Tag: ಕೊರೊನಾ ರೂಲ್ಸ್ ಬ್ರೇಕ್

  • 10 ಸಾವಿರ ಮಂದಿಯಿಂದ ಮೆರವಣಿಗೆ – ಕೊರೊನಾ ರೂಲ್ಸ್ ಉಲ್ಲಂಘನೆ

    10 ಸಾವಿರ ಮಂದಿಯಿಂದ ಮೆರವಣಿಗೆ – ಕೊರೊನಾ ರೂಲ್ಸ್ ಉಲ್ಲಂಘನೆ

    ಹುಬ್ಬಳ್ಳಿ: 75ನೇ ಸ್ವಾತಂತ್ರೋತ್ಸವ ಸಂಭ್ರಮದ ಹಿನ್ನಲೆ ಕಲಘಟಗಿ ಪಟ್ಟಣದಲ್ಲಿ ವಿನೂತನ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದೆ. ಈ ವೇಳೆ ಬೃಹತ್ ತ್ರಿವರ್ಣ ಧ್ವಜ ಮೆರವಣಿಗೆ ಮಾಡುವ ಮೂಲಕ ಕೊರೊನಾ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ.

    ಕಲಘಟಗಿಯ ತಡಸ ಕ್ರಾಸ್‍ನಿಂದ ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ 2 ಕಿಲೋ ಮೀಟರ್ ಉದ್ದ, 9 ಅಡಿ ಅಗಲದ ತ್ರೀವರ್ಣ ಧ್ವಜವನ್ನು ಮೆರವಣಿಗೆ ಮಾಡಲಾಗಿದ್ದು, ಈ ಮೆರವಣಿಗೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ಎಲ್ಲರೂ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ  ರೂಲ್ಸ್‌ನನ್ನು  ಬ್ರೇಕ್ ಮಾಡಿದ್ದಾರೆ.

    ಈಗಾಗಲೇ ರಾಜ್ಯದಲ್ಲಿ ಕೊರೊನಾ 3ನೇ ಭೀತಿ ಶುರುವಾಗಿದ್ದು, ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಯೋಚನೆ ನಡೆಸುತ್ತಿದೆ. ಅಲ್ಲದೇ ಸಭೆ, ಸಮಾರಂಭ, ಅಂತ್ಯಸಂಸ್ಕಾರಗಳಲ್ಲಿ ಸೀಮಿತ ಜನ ಮಾತ್ರ ಭಾಗವಹಿಸಬೇಕೆಂದು ಸೂಚಿಸಿದೆ. ಒಂದು ವೇಳೆ ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣ ಹೆಚ್ಚಾದರೆ ಲಾಕ್‍ಡೌನ್ ಘೋಷಿಸುವ ಎಚ್ಚರಿಕೆ ನೀಡಿದೆ.  ಇದನ್ನೂ ಓದಿ:ಭವಿಷ್ಯದಲ್ಲಿ ನಂಬಿಕೆ ಇಲ್ಲ ಅಂತಾರೆ,ಭವಿಷ್ಯ ಹೇಳಲು ಶುರು ಮಾಡಿದ್ದಾರೆ- ಸಿದ್ದರಾಮಯ್ಯ ವಿರುದ್ಧ ಬಿ.ಸಿ.ಪಾಟೀಲ್ ಕಿಡಿ