Tag: ಕೊರನಾ ಬುಲೆಟಿನ್

  • 3,691 ಕೊರೊನಾ ಕೇಸ್- 7,740 ಜನ ಡಿಸ್ಚಾರ್ಜ್

    3,691 ಕೊರೊನಾ ಕೇಸ್- 7,740 ಜನ ಡಿಸ್ಚಾರ್ಜ್

    – 44 ಕೊರೊನಾಗೆ ಬಲಿ, 71,330 ಸಕ್ರಿಯ ಪ್ರಕರಣಗಳು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಇಂದು ಸಹ ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿಲ್ಲ. ಕೇವಲ 3,691 ಹೊಸ ಪ್ರಕರಣಗಳು ಪತ್ತೆಯಾಗಿವೆ. 7,740 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 44 ಜನ ಕೊರೊನಾಗೆ ಬಲಿಯಗಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 8,09,638ಕ್ಕೆ ಏರಿಕೆಯಾಗಿದೆ. ಈ ಪೈಕಿ 7,27,298 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 71,330 ಸಕ್ರಿಯ ಪ್ರಕರಣಗಳಿವೆ. ಸೋಮವಾರ 3,130 ಮಂದಿಗೆ ಸೋಂಕು ಬಂದಿತ್ತು.

    ಒಟ್ಟು ಇಲ್ಲಿಯವರೆಗೆ 10,991 ಮಂದಿ ಮೃತಪಟ್ಟಿದ್ದು 944 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 14,385 ಆಂಟಿಜನ್ ಟೆಸ್ಟ್, 52,316 ಆರ್‍ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 66,701 ಜನರಿಗೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 75,14,194 ಕೋವಿಡ್ 19 ಪರೀಕ್ಷೆ ಕರ್ನಾಟಕದಲ್ಲಿ ನಡೆದಿದೆ.

    ಎಂದಿನಂತೆ ಬೆಂಗಳೂರು ನಗರದಲ್ಲಿ 1,874, ದಕ್ಷಿಣ ಕನ್ನಡ 122, ಹಾಸನ 114, ಮೈಸೂರು 188, ವಿಜಯಪುರ 128, ಮಂಡ್ಯ 123 ಮಂದಿಗೆ ಸೋಂಕು ಬಂದಿದೆ. ಅಲ್ಲದೆ ಅತೀ ಕಡಿಮೆ ಗದಗ 15, ಕೋಲಾರ 16, ಹಾವೇರಿ 19 ಹಾಗೂ ಯಾದಗಿರಿಯಲ್ಲಿ 19 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ನಗರದಲ್ಲಿ 429, ಬಳ್ಳಾರಿ 61, ಹಾಸನ 44, ಚಾಮರಾಜನಗರದಲ್ಲಿ 41 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಕೇವಲ 3,130 ಕೊರೊನಾ ಪ್ರಕರಣ ದಾಖಲು- 8,715 ಜನ ಡಿಸ್ಚಾರ್ಜ್

    ಕೇವಲ 3,130 ಕೊರೊನಾ ಪ್ರಕರಣ ದಾಖಲು- 8,715 ಜನ ಡಿಸ್ಚಾರ್ಜ್

    – 42 ಕೊರೊನಾಗೆ ಬಲಿ, 75,423 ಸಕ್ರಿಯ ಪ್ರಕರಣಗಳು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಇಂದು ಕೇವಲ 3,130 ಹೊಸ ಪ್ರಕರಣಗಳು ಪತ್ತೆಯಾಗಿವೆ. 8,715 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 42 ಜನ ಕೊರೊನಾಗೆ ಬಲಿಯಗಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 8,05,947ಕ್ಕೆ ಏರಿಕೆಯಾಗಿದೆ. ಈ ಪೈಕಿ 7,19,558 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 75,423 ಸಕ್ರಿಯ ಪ್ರಕರಣಗಳಿವೆ. ಭಾನುವಾರ 4,439 ಮಂದಿಗೆ ಸೋಂಕು ಬಂದಿತ್ತು.

    ಒಟ್ಟು ಇಲ್ಲಿಯವರೆಗೆ 10,947 ಮಂದಿ ಮೃತಪಟ್ಟಿದ್ದು 942 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 10,955 ಆಂಟಿಜನ್ ಟೆಸ್ಟ್, 54,937 ಆರ್‍ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 65,892 ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 74,47,493 ಕೋವಿಡ್ 19 ಪರೀಕ್ಷೆ ಕರ್ನಾಟಕದಲ್ಲಿ ನಡೆದಿದೆ.

    ಎಂದಿನಂತೆ ಬೆಂಗಳೂರು ನಗರದಲ್ಲಿ 1,603, ದಕ್ಷಿಣ ಕನ್ನಡ 153, ದಾವಣಗೆರೆ 124, ಬೆಂಗಳೂರು ಗ್ರಾಮಾಂತರ 87, ಮೈಸೂರು 139, ದಕ್ಷಿಣ ಕನ್ನಡ 139 ಮಂದಿಗೆ ಸೋಂಕು ಬಂದಿದೆ. ಅಲ್ಲದೆ ಅತೀ ಕಡಿಮೆ ಬೀದರ್ 3, ಶಿವಮೊಗ್ಗ 3, ಗದಗ 4, ಯಾದಗಿರಿಯಲ್ಲಿ ಕೇವಲ 9 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ನಗರದಲ್ಲಿ 427, ಬಳ್ಳಾರಿ 61, ಹಾಸನ 44, ಚಾಮರಾಜನಗರದಲ್ಲಿ 41 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.