Tag: ಕೊರೊನಾ ಲಸಿಕೆ

  • ಕೊರೊನಾ ಲಸಿಕೆ ಪಡೆದುಕೊಂಡ ಪ್ರಧಾನಿ ಮೋದಿ

    ಕೊರೊನಾ ಲಸಿಕೆ ಪಡೆದುಕೊಂಡ ಪ್ರಧಾನಿ ಮೋದಿ

    – ಎಲ್ಲರೂ ಲಸಿಕೆ ಪಡೆದುಕೊಳ್ಳುವಂತೆ ಕರೆ

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಗೆ ಈಗಾಗಲೇ ಲಸಿಕೆ ಬಂದಿದ್ದು, ದೇಶದೆಲ್ಲೆಡೆ ಲಸಿಕೆ ನೀಡಲಾಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ದೆಹಲಿಯ ಆಲ್ ಇಂಡಿಯಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಮೋದಿ, ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಲಸಿಕೆ ಪಡೆದಿದ್ದಾರೆ. ಈ ಸಂಬಂಧ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ -19 ಲಸಿಕೆ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ..?
    ಏಮ್ಸ್ ನಲ್ಲಿ ನನ್ನ ಮೊದಲ ಡೋಸ್ ಕೋವಿಡ್-19 ಲಸಿಕೆ ತೆಗೆದುಕೊಂಡೆ. ಕೋವಿಡ್-19 ವಿರುದ್ಧದ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ತ್ವರಿತ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗಿದೆ. ಲಸಿಕೆ ತೆಗೆದುಕೊಳ್ಳುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಪ್ರಧಾನಿ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ತಾವು ಕೊರೊನಾ ವೈರಸ್ ಲಸಿಕೆ ತೆಗೆದುಕೊಂಡ ನಂತರ ಭಾರತವನ್ನು ಕೋವಿಡ್ ಮುಕ್ತ ದೇಶವನ್ನಾಗಿ ಮಾಡಲು ಎಲ್ಲರೂ ಲಸಿಕೆ ಪಡೆದುಕೊಳ್ಳುವಂತೆ ಮೋದಿ ಮನವಿ ಮಾಡಿದರು. ಎಲ್ಲರೂ ಒಟ್ಟಾಗಿ ನಾವು ಭಾರತವನ್ನು ಕೊರೊನಾದಿಂದ ಮುಕ್ತಗೊಳಿಸೋಣ ಎಂದು ಕರೆ ನೀಡಿದ್ದಾರೆ.

  • ಸೋಮವಾರದಿಂದ ಸಾರ್ವಜನಿಕರಿಗೂ ಕೊರೊನಾ ಲಸಿಕೆ – ವ್ಯಾಕ್ಸಿನ್ ಪಡೆಯೋದು ಹೇಗೆ?

    ಸೋಮವಾರದಿಂದ ಸಾರ್ವಜನಿಕರಿಗೂ ಕೊರೊನಾ ಲಸಿಕೆ – ವ್ಯಾಕ್ಸಿನ್ ಪಡೆಯೋದು ಹೇಗೆ?

    ಬೆಂಗಳೂರು: ಸೋಮವಾರದಿಂದ ಸಾಮಾನ್ಯ ಜನರು ಸಹ ಕೊರೊನಾ ಲಸಿಕೆ ಪಡೆಯಬಹುದಾಗಿದೆ. ನಾಳೆಯಿಂದ ರಾಜ್ಯದ 200 ಆಸ್ಪತ್ರೆಗಳಲ್ಲಿ ಕೊರೊನಾ ವ್ಯಾಕ್ಸಿನ್ ಸಿಗಲಿದ್ದು, ಲಸಿಕಾ ವಿತರಣೆ ಕೇಂದ್ರ ಸರ್ಕಾರ ಮಾರ್ಗಸೂಚಿ ಸಹ ಬಿಡುಗಡೆ ಮಾಡಿದೆ. ಲಸಿಕೆ ಪಡೆಯಲು ಮುಂದಾಗುವವರು ದಾಖಲಾತಿಗಳೊಂದಿಗೆ ಮಾರ್ಗಸೂಚಿ ಪಾಲಿಸಬೇಕು. ಸರ್ಕಾರಿ, ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ.

    ಯಾರಿಗೆ ವ್ಯಾಕ್ಸಿನ್?: 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಬಹುದಾಗಿದೆ. 45 ವರ್ಷ ಮೇಲ್ಪಟ್ಟ ಅನಾರೋಗ್ಯ ಪೀಡಿತರು ಅಂದರೆ ಡಯಾಬಿಟಿಸ್, ಹಾರ್ಟ್ ಪ್ರಾಬ್ಲಂ, ಹೈಪರ್ ಟೆನ್ಶನ್, ಕ್ಯಾನ್ಸರ್, ಕಿಡ್ನಿ ಪ್ರಾಬ್ಲಂ, ಪಾಶ್ರ್ವವಾಯು ಇರೋವವರು ಲಸಿಕೆ ಪಡೆಯಲಬಹುದಾಗಿದೆ. ಗಂಭೀರ ಖಾಯಿಲೆ ಇದ್ದವರಿಗೆ ವ್ಯಾಕ್ಸಿನ್ ನೀಡಲು ಸಮಂಜಸವಲ್ಲ.

    ಎಷ್ಟು ಬೆಲೆ?: ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಉಚಿತವಾಗಿ ಸಿಗಲಿದು, ಖಾಸಗಿ ಆಸ್ಪತ್ರೆಯಲ್ಲಿ 250 ರೂ. ಪಾವತಿಸಬೇಕು. ಈ ಪೈಕಿ 150 ರೂ. ವ್ಯಾಕ್ಸಿನ್, 100 ರೂ. ಸೇವಾ ಶುಲ್ಕ ಒಳಗೊಂಡಿದೆ. ಕೊ-ವಿನ್ 2.0 ಆ್ಯಪ್, ಆರೋಗ್ಯ ಸೇತು ಆ್ಯಪ್‍ಗಳಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು ಅಥವಾ ಆನ್‍ಲೈನ್ ನೋಂದಣಿ ಮಾಡದವರು ಲಸಿಕಾ ಕೇಂದ್ರಗಳಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.

    ಲಸಿಕೆ ಪಡೆಯುವವರು ರೇಷನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ದಾಖಲೆಗಳನ್ನ ನೀಡಬೇಕು. 45-59 ವರ್ಷದವರಿಗೆ ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ. ಇನ್ನು ಆರೋಗ್ಯ ಕಾರ್ಯಕರ್ತರು ಎಂಪ್ಲಾಯಿಮೆಂಟ್ ಕಾರ್ಡ್ ಒದಗಿಸಬೇಕು.

    ಖಾಸಗಿ ಆಸ್ಪತ್ರೆಗಳಿಗೆ ಮಾರ್ಗಸೂಚಿ: ಒಬ್ಬ ವ್ಯಕ್ತಿಗೆ 1 ಡೋಸ್‍ಗೆ 250 ರೂಪಾಯಿ ಮಾತ್ರ ಬೆಲೆಯನ್ನ ಸರ್ಕಾರ ನಿಗದಿ ಮಾಡಿದೆ. ಫಲಾನುಭವಿಗಳ ರಿಜಿಸ್ಟ್ರೇಶನ್ ವಿವರ ಆನ್‍ಲೈನ್ ಆ್ಯಪ್‍ನಲ್ಲಿ ಅಪ್ಲೋಡ್ ಮಾಡಿಕೊಳ್ಳಬೇಕು. ಕೋಲ್ಡ್ ಚೈನ್ ಲಿಂಕ್ ಫಾಲೋ ಮಾಡಬೇಕು. ವ್ಯಾಕ್ಸಿನ್ ಸೈಟ್ಸ್ ವಿವರ ಕಡ್ಡಾಯವಾಗಿ ಹಾಕಲೇಬೇಕು. ಬೇರೆ ಖಾಯಿಲೆಯಿಂದ ಬಳಲುತಿದ್ದರೆ ಮೆಡಿಕಲ್ ಸರ್ಟಿಫಿಕೇಟ್ ಅಪ್ಲೋಡ್ ಮಾಡಲೇಬೇಕು.

    ಬೆಂಗಳೂರಿನಲ್ಲಿ ಬೃಹತ್ ಪ್ಲಾನ್: ಸಿಲಿಕಾನ್ ಸಿಟಿಯಲ್ಲಿ ಲಸಿಕೆ ನೀಡಲು ಬಿಬಿಎಂಪಿ ಬೃಹತ್ ಪ್ಲಾನ್ ಮಾಡಿಕೊಂಡಿದೆ. 198 ವಾರ್ಡ್, ಒಂದೊಂದು ವಾರ್ಡ್ ಗೆ 3 ಟೀಂನಂತೆ ಸರ್ವೇ ಮಾಡಲಾಗುತ್ತಿದ್ದು, ಪ್ರತಿ ತಂಡದಿಂದ ಸ್ಲಂ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಮುಂದಿನ 10 ದಿನಗಳಲ್ಲಿ ಸರ್ವೆ ಮುಗಿಸಲು ಬಿಬಿಎಂಪಿ ಪ್ಲ್ಯಾನ್ ಮಾಡಲಾಗಿದ್ದು, ಮುಂದಿನ 10 ದಿನಗಳಲ್ಲಿ ಸರ್ವೆ ಮುಗಿಸಲು ಸಿದ್ಧತೆ ನಡೆದಿದೆ. 1 ಕೋಟಿ 30 ಲಕ್ಷ ಜನರ ಆರೋಗ್ಯ ಕಾರ್ಡ್ ರೆಡಿ ಮಾಡಲು ಸಿದ್ಧತೆ ನಡೆದಿದ್ದು, ಖಾಸಗಿ ಆಸ್ಪತ್ರೆಗಳಿಗೆ 1 ದಿನದ ಆನ್‍ಲೈನ್ ತರಬೇತಿ ಲಿಂಕ್ ಮೂಲಕ ಸಲಹೆಗಳನ್ನ ನೀಡಲಾಗುತ್ತದೆ. ಸದ್ಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳು ವ್ಯಾಕ್ಸಿನ್ ಹಂಚಿಕೆಗೆ ಸಿದ್ಧಗೊಂಡಿವೆ.

  • ಮತ್ತೆ ಹೆಚ್ಚುತ್ತಿವೆ ಕೊರೊನಾ ಪ್ರಕರಣ- ಸತತ 2ನೇ ದಿನ 500ಕ್ಕಿಂತ ಹೆಚ್ಚು ಕೇಸ್ ಪತ್ತೆ

    ಮತ್ತೆ ಹೆಚ್ಚುತ್ತಿವೆ ಕೊರೊನಾ ಪ್ರಕರಣ- ಸತತ 2ನೇ ದಿನ 500ಕ್ಕಿಂತ ಹೆಚ್ಚು ಕೇಸ್ ಪತ್ತೆ

    – ಬೆಂಗಳೂರಲ್ಲಿ ಸತತ 2ನೇ ದಿನ 300ಕ್ಕಿಂತ ಹೆಚ್ಚು ಕೇಸ್

    ಬೆಂಗಳೂರು: ಇಂದು ರಾಜ್ಯದಲ್ಲಿ 523 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 380 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಹಾಮಾರಿಗೆ ಇಂದು 6 ಜನ ಬಲಿಯಾಗಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12,326ಕ್ಕೆ ಏರಿಕೆಯಾಗಿದೆ.

    ಕೊರೊನಾ ಸೋಂಕಿತರ ಸಂಖ್ಯೆ 9,50,730ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ 5,638 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಪೈಕಿ 121 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಬೆಂಗಳೂರು ನಗರ ಜಿಲ್ಲೆಯಲ್ಲಿ 5, ಧಾರವಾಡದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

    ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.71 ಮತ್ತು ಮರಣ ಪ್ರಮಾಣ ಶೇ.1.14ರಷ್ಟು ದಾಖಲಾಗಿದೆ. ಇಂದು 73,432 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 10, ಬೆಳಗಾವಿ 13, ಬೆಂಗಳೂರು ಗ್ರಾಮಾಂತರ 5, ಬೆಂಗಳೂರು ನಗರ 329, ಬೀದರ್ 9, ಚಾಮರಾಜನಗರ 4, ಚಿಕ್ಕಬಳ್ಳಾಪುರ 11, ಚಿಕ್ಕಮಗಳೂರು 3, ಚಿತ್ರದುರ್ಗ 4, ದಕ್ಷಿಣ ಕನ್ನಡ 21, ದಾವಣಗೆರೆ 1, ಧಾರವಾಡ 4, ಗದಗ 2, ಹಾಸನ 8, ಹಾವೇರಿ 0, ಕಲಬುರಗಿ 17, ಕೊಡಗು 4, ಕೋಲಾರ 5, ಕೊಪ್ಪಳ 0, ಮಂಡ್ಯ 4, ಮೈಸೂರು 31, ರಾಯಚೂರು 0, ರಾಮನಗರ 0, ಶಿವಮೊಗ್ಗ 3, ತುಮಕೂರು 9, ಉಡುಪಿ 18, ಉತ್ತರ ಕನ್ನಡ 0, ವಿಜಯಪುರ 7 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಇಂದು 571 ಹೊಸ ಕೊರೊನಾ ಪ್ರಕರಣ- 642 ಡಿಸ್ಚಾರ್ಜ್

    ಇಂದು 571 ಹೊಸ ಕೊರೊನಾ ಪ್ರಕರಣ- 642 ಡಿಸ್ಚಾರ್ಜ್

    ಬೆಂಗಳೂರು: ಇಂದು ರಾಜ್ಯದಲ್ಲಿ 571 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 642 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಹಾಮಾರಿಗೆ ಇಂದು 4 ಜನ ಬಲಿಯಾಗಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12,320ಕ್ಕೆ ಏರಿಕೆಯಾಗಿದೆ.

    ಕೊರೊನಾ ಸೋಂಕಿತರ ಸಂಖ್ಯೆ 9,50,207ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ 5,501 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಪೈಕಿ 121 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಬೆಂಗಳೂರು ನಗರ ಜಿಲ್ಲೆಯಲ್ಲಿ 3, ಹಾಸನದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

    ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.74 ಮತ್ತು ಮರಣ ಪ್ರಮಾಣ ಶೇ.0.70ರಷ್ಟು ದಾಖಲಾಗಿದೆ. ಇಂದು 76,799 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು 83,166 ಟಾರ್ಗೆಟ್ ನೀಡಲಾಗಿತ್ತು. ಈ ಪೈಕಿ 21,888 ಅಂದರೆ ಶೇ.26ರಷ್ಟು ಜನ ಮಾತ್ರ ಕೊರೊನಾ ಲಸಿಕೆ ಪಡೆದಿದ್ದಾರೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 10, ಬೆಳಗಾವಿ 7, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 368, ಬೀದರ್ 5, ಚಾಮರಾಜನಗರ 7, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 2, ಚಿತ್ರದುರ್ಗ 7, ದಕ್ಷಿಣ ಕನ್ನಡ 22, ದಾವಣಗೆರೆ 1, ಧಾರವಾಡ 4, ಗದಗ 1, ಹಾಸನ 10, ಹಾವೇರಿ 3, ಕಲಬುರಗಿ 21, ಕೊಡಗು 4, ಕೋಲಾರ 4, ಕೊಪ್ಪಳ 4, ಮಂಡ್ಯ 3, ಮೈಸೂರು 36, ರಾಯಚೂರು 0, ರಾಮನಗರ 1, ಶಿವಮೊಗ್ಗ 3, ತುಮಕೂರು 18, ಉಡುಪಿ 8, ಉತ್ತರ ಕನ್ನಡ 5, ವಿಜಯಪುರ 8 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಇಂದು 453 ಹೊಸ ಕೊರೊನಾ ಪ್ರಕರಣ- 947 ಡಿಸ್ಚಾರ್ಜ್

    ಇಂದು 453 ಹೊಸ ಕೊರೊನಾ ಪ್ರಕರಣ- 947 ಡಿಸ್ಚಾರ್ಜ್

    ಬೆಂಗಳೂರು: ಇಂದು ರಾಜ್ಯದಲ್ಲಿ 453 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 947 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಹಾಮಾರಿಗೆ ಇಂದು 7 ಜನ ಬಲಿಯಾಗಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12,316ಕ್ಕೆ ಏರಿಕೆಯಾಗಿದೆ.

    ಕೊರೊನಾ ಸೋಂಕಿತರ ಸಂಖ್ಯೆ 9,49,636ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ 5,576 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಪೈಕಿ 121 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಬೆಂಗಳೂರು ನಗರ ಜಿಲ್ಲೆಯಲ್ಲಿ 4, ಕಲಬುರಗಿ, ಮಂಡ್ಯ ಹಾಗೂ ಉಡುಪಿಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

    ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.66 ಮತ್ತು ಮರಣ ಪ್ರಮಾಣ ಶೇ.1.54ರಷ್ಟು ದಾಖಲಾಗಿದೆ. ಇಂದು 68,166 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು 61,517 ಟಾರ್ಗೆಟ್ ನೀಡಲಾಗಿತ್ತು. ಈ ಪೈಕಿ 19,062 ಅಂದರೆ ಶೇ.31ರಷ್ಟು ಜನ ಮಾತ್ರ ಕೊರೊನಾ ಲಸಿಕೆ ಪಡೆದಿದ್ದಾರೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 9, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 271, ಬೀದರ್ 6, ಚಾಮರಾಜನಗರ 0, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 2, ಚಿತ್ರದುರ್ಗ 4, ದಕ್ಷಿಣ ಕನ್ನಡ 24, ದಾವಣಗೆರೆ 1, ಧಾರವಾಡ 6, ಗದಗ 2, ಹಾಸನ 7, ಹಾವೇರಿ 0, ಕಲಬುರಗಿ 12, ಕೊಡಗು 7, ಕೋಲಾರ 2, ಕೊಪ್ಪಳ 0, ಮಂಡ್ಯ 4, ಮೈಸೂರು 27, ರಾಯಚೂರು 2, ರಾಮನಗರ 0, ಶಿವಮೊಗ್ಗ 5, ತುಮಕೂರು 24, ಉಡುಪಿ 12, ಉತ್ತರ ಕನ್ನಡ 2, ವಿಜಯಪುರ 4 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಇಂದು 334 ಹೊಸ ಕೊರೊನಾ ಪ್ರಕರಣ- 313 ಡಿಸ್ಚಾರ್ಜ್

    ಇಂದು 334 ಹೊಸ ಕೊರೊನಾ ಪ್ರಕರಣ- 313 ಡಿಸ್ಚಾರ್ಜ್

    ಬೆಂಗಳೂರು: ಇಂದು ರಾಜ್ಯದಲ್ಲಿ 334 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 313 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಹಾಮಾರಿಗೆ ಇಂದು 6 ಜನ ಬಲಿಯಾಗಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12,309ಕ್ಕೆ ಏರಿಕೆಯಾಗಿದೆ.

    ಕೊರೊನಾ ಸೋಂಕಿತರ ಸಂಖ್ಯೆ 9,49,183ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ 6,077 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಪೈಕಿ 122 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಬೆಂಗಳೂರು ನಗರ ಜಿಲ್ಲೆಯಲ್ಲಿ 4, ಮೈಸೂರು ಹಾಗೂ ತುಮಕೂರಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

    ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.52 ಮತ್ತು ಮರಣ ಪ್ರಮಾಣ ಶೇ.1.79ರಷ್ಟು ದಾಖಲಾಗಿದೆ. ಇಂದು 63,042 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ರಾಜ್ಯದಲ್ಲಿ 1,45,174 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 1, ಬಳ್ಳಾರಿ 8, ಬೆಳಗಾವಿ 7, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 174, ಬೀದರ್ 4, ಚಾಮರಾಜನಗರ 2, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 4, ಚಿತ್ರದುರ್ಗ 5, ದಕ್ಷಿಣ ಕನ್ನಡ 9, ದಾವಣಗೆರೆ 4, ಧಾರವಾಡ 7, ಗದಗ 0, ಹಾಸನ 7, ಹಾವೇರಿ 0, ಕಲಬುರಗಿ 13, ಕೊಡಗು 1, ಕೋಲಾರ 4, ಕೊಪ್ಪಳ 2, ಮಂಡ್ಯ 5, ಮೈಸೂರು 25, ರಾಯಚೂರು 2, ರಾಮನಗರ 0, ಶಿವಮೊಗ್ಗ 3, ತುಮಕೂರು 16, ಉಡುಪಿ 7, ಉತ್ತರ ಕನ್ನಡ 1, ವಿಜಯಪುರ 8 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಇಂದು 383 ಹೊಸ ಕೊರೊನಾ ಪ್ರಕರಣ- 378 ಡಿಸ್ಚಾರ್ಜ್

    ಇಂದು 383 ಹೊಸ ಕೊರೊನಾ ಪ್ರಕರಣ- 378 ಡಿಸ್ಚಾರ್ಜ್

    – ಬೆಂಗಳೂರಲ್ಲಿ ಮಾತ್ರ 4 ಸಾವು

    ಬೆಂಗಳೂರು: ಇಂದು ರಾಜ್ಯದಲ್ಲಿ 383 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 378 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಹಾಮಾರಿಗೆ ಇವತ್ತು ಸಹ ಇಬ್ಬರು ಬಲಿಯಾಗಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12,303ಕ್ಕೆ ಏರಿಕೆಯಾಗಿದೆ.

    ಕೊರೊನಾ ಸೋಂಕಿತರ ಸಂಖ್ಯೆ 9,48,849ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ 6,062 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಪೈಕಿ 122 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಬೆಂಗಳೂರು ನಗರ ಜಿಲ್ಲೆಯಲ್ಲಿ 4 ಸಾವು ಹೊರತುಪಡಿಸಿ ಉಳಿದ ಯಾವುದೇ ಜಿಲ್ಲೆಯಲ್ಲಿ ಸಾವು ಸಂಭವಿಸಿಲ್ಲ.

    ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.75 ಮತ್ತು ಮರಣ ಪ್ರಮಾಣ ಶೇ.1.04ರಷ್ಟು ದಾಖಲಾಗಿದೆ. ಇಂದು 50,827 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ರಾಜ್ಯದಲ್ಲಿ 1,36,188 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 5, ಬೆಳಗಾವಿ 10, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 240, ಬೀದರ್ 1, ಚಾಮರಾಜನಗರ 0, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 2, ಚಿತ್ರದುರ್ಗ 3, ದಕ್ಷಿಣ ಕನ್ನಡ 17, ದಾವಣಗೆರೆ 0, ಧಾರವಾಡ 3, ಗದಗ 0, ಹಾಸನ 9, ಹಾವೇರಿ 1, ಕಲಬುರಗಿ 8, ಕೊಡಗು 3, ಕೋಲಾರ 1, ಕೊಪ್ಪಳ 0, ಮಂಡ್ಯ 2, ಮೈಸೂರು 26, ರಾಯಚೂರು 0, ರಾಮನಗರ 2, ಶಿವಮೊಗ್ಗ 18, ತುಮಕೂರು 12, ಉಡುಪಿ 12, ಉತ್ತರ ಕನ್ನಡ 0, ವಿಜಯಪುರ 1 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಇಂದು 413 ಹೊಸ ಕೊರೊನಾ ಪ್ರಕರಣ- 353 ಡಿಸ್ಚಾರ್ಜ್

    ಇಂದು 413 ಹೊಸ ಕೊರೊನಾ ಪ್ರಕರಣ- 353 ಡಿಸ್ಚಾರ್ಜ್

    ಬೆಂಗಳೂರು: ಇಂದು ರಾಜ್ಯದಲ್ಲಿ 413 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 353 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಹಾಮಾರಿಗೆ ಇವತ್ತು ಸಹ ಇಬ್ಬರು ಬಲಿಯಾಗಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12,294ಕ್ಕೆ ಏರಿಕೆಯಾಗಿದೆ.

    ಕೊರೊನಾ ಸೋಂಕಿತರ ಸಂಖ್ಯೆ 9,48,149ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ 6,036 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಪೈಕಿ 127 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.74 ಮತ್ತು ಮರಣ ಪ್ರಮಾಣ ಶೇ.0.48ರಷ್ಟು ದಾಖಲಾಗಿದೆ. ಇಂದು 55,234 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ರಾಜ್ಯದಲ್ಲಿ 1,20,172 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 5, ಬೆಳಗಾವಿ 15, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 248, ಬೀದರ್ 3, ಚಾಮರಾಜನಗರ 0, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 4, ಚಿತ್ರದುರ್ಗ 7, ದಕ್ಷಿಣ ಕನ್ನಡ 11, ದಾವಣಗೆರೆ 2, ಧಾರವಾಡ 8, ಗದಗ 2, ಹಾಸನ 4, ಹಾವೇರಿ 0, ಕಲಬುರಗಿ 23, ಕೊಡಗು 3, ಕೋಲಾರ 0, ಕೊಪ್ಪಳ 0, ಮಂಡ್ಯ 1, ಮೈಸೂರು 24, ರಾಯಚೂರು 1, ರಾಮನಗರ 1, ಶಿವಮೊಗ್ಗ 8, ತುಮಕೂರು 6, ಉಡುಪಿ 10, ಉತ್ತರ ಕನ್ನಡ 6, ವಿಜಯಪುರ 10 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಇಂದು 368 ಹೊಸ ಕೊರೊನಾ ಪ್ರಕರಣ – 89,595 ಮಂದಿಗೆ ಲಸಿಕೆ

    ಇಂದು 368 ಹೊಸ ಕೊರೊನಾ ಪ್ರಕರಣ – 89,595 ಮಂದಿಗೆ ಲಸಿಕೆ

    ಬೆಂಗಳೂರು: ಇಂದು 368 ಹೊಸ ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸದ್ಯ 5,772ಸಕ್ರಿಯ ಪ್ರಕರಣಗಳಿದ್ದು, 128 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 9,45,638ಕ್ಕೆ ಏರಿಕೆಯಾಗಿದ್ದು, ಇದುವರೆಗೂ 12,262 ಜನರು ಸಾವನ್ನಪ್ಪಿದ್ದಾರೆ. ಇಂದು ಕೊರೊನಾದಿಂದ ಗುಣಮುಖರಾಗಿ 430 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.87 ಮತ್ತು ಮರಣ ಪ್ರಮಾಣ ಶೇ.0.54 ರಷ್ಟಿದೆ. ಇಂದು 89,595 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಕೊರೊನಾ ಲಸಿಕೆ ವಿವರ: ಬಾಗಲಕೋಟೆ 1,239 ಬಳ್ಳಾರಿ 4,525, ಬೆಳಗಾವಿ 5,258, ಬೆಂಗಳೂರು ಗ್ರಾಮಾಂತರ 1,477, ಬೆಂಗಳೂರು ನಗರ 12,497, ಬೀದರ್ 1,890, ಚಾಮರಾಜನಗರ 765, ಚಿಕ್ಕಬಳ್ಳಾಪುರ 2,460, ಚಿಕ್ಕಮಗಳೂರು 2,583, ಚಿತ್ರದುರ್ಗ 2,557, ದಕ್ಷಿಣ ಕನ್ನಡ 2,801, ದಾವಣಗೆರೆ 1,421, ಧಾರವಾಡ 2,386, ಗದಗ 3,348, ಹಾಸನ 2,950, ಹಾವೇರಿ 1,465, ಕಲಬುರಗಿ 2,210, ಕೊಡಗು 1,051, ಕೋಲಾರ 2,923, ಕೊಪ್ಪಳ 2,528, ಮಂಡ್ಯ 1,592, ಮೈಸೂರು 4,033, ರಾಯಚೂರು 2,278, ರಾಮನಗರ 1,082, ಶಿವಮೊಗ್ಗ 2,147, ತುಮಕೂರು 7,925 ಉಡುಪಿ 2,342, ಉತ್ತರ ಕನ್ನಡ 3,487, ವಿಜಯಪುರ 5,124 ಮತ್ತು ಯಾದಗಿರಿ 1,251.

  • 414 ಹೊಸ ಪ್ರಕರಣ, 486 ಡಿಸ್ಚಾರ್ಜ್ – 2 ಸಾವು

    414 ಹೊಸ ಪ್ರಕರಣ, 486 ಡಿಸ್ಚಾರ್ಜ್ – 2 ಸಾವು

    ಬೆಂಗಳೂರು: ರಾಜ್ಯದಲ್ಲಿಂದು 414 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇಂದು ಕೊರೊನಾದಿಂದ ಗುಣಮುಖರಾಗಿ 486 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9,45,270ಕ್ಕೆ ಏರಿಕೆಯಾಗಿದ್ದು, ಇದುವರೆಗೂ ಮಹಾಮಾರಿಗೆ 12,265 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 5,836 ಸಕ್ರಿಯ ಪ್ರಕರಣಗಳ ಪೈಕಿ 132 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.68 ಮತ್ತು ಮರಣ ಪ್ರಮಾಣ ಶೇ.0.48ರಷ್ಟಿದೆ. ಇಂದು 60,876 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು 86,767 ಜನರು ಕೊರೊನಾ ಲಸಿಕೆಯನ್ನು ಪಡದುಕೊಂಡಿದ್ದಾರೆ.

    ಕೊರೊನಾ ಲಸಿಕೆ ವಿವರ: ಬಾಗಲಕೋಟೆ 1,239, ಬಳ್ಳಾರಿ 4,234, ಬೆಳಗಾವಿ 5,196, ಬೆಂಗಳೂರು ಗ್ರಾಮಾಂತರ 1,076, ಬೆಂಗಳೂರು ನಗರ 11,683, ಬೀದರ್ 1,822, ಚಾಮರಾಜನಗರ 762, ಚಿಕ್ಕಬಳ್ಳಾಪುರ 2,343, ಚಿಕ್ಕಮಗಳೂರು 2,583, ಚಿತ್ರದುರ್ಗ 2,478, ದಕ್ಷಿಣ ಕನ್ನಡ 2,799, ದಾವಣಗೆರೆ 1,377, ಧಾರವಾಡ 2,366, ಗದಗ 3,272, ಹಾಸನ 2,896, ಹಾವೇರಿ 1,454, ಕಲಬುರಗಿ 2,210, ಕೊಡಗು 1,017, ಕೋಲಾರ 2,923, ಕೊಪ್ಪಳ 2,498, ಮಂಡ್ಯ 1,584, ಮೈಸೂರು 3,867, ರಾಯಚೂರು 2278, ರಾಮನಗರ 1,053, ಶಿವಮೊಗ್ಗ 1,975, ತುಮಕೂರು 7,925, ಉಡುಪಿ 2,318, ಉತ್ತರ ಕನ್ನಡ 3,225, ವಿಜಯಪುರ 5,066 ಮತ್ತು ಯಾದಗಿರಿಯಲ್ಲಿ 1,251

    ಕೊರೊನಾ ಪ್ರಕರಣಗಳು: ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 241, ಬೀದರ್ 1, ಚಾಮರಾಜನಗರ 1, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 3, ಚಿತ್ರದುರ್ಗ 6, ದಕ್ಷಿಣ ಕನ್ನಡ 24, ದಾವಣಗೆರೆ 8, ಧಾರವಾಡ 14, ಗದಗ 2, ಹಾಸನ 7, ಹಾವೇರಿ 0, ಕಲಬುರಗಿ 12, ಕೊಡಗು 2, ಕೋಲಾರ 9, ಕೊಪ್ಪಳ 1, ಮಂಡ್ಯ 10, ಮೈಸೂರು 21, ರಾಯಚೂರು 3, ರಾಮನಗರ 0, ಶಿವಮೊಗ್ಗ 0, ತುಮಕೂರು 15, ಉಡುಪಿ 13, ಉತ್ತರ ಕನ್ನಡ 1, ವಿಜಯಪುರ 1 ಮತ್ತು ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.