Tag: ಕೊನೆ ವಿಡಿಯೋ

  • ಅನಿಲ್ ಕಪೂರ್ ಕೈ ಹಿಡಿದು ಹೆಜ್ಜೆ ಹಾಕಿದ್ದ ಶ್ರೀದೇವಿ- ಕೊನೆಯ ಡ್ಯಾನ್ಸ್ ನೋಡಿ

    ಅನಿಲ್ ಕಪೂರ್ ಕೈ ಹಿಡಿದು ಹೆಜ್ಜೆ ಹಾಕಿದ್ದ ಶ್ರೀದೇವಿ- ಕೊನೆಯ ಡ್ಯಾನ್ಸ್ ನೋಡಿ

    ನವದೆಹಲಿ: ದುಬೈನ ಸಂಬಂಧಿಕರ ಮದುವೆಯಲ್ಲಿ ನಟಿ ಶ್ರೀದೇವಿ ಮತ್ತು ಮೈದುನ ಅನಿಲ್ ಕಪೂರ್ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ಬಾಲಿವುಡ್‍ನ ಸಾಂಗ್‍ಗೆ ನೃತ್ಯ ಮಾಡಿರುವ ಶ್ರೀದೇವಿ ಮತ್ತು ಅನಿಲ್ ಕಪೂರ್ ಇಬ್ಬರು ಕೈ ಹಿಡಿದು ಸಂಭ್ರಮಿಸಿದ್ದಾರೆ. ಶ್ರೀದೇವಿ ಮತ್ತು ಅನಿಲ್ ಕಪೂರ್ ಬಾಲಿವುಡ್‍ನ ಸೂಪರ್ ಹಿಟ್ ಸಿನಿಮಾ ‘ಮಿಸ್ಟರ್ ಇಂಡಿಯಾ’ದಲ್ಲಿ ನಟಿಸಿದ್ದರು. ಜೀವನದ ತಮ್ಮ ಕೊನೆ ಘಳಿಗೆಯನ್ನ ಬಹಳ ಖುಷಿ ಖುಷಿಯಾಗಿ ಕಳೆದಿರುವುದು ಈ ವಿಡಿಯೋ ನೋಡಿದಾಗ ತಿಳಿಯುತ್ತದೆ.

    ಶನಿವಾರ ರಾತ್ರಿ ಶ್ರೀದೇವಿಯವರು ದುಬೈ ಹೊಟೇಲ್ ನಲ್ಲಿ ಮೃತಪಟ್ಟಿದ್ದರು. ಈ ಮರಣೋತ್ತರ ಪರೀಕ್ಷೆ ನಡೆಸಿದ ವಿಧಿ ವಿಜ್ಞಾನ ಪ್ರಯೋಗಾಲಯ ಆಕಸ್ಮಿಕವಾಗಿ ಬಾತ್ ಟಬ್ ಗೆ  ಬಿದ್ದು ಮುಳುಗಿ ಶ್ರೀದೇವಿ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿತ್ತು.

    https://www.instagram.com/p/Bfri258nMgR/