Tag: ಕೊರೊನಾ ಲಸಿಕೆ ಮುಕ್ತ ಗ್ರಾಮ ಪಂಚಾಯ್ತಿ

  • ಯಾದಗಿರಿಯ ತಿಂಥಣಿ ರಾಜ್ಯದ ಮೊದಲ ಕೊರೊನಾ ಲಸಿಕೆ ಮುಕ್ತ ಗ್ರಾಮ ಪಂಚಾಯ್ತಿ

    ಯಾದಗಿರಿಯ ತಿಂಥಣಿ ರಾಜ್ಯದ ಮೊದಲ ಕೊರೊನಾ ಲಸಿಕೆ ಮುಕ್ತ ಗ್ರಾಮ ಪಂಚಾಯ್ತಿ

    ಯಾದಗಿರಿ: ಇಡೀ ಜಿಲ್ಲೆ ಮಾತ್ರವಲ್ಲದೆ ರಾಜ್ಯವೇ ಜನರಿಗೆ ಕೋವಿಡ್ ಲಸಿಕೆ ಹಾಕಲು ಹರಸಹಾಸ ಪಡುತ್ತಿದೆ. ಆದರೆ ಈ ತಿಂಥಣಿ ಮಾತ್ರ ಮಾತ್ರ ಕೋವಿಡ್ ಲಸಿಕೆ ಮುಕ್ತ, ರಾಜ್ಯದ ಮೊದಲ ಗ್ರಾಮವೇನಿಸಿದೆ. ಗ್ರಾಮದಲ್ಲಿ ಪ್ರತಿಶತ 100 ರಷ್ಟು ಫಲಾನುಭವಿಗಳಿಗೆ ಲಸಿಕೆ ನೀಡಿ ಈಗ ರಾಜ್ಯದಲ್ಲಿಯೇ ತಿಂಥಣಿ ಗ್ರಾಮ ಪಂಚಾಯ್ತಿ ಮಾದರಿ ಆಗಿದೆ.

    ತಿಂಥಣಿ, ತಾದಲಾಪುರ, ಶಾಂತಪುರ, ಹುಣಸಿಹೋಳಿ, ನಿಂಗದಹಳ್ಳಿ, ಬಂಡೋಳ್ಳಿ ಒಟ್ಟು ಆರು ಗ್ರಾಮಗಳು ಈ ತಿಂಥಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತವೆ. ಕಳೆದ ಕೇವಲ 15 ದಿನದೊಳಲ್ಲಿ ತಿಂಥಣಿ ಲಸಿಕೆ ಮುಕ್ತ ಪಂಚಾಯತ ಆಗಿದೆ. ತಿಂಥಣಿ ಪಂಚಾಯ್ತಿ ವ್ಯಾಪ್ತಿಯಲ್ಲಿ 9 ಸಾವಿರ ಜನಸಂಖ್ಯೆ ಇದ್ದು, ಅದರಲ್ಲಿ 2 ಸಾವಿರ ಜನ ಬೃಹತ್ ನಗರಗಳತ್ತ ವಲಸೆ ಹೋಗಿದ್ದಾರೆ. ಸದ್ಯ 18 ಹಾಗೂ 45 ವರ್ಷ ಮೇಲ್ಪಟ್ಟವರು 4200 ಜನ ಇದ್ದು ಈ ಎಲ್ಲರೂ ಕೂಡ ಕೋವಿಡ್ ಲಸಿಕೆ ಪಡೆದಿದ್ದಾರೆ.

    ಕೊರೊನಾ ಮೊದಲನೆಯ ಅಲೆಯಲ್ಲಿ ತಿಂಥಣಿ ಪಂಚಾಯ್ತಿಯಲ್ಲಿ 28 ಪ್ರಕರಣಗಳು ಪತ್ತೆಯಾಗಿದ್ದವು, ಓರ್ವ ವ್ಯಕ್ತಿ ಕೋವಿಡ್ ಗೆ ಬಲಿಯಾಗಿದ್ದ. ಎರಡನೇ ಅಲೆಯಲ್ಲಿ 56 ಪ್ರಕರಣಗಳು ಪತ್ತೆಯಾಗಿದ್ದವು. ಹೀಗಾಗಿ ಆರೋಗ್ಯ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ಒಟ್ಟುಗೂಡಿ ಜನರಿಗೆ ಲಸಿಕೆ ಬಗ್ಗೆ ಅರಿವು ಮೂಡಿಸಿದ ಪರಿಣಾಮ, ಸಾಧನೆ ಸಾಧ್ಯವಾಗಿದೆ. ಇದನ್ನೂ ಓದಿ: ವಿವಿಧ ಆಕೃತಿಯಲ್ಲಿ ಮೂಡಿ ಬಂದ ಹಲಸಿನ ಹಣ್ಣು – ವಿಸ್ಮಯಕಾರಿ ಬೆಳವಣಿಗೆ

    ಇಂತಹ ಸಾಧನೆ ಮಾಡಿದ ಈ ಗ್ರಾಮ ಪಂಚಾಯತಿಗೆ ಜಿಲ್ಲಾಡಳಿತ ಅವರ ಗ್ರಾಮಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದೆ. ಇನ್ನೂ ಶಾಸಕ ರಾಜೂಗೌಡ ತಮ್ಮ ಶಾಸಕರ ಅನುದಾನದಿಂದ 25 ಲಕ್ಷ ಬಹುಮಾನ ಘೋಷಣೆ ಮಾಡಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿ ಹಾಗೂ ಗ್ರಾಮಸ್ಥರು ಮನಸ್ಸು ಮಾಡಿದ್ರೆ ಎನಾದರು ಸಾಧಿಸಬಹುದು ಎಂಬುದಕ್ಕೆ ತಿಂಥಣಿ ಗ್ರಾಮದ ಅತ್ಯುತ್ತಮ ಉದಾಹರಣೆ. ಇದನ್ನೂ ಓದಿ: ಕೊರೊನಾ ಮೂರನೇ ಅಲೆ ಮಕ್ಕಳಿಗೆ ತೊಂದರೆ – ಸರ್ಕಾರ ಸಿದ್ಧತೆ ಮಾಡಿಕೊಳ್ಳಲಿ ಸಿದ್ದರಾಮಯ್ಯ