Tag: ಕೊರಗ

  • ಕೊರಗ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು: ಆರ್.ಅಶೋಕ್

    ಕೊರಗ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು: ಆರ್.ಅಶೋಕ್

    ಬೆಂಗಳೂರು: ಮುಂಜಾನೆ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಅಚ್ಚರಿಗ ಬಾಣಸಿಗರಾಗಿ ಕಂದಾಯ ಸಚಿವರು ಬೆಳಗಿನ ಉಪಾಹರ ಬಡಿಸಿದರು. ವಿದ್ಯಾರ್ಥಿಗಳು ಅಚ್ಚರಿ ಹಾಗೂ ಸಂತೋಷದಿಂದ ಆರ್.ಅಶೋಕ್ ಅವರೊಂದಿಗೆ ಮಾತುಕತೆ ನಡೆಸಿದರು.

    ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವರು, ಮೊರಾರ್ಜಿ ವಸತಿ ಶಾಲೆಯ ಬೆಳಗಿನ ಪ್ರಾರ್ಥನೆಯಲ್ಲಿ ಭಾಗಿಯಾಗಿ ಮಕ್ಕಳಿಗೆ ವಿದ್ಯೆಯ ಮಹತ್ವದ ಕುರಿತು ಮಾತನಾಡಿದ್ದು, ಯಾವುದೇ ಕ್ಷೇತ್ರವನ್ನು ಆಯ್ದುಕೊಳ್ಳಿ, ಆದರೆ ಅದರಲ್ಲಿ ಪರಿಪೂರ್ಣತೆ ಸಾಧಿಸಿ. ಸತತ ಅಧ್ಯಯನದಿಂದ ಮಾತ್ರ ಯಶಸ್ಸು ಸಾಧ್ಯ. ನಾನು ಸಹ ಸರ್ಕಾರಿ ಶಾಲೆಯಲ್ಲಿಯೇ ಓದಿದವನು ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಜನರ, ಅಧಿಕಾರಿಗಳ ಸಹಕಾರ ಮುಖ್ಯ: ವಿ.ಸೋಮಣ್ಣ

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಅತ್ಯಂತ ಮುಗ್ಧ ಮತ್ತು ಹಿಂದುಳಿದ ಜನಾಂಗವಾದ ಕೊರಗರ ಕೇರಿಗೆ ಬಂದಿದ್ದು ತುಂಬಾ ಸಂತೋಷವಾಗಿದೆ. ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಸಮಾನತೆಯ ಸಂದೇಶ ನೀಡಲು ನಾನು ಬಂದಿದ್ದೇನೆ. ಸರ್ಕಾರದ ಎಲ್ಲ ಸೌಲಭ್ಯ ಅವರಿಗೆ ಸಿಗುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

    ಶಿಕ್ಷಣ, ಆಹಾರ, ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ನಾವು ಮಾಡುತ್ತೇವೆ. ಇವರನ್ನು ಸಮಾಜ ನೋಡುವ ದೃಷ್ಟಿ ಬದಲಾಗುವಂತೆ ಮಾಡಬೇಕು. ಸಮಾಜದಲ್ಲಿ ಯಾರಿಗೂ ತೊಂದರೆ ಮಾಡದೆ ಇವರು ಬದುಕುತ್ತಿದ್ದಾರೆ. ಇವರ ಸಮಸ್ಯೆ ಆಲಿಸಿ ಪರಿಹಾರ ನೀಡುತ್ತೇನೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.

    ವಸತಿ ಶಾಲೆಯ ಪ್ರತಿ ಮಕ್ಕಳ ಇಷ್ಟವನ್ನು ಕೇಳಿ ತಿಳಿದ ಅಶೋಕ್ ಅವರು ಇಂದು ಸಂಜೆಯ ಭೂರಿ ಭೋಜನ ವ್ಯವಸ್ಥೆಯನ್ನು ಅವರೆ ಮುಂದೆ ನಿಂತು ಮಾಡಿದರು. ಕಲ್ಲುಗುಡ್ಡೆ ಕೊರಗರ ಕಛೇರಿಗೆ ಭೇಟಿ ನೀಡಿ, ಕುಮಾರ್ ಅವರ ಮನೆಯಲ್ಲಿ ತಿಂಡಿ ಸವಿದರು. ಕೊರಗ ಸಮುದಾಯದವರ ಸಮಸ್ಯೆಗಳ ಕುರಿತು ಮಾತುಕತೆ ನಡೆಸಿದ ಅವರು, ಹಲವಾರು ವರ್ಷಗಳಿಂದ ಸಾಗುವಳಿ ಜಮೀನುಗಳ ಖಾತೆ ಸಮಸ್ಯೆಯನ್ನು ಒಂದು ತಿಂಗಳ ಒಳಗಾಗಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದರು.

    ಕೊರಗರಲ್ಲಿ ಪ್ರಪ್ರಥಮವಾಗಿ ರಾಜ್ಯ ಮಟ್ಟದ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಗೌರಿ ಅವರಿಗೆ ಸನ್ಮಾನಿಸಿ, ಪ್ರಥಮಬಾರಿ ಗ್ರಾಮ ಸಹಾಯಕ ಹುದ್ದೆಗೆ ಸೇರಿದ ಯುವಕನಿಗೆ ನೇಮಕಾತಿ ಪತ್ರ ನೀಡಿದರು. ಕೊರಗ ಸಮುದಾಯದವರು ಸಾಂಪ್ರದಾಯಿಕ ಶೈಲಿಯ ಡೋಲು, ವಾದ್ಯದೊಂದಿಗೆ ಸಚಿವರನ್ನು ಬರಮಾಡಿಕೊಂಡರು. ಇದನ್ನೂ ಓದಿ: ಪೊಲೀಸ್ ಮಗಳನ್ನೆ ಕತ್ತು ಹಿಸುಕಿ ಕೊಂದ ಸ್ನೇಹಿತೆಯ ಪತಿ!

    ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ನವೀನ್ ಭಟ್, ಉಪವಿಭಾಗಾಧಿಕಾರಿಗಳು, ತಹಶಿಲ್ದಾರ್ ಹಾಗೂ ಇತರರು ಉಪಸ್ಥಿತರಿದ್ದರು. ಇದರೊಂದಿಗೆ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಕ್ತಾಯವಾಯಿತು.

  • ಕೊರಗ ಅರ್ಚಕರಿಂದ ಪೂಜೆ ಮಾಡ್ಸಿದ್ರು ನಿತ್ಯಾನಂದ ಒಳಕಾಡು- ಉಡುಪಿ ಪಬ್ಲಿಕ್ ಹೀರೋನ ಧಾರ್ಮಿಕ ಕ್ರಾಂತಿ

    ಕೊರಗ ಅರ್ಚಕರಿಂದ ಪೂಜೆ ಮಾಡ್ಸಿದ್ರು ನಿತ್ಯಾನಂದ ಒಳಕಾಡು- ಉಡುಪಿ ಪಬ್ಲಿಕ್ ಹೀರೋನ ಧಾರ್ಮಿಕ ಕ್ರಾಂತಿ

    ಉಡುಪಿ: ನಾಡಿನಾದ್ಯಂತ ದಸರಾ ಮಹೋತ್ಸವ ನಡೆಯುತ್ತಿದೆ. ಈ ನಡುವೆ ಉಡುಪಿಯಲ್ಲಿ ಧಾರ್ಮಿಕ ಆಚರಣೆಯಲ್ಲಿ ಕ್ರಾಂತಿಯಾಗಿದೆ. ಪಬ್ಲಿಕ್ ಹೀರೊ ನಿತ್ಯಾನಂದ ಒಳಕಾಡು ಅವರು ಧಾರ್ಮಿಕ ಆಚರಣೆಯಲ್ಲಿ ಒಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ.

    ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟ್ ವತಿಯಿಂದ ಆಯುಧ ಪೂಜೆ ನಡೆಯಿತು. ಉಚಿತ ಸೇವೆ ಒದಗಿಸುವ ಎರಡು ಜೀವರಕ್ಷಕ ಅಂಬುಲೆನ್ಸ್, ಉಚಿತ ಸೇವೆಯ ವಿದ್ಯುತ್ ಚಾಲಿತ ಶೀತಲಿಕೃತ ಶವ ರಕ್ಷಣಾ ಯಂತ್ರ, ಹಸಿರು ಅಭಿಯಾನದ ಸೈಕಲ್ ರಿಕ್ಷಾ, ಬೈಕ್ ಗಳಿಗೆ ಪೂಜೆ ಮಾಡಲಾಯಿತು.

    ಪೂಜೆ ಮಾಡಿದ್ರೆ ಅದ್ರಲ್ಲೇನು ವಿಶೇಷ ಅಂತ ಕೇಳ್ಬೇಡಿ. ಪೂಜೆ ಮಾಡಿದ್ದು ಬ್ರಾಹ್ಮಣ ಮತ್ತಿತರ ಮೇಲ್ಜಾತಿಯ ಅರ್ಚಕರಲ್ಲ. ಕೊರಗ ಸಮುದಾಯದ ವ್ಯಕ್ತಿ ವಾಹನ ಪೂಜೆ ಮಾಡುವ ಮೂಲಕ ಕ್ರಾಂತಿ ಮಾಡಿದ್ದಾರೆ. ನಗರದ ಚಿತ್ತರಂಜನ್ ಸರ್ಕಲ್ ಬಳಿಯ ಮಾರುತಿ ವಿಥಿಕಾದಲ್ಲಿ ವಾಹನ ಪೂಜೆ ನಡೆಸಿದ್ದು ಸುಂದರ ಕೊರಗ. ಕೊರಗಜ್ಜ ದೈವದ ಚಾಕರಿ(ಸೇವೆ) ಮಾಡುವ ಸುಂದರ ಕೊರಗ ವಾಹನ ಪೂಜೆ ಮಾಡಿದ್ದಾರೆ.

    ಎಚ್. ಸುಂದರ ಕೊರಗ ಮಂಚಿ ಗ್ರಾಮದವರಾಗಿದ್ದು, ತಮ್ಮ ಬುಡಕಟ್ಟು ಕೊರಗ ಸಂಪ್ರದಾಯದಂತೆ ಶುದ್ಧ, ಕರ್ಪೂರಾರತಿ, ಆರತಿ ಸೇವೆ, ಈಡುಗಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ನಾನು ದಸರಾ ಸಂದರ್ಭ ವಾಹನ ಪೂಜೆ ಮಾಡಿದ್ದೇನೆ. ಬಹಳ ಖುಷಿಯಾಗುತ್ತಿದೆ ಈ ಬೆಳವಣಿಗೆ ನನಗೆ, ನಮ್ಮ ಸಮಾಜಕ್ಕೆ ಸಿಕ್ಕ ದೊಡ್ಡ ಗೌರವ ಅಂತ ಸುಂದರ ಕೊರಗ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಈ ಮೂಲಕ ಸಮಾಜದಲ್ಲಿ ಕೊರಗರಿಗೂ ಸ್ಥಾನಮಾನವಿದೆ. ಅವರೂ ಸಾರ್ವಜನಿಕವಾಗಿ ಮುಂದೆ ಬರಬೇಕು ಎಂಬ ಆಶಯವನ್ನು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ತೋರಿಸಿಕೊಟ್ಟಿದ್ದಾರೆ. ನಮ್ಮ ಸೇವೆ ಜಾತ್ಯಾತೀತ ಮತ್ತು ಧರ್ಮಾತೀತ. ಎಲ್ಲಾ ಜನರಿಗೂ ನಮ್ಮ ಸೇವೆ ಉಚಿತ. ಕೊರಗ ಸಮುದಾಯಕ್ಕೆ ಮೇಲ್ಪಂಕ್ತಿ ಹಾಕುವುದು ನಮ್ಮ ಉದ್ದೇಶ. ಅವರು ನಮ್ಮ ನೆಲದ ಮೂಲ ಜನಾಂಗ. ಅವರಿಗೆ ಮೊದಲ ಗೌರವ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯ ಅಂತ ಹೇಳಿದರು.

    ಸಮಾಜ ಸೇವಕರಾದ ತಾರನಾಥ ಮೇಸ್ತ ವಿನಯಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೂರಾರು ಸಾರ್ವಜನಿಕರಿಗೆ ತಿಂಡಿ ತಂಪು ಪಾನೀಯ ಸವಿದು ಕ್ರಾಂತಿಗೆ ಕಾರಣವಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=FUzwjukmN0U