Tag: ಕೊರೊನಾ ಜಾಗೃತಿ

  • ಮೂರನೇ ಅಲೆ ತಡೆಯಲು ಸಜ್ಜಾಗಿ: ಗೋಪಾಲಯ್ಯ

    ಮೂರನೇ ಅಲೆ ತಡೆಯಲು ಸಜ್ಜಾಗಿ: ಗೋಪಾಲಯ್ಯ

    ಬೆಂಗಳೂರು: ಕೊರೊನಾ ಮೂರನೇ ಅಲೆ ತಡೆಯಲು ಜನ ಸಜ್ಜಾಗಬೇಕು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಕರೆ ನೀಡಿದ್ದಾರೆ.

    ಭಾರತೀಯ ಜನತಾ ಪಾರ್ಟಿಯ ವತಿಯಿಂದ ಆಯೋಜಿಸದ್ದ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಮಂಡಲ ಆರೋಗ್ಯ ಸ್ವಯಂ ಸೇವಕರ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ಷೇತ್ರದಲ್ಲಿ ಕೊರೊನಾ ಸಮಯದಲ್ಲಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಹೋರಾಟ ನಡೆಸಿದ ಡಾಕ್ಟರ್ ಮತ್ತು ಅಧಿಕಾರಿಗಳ ವರ್ಗ ಹಾಗೂ ಕಾರ್ಯಕರ್ತರುಗಳಿಗೆ ಸನ್ಮಾನಿಸಿದರು. ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ

    ಈ ವೇಳೆ ಮಾತನಾಡಿದ ಅವರು, ಒಂದನೇ ಅಲೆ ನಮ್ಮ ಕಾರ್ಯಕರ್ತರೊಂದಿಗೆ ಸುಲಭವಾಗಿ ನಿಭಾಯಿಸಿದ ಎರಡನೇ ಅಲೆ ತೀವ್ರತೆ ಹೆಚ್ಚಾಗಿದ್ದರಿಂದ ಎಲ್ಲರೂ ತುಂಬಾ ಶ್ರಮಿಸ ಬೇಕಾಗಿತ್ತು. 24 ಗಂಟೆಗಳ ಕಾಲ ನಮ್ಮ ಡಾಕ್ಟರಗಳು ಕಾರ್ಯಕರ್ತರು ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು ಕರೆ ಬಂದಕಡೆ ಮನೆ ಮನೆಗೆ ಔಷಧಿ ಕಿಟ್ ಗಳನ್ನು ನಮ್ಮ ಮುಖಂಡರು ತಲುಪಿಸುತ್ತಿದ್ದರು ಎಂದರು.

     

    ಡಾಕ್ಟರ್ ನಾಗೇಂದ್ರ ಅವರ ತಂಡವನ್ನು ರಚಿಸಿ ಮನೆಮನೆಗೆ ಆಕ್ಸಿಜನ್ ಕಿಟ್ ನೀಡಲು ನಿರ್ಧರಿಸಿದ್ದು, ಅಂತೆಯೇ ಹಣವನ್ನು ನೀಡಿ ಆಕ್ಸಿಜನ್ ಸಿಲಿಂಡರುಗಳನ್ನು ಕೊಂಡು ಕೊಂಡವು. ನನ್ನ ಮುಂಬೈ ಸ್ನೇಹಿತರು 300ಕ್ಕಿಂತ ಹೆಚ್ಚು ಸಿಲಿಂಡರುಗಳನ್ನು ಉಚಿತವಾಗಿ ನೀಡಿದರು. ಪ್ರತಿದಿನ ಹತ್ತರಿಂದ ಇಪ್ಪತ್ತು ಜನರಿಗೆ ಉಚಿತವಾಗಿ ಆಕ್ಸಿಜನ್ ನೀಡಲಾಗುತ್ತಿತ್ತು. ಕಂಟ್ರೋಲ್ ರೂಮ್ ಮಾಡಿ 24 ಗಂಟೆಗಳ ಕಾಲ ಕರೆ ಬಂದ ತಕ್ಷಣ ಸ್ಪಂದಿಸುವಂತೆ ಕಾರ್ಯಕರ್ತರು ಮತ್ತು ಡಾಕ್ಟರುಗಳು ಕೆಲಸ ಮಾಡುತ್ತಿದ್ದರು ಅಂತಾ ಶ್ಲಾಘಿಸಿದ್ರು.

  • 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ಸಾಯಿಬಾಬಾ ದೇವಸ್ಥಾನಕ್ಕೆ ವಿಶೇಷ ಅಲಂಕಾರ

    3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ಸಾಯಿಬಾಬಾ ದೇವಸ್ಥಾನಕ್ಕೆ ವಿಶೇಷ ಅಲಂಕಾರ

    – ಗುರುಪೂರ್ಣಿಮೆ ಅಂಗವಾಗಿ ಜೆಪಿನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ
    – ಭಕ್ತಾದಿಗಳಿಗೆ ವಿಶೇಷ ಸುರಕ್ಷೆ ನೀಡಲು ಕರೋನಾ ಕಿಲ್ಲರ್ ಯಂತ್ರ ಅಳವಡಿಕೆ
    – ಒಂದು ವಾರದ ಬಳಿಕ ಒಂದು ಲಕ್ಷ ಕುಟುಂಬಕ್ಕೆ ಹಂಚುವ ನಿರ್ಧಾರ
    – ಸಂಸದ ತೇಜಸ್ವೀ ಸೂರ್ಯ ಅವರಿಂದ ಶ್ಲಾಘನೆ

    ಬೆಂಗಳೂರು: ಗುರುಪೂರ್ಣಿಮೆ ಅಂಗವಾಗಿ ಇಂದು ಜೆಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ವಿಶೇಷ ಅಲಂಕಾರ ಮಾಡಿರುವುದನ್ನ ಕಂಡು ಭಕ್ತಾದಿಗಳು ಪುಳಕಿತರಾದರು.

    ಕೊರೊನಾ ಮೂರನೇ ಅಲೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಹಾಗೂ ವಿಶೇಷ ವಾದ ಆಲಂಕಾರದಿಂದ ಜನರಿಗೆ ಉಪಯೋಗವಾಗಬೇಕು ಎನ್ನುವ ಉದ್ದೇಶದಿಂದ ಮಾತ್ರೆಗಳನ್ನು ಬಳಸಿಕ ಆಲಂಕಾರ ಮಾಡುವ ಯೋಜನೆಯನ್ನು ಕೈಗೆತ್ತುಕೊಳ್ಳಲಾಯಿತು. 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಹಾಗೂ ರೇಷನ್ ಕಿಟ್ ನಲ್ಲಿ ಇರುವಂತಹ ಪದಾರ್ಥಗಳಿಂದ ಆಲಂಕಾರ ಮಾಡಿದ್ದೇವೆ. ಸುಮಾರು 4 ದಿನಗಳ ಕಾಲ ತಯಾರಿ ನಡೆಸಿದ್ದು, ಒಂದು ವಾರಗಳ ನಂತರ ಇಲ್ಲಿ ಬಳಸಲಾಗಿರುವ ಎಲ್ಲಾ ರೀತಿಯ ವಸ್ತುಗಳನ್ನು ಅಗತ್ಯವಿರುವ ಜನರಿಗೆ ನೀಡಲಿದ್ದೇವೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕರು ಹಾಗೂ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದ ಟ್ರಸ್ಟಿ ರಾಮ ಮೋಹನ ರಾಜ್ ತಿಳಿಸಿದರು.

    ಈ ವಿಶೇಷ ಅಲಂಕಾರವನ್ನು ಕಂಡು ಸಂಸದ ತೇಜಸ್ವೀ ಸೂರ್ಯ ಶ್ಲಾಘಿಸಿದರು. ಲಕ್ಷಾಂತರ ರೂಪಾಯಿಗಳನ್ನು ಖರ್ಚುಗೊಳಿಸಿ ಹಾಳಾಗುವಂತಹ ವಸ್ತುಗಳನ್ನು ಬಳಸಿ ಆಲಂಕಾರ ಮಾಡಿದರೆ ಅದರಿಂದ ಉಪಯೋಗವಾಗುವುದಿಲ್ಲ. ಇಂತಹ ವಿಭಿನ್ನ ಆಲೋಚನೆಯಿಂದಾಗಿ ಆಲಂಕಾರವೂ ಆಗುತ್ತದೆ ಹಾಗೆಯೇ ನಂತರ ಅದರ ಸದುಯೋಗವೂ ಆಗುತ್ತದೆ. ಈ ನಿಟ್ಟಿನಲ್ಲಿ ವಿಭಿನ್ನ ಆಲೋಚನೆ ಮಾಡಿರುವ ಮಾಜಿ ಉಪಮಹಾಪೌರರಾದ ರಾಮ ಮೋಹನ ರಾಜ್ ಅವರ ಕಾರ್ಯ ಶ್ಲಾಘನೀಯ ಎಂದರು. ಇದನ್ನೂ ಓದಿ: ದೊಡ್ಮನೆಯಲ್ಲಿ ಮತ್ತೊಮ್ಮೆ ಅರವಿಂದ್‍ಗೆ ಸಿಕ್ತು ಬಿಗ್‍ಬಾಸ್ ಪಟ್ಟ

    ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತೆ ಕವಿತಾ ಮಾತನಾಡಿ, ಲಾಕ್‍ಡೌನ್ ನಲ್ಲಿ ಮನೆಯಿಂದ ಹೊರಗೆ ಹೋಗದೆ ಬಹಳಷ್ಟು ಬೇಸರಕ್ಕೀಡಾಗಿದ್ದೇವು. ಲಾಕ್‍ಡೌನ್ ಸಡಲಿಕೆಗೊಂಡ ನಂತರ ಇಂತಹ ವಿಭಿನ್ನ ಆಲೋಚನೆಯ ಆಲಂಕಾರ ಮಾಡಿರುವ ದೇವಸ್ಥಾನಕ್ಕೆ ಭೇಟಿ ನೀಡದ್ದು ಸಂತಸವಾಯಿತು ಎಂದು ಹೇಳಿದರು. ಇದನ್ನೂ ಓದಿ: RRR ಆಡಿಯೋ ರೈಟ್ಸ್ ಲಹರಿ ಪಾಲು

  • ಕೊರೊನಾ ಜಾಗೃತಿ – ಪವರ್ ಸ್ಟಾರ್ ಹೇಳಿದ 5 ಸೂತ್ರಗಳ್ಯಾವುದು ಗೊತ್ತಾ?

    ಕೊರೊನಾ ಜಾಗೃತಿ – ಪವರ್ ಸ್ಟಾರ್ ಹೇಳಿದ 5 ಸೂತ್ರಗಳ್ಯಾವುದು ಗೊತ್ತಾ?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊರೊನಾದಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುವುದಕ್ಕೆ 5 ಸಲಹೆ ನೀಡಿದ್ದಾರೆ.

    ಕೊರೊನಾ ಎರಡನೇ ಅಲೆಯಿಂದಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಲಾಕ್‍ಡೌನ್ ಘೋಷಿಸಿದ್ದರೂ, ದಿನದಿಂದ ದಿನ ಅತೀ ವೇಗವಾಗಿ ಹರಡುತ್ತಿರುವ ಕೊರೊನಾದಿಂದ ಮುಕ್ತಿ ಪಡೆಯಲು ಜನರು ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ನಟ ಪುನೀತ್ ರಾಜ್ ಕುಮಾರ್ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಕೊರೊನಾ ಎರಡನೆ ಅಲೆಯು ಎಲ್ಲರ ಮೇಲೂ ಪರಿಣಾಮ ಬೀರುತ್ತಿದೆ. ಈ ಮಾರಕ ವೈರಸ್ ವಿರುದ್ಧ ಹೋರಾಡಲು ನಾವೆಲ್ಲರೂ ಒಟ್ಟಾಗಿ ಸೇರಬೇಕಾಗಿದೆ. ನಾವು ಸುರಕ್ಷಿತವಾಗಿರೋಣ ಮತ್ತು ನಮ್ಮ ಸುತ್ತಲಿರುವವರನ್ನು ಸುರಕ್ಷಿತವಾಗಿರಿಸೋಣ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಕೊರೊನಾ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿರುವ ಪುನೀತ್ ರಾಜ್ ಕುಮಾರ್‍ರವರು ಕೆಲವು ಸಾಕ್ಷ್ಯ ಚಿತ್ರಗಳ ಮೂಲಕ 5 ಸೂತ್ರಗಳನ್ನು ತಿಳಿಸಿದ್ದಾರೆ. ವೀಡಿಯೋದಲ್ಲಿ, ಕೊರೊನಾ ಟೆಸ್ಟ್ ರಿಪೋರ್ಟ್‍ಗಾಗಿ ಕಾಯುತ್ತಿದ್ದೀರಾ ಅಥವಾ ಕೊರೊನಾ ಇರುವುದು ದೃಢವಾಗಿದ್ಯಾ? ಹಾಗಾದರೆ ಪ್ರತಿ ಮನೆಯಲ್ಲಿಯೂ ಜೊತೆಯಾಗಿ ಕೊರೊನಾ ಗೆಲ್ಲಿ ಎಂದಿದ್ದಾರೆ. ಈ ವೇಳೆ ಇಬ್ಬರು ಮಕ್ಕಳನ್ನು ಸಂಯಮ ಹಾಗೂ ಎಚ್ಚರದ ಮಾತಿನಂತೆ ಬಿಂಬಿಸಿ 5 ಸೂತ್ರಗಳನ್ನು ತಿಳಿಸಿದ್ದಾರೆ.

    *ಜಾಗರೂಕತೆಯಿಂದ ಒಂದು ಪ್ರತ್ಯೇಕ ಕೊಠಡಿಯಲ್ಲಿ ಕನಿಷ್ಠ ಪಕ್ಷ ಒಬ್ಬರೇ ಉಳಿದು ಬಿಡಿ.
    *ಸ್ವತಃ ಚಿಕಿತ್ಸೆ ಮಾಡಿಕೊಳ್ಳದೇ ವೈದ್ಯರನ್ನು ಸಂಪರ್ಕಿಸಿ.
    *ಮನೆಯಲ್ಲಿರುವವರು ಕಾಲಕಾಲಕ್ಕೆ ಸೋಪಿನಿಂದ ಕೈ ತೋಳಿಯುವಂತೆ ನೋಡಿಕೊಳ್ಳಿ.
    *ನೀವು ಕೊರೊನಾ ಸೋಂಕಿತರನ್ನು ಮನೆಯಲ್ಲಿಯೇ ನೋಡಿಕೊಳ್ಳುತ್ತಿದ್ದರೆ, ಮಾಸ್ಕ್‍ನನ್ನು ಮೂಗು ಹಾಗೂ ಬಾಯಿಯನ್ನು ಮುಚ್ಚುವಂತೆ ಸರಿಯಾಗಿ ಧರಿಸಿ.
    *ಮುಂದಿನ ಕೆಲವು ದಿನಗಳಲ್ಲಿ ಜ್ವರ ಕಡಿಮೆಯಾಗದಿದ್ದರೆ ಹಾಗೂ ಉಸಿರಾಟದ ತೊಂದರೆಯಾಗುತ್ತಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ, ವೈದ್ಯರು ಸೂಚಿಸಿದರೆ ಮಾತ್ರ ಹತ್ತಿರ ಆಸ್ಪತ್ರೆಯನ್ನು ಸಂಪರ್ಕಿಸಿ.

    ಹೀಗೆ ಸಂಯಮ ಹಾಗೂ ಎಚ್ಚರವನ್ನು ತಿಳಿಸುತ್ತಿರುವ ಈ 5 ಸೂತ್ರಗಳನ್ನು ಪಾಲಿಸಿದರೆ ನಾವು ಖಂಡಿತ ಕೊರೊನಾವನ್ನು ಸೋಲಿಸಬಹುದು. ಪ್ರತಿ ಮನೆಯು ಪಣ ತೊಟ್ಟಿದೆ ಎಂದ ಮೇಲೆ ಕೊರೊನಾ ಖಂಡಿತ ಸೋಲುತ್ತದೆ ಎಂದಿದ್ದಾರೆ.

     

  • ಲಾಕ್‍ಡೌನ್ ಸಂಕಷ್ಟ: ಬಡವರಿಗೆ ಸೈನಿಕ, ರೈಲ್ವೇ ಪೊಲೀಸರಿಂದ ಆಹಾರ ಕಿಟ್ ವಿತರಣೆ

    ಲಾಕ್‍ಡೌನ್ ಸಂಕಷ್ಟ: ಬಡವರಿಗೆ ಸೈನಿಕ, ರೈಲ್ವೇ ಪೊಲೀಸರಿಂದ ಆಹಾರ ಕಿಟ್ ವಿತರಣೆ

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ ಬಡಜನ ನಿಜಕ್ಕೂ ಸಂಕಷ್ಟದ ಪರಸ್ಥಿತಿಯನ್ನ ಎದುರಿಸುತ್ತಿದ್ದಾರೆ. ಹೀಗಾಗಿ ರಾಯಚೂರಿನಲ್ಲಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ಯೋಧ ರಮೇಶ್ ತನ್ನ ಒಂದು ತಿಂಗಳ ಸಂಬಳದಲ್ಲಿ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

    ನಗರದ ಮಂಗಳವಾರಪೇಟೆ ಸ್ಲಂ ನಿವಾಸಿಗಳಿಗೆ ಆಹಾರದ ಕಿಟ್ ನೀಡಿದ್ದಾರೆ. ಕಾಶ್ಮೀರದಿಂದ ರಜೆ ಮೇಲೆ ಬಂದು 10 ದಿನಗಳಾಗಿದ್ದ ಸ್ಲಂ ನಿವಾಸಿಗಳ ಪರಿಸ್ಥಿತಿ ನೋಡಿ ಕೈಲಾದ ಸಹಾಯ ಮಾಡಬೇಕು ಅಂತ ಗೆಳೆಯರ ಸಹಾಯದೊಂದಿಗೆ ಆಹಾರ ಕಿಟ್ ವಿತರಿಸಿದ್ದಾರೆ.

    ರೈಲ್ವೇ ಪೊಲೀಸ್ ಠಾಣೆ ಅಧಿಕಾರಿಗಳು ಸಹ ನಿರಂತರವಾಗಿ ಬಡ ಪ್ರಯಾಣಿಕರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಆಹಾರ ಸಾಮಗ್ರಿಗಳ ಕಿಟ್, ಮಾಸ್ಕ್ ವಿತರಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವೈಯಕ್ತಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳುವಂತೆ ತಿಳಿ ಹೇಳುತ್ತಿದ್ದಾರೆ.

    ರೈಲ್ವೆ ಎಡಿಜಿಪಿ ಎಸ್. ಭಾಸ್ಕರ್ ರಾವ್, ಕಲುಬುರಗಿ ರೈಲ್ವೆ ಡಿಎಸ್‍ಪಿ ವೆಂಕನಗೌಡ ಪಾಟೀಲ್ ಕಿಟ್ ವಿತರಣೆ ಮಾಡಿದ್ದಾರೆ. ಸಿಪಿಐ ಎನ್ .ಎಸ್ ಜನಗೌಡ ,ಪಿಎಸ್‍ಐ ಮಹೇಶ್ ಮತ್ತು ರೈಲ್ವೇ ಪೊಲೀಸ್ ಠಾಣೆ ಸಿಬ್ಬಂದಿ ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ.

  • ಚಿತ್ರ ಕಲೆಯ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಕೊಡಗಿನ ಯುವಕರು

    ಚಿತ್ರ ಕಲೆಯ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಕೊಡಗಿನ ಯುವಕರು

    ಮಡಿಕೇರಿ: ಕೊಡಗು ಜಿಲ್ಲೆಯ ಯುವಕರಿಬ್ಬರು ರಸ್ತೆಯಲ್ಲಿ ಚಿತ್ರ ಬರೆದು ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾನೆ.

    ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದೆ. ನಗರ ಪ್ರದೇಶ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಕೊರೊನಾ ಮಾಹಾಮಾರಿ ಹೆಚ್ಚುತ್ತಿದ್ದು, ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ ಚಿತ್ರ ಕಲಾವಿದರಿಬ್ಬರು ತನ್ನ ಸ್ವಂತ ಖರ್ಚಿನಲ್ಲಿ ಕೊಡಗು ಜಿಲ್ಲೆಯ ವಿವಿಧೆಡೆ ಹೋಗಿ ರಸ್ತೆಯಲ್ಲಿ ಚಿತ್ರ ಬರೆದು ಸಾರ್ವಜನಿಕರಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿದ್ದಾನೆ.

    ಕೊಡಗು ಜಿಲ್ಲೆಯ ಪೊನ್ನಂಪೇಟೆ ಕಲಾವಿದರಾದ ಗಣಿ ಆಟ್ಸ್ ತಂಡದಿಂದ ಕೊಡಗಿನ ಮಡಿಕೇರಿ, ಗೋಣಿಕೋಪ್ಪ, ಪೊನ್ನಂಪೇಟೆ ಮೂರ್ನಾಡ್ ಸೇರಿದಂತೆ ವಿವಿಧೆಡೆ ಹೋಗಿ ಕೊರೊನಾದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಇಂದು ಕೋಡ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದ ರಸ್ತೆಯಲ್ಲಿ ಚಿತ್ರವನ್ನು ಬರೆದು ಜನರು ಮಾಸ್ಕ್ ಹಾಕಿ ಕೊರೊನಾ ಓಡಿಸಿ. ನನ್ನ ಮಾಸ್ಕ್ ನನ್ನ ಲಸಿಕೆ ಸಂದೇಶಗಳ ಚಿತ್ರವನ್ನು ಬರೆದು ಜಾಗೃತಿ ಮೂಡಿಸುತ್ತಿದ್ದಾರೆ. ಈ ಯುವಕರ ಸಾಮಾಜಿಕ ಸೇವೆಗೆ ಮಡಿಕೇರಿ ನಗರದ ಟ್ರಾಫಿಕ್ ಪೊಲೀಸರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

  • ಸೈಕಲ್‍ನಲ್ಲಿ ಮೈಕ್ ಕಟ್ಟಿ ಕೊರೊನಾ ಜಾಗೃತಿ – ವಿಶೇಷ ಚೇತನ ವಿದ್ಯಾರ್ಥಿಯ ಕಾಳಜಿಗೆ ಗ್ರಾಮಸ್ಥರ ಮೆಚ್ಚುಗೆ

    ಸೈಕಲ್‍ನಲ್ಲಿ ಮೈಕ್ ಕಟ್ಟಿ ಕೊರೊನಾ ಜಾಗೃತಿ – ವಿಶೇಷ ಚೇತನ ವಿದ್ಯಾರ್ಥಿಯ ಕಾಳಜಿಗೆ ಗ್ರಾಮಸ್ಥರ ಮೆಚ್ಚುಗೆ

    ಮಡಿಕೇರಿ: ವಿಶೇಷ ಚೇತನ ವಿದ್ಯಾರ್ಥಿಯೋರ್ವ ತನ್ನ ಸೈಕಲ್‍ನಲ್ಲಿ ಮೈಕ್ ಕಟ್ಟಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳುವ ಮೂಲಕ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾನೆ.

    ಕೊಡಗಿನ ಕರಡಿಗೋಡು ಗ್ರಾಮದ ಮಂಜುನಾಥ್ ಪಾಲಿಬೆಟ್ಟದ ಚೆಶೈರ್ ಹೋಮ್ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಯಾಗಿದ್ದು, ಕೊಡಗು ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿನ ಬಸ್ ನಿಲ್ದಾಣ ಹಾಗೂ ಸಿದ್ದಾಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ವಿಶೇಷ ಚೇತನ ವಿದ್ಯಾರ್ಥಿ ಜನರಿಗೆ ಕೊರೊನಾ ಬಗ್ಗೆ ಎಚ್ಚರಿಸುತ್ತಿದ್ದಾನೆ.

    ಮಂಜುನಾಥನ ಕಾಳಜಿಗೆ ಗ್ರಾಮದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹಿಂದಿನಿಂದಲೂ ಸೈಕಲ್‍ನಲ್ಲಿ ಸುತ್ತಾಡುತ್ತಿರುವ ಮಂಜುನಾಥ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯದಂತೆ ಪರಿಸರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದ. ಇದೀಗ ಕೊರೊನಾ ಮಹಾಮಾರಿ ವೈರಸ್‍ನಿಂದ ಜಿಲ್ಲೆಯಲ್ಲಿ ಹಲವು ಸಾವು ನೋವುಗಳು ಸಂಭವಿಸುತ್ತಿರುವುದನ್ನು ಟಿವಿ ಹಾಗೂ ಪತ್ರಿಕೆ ಮೂಲಕ ಕಂಡು ತನ್ನ ಸೈಕಲ್‍ನಲ್ಲಿ ಗ್ರಾಮದ ಸುತ್ತಲೂ ಸಾರ್ವಜನಿಕರು ಮಾಸ್ಕ್ ಧರಿಸದೇ ಓಡಾಡುತ್ತಿರುವುದನ್ನು ಗಮನಿಸಿ ಅವರ ಹೆಸರು ಹೇಳಿ ದಯವಿಟ್ಟು ಮಾಸ್ಕ್ ಧರಿಸಿ ಆರೋಗ್ಯ ಕಾಪಾಡಿಕೊಳ್ಳಿ ಕೊರೊನಾ ತಡೆಗಟ್ಟಲು ಸಹಕರಿಸಿ. ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ಮೈಕ್ ಮೂಲಕ ಹೇಳುತ್ತಿರುವುದನ್ನು ಕಂಡ ಸಾರ್ವಜನಿಕರು ತಕ್ಷಣ ಎಚ್ಚೆತ್ತು ಮಾಸ್ಕ್ ಧರಿಸಿಕೊಂಡಿದ್ದಾರೆ.

    ಕೊರೊನಾ ಮಹಾಮಾರಿಯ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾದ ಸಾರ್ವಜನಿಕರು ಬೇಜವಾಬ್ದಾರಿತನದಿಂದ ಮಾಸ್ಕ್‌ಗಳನ್ನು ಧರಿಸದೇ ನಿರ್ಲಕ್ಷ್ಯ ತೋರುತ್ತಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದೆ. ಅಷ್ಟೇ ಅಲ್ಲದೇ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಸೋಂಕಿನ ಪ್ರಕರಣಗಳು ದಿನ ಕಳೆದಂತೆ 600ಕ್ಕೂ ಅಧಿಕ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗುತ್ತಿದೆ.

  • ಕೊರೊನಾ ಜಾಗೃತಿ ಮೂಡಿಸುತ್ತಿರುವ ವಿದ್ಯಾರ್ಥಿಗಳ ಹಾಡು ವೈರಲ್

    ಕೊರೊನಾ ಜಾಗೃತಿ ಮೂಡಿಸುತ್ತಿರುವ ವಿದ್ಯಾರ್ಥಿಗಳ ಹಾಡು ವೈರಲ್

    ಮೈಸೂರು: ನಟ ಸಾರ್ವಭೌಮ ಡಾ.ರಾಜಕುಮಾರ್ ಹಾಡಿನಲ್ಲಿ ಕೊರೊನಾ ಜಾಗೃತಿಯನ್ನು ಮೂಡಿಸುವ ಪದಗಳ ಜೋಡಣೆ ಮಾಡಿ ಹಾಡಿರುವ ವಿದ್ಯಾರ್ಥಿಗಳ ವೀಡಿಯೋ ವೈರಲ್ ಆಗಿದೆ.

    ಮೈಸೂರಿನ ವಾಕ್ ಮತ್ತು ಶ್ರವಣ ಕೇಂದ್ರದ ವಿದ್ಯಾರ್ಥಿಗಳು ಸಾಂಗ್ ಹೇಳಿ ಡಾನ್ಸ್ ಮಾಡುತ್ತಾ ಜಾಗೃತಿಯನ್ನು ಮೂಡಿಸಿದ್ದಾರೆ. ಕೊರೊನಾಗೆ ಎಲ್ಲೆ ಎಲ್ಲಿದೆ, ಕೊರೊನಾಗೆಂದು ಕೊನೆಯಿದೆ ಎಂದು ಸಾಂಗ್ ಹಾಡಿ ಡಾನ್ಸ್ ಮಾಡುವ ಮೂಲಕವಾಗಿ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.

    ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡಿಗೆ ಕೊರೊನಾ ಜಾಗೃತಿಯ ಟಚ್ ನೀಡಿರುವ ವಿದ್ಯಾರ್ಥಿಗಳು ಕೊರೊನಾ ಹೆಚ್ಚಾಗುತ್ತಿದೆ. ಜಾಗೃತಿಯಿಂದ ಇರಿ ಎಂದು ಹೇಳುವುದನ್ನು ಬಹಳ ಅರ್ಥಗರ್ಭಿತವಾಗಿ ಮನೆಯಲ್ಲೇ ಇರು, ನಿಧಾನಿಸು ಎಂದು ಹೇಳುತ್ತಾ ಹೆಜ್ಜೆ ಹಾಕಿದ್ದಾರೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮಾಡಿರುವ ವಿದ್ಯಾರ್ಥಿಗಳ ಕೊರೊನಾ ಸಾಂಗ್ ಸಖತ್ ವೈರಲ್ ಆಗಿದೆ.

  • ಮನೆ ಮನೆಗೆ ತೆರಳಿ ಪಾಠದ ಜೊತೆ ಕೊರೊನಾ ಜಾಗೃತಿ ಮೂಡಿಸ್ತಿರೋ ಶಿಕ್ಷಕರು

    ಮನೆ ಮನೆಗೆ ತೆರಳಿ ಪಾಠದ ಜೊತೆ ಕೊರೊನಾ ಜಾಗೃತಿ ಮೂಡಿಸ್ತಿರೋ ಶಿಕ್ಷಕರು

    ರಾಯಚೂರು: ಕೋವಿಡ್ 19 ಅಟ್ಟಹಾಸದಿಂದ ಜನಜೀವನವೇ ಬದಲಾಗಿದೆ. ಶಾಲಾ ಕಾಲೇಜುಗಳು ಯಾವಾಗ ಆರಂಭವಾಗುತ್ತವೆ ಅನ್ನೋ ಸ್ಪಷ್ಟತೆ ಇನ್ನೂ ಮೂಡಿಲ್ಲ. ಹೀಗಾಗಿ ಮಕ್ಕಳ ಅಕ್ಷರಭ್ಯಾಸ ತಪ್ಪಬಾರದು ಅಂತ ಶಾಲೆಗೆ ಬೀಗ ಹಾಕಿದ್ರೂ ರಾಯಚೂರಿನ ಲಿಂಗಸುಗೂರಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತೆರಳಿ ಪಾಠ ಮಾಡುತ್ತಿದ್ದಾರೆ.

    ತಾಲೂಕಿನ ಪುಟ್ಟಹಳ್ಳಿ ಕೆಸರಟ್ಟಿ ಗ್ರಾಮದ ಮುಖ್ಯೋಪಾಧ್ಯಾಯ ಚಂದ್ರಶೇಖರಪ್ಪ ಹಾಗೂ ಸಹ ಶಿಕ್ಷಕರು ಮಧ್ಯಾಹ್ನದವರೆಗೆ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಠ ಹೇಳುತ್ತಿದ್ದಾರೆ. ಹೋಂ ವರ್ಕ್ ಕೊಟ್ಟು ಮರುದಿನ ಬಂದು ಪರಿಶೀಲಿಸುತ್ತಿದ್ದಾರೆ. ಪಾಠದ ಜೊತೆಗೆ ಮಕ್ಕಳು ಹಾಗೂ ಪೋಷಕರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

    ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪಾಠ ಮಾಡುತ್ತಾರೆ. ಮಕ್ಕಳಿಗೆ ನೀಡಿದ ಹೋಂ ವರ್ಕ್‍ನ್ನ ಮಾಡಿಸುವಂತೆ ಪೋಷಕರಿಗೆ ಸೂಚನೆ ನೀಡುತ್ತಿದ್ದಾರೆ. ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ, ಗ್ರಾಮದ ಸ್ವಚ್ಛತೆ ಬಗ್ಗೆಯೂ ಅರಿವು ಮೂಡಿಸುತ್ತಿದ್ದಾರೆ. ಶಿಕ್ಷಕರ ನಡೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕೋವಿಡ್ ನಿಯಂತ್ರಣಕ್ಕೆ ಅರಣ್ಯ ಇಲಾಖೆಯಿಂದ ಜನಜಾಗೃತಿ

    ಕೋವಿಡ್ ನಿಯಂತ್ರಣಕ್ಕೆ ಅರಣ್ಯ ಇಲಾಖೆಯಿಂದ ಜನಜಾಗೃತಿ

    ಧಾರವಾಡ: ಕೋವಿಡ್ ಸರಪಳಿ ತುಂಡರಿಸಲು ಜನಜಾಗೃತಿಯೇ ಮುಖ್ಯವಾಗಿರುವದರಿಂದ ಜಿಲ್ಲಾಡಳಿತ ಹಾಗೂ ಅರಣ್ಯ ,ಅಬಕಾರಿ ಇಲಾಖೆಯ ಸಹಯೋಗದಲ್ಲಿ ಧಾರವಾಡ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಜನಜಾಗೃತಿ ಚಟುವಟಿಕೆಗಳು ಜರುಗುತ್ತಿವೆ.

    ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಕಲಕೇರಿ, ದೇವಗಿರಿ ಹಾಗೂ ಬೆಣಚಿ ಗ್ರಾಮಗಳ ಅರಣ್ಯ ವಲಯ ಪ್ರದೇಶಗಳಲ್ಲಿ ಕೋವಿಡ್ ಜಾಗೃತಿ ಚಟುವಟಿಕೆಗಳನ್ನು ನಡೆಸಿದರು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್, ಬಳಸುವುದು, ಪರಸ್ಪರ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮಹತ್ವವನ್ನು ಗ್ರಾಮಸ್ಥರಿಗೆ ವಿವರಿಸಿದರು.

    ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ರೈತರು ಇರುವ ಜಾಗದಲ್ಲೇ ಹೋಗಿ ಈ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವದು ವಿಶೇಷ.

  • ಕೊರೊನಾ ಜಾಗೃತಿ ಮೂಡಿಸುತ್ತಾ ತರಕಾರಿ ವ್ಯಾಪಾರ- ವಿಡಿಯೋ ನೋಡಿ

    ಕೊರೊನಾ ಜಾಗೃತಿ ಮೂಡಿಸುತ್ತಾ ತರಕಾರಿ ವ್ಯಾಪಾರ- ವಿಡಿಯೋ ನೋಡಿ

    -ಮೂರ್ನಾಲ್ಕು ಭಾಷೆಗಳಲ್ಲಿ ವ್ಯಾಪಾರ

    ಕೋಲಾರ: ಇಡೀ ವಿಶ್ವವನ್ನೇ ಹೆಮ್ಮಾರಿ ಕೊರೊನಾ ವೈರಸ್ ಭಾದಿಸುತ್ತಿದ್ದು, ಎಲ್ಲಿ ಹೋದ್ರೆ ಏನಾಗುತ್ತೊ, ಏನ್ ತಿಂದ್ರೆ ಏನ್ ಬರುತ್ತೊ ಅಂತಾ ಜನ ಭಯಭೀತರಾಗಿದ್ದಾರೆ. ಈ ನಡುವೆ ಕೋಲಾರದ ರೈತ ತಾನು ಬೆಳೆದ ತರಕಾರಿಯನ್ನ ಬೈಕ್ ನಲ್ಲಿ ಇಟ್ಟುಕೊಂಡು ಊರೂರು ಸುತ್ತಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಾ ಮಾರಾಟ ಮಾಡುತ್ತಿದ್ದಾರೆ.

    ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ರಾಜೇನಹಳ್ಳಿಯ ರೈತ ಯಲ್ಲಪ್ಪ ಮೂರ್ನಾಲ್ಕು ಭಾಷೆಗಳಲ್ಲಿ ಜೋರಾಗಿ ಕೂಗುತ್ತಾ ಸೊಪ್ಪು ತರಕಾರಿ ಮಾರುತ್ತಿದ್ದಾರೆ. ಜಾದೂಗಾರನಂತೆ ಮೂರ್ನಾಲ್ಕು ಭಾಷೆಗಳಲ್ಲಿ ಸೊಪ್ಪು, ತರಕಾರಿ ಹೆಸರು ಹೇಳುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಕೊರೊನಾ ಆತಂಕದ ನಡುವೆ ತರಕಾರಿ ವ್ಯಾಪಾರಿ ವಿಭಿನ್ನ ಪ್ರಯತ್ನ, ವಿವಿಧ ಭಾಷೆಯಲ್ಲಿ ಮಾತನಾಡುತ್ತ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕನ್ನಡ, ತೆಲುಗು, ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಾ ತರಕಾರಿ ಮಾರುತ್ತಾರೆ.

    ಯಲ್ಲಪ್ಪ ತರಕಾರಿ ಮಾರುವ ಶೈಲಿಗೆ ಜನರು ಫಿದಾ ಆಗಿದ್ದಾರೆ. ರೈತ ಯಲ್ಲಪ್ಪ ತರಕಾರಿ ಮಾರುವ ವಿಡಿಯೋಗಳು ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.