Tag: ಕೊಬ್ಬರಿ

  • ಕೊಬ್ಬರಿ ಗೋಡಾನ್‍ಗೆ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿಗಳು ಭಸ್ಮ

    ಕೊಬ್ಬರಿ ಗೋಡಾನ್‍ಗೆ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿಗಳು ಭಸ್ಮ

    ಹಾಸನ: ಸಾವಿರಾರು ಕೊಬ್ಬರಿಗಳನ್ನು ತುಂಬಿದ್ದ ಗೋಡಾನ್‍ಗೆ ಆಕಸ್ಮಿಕವಾಗಿ ಬೆಂಕಿ (Fire) ತಗುಲಿ ಅಲ್ಲಿದ್ದ ಕೊಬ್ಬರಿಗಳು (Dry Coconut) ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಹಾಸನ (Hassan) ಜಿಲ್ಲೆಯಲ್ಲಿ ನಡೆದಿದೆ.

    ಹಾಸನದ ಚನ್ನರಾಯಪಟ್ಟಣ ತಾಲೂಕಿನ ಚೋಳನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸಿ.ಎನ್.ಪುಟ್ಟಸ್ವಾಮಿಗೌಡ ಎಂಬವರಿಗೆ ಸೇರಿದ್ದ ಗೋಡಾನ್ ಇದ್ದಾಗಿದ್ದು, ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡು ಇಡೀ ಗೋಡಾನ್ ಸಂಪೂರ್ಣ ಹೊತ್ತಿ ಉರಿದಿದೆ.

    ಚನ್ನರಾಯಪಟ್ಟಣ ಹಾಗೂ ಕೆ.ಆರ್.ಪೇಟೆಯಿಂದ 4 ಅಗ್ನಿಶಾಮಕ ವಾಹನಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಅಷ್ಟರಲ್ಲಾಗಲೇ ಲಕ್ಷಾಂತರ ಮೌಲ್ಯದ ಕೊಬ್ಬರಿಗಳು ಸಂಪೂರ್ಣ ಬೆಂಕಿಗಾಹುತಿ ಆಗಿದ್ದವು. ಇದನ್ನೂ ಓದಿ: ನವೆಂಬರ್ ಅಂತ್ಯಕ್ಕೆ ಮದ್ದೂರು ಬೈಪಾಸ್ ಸಂಚಾರಕ್ಕೆ ಮುಕ್ತ

    ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಶೀಘ್ರದಲ್ಲಿಯೇ ಹೈದರಾಬಾದ್‍ಗೆ ಲಗ್ಗೆ ಇಡಲಿದೆ ಎಲೆಕ್ಟ್ರಿಕಲ್ ಡಬಲ್ ಡೆಕ್ಕರ್ ಬಸ್

    Live Tv
    [brid partner=56869869 player=32851 video=960834 autoplay=true]

  • ಕೊಬ್ಬರಿ ಬೆಲೆಯಲ್ಲಿ ಕೊಂಚ ಏರಿಕೆ- ರೈತರು ಫುಲ್ ಖುಷ್

    ಕೊಬ್ಬರಿ ಬೆಲೆಯಲ್ಲಿ ಕೊಂಚ ಏರಿಕೆ- ರೈತರು ಫುಲ್ ಖುಷ್

    ತುಮಕೂರು: ಹಲವು ತಿಂಗಳಿನಿಂದ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಸ್ಥಿರವಾಗಿದ್ದ ಕೊಬ್ಬರಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕ್ವಿಂಟಲ್ ಕೊಬ್ಬರಿ ಬೆಲೆ 17 ಸಾವಿರ ರೂ. ಗಡಿ ದಾಟಿದೆ.

    ಕೆಲ ರವಾನೆದಾರರ ಪ್ರಕಾರ ಹೊರ ರಾಜ್ಯದಲ್ಲಿ ಕೊಬ್ಬರಿಗೆ ಬೇಡಿಕೆ ಬಂದಿರುವ ಕಾರಣ ಬೆಲೆಯಲ್ಲಿ ಕೊಂಚ ಬದಲಾವಣೆಯಾಗಿದೆ. ಅಗತ್ಯ ಪ್ರಮಾಣದಲ್ಲಿ ಪೂರೈಕೆ ಇಲ್ಲದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದಿದ್ದಾರೆ.

    ರೈತರು ಬಹು ದಿನಗಳಿಂದ ಬೆಲೆ ಏರಿಕೆಗೆ ಕಾಯುತ್ತಿದ್ದರು. ಆದರೆ ಕೆಲ ತಿಂಗಳಿಂದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಇದೀಗ 17 ಸಾವಿರ ರೂ.ಗೆ ತಲುಪಿರುವುದು ಕೋವಿಡ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಕೊಂಚ ನೆಮ್ಮದಿ ನೀಡಿದೆ.

    ಹೊರ ರಾಜ್ಯಗಳಲ್ಲಿ ಕೊಬ್ಬರಿಗೆ ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ. ಕೋವಿಡ್ ಲಾಕ್‍ಡೌನ್ ಘೊಷಣೆಯಾಗುವ ಆತಂಕದಿಂದ ಅಗತ್ಯಕ್ಕಿಂತ ಹೆಚ್ಚಿನ ಕೊಬ್ಬರಿ ಅಮದು ಮಾಡಿಕೊಳ್ಳಲಾಗುತ್ತಿದೆ. ಎಣ್ಣೆ ಕಾಳುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದರಿಂದ ಕೊಬ್ಬರಿ ಎಣ್ಣೆ ತಯಾರಿಕೆ, ಬಳಕೆ ಹೆಚ್ಚಿದೆ ಎನ್ನುತ್ತಾರೆ ರವಾನೆದಾರರು.

    ಕೆಲ ತಿಂಗಳಿನಿಂದ ಎಪಿಎಂಸಿಗೆ ಉಂಡೆ ಕೊಬ್ಬರಿ ಬರುತ್ತಿರುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಫಸಲು ಕಡಿಮೆ ಆಗಿರುವ ಬಗ್ಗೆ ರೈತರು ಮಾಹಿತಿ ನೀಡುತ್ತಿದ್ದು, ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕಾರಣವಾಗಿದೆ ಎಂದಿದ್ದಾರೆ.

  • ಕೊಬ್ಬರಿಗೆ ಸಹಾಯ ಧನ ನೀಡದಿದ್ದರೆ ಸಿಎಂ ಮನೆ ಮುಂದೆ ಪ್ರತಿಭಟನೆ: ಶಿವಲಿಂಗೇಗೌಡ ಎಚ್ಚರಿಕೆ

    ಕೊಬ್ಬರಿಗೆ ಸಹಾಯ ಧನ ನೀಡದಿದ್ದರೆ ಸಿಎಂ ಮನೆ ಮುಂದೆ ಪ್ರತಿಭಟನೆ: ಶಿವಲಿಂಗೇಗೌಡ ಎಚ್ಚರಿಕೆ

    – ಇದು ಅಂಬೇಡ್ಕರ್ ಬರೆದ ಪ್ರಜಾಪ್ರಭುತ್ವದ ರಾಜಕಾರಣ ಅಲ್ಲ

    ಹಾಸನ: ಕೊಬ್ಬರಿಗೆ ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ 1,200 ರೂಪಾಯಿ ಸಹಾಯ ಧನ ನೀಡದಿದ್ದರೆ ಸಿಎಂ ಯಡಿಯೂರಪ್ಪ ಮನೆಮುಂದೆ ಹೋಗಿ ಧಿಕ್ಕಾರ ಕೂಗುತ್ತೇನೆ. ಜೊತೆಗೆ ಅವರ ಮನೆ ಮುಂದೆ ಕುಳಿತು ಹೋರಾಟ ಮಾಡುವುದಾಗಿ ಶಾಸಕ ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.

    ಕೊಬ್ಬರಿಗೆ ರಾಜ್ಯ ಸರ್ಕಾರ ಸಹಾಯಧನ ನೀಡಬೇಕು ಮತ್ತು ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಕೊಳ್ಳುವ ಅವಧಿ ವಿಸ್ತರಣೆ ಮಾಡಬೇಕು ಎಂದು ಶಾಸಕ ಶಿವಲಿಂಗೇಗೌಡ ನೇತೃತ್ವದಲ್ಲಿ ಅರಸೀಕೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಮಾತನಾಡಿದ ಶಾಸಕರು ನಫೆಡ್‍ನಲ್ಲಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಕೊಳ್ಳಲು ಕೇವಲ 800 ಜನ ರೈತರ ಹೆಸರು ನೋಂದಣಿ ಮಾಡಿಕೊಂಡು ನೋಂದಣಿ ಸಮಯ ಮುಗಿದಿದೆ ಅಂತಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

    ಕೊರೊನಾ ಇಲ್ಲದಿದ್ದರೆ ಬಸ್ ನಿಲ್ಲಿಸಿ, ಬಂದ್ ಮಾಡಿ ರಾಜ್ಯ ಸರ್ಕಾರಕ್ಕೆ ಏನು ಎಚ್ಚರಿಕೆ ನೀಡಬೇಕೋ ನೀಡುತ್ತಿದ್ದೆವು. ಗೌರವದಿಂದ ಬೀದಿಯಲ್ಲಿ ನಡೆದು ಬಂದು ನಿಮ್ಮ ಮಾನ ಮರ್ಯಾದೆ ಉಳಿಸಿದ್ದೇವೆ. ಕೂಡಲೇ ಕೊಬ್ಬರಿಗೆ ರಾಜ್ಯ ಸರ್ಕಾರ 1,200 ಪ್ರೋತ್ಸಾಹ ಧನ ನೀಡಿ ರೈತರ ಹಿತ ಕಾಯಬೇಕು ಎಂದು ಶಾಸಕ ಶಿವಲಿಂಗೇಗೌಡ ಆಗ್ರಹಿಸಿದ್ದಾರೆ. ಇದೇ ವೇಳೆ ಬಿಜೆಪಿ ಸರ್ಕಾರದ ರಾಜಕೀಯದ ಬಗ್ಗೆ ಆಕ್ರೋಶ ಹೊರಹಾಕಿದ ಶಾಸಕರು, ಈ ರಾಜಕೀಯದ ಬಗ್ಗೆ ಮಾತನಾಡಿ ಬಾಯಿ ಹೊಲಸು ಮಾಡಿಕೊಳ್ಳಲ್ಲ. ಇದು ಕೆಟ್ಟ ರಾಜಕಾರಣ. ಇದು ಅಂಬೇಡ್ಕರ್ ಬರೆದ ಪ್ರಜಾಪ್ರಭುತ್ವದ ರಾಜಕಾರಣ ಅಲ್ಲ ಎಂದರು.

    ಇಂದಿರಾಗಾಂಧಿ ಎಮರ್ಜೆನ್ಸಿ ಡಿಕ್ಲೇರ್ ಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಪ್ರತಿಫಲ ಅನುಭವಿಸಿದ್ದಾರೆ. ಇವರು ಅನುಭವಿಸುವುದಾದರೆ ಅನುಭವಿಸಲಿ. ಇಂದಿನ ರಾಜಕೀಯ ಪರಿಸ್ಥಿತಿ ನೋಡಿದರೆ ಇವರ್ಯಾರಿಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎನಿಸುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಆ ಬಗ್ಗೆ ಮಾತನಾಡಲು ಮನಸ್ಸಿಗೆ ಬೇಸರ ಮತ್ತು ಸಂಕಟ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

  • ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುವಂತೆ ಹಾಸನ ಡಿಸಿ ಸೂಚನೆ

    ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುವಂತೆ ಹಾಸನ ಡಿಸಿ ಸೂಚನೆ

    ಹಾಸನ: ಪ್ರತಿ ಕ್ವಿಂಟಾಲ್‍ಗೆ 10,300 ರೂ. ನಂತೆ ಬೆಂಬಲ ಬೆಲೆಯೊಂದಿಗೆ ಕೊಬ್ಬರಿ ಖರೀದಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜೂ.11ರ ಸರ್ಕಾರಿ ಆದೇಶದಂತೆ ಕೊಬ್ಬರಿಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ಖರೀದಿ ಕೇಂದ್ರಗಳನ್ನು ತರಬೇಕಿದೆ. ಕೇಂದ್ರ ಸರ್ಕಾರ ಬೆಂಬಲಬೆಲೆಯೊಂದಿಗೆ ಕೊಬ್ಬರಿ ಖರೀದಿಸಲು ನೆಫೆಡ್ ಸಂಸ್ಥೆಯನ್ನು ಗುರುತಿಸಿದ್ದು, ರಾಜ್ಯ ಸರ್ಕಾರ ಸಹಕಾರ ಮಾರಾಟ ಮಂಡಳಿ ಮೂಲಕ ಖರೀದಿಸಲು ಸೂಚನೆ ನೀಡಿದೆ. ಅದರಂತೆ ನಾಳೆಯಿಂದ ಮುಂದಿನ 15 ದಿನಗಳ ಕಾಲ ರೈತರ ನೋಂದಣಿ ಕಾರ್ಯ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

    ಅರಸೀಕೆರೆ ಹಾಗೂ ಚನ್ನರಾಯಪಟ್ಟಣಗಳಲ್ಲಿ ಎರಡು ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಎಕರೆಗೆ 6 ಕ್ವಿಂಟಾಲ್‍ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಕೊಬ್ಬರಿ ಖರೀದಿಸಲು ಅವಕಾಶವಿದೆ. ಒಂದು ವೇಳೆ ಫ್ರೂಟ್ಸ್(ರೈತರ ನೊಂದಣಿ ಹಾಗೂ ಫಲಾನುಭವಿಗಳ ಕೇಂದ್ರಿಕೃತ ಮಾಹಿತಿ ವ್ಯವಸ್ಥೆ) ಐ.ಡಿ. ಇಲ್ಲದವರು ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾಡಿ ಪಡೆಯಬಹುದಾಗಿದೆ. ಇದರಲ್ಲಿ ಆಧಾರ್ ಸಂಖ್ಯೆಯೊಂದಿಗೆ ಜೋಡಿಸಿರುವ ರಾಷ್ಟ್ರೀಕೃತ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಶ್ರೀಹರಿ ಅರಸೀಕೆರೆ, ಬೇಲೂರು ಹಾಗೂ ಹಾಸನ ತಾಲ್ಲೂಕುಗಳ ರೈತರು ಅರಸೀಕೆರೆ ಎಪಿಎಂಸಿಯ ಖರೀದಿ ಕೇಂದ್ರದಲ್ಲಿ ಮತ್ತು ಚನ್ನರಾಯಪಟ್ಟಣದಲ್ಲಿ ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ, ಆಲೂರು ತಾಲೂಕುಗಳ ರೈತರು ಚನ್ನರಾಯಪಟ್ಟಣ ಎಪಿಎಂಸಿಯ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

    ಜಂಟಿ ಕೃಷಿ ನಿರ್ದೇಶಕ ಡಾ.ಮಧುಸೂದನ್, ತೋಟಗಾರಿಕಾ ಉಪನಿರ್ದೇಶಕ ಮಂಜುನಾಥ್ ಕೊಬ್ಬರಿ ಖರೀದಿ ವ್ಯವಸ್ಥೆ ನೋಂದಣಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿ, ಗುರುತಿನ ಚೀಟಿ ಹಾಗೂ ಹೊಸ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಕುರಿತು ವಿವರಿಸಿದರು.

  • ಸಿಲಿಂಡರ್ ಸ್ಫೋಟ – ರೈತನ ಮನೆ, 21 ಸಾವಿರ ಕೊಬ್ಬರಿ ಬೆಂಕಿಗಾಹುತಿ

    ಸಿಲಿಂಡರ್ ಸ್ಫೋಟ – ರೈತನ ಮನೆ, 21 ಸಾವಿರ ಕೊಬ್ಬರಿ ಬೆಂಕಿಗಾಹುತಿ

    ಹಾಸನ: ಮೊದಲೇ ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದ ರೈತರೊಬ್ಬರ ಮನೆಯಲ್ಲಿ ಸಿಲಿಂಡರ್ ಸ್ಫೋಟವಾಗಿದ್ದು, ಮನೆ ಮತ್ತು ಸುಮಾರು 3.5 ಲಕ್ಷ ರೂ. ಬೆಲೆ ಬಾಳುವ 21 ಸಾವಿರ ಕೊಬ್ಬರಿ ಬೆಂಕಿ ಕೆನ್ನಾಲಿಗೆಯಲ್ಲಿ ಸುಟ್ಟು ಭಸ್ಮವಾಗಿದೆ.

    ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ರೈತ ರಮೇಶ್ ಅವರ ಮನೆಯಲ್ಲಿ ಇಂದು ಸಿಲಿಂಡರ್ ಸ್ಫೋಟವಾಗಿದೆ. ಪರಿಣಾಮ ಮನೆ ಹೊತ್ತಿ ಉರಿದಿದ್ದು, ಮನೆಯಲ್ಲಿದ್ದ ಸುಮಾರು 3.5 ಲಕ್ಷ ರೂ. ಮೌಲ್ಯದ 21 ಸಾವಿರ ಕೊಬ್ಬರಿ ಬೆಂಕಿಗಾಹುತಿಯಾಗಿದೆ. ಸಿಲಿಂಡರ್ ಸ್ಫೋಟದ ಬಗ್ಗೆ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಮೊದಲೇ ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತ ಇದೀಗ ಮನೆ ಮತ್ತು ದುಡಿಮೆಗೆ ಆಧಾರವಾಗಿದ್ದ ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಸರ್ಕಾರ ಆದಷ್ಟು ಬೇಗ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ.