Tag: ಕೊಡುಗೆ

  • Karnataka Budget 2023 : ಸಿನಿಮಾ ರಂಗಕ್ಕೆ ಸಿಕ್ಕಿದ್ದೇನು?

    Karnataka Budget 2023 : ಸಿನಿಮಾ ರಂಗಕ್ಕೆ ಸಿಕ್ಕಿದ್ದೇನು?

    ಬಾರಿಯ ಬಜೆಟ್ ನಲ್ಲಿ (Karnataka Budget) ಸಿನಿಮಾ (Cinema) ರಂಗಕ್ಕೆ ಬಂಪರ್ ಕೊಡುಗೆ ನೀಡಲಾಗುತ್ತದೆ ಎಂದು ನಂಬಲಾಗಿತ್ತು. ಅದರಲ್ಲೂ ಫಿಲ್ಮ್ ಸಿಟಿ, ಚಲನಚಿತ್ರ ನೀತಿ ಕುರಿತಂತೆ ಹಲವಾರು ಕೊಡುಗೆಗಳನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ, ಚಿತ್ರೋದ್ಯಮಕ್ಕೆ ಹೇಳಿಕೊಳ್ಳುವಂತಹ ಯೋಜನೆಗಳು ಘೋಷಣೆ ಆಗಿಲ್ಲ.

    ಸಿಎಂ ಬಸವರಾಜ ಬೊಮ್ಮಾಯಿಗೂ (Basavaraja Bommai) ಸಿನಿಮಾ ರಂಗಕ್ಕೂ ಹತ್ತಿರದ ನಂಟಿದೆ. ಅಲ್ಲದೇ, ಇವರ ಸಚಿವ ಸಂಪುಟದ ಅನೇಕ ಸದಸ್ಯರು ಸಿನಿಮಾ ಕ್ಷೇತ್ರದೊಂದಿಗೆ ಪ್ರತ್ಯೆಕ್ಷ ಹಾಗೂ ಪರೋಕ್ಷವಾಗಿ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ರಂಗಕ್ಕೆ ಆಗಬೇಕಾದ ಕೆಲಸಗಳ ಕುರಿತಾಗಿ ಹಿರಿಯ ನಿರ್ದೇಶಕರ ನಿಯೋಗ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಈಗಾಗಿ ಅನೇಕ ನಿರೀಕ್ಷೆಗಳು ಇದ್ದವು. ಇದನ್ನೂ ಓದಿ: ತುಪ್ಪದ ಹುಡುಗಿ ಹಾಟ್‌ ಹಾಟ್‌, ಪಡ್ಡೆಹುಡುಗರ ನಿದ್ದೆಗೆಡಿಸಿದ `ರಾ’ಗಿಣಿ

    ಈ ಬಾರಿಯ ಬಜೆಟ್ ನಲ್ಲಿ ಸಿನಿಮಾ ರಂಗಕ್ಕೆ ಸಿಕ್ಕಿದ್ದೇನು ಎಂದು ನೋಡುವುದಾದರೆ, ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡಲು ರಾಜ್ಯದ ಟೈರ್ -2 ನಗರಗಳಲ್ಲಿ 100 ರಿಂದ 200 ಆಸನಗಳ ಸಾಮರ್ಥ್ಯವುಳ್ಳ ಮಿನಿ ಥಿಯೇಟರ್ ಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುತ್ತಿದೆ.

    ಜೊತೆಗೆ ನಗರ ಹಾಗೂ ಪಟ್ಟಣಗಳಲ್ಲಿ ಖಾಲಿ ಇರುವ ಜಾಗಗಳನ್ನು ಗುರುತಿಸಿ, ಖ್ಯಾತ ನಟರಾದ ದಿವಗಂತ ಶಂಕರ್ ನಾಗ್ ಅವರ ಹೆಸರಿನಲ್ಲಿ ಟ್ಯಾಕ್ಸ್ ಹಾಗೂ ಆಟೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಕ್ಷರ ಜ್ಞಾನ ಪಡೆದ ಕನ್ನಡ ಶಾಲೆಯನ್ನು ಮಾದರಿ ಶಾಲೆಯಾಗಿಸಿದ ಹಳೇ ವಿದ್ಯಾರ್ಥಿಗಳು

    ಅಕ್ಷರ ಜ್ಞಾನ ಪಡೆದ ಕನ್ನಡ ಶಾಲೆಯನ್ನು ಮಾದರಿ ಶಾಲೆಯಾಗಿಸಿದ ಹಳೇ ವಿದ್ಯಾರ್ಥಿಗಳು

    ಮಡಿಕೇರಿ: ಒಂದು ಊರಿನ ಅಭಿವೃದ್ಧಿಯನ್ನು ನೋಡಬೇಕಾದರೆ ಆ ಊರಿನ ದೇವಾಲಯಗಳನ್ನು ನೋಡಬೇಕು. ಇಲ್ಲವೇ ಶಾಲೆಗಳನ್ನು ನೋಡಬೇಕು ಎನ್ನುವುದು ಹಿರಿಯರ ಮಾತು. ಇದು ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಅಕ್ಷರಶಃ ಒಪ್ಪುವಂತಹ ಮಾತಾಗಿದೆ. ತಾವು ಕಲಿತ ಸರ್ಕಾರಿ ಶಾಲೆಗೆ ಹೊಸ ಸ್ಪರ್ಶ ನೀಡಿ ಮಾದರಿ ಶಾಲೆಯನ್ನಾಗಿಸಿ ಹಳೇ ವಿದ್ಯಾರ್ಥಿಗಳು ಮೆಚ್ಚುಗೆ ಪಡೆದುಕೊಂಡಿದ್ದಾರೆ.

    ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂದು ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ನಿರ್ಧರಿಸಿದ್ದರು. ಈ ನಿಟ್ಟಿನಲ್ಲಿ ಸುಮಾರು 40 ಸಾವಿರ ರೂ. ವೆಚ್ಚದಲ್ಲಿ ಶಾಲೆಗೆ ಬೆಂಚ್ ಹಾಗೂ ಡೆಸ್ಕ್ ನೀಡಿದ್ದಾರೆ.

    ಮಡಿಕೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಕೆಲವು ವರ್ಷಗಳ ಹಿಂದೆ ಕೊಡಗಿನ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳ ಪಾಲಿನ ಜ್ಞಾನ ದೇಗುಲವಾಗಿತ್ತು.

    ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಅನೇಕ ವಿದ್ಯಾರ್ಥಿಗಳು ಬೇರೆ ಬೇರೆ ಪ್ರದೇಶದಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. ತಾವು ಕಲಿತ ಶಾಲೆಯಲ್ಲಿ ಮೂಲಸೌಲಭ್ಯ ಕೊರತೆ ಕಂಡಿದ್ದ ಅವರು ಏನಾದರೂ ವ್ಯವಸ್ಥೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಕೈ ಹಾಕಿದ್ದರು. ಇದಕ್ಕೆ ಸುಮಾರು 35ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ. ಮೊದಲ ಹಂತದಲ್ಲಿ ಈ ಸಂಘವು ಶಾಲೆಗೆ ಪೀಠೋಪಕರಣ ನೀಡುವ ಕೆಲಸ ಮಾಡಿದೆ.

    ಸರ್ಕಾರಿ ಕನ್ನಡ ಶಾಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ, ಉತ್ತಮ ಶಿಕ್ಷಣ, ವಾತಾವರಣ ನೀಡುವ ಕೆಲಸವನ್ನು ಹಳೇ ವಿದ್ಯಾರ್ಥಿಗಳು ಮಾಡುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚನೆ ಮಾಡಿಕೊಂಡ ಸ್ನೇಹ ಮಿಲನ ಸವಿ ನೆನಪು ಎನ್ನುವ ಕಾರ್ಯಕ್ರಮ ಮಾಡಲಾಗುತ್ತಿದೆ. ಹೀಗೆ ಸಂಘಟನೆಯಾದ ವಿದ್ಯಾರ್ಥಿಗಳು ಶಾಲೆ/ಕಾಲೇಜುಗಳ ಅಭಿವೃದ್ಧಿಗೆ ಸಹಕರಿಸಿದರೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ.

    ಶಾಲೆಗೆ ಕೊಡುಗೆಯಾಗಿ ನೀಡಿದ ಬೆಂಚ್ ಹಾಗೂ ಡೆಸ್ಕ್ ಗಳನ್ನು ಇಂದು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಕುಶಾಲಿನಿ, ಸದಸ್ಯರಾದ ಪೀಟರ್, ದಯಾನಂದ, ಲೋಹಿತ್, ರಾಜೇಶ್, ಮಲ್ಲಿಕಾರ್ಜುನ್, ಪವಿತ್ರ, ಭಾಗೀರಥಿ, ಶ್ವೇತಾ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಷ್ಠಾವಂತ ತೆರಿಗೆದಾರರಿಗೆ ಸಿಗಲಿದೆ ವಿಶೇಷ ಸವಲತ್ತು!

    ನಿಷ್ಠಾವಂತ ತೆರಿಗೆದಾರರಿಗೆ ಸಿಗಲಿದೆ ವಿಶೇಷ ಸವಲತ್ತು!

    ನವದೆಹಲಿ: ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಗೆ ಸಹಕರಿಸುತ್ತಿರುವ ನಿಷ್ಠಾವಂತ ತೆರಿಗೆದಾರರನ್ನು ಗುರುತಿಸಿ ಅವರಿಗೆ ವಿಶೇಷ ಸವಲತ್ತು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

    ನಿಗದಿತ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವವರನ್ನು ಇದುವರೆಗೂ ಯಾವುದೇ ಸರ್ಕಾರಗಳು ಗುರುತಿಸಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಷ್ಠಾವಂತ ತೆರಿಗೆದಾರರಿಗೆ ವಿಶೇಷ ಸೌಲಭ್ಯಗಳನ್ನು ನೀಡಲು ಸಿದ್ಧತೆ ನಡೆಸಿದೆ.

    ಈಗಾಗಲೇ ಹಣಕಾಸು ಸಚಿವಾಲಯ ನೂತನ ಕರಡು ಪ್ರಸ್ತಾವನೆಯನ್ನು ಪ್ರಧಾನಿ ಕಚೇರಿಗೆ ತಲುಪಿಸಿದ್ದು, ಅಲ್ಲಿ ಅಂತಿಮಗೊಂಡ ಬಳಿಕ ಕ್ಯಾಬಿನೆಟ್ ಒಪ್ಪಿಗೆ ನೀಡಲಿದೆ. ಇದನ್ನೂ ಓದಿ: ದೇಶಾದ್ಯಂತ ಏಕರೂಪದ ಡಿಎಲ್, ಆರ್‌ಸಿ: ಏನೇನು ಮಾಹಿತಿ ಇರುತ್ತೆ? ಯಾವಾಗ ಬರುತ್ತೆ? ದರ ಎಷ್ಟು?

    ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ?
    ನಿಷ್ಠಾವಂತ ತೆರಿಗೆ ಪಾವತಿದಾರರಿಗೆ ಸಾರ್ವಜನಿಕ ಸೇವೆಗಳಾದ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ರಸ್ತೆ ಟೋಲ್‍ಗಳಲ್ಲಿ `ಆದ್ಯತೆಯ ಸೇವೆ’ ಸಿಗಲಿದೆ. ಅಷ್ಟೇ ಅಲ್ಲದೇ ಸರ್ಕಾರಿ ಸಮಾರಂಭದಲ್ಲಿ ಗೌರವಿಸಲಾಗುತ್ತದೆ. ವಿಶೇಷ ಗುರುತಿನ ಸಂಖ್ಯೆ ಅಥವಾ ಪಾನ್ ಸಂಖ್ಯೆಯ ಮೂಲಕ ನಿಷ್ಠಾವಂತ ತೆರಿಗೆದಾರರನ್ನು ಗುರುತಿಸಬಹುದು ಎನ್ನುವ ಅಂಶ ಕರಡು ಪ್ರಸ್ತಾವನೆಯಲ್ಲಿದೆ.

    ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನಡೆದ ಹಿರಿಯ ತೆರಿಗೆ ಅಧಿಕಾರಿಗಳ ಸಂವಾದ ಕಾರ್ಯಕ್ರಮದಲ್ಲಿ ನಿಷ್ಠಾವಂತ ತೆರಿಗೆ ಪಾವತಿ ಮಾಡುವ ಪಾವತಿದಾರರಿಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡಲಾಗುವುದು. ಅಲ್ಲದೇ ಅವರಿಗೆ ವಿಶೇಷ ಸವಲತ್ತುಗಳನ್ನು ಘೋಷಿಸಲಾಗುತ್ತದೆ ಎಂದು ಹೇಳಿದ್ದರು.

    2015-16ರ ಹಣಕಾಸು ವರ್ಷದಲ್ಲಿ ಒಟ್ಟು 5.43 ಕೋಟಿ ಮಂದಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದರೆ, 2017-18ರ ಸಾಲಿನಲ್ಲಿ 6.84 ಕೋಟಿ ಮಂದಿ ಐಟಿಆರ್ ಸಲ್ಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರ್ವಾನ್-ಇ-ಹರಮೈನ್ ಪ್ರವಾಸ ಕೇಂದ್ರದಿಂದ ವಿನೂತನ ಹಜ್, ಉಮ್ರಾ ಪ್ಯಾಕೇಜ್

    ಕರ್ವಾನ್-ಇ-ಹರಮೈನ್ ಪ್ರವಾಸ ಕೇಂದ್ರದಿಂದ ವಿನೂತನ ಹಜ್, ಉಮ್ರಾ ಪ್ಯಾಕೇಜ್

    – ಪ್ರಯಾಣದರ ಎಷ್ಟು? ಪ್ಯಾಕೇಜ್ ಏನು?

    ಬೆಂಗಳೂರು: ಮುಸ್ಲಿಂ ಬಾಂಧವರಲ್ಲಿ ಒಮ್ಮೆಯಾದ್ರೂ ಹಜ್ ಯಾತ್ರೆ ಕೈಗೊಳ್ಳಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ವಿದೇಶಕ್ಕೆ ಪ್ರಯಾಣ ಬೆಳೆಸುವುದು ಮಧ್ಯಮ ವರ್ಗದ ಜನರಿಗೆ ಹೆಚ್ಚು ವೆಚ್ಚದಾಯಕ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆ ಇರುತ್ತದೆ. ಮಧ್ಯಮ ವರ್ಗದ ಬಜೆಟ್‍ನಲ್ಲಿಯೇ ಮುಸ್ಲಿಂ ಬಾಂಧವರಿಗಾಗಿ ಕರ್ವಾನ್-ಇ-ಹರಮೈನ್ ಎಂಬ ಪ್ರವಾಸ ಸಂಸ್ಥೆಯು ವಿನೂತನ ಹಜ್ ಹಾಗೂ ಉಮ್ರಾ ಪ್ಯಾಕೇಜ್‍ಗಳನ್ನು ಪ್ರಯಾಣಿಕರಿಗೆ ನೀಡಿದೆ.

    ಹಲವು ಬಾರಿ ಪ್ರವಾಸ ಕೈಗೊಂಡ ಬಳಿಕ ಯಾತ್ರಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ತಾವು ಉಳಿದುಕೊಂಡಿದ್ದ ಸ್ಥಳಗಳಿಂದ ಉಮ್ರಾ ಅಥವಾ ಹಜ್ ತುಂಬಾ ದೂರದಲ್ಲಿ ಇರುತ್ತದೆ. ಹಾಗಾಗಿ ಹೆಚ್ಚಿನ ಸಮಯದಲ್ಲಿ ಪ್ರಯಾಣದಲ್ಲಿ ಕಳೆಯುವ ಸ್ಥಿತಿ ಬರುತ್ತದೆ. ಆದ್ರೆ ಕರ್ವಾನ್-ಇ-ಹರಮೈನ್ 500 ರಿಂದ 800 ಮೀಟರ್ ವ್ಯಾಪ್ತಿಯೊಳಗೆ ಹರಾಮದಲ್ಲಿ ವಾಸ್ತವ್ಯ ಕಲ್ಪಿಸಿಕೊಡಲಿದೆ. ಹಲವು ಪ್ಯಾಕೇಜ್‍ಗಳು ಕರ್ವಾನ್-ಇ-ಹರಮೈನ್ ಪ್ರವಾಸ ಕೇಂದ್ರದಲ್ಲಿದ್ದು, ಯಾತ್ರಿಗಳು ತಮ್ಮ ಬಜೆಟ್ ಅನುಗುಣವಾಗಿ ಆಯ್ದುಕೊಳ್ಳುವ ವ್ಯವಸ್ಥೆಯನ್ನು ಸಂಸ್ಥೆ ನೀಡಿದೆ.

    ವಿಶೇಷ ಉಮ್ರಾ ಪ್ರವಾಸಕ್ಕಾಗಿ ಪ್ರತಿ ಪ್ರಯಾಣಿಕರಿಗೆ 47 ಸಾವಿರ ರೂ. ಆಗಲಿದ್ದು, ಇದರಲ್ಲಿ 500 ರಿಂದ 800 ಮೀಟರ್ ವ್ಯಾಪ್ತಿಯೊಳಗೆ ಹರಾಮದಲ್ಲಿ ವಾಸ್ತವ್ಯ ಕಲ್ಪಿಸಿಕೊಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

    ಉಮ್ರಾ ವಿಶೇಷ ಪ್ಯಾಕೇಜ್‍ಗಳು:
    * ಸೂಪರ್ ಡಿಲಕ್ಸ್ ಪ್ಯಾಕೇಜ್‍ನಲ್ಲಿ ಓರ್ವ ಪ್ರಯಾಣಿಕರಿಗೆ 60 ಸಾವಿರ ರೂ. ಆಗಲಿದ್ದು, ಇದರಲ್ಲಿ 200 ರಿಂದ 400 ಮೀಟರ್ ವ್ಯಾಪ್ತಿಯೊಳಗೆ ಹರಾಮದಲ್ಲಿಯೇ ವಾಸ್ತವ್ಯ ಕಲ್ಪಿಸಿಕೊಡಲಾಗುತ್ತದೆ.
    * ಡಿಲಕ್ಸ್ ಪ್ಯಾಕೇಜ್‍ನಲ್ಲಿ ಓರ್ವ ಪ್ರಯಾಣಿಕನಿಗೆ 55 ಸಾವಿರ ರೂಪಾಯಿ ಆಗಲಿದ್ದು, ಇದರಲ್ಲಿ 300 ರಿಂದ 500 ಮೀಟರ್ ವ್ಯಾಪ್ತಿಯೊಳಗೆ ಹರಾಮದಲ್ಲಿಯೇ ವಾಸ್ತವ್ಯ ಕಲ್ಪಿಸಿಕೊಡಲಾಗುತ್ತದೆ.
    * ಎಕನಮಿ ಪ್ಯಾಕೇಜ್‍ನಲ್ಲಿ ಓರ್ವ ಪ್ರಯಾಣಿಕನಿಗೆ 49 ಸಾವಿರ ರೂಪಾಯಿಗಳು ಆಗಲಿದ್ದು, ಇದರಲ್ಲಿ 300ರಿಂದ 500 ಮೀಟರ್ ವ್ಯಾಪ್ತಿಯೊಳಗೆ ಹರಾಮದಲ್ಲಿ ವಾಸ್ತವ್ಯ ಕಲ್ಪಿಸಿಕೊಡಲಾಗುತ್ತದೆ.
    * ವಿಶೇಷವಾಗಿ ಹಜ್ ಯಾತ್ರೆಗಾಗಿ ಪ್ಯಾಕೇಜ್‍ಅನ್ನು ಪ್ರಾರಂಭಿಸಿದೆ. 2019 ಕ್ಕೆ ಕೇವಲ 2.25 ಲಕ್ಷ ರೂಪಾಯಿ ಹಾಗೂ 2020 ಕ್ಕೆ 1.25 ಲಕ್ಷ ರೂಪಾಯಿ ಮುಂಗಡ ಹಣ ನೀಡಿ ಪ್ರವಾಸ ಕೈಗೊಳ್ಳಬಹುದಾಗಿದೆ.

    ಮುಂಗಡ ಉಮ್ರಾ ಪ್ರಯಾಣಕ್ಕಾಗಿ ಸೀಮಿತ ವಿಶೇಷ ಪ್ಯಾಕೇಜ್(ಓರ್ವ ವ್ಯಕ್ತಿಗೆ):
    * 18 ತಿಂಗಳ ಮುಂಗಡವಾಗಿ ಪಾವತಿಸಿದ್ರೆ 25 ಸಾವಿರ ರೂ.
    * 12 ತಿಂಗಳ ಮುಂಗಡವಾಗಿ ಪಾವತಿಸಿದ್ರೆ 30 ಸಾವಿರ ರೂ.
    * 10 ತಿಂಗಳ ಮುಂಗಡವಾಗಿ ಪಾವತಿಸಿದ್ರೆ 33 ಸಾವಿರ ರೂ.
    * 8 ತಿಂಗಳ ಮುಂಗಡವಾಗಿ ಪಾವತಿಸಿದ್ರೆ 37 ಸಾವಿರ ರೂ.
    * 6 ತಿಂಗಳ ಮುಂಗಡವಾಗಿ ಪಾವತಿಸಿದ್ರೆ 42 ಸಾವಿರ ರೂ.
    * 4 ತಿಂಗಳ ಮುಂಗಡವಾಗಿ ಪಾವತಿಸಿದ್ರೆ 45 ಸಾವಿರ ರೂ.

    ಮುಂಗಡ ಉಮ್ರಾ ಪ್ರವಾಸಕ್ಕೆ ಈ ಮೇಲ್ಕಂಡ ರಿಯಾಯಿತಿಗಳನ್ನು ಹೊರತು ಪಡಿಸಿ ಯಾವುದೇ ರಿಯಾಯಿತಿ ಇರುವುದಿಲ್ಲ. ಅಲ್ಲದೇ ಪ್ಯಾಕೇಜ್ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು.

    2019ರ ಎಪ್ರಿಲ್ ನ ಉಮ್ರಾ ಪ್ರವಾಸಕ್ಕೆ ನೂತನ ಪ್ಯಾಕೇಜನ್ನು ನೀಡಿದ್ದು, ಈ ಪ್ಯಾಕೇಜ್‍ನಲ್ಲಿ ಒಟ್ಟು ಮೂವರು ಪ್ರಯಾಣಿಕರು ಪ್ರವಾಸಕೈಗೊಳ್ಳಬಹುದಾಗಿದೆ. ಇದಕ್ಕೆ 99 ಸಾವಿರ ಒಟ್ಟು ಮೊತ್ತವಾಗಿರುತ್ತದೆ. ಬುಕ್ಕಿಂಗ್ ಮಾಡಲು ಕೊನೆಯ ದಿನಾಂಕ 2018ರ ಆಗಸ್ಟ್ 15 ಆಗಿರುತ್ತದೆ.

    ಹೆಚ್ಚಿನ ಮಾಹಿತಿಗಾಗಿ 99724 76915, 98861 64545, ಅಲ್ಲದೇ ಸೌದಿ ನಂಬರ್ 00966590268131 ನಂಬರ್ ಸಂಪರ್ಕಿಸಬಹುದು.

    ನಮ್ಮ ವೆಬ್‍ಸೈಟ್ www.karwaneharamain.com ಆಗಿರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಶಟ್ಲರ್ ಶ್ರೀಕಾಂತ್‍ಗೆ ಕೊಟ್ಟ ಮಾತು ಉಳಿಸಿಕೊಂಡ ಧೋನಿ!

    ಶಟ್ಲರ್ ಶ್ರೀಕಾಂತ್‍ಗೆ ಕೊಟ್ಟ ಮಾತು ಉಳಿಸಿಕೊಂಡ ಧೋನಿ!

    ಹೈದರಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಭಾರತದ ಟಾಪ್ ಶಟ್ಲರ್ ಕಿಡಂಬಿ ಶ್ರೀಕಾಂತ್ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ತಮ್ಮ ಹಸ್ತಾಕ್ಷರ ಹೊಂದಿರುವ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಧೋನಿ ಹಸ್ತಾಕ್ಷರ ಹೊಂದಿರುವ ಬ್ಯಾಟನ್ನು ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ಅವರು ಶ್ರೀಕಾಂತ್ ಅವರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ವಿಶ್ವ ಬ್ಯಾಡ್ಮಿಂಟನ್ ನಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಶ್ರೀಕಾಂತ್, ಧೋನಿಯವರ ಕೊಡುಗೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

    ಅಂದಹಾಗೇ ಶ್ರೀಕಾಂತ್ ಈ ಹಿಂದೆ ಧೋನಿಯ ಬಳಿ ಬ್ಯಾಟ್ ಕೊಡುಗೆ ನೀಡುವಂತೆ ಕೇಳಿದ್ದರು. ಅದಕ್ಕೆ ಬ್ಯಾಡ್ಮಿಂಟನ್ ನಲ್ಲಿ ನಂ.1 ಸ್ಥಾನಕ್ಕೆ ತಲುಪಿದರೆ ಗಿಫ್ಟ್ ಕೊಡುವುದಾಗಿ ಧೋನಿ ಭರವಸೆ ನೀಡಿದ್ದರು. ಇದರಂತೆ ಕಳೆದ ಏಪ್ರಿಲ್ ನಲ್ಲಿ ಶ್ರೀಕಾಂತ್ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದರು. ಅಲ್ಲದೇ ಭಾರತದಿಂದ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು. ಸದ್ಯ ಧೋನಿ ತಾವು ಕೊಟ್ಟ ಮಾತಿನಂತೆ ಶ್ರೀಕಾಂತ್ ಅವರಿಗೆ ಗಿಫ್ಟ್ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಕಾಂತ್, ಧೋನಿ ಅವರು ಬ್ಯಾಟ್ ಗಿಫ್ಟ್ ನೀಡಿರುವುದು ಹೆಚ್ಚು ಸಂತಸ ತಂದಿದೆ. ಇದು ತನ್ನ ಜೀವನದ ಅತ್ಯಂತ ಸ್ಮರಣೀಯ ದಿನ ಎಂದು ತಿಳಿಸಿದ್ದಾರೆ.

    ಸದ್ಯ ಹೈದರಾಬಾದ್ ನ ಗೋಪಿಚಂದ್ ಬ್ಯಾಡ್ಮಿಂಟನ್ ಆಕಾಡೆಮಿಯಲ್ಲಿ ತರಬೇತಿಯಲ್ಲಿ ನಿರತರಾಗಿರುವ ಶ್ರೀಕಾಂತ್ ಅವರಿಗೆ ಎಂಎಎಸ್‍ಕೆ ಪ್ರಸಾದ್ ಅವರು ಬ್ಯಾಟ್ ಹಸ್ತಾಂತರಿಸುವ ವೇಳೆ ಬ್ಯಾಡ್ಮಿಂಟನ್ ರಾಷ್ಟ್ರೀಯ ತಂಡದ ಕೋಚ್ ಗೋಪಿಚಂದ್, ಶ್ರೀಕಾಂತ್ ಅವರ ತಂದೆ ಕೆವಿಎಸ್ ಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.

  • ಗುಲಬರ್ಗಾ ವಿವಿಯಲ್ಲಿ ನೀಡಿದ ಬೆಳ್ಳಿ ಹಸುವಿನ ಮೂರ್ತಿಯ ಗಿಫ್ಟ್ ಬೇಡ ಎಂದ ಸಿಎಂ

    ಗುಲಬರ್ಗಾ ವಿವಿಯಲ್ಲಿ ನೀಡಿದ ಬೆಳ್ಳಿ ಹಸುವಿನ ಮೂರ್ತಿಯ ಗಿಫ್ಟ್ ಬೇಡ ಎಂದ ಸಿಎಂ

    ಕಲಬುರಗಿ: ಉತ್ತಮ ಬಜೆಟ್‍ಗಾಗಿ ಸಚಿವ ರಾಯರೆಡ್ಡಿ ಮತ್ತು ಗುಲಬರ್ಗಾ ವಿವಿ ಉಡುಗೊರೆಯಾಗಿ ನೀಡಿದ ಬೆಳ್ಳಿ ಹಸುವಿನ ಮೂರ್ತಿಯನ್ನು ಸಿಎಂ ನಿರಾಕರಿಸಿದ್ದಾರೆ.

    ಇಂದು ನಗರದ ವಿಶ್ವವಿದ್ಯಾಲಯದ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ ಉತ್ತಮ ಬಜೆಟ್‍ಗಾಗಿ ರೆಡ್ಡಿ ಸಮಾಜದ ವತಿಯಿಂದ ಸಿದ್ದರಾಮಯ್ಯ ಅವರಿಗೆ ಚಿನ್ನದ ಪದಕ ನೀಡಲಾಯಿತು. ಇದೇ ಸಂದರ್ಭದಲ್ಲಿ ವಿವಿ ವತಿಯಿಂದ ಬೆಳ್ಳಿ ಆಕಳು ಮೂರ್ತಿಯನ್ನು ಸಿದ್ದರಾಮಯ್ಯರಿಗೆ ನೀಡಿ ಗೌರವಿಸಲಾಯಿತ್ತು.

    ನಂತರ ಭಾಷಣದಲ್ಲಿ ಮಾತನಾಡಿದ ಸಿಎಂ, ಗಿಫ್ಟ್ ಗಳು ವಿವಾದಕ್ಕೆ ಕಾರಣವಾಗುತ್ತಿವೆ. ಈ ಹಿಂದೆ ಸ್ನೇಹಿತ ನೀಡಿದ ವಾಚ್ ಪ್ರಕರಣದಿಂದ ದೊಡ್ಡ ಅಪಪ್ರಚಾರವಾಯಿತು. ಹೀಗಾಗಿ ಇಲ್ಲಿ ನೀಡಿರುವ ಪದಕ ಮತ್ತು ಬೆಳ್ಳಿ ಮೂರ್ತಿಯನ್ನು ವಿವಿಗೇ ನೀಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಗಿಫ್ಟ್ ಗಳನ್ನು ಸ್ವೀಕರಿಸುವದಿಲ್ಲ ಅಂತಾ ಹೇಳಿದ್ರು.

    ಇದೇ ವೇಳೆ ಗೋವಿಂದರಾಜು ಡೈರಿ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಸಹಾರಾ ಪ್ರಕರಣವನ್ನು ಸಿಬಿಐಗೆ ನೀಡಿದ್ರೆ ನಮ್ಮ ಡೈರಿ ಪ್ರಕರಣವನ್ನು ಸಿಬಿಐಗೆ ನೀಡಲಾಗುವುದು. ಅದೊಂದು ನಕಲಿ ಡೈರಿ ಇಟ್ಟಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‍ನವರಿಗೆ ಜೈಲಿಗೆ ಕಳುಹಿಸುವ ಕುರಿತು ಯಡಿಯೂರಪ್ಪಗೆ ಬುದ್ಧಿ ಭ್ರಮಣೆಯಾಗಿದೆ. ಜೈಲಿಗೆ ಹೋಗಿ ಬಂದವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ತಿರುಗೇಟು ನೀಡಿದರು.