Tag: ಕೊರೊನಾ ರೋಗಿ

  • ಕೊರೊನಾ ಸೋಂಕಿತ ಆಸ್ಪತ್ರೆಯಿಂದ ಎಸ್ಕೇಪ್

    ಕೊರೊನಾ ಸೋಂಕಿತ ಆಸ್ಪತ್ರೆಯಿಂದ ಎಸ್ಕೇಪ್

    ದೊಡ್ಡಬಳ್ಳಾಪುರ: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಆಸ್ಪತ್ರೆಯಿಂದ ಎಸ್ಕೇಪ್ ಆಗಿ ಸಿಬ್ಬಂದಿಗೆ ತಲೆ ಬಿಸಿ ನೀಡಿದ ಘಟನೆ ದೊಡ್ಡಬಳ್ಳಾಪುರ ಸಮೀಪದ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದಿದೆ.

    ಜ.3 ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೊಡ್ಡಬಳ್ಳಾಪುರದ ಮಣಿಪಾಲ್ ಆಸ್ಪತ್ರೆಗೆ ರವಾನೆಯಾಗಿದ್ದ 26 ವರ್ಷದ ಸೋಂಕಿತ ವ್ಯಕ್ತಿ ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಳ್ಳಲು ವೃದ್ಧೆಯ ರಂಪಾಟ

     

     

    ಬೆಳಗ್ಗೆ 11 ಗಂಟೆಗೆ ರೋಗಿ ಆಸ್ಪತ್ರೆಗೆ ದಾಖಲಾಗಿದ್ದು, 11:55 ಕ್ಕೆ ಆತ ಎಸ್ಕೇಪ್ ಆಗಿದ್ದಾನೆ. ಸೋಂಕಿತನನ್ನು ಆಸ್ಪತ್ರೆಯಲ್ಲಿ ಹುಡುಕಿದಾಗ ಆತ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

    ಸೋಂಕಿತನ ಮಾಹಿತಿಯನ್ನು ಆಧರಿಸಿ ಆಸ್ಪತ್ರೆಯ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೊರೊನಾ ಸೋಂಕಿತರು 7 ದಿನದಲ್ಲಿ ರಿಕವರಿ ಹೊಂದಿದ್ರೂ, 14 ದಿನ ಕ್ವಾರಂಟೈನ್ ಕಡ್ಡಾಯ: WHO

  • 250 ಟಾಕ್ಸಿಗಳನ್ನು ಮಿನಿ ಅಂಬುಲೆನ್ಸ್ ಆಗಿ ಪರಿವರ್ತಿಸಿದ ಚೆನ್ನೈ ನಾಗರಿಕ ಸಂಸ್ಥೆ

    250 ಟಾಕ್ಸಿಗಳನ್ನು ಮಿನಿ ಅಂಬುಲೆನ್ಸ್ ಆಗಿ ಪರಿವರ್ತಿಸಿದ ಚೆನ್ನೈ ನಾಗರಿಕ ಸಂಸ್ಥೆ

    ಚೆನ್ನೈ: ಕೊರೊನಾ ವೈರಸ್ ಸಂಕಷ್ಟದಲ್ಲಿರುವ ಜನರಿಗೆ ಹಲವಾರು ಸಂಸ್ಥೆಗಳು, ಎನ್‍ಜಿಒಗಳು ಮತ್ತು ಅನೇಕ ವ್ಯಕ್ತಿಗಳು ಸಹಾಯ ಮಾಡಲು ಮುಂದೆ ಬರತ್ತಿದ್ದಾರೆ. ಸದ್ಯ ಚೆನ್ನೈನಲ್ಲಿಯೂ ಸಹ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಚೆನ್ನೈನ ನಾಗರಿಕ ಸಂಸ್ಥೆ 250 ಟ್ಯಾಕ್ಸಿಗಳನ್ನು ಅಂಬುಲೆನ್ಸ್‌ಗಳಾಗಿ ಪರಿವರ್ತಿಸಿದ್ದು, ರೋಗಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಿದೆ.

    ಗ್ರೇಟರ್ ಚೆನ್ನೈ ಕಾಪೋರೇಷನ್ 250 ಕೋವಿಡ್-ವಿಶೇಷ ಟ್ಯಾಕ್ಸಿಗಳನ್ನು ಮಿನಿ ಅಂಬುಲೆನ್ಸ್‌ಗಳಾಗಿ ಪರಿವರ್ತಿಸಿದ್ದು, ಇಪ್ಪತ್ತು ವಾಹನಗಳಿಗೆ ಮುನ್ಸಿಪಲ್ ಅಡ್ಮಿನಿಸ್ಟ್ರೇಶನ್ ಸಚಿವ ಕೆ.ಎನ್. ನೆಹರುರವರು ಚಾಲನೆ ನೀಡಿದರು.

    ಈ ಕುರಿತಂತೆ ಗ್ರೇಟರ್ ಚೆನ್ನೈ ಕಾರ್ಪೋರೇಶನ್ ಆಯುಕ್ತ ಗಗನ್ ಸಿಂಗ್ ಬೇಡಿ, 108 ಅಂಬುಲೆನ್ಸ್ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಮತ್ತು ಆಕ್ಸಿಜನ್ ಅಗತ್ಯವಿಲ್ಲದವರು ಕೂಡ 108 ಅಂಬುಲೆನ್ಸ್‌ ಸೇವೆಗಳನ್ನು ಬಳಸುತ್ತಿದ್ದಾರೆ. ಇದು ಆಕ್ಸಿಜನ್ ಅಗತ್ಯವಿರುವವರ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಟ್ಯಾಕ್ಸಿ ಹಾಗೂ ಕಾರುಗಳನ್ನು ತಾತ್ಕಾಲಿಕ ಅಂಬುಲೆನ್ಸ್‌ಗಳಾಗಿ ಪರಿವರ್ತಿಸಲು ನಿರ್ಧರಿಸಲಾಯಿತು. ನಾಗರಿಕ ಸಂಘವು ಪ್ರತಿ ವಲಯದಲ್ಲಿ 15 ವಾಹನಗಳನ್ನು ನಿಗದಿಪಡಿಸಿದೆ ಮತ್ತು 250 ವಾಹನಗಳನ್ನು ಕಾರನ್ನು ಅಂಬುಲೆನ್ಸ್‌ಗಳಾಗಿ ಪರಿವರ್ತಿಸಲು ಆದೇಶಿಸಿದೆ ಎಂದರು.

  • ಬೆಳಗ್ಗೆ 10 ಗಂಟೆಗೆ ಸೋಂಕು ದೃಢ- ರಾತ್ರಿ 11ಕ್ಕೆ ಬಂದ ಅಂಬುಲೆನ್ಸ್

    ಬೆಳಗ್ಗೆ 10 ಗಂಟೆಗೆ ಸೋಂಕು ದೃಢ- ರಾತ್ರಿ 11ಕ್ಕೆ ಬಂದ ಅಂಬುಲೆನ್ಸ್

    ಹಾವೇರಿ: ಕೊರೊನಾ ಸೋಂಕು ದೃಢಪಟ್ಟಿದ್ದ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸಲು ಆರೋಗ್ಯ ಇಲಾಖೆ ನಿರ್ಲಕ್ಷ್ಯ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆರೇಗೊಪ್ಪ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಅರವತ್ತು ವರ್ಷದ ಸೋಂಕಿತೆ ವೃದ್ಧೆಯ ಪುತ್ರ ಬೆಳಗ್ಗೆ ಹತ್ತು ಗಂಟೆಗೆ ಸೋಂಕು ದೃಢಪಟ್ಟ ಮಾಹಿತಿ ನೀಡಿದ್ರೂ ರಾತ್ರಿ ಹನ್ನೊಂದು ಗಂಟೆಗೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಹಾನಗಲ್ ತಾಲೂಕಿನ ಆರೋಗ್ಯ ಇಲಾಖೆ ಅಧಿಕಾರಿ ವಿರುದ್ಧ ಸೋಂಕಿತನ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಳಗ್ಗೆಯಿಂದ ಫೋನ್ ಮಾಡಿದ್ರೆ ಅಂಬ್ಯುಲೆನ್ಸ್ ಇಲ್ಲ, ಬರುತ್ತೆ ಬರುತ್ತೆ, ಡಿಎಚ್‍ಓ ಕಳಿಸ್ತಾರೆ ಅಂತಾ ಸಬೂಬು ಹೇಳಿದ್ದಾರೆ. ಡಿಎಚ್‍ಓ ಅಂಬ್ಯುಲೆನ್ಸ್ ಕಳಿಸಿಲ್ಲ, ಬೆಡ್ ಖಾಲಿ ಇರ್ಲಿಲ್ಲ, ಈಗ ಬೆಡ್ ಖಾಲಿ ಆಗಿವೆ ಅಂತಾ ಸಬೂಬು ಹೇಳಿ ಸಮಯವನ್ನ ಕಳೆದಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರಗೌಡ ಪಾಟೀಲ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸೋಂಕಿತೆಯನ್ನ ಸಾಗಿಸಲು ಇಷ್ಟೊಂದು ತಡಮಾಡಿದ್ರೆ ನಮ್ಮನ್ನ ಹೋಂ ಕ್ವಾರಂಟೈನ್ ನಲ್ಲಿ ಇಟ್ಟುಬಿಡಿ ಎಂದು ಅಧಿಕಾರಿ ವಿರುದ್ಧ ವೃದ್ಧೆಯ ಪುತ್ರ ಆಕ್ರೋಶ ಹೊರಹಾಕಿದ್ದಾರೆ.

  • ತಾಂಡಾಗಳಲ್ಲಿರುವ ಸೋಂಕಿತರಿಂದ ಉದ್ಧಟತನ-ಪಾಸಿಟಿವ್ ಬಂದ್ರೂ ಆಸ್ಪತ್ರೆಗೆ ಸೇರಲು ನಕಾರ

    ತಾಂಡಾಗಳಲ್ಲಿರುವ ಸೋಂಕಿತರಿಂದ ಉದ್ಧಟತನ-ಪಾಸಿಟಿವ್ ಬಂದ್ರೂ ಆಸ್ಪತ್ರೆಗೆ ಸೇರಲು ನಕಾರ

    – ಸೋಂಕಿತರ ಮನವೊಲಿಸಲು ಪೊಲೀಸರು, ಜಿಲ್ಲಾಡಳಿತದ ಹರಸಾಹಸ

    ಯಾದಗಿರಿ: ಕ್ವಾರಂಟೈನ್ ಅವಧಿ ಮುಗಿಸಿ ಕೊರೊನಾ ವರದಿ ಬರುವ ಮುನ್ನವೇ ತಮ್ಮ ಗ್ರಾಮಗಳಿಗೆ ತೆರಳಿರುವ ಮಹಾರಾಷ್ಟ್ರದ ಕಾರ್ಮಿಕರಿಂದ ಮತ್ತೊಂದು ತಲೆ ನೋವನ್ನು ಯಾದಗಿರಿ ಜಿಲ್ಲಾಡಳಿತ ಎದುರಿಸುತ್ತಿದೆ.

    ಕ್ವಾರಂಟೈನ್ ಅವಧಿ ಮುಗಿಸಿ ಮನೆಗಳಿಗೆ ತೆರಳಿರುವ ಕಾರ್ಮಿಕರ ವರದಿಗಳು ಈಗ ಪಾಸಿಟಿವ್ ಬರುತ್ತಿದ್ದು, ಸೋಂಕಿತರನ್ನು ವಾಪಸು ಕೋವಿಡ್ ಆಸ್ಪತ್ರೆಗೆ ಕರೆತರಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಮನೆಗೆ ಹೋಗಿರುವ ಸೋಂಕಿತರು ಪುನಃ ಆಸ್ಪತ್ರೆಗೆ ಬರಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಗ್ರಾಮಗಳಿಗೆ ಬರುತ್ತಿರುವ ಪೊಲೀಸರು, ಮತ್ತು ಅಧಿಕಾರಗಳ ಜೊತೆ ಕೆಲ ತಾಂಡಾಗಳ ಜನರು ವಾಗ್ವಾದ ನಡೆಸುತ್ತಿದ್ದಾರೆ.

    ಯಾದಗಿರಿ ತಾಲೂಕಿನ ಥಾವರುನಾಯಕ್ ತಾಂಡಾ, ಶಹಪುರದ ಬೇವನಹಳ್ಳಿ ತಾಂಡಾ, ಗುರುಮಿಠಕಲ್ ನ ಚಿಂತನಳ್ಳಿ ತಾಂಡಾಗಳಲ್ಲಿ ಸೋಂಕಿತರು ಉದ್ಧಟತನ ತೋರುತ್ತಿದ್ದಾರೆ. ಸೋಂಕು ದೃಢ ಹಿನ್ನೆಲೆ ಜನರನ್ನು ಕರೆ ತರಲು ತಾಂಡಾಗೆ ತೆರಳಿದ್ದ ಪೊಲೀಸರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

    ಕ್ವಾರಂಟೈನ್ ಮುಗಿಸಿ ಬಂದವರನ್ನ ಮತ್ತೆ ಏಕೆ ಕರೆದುಕೊಂಡು ಹೋಗುತ್ತೀರಿ, ನಾವು ಬರೋದಿಲ್ಲ ಎಂದು ಅಸಡ್ಡೆಯ ಮಾತುಗಳನ್ನಾಡುತ್ತಿದ್ದಾರೆ. ಸಾಂಸ್ಥಿಕ ಕ್ವಾರೆಂಟನ್ ನಲ್ಲಿದ್ದ ವಿವಿಧ ತಾಂಡಾಗಳ ಜನರ ಕ್ವಾರಂಟೈನ್ ಅವಧಿ ಜೂನ್ 7ರಂದು ಮುಗಿದಿತ್ತು. ಆದ್ರೆ ಇವರ ವರದಿ ಬಂದಿರಲಿಲ್ಲ. ಕ್ವಾರಂಟೈನ್ ಗಳಲ್ಲಿ ಕೆಲವರು ಗಲಾಟೆ ನಡೆಸಿದ್ದರು. ಹೀಗಾಗಿ ಜಿಲ್ಲಾಡಳಿತ ಇವರಿಗೆ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿ ಬಿಡುಗಡೆಗೊಳಿಸಿತ್ತು.