Tag: ಕೊಡಿಯೇರಿ ಬಾಲಕೃಷ್ಣನ್

  • ಕೇರಳದ ಹಿರಿಯ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ನಿಧನ

    ಕೇರಳದ ಹಿರಿಯ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ನಿಧನ

    ಚೆನ್ನೈ: ಹಿರಿಯ ಸಿಪಿಎಂ (CPIM) ನಾಯಕ ಮತ್ತು ಪಕ್ಷದ ಮಾಜಿ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ (68) (Kodiyeri Balakrishnan) ನಿಧನರಾಗಿದ್ದಾರೆ.

    ಕೊಡಿಯೇರಿ ಬಾಲಕೃಷ್ಣನ್ ಅವರು ಹಲವು ದಿನಗಳಿಂದ ಕ್ಯಾನ್ಸರ್‌ಗೆ (Cancer) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚೆನ್ನೈನಲ್ಲಿ (Chennai) ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ; ತ್ರಿಪಾಠಿ ನಾಮಪತ್ರ ತಿರಸ್ಕೃತ – ಖರ್ಗೆ, ಶಶಿ ತರೂರ್‌ ನಡುವೆ ಫೈಟ್

    ಕಣ್ಣೂರಿನ (Kannur) ತಲಶ್ಶೇರಿಯಿಂದ (Thalassery) ಐದು ಬಾರಿ ಶಾಸಕರಾಗಿದ್ದ ಕೊಡಿಯರಿ ಬಾಲಕೃಷ್ಣನ್ ಅವರು 2006 ರಿಂದ 2011 ರವರೆಗೆ ವಿಎಸ್ ಅಚ್ಯುತಾನಂದನ್ (Achuthanandan) ಅವರ ಸಂಪುಟದಲ್ಲಿ ಕೇರಳದ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಹೋಗ್ತಾರಲ್ಲ ಇದು ಚೈಲ್ಡಿಶ್ ತನ, ರಾಹುಲ್ ಗಾಂಧಿ ಫನ್ನಿಬಾಯ್ : ರೇಣುಕಾಚಾರ್ಯ ವ್ಯಂಗ್ಯ

    2021ರಲ್ಲಿ ಸಿಪಿಎಂ ಪಕ್ಷವನ್ನು ಎರಡನೇ ಬಾರಿಗೆ ಮುನ್ನಡೆಸುವಲ್ಲಿ ಕೊಡಿಯೇರಿ ಪ್ರಮುಖ ಪಾತ್ರ ವಹಿಸಿದ್ದರು. 2015 ರಿಂದ 2022 ರವರೆಗೆ ಕೇರಳ ಸಿಪಿಎಂನ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿದ್ದ ಕೊಡಿಯೇರಿ ಬಾಲಕೃಷ್ಣನ್ ಅವರು ಅನಾರೋಗ್ಯದ ಕಾರಣದಿಂದ ತಮ್ಮ ಸ್ಥಾನದಿಂದ ಹೊರ ನಡೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಲೋಕಸಭಾ ಚುನಾವಣೆಗೆ ಹೆದರಿದ ಬಿಜೆಪಿಯಿಂದ ಯುದ್ಧದ ಗಿಮಿಕ್: ಸಿಪಿಐಎಂ

    ಲೋಕಸಭಾ ಚುನಾವಣೆಗೆ ಹೆದರಿದ ಬಿಜೆಪಿಯಿಂದ ಯುದ್ಧದ ಗಿಮಿಕ್: ಸಿಪಿಐಎಂ

    ತಿರುವನಂತಪುರಂ: ಪುಲ್ವಾಮಾ ದಾಳಿಗೆ ಭಾರತೀಯ ವಾಯು ಪಡೆ ಹಾಗೂ ಕೇಂದ್ರ ಸರ್ಕಾರ ಪ್ರತ್ಯುತ್ತರ ನೀಡಿದ್ದಕ್ಕೆ ಸೋಮವಾರ ದೇಶದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಕೇರಳದ ಸಿಪಿಐ(ಎಂ) ಮುಖಂಡರೊಬ್ಬರು ಲೋಕಸಭಾ ಚುನಾವಣೆಗೆ ಹೆದರಿರುವ ಬಿಜೆಪಿಯು ಯುದ್ಧದ ವಾತಾವರಣ ಸೃಷ್ಟಿಸುತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ಸಿಪಿಐಎಂ ಪಕ್ಷದಿಂದ ಇಡುಕ್ಕಿ ಜಿಲ್ಲೆಯ ನೆಡುಂಕಂಡಂನಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವ ಭಯ ಬಿಜೆಪಿಯಲ್ಲಿದೆ. ಹೀಗಾಗಿ ಯುದ್ಧದ ಮೂಲಕ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾಶ್ಮೀರ ಜನತೆಯನ್ನು ದೇಶ ವಿರೋಧಿಗಳನ್ನಾಗಿ ಮಾಡುತ್ತಿದೆ. ಬಿಜೆಪಿಯವರು ದೇಶದ ಮುಸ್ಲಿಮರ ವಿರುದ್ಧ ದ್ವೇಷ ಸೃಷ್ಟಿಸುತ್ತಿದ್ದಾರೆ. ದೇಶದಲ್ಲಿ ಕೋಮುಗಲಭೆ ಹೆಚ್ಚಿಸುವುದು ಆರ್‍ಎಸ್‍ಎಸ್ ಉದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.

    ಕೊಡಿಯೇರಿ ಬಾಲಕೃಷ್ಣನ್ ಅವರ ಹೇಳಿಕೆಯನ್ನು ದೇಶದ ಅನೇಕ ನಾಯಕರು ಖಂಡಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ಬಾಲಕೃಷ್ಣನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv