ ತನ್ನ ತಂದೆ ಹಾಗೂ ಪತ್ನಿಗೆ ವ್ಯಕ್ತಿ ನಕಲಿ ರಿಪೋರ್ಟ್ ಕಳುಹಿಸಿ, ನಾಪತ್ತೆಯಾಗಿದ್ದಾನೆ. ವ್ಯಕ್ತಿಗೆ ಯಾವುದೇ ರೀತಿಯ ಕೊರೊನಾ ಲಕ್ಷಣಗಳು ಇರಲಿಲ್ಲ. ಹೀಗಾಗಿ ಕುಟುಂಬಸ್ಥರಿಗೆ ಅನುಮಾನ ಮೂಡಿದ್ದು, ತಕ್ಷಣವೇ ಖಾಸಗಿ ಲ್ಯಾಬರೋಟರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದು, ಈ ವೇಳೆ ಕೊರೊನಾ ಪಾಸಿಟಿವ್ ಕುರಿತು ನಕಲಿ ವರದಿ ಪಡೆದಿರುವುದು ತಿಳಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಲ್ಯಾಬರೋಟರಿಯವರು ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದು, ಬಳಿಕ ಸುಳ್ಳು ದಾಖಲೆ ಸೃಷ್ಟಿ ಸೇರಿದಂತೆ ಸಂಬಂಧಿಸಿದ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ದೃಷ್ಟಿಯಿಂದ ಪೊಲೀಸರ ಮುಂದೆ ಹಾಜರಾಗುವಂತೆ ವ್ಯಕ್ತಿಗೆ ಈಗಾಗಲೇ ನೋಟಿಸ್ ಕಳುಹಿಸಲಾಗಿದೆ ಎಂದು ಶುಕ್ಲ ಅವರು ತಿಳಿಸಿದ್ದಾರೆ.

  • ದೇಶದಲ್ಲಿ 44 ದಿನಗಳಲ್ಲಿ ಅತೀ ಕಡಿಮೆ ಕೊರೊನಾ ಪ್ರಕರಣ ದಾಖಲು- 1,86,364 ಹೊಸ ಕೇಸ್, 2,59,459 ಡಿಸ್ಚಾರ್ಜ್

    ದೇಶದಲ್ಲಿ 44 ದಿನಗಳಲ್ಲಿ ಅತೀ ಕಡಿಮೆ ಕೊರೊನಾ ಪ್ರಕರಣ ದಾಖಲು- 1,86,364 ಹೊಸ ಕೇಸ್, 2,59,459 ಡಿಸ್ಚಾರ್ಜ್

    ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 1,86,364 ಹೊಸ ಪ್ರಕರಣಗಳು ವರದಿಯಾಗಿವೆ. 3,660 ಜನ ಕೊರೊನಾಗೆ ಬಲಿಯಾಗಿದ್ದು, 2,59,459 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

    ಕಳೆದ 44 ದಿನಗಳಲ್ಲಿ ಅತ್ಯಂತ ಕಡಿಮೆ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 23,43,152ಕ್ಕೆ ಇಳಿಕೆಯಾಗಿದೆ. ಅಲ್ಲದೆ ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 76,755ಕ್ಕೆ ಇಳಿಕೆಯಾಗಿದೆ.

    ಕಳೆದ 24 ಗಂಟೆಗಳಲ್ಲಿ 2,59,459 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು 2,48,93,410 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.90.34ಕ್ಕೆ ಹೆಚ್ಚಳವಾಗಿದೆ. ವಾರದ ಪಾಸಿಟಿವ್ ಶೇ.10.42 ಹಾಗೂ ದಿನದ ಪಾಸಿಟಿವ್ ರೇಟ್ ಶೇ.9ರಷ್ಟಿದೆ. ಕಳೆದ ನಾಲ್ಕು ದಿನಗಳಿಂದ ದಿನದ ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಹೆಚ್ಚಾಗಿಲ್ಲ.

    ಈ ವರೆಗೆ 2,75,55,457 ಕೊರೊನಾ ಕೇಸ್ ಪತ್ತೆಯಾಗಿದ್ದು, ಒಟ್ಟು 3,18,895 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ವರೆಗೆ ಒಟ್ಟು 20.57 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ನಿನ್ನೆ 20,70,508 ಕೊರೊನಾ ಪರೋಕ್ಷೆ ನಡೆಸಲಾಗಿದೆ. ಈ ವರೆಗೆ 33,90,39,861 ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

  • ಇಂದು 26,811 ಪಾಸಿಟಿವ್, 530 ಸಾವು – 40,741 ಡಿಸ್ಚಾರ್ಜ್

    ಇಂದು 26,811 ಪಾಸಿಟಿವ್, 530 ಸಾವು – 40,741 ಡಿಸ್ಚಾರ್ಜ್

    – ಬೆಂಗಳೂರಿನಲ್ಲಿ 6,433 ಕೇಸ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಕರ್ನಾಟಕದಲ್ಲಿ ಇಂದು 26,811 ಮಂದಿಗೆ ಸೋಂಕು ತಗುಲಿದ್ದು, 530 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. 40,741 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಇಲ್ಲಿಯವರೆಗೆ ರಾಜ್ಯದಲ್ಲಿ 24,997,84 ಮಂದಿಗೆ ಕೊರೊನಾ ಬಂದಿದ್ದು, ಈ ಪೈಕಿ ಒಟ್ಟು 20,62,910 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,09,924ಕ್ಕೆ ತಲುಪಿದೆ.

    ಇಂದು 530 ಜನ ಕೊರೊನಾಗೆ ಬಲಿಯಾಗಿದ್ದು, ಈ ವರೆಗೆ ರಾಜ್ಯದಲ್ಲಿ ಒಟ್ಟು 26,929 ಜನ ಸಾವನ್ನಪ್ಪಿದ್ದಾರೆ. ಇಂದು 40,741 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.19.48ರಷ್ಟಿದ್ದು, ಮೃತರ ಪ್ರಮಾಣ ಶೇ.1.97ರಷ್ಟಿದೆ.

    ಇಂದು 28,077 ಆಂಟಿಜನ್ ಟೆಸ್ಟ್, 1,09,507  ಆರ್‌ಟಿ-ಪಿಸಿಆರ್ ಸೇರಿದಂತೆ ಒಟ್ಟು 1,37,584 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 1,27,317 ಮಂದಿಗೆ ಲಸಿಕೆ ನೀಡಲಾಗಿದೆ.

    ಬೆಂಗಳೂರಿನಲ್ಲಿ 6,433 ಮಂದಿಗೆ ಕೊರೊನಾ ದೃಢಪಟ್ಟಿದ್ದು, 285 ಜನ ಸಾವನ್ನಪ್ಪಿದ್ದಾರೆ. 2,07,357 ಸಕ್ರಿಯ ಪ್ರಕರಣಗಳಿವೆ. ಮೈಸೂರು 2,792, ಹಾಸನ 1,471, ತುಮಕೂರು 1,399, ದಾವಣಗೆರೆ 1,309, ಬೆಳಗಾವಿ 1,205 ಪ್ರಕರಣಗಳು ವರದಿಯಾಗಿವೆ.

  • 22,758 ಪಾಸಿಟಿವ್, 588 ಸಾವು – 38,224 ಡಿಸ್ಚಾರ್ಜ್

    22,758 ಪಾಸಿಟಿವ್, 588 ಸಾವು – 38,224 ಡಿಸ್ಚಾರ್ಜ್

    – ಬೆಂಗಳೂರಿನಲ್ಲಿ 5,701 ಕೇಸ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಕರ್ನಾಟಕದಲ್ಲಿ ಇಂದು 22,758 ಮಂದಿಗೆ ಸೋಂಕು ತಗುಲಿದ್ದು, 588 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. 38,224 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಇಲ್ಲಿಯವರೆಗೆ ರಾಜ್ಯದಲ್ಲಿ 24,729,73 ಮಂದಿಗೆ ಕೊರೊನಾ ಬಂದಿದ್ದು, ಈ ಪೈಕಿ ಒಟ್ಟು 20,22,172 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,24,381ಕ್ಕೆ ತಲುಪಿದೆ.

    ಇಂದು 588 ಜನ ಕೊರೊನಾಗೆ ಬಲಿಯಾಗಿದ್ದು, ಈ ವರೆಗೆ ರಾಜ್ಯದಲ್ಲಿ ಒಟ್ಟು 26,399 ಜನ ಸಾವನ್ನಪ್ಪಿದ್ದಾರೆ. ಇಂದು 38,224 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.21.13ರಷ್ಟಿದ್ದು, ಮೃತರ ಪ್ರಮಾಣ ಶೇ.2.58ರಷ್ಟಿದೆ. ಏಪ್ರಿಲ್ ತಿಂಗಳಿನಲ್ಲಿ ಮೃತಪಟ್ಟವರ ವಿವರಗಳು ತಡವಾಗಿ ಬೆಳಕಿಗೆ ಬರುತ್ತಿರುವ ಕಾರಣ ಈಗ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ.

    ಇಂದು 26,266 ಆಂಟಿಜನ್ ಟೆಸ್ಟ್, 81,409 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟು 1,07,675 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 64,156 ಮಂದಿಗೆ ಲಸಿಕೆ ನೀಡಲಾಗಿದೆ.

    ಬೆಂಗಳೂರಿನಲ್ಲಿ 6,243 ಮಂದಿಗೆ ಕೊರೊನಾ ದೃಢಪಟ್ಟಿದ್ದು, 350 ಜನ ಸಾವನ್ನಪ್ಪಿದ್ದಾರೆ. ಇನ್ನೂ 2,19,551 ಸಕ್ರಿಯ ಪ್ರಕರಣಗಳಿವೆ. ಮೈಸೂರು 2,241, ಹಾಸನ 1,285, ತುಮಕೂರು 1,312, ಬೆಳಗಾವಿ 1,260 ಪ್ರಕರಣಗಳು ವರದಿಯಾಗಿವೆ.

  • 25,311 ಪಾಸಿಟಿವ್, 529 ಸಾವು – 57,333 ಡಿಸ್ಚಾರ್ಚ್

    25,311 ಪಾಸಿಟಿವ್, 529 ಸಾವು – 57,333 ಡಿಸ್ಚಾರ್ಚ್

    – ಬೆಂಗಳೂರಿನಲ್ಲಿ 5,701 ಕೇಸ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಕರ್ನಾಟಕದಲ್ಲಿ ಇಂದು 25,311 ಮಂದಿಗೆ ಸೋಂಕು ತಗುಲಿದ್ದು, 529 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. 57,333 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಇಲ್ಲಿಯವರೆಗೆ ರಾಜ್ಯದಲ್ಲಿ 24,50,215 ಮಂದಿಗೆ ಕೊರೊನಾ ಬಂದಿದ್ದು, ಈ ಪೈಕಿ ಒಟ್ಟು 19,83,948 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,40,435ಕ್ಕೆ ತಲುಪಿದೆ.

    ಇಂದು 529 ಜನ ಕೊರೊನಾಗೆ ಬಲಿಯಾಗಿದ್ದು, ಈ ವರೆಗೆ ರಾಜ್ಯದಲ್ಲಿ ಒಟ್ಟು 25,811 ಜನ ಸಾವನ್ನಪ್ಪಿದ್ದಾರೆ. ಇಂದು 57,333 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.23.28ರಷ್ಟಿದ್ದು, ಮೃತರ ಪ್ರಮಾಣ ಶೇ.2.09ರಷ್ಟಿದೆ. ಏಪ್ರಿಲ್ ತಿಂಗಳಿನಲ್ಲಿ ಮೃತಪಟ್ಟವರ ವಿವರಗಳು ತಡವಾಗಿ ಬೆಳಕಿಗೆ ಬರುತ್ತಿರುವ ಕಾರಣ ಈಗ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ.

    ಇಂದು 14,275 ಆಂಟಿಜನ್ ಟೆಸ್ಟ್, 94,448 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟು 1,08,723 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 1,07,562 ಮಂದಿಗೆ ಲಸಿಕೆ ನೀಡಲಾಗಿದೆ.

    ಬೆಂಗಳೂರಿನಲ್ಲಿ 5,701 ಮಂದಿಗೆ ಕೊರೊನಾ ದೃಢಪಟ್ಟಿದ್ದು, 297 ಜನ ಸಾವನ್ನಪ್ಪಿದ್ದಾರೆ. ಇನ್ನೂ 2,26,868 ಸಕ್ರಿಯ ಪ್ರಕರಣಗಳಿವೆ. ಮೈಸೂರು 2,680, ಹಾಸನ 1,156, ತುಮಕೂರು 1,662, ಧಾರವಾಡ 1,058 ಹಾಗೂ ಉತ್ತರ ಕನ್ನಡದಲ್ಲಿ 1,110 ಪ್ರಕರಣಗಳು ವರದಿಯಾಗಿವೆ.

  • ಇಂದು 25,979 ಹೊಸ ಕೇಸ್, 626 ಸಾವು, 35,573 ಡಿಸ್ಚಾರ್ಚ್

    ಇಂದು 25,979 ಹೊಸ ಕೇಸ್, 626 ಸಾವು, 35,573 ಡಿಸ್ಚಾರ್ಚ್

    – ಬೆಂಗಳೂರಿನಲ್ಲಿ 7,494

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಕರ್ನಾಟಕದಲ್ಲಿ ಇಂದು 25,979 ಮಂದಿಗೆ ಸೋಂಕು ತಗುಲಿದ್ದು, 626 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. 35,573 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಇಂದು 25,979 ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 4,72,986ಕ್ಕೆ ತಲುಪಿದೆ. ಇಂದು 626 ಜನ ಕೊರೊನಾಗೆ ಬಲಿಯಾಗಿದ್ದು, ಈ ವರೆಗೆ ಒಟ್ಟು 25,282 ಜನ ಸಾವನ್ನಪ್ಪಿದ್ದಾರೆ. ಈ ವರೆಗೆ ಒಟ್ಟು 24,34,904 ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ.

    ಇಂದು 35,573 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು 19,26,615 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.20.76ರಷ್ಟಿದ್ದು, ಮೃತರ ಪ್ರಮಾಣ ಶೇ.2.40ರಷ್ಟಿದೆ. ಇಂದು 17,848 ಆಂಟಿಜನ್ ಟೆಸ್ಟ್, 1,07,269 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 1,25,117 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 34,360 ಮಂದಿಗೆ ಲಸಿಕೆ ನೀಡಲಾಗಿದೆ.

    ಬೆಂಗಳೂರಿನಲ್ಲಿ 7,494 ಮಂದಿಗೆ ಕೊರೊನಾ ದೃಢಪಟ್ಟಿದ್ದು, 362 ಜನ ಸಾವನ್ನಪ್ಪಿದ್ದಾರೆ. ಇನ್ನೂ 2,55,842 ಸಕ್ರಿಯ ಪ್ರಕರಣಗಳಿವೆ. ಮೈಸೂರು 2,222, ಹಾಸನ 1,618, ತುಮಕೂರು 1,269, ಬಳ್ಳಾರಿ 1,190 ಹಾಗೂ ಬೆಳಗಾವಿಯಲ್ಲಿ 1,066 ಪ್ರಕರಣಗಳು ವರದಿಯಾಗಿವೆ.

  • ರಾಜ್ಯದಲ್ಲಿ ಇಂದು 52,581 ಡಿಸ್ಚಾರ್ಜ್- 32,218 ಹೊಸ ಪ್ರಕರಣ, 353 ಸಾವು

    ರಾಜ್ಯದಲ್ಲಿ ಇಂದು 52,581 ಡಿಸ್ಚಾರ್ಜ್- 32,218 ಹೊಸ ಪ್ರಕರಣ, 353 ಸಾವು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನ ಕಡಿಮೆಯಾಗುತ್ತಿದ್ದು, ಕರ್ನಾಟಕದಲ್ಲಿ ಇಂದು 52,581 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 32,218 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 353 ಜನರನ್ನು ಮಹಾಮಾರಿ ಬಲಿ ಪಡೆದಿದೆ.

    ಇಂದು 32,218 ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 5,14,238ಕ್ಕೆ ಏರಿಕೆಯಾಗಿದ್ದು, ಇಂದು 353 ಜನ ಕೊರೊನಾಗೆ ಬಲಿಯಾಗಿದ್ದು, ಈ ವರೆಗೆ ಒಟ್ಟು 24,207 ಜನ ಸಾವನ್ನಪ್ಪಿದ್ದಾರೆ. ಈ ವರೆಗೆ ಒಟ್ಟು 23,67,742 ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ.

    ಇಂದು 52,581 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು 18,79,276 ಜನ ಈ ವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.24.22ರಷ್ಟಿದ್ದು, ಮೃತರ ಪ್ರಮಾಣ ಶೇ.1.09ರಷ್ಟಿದೆ. ಇಂದು 15,586 ಆಂಟಿಜನ್ ಟೆಸ್ಟ್, 1,17,427 ಆರ್‌ಟಿ-ಪಿಸಿಆರ್ ಸೇರಿದಂತೆ ಒಟ್ಟು 1,33,013 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 81,268 ಮಂದಿಗೆ ಲಸಿಕೆ ನೀಡಲಾಗಿದೆ.

    ಬೆಂಗಳೂರಿನಲ್ಲಿ 9,591 ಮಂದಿಗೆ ಕೊರೊನಾ ದೃಢಪಟ್ಟಿದ್ದು, 129 ಜನ ಸಾವನ್ನಪ್ಪಿದ್ದಾರೆ. ಇನ್ನೂ 2,89,131 ಸಕ್ರಿಯ ಪ್ರಕರಣಗಳಿವೆ. ಮೈಸೂರು 2,355, ಹಾಸನ 2071, ಬಳ್ಳಾರಿ 1,650, ಬೆಳಗಾವಿ 1,138 ಹಾಗೂ ತುಮಕೂರಿನಲ್ಲಿ 1,773 ಪ್ರಕರಣಗಳು ವರದಿಯಾಗಿವೆ.

  • ಇಂದು 52,257 ಡಿಸ್ಚಾರ್ಚ್- 28,869 ಹೊಸ ಪ್ರಕರಣ, 548 ಸಾವು

    ಇಂದು 52,257 ಡಿಸ್ಚಾರ್ಚ್- 28,869 ಹೊಸ ಪ್ರಕರಣ, 548 ಸಾವು

    – ಬೆಂಗಳೂರಿನಲ್ಲಿ 9,409

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಕರ್ನಾಟಕದಲ್ಲಿ ಇಂದು 52,257 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 28,869 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 548 ಜನರನ್ನು ಮಹಾಮಾರಿ ಬಲಿ ಪಡೆದಿದೆ.

    ಇಂದು 28,869 ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 5,34,954ಕ್ಕೆ ಏರಿಕೆಯಾಗಿದ್ದು, ಇಂದು 548 ಜನ ಕೊರೊನಾಗೆ ಬಲಿಯಾಗಿದ್ದು, ಈ ವರೆಗೆ ಒಟ್ಟು 23,854 ಜನ ಸಾವನ್ನಪ್ಪಿದ್ದಾರೆ. ಈ ವರೆಗೆ ಒಟ್ಟು 23,35,524 ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ.

    ಇಂದು 52,257 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು 17,76,695 ಜನ ಈ ವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.23.91ರಷ್ಟಿದ್ದು, ಮೃತರ ಪ್ರಮಾಣ ಶೇ.1.89ರಷ್ಟಿದೆ. ಇಂದು 14,845 ಆಂಟಿಜನ್ ಟೆಸ್ಟ್, 1,05,866 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 1,20,711 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 63,140 ಮಂದಿಗೆ ಲಸಿಕೆ ನೀಡಲಾಗಿದೆ.

    ಬೆಂಗಳೂರಿನಲ್ಲಿ 9,409 ಮಂದಿಗೆ ಕೊರೊನಾ ದೃಢಪಟ್ಟಿದ್ದು, 289 ಜನ ಸಾವನ್ನಪ್ಪಿದ್ದಾರೆ. ಇನ್ನೂ 3,06,625 ಸಕ್ರಿಯ ಪ್ರಕರಣಗಳಿವೆ. ಮೈಸೂರು 1,879, ತುಮಕೂರು 1,796 ಹಾಗೂ ಬಳ್ಳಾರಿಯಲ್ಲಿ 1,109 ಪ್ರಕರಣಗಳು ವರದಿಯಾಗಿವೆ.

  • ಇಂದು ದಾಖಲೆಯ 58,395 ಡಿಸ್ಚಾರ್ಜ್- 30,309 ಹೊಸ ಪ್ರಕರಣ, 525 ಸಾವು

    ಇಂದು ದಾಖಲೆಯ 58,395 ಡಿಸ್ಚಾರ್ಜ್- 30,309 ಹೊಸ ಪ್ರಕರಣ, 525 ಸಾವು

    – ಬೆಂಗಳೂರಿನಲ್ಲಿ 8,676 ಕೇಸ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿಧಾನವಾಗಿ ಇಳಿಕೆಯಾಗುತ್ತಿವೆ. ಕರ್ನಾಟಕದಲ್ಲಿ ಇಂದು 30,309 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 525 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಬೆಂಗಳೂರಿನಲ್ಲಿ 8,676 ಮಂದಿಗೆ ಕೊರೊನಾ ದೃಢಪಟ್ಟಿದ್ದು, 298 ಜನ ಸಾವನ್ನಪ್ಪಿದ್ದಾರೆ.

    ಇಂದು 30,309 ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 5,75,028ಕ್ಕೆ ಏರಿಕೆಯಾಗಿದ್ದು, ಇಂದು 525 ಜನ ಕೊರೊನಾಗೆ ಬಲಿಯಾಗಿದ್ದು, ಈ ವರೆಗೆ ಒಟ್ಟು 22,838 ಜನ ಸಾವನ್ನಪ್ಪಿದ್ದಾರೆ. ಈ ವರೆಗೆ ಒಟ್ಟು 22,72,374 ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ.

    ಇಂದು 58,395 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು 16,74,487 ಜನ ಈ ವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.32.50ರಷ್ಟಿದ್ದು, ಮೃತಪಟ್ಟವರ ಪ್ರಮಾಣ ಶೇ.1.73ರಷ್ಟಿದೆ. ಇಂದು 12,535 ಆಂಟಿಜನ್ ಟೆಸ್ಟ್, 80,712 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 93,247 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 65,181 ಮಂದಿಗೆ ಲಸಿಕೆ ನೀಡಲಾಗಿದೆ.

    ಬೆಳಗಾವಿ 2,118, ಮೈಸೂರು 1,916, ಬಳ್ಳಾರಿ 1,799, ತುಮಕೂರು 1,562, ಬೆಂಗಳೂರು ಗ್ರಾಮಾಂತರ 1,339, ಶಿವಮೊಗ್ಗ 1,168 ಹಾಗೂ ಕೋಲಾರದಲ್ಲಿ 1,021 ಪ್ರಕರಣಗಳು ವರದಿಯಾಗಿವೆ.