Tag: ಕೊರಿಯನ್

  • ಬ್ಲೈಂಡ್ ಸಿನಿಮಾ ನೇರವಾಗಿ ಓಟಿಟಿಯಲ್ಲಿ : ಬೇಸರಿಸಿಕೊಂಡ ಸೋನಂ ಕಪೂರ್

    ಬ್ಲೈಂಡ್ ಸಿನಿಮಾ ನೇರವಾಗಿ ಓಟಿಟಿಯಲ್ಲಿ : ಬೇಸರಿಸಿಕೊಂಡ ಸೋನಂ ಕಪೂರ್

    ಬಾಲಿವುಡ್ (Bollywood) ನಟಿ ಸೋನಂ ಕಪೂರ್ ತಮ್ಮ ಚಿತ್ರದ ನಿರ್ಮಾಪಕರ ಮೇಲೆ ಬೇಸರಿಸಿಕೊಂಡಿದ್ದಾರೆ. ತಾವು ಅತೀ ನಿರೀಕ್ಷೆ ಮಾಡುತ್ತಿದ್ದ ‘ಬ್ಲೈಂಡ್’ (Blind) ಸಿನಿಮಾವನ್ನು ನಿರ್ಮಾಪಕರು ಏಕಾಏಕಿ ಓಟಿಟಿಯಲ್ಲಿ (OTT)  ನೇರವಾಗಿ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದಾಗಿ ಸಹಜವಾಗಿಯೇ ನಟಿಗೆ ಬೇಸರವಾಗಿದೆ. ಚಿತ್ರಮಂದಿರಗಳಲ್ಲಿ ನೋಡಬೇಕಾದ ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಮದುವೆ ಮತ್ತು ಮಗುವಾದ ನಂತರ ಸೋನಂ ಕಪೂರ್ (Sonam Kapoor) ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಭರವಸೆ ಮೂಡಿಸಬಲ್ಲ ಚಿತ್ರಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆ ಚಿತ್ರಗಳು ಮೊದಲು ಥಿಯೇಟರ್ ನಲ್ಲಿ ಬರಲಿ, ಆನಂತರ ಓಟಿಟಿಯಲ್ಲಿ ಪ್ರಸಾರ ಕಾಣಲಿ ಎನ್ನುವುದು ಅವರ ಆಸೆ. ಆದರೆ, ಬ್ಲೈಂಡ್ ಸಿನಿಮಾದ ನಿರ್ಮಾಪಕರು ಆ ಆಸೆಗೆ ತಣ್ಣೀರು ಎರೆಚಿದ್ದಾರೆ ಎನ್ನುವುದು ಅವರ ನೋವು. ಇದನ್ನೂ ಓದಿ:Bigg Boss OTT 2: ದೊಡ್ಮನೆಯಿಂದ ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ ಔಟ್

    ಮದುವೆ ಮತ್ತು ಮಗುವಾದ ನಂತರ ನಾಲ್ಕು ವರ್ಷಗಳಿಂದ ಸೋನಂ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ನಾಲ್ಕು ವರ್ಷಗಳ ನಂತರ ಬರುತ್ತಿರುವ ಸಿನಿಮಾವಿದು. ದೊಡ್ಡ ಮಟ್ಟದಲ್ಲೇ ಈ ಸಿನಿಮಾವನ್ನು ರಿಲೀಸ್ ಮಾಡುತ್ತಾರೆ ಎಂದು ನಂಬಿಕೊಂಡಿದ್ದೆ. ಓಟಿಟಿಯಲ್ಲಿ ಬರುತ್ತಿರುವ ವಿಚಾರವನ್ನೂ ನಿರ್ಮಾಪಕರು ನನ್ನ ಬಳಿ ಹೇಳಲಿಲ್ಲ ಎಂದು ಸೋನಂ ಅವರ ಆಪ್ತರ ಬಳಿ ನೋವನ್ನು ಹಂಚಿಕೊಂಡಿದ್ದಾರೆ.

     

    ಹಾಗಂತ ಬ್ಲೈಂಡ್ ನೇರ ಸಿನಿಮಾ ಏನೂ ಅಲ್ಲ. 2011ರಲ್ಲಿ ಬಿಡುಗಡೆಯಾದ ಕೊರಿಯನ್ (Korean) ಭಾಷೆಯ ಬ್ಲೈಂಡ್ ಚಿತ್ರದ ರಿಮೇಕ್. ಹಾಗಾಗಿಯೇ ನಿರ್ಮಾಪಕರು ಇಂಥದ್ದೊಂದು ಆಲೋಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ನಡೆ ಸೋನಂಗೆ ಮತ್ತು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಟ್ಟಿಲಿನಿಂದ ಜಾರಿ ಬಿದ್ದು ಸಾವನ್ನಪ್ಪಿದ ನಟಿ: 29ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಪಾರ್ಕ್

    ಮೆಟ್ಟಿಲಿನಿಂದ ಜಾರಿ ಬಿದ್ದು ಸಾವನ್ನಪ್ಪಿದ ನಟಿ: 29ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಪಾರ್ಕ್

    ಕೊರಿಯನ್ ಚಿತ್ರೋದ್ಯಮದ ಜನಪ್ರಿಯ ನಟಿ ಪಾರ್ಕ್ ಸೂ ಯನ್ ನಿಧನರಾಗಿದ್ದಾರೆ. ಮೆಟ್ಟಿಲುಗಳಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಜೆಜು ದ್ವೀಪದಲ್ಲಿ ಅವರು ಪ್ರದರ್ಶನ ನೀಡಬೇಕಿತ್ತು.ಅದಕ್ಕೂ ಮುನ್ನ ಈ ದುರಂತ ಸಂಭವಿಸಿದೆ.

    ಮೆಟ್ಟಿಲುಗಳಿಂದ ಆಯಾ ತಪ್ಪಿ ಬಿದ್ದಾಗ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಬ್ರೇನ್ ಡೆಡ್ ಆದ ಕಾರಣದಿಂದಾಗಿ ವೈದ್ಯರಿಗೆ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ. ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸುತ್ತಿದ್ದಂತೆಯೇ ಆಕೆಯ ಅಂಗಾಂಗಗಳನ್ನು  ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

    ಈ ಕುರಿತು ಮಾತನಾಡಿರುವ ನಟಿಯ ತಾಯಿ, ‘ನನ್ನ ಮಗಳ ಹೃದಯ ಬಿಡಿತ ಇನ್ನೂ ಹಾಗೆಯೇ ಇದೆ. ಬ್ರೈನ್ ಡೆಡ್ ಆಗಿದೆ. ಹಾಗಾಗಿ ಆಕೆಯ ಅಂಗಾಂಗಗಳು ಅಗತ್ಯ ಇರುವವರಿಗೆ ಉಪಯೋಗಕ್ಕೆ ಬರಲಿ. ಈ ಮೂಲಕ ನನ್ನ ಮಗಳು ಕೂಡ ಜೀವಂತವಾಗಿ ಇರುತ್ತಾಳೆ ಎನ್ನುವ ಸಮಾಧಾನ ನಮಗೂ ಇರಲಿದೆ’ ಎಂದಿದ್ದಾರೆ.

    1994ರಲ್ಲಿ ಪಾರ್ಕ್ ಜನಿಸಿದ್ದು ಈಗ ಅವರಿಗೆ ಕೇವಲ 29 ವರ್ಷ ಮಾತ್ರ. ಸೋಮವಾರ ಆಕೆ ಅಂತಿಮ ಸಂಸ್ಕಾರ ನಡೆದಿದ್ದು, ಅಗಲಿದ ನಟಿಗೆ ಹಲವರು ಕಂಬಣಿ ಮಿಡಿದಿದ್ದಾರೆ. ಇಂದು ನಟಿ ಗೌರವಾರ್ಥ ಮೆರವಣಿಗೆ ಕೂಡ ನಡೆದಿದೆ. ದಿ ಸೆಲ್ಲರ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಪಾರ್ಕ್, ಅತೀ ಸಣ್ಣ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡಿದ್ದಾರೆ.

  • ಮನೆಮುಂದೆಯೇ ಶವವಾಗಿ ಪತ್ತೆಯಾದ ಖ್ಯಾತ ಕೊರಿಯನ್ ನಟಿ

    ಮನೆಮುಂದೆಯೇ ಶವವಾಗಿ ಪತ್ತೆಯಾದ ಖ್ಯಾತ ಕೊರಿಯನ್ ನಟಿ

    ಕೊರಿಯನ್ (Korean) ನ ಖ್ಯಾತ ನಟಿ ಜುಂಗ್ ಚೆಹ್ ಯುಲ್ (Jung Chae Yul) ನಿಗೂಢ ರೀತಿಯಲ್ಲಿ ನಿಧನರಾಗಿದ್ದಾರೆ. 26ರ ವಯಸ್ಸಿನ ಈ ನಟಿ ಅನುಮಾನಾಸ್ಪದವಾಗಿ (suspicious) ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಡೀಪ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಜುಂಗ್ ಚೆಹ್ ಯುಲ್ ಪ್ರತಿಭಾವಂತ ನಟಿಯಾಗಿದ್ದರು.

    ಸೋಮವಾರ ಅವರ ಮನೆಯ ಬಳಿಯೇ ನಟಿಯ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಸಾವಿನ ಸುತ್ತ ತನಿಖೆ ಆರಂಭಿಸಿದ್ದಾರೆ. ಈ ಸಾವನ್ನು ಹಲವಾರು ರೀತಿಯಲ್ಲಿ  ವಿಶ್ಲೇಷಿಸಲಾಗುತ್ತಿದೆ. ಕುಟುಂಬಸ್ಥರು ಕೂಡ ಸೂಕ್ತ ತನಿಖೆಗಾಗಿ ಒತ್ತಾಯಿಸಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ:‘ಅನ್ಲಾಕ್ ರಾಘವ’ನಿಗೆ ಡಬ್ಬಿಂಗ್ ಮಾಡುತ್ತಿದ್ದಾರೆ ರೇಚಲ್ ಡೇವಿಡ್

    ಸೋಷಿಯಲ್ ಮೀಡಿಯಾದಲ್ಲಿ ಈ ಸಾವಿನ ಬಗ್ಗೆ ನಾನಾ ರೀತಿಯಲ್ಲಿ ಪೋಸ್ಟ್ ಮಾಡಲಾಗುತ್ತಿದ್ದು, ಪೊಲೀಸರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸಾವಿನ ರಹಸ್ಯ ಬಹಿರಂಗವಾಗುವ ತನಕ ವದಂತಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈಗಾಗಲೇ ನಟಿಯ ಅಂತಿಮ ಸಂಸ್ಕಾರ ಕೂಡ ಆಗಿದ್ದು, ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ನಟಿಯ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

  • ಸುಪ್ರಸಿದ್ಧ ಕೊರಿಯನ್ ನಟ ಜಂಗ್ ಇಲ್ ವೂ ಜೊತೆ ರಶ್ಮಿಕಾ ಮಂದಣ್ಣ

    ಸುಪ್ರಸಿದ್ಧ ಕೊರಿಯನ್ ನಟ ಜಂಗ್ ಇಲ್ ವೂ ಜೊತೆ ರಶ್ಮಿಕಾ ಮಂದಣ್ಣ

    ನ್ನಡದ ಹೆಸರಾಂತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ವಿಶ್ವವ್ಯಾಪಿ ಸುದ್ದಿಯಾಗಿದ್ದಾರೆ. ಕೊರಿಯನ್ (Korean) ಸುಪ್ರಸಿದ್ಧ ನಟ ಜಂಗ್ ಇಲ್ ವೂ (Jung Il Woo) ಜೊತೆಗಿನ ಫೋಟೋ ಹಂಚಿಕೊಂಡಿರುವ ಅವರು, ಆ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಕೇವಲ ಜಂಗ್ ಇಲ್ ವೂ ಮಾತ್ರವಲ್ಲದೇ ಥೈಲ್ಯಾಂಡ್ (Thailand) ನಟ ಗಲ್ಫ್ ಕನಾವುತ್ (Gulf Kanawha) ಕೂಡ ಇದ್ದಾರೆ ಎಂದು ಪರಿಚಯಿಸಿದ್ದಾರೆ.

    ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಮಿಲನ್ ಫ್ಯಾಷನ್ ವೀಕ್ ನಲ್ಲಿ ಭಾಗಿಯಾಗಿದ್ದು, ಅಲ್ಲಿ ಹೆಸರಾಂತ ಬ್ರ್ಯಾಂಡ್ ಗಳ ರಾಯಭಾರಿಗಳು ಜೊತೆಯಾಗುತ್ತಾರೆ. ಹಾಗಾಗಿ ವಿಶ್ವದ ಅನೇಕ ರಾಷ್ಟ್ರಗಳ ನಟರು ಈ ಫ್ಯಾಶನ್ ವೀಕ್ ನಲ್ಲಿ ಭಾಗಿಯಾಗಿದ್ದಾರೆ. ಆ ಸಂತಸದ ಕ್ಷಣಗಳನ್ನು ಕ್ಲಿಕ್ ಮಾಡಿರುವ ರಶ್ಮಿಕಾ, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ

    rashmika hot images
    rashmika hot images

    ಇತ್ತೀಚಿನ ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ಕೂಡ ಅನೇಕ ಬ್ರ್ಯಾಂಡ್ ಗಳ ಜೊತೆ ಗುರುತಿಸಿಕೊಂಡಿದ್ದಾರೆ. ಕೆಲ ಬ್ರ್ಯಾಂಡ್ ಗಳಿಗೆ ರಾಯಭಾರಿ ಕೂಡ ಆಗಿದ್ದಾರೆ. ಹಾಗಾಗಿ ಈ ಫ್ಯಾಷನ್ ವೀಕ್ ನಲ್ಲಿ ಭಾಗಿಯಾಗುವುದಕ್ಕೆ ಅವರಿಗೆ ಅವಕಾಶ ಸಿಕ್ಕಿದೆ. ಆ ಅವಕಾಶವನ್ನು ಅವರು ಸದುಪಯೋಗ ಪಡಿಸಿಕೊಂಡಿದ್ದಾರೆ. ಹೆಸರಾಂತ ಕಲಾವಿದರು ಜೊತೆ ಕಾಲ ಕಳೆದಿದ್ದಾರೆ. ಭಾರತೀಯ ಸಿನಿಮಾ ರಂಗದ ಗರಿಮೆ ಹೆಚ್ಚಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k