Tag: ಕೊರಾನಾ

  • ರಾಜ್ಯದಲ್ಲಿ ಇಳಿಕೆಯತ್ತ ಕೋವಿಡ್‌ ಕೇಸ್‌ -ಇಂದಿನ ಪಾಸಿಟಿವಿಟಿ ರೇಟ್ ಶೇ.1.45

    ರಾಜ್ಯದಲ್ಲಿ ಇಳಿಕೆಯತ್ತ ಕೋವಿಡ್‌ ಕೇಸ್‌ -ಇಂದಿನ ಪಾಸಿಟಿವಿಟಿ ರೇಟ್ ಶೇ.1.45

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕೇಸ್ ಸಂಖ್ಯೆಯಲ್ಲಿ ಇಳಿಕೆ ಪ್ರಮಾಣ ಮುಂದುವರಿದಿದೆ. ನಿನ್ನೆಗಿಂತ ಮೂನ್ನೂರಕ್ಕೆ ಕೇಸ್ ಇಳಿಕೆಯಾಗಿವೆ. ಇಂದು ರಾಜ್ಯದಲ್ಲಿ 1,549 ಕೇಸ್ ದಾಖಲಾಗಿವೆ. ಪಾಸಿಟಿವ್ ರೇಟ್ ಪ್ರಮಾಣ 1.45%ಗೆ ಇಳಿದಿದೆ.

    ರಾಜ್ಯದಲ್ಲಿ ಇಂದು 90,688 ಕೋವಿಡ್ ಟೆಸ್ಟ್ ಆಗಿದ್ದು, 1549 ಕೇಸ್ ದಾಖಲಾಗಿದೆ. ಜೊತೆಗೆ 23 ಜನ ಕೊರೊನಾಗೆ ಬಲಿಯಾಗಿದ್ದಾರೆ. ಕೇಸ್ ಕಡಿಮೆ ಆಗಿ ಸಾವಿನ ಪ್ರಮಾಣ ಕೂಡ ಕೋವಿಡ್ ಇಳಿಕೆಯ ಗ್ರಾಫ್ ಕಾಣ್ತಿದೆ. ಇದನ್ನೂ ಓದಿ: ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ

    ಬೆಂಗಳೂರಿನಲ್ಲಿ ಕೂಡ ಕೋವಿಡ್ ನಿಯಂತ್ರಣದಲ್ಲಿ ಇದ್ದು, 769 ಕೇಸ್ ದಾಖಲಾದೆ. 7 ಜನ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೇಸ್ ಇಳಿಕೆ ಮುಂದುವರೆದಿದ್ದು, ರಾಜ್ಯದ ಒಟ್ಟು ಆ್ಯಕ್ಟೀವ್ ಕೇಸ್ ಗಳ ಸಂಖ್ಯೆ 19,761ಕ್ಕೆ ಇಳಿಕೆ ಆಗಿದೆ. 5019 ಜನ ಬಿಡುಗಡೆಯಾಗಿದ್ದಾರೆ. ಜಿಲ್ಲೆಗಳಲ್ಲೂ ಕೂಡ ಎರಡಂಕಿಗೆ ಕೇಸ್ ದಾಖಲಾಗ್ತಾ ಇದ್ದು, ಕೋವಿಡ್ ಕೇಸ್ ನಿಯಂತ್ರಣದಲ್ಲಿದೆ.

    ಇಂದಿನ ಹೆಲ್ತ್‌ ಬುಲೆಟಿನ್‌ ಪ್ರಕಾರ ಬಾಗಲಕೋಟೆ 12. ಬಳ್ಳಾರಿ 55, ಬೆಳಗಾವಿ 73, ಬೆಂಗಳೂರು ಗ್ರಾಮಾಂತರ 9, ಬೆಂಗಳೂರು ನಗರ 769, ಬೀದರ್‌ 7, ಚಾಮರಾಜನಗರ 29, ಚಿಕ್ಕಬಳ್ಳಾಪುರ 16, ಚಿಕ್ಕಮಗಳೂರು 22, ಚಿತ್ರದುರ್ಗ 39, ದಕ್ಷಿಣ ಕನ್ನಡ 43, ದಾವಣಗೆರೆ 4, ಧಾರವಾಡ 37, ಗದಗ 6, ಹಾಸನ 43, ಹಾವೇರಿ 7, ಕಲಬುರಗಿ 10, ಕೊಡಗು 45, ಕೋಲಾರ 20, ಕೊಪ್ಪಳ 9, ಮಂಡ್ಯ 25, ಮೈಸೂರು 83, ರಾಯಚೂರು 3, ರಾಮನಗರ 1, ಶಿವಮೊಗ್ಗ 39, ತುಮಕೂರು 84, ಉಡುಪಿ 35, ಉತ್ತರ ಕನ್ನಡ 33, ವಿಜಯಪುರ 10 ಹಾಗೂ ಯಾದಗಿರಿಯಲ್ಲಿ 11 ಹೊಸ ಪ್ರಕರಣಗಳು ಪತ್ತೆಯಾಗಿದೆ.