Tag: ಕೊಡವರು

  • ʻಟಿಪ್ಪು ಸುಲ್ತಾನ್ – ದಿ ಸಾಗಾ ಆಫ್ ಮೈಸೂರು’ ಪುಸ್ತಕ ಬಿಡುಗಡೆ ಮಾಡಿದ ಸಂಸದ ಯದುವೀರ್

    ʻಟಿಪ್ಪು ಸುಲ್ತಾನ್ – ದಿ ಸಾಗಾ ಆಫ್ ಮೈಸೂರು’ ಪುಸ್ತಕ ಬಿಡುಗಡೆ ಮಾಡಿದ ಸಂಸದ ಯದುವೀರ್

    ಮಡಿಕೇರಿ: ಮೈಸೂರು, ಕೊಡಗು, ಮಲಬಾರ್‌ ಪ್ರದೇಶದಲ್ಲಿ ಟಿಪ್ಪು ಸುಲ್ತಾನ್ (Tipu Sultan) ಆಳ್ವಿಕೆಯ ‘ಪ್ರತಿಕೂಲ’ ಪರಿಣಾಮಗಳ ಹಿನ್ನೆಲೆ ಹೊಂದಿರುವ ʻಟಿಪ್ಪು ಸುಲ್ತಾನ್ ದಿ ಸಾಗಾ ಆಫ್ ಮೈಸೂರು ಇಂಟರ್ರೆಗ್ನಮ್ʼ ಪುಸ್ತಕವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Wadiyarr) ಅವರು ಬಿಡುಗಡೆಗೊಳಿಸಿದರು.

    ಕೊಡಗಿನ ಪೋನ್ನಂಪೇಟೆ ತಾಲ್ಲೂಕಿನ ಗೋಣಿಕೋಪ್ಪದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿದರು. ಬಳಿಕ ಮಾತಾನಾಡಿದ ಅವರು, ಇತಿಹಾಸಕಾರ ವಿಕ್ರಮ್ ಸಂಪತ್ ಅವರು ಬರೆದ ಈ ಪುಸ್ತಕ ದೇಶ-ವಿದೇಶಗಳಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಮೈಸೂರು, ಬೆಂಗಳೂರು, ಮಂಗಳೂರಿನಲ್ಲೂ ಬಿಡುಗಡೆಯಾಗಿದೆ. ಆದ್ರೆ ಕೊಡಗಿನಲ್ಲಿ ಈ ಬುಕ್ ಬಿಡುಗಡೆಯಾಗಿರಲ್ಲಿಲ್ಲ. ಲೇಖಕರು ಪುಸ್ತಕ ರಚನೆ ಮಾಡುವ ಸಂದರ್ಭದಲ್ಲಿ ದಾಖಲೆಗಳ ಸಮೇತ ಬರೆದಿದ್ದಾರೆ. ಕೊಡಗಿನಲ್ಲಿ ಟಿಪ್ಪುವಿನಿಂದ ಎಷ್ಟು ದೌರ್ಜನ್ಯಗಳು ನಡೆದಿದೆ. ಆ ಸಂದರ್ಭದಲ್ಲಿ ಟಿಪ್ಪು ವಿರುದ್ಧ ಕೊಡಗಿನ ಜನರು ಯಾವ ರೀತಿಯಲ್ಲಿ ವಿರೋಧ ವ್ಯಕ್ತ ಪಡಿಸಿದ್ರು ಎಲ್ಲವನ್ನೂ ಪುಸ್ತಕದಲ್ಲಿ ಚಿತ್ರಿಸಿದ್ದಾರೆ.

    ಟಿಪ್ಪು ದೌರ್ಜನ್ಯದ ಸಂದರ್ಭದಲ್ಲಿ ಕೊಡಗಿನ ಸಂಸ್ಕೃತಿ, ಪರಂಪರೆಯನ್ನು ಕೊಡವರು ಹೇಗೆ ರಕ್ಷಣೆ ಮಾಡಿದರು. ಇಷ್ಟು ಇತಿಹಾಸ ಹೊಂದಿರುವ ಕೊಡುಗಿನಲ್ಲಿ ಪುಸ್ತಕ ಬಿಡುಗಡೆ ಮಾಡಿರುವುದು ಸಂತೋಷದ ವಿಚಾರ. ನಾವು ಕಳೆದು ಹೋದ ಘಟನೆಯನ್ನು ಎಂದಿಗೂ ಮರೆಯಬಾರದು ಅಂತ ಸಲಹೆ ನೀಡಿದರು. ಇದನ್ನೂ ಓದಿ: ರಸ್ತೆಯಲ್ಲಿ ಸಂಚರಿಸೋದಕ್ಕೂ ಸುಂಕ ಕಟ್ಟಬೇಕೆ? – ಟ್ರಾಫಿಕ್‌ ನಿಯಂತ್ರಣಕ್ಕೆ ಹೊಸ ಸೂತ್ರ – ಏನಿದು ದೆಹಲಿ ಸರ್ಕಾರದ ಪ್ಲ್ಯಾನ್‌?

    ಇನ್ನೂ ಇದೇ ಸಂದರ್ಭದಲ್ಲಿ ಮಾತಾನಾಡಿದ ಇತಿಹಾಸಕಾರ ವಿಕ್ರಮ್ ಸಂಪತ್, ಕೊಡಗು ಜಿಲ್ಲೆಯಲ್ಲಿನ ಜನ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ದೌರ್ಜನ್ಯ ಸಾಕಷ್ಟು ನೋವು ಕಂಡಿದ್ದಾರೆ. ದೇವಟಿ ಪರಂಬುನಲ್ಲಿ ಕೊಡವರ ಹತ್ಯೆ ಘಟನೆ ಹೇಗಾಯ್ತು? ಇನ್ನೂ ಮುಂತಾದ ಪ್ರಕರಣವನ್ನು ಈ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದೇನೆ. ಯಾವುದೇ ಒಂದು ರಾಜಕೀಯ ಇಲ್ಲದೇ ಸತ್ಯಾಂಶ ಅನಾವರಣಗೋಳಿಸುವ ಪ್ರಯತ್ನ ಇದಾಗಿದೆ ಎಂದು ನುಡಿದರು. ಇದನ್ನೂ ಓದಿ: ಮಂಡ್ಯದಲ್ಲಿ ಮಹಿಳೆಗೆ 33 ಲಕ್ಷ ಪಂಗನಾಮ – ಐಶ್ವರ್ಯಗೌಡ ವಿರುದ್ಧ ಮತ್ತೊಂದು ಎಫ್‌ಐಆರ್‌

  • ಕೊಡವ ಲ್ಯಾಂಡ್ ಕೇಸ್‌ : ಕೇಂದ್ರ ಸರ್ಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್‌

    ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಪ್ರಮುಖ ಬೇಡಿಕೆಯಾದ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯ (Geo-Political Autonomy for Kodava Tribe ) ಕುರಿತು ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (PIL) ವಿಚಾರಣೆ ನಡೆಸಿದ ಹೈಕೋರ್ಟ್‌ (Karnataka High Court) ಆಕ್ಷೇಪಣೆ ಸಲ್ಲಿಸಲು ವಿಳಂಬ ಧೋರಣೆ ತೋರಿದ್ದಕ್ಕೆ ಕೇಂದ್ರ ಗೃಹ ಸಚಿವಾಲಯಕ್ಕೆ (Central home Ministry) 5 ಸಾವಿರ ರೂ. ದಂಡ ವಿಧಿಸಿದೆ.

    ಹೈಕೋರ್ಟ್‌ ಮುಖ್ಯ ನ್ಯಾ.ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ.ಕೃಷ್ಣ ದೀಕ್ಷಿತ್ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆಯಲ್ಲಿ ಅರ್ಜಿದಾರರ ಪರ ಡಾ.ಸುಬ್ರಮಣಿಯನ್‌ ಸ್ವಾಮಿ ಹಾಗೂ ವಕೀಲ ಕೀರನ್ ನಾರಾಯಣ್ ಅವರು ವಾದ ಮಂಡಿಸಿದರು.

    ನ್ಯಾಯಾಲಯದ ಮುಂದೆ ಹಲವು ಬಾರಿ ಅರ್ಜಿ ವಿಚಾರಣೆಗೆ ಬಂದಿದ್ದು, ಪ್ರತಿವಾದಿಗಳಲ್ಲಿ ಒಂದಾದ ಕೇಂದ್ರವು ಅರ್ಜಿಗೆ ಆಕ್ಷೇಪಿಸಲು ಹೆಚ್ಚಿನ ಸಮಯ ಬಯಸಿ ಹಲವು ಬಾರಿ ವಿಚಾರಣೆಯನ್ನು ಮುಂದೂಡುವಂತೆ ಮಾಡಿದ ಕಾರಣ ದಂಡ ವಿಧಿಸಲಾಗಿದೆ.  ಇದನ್ನೂ ಓದಿ: 10 ಜನ ಸೇರಿಕೊಂಡು ಒಬ್ಬನನ್ನು ಹೊಡೆದಿದ್ದಾರೆ ಸರ್‌: ಬಿಜೆಪಿ ನಾಯಕರ ಮುಂದೆ ಸ್ಥಳೀಯರ ಕಣ್ಣೀರು

    ಮುಂದಿನ ವಿಚಾರಣೆಯನ್ನು ನವೆಂಬರ್ 29 ಕ್ಕೆ ಮುಂದೂಡಿದ್ದು, ಆಕ್ಷೇಪಣೆಯನ್ನು ಸಲ್ಲಿಸುವಂತೆಯೂ ಅದೇಶಿಸಿದೆ. ಕರ್ನಾಟಕ ರಾಜ್ಯ ಸರಕಾರ, ಕೇಂದ್ರ ಕಾನೂನು ಇಲಾಖೆ ಹಾಗೂ ಗೃಹ ಇಲಾಖೆ ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿವೆ.

    ಕೊಡವ ಭೂ ರಾಜಕೀಯ ಸ್ವಾಯತ್ತತೆ ಸಂಬಂಧ ಆಯೋಗ ರಚಿಸುವಂತೆ ಕೇಂದ್ರ ಮಾಜಿ ಸಚಿವ ಡಾ.ಸುಬ್ರಮಣಿಯನ್‌ ಸ್ವಾಮಿ (Subramanian Swamy) ಅವರ ಮೂಲಕ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ವಿರಾಟ್ ಹಿಂದೂಸ್ಥಾನ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಶ್ರೇಯಾ ನಾಚಪ್ಪ, ಅರೆಯಡ ಗಿರೀಶ್, ಕಿರಿಯಮಾಡ ಶೆರಿನ್, ಬೇಪಡಿಯಂಡ ಬಿದ್ದಪ್ಪ, ಅಪ್ಪಾರಂಡ ಪೂವಣ್ಣ, ವಿಎಚ್‌ಎಸ್ ರಾಜ್ಯಾಧ್ಯಕ್ಷ ನಿಕುಂಜ್ ಶಾ, ಸದಸ್ಯರಾದ ನಟರಾಜ್, ರವಿಶಂಕರ್, ವಕೀಲರಾದ ಪಾರ್ಥ್, ಶ್ರೀಕಂಠ ಶರ್ಮಾ, ಮಂಜುನಾಥ್ ಅವರುಗಳು ಹಾಜರಿದ್ದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೇಳಿಕೆಯಿಂದ ಕೊಡವ ಸಮಾಜಕ್ಕೆ ನೋವಾಗಿದ್ದರೆ ವಿಷಾದಿಸುತ್ತೇನೆ – ಸಿದ್ದರಾಮಯ್ಯ

    ಹೇಳಿಕೆಯಿಂದ ಕೊಡವ ಸಮಾಜಕ್ಕೆ ನೋವಾಗಿದ್ದರೆ ವಿಷಾದಿಸುತ್ತೇನೆ – ಸಿದ್ದರಾಮಯ್ಯ

    ಬೆಂಗಳೂರು: ನನ್ನ ಹೇಳಿಕೆಯಿಂದ ಕೊಡವ ಸಮಾಜಕ್ಕೆ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದಾರಮಯ್ಯ ಹೇಳಿದ್ದಾರೆ.

    ಕೊಡವರೂ ಬೀಫ್‌ ತಿನ್ನುತ್ತಾರೆ ಎಂಬ ನನ್ನ ಹೇಳಿಕೆ ತಪ್ಪುಗ್ರಹಿಕೆಯಿಂದ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಕೊಡವ ಸಮುದಾಯಕ್ಕೆ ನೋವಾಗಿದ್ದರೆ ಈ ಬಗ್ಗೆ ನಾನು ವಿಷಾದಿಸುತ್ತೇನೆ. ನನ್ನ ನೆರೆಯ ಜಿಲ್ಲೆಯಾದ ಕೊಡಗಿನ ಸಂಸ್ಕೃತಿ ಬಗ್ಗೆ ನನಗೆ ಅರಿವಿದೆ. ವಿಶೇಷವಾದ ಗೌರವವೂ ಇದೆ ಎಂದು ಟ್ವೀಟ್‌ ಮಾಡಿದ್ದಾರೆ.

    ಸಿದ್ದರಾಮಯ್ಯ ಹೇಳಿದ್ದು ಏನು?
    ತಮ್ಮ ಮೈಸೂರಿನ ಭಾಷಣದಲ್ಲಿ ಬಿಜೆಪಿ ಸರ್ಕಾರದ ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಮಾತನಾಡುತ್ತಾ, ಸಿದ್ದರಾಮಯ್ಯ ಗೋಹತ್ಯೆ ಪರವಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಬೀಫ್ ಅನ್ನು‌ ಮುಸ್ಲಿಮರು ಮಾತ್ರ ತಿನ್ನುತ್ತಾರಾ? ಕ್ರೈಸ್ತರು ತಿನ್ನುತ್ತಾರೆ, ದಲಿತರು ತಿನ್ನುತ್ತಾರೆ. ಕೊಡವರು ತಿನ್ನುತ್ತಾರೆ. ಬೇರೆ ಬೇರೆ ಕಡೆ ತಿನ್ನುತ್ತಾರೆ. ಹಿಂದುಳಿದವರು ತಿನ್ನುತ್ತಾರೆ. ನನಗೆ ತಿನ್ನಬೇಕು ಅಂತ ಅನಿಸಿದ್ರೆ ನಾನು ಯಾವುದು ಬೇಕಾದರೂ ತಿನ್ನುತ್ತೇನೆ. ಅದನ್ನು ಪ್ರಶ್ನೆ ಮಾಡಲು ನೀನು ಯಾರು ಅಂತ ನಾನು ಈ ಹಿಂದೆ ಸದನದಲ್ಲಿ ಪ್ರಶ್ನೆ ಮಾಡಿದ್ದೆ. ನನಗೆ ಯಾವುದು ಇಷ್ಟ ಆಗುತ್ತದೋ ಅದನ್ನು ತಿನ್ನುತ್ತೇನೆ ಎಂದು ಹೇಳಿದ್ದರು.

    ಅರ್ಥ ಕಲ್ಪಿಸಬೇಡಿ:
    ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಸೋಲಿಗೆ ಅಲ್ಲಿನ ಕೆಲವು ಸ್ಥಳೀಯ ಕಾಂಗ್ರೆಸ್ ನಾಯಕರು ಕಾರಣ ಎಂದು ಹೇಳಿದ್ದೇನೆಯೇ ಹೊರತು ರಾಜ್ಯ ಮಟ್ಟದ ನಾಯಕರೆಂದು ಹೇಳಿಲ್ಲ. ವಿಪರೀತಾರ್ಥ ಕಲ್ಪಿಸುವುದು ಬೇಡ. ಕಾಂಗ್ರೆಸ್ ಪಕ್ಷ ರೈತರ ಹೋರಾಟಗಳಿಗೆ ಬೆಂಬಲ ನೀಡುವ ಜೊತೆಗೆ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡಲಿದೆ. ದೇಶದ ಕೃಷಿ ವ್ಯವಸ್ಥೆಗೆ ಮಾರಕವಾದ ಕಾಯ್ದೆಗಳ ಜಾರಿಗೆ ನಮ್ಮ ಪ್ರಬಲ ವಿರೋಧವಿದೆ ಎಂದು ಟ್ವೀಟ್‌ ಮಾಡಿದ್ದಾರೆ.