Tag: ಕೊತ್ತಂಬರಿ ಸೊಪ್ಪು

  • ಉಚಿತವಾಗಿ ಕೊತ್ತಂಬರಿ ಸೊಪ್ಪು ವಿತರಿಸಿದ ಸಿದ್ದರಾಮಯ್ಯ ಅಭಿಮಾನಿ

    ಉಚಿತವಾಗಿ ಕೊತ್ತಂಬರಿ ಸೊಪ್ಪು ವಿತರಿಸಿದ ಸಿದ್ದರಾಮಯ್ಯ ಅಭಿಮಾನಿ

    ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಯೊಬ್ಬರು ಉಚಿತವಾಗಿ ಕೊತ್ತಂಬರಿ (Coriander Leaves) ಸೊಪ್ಪು ವಿತರಣೆ ಮಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಸರ್ಕಾರದ ಮುಖ್ಯಸಚೇತಕ ಅಶೋಕ್ ಪಟ್ಟಣ ಅಭಿಮಾನಿ ಆಗಿರೋ ಅಪ್ಪಣ್ಣ ಬಾಡಗಾರ್ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಉಚಿತವಾಗಿ ಕೊತ್ತಂಬರಿ ಸೊಪ್ಪು ವಿತರಿಸಿದರು.

    ಅಪ್ಪಣ್ಣ ಬಾಡಗಾರ್ ಅವರು ಕೊತ್ತಂಬರಿ ಕೊತಂಬರಿ ಅಪ್ಪಣ್ಣ ಎಂಬ ಹೆಸರಿನಿಂದಲೇ ಪ್ರಸಿದ್ಧಿ ಪಡೆದಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರಕ್ಕೆ ಬಂದಿದೆ. ನುಡಿದಂತೆ ಸರ್ಕಾರ ನಡೆಯುತ್ತಿದೆ. ಹಾಗಾಗಿ ಉಚಿತವಾಗಿ ವಿತರಣೆ ಮಾಡುತ್ತಿರುವುದಾಗಿ ಅಪ್ಪಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಜುಲೈ 27ರಂದು ಬಂದ್ ಆಗುತ್ತಾ ಬೆಂಗಳೂರು?

    ಸದ್ಯ ಅಪ್ಪಣ್ಣ ಉಚಿತವಾಗಿ ಕೊತ್ತಂಬರಿ ಸೊಪ್ಪು ವಿತರಣೆ ಮಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊತ್ತಂಬರಿ ಸೊಪ್ಪಿನೊಳಗೆ ಗಾಂಜಾ ಬೆಳೆದು ಸಿಕ್ಕಿಬಿದ್ದ ಭೂಪ

    ಕೊತ್ತಂಬರಿ ಸೊಪ್ಪಿನೊಳಗೆ ಗಾಂಜಾ ಬೆಳೆದು ಸಿಕ್ಕಿಬಿದ್ದ ಭೂಪ

    ಚಾಮರಾಜನಗರ: ಗಾಂಜಾ ಗಿಡಗಳನ್ನು (Cannabis Plant) ಬೆಳೆಯುವಂತಿಲ್ಲ, ಗಾಂಜಾ ಸೊಪ್ಪು ಮಾರಾಟ ಮಾಡುವಂತಿಲ್ಲ ಎಂಬ ಕಾನೂನು ನಮ್ಮ ದೇಶದಲ್ಲಿದೆ. ಆದರೂ ಹಲವೆಡೆ ಅಕ್ರಮ ದಾರಿಯಲ್ಲಿ ಗಾಂಜಾ ಬೆಳೆಯಲಾಗುತ್ತಿದೆ.

    ಇಲ್ಲೊಬ್ಬ ಖತರ್ನಾಕ್ ವಂಚಕ, ತರಕಾರಿ ಬೆಳೆಯುವುದಾಗಿ ಮಹಿಳೆಯೊಬ್ಬರ ಜಮೀನನ್ನು ಗುತ್ತಿಗೆ ಪಡೆದು ಯಾರಿಗೂ ಅನುಮಾನ ಬಾರದಿರಲೆಂದು ಕೊತ್ತಂಬರಿ ಸೊಪ್ಪಿನ (Coriander) ಜೊತೆ ಗಾಂಜಾ ಬೆಳೆದು ಸಿಕ್ಕಿಬಿದ್ದಿದ್ದಾನೆ.

    ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಕಂಡಯ್ಯನಪಾಳ್ಯ ಗ್ರಾಮದ ಹನುಮಗೌಡ(40) ಬಂಧಿತ ಆರೋಪಿಯಾಗಿದ್ದಾನೆ. ಇವನು ಸರೋಜಮ್ಮ ಅವರ ಜಮೀನನ್ನು ಗುತ್ತಿಗೆ ಪಡೆದು ಕೊತ್ತಂಬರಿ ಸೊಪ್ಪು ಬೆಳೆದಿದ್ದ. ಜಮೀನಿನ ಮಧ್ಯ ಭಾಗದಲ್ಲಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ವಲಯದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ ಗಿಡಗಳು ಪತ್ತೆಯಾಗಿವೆ. ಇದನ್ನೂ ಓದಿ: ಝಿಕಾ ಆತಂಕ – ಕಾಂಡೋಮ್ ಜಾಗೃತಿ ಬಳಿಕ ಗರ್ಭಿಣಿಯರ ಮೇಲೆ ತೀವ್ರ ನಿಗಾ

    ಪೊಲೀಸರು ಜಮೀನಿನಲ್ಲಿ ಬೆಳೆದಿದ್ದ 348 ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]

  • ಚರಂಡಿ ನೀರಲ್ಲಿ ಕೊತ್ತಂಬರಿ ಸೊಪ್ಪು ತೊಳೆದು ಮಾರಾಟ- ವೀಡಿಯೋ ನೋಡಿ

    ಚರಂಡಿ ನೀರಲ್ಲಿ ಕೊತ್ತಂಬರಿ ಸೊಪ್ಪು ತೊಳೆದು ಮಾರಾಟ- ವೀಡಿಯೋ ನೋಡಿ

    ಭೋಪಾಲ್: ತರಕಾರಿ ಮಾರಾಟಗಾರನೊಬ್ಬನು ಭೋಪಾಲ್‍ನ ಸಿಂಧಿ ಮಾರ್ಕೆಟ್‍ನ ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ವೀಡಿಯೋದಲ್ಲಿ ಏನಿದೆ?
    ತರಕಾರಿ ಮಾರಾಟಗಾರನೊಬ್ಬ ಚರಂಡಿ ನೀರಿನಲ್ಲಿ ತರಕಾರಿ ತೊಳೆಯುತ್ತಿದ್ದಾನೆ. ಇದನ್ನು ಗಮನಿಸಿದ ವ್ಯಕ್ತಿ ಕೊಳಕು ನೀರಿನಲ್ಲಿ ತಿನ್ನುವ ತರಕಾರಿಗಳನ್ನು ತೊಳೆಯಬೇಡಿ ಎಂದು ವ್ಯಕ್ತಿ ಪದೇ ಪದೇ ಹೇಳುತ್ತಿದ್ದರೂ, ಮಾರಟಗಾರನು ಗಮನ ಕೊಡಲಿಲ್ಲ. ಈ ದೃಶ್ಯ ನೋಡಿದರೆ ನಿನ್ನ ಬಳಿ ಯಾರೂ ತರಕಾರಿ ಖರೀದಿಸುವುದಿಲ್ಲ ಎಂದು ವ್ಯಕ್ತಿ ಹೇಳುತ್ತಿದ್ದರೂ, ಸಹ ಮಾರಾಟಗಾರ ನಿರ್ಲಕ್ಷ್ಯ ಮಾಡುತ್ತಾ ಚರಂಡಿ ನೀರಿನಲ್ಲೇ ಸೊಪ್ಪನ್ನು ತೊಳೆದು ಮಾರಾಟ ಮಾಡಲು ಸಿದ್ಧವಾಗಿಟ್ಟಿರುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ:  ಕಡಿಮೆ ಆಹಾರ ತಿನ್ನಿ: ಕಿಮ್ ಜಾಂಗ್ ಉನ್ ಮನವಿ

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಮಾರಾಟಗಾರನ ವಿರುದ್ಧವಾಗಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೋಪಾಲ್‍ನ ಆಹಾರ ಮತ್ತು ನಾಗರಿಕ ಸರಬರಾಜು, ಸ್ಥಳೀಯ ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಮಾರಾಟಗಾರನ ಬಗ್ಗೆ ತಿಳಿದು ಕಠಿಣ ಕ್ರಮ ಕೈಗೊಳ್ಳಬೇಕು, ನಾಗರಿಕರ ಆರೋಗ್ಯದೊಂದಿಗೆ ಯಾರೂ ಆಟವಾಡುವಂತಿಲ್ಲ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

  • ಕೊತ್ತಂಬರಿ ಸೊಪ್ಪು ಬೆಳೆದು 32 ದಿನದಲ್ಲಿ 13 ಸಾವಿರ ಲಾಭ ಗಳಿಸಿದ ರೈತ

    ಕೊತ್ತಂಬರಿ ಸೊಪ್ಪು ಬೆಳೆದು 32 ದಿನದಲ್ಲಿ 13 ಸಾವಿರ ಲಾಭ ಗಳಿಸಿದ ರೈತ

    ನೆಲಮಂಗಲ: ಅಲ್ಪಾವಧಿಯ ಕೃಷಿಯಲ್ಲಿ ಲಾಭ ಬರುವುದಿಲ್ಲ ಎನ್ನುವವರ ಸಂಖ್ಯೆ ಹೆಚ್ಚು. ಆದರೆ ಇಲ್ಲಿನ ಕೃಷಿಕರೊಬ್ಬರು 32 ದಿನದಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು 13 ಸಾವಿರ ಲಾಭಗಳಿಸಿ ಯಶೋಗಾಥೆ ಮೆರೆದಿದ್ದಾರೆ.

    ಹೌದು. ನೆಲಮಂಗಲ ಗ್ರಾಮಾಂತರ ಭಾಗದ ಕುಲುವನಹಳ್ಳಿ ಗ್ರಾಮ ಪಂಚಾಯ್ತಿಯ ಬಿಲ್ಲಿನಕೋಟೆ ಗ್ರಾಮದ ರೈತ ರಂಗಸ್ವಾಮಿ, ತನ್ನ 2 ಗುಂಟೆ ಜಮೀನಿನಲ್ಲಿ ಕಳೆದ ಇಪ್ಪತ್ತು ದಿನಗಳ ಹಿಂದೆ ಎರಡು ಸಾವಿರ ಕೊತ್ತಂಬರಿ ಬೀಜ ಚೆಲ್ಲಿ ಲಾಭಗಳಿಸಿದ್ದಾರೆ.

    ಕೃಷಿಯಲ್ಲಿ ಸದಾ ಆಸಕ್ತಿ ಹೊಂದಿರುವ ರಂಗಸ್ವಾಮಿ, ತಮ್ಮ ಕುಟುಂಬದ ಸಹಕಾರದಿಂದ 2 ಎಕರೆ 30 ಗುಂಟೆ ಜಾಗದ ಅಂಚಿನಲ್ಲಿ ಮೂರು ಸಾವಿರ ಬಂಡವಾಳ ಹೂಡಿ 16 ಸಾವಿರ ಕೊತ್ತಂಬರಿ ಬೆಳೆ ಮಾರಾಟವಾಗಿದೆ, 13 ಸಾವಿರ ಲಾಭ ಬಂದಿದೆ, ಕುಟುಂಬದ ಸದಸ್ಯರಾದ ಅಣ್ಣ ಗೋವಿಂದರಾಜು, ಅತ್ತಿಗೆ ತಾಯಮ್ಮ ಹೆಂಡತಿ ಶಾರಾದಮ್ಮರ ಸಹಕಾರ ಪಡೆದು ಸಮಗ್ರ ಕೃಷಿ ಮಾಡಿದ್ದಾರೆ, ಉಳಿದ ಜಮೀನಿನಲ್ಲಿ ಕೋಸು, ಮೆಣಸಿನಕಾಯಿ, ಜೋಳ ಬೆಳೆದಿದ್ದೇವೆ, ಕುಟುಂಬದ ಸಹಕಾರ ಕೃಷಿ ಸಾಧನೆಗೆ ಅನುಕೂಲವಾಗಿದೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ: ಸುಮಲತಾ

    ಕೊತ್ತಂಬರಿಯ ಹೊಸ ತಳಿಯ ಬೀಜವನ್ನು ತಂದು ಉಳುಮೆಯನ್ನು ಮಾಡಿ, ಬಿತ್ತನೆ ಮಾಡಿದ್ದೇವೆ, ಕಡಿಮೆ ಬೇಸಾಯ ಕ್ರಮಗಳಿಂದ ಅಧಿಕ ಇಳುವರಿ ಮಾಡಿದ್ದೇವೆ, ಜೊತೆಗೆ ರಾಸಾಯನಿಕ ಗೊಬ್ಬರ ಹಾಕದೆ ದನದ ಕೊಟ್ಟಿಗೆ ಗೊಬ್ಬರ ಹಾಕಿ ಸಂಪೂರ್ಣ ಸಾವಯವ ಮಾಡಿದ್ದೇವೆ ಎಂದು ರಂಗಸ್ವಾಮಿ ತಿಳಿಸಿದರು.

  • ರಸ್ತೆಬದಿ ಲೋಡ್​ಗಟ್ಟಲೇ ಕೊತ್ತಂಬರಿ ಸೊಪ್ಪು – ಮುಗಿಬಿದ್ದ ಜನ

    ರಸ್ತೆಬದಿ ಲೋಡ್​ಗಟ್ಟಲೇ ಕೊತ್ತಂಬರಿ ಸೊಪ್ಪು – ಮುಗಿಬಿದ್ದ ಜನ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ರಸ್ತೆ ಬದಿ ಸುರಿಯಲಾಗಿದ್ದ ಲೋಡ್​ಗಟ್ಟಲೇ ಕೊತ್ತಂಬರಿ ಸೊಪ್ಪಿಗಾಗಿ ಜನ ಮುಗಿಬಿದಿದ್ದರು.

    ಬೆಳ್ಳಂ ಬೆಳಗ್ಗೆ ದೊಡ್ಡಬಳ್ಳಾಪುರ ನೆಲಮಂಗಲ ಮಾರ್ಗದ ಕೋಡಿ ಪಾಳ್ಯ ಬಳಿ ರಸ್ತೆ ಬದಿ ಸರಿಸುಮಾರು 2-3 ಲೋಡ್ ನಷ್ಟು ಕೊತ್ತಂಬರಿ ಸೊಪ್ಪನ್ನು ಸುರಿದು ಹೋಗಿದ್ದಾರೆ. ಇದನ್ನು ಕಂಡ ದಾರಿ ಹೋಕರು ನನಗೆ ಒಂದು, ನನಗೆ ಒಂದು ಅಂತ ಕೊತ್ತಂಬರಿ ಸೊಪ್ಪಿನ ಕಟ್ಟುಗಳನ್ನು ಹೊತ್ತೊಯ್ದಿದ್ದಾರೆ. ಆದರೆ ಇಲ್ಲಿ ಕೊತ್ತಂಬರಿ ಸೊಪ್ಪು ಸುರಿದು ಹೋದವರು ಯಾರು ಎಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ:ಧರ್ಮಸ್ಥಳಕ್ಕೆ ಭೇಟಿಕೊಟ್ಟ BB ವಿನ್ನರ್ ಮಂಜು

    ರೈತರು ಮಾರುಕಟ್ಟೆಗೆ ತಂದು ರೇಟ್ ಇಲ್ಲ ಅಂತ ಸುರಿದು ಹೋಗಿರಬಹುದು ಎನ್ನಲಾಗಿದೆ. ಆದರೆ ರಸ್ತೆ ಬದಿ ಸುರಿದು ಹೋಗುವುದಕ್ಕಿಂತ ಕಡಿಮೆ ರೇಟ್‍ಗಾದರೂ ಜನರಿಗೆ ಮಾರಾಟ ಮಾಡಿ 4 ಕಾಸು ಸಂಪಾದಿಬಹುದಾಗಿತ್ತಲ್ವಾ ಎನ್ನುವುದು ಕೆಲವರ ಪ್ರಶ್ನೆಯಾಗಿದೆ. ಬೆಳ್ಳಂಬೆಳಗ್ಗೆ ಕೊತ್ತಂಬರಿ ಸೊಪ್ಪು ಸಿಕ್ಕಿದ್ದೇ ಜನ ಹೊತ್ತೊಯ್ದಿದ್ದಾರೆ. ಇನ್ನೂ ಕೊತ್ತಂಬರಿ ಸಹ ಉತ್ತಮ ಗುಣಮಟ್ಟದಿಂದಲೇ ಕೂಡಿದೆ. ಇದನ್ನೂ ಓದಿ:ಕೊತ್ತಂಬರಿ ಸೊಪ್ಪು ಖರೀದಿಸದ್ದಕ್ಕೆ ಚಾಕು ಇರಿದ ವ್ಯಾಪಾರಿ

  • ಕೊತ್ತಂಬರಿ ಸೊಪ್ಪು ಖರೀದಿಸದ್ದಕ್ಕೆ ಚಾಕು ಇರಿದ ವ್ಯಾಪಾರಿ

    ಕೊತ್ತಂಬರಿ ಸೊಪ್ಪು ಖರೀದಿಸದ್ದಕ್ಕೆ ಚಾಕು ಇರಿದ ವ್ಯಾಪಾರಿ

    ಹುಬ್ಬಳ್ಳಿ: ಮಾರಾಟಕ್ಕಿಟ್ಟ ಕೊತ್ತಂಬರಿ ಸರಿಯಿಲ್ಲವೆಂದು ಕೊತ್ತಂಬರಿ ಖರೀದಿಸದ ಗ್ರಾಹಕನಿಗೆ ವ್ಯಾಪಾರಸ್ಥ ಹಾಗೂ ಆತನ ಸಹಚರರು ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಗೌಳಿಗಲ್ಲಿಯಲ್ಲಿ ಹಳೇ ಹುಬ್ಬಳ್ಳಿಯ ನಿವಾಸಿ ಮಹಮ್ಮದಗೌಸ್ ಬಿಜಾಪುರ ಮೇಲೆ ಕೊತ್ತಂಬರಿ ವ್ಯಾಪಾರ ಮಾಡುತ್ತಿದ್ದ ಖಾದರ್ ಹಾಗೂ ಸಹಚರರು ಚಾಕು ಇರಿದು ಕೊಲೆಗೆ ಯತ್ನಿಸಿದ್ದಾರೆ.

    ಮಹಮ್ಮದಗೌಸ್ ಪ್ರತಿನಿತ್ಯ ಖಾದರ್ ಬಳಿಯೇ ಕೊತ್ತಂಬರಿ ಖರೀದಿ ಮಾಡುತ್ತಿದ್ದರು. ಆದರೆ ನಿನ್ನೆ ಕೊತ್ತಂಬರಿ ಸರಿಯಿಲ್ಲವೆಂದು ಕೊತ್ತಂಬರಿ ಸೊಪ್ಪು ಖರೀದಿ ಮಾಡಲು ನಿರಾಕರಿಸಿದ್ದಕ್ಕೆ ಕೋಪಿತಗೊಂಡ ಖಾದರ್ ಚಾಕು ಇರಿದಿದ್ದಾನೆ. ಸದ್ಯ ಗಾಯಾಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಬೆಂಗಳೂರಿನ ಹಂಪಿನಗರ ಮನೆಯಲ್ಲಿ ನಿಗೂಢ ಸ್ಫೋಟ

  • ಪುಕ್ಕಟೆ ಕೊತ್ತಂಬರಿ ಸೊಪ್ಪಿಗಾಗಿ ಮುಗಿ ಬಿದ್ದ ಜನ

    ಪುಕ್ಕಟೆ ಕೊತ್ತಂಬರಿ ಸೊಪ್ಪಿಗಾಗಿ ಮುಗಿ ಬಿದ್ದ ಜನ

    ತುಮಕೂರು: ಉಚಿತವಾಗಿ ನೀಡುತಿದ್ದ ಕೊತ್ತಂಬರಿ ಸೊಪ್ಪಿಗಾಗಿ ಜನರು ಮುಗಿ ಬಿದ್ದಿರುವ ಘಟನೆ ತುಮಕೂರಿನ ಎನ್.ಆರ್ ಕಾಲೋನಿಯಲ್ಲಿ ನಡೆದಿದೆ.

    ಪಾಲಿಕೆ ಸದಸ್ಯ ಶ್ರೀನಿವಾಸ್ ಉಚಿತವಾಗಿ ಕೊತ್ತಂಬರಿ ಸೊಪ್ಪು ಹಂಚುತ್ತಿದ್ದರು. ಈ ವೇಳೆ ಜನರು ನಾಮುಂದು ತಾಮುಂದು ಎಂಬಂತೆ ಮುಗಿ ಬಿದ್ದು ಕೊತ್ತಂಬರಿ ಸೊಪ್ಪು ಪಡೆದಿದ್ದಾರೆ.

    ಜನರು ಮುಗಿ ಬಿದ್ದ ಹಿನ್ನೆಲೆಯಲ್ಲಿ ಸೊಪ್ಪು ಹಂಚುತ್ತಿದ್ದ ಯುವಕ ಆಟೋದಿಂದ ಜನರತ್ತ ಸೊಪ್ಪನ್ನು ಎಸೆದು ಹೋಗಿದ್ದಾನೆ. ಉಚಿವಾಗಿ ಸಿಗುವ ಕೊತ್ತಂಬಿಗಾಗಿ ಜನರು ಮುಗಿಬಿದ್ದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

  • ಕೊರೊನಾ ಎಫೆಕ್ಟ್ – ಬೆಳೆದ ಕೊತ್ತಂಬರಿ ಸೊಪ್ಪನ್ನು ದನಗಳಿಗೆ ನೀಡಿದ ರೈತ

    ಕೊರೊನಾ ಎಫೆಕ್ಟ್ – ಬೆಳೆದ ಕೊತ್ತಂಬರಿ ಸೊಪ್ಪನ್ನು ದನಗಳಿಗೆ ನೀಡಿದ ರೈತ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಈಗಾಗಲೇ ಮೊದಲ ಹೊಡೆತದಿಂದ ಚೇತರಿಸಿಕೊಂಡು ಬೆಳೆ ಬೆಳೆಯುತ್ತಿದ್ದ ರೈತರಿಗೆ ಇದೀಗ ಮತ್ತೆ ಎರಡನೇ ಅಲೆಯ ಬರೆ ಬೀಳತೊಡಗಿದೆ.

    ಕಷ್ಟಪಟ್ಟು ಬೆಳೆದಿದ್ದ ಕೊತ್ತಂಬರಿ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಈ ಮೂಲಮ ಕೇಳೋರೇ ಇಲ್ಲ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಹನುಮಂತಪುರ ಗ್ರಾಮದ ರೈತ ನಾರಾಯಣಸ್ವಾಮಿ ಎಂವರು ತಾವು ಬೆಳೆದಿದ್ದ ಕೊತ್ತಂಬರಿ ಸೊಪ್ಪನ್ನು ದನಗಳಿಗೆ ನೀಡಿದ್ದಾರೆ.

    ತಲಾ 200-300 ರೂ. ಕೂಲಿ ಕೊಟ್ಟು ಕೊತ್ತಂಬರಿ ಸೊಪ್ಪು ಕಟಾವು ಮಾಡಿಕೊಂಡು ಮಾರುಕಟ್ಟೆಗೆ ತೆಗೆದುಕೊಂಡು ಹೋದ್ರೆ 1 ರೂ.ಗೂ ಒಂದು ಕಟ್ಟು ಕೊತ್ತಂಬರಿ ಸೊಪ್ಪು ಬಿಕರಿಯಾಗ್ತಿಲ್ಲವಂತೆ. ಇದರಿಂದ ನೊಂದ ರೈತ, ಇಡೀ ಕೊತ್ತಂಬರಿ ಸೊಪ್ಪನ್ನ ದನಗಳಿಗೆ ನೀಡಿದ್ದಾರೆ. ಅದೇ ರೀತಿ ಇದೀಗ ಗ್ರಾಮಸ್ಥರು ಕೂಡ ಕೊತ್ತಂಬರಿ ಸೊಪ್ಪನ್ನ ಕಟಾವು ಮಾಡಿಕೊಂಡು ದನಗಳಿಗೆ ಹಾಕ್ತಿದ್ದಾರೆ.

    1 ಎಕರೆಯಲ್ಲಿ 50000 ಖರ್ಚು ಮಾಡಿ ಕೊತ್ತಂಬರಿ ಸೊಪ್ಪು ಬೆಳೆಯಲಾಗಿತ್ತು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ಕಟ್ಟು ಕೊತ್ತಂಬರಿ ಸೊಪ್ಪು 30 ರಿಂದ 40, 50 ರೂಪಾಯಿ ಬಿಕರಿಯಾಗ್ತಿತ್ತು. ಆದರೆ ಈಗ ಒಂದು ಕಟ್ಟು 1 ರೂಪಾಯಿಗೂ ಕೇಳೋರಿಲ್ಲ. 20 ಕೆಜಿ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಟ್ಯಾಂಕರ್ ನೀರು ಹರಿಸಿ ಎರಡು ತಿಂಗಳು ಶ್ರಮ ಹಾಕಿ ಬೆಳೆದಿದ್ದ ಕೊತ್ತಂಬರಿ ಸೊಪ್ಪಿನಿಂದ ಈಗ ನಯಾ ಪಯಸೆ ಆದಾಯವೂ ಬಂದಿಲ್ಲ ಅಂತ ರೈತ ಮಹಿಳೆ ಚೆನ್ನಮ್ಮ ಅಳಲು ತೋಡಿಕೊಳ್ತಿದ್ದಾರೆ.

    ಒಟ್ಟಿನಲ್ಲಿ ಕೊರೊನಾ ಮೊದಲ ಹೊಡೆತದಿಂದ ತತ್ತರಿಸಿದ್ದ ರೈತರು ಚೇತರಿಸಿಕೊಳ್ಳುತ್ತಿರುವಾಗಲೇ ಈಗ ಎರಡನೇ ಅಲೆ ಆರಂಭದಲ್ಲೇ ಇತರೆ ರಾಜ್ಯಗಳಿಗೆ ರಫ್ತು ಮಾಡಲಾಗದೆ. ತರಕಾರಿಗಳ ಬೆಲೆ ತೀರಾ ಕೆಳಮಟ್ಟಕ್ಕೆ ಕುಸಿದಿದ್ದು ಗಾಯದ ಮೇಲೆ ಬರೆ ಎಳೆದಂತೆ ಮತ್ತೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

  • ಕೊರೊನಾ ಆತಂಕ- ಸಾಬೂನಿನಿಂದ ಕೊತ್ತಂಬರಿ ಸೊಪ್ಪು ತೊಳೆದ ಯುವತಿ

    ಕೊರೊನಾ ಆತಂಕ- ಸಾಬೂನಿನಿಂದ ಕೊತ್ತಂಬರಿ ಸೊಪ್ಪು ತೊಳೆದ ಯುವತಿ

    -ವಿಡಿಯೋ ವೈರಲ್, 4.6 ಕೋಟಿಗೂ ಅಧಿಕ ವ್ಯೂವ್

    ಬೆಂಗಳೂರು: ಕೊರೊನಾ ಜೊತೆಗೆ ಜೀವನ ಸಾಗುತ್ತಿದ್ದು, ಜನರು ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳು ತೆಗೆದುಕೊಳ್ಳಬೇಕೆಂದು ಸರ್ಕಾರ ಸಲಹೆ ನೀಡುತ್ತಿದೆ. ಆದ್ರೆ ಯುವತಿ ಮಾರುಕಟ್ಟೆಯಿಂದ ತಂದ ಕೊತ್ತಂಬರಿ ಸೊಪ್ಪನ್ನು ಸಾಬೂನಿನಿಂದ ತೊಳೆದಿರುವ ವಿಡಿಯೋ ವೈರಲ್ ಆಗುತ್ತಿದೆ.

    ಮನೆಗೆ ತಂದ ತರಕಾರಿ, ಹಣ್ಣುಗಳನ್ನು ಉಪ್ಪಿನ ನೀರಿನಲ್ಲಿ ಅಥವಾ ಬಿಸಿ ನೀರಿನಲ್ಲಿ ತೊಳೆದ್ರೆ ಉತ್ತಮ ಎಂದು ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಹೊರಗಿನಿಂದ ಮನೆಗೆ ಬರೋ ಮುನ್ನ ಸ್ಯಾನಿಟೈಸ್ ಬಳಕೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ನಿರ್ದೇಶನ ನೀಡಿದೆ. ಈ ಯುವತಿ ಮಾತ್ರ ಮನೆಗೆ ತಂದ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದಿದ್ದಾಳೆ. ಸೊಪ್ಪು ತೊಳೆಯುವುದನ್ನ ಟಿಕ್‍ಟಾಕ್ ನಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾಳೆ.

    @1993pikachu

    1st rank par agyi humari ye vedio 7 din huye upload kiya or 40million views and 1.6M likes..thank uh is vedio koi itna pyar dene ke #jabalpuriyamuser

    ♬ original sound – 𝔅𝔯𝔬𝔨𝔢𝔫 𝔖𝔬𝔲𝔩 💔….

    ಕೆಲವು ದಿನಗಳ ಹಿಂದೆ ವಿಡಿಯೋ ಶೇರ್ ಮಾಡಲಾಗಿದ್ದು, 46 ಮಿಲಿಯನ್(4.6 ಕೋಟಿ)ಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಐದು ಸಾವಿರಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ. ಓರ್ವ ಬಳಕೆದಾರ, ನೀವು ಕೊತ್ತಂಬರಿ ಸೊಪ್ಪನ್ನು ವಾಷಿಂಗ್ ಮಷಿನ್ ನಲ್ಲಿ ಹಾಕಿ ತೊಳೆಯಿರಿ ಎಂದು ಉಚಿತ ಸಲಹೆ ನೀಡಿದ್ದಾನೆ. ಇನ್ನು ಕೆಲವರು ಹೀಗೆ ಫನ್ನಿ ಫನ್ನಿ ಕಮೆಂಟ್ ಮಾಡಿದ್ದಾರೆ. ಮತ್ತೋರ್ವ ಬಳಕೆದಾರ, ಈ ರೀತಿ ಸಾಬೂನಿನಿಂದ ತೊಳೆದ್ರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತೆ ಎಂದು ಎಚ್ಚರಿಸಿದ್ದಾರೆ.

  • ಇನ್ಮುಂದೆ ಕೊತ್ತಂಬರಿ ಸೊಪ್ಪು ಇಲ್ಲದೇ ಅಡುಗೆ ಮಾಡ್ಬೇಕು!

    ಇನ್ಮುಂದೆ ಕೊತ್ತಂಬರಿ ಸೊಪ್ಪು ಇಲ್ಲದೇ ಅಡುಗೆ ಮಾಡ್ಬೇಕು!

    ಬೆಂಗಳೂರು: ಕೊತ್ತಂಬರಿ ಸೊಪ್ಪು ಹಾಕಿ ನೀವು ಆಡುಗೆ ಮಾಡುತ್ತೀರಾ. ಹಾಗಾದ್ರೆ ಇನ್ನು ಮುಂದೆ ನೀವು ಕೊತ್ತಂಬರಿ ಸೊಪ್ಪು ಹಾಕದೇ ಆಡುಗೆ ಮಾಡಬೇಕು.

    ಹೌದು. ಈಗ ಮಾರುಕಟ್ಟೆಗೆ ಈಗ ಕೊತ್ತಂಬರಿ ಸೊಪ್ಪು ಬರುತ್ತಿಲ್ಲ. ಬಂದರೂ ದುಬಾರಿ ಬೆಲೆ ನೀಡಿ ಖರೀದಿಸಬೇಕು. ನಾಟಿ ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 35 ರಿಂದ 40 ರೂ. ನೀಡಬೇಕು ಹಾಗೂ ಫಾರಂ ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 25 ರಿಂದ 30 ರೂ. ನೀಡಬೇಕು.

    ಮಾರುಕಟ್ಟೆಯಲ್ಲಿ ಈ ಬೆಲೆ ಆದರೆ ಮನೆ ಬಾಗಿಲಿಗೆ ಬರುವ ಕೊತ್ತಂಬರಿ ಸೊಪ್ಪಿನ ದರ ಇನ್ನು ದುಪ್ಪಟ್ಟು ಆಗಲಿದೆ. ಮಳೆಯಿಂದಾಗಿ ಕೊತ್ತಂಬರಿ ಇಳುವರಿ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv