Tag: ಕೊರೊನಾ ಲಸಿಕೆ

  • ಇಂದು 419 ಹೊಸ ಕೊರೊನಾ ಪ್ರಕರಣ – 86,074 ಜನರಿಗೆ ಲಸಿಕೆ

    ಇಂದು 419 ಹೊಸ ಕೊರೊನಾ ಪ್ರಕರಣ – 86,074 ಜನರಿಗೆ ಲಸಿಕೆ

    ಬೆಂಗಳೂರು: ಇಂದು 419 ಹೊಸ ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸದ್ಯ 5,910 ಸಕ್ರಿಯ ಪ್ರಕರಣಗಳಿದ್ದು, 135 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 9,44,856ಕ್ಕೆ ಏರಿಕೆಯಾಗಿದ್ದು, ಇದುವರೆಗೂ 12,263 ಜನರು ಸಾವನ್ನಪ್ಪಿದ್ದಾರೆ. ಇಂದು ಕೊರೊನಾದಿಂದ ಗುಣಮುಖರಾಗಿ 430 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.63 ಮತ್ತು ಮರಣ ಪ್ರಮಾಣ ಶೇ.0.95 ರಷ್ಟಿದೆ. ಇಂದು 66,050 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು 86,074 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಕೊರೊನಾ ಲಸಿಕೆ ವಿವರ: ಬಾಗಲಕೋಟೆ 1,239, ಬಳ್ಳಾರಿ 4,198, ಬೆಳಗಾವಿ 5,196, ಬೆಂಗಳೂರು ಗ್ರಾಮಾಂತರ 1,076, ಬೆಂಗಳೂರು ನಗರ 11,683, ಬೀದರ್ 1,822, ಚಾಮರಾಜನಗರ 762, ಚಿಕ್ಕಬಳ್ಳಾಪುರ 2,292, ಚಿಕ್ಕಮಗಳೂರು 2,562, ಚಿತ್ರದುರ್ಗ 2,478, ದಕ್ಷಿಣ ಕನ್ನಡ 2,787, ದಾವಣಗೆರೆ 1,377, ಧಾರವಾಡ 2,333, ಗದಗ 3,272, ಹಾಸನ 2,596, ಹಾವೇರಿ 1,451, ಕಲಬುರಗಿ 2,210, ಕೊಡಗು 1,017, ಕೋಲಾರ 2,923, ಕೊಪ್ಪಳ 2,479, ಮಂಡ್ಯ 1,585, ಮೈಸೂರು 3,849, ರಾಯಚೂರು 2,278, ರಾಮನಗರ 1,053, ಶಿವಮೊಗ್ಗ 1,851, ತುಮಕೂರು 7,925, ಉಡುಪಿ 2,318, ಉತ್ತರ ಕನ್ನಡ 3,225, ವಿಜಯಪುರ 4,986 ಮತ್ತು ಯಾದಗಿರಿ 1,251

    ಕೊರೊನಾ ಪ್ರಕರಣ ವಿವರ: ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 258, ಬೀದರ್ 1, ಚಾಮರಾಜನಗರ 2, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 4, ಚಿತ್ರದುರ್ಗ 10, ದಕ್ಷಿಣ ಕನ್ನಡ 18, ದಾವಣಗೆರೆ 5, ಧಾರವಾಡ 8, ಗದಗ 1, ಹಾಸನ 4, ಹಾವೇರಿ 0, ಕಲಬುರಗಿ 17, ಕೊಡಗು 6, ಕೋಲಾರ 8, ಕೊಪ್ಪಳ 0, ಮಂಡ್ಯ 2, ಮೈಸೂರು 22, ರಾಯಚೂರು 1, ರಾಮನಗರ 1, ಶಿವಮೊಗ್ಗ 6, ತುಮಕೂರು 20, ಉಡುಪಿ 6, ಉತ್ತರ ಕನ್ನಡ 3, ವಿಜಯಪುರ 3 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • 430 ಹೊಸ ಕೊರೊನಾ ಪ್ರಕರಣ, 7 ಸಾವು, 340 ಡಿಸ್ಚಾರ್ಜ್

    430 ಹೊಸ ಕೊರೊನಾ ಪ್ರಕರಣ, 7 ಸಾವು, 340 ಡಿಸ್ಚಾರ್ಜ್

    ಬೆಂಗಳೂರು: ಇಂದು 430 ಹೊಸ ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, 340 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾಗೆ ಏಳು ಜನರು ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ 5,958 ಸಕ್ರಿಯ ಪ್ರಕರಣಗಳಿದ್ದು, 137 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9,44,057ಕ್ಕೆ ತಲುಪಿದ್ದು, ಇದುವರೆಗೂ ಕೋವಿಡ್ 12,251 ಜನರನ್ನ ಬಲಿ ಪಡೆದುಕೊಂಡಿದೆ.

    ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.63 ಮತ್ತು ಮರಣ ಪ್ರಮಾಣ ಶೇ.1.62ರಷ್ಟಿದೆ. ಇವತ್ತು 68,194 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜ್ಯದ 69,869 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಯಾವ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಲಸಿಕೆ?: ಬಾಗಲಕೋಟೆ 1,000, ಬಳ್ಳಾರಿ 3,356, ಬೆಳಗಾವಿ 4,773, ಬೆಂಗಳೂರು ಗ್ರಾಮಾಂತರ 679, ಬೆಂಗಳೂರು ನಗರ 7,818, ಬೀದರ್ 1,489, ಚಾಮರಾಜನಗರ 693, ಚಿಕ್ಕಬಳ್ಳಾಪುರ 2,060, ಚಿಕ್ಕಮಗಳೂರು 2,358, ಚಿತ್ರದುರ್ಗ 2,183, ದಕ್ಷಿಣ ಕನ್ನಡ 1,907, ದಾವಣಗೆರೆ 1,140 ಧಾರವಾಡ 2,056, ಗದಗ 2,778, ಹಾಸನ 2,297, ಹಾವೇರಿ 1,126, ಕಲಬುರಗಿ 2,120, ಕೊಡಗು 837, ಕೋಲಾರ 2,545, ಕೊಪ್ಪಳ 2,213, ಮಂಡ್ಯ 1,246, ಮೈಸೂರು 2,775, ರಾಯಚೂರು 2,210, ರಾಮನಗರ 1,025, ಶಿವಮೊಗ್ಗ 1,246, ತುಮಕೂರು 6,944, ಉಡುಪಿ 1,543, ಉತ್ತರ ಕನ್ನಡ 2,410, ವಿಜಯಪುರ 3,910 ಮತ್ತು ಯಾದಗಿರಿಯಲ್ಲಿ 1,123 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ.

    ಕೊರೊನಾ ಪ್ರಕರಣಗಳ ಸಂಖ್ಯೆ: ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 4, ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 11, ಬೆಂಗಳೂರು ನಗರ 228, ಬೀದರ್ 0, ಚಾಮರಾಜನಗರ 1, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 1, ಚಿತ್ರದುರ್ಗ 13, ದಕ್ಷಿಣ ಕನ್ನಡ 28, ದಾವಣಗೆರೆ 5, ಧಾರವಾಡ 6, ಗದಗ 2, ಹಾಸನ 9, ಹಾವೇರಿ 0, ಕಲಬುರಗಿ 10, ಕೊಡಗು 6, ಕೋಲಾರ 5, ಕೊಪ್ಪಳ 1, ಮಂಡ್ಯ 6, ಮೈಸೂರು 25, ರಾಯಚೂರು 1, ರಾಮನಗರ 3, ಶಿವಮೊಗ್ಗ 6, ತುಮಕೂರು 18, ಉಡುಪಿ 14, ಉತ್ತರ ಕನ್ನಡ 7, ವಿಜಯಪುರ 5 ಮತ್ತು ಯಾದಗಿರಿಯಲ್ಲಿ 5 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • 415 ಹೊಸ ಕೋವಿಡ್ ಪ್ರಕರಣ – 322 ಡಿಸ್ಚಾರ್ಜ್, 18,746 ಜನಕ್ಕೆ ಲಸಿಕೆ

    415 ಹೊಸ ಕೋವಿಡ್ ಪ್ರಕರಣ – 322 ಡಿಸ್ಚಾರ್ಜ್, 18,746 ಜನಕ್ಕೆ ಲಸಿಕೆ

    ಬೆಂಗಳೂರು: ರಾಜ್ಯದಲ್ಲಿಂದು 415 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 322 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಒಟ್ಟು 18,746 ಜನರು ಕೊರೊನಾ ಲಸಿಕೆಯನ್ನ ಪಡೆದುಕೊಂಡಿದ್ದಾರೆ.

    ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9,43,627ಕ್ಕೇರಿಕೆಯಾಗಿದ್ರೆ 5,875 ಸಕ್ರಿಯ ಪ್ರಕರಣಗಳ ಪೈಕಿ 141 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಕೊರೊನಾದಿಂದ ಮೂವರು ಮೃತಪಟ್ಟಿದ್ದು, ಇದುವರೆಗೂ ಸಾವನ್ನಪ್ಪಿದವರ ಸಂಖ್ಯೆ 12,244ಕ್ಕೇರಿಕೆಯಾಗಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.62 ಮತ್ತು ಮರಣ ಪ್ರಮಾಣ ಶೇ.0.72ರಷ್ಟಿದೆ. ಇಂದು 66,199 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

    ಯಾವ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಕೊರೊನಾ ಲಸಿಕೆ?:
    ಬಾಗಲಕೋಟೆ 234, ಬಳ್ಳಾರಿ 982, ಬೆಳಗಾವಿ 1,801, ಬೆಂಗಳೂರು ಗ್ರಾಮಾಂತರ 144, ಬೆಂಗಳೂರು ನಗರ 2,052, ಬೀದರ್ 242, ಚಾಮರಾಜನಗರ 172, ಚಿಕ್ಕಬಳ್ಳಾಪುರ 239, ಚಿಕ್ಕಮಗಳೂರು 587, ಚಿತ್ರದುರ್ಗ 420, ದಕ್ಷಿಣ ಕನ್ನಡ 1,663, ದಾವಣಗೆರೆ 324, ಧಾರವಾಡ 330, ಗದಗ 730, ಹಾಸನ 711, ಹಾವೇರಿ 261, ಕಲಬುರಗಿ 738, ಕೊಡಗು 299, ಕೋಲಾರ 638, ಕೊಪ್ಪಳ 654, ಮಂಡ್ಯ 264, ಮೈಸೂರು 939, ರಾಯಚೂರು 333, ರಾಮನಗರ 135, ಶಿವಮೊಗ್ಗ 369, ತುಮಕೂರು 1,760, ಉಡುಪಿ 134, ಉತ್ತರ ಕನ್ನಡ 789, ವಿಜಯಪುರ 618 ಮತ್ತು ಯಾದಗಿರಿಯಲ್ಲಿ 184 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಕೊರೊನಾ ಪ್ರಕರಣಗಳು:
    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 17, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ನಗರ 208, ಬೀದರ್ 8, ಚಾಮರಾಜನಗರ 3, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 3, ಚಿತ್ರದುರ್ಗ 11, ದಕ್ಷಿಣ ಕನ್ನಡ 16, ದಾವಣಗೆರೆ 9, ಧಾರವಾಡ 2, ಗದಗ 2, ಹಾಸನ 10, ಹಾವೇರಿ 1, ಕಲಬುರಗಿ 14, ಕೊಡಗು 11, ಕೋಲಾರ 2, ಕೊಪ್ಪಳ 0, ಮಂಡ್ಯ 2, ಮೈಸೂರು 45, ರಾಯಚೂರು 1, ರಾಮನಗರ 1, ಶಿವಮೊಗ್ಗ 6, ತುಮಕೂರು 17, ಉಡುಪಿ 6, ಉತ್ತರ ಕನ್ನಡ 3, ವಿಜಯಪುರ 4 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ವೈದ್ಯಕೀಯ ವಿದ್ಯಾರ್ಥಿಗಳು ಲಸಿಕೆ ಪಡೆದು ಸ್ಫೂರ್ತಿಯಾಗಿ: ಸುಧಾಕರ್

    ವೈದ್ಯಕೀಯ ವಿದ್ಯಾರ್ಥಿಗಳು ಲಸಿಕೆ ಪಡೆದು ಸ್ಫೂರ್ತಿಯಾಗಿ: ಸುಧಾಕರ್

    – ಲಸಿಕೆಯಿಂದ ಅಡ್ಡ ಪರಿಣಾಮವಿಲ್ಲ

    ಬೆಂಗಳೂರು: ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದು ಸಾಮಾನ್ಯ ಜನರಿಗೆ ಸ್ಫೂರ್ತಿ ಶಕ್ತಿಯಾಗಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

    ವಾಣಿ ವಿಲಾಸ ಆಸ್ಪತ್ರೆಯಲ್ಲಿ ಪ್ರಸೂತಿ ಟ್ರೈಯಾಜ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಐಸಿಯು ಉದ್ಘಾಟನೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕು ಆರಂಭವಾದ ಹತ್ತೇ ತಿಂಗಳಲ್ಲಿ ರಾಜ್ಯಕ್ಕೆ ಲಸಿಕೆ ಬಂದಿದೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಲಸಿಕೆಯ ರಾಯಭಾರಿಗಳಾಗಬೇಕು. ವಿದ್ಯಾರ್ಥಿಗಳು ಆದ್ಯತೆಯಲ್ಲಿ ಬಂದು ಲಸಿಕೆ ಪಡೆದಾಗ ಬೇರೆ ಇಲಾಖೆಗಳ ಸಿಬ್ಬಂದಿಗೆ ಧೈರ್ಯ ಬರುತ್ತದೆ. ಲಸಿಕೆ ಪಡೆಯಲು ಕೆಲವರು ಪರೀಕ್ಷೆಯ ನೆಪ ಒಡ್ಡುತ್ತಿದ್ದಾರೆ. ಆದರೆ ಪರೀಕ್ಷೆಗೂ ಲಸಿಕೆಗೂ ಸಂಬಂಧವಿಲ್ಲ. ಲಸಿಕೆ ಪಡೆದವರಿಗೆ ಯಾವುದೇ ಅಡ್ಡ ಪರಿಣಾಮವಾಗಿಲ್ಲ. ಅನೇಕ ಅಧಿಕಾರಿಗಳು ಮುಂದೆ ಬಂದು ಲಸಿಕೆ ಪಡೆದು ಮಾದರಿಯಾಗಿದ್ದಾರೆ. ಈ ನೈತಿಕ ಸ್ಫೂರ್ತಿಯನ್ನು ಜನರಿಗೆ ನೀಡುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ವಹಿಸಿಕೊಳ್ಳಬೇಕು ಎಂದು ಕೋರಿದರು.

    ಕೆಲ ರಾಜ್ಯಗಳಲ್ಲಿ ಲಸಿಕೆ ಪಡೆಯದಿದ್ದರೆ ಸಂಬಳ ನೀಡುವುದಿಲ್ಲ ಎಂದು ಕೂಡ ಹೇಳಲಾಗಿದೆ. ಆದರೆ ನಮ್ಮಲ್ಲಿ ಆ ರೀತಿಯ ನಿರ್ಬಂಧ ಹೇರಿಲ್ಲ. ಭಾರತದ ಲಸಿಕೆಗೆ 25 ದೇಶಗಳಲ್ಲಿ ಬೇಡಿಕೆ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಉಚಿತವಾಗಿ ಲಸಿಕೆ ನೀಡುವಾಗ ಲಸಿಕೆ ಪಡೆಯಲು ಮುಂದೆ ಬರಬೇಕು ಎಂದರು.

    ಕೋವಿಡ್ ಬಂದ ಬಳಿಕ, ಆರೋಗ್ಯ ಇಲ್ಲದಿದ್ದರೆ ಏನೂ ಇಲ್ಲ ಎಂದು ಅರ್ಥವಾಗಿದೆ. ಆದ್ದರಿಂದ ಏಳೆಂಟು ತಿಂಗಳಲ್ಲಿ ರಾಜ್ಯ ಸರ್ಕಾರ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಿದೆ. ಆರೋಗ್ಯ ಇಲಾಖೆಯಡಿ ಸುಮಾರು 3 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳು, ವೈದ್ಯಕೀಯ ಶಿಕ್ಷಣ ಇಲಾಖೆಯಡಿ ನಾಲ್ಕೂವರೆ ಸಾವಿರ ಆಕ್ಸಿಜನ್ ಹಾಸಿಗೆ ಇತ್ತು. ಈಗ ಎರಡೂ ಇಲಾಖೆಗಳ ಆಸ್ಪತ್ರೆಗಳು ಸೇರಿ ಒಟ್ಟು 30 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳನ್ನು ಅಳವಡಿಸಲಾಗಿದೆ. ಈ ಸಾಲಿನ ಬಜೆಟ್ ನಲ್ಲೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

    ಕೋವಿಡ್ ಆರಂಭದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಗಣನೀಯ ಸೇವೆ ಸಲ್ಲಿಸಿದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಆದ 200ಕ್ಕೂ ಹೆಚ್ಚು ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಇದಕ್ಕಾಗಿ ವಿಶೇಷ ಅಭಿನಂದನೆಗಳು ಎಂದರು.

  • 366 ಹೊಸ ಕೊರೊನಾ ಪ್ರಕರಣ – 22,623 ಜನಕ್ಕೆ ಲಸಿಕೆ

    366 ಹೊಸ ಕೊರೊನಾ ಪ್ರಕರಣ – 22,623 ಜನಕ್ಕೆ ಲಸಿಕೆ

    ಬೆಂಗಳೂರು: ರಾಜ್ಯದಲ್ಲಿಂದು 366 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 22,632 ಜನರು ಲಸಿಕೆಯನ್ನ ಪಡೆದುಕೊಂಡಿದ್ದಾರೆ. ಇವತ್ತು ಮಹಾಮಾರಿ ಕೊರೊನಾ ಇಬ್ಬರನ್ನು ಬಲಿ ಪಡೆದುಕೊಂಡಿದೆ.

    ಕೊರೊನಾ ಸೋಂಕಿತರ ಸಂಖ್ಯೆ 9,43,212ಕ್ಕೆ ಏರಿಕೆಯಾಗಿದ್ದು, ಇದುವರೆಗೂ 12,241 ಜನರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 5,785 ಸಕ್ರಿಯ ಪ್ರಕರಣಗಳಿದ್ದು, 143 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು 513 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.60 ಮತ್ತು ಮರಣ ಪ್ರಮಾಣ ಶೇ.0.54ರಷ್ಟಿದೆ.

    ಯಾವ ಜಿಲ್ಲೆಯಲ್ಲಿ ಎಷ್ಟು ಜನಕ್ಕೆ ಲಸಿಕೆ?:
    ಬಾಗಲಕೋಟೆ 279, ಬಳ್ಳಾರಿ 1,178, ಬೆಳಗಾವಿ 1,859, ಬೆಂಗಳೂರು ಗ್ರಾಮಾಂತರ 145, ಬೆಂಗಳೂರು ನಗರ 3,276, ಬೀದರ್ 245, ಚಾಮರಾಜನಗರ 253, ಚಿಕ್ಕಬಳ್ಳಾಪುರ 653, ಚಿಕ್ಕಮಗಳೂರು 768, ಚಿತ್ರದುರ್ಗ 475, ದಕ್ಷಿಣ ಕನ್ನಡ 681, ದಾವಣಗೆರೆ 375, ಧಾರವಾಡ 857, ಗದಗ 918, ಹಾಸನ 803, ಹಾವೇರಿ 514, ಕಲಬುರಗಿ 755, ಕೊಡಗು 309, ಕೋಲಾರ 558, ಕೊಪ್ಪಳ 684, ಮಂಡ್ಯ 503, ಮೈಸೂರು 895, ರಾಯಚೂರು 612, ರಾಮನಗರ 246, ಶಿವಮೊಗ್ಗ 383, ತುಮಕೂರು 1,717, ಉಡುಪಿ 1,212, ಉತ್ತರ ಕನ್ನಡ 0, ವಿಜಯಪುರ 1,145 ಮತ್ತು ಯಾದಗಿರಿಯಲ್ಲಿ 325 ಜನ ಲಸಿಕೆ ಪಡೆದುಕೊಂಡಿದ್ದಾರೆ.

    ಕೊರೊನಾ ಪ್ರಕರಣ:
    ಬಾಗಲಕೋಟೆ 0, ಬಳ್ಳಾರಿ 5, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 20, ಬೆಂಗಳೂರು ನಗರ 195, ಬೀದರ್ 6, ಚಾಮರಾಜನಗರ 0, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 3, ಚಿತ್ರದುರ್ಗ 9, ದಕ್ಷಿಣ ಕನ್ನಡ 29, ದಾವಣಗೆರೆ 1, ಧಾರವಾಡ 3, ಗದಗ 3, ಹಾಸನ 8, ಹಾವೇರಿ 0, ಕಲಬುರಗಿ 8, ಕೊಡಗು 2, ಕೋಲಾರ 1, ಕೊಪ್ಪಳ 0, ಮಂಡ್ಯ 1, ಮೈಸೂರು 15, ರಾಯಚೂರು 0, ರಾಮನಗರ 0, ಶಿವಮೊಗ್ಗ 6, ತುಮಕೂರು 17, ಉಡುಪಿ 6, ಉತ್ತರ ಕನ್ನಡ 5, ವಿಜಯಪುರ 6 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • 328 ಹೊಸ ಕೊರೊನಾ ಪ್ರಕರಣ – 3 ಸಾವು, 350 ಡಿಸ್ಚಾರ್ಜ್

    328 ಹೊಸ ಕೊರೊನಾ ಪ್ರಕರಣ – 3 ಸಾವು, 350 ಡಿಸ್ಚಾರ್ಜ್

    ಬೆಂಗಳೂರು: ಇಂದು 328 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಇಂದು 350 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಕೊರೊನಾ ಸೋಂಕಿತರ ಸಂಖ್ಯೆ 9,42,846ಕ್ಕೆ ಏರಿಕೆಯಾಗಿದ್ದು, 12,239 ಜನರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 5934 ಸಕ್ರಿಯ ಪ್ರಕರಣಗಳಿದ್ದು, 143 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಪ್ರಮಾಣ ಶೇ.0.67 ಮತ್ತು ಮರಣ ಪ್ರಮಾಣ ಶೇ.0.91ರಷ್ಟಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 3, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 127, ಬೀದರ್ 2, ಚಾಮರಾಜನಗರ 3, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 2, ಚಿತ್ರದುರ್ಗ 13, ದಕ್ಷಿಣ ಕನ್ನಡ 40, ದಾವಣಗೆರೆ 0, ಧಾರವಾಡ 0, ಗದಗ 1, ಹಾಸನ 14, ಹಾವೇರಿ 3, ಕಲಬುರಗಿ 13, ಕೊಡಗು 1, ಕೋಲಾರ 11, ಕೊಪ್ಪಳ 1, ಮಂಡ್ಯ 6, ಮೈಸೂರು 48, ರಾಯಚೂರು 1, ರಾಮನಗರ 0, ಶಿವಮೊಗ್ಗ 5, ತುಮಕೂರು 8, ಉಡುಪಿ 8, ಉತ್ತರ ಕನ್ನಡ 2, ವಿಜಯಪುರ 5 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

    ರಾಜ್ಯದಲ್ಲಿ 2ನೇ ಹಂತದ ಕೊರೋನಾ ವ್ಯಾಕ್ಸಿನೇಷನ್ ಶುರುವಾಗಿದೆ. ಮೊದಲ ದಿನವಾದ ಇಂದು ಕೊರೋನಾ ವಾರಿಯರ್ಸ್ ಕೊರೋನಾ ಲಸಿಕೆ ನೀಡಲಾಯ್ತು. ಡಿಸಿ, ಎಸ್‍ಪಿ, ಜಿಪಂ ಸಿಇಓ, ಕಂದಾಯ ಇಲಾಖೆ ನೌಕರರಿಗೆ ಇಂದು ವ್ಯಾಕ್ಸಿನ್ ಹಾಕಲಾಯ್ತು. ದಾವಣಗೆರೆ, ಚಾಮರಾಜನಗರ, ಬಳ್ಳಾರಿ ಶಿವಮೊಗ್ಗ, ರಾಯಚೂರಿನ ಹಿರಿಯ ಅಧಿಕಾರಿಗಳು ಲಸಿಕೆ ಪಡೆದು ಉಳಿದವರಿಗೆ ಧೈರ್ಯ ತುಂಬಿದ್ರು. ನಾಳೆಯಿಂದ ಬೆಂಗಳೂರಿನಲ್ಲಿ ಬಿಬಿಎಂಪಿ ನೌಕರರು, ಪೊಲೀಸರಿಗೆ ನಾಳೆಯಿಂದ ಲಸಿಕೆ ಹಂಚಿಕೆ ಮಾಡಲಾಗುತ್ತದೆ

  • ಕೊರೊನಾ ಲಸಿಕೆ ಪಡೆದ ದಾವಣಗೆರೆ, ಉಡುಪಿ ಜಿಲ್ಲಾಧಿಕಾರಿಗಳು

    ಕೊರೊನಾ ಲಸಿಕೆ ಪಡೆದ ದಾವಣಗೆರೆ, ಉಡುಪಿ ಜಿಲ್ಲಾಧಿಕಾರಿಗಳು

    – ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಸಲಹೆ

    ದಾವಣಗೆರೆ/ಉಡುಪಿ: ಇಂದು ಉಡುಪಿ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಹಿರಿಯ ಸರ್ಕಾರಿ ಸಿಬ್ಬಂದಿ ಕೊರೊನಾ ಲಸಿಕೆಯನ್ನು ಪಡೆದುಕೊಂಡರು. ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಉಡುಪಿ ಜಿಲ್ಲಾಧಿಕಾರಿ ಕೆ.ಜಗದೀಶ್ ವ್ಯಾಕ್ಸಿನ್ ಪಡೆದು ಇತರರಿಗೆ ಧೈರ್ಯ ತುಂಬಿದರು.

    ದಾವಣಗೆರೆ ನಗರದಲ್ಲಿರುವ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಎಸ್‍ಪಿ, ಡಿಸಿಯವರೊಂದಿಗೆ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ರವರು ಕೂಡ ವ್ಯಾಕ್ಸಿನ್ ಹಾಕಿಸಿಕೊಂಡು ಚುಚ್ಚುಮದ್ದು ಪಡೆಯಲು ಹಿಂದೇಟು ಹಾಕುತ್ತಿರುವ ಜನಸಾಮಾನ್ಯರಿಗೆ ಸಂದೇಶ ರವಾನಿಸಿದರು. ಪೋಲಿಸ್ ಇಲಾಖೆ, ಕಂದಾಯ ಇಲಾಖೆ ಸೇರಿದ್ದಂತೆ ಇನ್ನಿತರೆ ಇಲಾಖೆಗಳ ಸಿಬ್ಬಂದಿಗಳಿಗೆ ವ್ಯಾಕ್ಸಿನ್ ನೀಡಲು ತಯಾರಿ ನಡೆಯುತ್ತಿದೆ.

    ಉಡುಪಿ: ಕೋವಿಶೀಲ್ಡ್ ಇಂಜೆಕ್ಷನ್ ಚುಚ್ಚಿಸಿಕೊಂಡರು. ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವ್ಯಾಕ್ಸಿನೇಶನ್ ಕೊಠಡಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯ್ತು. ಜಿಲ್ಲಾಧಿಕಾರಿಗಳ ಜೊತೆ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಎಎಸ್‍ಪಿ ಕುಮಾರ ಚಂದ್ರ, ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ನಗರಸಭೆ ಕಮಿಷನರ್ ಉದಯಕುಮಾರ್ ಶೆಟ್ಟಿ ಕೂಡಾ ಲಸಿಕೆ ಹಾಕಿಸಿಕೊಂಡರು.

    ತಾಲೂಕಿನಲ್ಲಿ ತಹಶೀಲ್ದಾರರು, ಇಒಗಳು ವ್ಯಾಕ್ಸಿನೇಷನ್ ಪಡೆದುಕೊಳ್ಳಲಿದ್ದಾರೆ. ಮೂರು ದಿನದಲ್ಲಿ 4,040 ಜನರಿಗೆ ಲಸಿಕೆ ಹಾಕಲಾಗುತ್ತದೆ. ಮೊದಲ ದಿನ 593 ಜನಕ್ಕೆ ಲಸಿಕೆ ಹಾಕಲಾಗುತ್ತದೆ. ನಾವು ಮೊದಲು ತೆಗೆದುಕೊಂಡು ಕೊರೊನಾ ರಿಸ್ಕ್ ಕಡಿಮೆ ಮಾಡಬೇಕು. ಅಧಿಕಾರಿ ವರ್ಗ ಆರೋಗ್ಯವಾಗಿದ್ದು ರೋಗದ ವಿರುದ್ಧದ ಹೋರಾಟಕ್ಕೆ ಸಿದ್ಧವಾಗಿರಬೇಕು ಎಂಬ ಹಿನ್ನೆಲೆಯಲ್ಲಿ ನಾವೇ ಲಸಿಕೆ ಹಾಕಿಸಿಕೊಂಡಿದ್ದೇವೆ. ಇಂಜೆಕ್ಷನ್ ತೆಗೆದಕೊಂಡ ಮೇಲೆ ಯಾವುದೇ ವ್ಯತ್ಯಾಸ ಆಗಿಲ್ಲ. ಯಾರೂ ಲಸಿಕೆ ಪಡೆಯಲು ಹಿಂಜರಿಯೋದು ಬೇಡ. ಕೊರೋನಾದ ರಿಸ್ಕ್ ಗೆ ಹೋಲಿಸಿದ್ರೆ ಪಾಯಿಂಟ್ ಶೇ.1 ರಿಸ್ಕ್ ಇಲ್ಲ ಎಂದು ಡಿಸಿ ಜಿ. ಜಗದೀಶ್ ಹೇಳಿದರು.

    ಕೊರೊನಾ ಬಂದವರಿಗೆ ಅವರ ಕುಟುಂಬಕ್ಕೆ ಲಸಿಕೆಯ ಬೆಲೆ ಗೊತ್ತಿರುತ್ತದೆ. ಕೊರೊನಾ ನಿವಾರಣೆಯಾಗಿದೆ ಎಂಬ ಮನೋಭಾವನೆಯಲ್ಲಿ ಜನ ಇದ್ದಾರೆ. ಆದರೆ ಕೊರೊನ ರೂಪಾಂತರ ಆಗುವ ಸಾಧ್ಯತೆ. ಇದೇ ಎಚ್ಚರಿಕೆಗೋಸ್ಕರ ಲಸಿಕೆಯನ್ನು ಪಡೆದುಕೊಳ್ಳಲೇಬೇಕು. ಸರ್ಕಾರದಿಂದ ಉಚಿತ ಲಸಿಕೆ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಸಿಇಒ ಡಾ. ನವೀನ್ ಭಟ್ ಹೇಳಿದರು.

    ಕೊರೊನಾ ಲಸಿಕೆ ತೆಗೆದುಕೊಳ್ಳಲು ಯಾರು ಹಿಂಜರಿಯುವ ಅವಶ್ಯಕತೆ ಇಲ್ಲ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡುವ ಫ್ರಂಟ್ ಲೈನ್ ವರ್ಕರ್ಸ್ ಎಲ್ಲರೂ ಆತಂಕವಿಲ್ಲದೆ ಲಸಿಕೆ ತೆಗೆದುಕೊಳ್ಳಿ ಎಂದು ಎಎಸ್‍ಪಿ ಕುಮಾರ ಚಂದ್ರ ಕರೆಕೊಟ್ಟರು.

  • ಕೋವಿಡ್ ಲಸಿಕೆಗೆ 35 ಸಾವಿರ ಕೋಟಿ

    ಕೋವಿಡ್ ಲಸಿಕೆಗೆ 35 ಸಾವಿರ ಕೋಟಿ

    ನವದೆಹಲಿ: ಈ ವರ್ಷ ಕೋವಿಡ್ ಲಸಿಗೆಗಾಗಿ ಸರ್ಕಾರ 35 ಸಾವಿರ ಕೋಟಿ ಮೀಸಲಿರಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಎಂದು ತಿಳಿಸಿದರು.

    ಈ ವರ್ಷದ ಬಜೆಟ್ ನಲ್ಲಿ ಕೋವಿಡ್ ಲಸಿಕೆಗಾಗಿ 35 ಸಾವಿರ ಕೋಟಿ ರೂ. ಅನುದಾನವನ್ನ ಮೀಸಲಿರಿಸಲಾಗುವುದು. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಅನುದಾನವನ್ನ ಹೆಚ್ಚಿಸಲಾಗುವುದು. ಹೆಲ್ತ್ ಬಜೆಟ್ ಗೆ 2 ಲಕ್ಷ 32 ಸಾವಿರ ಕೋಟಿ ಅನುದಾನ ಮೀಸಲಿರಿಸಲಾಗಿದೆ. ಈ ಮೊದಲಿನ ಬಜೆಟ್ ನಲ್ಲಿ 92 ಸಾವಿರ ಕೋಟಿ ಫಂಡ್ ನೀಡಲಾಗಿತ್ತು. ಈ ಬಾರಿ ಹೆಲ್ತ್ ಬಜೆಟ್ ಫಂಡ್ ಶೇ.137ರಷ್ಟು ಏರಿಕೆಯಾಗಿದೆ ಎಂದರು.

    ಇದೇ ವೇಳೆ ಭಾರತದಲ್ಲಿ ಎರಡು ಕೊರೊನಾ ವ್ಯಾಕ್ಸಿನ್ ಲಭ್ಯವಿದ್ದು, ನೂರಕ್ಕೂ ಹೆಚ್ಚು ದೇಶಗಳು ಇದರ ಲಾಭವನ್ನ ಪಡೆಯುತ್ತಿವೆ. ಇನ್ನೆರಡು ಲಸಿಕೆಗಳು ಬರಲಿದೆ. ಪ್ರಧಾನಿಗಳು ನಮ್ಮ ವಿಜ್ಞಾನಿಗಳ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಕೊರೊನಾ ವಿರುದ್ಧದ 2021ರಲ್ಲಿ ಮುಂದುವರಿದಿದೆ. ಎರಡು ವಿಶ್ವ ಯುದ್ಧದ ರೀತಿಯಲ್ಲಿ ಕೋವಿಡ್ ನಂತರದ ಜಗತ್ತು ಮತ್ತು ರಾಜಕೀಯ ನೀತಿಗಳು ಬದಲಾಗುತ್ತಿವೆ. ಈ ಯುದ್ಧದಲ್ಲಿ ಭಾರತವನ್ನ ಲ್ಯಾಂಡ್ ಆಫ್ ಹೋಪ್ ರೀತಿಯಲ್ಲಿ ಜಗತ್ತು ನೋಡುತ್ತಿದೆ. ಕೊರೊನಾ ವೇಳೆ ಕಾರ್ಯನಿರ್ವಹಿಸಿದ ಹೆಲ್ತ್ ವರ್ಕರ್ ಸೇರಿದಂತೆ ಎಲ್ಲ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದರು.

    ಸರ್ಕಾರ ಈ ವರ್ಷ ಸ್ವಚ್ಛ ಭಾರತ ಮಿಶನ್ 2.0 ಅಡಿಯಲ್ಲಿ 1.41 ಲಕ್ಷ ಕೋಟಿ ಖರ್ಚು ಮಾಡಲಿದೆ. ಮುಂದಿನ ಐದು ವರ್ಷಗಳಲ್ಲಿ ಏರ್ ಕ್ಲೀನಿಂಗ್ ಗಾಗಿ ಎರಡು ಸಾವಿರ ಕೋಟಿ ರೂ. ಮೀಸಲಿರಿಸಲಿದೆ ಎಂದು ಮಾಹಿತಿ ನೀಡಿದರು.

  • ಲಸಿಕೆ ತೆಗೆದುಕೊಳ್ಳಲು ವೈದ್ಯರು, ನರ್ಸ್‍ಗಳು ವಿರೋಧಿಸಿದ್ರೂ ಉತ್ತರಕನ್ನಡ ಜಿಲ್ಲೆ ರಾಜ್ಯಕ್ಕೆ ಮಾದರಿ!

    ಲಸಿಕೆ ತೆಗೆದುಕೊಳ್ಳಲು ವೈದ್ಯರು, ನರ್ಸ್‍ಗಳು ವಿರೋಧಿಸಿದ್ರೂ ಉತ್ತರಕನ್ನಡ ಜಿಲ್ಲೆ ರಾಜ್ಯಕ್ಕೆ ಮಾದರಿ!

    ಕಾರವಾರ: ರಾಜ್ಯ ಸರ್ಕಾರ ಜನವರಿ 16 ರಂದು ಕೊರೊನಾ ಲಸಿಕೆಯನ್ನು ಕೊರೊನಾ ವಾರಿಯರ್ಸ್ ಗಳಿಗೆ ಮೊದಲು ನೀಡಲು ಪ್ರಾರಂಭ ಮಾಡಿತು. ಆದರೆ ಜನರಿಗೆ ಧೈರ್ಯ ತುಂಬಬೇಕಾದ ವೈದ್ಯರು ಮತ್ತು ನರ್ಸ್ ಗಳೇ ಕೊರೊನಾ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ವೈದ್ಯರು, ನರ್ಸ್ ಸೇರಿದಂತೆ ಒಟ್ಟು 14,655 ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲು ಜಿಲ್ಲಾ ಆರೋಗ್ಯ ಇಲಾಖೆ ಪಟ್ಟಿ ಮಾಡಿತ್ತು. ಇದರಲ್ಲಿ 9,689 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. 4,966 ಜನ ತೆಗೆದುಕೊಳ್ಳುವುದು ಬಾಕಿ ಇದ್ದು, 311 ಮಂದಿ ಗರ್ಭಿಣಿ ಹಾಗೂ ಇತರೆ ರೋಗ ಕಾರಣಗಳಿಗೆ ನೀಡಲಾಗಿಲ್ಲ. 9 ಜನರಿಗೆ ಜಿಲ್ಲೆಯಲ್ಲಿ ಲಸಿಕೆ ಪಡೆದ ನಂತರ ತಲೆ ಸುತ್ತುವ ಹಾಗೂ ಜ್ವರದ ಚಿಕ್ಕಪುಟ್ಟ ಪರಿಣಾಮ ಬಿಟ್ಟರೆ ಲಸಿಕೆಯ ಅಡ್ಡಪರಿಣಾಮ ಆಗಿಲ್ಲ. 4,655 ಜನರು ತೆಗೆದುಕೊಳ್ಳಬೇಕಿದ್ದು ಇದರಲ್ಲಿ ವೈದ್ಯರು, ನರ್ಸ್ ಗಳು, ಆಯುಷ್ ಇಲಾಖೆ ವೈದ್ಯರು, ಖಾಸಗಿ ಆಸ್ಪತ್ರೆ ಸಿಬ್ಬಂದಿ ಸೇರಿದ್ದಾರೆ. ಆದರೆ ಇವರಲ್ಲಿ ಕಡ್ಡಾಯವಲ್ಲದ ಕಾರಣ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.

    ಈ ಕುರಿತು ಮಾತನಾಡಿದ ಆರ್‍ಸಿಹೆಚ್‍ಓ ರಮೇಶ್, ಶೇ.50 ವೈದ್ಯರು, ನರ್ಸುಗಳು ಅದರಲ್ಲೂ ಖಾಸಗಿ ಆಸ್ಪತ್ರೆಯವರೇ ಹೆಚ್ಚಾಗಿ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಇವರ ಮನಪರಿವರ್ತನೆ ಮಾಡಲು ಇಲಾಖೆ ಪ್ರಯತ್ನ ನಡೆಸುತ್ತಿದೆ. ಲಸಿಕೆಯಿಂದ ಯಾವುದೇ ಸಮಸ್ಯೆಗಳು ಹೆಚ್ಚಿನದಾಗಿಲ್ಲ. ಲಸಿಕೆಯಿಂದ ಯಾವುದೇ ತೊಂದರೆ ಆಗದು. ರಾಜ್ಯದಲ್ಲಿ ಲಸಿಕೆ ನೀಡುವಲ್ಲಿ ನಾಲ್ಕನೇ ಸ್ಥಾನ ಉತ್ತರ ಕನ್ನಡ ಜಿಲ್ಲೆಗೆ ಸಂದಿದೆ. ಉಳಿದ ನಾಲ್ಕು ಸಾವಿರ ಜನರಿಗೂ ಲಸಿಕೆ ನೀಡುತ್ತೇವೆ. ಸದ್ಯ ಜಿಲ್ಲೆಯಲ್ಲಿ ಮೊದಲ ಹಂತವಾಗಿ 7500 ಲಸಿಕೆಗಳು ಬಂದಿದ್ದವು. ನಂತರ ಎರಡನೇ ಹಂತದಲ್ಲಿ 7,500 ಲಸಿಕೆ ಬಂದಿದೆ. ನಮ್ಮ ಬೇಡಿಕೆ 15 ಸಾವಿರ ಲಸಿಕೆಯದ್ದಾಗಿತ್ತು. ಆದರೆ ಯಾವುದೇ ತೊಂದರೆ ಆಗದಂತೆ ಲಸಿಕೆಯನ್ನು ಸರ್ಕಾರ ನೀಡಿದೆ ಎಂದಿದ್ದಾರೆ.

    ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯದ ವೈದ್ಯರು, ನರ್ಸ್ ಗಳಿಗೆ ಕೌನ್ಸ್ ಲಿಂಗ್ ಮೂಲಕ ಮನಪರಿವರ್ತನೆಗೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ. ಈ ಕುರಿತು ಭಯ ಬಿಡುವಂತೆ ಜಾಗೃತಿ ಪ್ರಯತ್ನ ಸಾಗಿದೆ. ಆದರೂ ಜಿಲ್ಲೆಯು ರಾಜ್ಯದಲ್ಲೇ ಅತೀ ಹೆಚ್ಚು ವ್ಯಾಕ್ಸಿನ್ ಪಡೆದ ಜಿಲ್ಲೆಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.

  • ಇಂದು 550 ಕೊರೊನಾ ಸೋಂಕು – 15,809 ಜನಕ್ಕೆ ಲಸಿಕೆ

    ಇಂದು 550 ಕೊರೊನಾ ಸೋಂಕು – 15,809 ಜನಕ್ಕೆ ಲಸಿಕೆ

    ಬೆಂಗಳೂರು: ಇಂದು 550 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 9,37,933ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾದಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

    ಸದ್ಯ ರಾಜ್ಯದಲ್ಲಿ 6,202 ಸಕ್ರಿಯ ಪ್ರಕರಣಗಳಿದ್ದು, 150 ಸೋಂಕಿ ತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 12,209ಕ್ಕೆ ಏರಿಕೆಯಾಗಿದ್ದು, ಇಂದು 644 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.83 ಮತ್ತು ಮರಣ ಪ್ರಮಾಣ ಶೇ.0.36ರಷ್ಟಿದೆ. ಇಂದು ರಾಜ್ಯದಲ್ಲಿ 15,809 ಜನರು ಕೊರೊನಾ ಲಸಿಕೆಯನ್ನ ಪಡೆದುಕೊಂಡಿದ್ದಾರೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 4, ಬಳ್ಳಾರಿ 2, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 311, ಬೀದರ್ 5, ಚಾಮರಾಜನಗರ 5, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 2, ಚಿತ್ರದುರ್ಗ 15, ದಕ್ಷಿಣ ಕನ್ನಡ 34, ದಾವಣಗೆರೆ 3, ಧಾರವಾಡ 5, ಗದಗ 0, ಹಾಸನ 12, ಹಾವೇರಿ 1, ಕಲಬುರಗಿ 16, ಕೊಡಗು 22, ಕೋಲಾರ 9, ಕೊಪ್ಪಳ 0, ಮಂಡ್ಯ 4, ಮೈಸೂರು 19, ರಾಯಚೂರು 0, ರಾಮನಗರ 2, ಶಿವಮೊಗ್ಗ 10, ತುಮಕೂರು 18, ಉಡುಪಿ 13, ಉತ್ತರ ಕನ್ನಡ 9, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

    ಕೊರೊನಾ ಲಸಿಕೆ: ಬಾಗಲಕೋಟೆ 226, ಬಳ್ಳಾರಿ 102, ಬೆಳಗಾವಿ 1,052, ಬೆಂಗಳೂರು ಗ್ರಾಮಾಂತರ 83, ಬೆಂಗಳೂರು ನಗರ 5,464, ಬೀದರ್ 78, ಚಾಮರಾಜನಗರ 28, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 209, ಚಿತ್ರದುರ್ಗ 0, ದಕ್ಷಿಣ ಕನ್ನಡ 1,468, ದಾವಣಗೆರೆ 660, ಧಾರವಾಡ 375, ಗದಗ 76, ಹಾಸನ 402, ಹಾವೇರಿ 0, ಕಲಬುರಗಿ 579, ಕೊಡಗು 232, ಕೋಲಾರ 397, ಕೊಪ್ಪಳ 140, ಮಂಡ್ಯ 461, ಮೈಸೂರು 1238, ರಾಯಚೂರು 144, ರಾಮನಗರ 77, ಶಿವಮೊಗ್ಗ 490, ತುಮಕೂರು 339, ಉಡುಪಿ 1014, ಉತ್ತರ ಕನ್ನಡ 0, ವಿಜಯಪುರ 475 ಮತ್ತು ಯಾದಗಿರಿ 0.