Tag: ಕೊಬ್ಬರಿ ಹೋರಿ

  • ಲಕ್ಷ-ಲಕ್ಷ ಬಹುಮಾನ ಗೆದ್ದುಕೊಟ್ಟಿದ್ದ ರಾಕ್‌ ಸ್ಟಾರ್‌ ಹೆಸರಿನ ಹೋರಿ ಇನ್ನಿಲ್ಲ!

    ಲಕ್ಷ-ಲಕ್ಷ ಬಹುಮಾನ ಗೆದ್ದುಕೊಟ್ಟಿದ್ದ ರಾಕ್‌ ಸ್ಟಾರ್‌ ಹೆಸರಿನ ಹೋರಿ ಇನ್ನಿಲ್ಲ!

    – ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ ಅಭಿಮಾನಿಗಳು

    ಹಾವೇರಿ: ಜನಪದ‌ ಕ್ರೀಡೆ ಹೋರಿ ಹಬ್ಬದಲ್ಲಿ ಸಿನಿಮಾ ನಟರಂತೆ ಸುತ್ತ ಮುತ್ತ ಹಳ್ಳಿಗಳಲ್ಲಿ ಹೆಸರು ಮಾಡಿದ್ದ ರಾಕ್‌ ಸ್ಟಾರ್ ಹೆಸರಿನ ಕೊಬ್ಬರಿ ಹೋರಿ (Kobbari Hori) ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.

    ಹೋರಿ ಹಬ್ಬದ ಇತಿಹಾಸದಲ್ಲಿಯೇ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ರಾಕ್‌ ಸ್ಟಾರ್ ಹೋರಿಯನ್ನ ಹಾವೇರಿ ನಗರದ ಚಿಕ್ಕಪ್ಪ, ಅಜಪ್ಪ, ಮಾರುತಿ ಎನ್ನುವವರು ಸಾಕಿದ್ದರು. ರಾಕ್‌ ಸ್ಟಾರ್ ಹೋರಿಗೆ 25 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ರಾಕ್‌ ಸ್ಟಾರ್‌ ಹೋರಿಯನ್ನ ಮೀರಿಸುವ ಯಾವುದೇ ಹೋರಿ ಇರಲಿಲ್ಲ. ಎಲ್ಲೇ ಹೋದರೂ ಇದಕ್ಕೆ ಬಹುಮಾನ ಫಿಕ್ಸ್‌ ಆಗಿರುತ್ತಿತ್ತು. ರಾಕ್‌ ಸ್ಟಾರ್‌ ಹೋರಿ ಹಬ್ಬದಲ್ಲಿ ಭಾಗಹಿಸುತ್ತಿದೆ ಅಂದ್ರೆ ಸಾವಿರಾರು ಅಭಿಮಾನಿಗಳು ಇದರ ಆರ್ಭಟ ಕಣ್ತುಂಬಿಕೊಳ್ಳಲು ಸಾಲುಗಟ್ಟಿ ನಿಲ್ಲುತ್ತಿದ್ದರು.

    ಕಾಲಾನಂತರ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಕ್‌ಸ್ಟಾರ್‌ ಕಳೆದ ಒಂದು ವರ್ಷದಿಂದ ಯಾವುದೇ ಹಬ್ಬದಲ್ಲಿಯೂ ಪಾಲ್ಗೊಂಡಿರಲಿಲ್ಲ. ಪಶುವೈದ್ಯರಿಂದ ನಿರಂತರವಾಗಿ ಚಿಕಿತ್ಸೆ ಕೊಡಲಾಗುತ್ತಿತ್ತು. ಇತ್ತೀಚೆಗೆ ಹಾವೇರಿ ನಗರದ ನಾಗೇಂದ್ರಮಟ್ಟಿಯಲ್ಲಿ ರಾಕ್‌ ಸ್ಟಾರ್‌ ಹೋರಿಯ 25ನೇ ಹುಟ್ಟುಹಬ್ಬವನ್ನೂ ಆಚರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರಾಕ್‌ಸ್ಟಾರ್‌ ಮಿಂಚಿ ಮಾಯವಾಗಿದೆ.

    ರಾಕ್‌ ಸ್ಟಾರ್‌ ಗೆದ್ದ ಬಹುಮಾನಗ‌ಳ ಪಟ್ಟಿ ನೋಡಿ:
    ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ ರಾಕ್ ಸ್ಟಾರ್ ಹೋರಿಯನ್ನು, ಜಮೀನು ಉಳುಮೆಗೂ ಬಳಸಿಕೊಳ್ಳಲಾಗುತ್ತಿತ್ತು. ಜೊತೆಗೆ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಬೈಕ್, ಚಿನ್ನಾಭರಣವನ್ನು ಗೆದ್ದುಕೊಟ್ಟಿತ್ತು. ನಂತರ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ 10 ಬೈಕ್, ಚಿನ್ನಾಭರಣ ಮತ್ತು 20 ಟ್ರೈಜುರಿ ಸೇರಿದಂತೆ ಕೃಷಿ ಉಪಕರಣಗಳು, ಹತ್ತು ಹಲವು ಬಹುಮಾನಗಳ ಗೆದ್ದುಕೊಟ್ಟಿತ್ತು. ಈ ಮೂಲಕ ರಾಜ್ಯಾದ್ಯಂತ ಹೆಸರು ಮಾಡಿತ್ತು.

    ರಾಕ್‌ ಸ್ಟಾರ್‌ ಹೋರಿ ಕಳೆಬರವನ್ನ ನಾಗೇಂದ್ರನಮಟ್ಟಿಯಿಂದ ಹಾವೇರಿ ನಗರದ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ರಸ್ತೆ ಉದ್ದಕ್ಕೂ ಬಸವಣ್ಣನಿಗೆ ಪೂಜೆ ಹಾಗೂ ಹಾರ ಹಾಕಿ ಜನರು ಹೋರಿಯ ದರ್ಶನ ಪಡೆದರು. ಹೋರಿಯ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆಯೇ ನೆರವೇರಿಸಲಾಯಿತು.

  • ಬೆಳ್ಳಿ, ಬಂಗಾರ ಪದಕ ಗೆದ್ದುಕೊಟ್ಟಿದ್ದ `ಮೈಸೂರು ಹುಲಿ-193′ ಖ್ಯಾತಿಯ ಕೊಬ್ಬರಿ ಹೋರಿ ಸಾವು

    ಬೆಳ್ಳಿ, ಬಂಗಾರ ಪದಕ ಗೆದ್ದುಕೊಟ್ಟಿದ್ದ `ಮೈಸೂರು ಹುಲಿ-193′ ಖ್ಯಾತಿಯ ಕೊಬ್ಬರಿ ಹೋರಿ ಸಾವು

    ಹಾವೇರಿ: ನಾಡ ಪ್ರಸಿದ್ಧಿ ಕೊಬ್ಬರಿ ಹೋರಿ (Kobbari Hori) ಸ್ಪರ್ಧೆಯಲ್ಲಿ ಹೆಸರು ಮಾಡಿ ಬೆಳ್ಳಿ, ಬಂಗಾರ ಪದಕ ಬಹುಮಾನವಾಗಿ ಗೆದ್ದು ತಂದುಕೊಟ್ಟಿದ್ದ `ಮೈಸೂರು ಹುಲಿ-193′ (Mysuru Huli 193) ಖ್ಯಾತಿಯ ಹೋರಿ ಅನಾರೋಗ್ಯದಿಂದ ಸಾವನ್ನಪ್ಪಿದೆ.

    ಹಾವೇರಿ (Haveri) ಜಿಲ್ಲೆ ರಾಣೇಬೆನ್ನೂರು (Ranebennur) ನಗರದ ಕುರುಬಗೇರಿ ಓಣಿಯಲ್ಲಿ ಕೊಬ್ಬರಿ ಹೋರಿ ಸಾವನ್ನಪ್ಪಿದ್ದು, ಸಾವಿರಾರು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯ ಮಾಲೀಕರು ಹೋರಿಯನ್ನ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಈ ಹೋರಿ ರೈತ (Farmer) ನಾಗಪ್ಪ ಗೂಳಣ್ಣನವರ್ ಎಂಬವರಿಗೆ ಸೇರಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಪ್ರಬಲ ಭೂಕಂಪ – 7 ಮಂದಿ ಸಾವು, 400ಕ್ಕೂ ಹೆಚ್ಚು ಜನರಿಗೆ ಗಾಯ

    13 ವರ್ಷಗಳಿಂದ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಸೊಲಿಲ್ಲದ ಸರದಾರನಾಗಿದ್ದ `ಮೈಸೂರು ಹುಲಿ 193′ ಕೊಬ್ಬರಿ ಹೋರಿಯ ಸ್ಪರ್ಧೆಯಲ್ಲಿ ಬಂಗಾರ, ಬೆಳ್ಳಿ, ಬೈಕ್ ಸೇರಿದಂತೆ ಹಲವಾರು ಬಹುಮಾನಗಳನ್ನು ಗೆದ್ದುಕೊಟ್ಟಿತ್ತು. ಅಲ್ಲದೇ `ಪೀಪಿ ಹೋರಿ’ ಎಂದೂ ಹೆಸರು ಮಾಡಿತ್ತು. ಇದನ್ನೂ ಓದಿ: `ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಶೈಲಿಯಲ್ಲಿ ಪತ್ನಿ ಕೊಲೆ – ಆರೋಪಿ ಪತಿಯಿಂದ ರೋಚಕ ರಹಸ್ಯ ಬಯಲು

    ಭಾನುವಾರ (ಜ.29) ಮಧ್ಯಾಹ್ನ 1:30ರ ವೇಳೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ, ಹಿಂದೂ ವಿಧಿವಿಧಾನಗಳ ಮೂಲಕ ಕೊಬ್ಬರಿ ಹೋರಿ ಅಂತ್ಯಕ್ರಿಯೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲಕ್ಷ ಲಕ್ಷ ಬಹುಮಾನ ಗೆದ್ದುಕೊಟ್ಟ ಮೂಕಾಂಬಿಕಾ ಹೋರಿ ನಿಧನ

    ಲಕ್ಷ ಲಕ್ಷ ಬಹುಮಾನ ಗೆದ್ದುಕೊಟ್ಟ ಮೂಕಾಂಬಿಕಾ ಹೋರಿ ನಿಧನ

    ಹಾವೇರಿ: ಲಕ್ಷಾಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನ ಗೆದ್ದುಕೊಟ್ಟಿದ್ದ ಮೂಕಾಂಬಿಕಾ ಎಕ್ಸ್‌ಪ್ರೆಸ್‌ ಹೋರಿ (Mukambika Express Hori) ಚಿರ ಮೌನಕ್ಕೆ ಜಾರಿದೆ.

    ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ (Kobbari Hori Habba) ಹೆಸರು ಮಾಡಿದ್ದ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಸಾಹುಕಾರ ಸಾಮ್ರಾಜ್ಯ ಮೂಕಾಂಬಿಕಾ ಎಕ್ಸ್‌ಪ್ರೆಸ್‌ ಹೋರಿ ನಿಧನವಾಗಿದೆ. ಗ್ರಾಮದ ಎನ್‌ಟಿಸಿ ಮುತ್ತುರಾಜ್ ಅವರಿಗೆ ಸೇರಿದ ಈ ಹೋರಿಯನ್ನು ತಬ್ಬಿಕೊಂಡು ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ವಸಿಷ್ಠ ಜೊತೆಗಿನ ನಿಶ್ಚಿತಾರ್ಥದ ಬೆನ್ನಲ್ಲೇ ವಿಶೇಷ ಪೋಸ್ಟ್ ಹಂಚಿಕೊಂಡ ಹರಿಪ್ರಿಯಾ

    ಮೂಕಾಂಬಿಕಾ ಎಕ್ಸ್‌ಪ್ರೆಸ್‌ ಹೋರಿ (Mukambika Express Hori) ಸಾವಿರಾರು ಅಭಿಮಾನಿಗಳ ಮನಗೆದ್ದಿತ್ತು. ಶಿವಮೊಗ್ಗ, ಶಿರಸಿ, ಹಾನಗಲ್, ಶಿಕಾರಿಪುರ ಸೇರಿದಂತೆ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ತನ್ನದೇ ಹವಾ ಸೃಷ್ಟಿಸಿತ್ತು. ಇದನ್ನೂ ಓದಿ: ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು

    ಎಲ್ಲೇ ಹೋದರೂ ಬಹುಮಾನ ಗಿಟ್ಟಿಸಿಕೊಳ್ಳುತ್ತಿದ್ದ ಮೂಕಾಂಬಿಕಾ, ಈವರೆಗೆ 8 ಬೈಕ್, 40 ಗ್ರಾಂ ಬಂಗಾರದ ಉಂಗುರ, 5 ಟಿವಿ, 4 ಫ್ರಿಡ್ಜ್ ಸೇರಿದಂತೆ ಹಲವು ಬಹುಮಾನವನ್ನ ಗೆದ್ದುಕೊಟ್ಟಿದೆ. ಮೂಕಾಂಬಿಕಾ ಎಕ್ಸ್ಪ್ರೆಸ್ ಹೋರಿ ನಿಧನದಿಂದ ಅಭಿಮಾನಿಗಳು ಆಕ್ರಂದನ ಮುಗಿಲುಮುಟ್ಟಿದೆ. ಮಾಸೂರು ಗ್ರಾಮದಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ನಂದಿ, ಪೈಲ್ವಾನ್, ಗರುಡ, ವಿಷ್ಣುದಾದಾ ಅಬ್ಬರ- ಹೋರಿಗಳನ್ನು ಹಿಡಿಯಲು ಯುವಕರ ಸಾಹಸ

    ನಂದಿ, ಪೈಲ್ವಾನ್, ಗರುಡ, ವಿಷ್ಣುದಾದಾ ಅಬ್ಬರ- ಹೋರಿಗಳನ್ನು ಹಿಡಿಯಲು ಯುವಕರ ಸಾಹಸ

    ಹಾವೇರಿ: ಹೋರಿ ಹಬ್ಬ ಅಂದ್ರೆ ಹಾವೇರಿ ಜಿಲ್ಲೆಯ ರೈತರಿಗೆ ಅತ್ಯಂತ ಪ್ರಿಯವಾದ ಹಬ್ಬ. ಇಂತಹ ಸಂಭ್ರದಲ್ಲಿ ನಂದಿ, ಪೈಲ್ವಾನ್, ಗರುಡ, ವಿಷ್ಣುದಾದಾ ಸೇರಿದಂತೆ ಅನೇಕ ಹೆಸರಿನ ಹೋರಿಗಳನ್ನು ಹಿಡಿಯಲು ಯುವಕರು ಹರಸಾಹಸಪಟ್ಟ ಪ್ರಸಂಗ ಇಂದು ಹಾವೇರಿ ತಾಲೂಕು ದೇವಗಿರಿ ಗ್ರಾಮದಲ್ಲಿ ನಡೆಯಿತು.

    ದೇವಗಿರಿ ಗ್ರಾಮದಲ್ಲಿ ಇಂದು ರಾಜ್ಯಮಟ್ಟದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹಾವೇರಿ, ಶಿಕಾರಿಪುರ, ಸೇರಿದಂತೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯಿಂದ 200ಕ್ಕೂ ಹೆಚ್ಚು ಹೋರಿಗಳು ಭಾಗವಹಿಸಿದ್ದವು. ಆದರೆ ಇಲ್ಲಿ ಯಾವುದೇ ರೀತಿಯಾದ ಬಹುಮಾನಗಳನ್ನು ಇಟ್ಟಿರಲಿಲ್ಲ. ಆದರೂ ಬಹುಮಾನ ಸ್ಪರ್ಧೆಯಲ್ಲಿ ಉತ್ಸಾಹ ಕಡಿಮೆಯಾಗಿರಲ್ಲಿಲ್ಲ.

    ರೈತರು ಹೋರಿ ಬೆದರಿಸುವ ಸ್ಪರ್ಧೆಗಾಗಿ ವರ್ಷಗಟ್ಟಲೇ ಹೋರಿಗಳನ್ನು ಕಟ್ ಮಸ್ತಾಗಿ ತಯಾರು ಮಾಡಲಾಗುತ್ತಾರೆ. ಹೀಗೆ ತಯಾರಾದ ಹೋರಿಗಳಿಗೆ ನಂದಿ, ಪೈಲ್ವಾನ್, ಗರುಡ, ವಿಷ್ಣುದಾದಾ ಸೇರಿದಂತೆ ವಿವಿಧ ಸಿನಿಮಾ ಹಾಗೂ ನಟರ ಹೆಸರನ್ನು ಇಡಲಾಗುತ್ತದೆ. ಮೈದಾನದಲ್ಲಿ ಹೋರಿಗಳು ಓಡೋವಾಗ ಅವುಗಳನ್ನ ತಡೆದು ನಿಲ್ಲಿಸುವುದಕ್ಕೆ ಪೈಲ್ವಾನ್‍ರು ಕಸರತ್ತು ಮಾಡುತ್ತಾರೆ. ಕೆಲವೊಂದು ಬಾರಿ ಹೋರಿಗಳು ಪೈಲ್ವಾನ್‍ರ ಕೈಗೆ ಸಿಗದಂತೆ ಮಿಂಚಿನ ಓಟ ಕಿಳುತ್ತವೆ.

    ಕೊಬ್ಬರಿ ಹೋರಿ ಹಬ್ಬದ ದಿನ ರೈತರು ಸಾವಿರಾರು ರೂ. ಖರ್ಚು ಮಾಡಿ ಹೋರಿಗಳಿಗೆ ಕೊಬ್ಬರಿ ಹಾರ, ಕೋಡಿಗೆ ಬಲೂನ್‍ಗಳನ್ನ ಕಟ್ಟಿರುತ್ತಾರೆ. ಮೈಮೇಲೆ ಜೂಲಾ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನ ಹಾಕಿ ಹೋರಿಗಳನ್ನು ಅಲಂಕಾರ ಮಾಡಿ, ಓಡಿಸುತ್ತಾರೆ. ಯಾರ ಕೈಗೂ ಸಿಗದಂತೆ ಓಡಿದ ಹೋರಿ ವಿಜಯಿ ಹೋರಿ ಅನ್ನಿಸಿದರೆ, ಪೈಲ್ವಾನರ ಕೈಗೆ ಸಿಕ್ಕ ಹೋರಿಯನ್ನ ಸ್ಪರ್ಧೆಯಿಂದ ಔಟ್ ಮಾಡಲಾಗುತ್ತದೆ. ಹೀಗೆ ಹೋರಿ ಬೆದರಿಸುವ ಸ್ಪರ್ಧೆಯ ಅಖಾಡದಲ್ಲಿ ಭರ್ಜರಿಯಾಗಿ ಓಡುವ ಹೋರಿಗಳನ್ನು ನೋಡುವುದು ನೆರೆದಿದ್ದ ಜನರಿಗೆ ಸಖತ್ ಖುಷಿ ಕೊಡುತ್ತದೆ.

  • ಕೊಬ್ಬರಿ ಹೋರಿ ಹಿಡಿದಿದ್ದಕ್ಕೆ ಪೈಲ್ವಾನ್‍ನನ್ನು ಥಳಿಸಿದ ಮಾಲೀಕರು

    ಕೊಬ್ಬರಿ ಹೋರಿ ಹಿಡಿದಿದ್ದಕ್ಕೆ ಪೈಲ್ವಾನ್‍ನನ್ನು ಥಳಿಸಿದ ಮಾಲೀಕರು

    ಹಾವೇರಿ: ಜಾನಪದ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಯನ್ನು ಹಿಡಿದಿದ್ದಕ್ಕೆ ಪೈಲ್ವಾನ್ ಒಬ್ಬರನ್ನು ಥಳಿಸಿದ ಘಟನೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದಿದೆ.

    ಅಡಗಂಟಿ ಗ್ರಾಮದ ಶಶಿ (28) ಹಲ್ಲೆಗೆ ಒಳಗಾದ ಪೈಲ್ವಾನ್. ಚಿಕ್ಕಬಾಸೂರು ಗ್ರಾಮದಲ್ಲಿ ಸೋಮೇಶ್ವರ ದೇವರ ಕಾರ್ತಿಕೋತ್ಸವ ಅಂಗವಾಗಿ ಇಂದು ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಇತ್ತು. ಈ ಸ್ಪರ್ಧೆಗೆ ಅಡಗಂಟಿ ಗ್ರಾಮದ ಶಶಿ ಸೇರಿದಂತೆ ಹತ್ತಕ್ಕೂ ಹೆಚ್ಚು ಯುವಕರು ಬಂದಿದ್ದರು.

    ಚಿಕ್ಕಬಾಸೂರು ಗ್ರಾಮದ ಹೋರಿಯನ್ನು ಶಶಿ ಹಿಡಿದಿದ್ದರು. ಇದರಿಂದಾಗಿ ಹೋರಿ ಮಾಲೀಕರು ಶಶಿ ಮೇಲೆ ಹಲ್ಲೆ ಮಾಡಿದ್ದಾರೆ. ತಲೆಗೆ ಹೊಡೆತ ಬಿದ್ದಿದ್ದರಿಂದ ತಕ್ಷಣವೇ ಅವರನ್ನು ಚಿಕ್ಕಬಾಸೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾಗಿನೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.