Tag: ಕೊರೊನಾ ಲಸಿಕೆ

  • 428 ಹೊಸ ಕೊರೊನಾ ಪ್ರಕರಣ – 30,598 ಜನಕ್ಕೆ ಸಂಜೀವಿನಿ

    428 ಹೊಸ ಕೊರೊನಾ ಪ್ರಕರಣ – 30,598 ಜನಕ್ಕೆ ಸಂಜೀವಿನಿ

    ಬೆಂಗಳೂರು: ಇಂದು ರಾಜ್ಯದಲ್ಲಿ 428 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, ಮೂವರು ಸಾವನ್ನಪ್ಪಿದ್ದಾರೆ. ಇಂದು 30,589 ಜನರು ಕೊರೊನಾ ಲಸಿಕೆಯನ್ನ ಪಡೆದುಕೊಂಡಿದ್ದಾರೆ.

    ಸದ್ಯ 6,298 ಸಕ್ರಿಯ ಪ್ರಕರಣಗಳಿದ್ದು, 147 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು 760 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಕೊರೊನಾಗೆ 12,207 ಜನ ಬಲಿಯಾಗಿದ್ದಾರೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9,37,383ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್ 19 ಸೋಂಕಿನ ಖಚಿತ ಪ್ರಮಾಣ ಶೇ.0.72 ಮತ್ತು ಮರಣ ಪ್ರಮಾಣ ಶೇ.0.70ರಷ್ಟಿದೆ.

    30,598 ಜನಕ್ಕೆ ಸಂಜೀವಿನಿ: ಬಾಗಲಕೋಟೆ 343, ಬಳ್ಳಾರಿ 435, ಬೆಳಗಾವಿ 1,674, ಬೆಂಗಳೂರು ಗ್ರಾಮಾಂತರ 443, ಬೆಂಗಳೂರು ನಗರ 8,514, ಬೀದರ್ 985, ಚಾಮರಾಜನಗರ 543, ಚಿಕ್ಕಬಳ್ಳಾಪುರ 247, ಚಿಕ್ಕಮಗಳೂರು 491, ಚಿತ್ರದುರ್ಗ 169, ದಕ್ಷಿಣ ಕನ್ನಡ 919, ದಾವಣಗೆರೆ 942, ಧಾರವಾಡ 995, ಗದಗ 83, ಹಾಸನ 1,470, ಹಾವೇರಿ 534, ಕಲಬುರಗಿ 708, ಕೊಡಗು 512, ಕೋಲಾರ 675, ಕೊಪ್ಪಳ 618, ಮಂಡ್ಯ 746, ಮೈಸೂರು 1,123, ರಾಯಚೂರು 469, ರಾಮನಗರ 56, ಶಿವಮೊಗ್ಗ 1,213, ತುಮಕೂರು 478, ಉಡುಪಿ 2,009, ಉತ್ತರ ಕನ್ನಡ 2,144, ವಿಜಯಪುರ 352 ಮತ್ತು ಯಾದಗಿರಿಯಲ್ಲಿ 699 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

    ಕೊರೊನಾ ಸಂಖ್ಯೆ: ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 4, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 227, ಬೀದರ್ 2, ಚಾಮರಾಜನಗರ 3, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 6, ಚಿತ್ರದುರ್ಗ 13, ದಕ್ಷಿಣ ಕನ್ನಡ 14, ದಾವಣಗೆರೆ 14, ಧಾರವಾಡ 16, ಗದಗ 1, ಹಾಸನ 15, ಹಾವೇರಿ 0, ಕಲಬುರಗಿ 12, ಕೊಡಗು 14, ಕೋಲಾರ 4, ಕೊಪ್ಪಳ 0, ಮಂಡ್ಯ 8, ಮೈಸೂರು 17, ರಾಯಚೂರು 1, ರಾಮನಗರ 0, ಶಿವಮೊಗ್ಗ 4, ತುಮಕೂರು 10, ಉಡುಪಿ 6, ಉತ್ತರ ಕನ್ನಡ 14, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ರಾಜ್ಯದಲ್ಲಿ 573 ಮಂದಿಗೆ ಕೊರೊನಾ – 401 ಡಿಸ್ಚಾರ್ಜ್, 2,015 ಜನಕ್ಕೆ ಲಸಿಕೆ

    ರಾಜ್ಯದಲ್ಲಿ 573 ಮಂದಿಗೆ ಕೊರೊನಾ – 401 ಡಿಸ್ಚಾರ್ಜ್, 2,015 ಜನಕ್ಕೆ ಲಸಿಕೆ

    ಬೆಂಗಳೂರು: ರಾಜ್ಯದಲ್ಲಿ 573 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 401 ಜನ ಗುಣಮುಖರಾಗಿ ಆಸ್ಪತೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 2,015 ಜನರು ಕೊರೊನಾ ಲಸಿಕೆಯನ್ನ ಪಡೆದುಕೊಂಡಿದ್ದಾರೆ. ಬಳ್ಳಾರಿ 387, ಬೆಂಗಳೂರು ನಗರ 845, ಧಾರವಾಡ 744 ಮತ್ತು ಗದಗನಲ್ಲಿ 39 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ.

    ರಾಜ್ಯದಲ್ಲಿ 7,510 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, 155 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಕೊರೊನಾಗೆ ನಾಲ್ವರು ಮೃತಪಟ್ಟಿದ್ದು, ಸಾವನ್ನಪ್ಪಿದವರ ಸಂಖ್ಯೆ 12,197ಕ್ಕೆ ಏರಿಕೆಯಾಗಿದೆ. ರಾಜ್ಯದಲಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,36,051ಕ್ಕೆ ಏರಿದೆ. ಕೋವಿಡ್ 19 ಸೋಂಕಿನ ಖಚಿತ ಪ್ರಮಾಣ ಶೇ.0.70 ಮತ್ತು ಮರಣ ಪ್ರಮಾಣ ಶೇ.0.69ರಷ್ಟಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 6, ಬೆಳಗಾವಿ 18, ಬೆಂಗಳೂರು ಗ್ರಾಮಾಂತರ 9, ಬೆಂಗಳೂರು ನಗರ 306, ಬೀದರ್ 2, ಚಾಮರಾಜನಗರ 2, ಚಿಕ್ಕಬಳ್ಳಾಪುರ 19, ಚಿಕ್ಕಮಗಳೂರು 4, ಚಿತ್ರದುರ್ಗ 7, ದಕ್ಷಿಣ ಕನ್ನಡ 42, ದಾವಣಗೆರೆ 10, ಧಾರವಾಡ 7, ಗದಗ 5, ಹಾಸನ 15, ಹಾವೇರಿ 3, ಕಲಬುರಗಿ 16, ಕೊಡಗು 5, ಕೋಲಾರ 1, ಕೊಪ್ಪಳ 0, ಮಂಡ್ಯ 5, ಮೈಸೂರು 27, ರಾಯಚೂರು 1, ರಾಮನಗರ 0, ಶಿವಮೊಗ್ಗ 5, ತುಮಕೂರು 31, ಉಡುಪಿ 17, ಉತ್ತರ ಕನ್ನಡ 8, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • 324 ಹೊಸ ಕೊರೊನಾ ಪ್ರಕರಣ – 42,425 ಜನಕ್ಕೆ ಲಸಿಕೆ

    324 ಹೊಸ ಕೊರೊನಾ ಪ್ರಕರಣ – 42,425 ಜನಕ್ಕೆ ಲಸಿಕೆ

    ಬೆಂಗಳೂರು: ರಾಜ್ಯದಲ್ಲಿಂದು 324 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 890 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 42,425 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇಂದು 81,519 ಜನ ಕೊರೊನಾ ಲಸಿಕೆ ಪಡೆದುಕೊಳ್ಳಲು ನೋಂದಣಿ ಮಾಡಿಕೊಂಡಿದ್ದರು. ಆದರೆ ಶೇ.52ರಷ್ಟು ಜನ ಮಾತ್ರ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ.

    ಯಾವ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಲಸಿಕೆ?: ಬಾಗಲಕೋಟೆ 1120, ಬಳ್ಳಾರಿ 1474, ಬೆಳಗಾವಿ 3787, ಬೆಂಗಳೂರು ಗ್ರಾಮಾಂತರ 998, ಬೆಂಗಳೂರು ನಗರ 7771, ಬೀದರ್ 669, ಚಾಮರಾಜನಗರ 368, ಚಿಕ್ಕಬಳ್ಳಾಪುರ 1184, ಚಿಕ್ಕಮಗಳೂರು 850, ಚಿತ್ರದುರ್ಗ 806, ದಕ್ಷಿಣ ಕನ್ನಡ 2081, ದಾವಣಗೆರೆ 2276, ಧಾರವಾಡ 520, ಗದಗ 493, ಹಾಸನ 1528, ಹಾವೇರಿ 334, ಕಲಬುರಗಿ 1100, ಕೊಡಗು 125, ಕೋಲಾರ 1091, ಕೊಪ್ಪಳ 82, ಮಂಡ್ಯ 1396, ಮೈಸೂರು 2084, ರಾಯಚೂರು 1340, ರಾಮನಗರ 670, ಶಿವಮೊಗ್ಗ 1856, ತುಮಕೂರು 2174, ಉಡುಪಿ 1615, ಉತ್ತರ ಕನ್ನಡ 1469, ವಿಜಯಪುರದಲ್ಲಿ 565 ಮತ್ತು ಯಾದಗಿರಿಯಲ್ಲಿ 569 ಜನರಿಗೆ ಲಸಿಕೆ ನೀಡಲಾಗಿದೆ.

    ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,34,576ಕ್ಕೆ ಏರಿಕೆಯಾಗಿದ್ದು, 6,985 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾಗೆ ಮೂವರು ಮೃತಪಟ್ಟಿದ್ದು, ಸಾವನ್ನಪ್ಪಿದರವರ ಸಂಖ್ಯೆ 12,190ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 165 ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.34 ಮತ್ತು ಮರಣ ಪ್ರಮಾಣ ಶೇ.0.92ರಷ್ಟಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 7, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 160, ಬೀದರ್ 1, ಚಾಮರಾಜನಗರ 3, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 9, ಚಿತ್ರದುರ್ಗ 8, ದಕ್ಷಿಣ ಕನ್ನಡ 12, ದಾವಣಗೆರೆ 5, ಧಾರವಾಡ 2, ಗದಗ 4, ಹಾಸನ 6, ಹಾವೇರಿ 0, ಕಲಬುರಗಿ 9, ಕೊಡಗು 5, ಕೋಲಾರ 3, ಕೊಪ್ಪಳ 0, ಮಂಡ್ಯ 3, ಮೈಸೂರು 19, ರಾಯಚೂರು 0, ರಾಮನಗರ 1, ಶಿವಮೊಗ್ಗ 1, ತುಮಕೂರು 18, ಉಡುಪಿ 3, ಉತ್ತರ ಕನ್ನಡ 3, ವಿಜಯಪುರ 3 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • 674 ಹೊಸ ಕೊರೊನಾ ಪ್ರಕರಣ – 14,108 ಜನಕ್ಕೆ ಲಸಿಕೆ

    674 ಹೊಸ ಕೊರೊನಾ ಪ್ರಕರಣ – 14,108 ಜನಕ್ಕೆ ಲಸಿಕೆ

    ಬೆಂಗಳೂರು: ರಾಜ್ಯದಲ್ಲಿಂದು 674 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 815 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 14,108 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇಂದು 32,773 ಜನ ಕೊರೊನಾ ಲಸಿಕೆ ಪಡೆದುಕೊಳ್ಳಲು ನೋಂದಣಿ ಮಾಡಿಕೊಂಡಿದ್ದರು. ಆದರೆ ಶೇ.43ರಷ್ಟು ಜನ ಮಾತ್ರ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ.

    ಯಾವ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಲಸಿಕೆ?: ಬಾಗಲಕೋಟೆ 251, ಬಳ್ಳಾರಿ 114, ಬೆಳಗಾವಿ 4,486, ಬೆಂಗಳೂರು ಗ್ರಾಮಾಂತರ 1000, ಬೆಂಗಳೂರು ನಗರ 11167, ಬೀದರ್ 177, ಚಾಮರಾಜನಗರ 34, ಚಿಕ್ಕಬಳ್ಳಾಪುರ 299, ಚಿಕ್ಕಮಗಳೂರು 394, ಚಿತ್ರದುರ್ಗ 267, ದಕ್ಷಿಣ ಕನ್ನಡ 1189, ದಾವಣಗೆರೆ 329, ಧಾರವಾಡ 286, ಗದಗ 42, ಹಾಸನ 74, ಹಾವೇರಿ 0, ಕಲಬುರಗಿ 23, ಕೊಡಗು 90, ಕೋಲಾರ 412, ಕೊಪ್ಪಳ 25, ಮಂಡ್ಯ 164, ಮೈಸೂರು 664, ರಾಯಚೂರು 69, ರಾಮನಗರ 541, ಶಿವಮೊಗ್ಗ 749, ತುಮಕೂರು 671, ಉಡುಪಿ 720, ಉತ್ತರ ಕನ್ನಡ 0, ವಿಜಯಪುರದಲ್ಲಿ 201 ಮತ್ತು ಯಾದಗಿರಿಯಲ್ಲಿ ಯಾರಿಗೂ ಲಸಿಕೆ ನೀಡಿಲ್ಲ.

    ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,34,252ಕ್ಕೆ ಏರಿಕೆಯಾಗಿದ್ದು, 7,554 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾಗೆ ಇಬ್ಬರು ಮೃತಪಟ್ಟಿದ್ದು, ಸಾವನ್ನಪ್ಪಿದರವರ ಸಂಖ್ಯೆ 12,187ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 171 ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.75 ಮತ್ತು ಮರಣ ಪ್ರಮಾಣ ಶೇ.0.29ರಷ್ಟಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 7, ಬೆಳಗಾವಿ 13, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 371, ಬೀದರ್ 2, ಚಾಮರಾಜನಗರ 1, ಚಿಕ್ಕಬಳ್ಳಾಪುರ 18, ಚಿಕ್ಕಮಗಳೂರು 5, ಚಿತ್ರದುರ್ಗ 6, ದಕ್ಷಿಣ ಕನ್ನಡ 39, ದಾವಣಗೆರೆ 7, ಧಾರವಾಡ 9, ಗದಗ 1, ಹಾಸನ 16, ಹಾವೇರಿ 3, ಕಲಬುರಗಿ 40, ಕೊಡಗು 5, ಕೋಲಾರ 10, ಕೊಪ್ಪಳ 1, ಮಂಡ್ಯ 6, ಮೈಸೂರು 35, ರಾಯಚೂರು 1, ರಾಮನಗರ 2, ಶಿವಮೊಗ್ಗ 17, ತುಮಕೂರು 26, ಉಡುಪಿ 7, ಉತ್ತರ ಕನ್ನಡ 8, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 3 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಎರಡನೇ ಹಂತದಲ್ಲಿ ಪ್ರಧಾನಿ ಮೋದಿ, ಎಲ್ಲ ರಾಜ್ಯಗಳ ಸಿಎಂಗಳಿಗೆ ಲಸಿಕೆ

    ಎರಡನೇ ಹಂತದಲ್ಲಿ ಪ್ರಧಾನಿ ಮೋದಿ, ಎಲ್ಲ ರಾಜ್ಯಗಳ ಸಿಎಂಗಳಿಗೆ ಲಸಿಕೆ

    – 50 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನ್

    ನವದೆಹಲಿ: ಬಹು ದಿನಗಳಿಂದ ಕಾಯುತ್ತಿದ್ದ ಕೊರೊನಾ ಲಸಿಕೆ ಹಂಚಿಕೆ ಕಳೆದ ವಾರ ಆರಂಭವಾಗಿದ್ದು, ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಗೆ ನೀಡಲಾಗುತ್ತಿದೆ. ಆದರೆ ಪ್ರಧಾನಿ ಮೋದಿ ಹಾಗೂ ಜನಪ್ರತಿನಿಧಿಗಳು ಯಾವಾಗ ವ್ಯಾಕ್ಸಿನ್ ಪಡೆಯುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಇದಕ್ಕೆ ಇದೀಗ ಉತ್ತರ ಸಿಕ್ಕಿದೆ.

    ಎರಡನೇ ಹಂತದ ಲಸಿಕೆ ವಿತರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಲಸಿಕೆ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜನವರಿ 16 ರಂದು ಲಸಿಕೆ ಹಂಚಿಕೆಯನ್ನು ಆರಂಭಿಸಲಾಗಿದೆ. ಆದರೆ ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಲಸಿಕೆ ಪಡೆದಿದ್ದಾರೆ. ಎರಡನೇ ಹಂತದಲ್ಲಿ ಪ್ರಧಾನಿ ಮೋದಿ ಸೇರಿ 50 ವರ್ಷ ಮೇಲ್ಪಟ್ಟ ಎಲ್ಲ ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಕೊರೊನಾ ಲಸಿಕೆ ಪಡೆಯಲಿದ್ದಾರೆ.

    ದೇಶದಲ್ಲಿ ಈಗಾಗಲೇ ಸೀರಂ ಸಂಸ್ಥೆಯ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್‍ನ ಕೊವ್ಯಾಕ್ಸಿನ್ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಕೊರೊನಾ ವಾರಿಯರ್ಸ್ ಈಗಾಗಲೇ ಲಸಿಕೆ ಪಡೆಯುತ್ತಿದ್ದಾರೆ. ಆದರೆ ನಿಗದಿತ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಎಲ್ಲ ರಾಜ್ಯಗಳಲ್ಲಿ ನಿಗದಿತ ಗುರಿ ತಲುಪಲು ಹರಸಾಹಸ ಮಾಡುತ್ತಿದ್ದಾರೆ.

    ಇದೀಗ ಎರಡನೇ ಸುತ್ತಿನಲ್ಲಿ 50 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲಿದ್ದಾರೆ. ಲಸಿಕೆ ಹಂಚಿಕೆ ಆರಂಭಕ್ಕೂ ಮುನ್ನ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಯಾರೂ ಹೆದರುವ ಹಾಗೂ ವ್ಯಾಕ್ಸಿನ್ ಪಡೆಯಲು ಹರಸಾಹಸ ಪಡುವ ಅಗತ್ಯವಿಲ್ಲ. ಎರಡನೇ ಸುತ್ತಿನಲ್ಲಿ ನಮ್ಮ ಸರದಿ ಬರಲಿದೆ ಎಂದು ತಿಳಿಸಿದ್ದರು.

    ಸಂಸದರು, ಶಾಸಕರು ಹಾಗೂ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಇತರರನ್ನು ಫ್ರಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಿ ಲಸಿಕೆ ನೀಡಬೇಕು ಎಂದು ಹರಿಯಾಣ, ಬಿಹಾರ ಹಾಗೂ ತೆಲಂಗಾಣ ಸೇರಿದಂತೆ ಇತರೆ ರಾಜ್ಯದ ಮುಖ್ಯಮಂತ್ರಿಗಳು ಮನವಿ ಮಾಡಿದ್ದರು. ಯಾವುದೇ ಕಾರಣಕ್ಕೂ ಸರತಿಯನ್ನು ಜಂಪ್ ಮಾಡಬಾರದು ಎಂದು ಪ್ರಧಾನಿ ಮೋದಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಹೀಗಾಗಿ ಮೊದಲ ಹಂತದಲ್ಲಿ ಕೇವಲ ಕೊರೊನಾ ವಾರಿಯರ್ಸ್ ಗೆ ಮಾತ್ರ ಲಸಿಕೆ ನೀಡಲಾಗಿದೆ.

  • ಕೋವಿಡ್‌ ಲಸಿಕೆ ತಯಾರಕ ಸೀರಂನಲ್ಲಿ ಅಗ್ನಿ ದುರಂತ – ಐವರು ಬಲಿ

    ಕೋವಿಡ್‌ ಲಸಿಕೆ ತಯಾರಕ ಸೀರಂನಲ್ಲಿ ಅಗ್ನಿ ದುರಂತ – ಐವರು ಬಲಿ

    ಮುಂಬೈ: ಕೊರೊನಾ ವ್ಯಾಕ್ಸಿನ್ ತಯಾರಿಸುತ್ತಿರುವ ಪುಣೆ  ಸೀರಂ ಸಂಸ್ಥೆಯಲ್ಲಿ  ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಸಾವನ್ನಪ್ಪಿದ್ದಾರೆ.

    ಇಂದು ಮಧ್ಯಾಹ್ನ ನಿರ್ಮಾಣ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಇಂಗ್ಲೆಂಡಿನ ಆಕ್ಸ್‌ಫರ್ಡ್‌  ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೊವಿಶೀಲ್ಡ್ ಲಸಿಕೆ ಸೀರಂ ಸಂಸ್ಥೆಯಲ್ಲಿ ಉತ್ಪಾದಿಸಲಾಗುತ್ತಿದೆ. ಆದರೆ ಕೊರೊನಾ ಲಸಿಕೆ ಸಂಗ್ರಹಿಸಿಟ್ಟ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಕುರಿತು ಆದರ್ ಪೂನವಾಲಾ ಟ್ವೀಟ್ ಮಾಡಿ, ಇದೀಗ ಆಘಾತಕಾರಿ ಮಾಹಿತಿ ಲಭ್ಯವಾಗಿದ್ದು, ಘಟನೆಯಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ. ಇದರಿಂದ ತೀವ್ರ ದುಃಖವಾಗಿದ್ದು, ಸಾವನ್ನಪ್ಪಿದವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.

    ಸತತ ಮೂರು ಗಂಟೆಗಳ ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನದ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಇದೀಗ ನಾವು ಇಬ್ಬರನ್ನು ರಕ್ಷಿಸಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿದಿದೆ. ಬಳಿಕ ನಷ್ಟದ ಕುರಿತು ಲೆಕ್ಕ ಹಾಕಲಾಗುತ್ತದೆ ಎಂದು ಆದರ್ ಪೂನವಾಲಾ ತಿಳಿಸಿದ್ದಾರೆ.

    ಸೀರಂ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನೆ ಮಾಡುವ ಸಂಸ್ಥೆಯಾಗಿದ್ದು, 10 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು.

  • ಕೊರೊನಾ ಲಸಿಕೆ ಪಡೆದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್

    ಕೊರೊನಾ ಲಸಿಕೆ ಪಡೆದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್

    ಬೆಂಗಳೂರು: ಜಗತ್ತಿಗೆ ಮಾರಕವಾಗಿರೋ ಕೊರೊನಾ ಪಿಡುಗನ್ನ ಹೋಗಲಾಡಿಸಲು ಲಸಿಕೆ ಪಡೆಯೊದೇ ದಾರಿ. ತಾವು ಕೋವಿಶೀಲ್ಡ್ ಲಸಿಕೆ ಪಡೆದು ಎಲ್ಲರೂ ಲಸಿಕೆ ಪಡೆಯಬೇಕು ಎಂದು ಡಾ. ಸಿಎನ್ ಮಂಜುನಾಥ್ ಸಂದೇಶ ರವಾನಿಸಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದಿರೋ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶ ಡಾ. ಮಂಜುನಾಥ್, ಲಸಿಕೆ ಪಡೆಯಲು ಸಾಕಷ್ಟು ಜನ ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಹೆಲ್ತ್ ಕೇರ್ ವರ್ಕರ್ಸ್ ಯಾವುದೇ ಭಯವಿಲ್ಲದೆ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಕರೆನೀಡಿದ್ದಾರೆ. ನಾನು ವ್ಯಾಕ್ಸಿನ್ ತಗೆದುಕೊಂಡಿದ್ದೇನೆ. ನನಗೆ ಯಾವುದೇ ಸಮಸ್ಯೆಯಾಗಿಲ್ಲ. ಭಯ ಬಿಟ್ಟು ಲಸಿಕೆ ಪಡೆಯಿರಿ ಎಂದು ತಿಳಿಸಿದ್ದಾರೆ.

    ಲಸಿಕೆ ಪಡೆದ ಮೇಲೆ ಸೈಡ್ ಎಫೆಕ್ಟ್ ಆಗುತ್ತೆ ಅನ್ನೋ ಭಯದಲ್ಲಿ ಫ್ರೆಂಟ್ ಲೈನ್ ವಾರಿಯರ್ಸ್ ಇದ್ದಾರೆ. ಜ್ವರ, ಅಲರ್ಜಿ, ಮೈಕೈ ನೋವು ಕಾಣಿಸಿಕೊಳ್ಳೊದು ಲಸಿಕೆಯಿಂದಾಗುವ ಪರಿಣಾಮವೇ ಹೊರತು, ಅದು ಅಡ್ಡ ಪರಿಣಾಮವಲ್ಲ. ಲಸಿಕೆ ಪಡೆಯುವುದರಿಂದ ಯಾರಿಗೂ ಸಮಸ್ಯೆಯಾಗಿಲ್ಲ ಎಂದರು.

    ವ್ಯಾಕ್ಸಿನ್ ಬಗ್ಗೆ ಇರೋ ವದಂತಿಗಳನ್ನ ದೂರ ತಳ್ಳಿ ಲಸಿಕೆಯನ್ನ ಎಲ್ಲರೂ ಪಡೆದುಕೊಳ್ಳಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಲಸಿಕೆಯನ್ನ ನಾನು ಪಡೆದಿದ್ದೇನೆ ಎಲ್ಲರು ಪಡೆಯಿರಿ ಎಂದು ನಮ್ಮ ನಾಡಿನ ಖ್ಯಾತ ವೈದ್ಯ ಡಾ. ಮಂಜುನಾಥ್ ಕರೆ ನೀಡಿದ್ದಾರೆ.

  • ಬೆಂಗಳೂರಿನಲ್ಲಿ 7 ಮಂದಿಗೆ ಅಡ್ಡ ಪರಿಣಾಮ – ಐವರು ಗುಣಮುಖ, ಇಬ್ಬರು ಆಸ್ಪತ್ರೆಗೆ ದಾಖಲು

    ಬೆಂಗಳೂರಿನಲ್ಲಿ 7 ಮಂದಿಗೆ ಅಡ್ಡ ಪರಿಣಾಮ – ಐವರು ಗುಣಮುಖ, ಇಬ್ಬರು ಆಸ್ಪತ್ರೆಗೆ ದಾಖಲು

    ಬೆಂಗಳೂರು: ನಗರದಲ್ಲಿ 6 ದಿನಗಳ ಲಸಿಕೆ ಅಭಿಯಾನದಲ್ಲಿ 7 ಜನರ ಮೇಲೆ ಅಡ್ಡ ಪರಿಣಾಮ ಬೀರಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ ಹೇಳಿದ್ದಾರೆ.

    ಕಾರ್ಪೋರೇಷನ್ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಕೋವಿಶೀಲ್ಡ್ ಲಸಿಕೆ ಈಗಾಗಲೇ ನೀಡಲಾಗಿದೆ. ಸದ್ಯ ಲಸಿಕೆ 7 ಜನರ ಮೇಲೆ ಅಡ್ಡಪರಿಣಾಮ ಬೀರಿದೆ. ಆದರೆ ಇಲ್ಲಿಯವರೆಗೂ ಯಾವುದೇ ಗಂಭೀರ ಪ್ರಕರಣ ಕಂಡು ಬಂದಿಲ್ಲ. ಮುನ್ನಚ್ಚರಿಕೆ ಕ್ರಮವಾಗಿ ಅಡ್ಡಪರಿಣಾಮ ಬೀರಿದ ಇಬ್ಬರು ಆರೋಗ್ಯ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಐವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಿ ಗುಣಮುಖ ಮಾಡಲಾಗಿದೆ ಎಂದರು.

    ಎಲ್ಲೆಲ್ಲಿ ಅಡ್ಡ ಪರಿಣಾಮ?
    ಕೊರೋನಾ ಲಸಿಕೆ ಪಡೆದ ನಂತರ ಯಲಹಂಕ ವಲಯದಲ್ಲಿ 2, ಪಶ್ಚಿಮದಲ್ಲಿ 2, ಆರ್ ಆರ್ ನಗರದಲ್ಲಿ 2, ಪೂರ್ವದಲ್ಲಿ 1 ಒಟ್ಟಾರೆಯಾಗಿ 7 ಮಂದಿ ಆರೋಗ್ಯ ಕಾರ್ಯಕರ್ತರು ಅಡ್ಡಪರಿಣಾಮ ಎದುರಿಸಿದ್ದಾರೆ. ಈ ವೇಳೆ ಜ್ವರ, ಮೈ ಕೈ ನೋವು, ತಲೆ ಸುತ್ತು, ನೆಲಕ್ಕೆ ಕುಸಿಯುವ ಲಕ್ಷಣಗಳು ಕಂಡು ಬಂದಿದೆ.

    ಯಲಹಂಕ ಭಾಗದ ಆರೋಗ್ಯ ಕಾರ್ಯಕರ್ತ ಮಹಿಳೆ ಲಸಿಕೆ ಪಡೆದಾಗ ಕೆಳಗೆ ಬಿದ್ದಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂಬ ಮಾಹಿತಿ ನೀಡಿದರು. ಇದೀಗ ಎಲ್ಲರಿಗೂ ಆರೋಗ್ಯ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಿ ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ತಿಳಿಸಿದರು.

    ಯಾವುದೇ ಲಸಿಕೆ ತೆಗೆದುಕೊಂಡಾಗ ಕೆಲವರಿಗೆ ಅಡ್ಡ ಪರಿಣಾಮವಾಗುವುದು ಸಾಮಾನ್ಯ. ಇದಕ್ಕೆ ಯಾರೂ ಹೆದರುವ ಅಗತ್ಯವಿಲ್ಲ ಎಂದು ಲಸಿಕೆ ವಿತರಣೆ ನಡೆಯುವ ಮುನ್ನವೇ ತಜ್ಞರು ವೈದ್ಯರು ತಿಳಿಸಿದ್ದರು.

  • 501 ಹೊಸ ಕೊರೊನಾ ಪ್ರಕರಣ – 34,583 ಜನಕ್ಕೆ ಲಸಿಕೆ

    501 ಹೊಸ ಕೊರೊನಾ ಪ್ರಕರಣ – 34,583 ಜನಕ್ಕೆ ಲಸಿಕೆ

    ಬೆಂಗಳೂರು: ರಾಜ್ಯದಲ್ಲಿಂದು 501 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 665 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 34,583 ಜನರು ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇಂದು 62,772 ಜನ ಕೊರೊನಾ ಲಸಿಕೆ ಪಡೆದುಕೊಳ್ಳಲು ನೋಂದಣಿ ಮಾಡಿಕೊಂಡಿದ್ರೆ, ಆದ್ರೆ ಶೇ.55ರಷ್ಟು ಜನ ಮಾತ್ರ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ.

    ಯಾವ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಲಸಿಕೆ?: ಬಾಗಲಕೋಟೆ 689, ಬಳ್ಳಾರಿ 2,048, ಬೆಳಗಾವಿ 5,907, ಬೆಂಗಳೂರು ಗ್ರಾಮಾಂತರ 549, ಬೆಂಗಳೂರು ನಗರ 3,443, ಬೀದರ್ 718, ಚಾಮರಾಜನಗರ 349, ಚಿಕ್ಕಬಳ್ಳಾಪುರ 711, ಚಿಕ್ಕಮಗಳೂರು 517, ಚಿತ್ರದುರ್ಗ 1,033, ದಕ್ಷಿಣ ಕನ್ನಡ 646, ದಾವಣಗೆರೆ 1,324, ಧಾರವಾಡ 478, ಗದಗ 437, ಹಾಸನ 958, ಹಾವೇರಿ 692, ಕಲಬುರಗಿ 1,166, ಕೊಡಗು 654, ಕೋಲಾರ 1,473, ಕೊಪ್ಪಳ 114, ಮಂಡ್ಯ 1,473, ಮೈಸೂರು 2,485, ರಾಯಚೂರು 1,307, ರಾಮನಗರ 1,753, ಶಿವಮೊಗ್ಗ 372, ತುಮಕೂರು 620, ಉಡುಪಿ 829, ಉತ್ತರ ಕನ್ನಡ 1,583, ವಿಜಯಪುರ 151 ಮತ್ತು ಯಾದಗಿರಿಯಲ್ಲಿ 342 ಜನ ಲಸಿಕೆ ಪಡೆದಿದ್ದಾರೆ.

    ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,33,578ಕ್ಕೆ ಏರಿಕೆಯಾಗಿದ್ದು, 7,697 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾಗೆ ನಾಲ್ವರು ಮೃತಪಟ್ಟಿದ್ದು, ಸಾವನ್ನಪ್ಪಿದರವರ ಸಂಖ್ಯೆ 12,185ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 168 ಕೊರೊನಾ ಸೋಂಕಿ ತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.59 ಮತ್ತು ಮರಣ ಪ್ರಮಾಣ ಶೇ.0.79ರಷ್ಟಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 2, ಬಳ್ಳಾರಿ 9, ಬೆಳಗಾವಿ 22, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 260, ಬೀದರ್ 1, ಚಾಮರಾಜನಗರ 5, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 1, ಚಿತ್ರದುರ್ಗ 19, ದಕ್ಷಿಣ ಕನ್ನಡ 16, ದಾವಣಗೆರೆ 10, ಧಾರವಾಡ 7, ಗದಗ 0, ಹಾಸನ 10, ಹಾವೇರಿ 2, ಕಲಬುರಗಿ 7, ಕೊಡಗು 4, ಕೋಲಾರ 10, ಕೊಪ್ಪಳ 1, ಮಂಡ್ಯ 7, ಮೈಸೂರು 24, ರಾಯಚೂರು 1, ರಾಮನಗರ 1, ಶಿವಮೊಗ್ಗ 3, ತುಮಕೂರು 33, ಉಡುಪಿ 7, ಉತ್ತರ ಕನ್ನಡ 4, ವಿಜಯಪುರ 12 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಇಂದು 15,223 ಜನಕ್ಕೆ ಲಸಿಕೆ – ರಾಜ್ಯದಲ್ಲಿ 645 ಹೊಸ ಕೊರೊನಾ ಪ್ರಕರಣ

    ಇಂದು 15,223 ಜನಕ್ಕೆ ಲಸಿಕೆ – ರಾಜ್ಯದಲ್ಲಿ 645 ಹೊಸ ಕೊರೊನಾ ಪ್ರಕರಣ

    – ಯಾವ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಲಸಿಕೆ? ಇಲ್ಲಿದೆ ಮಾಹಿತಿ

    ಬೆಂಗಳೂರು: ಇಂದು ರಾಜ್ಯದಲ್ಲಿ 15,223 ಕೊರೊನಾ ವಾರಿಯರ್ಸ್ ಗಳಿಕೆ ಕೋವಿಡ್ ಲಸಿಕೆ ನೀಡಲಾಗಿದೆ. ಇವತ್ತು 645 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಆರು ಜನ ಸಾವನ್ನಪ್ಪಿದ್ದಾರೆ. ಇವತ್ತು 32,205 ನೋಂದಾಯಿತರಿಗೆ ಲಸಿಕೆ ನೀಡಲು ಸರ್ಕಾರ ಸಿದ್ಧವಾಗಿತ್ತು. ಆದ್ರೆ 15,223 ಮಂದಿ ವ್ಯಾಕ್ಸಿನೇಷನ್ ಪಡೆದಿದ್ದಾರೆ.

    ಆರೋಗ್ಯ ಇಲಾಖೆಯ ಪ್ರಕಾರ, ಬಾಗಲಕೋಟೆ 738, ಬಳ್ಳಾರಿ 161, ಬೆಳಗಾವಿ 438, ಬೆಂಗಳೂರು ಗ್ರಾಮಾಂತರ 916, ಬೆಂಗಳೂರು ನಗರ 4,288, ಬೀದರ್ 198, ಚಾಮರಾಜನಗರ 158, ಚಿಕ್ಕಮಗಳೂರು 552, ಚಿತ್ರದುರ್ಗ 150, ದಕ್ಷಿಣ ಕನ್ನಡ 734 ದಾವಣಗೆರೆ 313, ಧಾರವಾಡ 174, ಗದಗ 30, ಹಾಸನ 73, ಹಾವೇರಿ 138, ಕಲಬುರಗಿ 20, ಕೊಡಗು ,59 ಕೋಲಾರ 0, ಕೊಪ್ಪಳ 439, ಮಂಡ್ಯ 96, ರಾಯಚೂರು 42, ರಾಮನಗರ 604, ಶಿವಮೊಗ್ಗ 357, ತುಮಕೂರು 4,310, ಉಡುಪಿ 235 ಜನಕ್ಕೆ ಲಸಿಕೆ ನೀಡಲಾಗಿದೆ. ಉತ್ತರ ಕನ್ನಡ, ವಿಜಯಪುರ ಮತ್ತು ಯಾದಗಿರಿ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಮೈಸೂರಿನಲ್ಲಿ ಇಂದು ವ್ಯಾಕ್ಸಿನ್ ನೀಡಿಲ್ಲ.

    ರಾಜ್ಯದಲ್ಲಿ 7,865 ಸಕ್ರಿಯ ಪ್ರಕರಣ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,33,077ಕ್ಕೆ ಏರಿಕೆಯಾಗಿದ್ದು, 7,865 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 12,181 ಜನ ಕೊರೊನಾಗೆ ಬಲಿಯಾಗಿದ್ದಾರೆ. ಕೋವಿಡ್ 19 ಸೋಂಕಿನ ಖಚಿತ ಪ್ರಮಾಣ ಶೇ.0.79 ಮತ್ತು ಮರಣ ಪ್ರಮಾಣ ಶೇ.0.93ರಷ್ಟಿದೆ.

    ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?: ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 2, ಬೆಳಗಾವಿ 18, ಬೆಂಗಳೂರು ಗ್ರಾಮಾಂತರ 18, ಬೆಂಗಳೂರು ನಗರ 357, ಬೀದರ್ 6, ಚಾಮರಾಜನಗರ 2, ಚಿಕ್ಕಬಳ್ಳಾಪುರ 36, ಚಿಕ್ಕಮಗಳೂರು 2, ಚಿತ್ರದುರ್ಗ 16, ದಕ್ಷಿಣ ಕನ್ನಡ 25, ದಾವಣಗೆರೆ 5, ಧಾರವಾಡ 8, ಗದಗ 2, ಹಾಸನ 10, ಹಾವೇರಿ 0, ಕಲಬುರಗಿ 8, ಕೊಡಗು 6, ಕೋಲಾರ 8, ಕೊಪ್ಪಳ 2, ಮಂಡ್ಯ 15, ಮೈಸೂರು 34, ರಾಯಚೂರು 7, ರಾಮನಗರ 2, ಶಿವಮೊಗ್ಗ 17, ತುಮಕೂರು 11, ಉಡುಪಿ 4, ಉತ್ತರ ಕನ್ನಡ 17, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.