Tag: ಕೊರೊನಾ ಕೇಸ್

  • ತನಗೆ ಕೊರೊನಾ ಬಂದಿದ್ದು ಹೇಗೆ ಅನ್ನೋದನ್ನು ತಿಳಿಸಿದ ಇಂಗ್ಲೆಂಡ್ ಪ್ರಧಾನಿ

    ತನಗೆ ಕೊರೊನಾ ಬಂದಿದ್ದು ಹೇಗೆ ಅನ್ನೋದನ್ನು ತಿಳಿಸಿದ ಇಂಗ್ಲೆಂಡ್ ಪ್ರಧಾನಿ

    ಲಂಡನ್: ಇಂಗ್ಲೆಂಡ್‍ನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ತನಗೆ ಸೋಂಕು ಹೇಗೆ ಬಂದಿರಬಹುದು ಎನ್ನುವುದನ್ನು ಈಗ ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ. ಈ ವೇಳೆ ಅಲ್ಲಿ ಕೊರೊನಾ ವೈರಸ್ ರೋಗಿಗಳು ಇದ್ದರು. ಅಲ್ಲಿದ್ದ ಎಲ್ಲ ಮಂದಿಗೆ ಶೇಕ್ ಹ್ಯಾಂಡ್ ಮಾಡಿದ್ದೆ. ಇದರಿಂದಾಗಿ ನನಗೆ ವೈರಸ್ ಬಂದಿರಬಹುದು ಎಂದು ಹೇಳಿದ್ದಾರೆ.

    ಬೋರಿಸ್ ಜಾನ್ಸನ್ ಅವರಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ಗುಣಲಕ್ಷಣಗಳು ಕಂಡು ಬಂದಿದ್ದವು. ಇದಾದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಇದರಿಂದ ಭಯಪಡುವ ಅಗತ್ಯವಿಲ್ಲ. ನಾನು ಮನೆಯಲ್ಲೇ ಕುಳಿತು ತಂತ್ರಜ್ಞಾನ ಬಳಸಿ ಸರ್ಕಾರ ನಡೆಸುತ್ತೇನೆ. ನಾವು ಕೊರೊನಾ ವಿರುದ್ಧ ಹೊರಾಡೋಣ ಎಂದು ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವ ಬೋರಿಸ್ ಜಾನ್ಸನ್, ನನಗೆ ಸ್ವಲ್ಪ ಪ್ರಮಾಣದಲ್ಲಿ ಕೆಮ್ಮು ಮತ್ತು ದೇಹದ ಉಷ್ಣಾಂಶ ಜಾಸ್ತಿ ಇತ್ತು. ಆಗ ನಾನು ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿದೆ. ವರದಿಯಲ್ಲಿ ನನಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ನಾನು ಮನೆಯಲ್ಲೇ ಪ್ರತ್ಯೇಕವಾಗಿ ಇದ್ದೇನೆ. ಜೊತೆಗೆ ತಂತ್ರಜ್ಞಾನ ಬಳಸಿ ವಿಡಿಯೋ ಕಾಲ್ ಮೂಲಕ ಸರ್ಕಾರ ನಡೆಸುತ್ತಿದ್ದೇನೆ. ನಾವು ಕೊರೊನಾ ವೈರಸ್ ವಿರುದ್ಧ ಹೊರಾಡೋಣ. ಆದಷ್ಟೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ್ದಾರೆ.

    ಇಂಗ್ಲೆಂಡಿನಲ್ಲಿ 14,590 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 760 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 13,690 ಪೀಡಿತರಿದ್ದು, 140 ಮಂದಿ ಗುಣಮುಖರಾಗಿದ್ದಾರೆ.

  • ಮತ್ತೆ 5 ಪಾಸಿಟಿವ್ ಕೇಸ್ – ಕೊರೊನಾ ಪೀಡಿತರ ಸಂಖ್ಯೆ 38ಕ್ಕೆ ಏರಿಕೆ

    ಮತ್ತೆ 5 ಪಾಸಿಟಿವ್ ಕೇಸ್ – ಕೊರೊನಾ ಪೀಡಿತರ ಸಂಖ್ಯೆ 38ಕ್ಕೆ ಏರಿಕೆ

    ಬೆಂಗಳೂರು: ಇಂದು ಹೊಸದಾಗಿ 5 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

    ರೋಗಿ 34 – 32 ವರ್ಷದ ಕಾಸರಗೋಡಿನ ವ್ಯಕ್ತಿ ಮಾರ್ಚ್ 20 ರಂದು ದುಬೈಯಿಂದ ಮಂಗಳೂರಿಗೆ ಬಂದಿದ್ದ. ಈ ವ್ಯಕ್ತಿಯನ್ನು ನೇರವಾಗಿ ವಿಮಾನ ನಿಲ್ದಾಣದಿಂದಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 35 – 40 ವರ್ಷದ ಉತ್ತರ ಕನ್ನಡ ವ್ಯಕ್ತಿ ಮರ್ಚ್ 21 ರಂದು ದುಬೈಯಿಂದ ಬಂದಿದ್ದು, ಉತ್ತರ ಕನ್ನಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 36 – 40 ವರ್ಷದ ಉತ್ತರ ಕನ್ನಡ ಮೂಲದ ವ್ಯಕ್ತಿ ಮಾರ್ಚ್ 21 ರಂದು ಆಗಮಿಸಿದ್ದು, ಉತ್ತರ ಕನ್ನಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 37 – ಚಿಕ್ಕಬಳ್ಳಾಪುರದ 56 ವರ್ಷದ ಮಹಿಳೆ ರೋಗಿ 19 ಮತ್ತು ರೋಗಿ 22ರ ಜೊತೆ ಸೌದಿ ಅರೇಬಿಯದ ಮೆಕ್ಕಾಗೆ ಸಹ ಪ್ರಯಾಣಿಕರಾಗಿ ತೆರಳಿದ್ದರು. ಮಾರ್ಚ್ 14 ರಂದು ಹೈದರಾಬಾದ್ ನಲ್ಲಿ ಇಳಿದಿದ್ದರು. ಚಿಕ್ಕಬಳ್ಳಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 38 – ಬೆಂಗಳೂರು ಮೂಲದ 56 ವರ್ಷದ ಮಹಿಳೆ ರೋಗಿ 13ರ ಸಂಪರ್ಕಕ್ಕೆ ಬಂದಿದ್ದು, ಈಗ ಇವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ದೆಹಲಿಯ ಮೊದಲ ಕೊರೊನಾ ಪೀಡಿತ ವ್ಯಕ್ತಿ ಸಂಪೂರ್ಣ ಗುಣಮುಖ

    ದೆಹಲಿಯ ಮೊದಲ ಕೊರೊನಾ ಪೀಡಿತ ವ್ಯಕ್ತಿ ಸಂಪೂರ್ಣ ಗುಣಮುಖ

    – ಆಸ್ಪತ್ರೆಯಿಂದ ಡಿಸ್ಚಾರ್ಜ್

    ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೊದಲು ಕೊರೊನಾ ವೈರಸ್‍ಗೆ ತುತ್ತಾಗಿದ್ದ ವ್ಯಕ್ತಿ ಸಂಪೂರ್ಣವಾಗಿ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಪೂರ್ವ ದೆಹಲಿಯ ಮಯೂರ್ ವಿಹಾರ್ ನಿವಾಸಿಯಾಗಿದ್ದ 45 ವರ್ಷದ ವ್ಯಕ್ತಿ ಇಟಲಿ ದೇಶಕ್ಕೆ ಹೋಗಿ ಬಂದ ನಂತರ ಕೊರೊನಾ ವೈರಸ್ ಸೋಂಕು ಅವರಲ್ಲಿ ಕಾಣಿಸಿಕೊಂಡಿತ್ತು. ಈ ಮೂಲಕ ದೆಹಲಿಯಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಕೇಸ್ ದಾಖಲಾಗಿತ್ತು. ಈಗ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ.

    ಇಟಲಿಗೆ ಹೋಗಿ ಬಂದ ನಂತರ ಐಸೋಲೇಷನ್ ವಾರ್ಡಿಗೆ ಅಡ್ಮಿಟ್ ಆಗುವ ಮೊದಲು ಈ ವ್ಯಕ್ತಿ ಹಲವರು ಜನರೊಂದಿಗೆ ಸಂಪರ್ಕ ಹೊಂದಿದ್ದರು. ಜೊತೆಗೆ ಫೈವ್ ಸ್ಟಾರ್ ಹೋಟಲಿನಲ್ಲಿ ಅದ್ಧೂರಿಯಾಗಿ ಮಗನ ಹುಟ್ಟುಹಬ್ಬ ಕೂಡ ಮಾಡಿದ್ದರು. ಹಾಗಾಗಿ ದೆಹಲಿಯಲ್ಲಿ ಕೊರೊನಾ ಭೀತಿ ಜಾಸ್ತಿಯಾಗಿತ್ತು. ಸೋಂಕು ಕಂಡುಬಂದ ನಂತರ ಹಲವು ದಿನಗಳಿಂದ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ ನೀಡಾಗುತ್ತಿತ್ತು.

    ಈ ಬಗ್ಗೆ ಮಾಹಿತಿ ನೀಡಿರುವ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು, ದೆಹಲಿಯಲ್ಲಿ ಮೊದಲು ಕೊರೊನಾ ವೈರಸ್‍ಗೆ ತುತ್ತಾಗಿದ್ದ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರಲ್ಲಿ ಈಗ ಯಾವುದೇ ರೀತಿಯ ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಾಣಿಸಿಕೊಂಡಿಲ್ಲ. ಅವರನ್ನು ಇಂದು ಡಿಸ್ಚಾರ್ಜ್ ಮಾಡುತ್ತಿದ್ದೇವೆ. ಜೊತೆಗೆ ಮನೆಯಲ್ಲಿ ಅವರ ಆರೋಗ್ಯದ ಬಗ್ಗೆ ನಮಗೆ ಆಗಾಗ ಮಾಹಿತಿ ನೀಡಲು ಕುಟುಂಬಸ್ಥರಿಗೆ ತಿಳಿಸಿದ್ದೇವೆ. ನಮ್ಮ ಸಿಬ್ಬಂದಿ ಕೂಡ ಕುಟುಂಬದರ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

    ಈ ವ್ಯಕ್ತಿ ಇಟಲಿಯಿಂದ ಬಂದು, ಮಗನ ಹುಟ್ಟು ಹಬ್ಬ ಆಚರಿಸಿದ್ದರು. ಈ ವ್ಯಕ್ತಿ ಮಾರ್ಚ್ 1ರಂದು ಐಸೋಲೇಷನ್ ವಾರ್ಡಿಗೆ ದಾಖಲಾಗುವ ಮುಂಚೆ ಸುಮಾರು 100 ಜನರ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿತ್ತು. ಈತನ ಜೊತೆ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಗುರುತಿಸಿ ಪರೀಕ್ಷೆ ಮಾಡಲಾಗಿತ್ತು. ಇತ್ತಿಚೆಗೆ ದೆಹಲಿಯಲ್ಲಿ ಕೊರೊನಾ ವೈರಸ್‍ನಿಂದ ಓರ್ವ ವೃದ್ಧೆ ಸಾವನ್ನಪ್ಪಿದ್ದರು.

    ಕೊರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋಗುತ್ತಿದೆ. ಇದುವರೆಗೆ ಭಾರತದಲ್ಲಿ 91 ಕೊರೊನಾ ಪಾಸಿಟಿವ್ ಕೇಸ್‍ಗಳು ಬೆಳಕಿಗೆ ಬಂದಿವೆ. ಮಹಾರಾಷ್ಟ್ರವೊಂದರಲ್ಲೇ 31 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಈ ಮೂಲಕ ದೇಶದಲ್ಲೇ ಅತೀ ಹೆಚ್ಚು ಕೊರೊನಾ ವೈರಸ್ ಪ್ರಕರಣ ಮುಂಬೈಯಲ್ಲಿ ದಾಖಲಾಗಿವೆ ಎಂದು ತಿಳಿದುಬಂದಿದೆ.

  • ಹನಿಮೂನಿಗೆ ಗ್ರೀಸ್‍ಗೆ ತೆರಳಿದ್ದ ಬೆಂಗ್ಳೂರು ದಂಪತಿ – ಪತಿಗೆ ಈಗ ಕೊರೊನಾ ಸೋಂಕು

    ಹನಿಮೂನಿಗೆ ಗ್ರೀಸ್‍ಗೆ ತೆರಳಿದ್ದ ಬೆಂಗ್ಳೂರು ದಂಪತಿ – ಪತಿಗೆ ಈಗ ಕೊರೊನಾ ಸೋಂಕು

    ಬೆಂಗಳೂರು: ಗ್ರೀಸ್ ದೇಶಕ್ಕೆ ಹನಿಮೂನಿಗೆ ತೆರಳಿದ ಬೆಂಗಳೂರಿನ ದಂಪತಿ ಪೈಕಿ ಪತಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ಕರ್ನಾಟಕದಲ್ಲಿ 4 ಇದ್ದ ಕೊರೊನಾ ಪಾಸಿಟಿವ್ ಕೇಸ್ ಇಂದು 5ಕ್ಕೇರಿದೆ.

    ಗ್ರೀಸ್‍ನಿಂದ ಬೆಂಗಳೂರಿಗೆ ಬಂದ 26 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಜಯನಗರ ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ವ್ಯಕ್ತಿಯನ್ನು ದಾಖಲಿಸಲಾಗಿದ್ದು, ಕಿತ್ಸೆ ನೀಡಲಾಗ್ತಿದ್ದು, ವ್ಯಕ್ತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ವ್ಯಕ್ತಿಯ ಸಂಪರ್ಕದಲ್ಲಿದ್ದವರಿಗೆ ಮನೆಯಲ್ಲೇ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗ್ತಿದೆ.

    ಫೆಬ್ರವರಿ 23ರಂದು ದಂಪತಿ ಹನಿಮೂನ್‍ಗೆಂದು ಗ್ರೀಸ್‍ಗೆ ತೆರಳಿದ್ದರು. ಮಾರ್ಚ್ 6ರಂದು ಮುಂಬೈಗೆ ಈ ದಂಪತಿ ವಾಪಸ್ ಆಗಿದ್ದರು. ಮಾರ್ಚ್ 8ರಂದು ಬೆಂಗಳೂರಿಗೆ ಪತಿ ಒಬ್ಬನೇ ಬಂದಿದ್ದಾನೆ. ಪತ್ನಿ ಮುಂಬೈನಿಂದ ನೇರವಾಗಿ ಆಗ್ರಾಗೆ ತೆರಳಿದ್ದಾಳೆ. ಈ ವಿಚಾರವನ್ನು ಅಲ್ಲಿ ಉತ್ತರ ಪ್ರದೇಶ ಸರ್ಕಾರದ ಜೊತೆ ಮಾಹಿತಿಯನ್ನು ರಾಜ್ಯ ಸರ್ಕಾರ ಹಂಚಿಕೊಂಡಿದೆ.

    ಮಾರ್ಚ್ 9ರಂದು ಕಚೇರಿಗೆ ಸೋಂಕಿತ ವ್ಯಕ್ತಿ ಕಚೇರಿಗೆ ಹೋಗಿದ್ದ. ಕಚೇರಿಯಲ್ಲಿ 154 ಉದ್ಯೋಗಿಗಳಿದ್ದರೂ, ನಾಲ್ವರ ಜೊತೆ ಮಾತ್ರ ಸಂಪರ್ಕದಲ್ಲಿದ್ದ. ಮಾರ್ಚ್ 10 ರಂದು ಸಂಕಿತ ವ್ಯಕ್ತಿಗೆ ಅನಾರೋಗ್ಯ ಕಂಡು ಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೋಂಕಿತನ ತಂದೆ, ತಾಯಿ, ಸಹೋದರ ಸೇರಿ 7 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಸೋಂಕಿತ ಪಯಣಿಸಿದ್ದ ಇಂಡಿಗೋ ವಿಮಾನದ ಸಹ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲು ಸಿದ್ಧತೆ ನಡೆದಿದೆ. ಬೆಂಗಳೂರಿನಲ್ಲಿ ರಿಕ್ಷಾದಲ್ಲಿ ಸೋಂಕಿತ ವ್ಯಕ್ತಿ ಸಂಚರಿಸಿದ್ದು ರಿಕ್ಷಾ ಚಾಲಕನ ಮನೆಯಲ್ಲಿ ಮೂವರು ಸದಸ್ಯರಿದ್ದಾರೆ.

    ಇವತ್ತು ಫ್ರಾನ್ಸಿನಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯೊಬ್ಬರಿಗೆ ಸೋಂಕು ಶಂಕೆ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ 12 ಮಂದಿ, ಹಾಸನದಲ್ಲಿ ಇಬ್ಬರು ಮತ್ತು ದಕ್ಷಿಣ ಕನ್ನಡದಲ್ಲಿ ಮೂವರು ಮತ್ತು ಬಳ್ಳಾರಿಯಲ್ಲಿ ಒಬ್ಬರ ಮೇಲೆ ನಿಗಾ ಇಡಲಾಗಿದೆ.

  • ಫಸ್ಟ್ ಟೈಂ, ಚೀನಾದ ಹುಬೆ ಪ್ರಾಂತ್ಯದಲ್ಲಿ ಸಿಂಗಲ್ ಡಿಜಿಟ್‍ಗೆ ಕೊರೊನಾ ಕೇಸ್ ಇಳಿಕೆ

    ಫಸ್ಟ್ ಟೈಂ, ಚೀನಾದ ಹುಬೆ ಪ್ರಾಂತ್ಯದಲ್ಲಿ ಸಿಂಗಲ್ ಡಿಜಿಟ್‍ಗೆ ಕೊರೊನಾ ಕೇಸ್ ಇಳಿಕೆ

    – 8 ಮಂದಿಯಲ್ಲಿ ಮಾತ್ರ ಕಾಣಿಸಿದ ಕೊರೊನಾ
    – ಕೆಲ ಕೈಗಾರಿಕೆ ತೆರೆಯಲು ಸರ್ಕಾರದಿಂದ ಅನುಮತಿ

    ಬೀಜಿಂಗ್: ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಬೆನ್ನಲ್ಲೇ ಚೀನಾದಲ್ಲಿ ಪೀಡಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದೇ ಮೊದಲ ಬಾರಿ ಕೊರೊನಾ ಕೇಂದ್ರ ಬಿಂದು ಎಂದು ಬಿಂಬಿತವಾಗಿರುವ ಹುಬೆ ಪ್ರಾಂತ್ಯದಲ್ಲಿ ಹೊಸ ಕೊರೊನಾ ಪೀಡಿತರ ಸಂಖ್ಯೆ ಸಿಂಗಲ್ ಡಿಜಿಟ್‍ಗೆ ಇಳಿಕೆಯಾಗಿದೆ.

    ಚೀನಾದಲ್ಲಿ ಕೊರೊನಾ ವೈರಸ್ ಹರಡುವ ಪ್ರಮಾಣ ಕಡಿಮೆಯಾಗಿದೆ. ಇದೆ ಮೊದಲ ಬಾರಿಗೆ ಹುಬೆ ಪ್ರಾಂತ್ಯದಲ್ಲಿ ಹೊಸದಾಗಿ 8 ಮಂದಿಯಲ್ಲಿ ಮಾತ್ರ ವೈರಸ್ ಕಾಣಿಸಿದೆ ಎಂದು ಚೀನಾದ ಆರೋಗ್ಯ ಇಲಾಖೆ ಗುರುವಾರ ಹೇಳಿದೆ.

    ಕೊರೊನಾ ವೈರಸ್ ಆರಂಭಗೊಂಡ ಬಳಿಕ ಎರಡು ತಿಂಗಳ ಕಾಲ ಮುಚ್ಚಿದ್ದ ಹುಬೆ ಪ್ರಾಂತ್ಯದ ಕೆಲ ಕೈಗಾರಿಕೆಗಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ಕೊರೊನಾ ವೈರಸ್ ಗರಿಷ್ಟ ಮಟ್ಟ ಈಗಾಗಲೇ ಮುಕ್ತಾಯಗೊಂಡಿದ್ದು ಈಗ ಸೋಂಕು ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿಫೆಂಗ್ ತಿಳಿಸಿದ್ದಾರೆ. ಇದನ್ನು ಓದಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ – ವುಹಾನ್‍ನಲ್ಲಿ ವೈದ್ಯರ ಸಂಭ್ರಮ

    ಬುಧವಾರ ಹುಬೆ ಪ್ರಾಂತ್ಯ ಬಿಟ್ಟು ಚೀನಾದ ಇತರ ಕಡೆ ಸೇರಿ ಒಟ್ಟು 7 ಕೇಸ್‍ಗಳು ದಾಖಲಾಗಿವೆ. ಒಟ್ಟು ಬುಧವಾರ ಚೀನಾದಲ್ಲಿ 15 ಪ್ರಕರಣಗಳು ಪತ್ತೆಯಾಗಿದ್ದರೆ ಮಂಗಳವಾರ 24 ಕೇಸ್ ಪತ್ತೆಯಾಗಿತ್ತು. ಹುಬೆ ಪ್ರಾಂತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಟೊಮೊಬೈಲ್ ಕೈಗಾರಿಕೆಗಳು ಸ್ಥಾಪನೆಗೊಂಡಿದ್ದು ಜ.23 ರಿಂದ ಮುಚ್ಚಲ್ಪಿಟ್ಟಿತ್ತು.

    ವಿಶ್ವದಲ್ಲಿ ಕೊರೊನಾ ವೈರಸ್ ವೇಗವಾಗಿ ಈಗ ಹರಡುತ್ತಿದ್ದರೆ ಕಳೆದ 7 ದಿನಗಳಿಂದ ಚೀನಾದಲ್ಲಿ ಗಣನೀಯಗಾಗಿ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿದೆ. ಚೀನಾ ಸರ್ಕಾರ ಕೊರೊನಾ ಬಿಗಿ ನಿಯಂತ್ರಣ ಕ್ರಮವನ್ನು ಕೈಗೊಂಡಿತ್ತು. ಹುಬೆ ಪ್ರಾಂತ್ಯದ ವುಹಾನ್ ನಗರ ಕೊರೊನಾ ರೋಗದ ಕೇಂದ್ರ ಸ್ಥಳವಾಗಿದ್ದು, 1.1 ಕೋಟಿ ಜನರಿದ್ದ ಈ ನಗರ ಪ್ರವೇಶಿಸದಂತೆ ಜನರಿಗೆ ನಿರ್ಬಂಧ ಹೇರಲಾಗಿತ್ತು.

    ಚೀನಾದಲ್ಲಿ ಒಟ್ಟು ಇಲ್ಲಿಯವರಗೆ 80,793 ಕೇಸ್ ದಾಖಲಾಗಿದ್ದು, 62,793 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬುಧವಾರ 11 ಮಂದಿ ಸೇರಿ ಒಟ್ಟು 3,169 ಮಂದಿ ಮೃತಪಟ್ಟಿದ್ದಾರೆ. ಹಲವು ಉದ್ಯಮಗಳು ಭಾರೀ ನಷ್ಟ ಹೊಂದಿದ್ದು ವಿಶೇಷವಾಗಿ ಚೀನಾ ಏರ್‍ಲೈನ್ ಅಂದಾಜು 3 ಶತಕೋಟಿ ಡಾಲರ್ ನಷ್ಟ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.