Tag: ಕೊಡವ

  • ಭುವನ್-ಹರ್ಷಿಕಾ ಮದುವೆ: ಗಣ್ಯರಿಗೆ ಆಮಂತ್ರಣ

    ಭುವನ್-ಹರ್ಷಿಕಾ ಮದುವೆ: ಗಣ್ಯರಿಗೆ ಆಮಂತ್ರಣ

    ಲವು ವರ್ಷಗಳಿಂದ ಸ್ನೇಹಿತರಾಗಿದ್ದ ನಟ ಭುವನ್ (Bhuvan) ಹಾಗೂ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಸಹವಾಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ. ಈಗಾಗಲೇ ಬ್ಯಾಚುಲರ್ ಪಾರ್ಟಿ ಮುಗಿಸಿಕೊಂಡು ಬಂದಿರುವ ಈ ಜೋಡಿ, ಇದೀಗ ತಮ್ಮ ಮದುವೆಗೆ ಗಣ್ಯರನ್ನು ಆಹ್ವಾನಿಸುತ್ತಿದೆ.

    ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ (Virajpet) ಅದ್ದೂರಿಯಾಗಿ ವಿವಾಹ ಮಹೋತ್ಸವ ನಡೆಯಲಿದ್ದು, ಸಾಕಷ್ಟು ಸಿದ್ದತೆಗಳನ್ನು ಮಾಡಲಾಗುತ್ತಿದೆ. ಕೊಡವ (Kodava) ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ಮದುವೆಯಾಗುತ್ತಿದ್ದು (Marriage), ಅದಕ್ಕಾಗಿ ವಿರಾಜಪೇಟೆಯ ‘ಅಮ್ಮತಿ ಕೊಡವ ಸಮಾಜ’ ಸಿಂಗಾರಗೊಳ್ಳಲಿದೆ.

    ಈಗಾಗಲೇ ಸಿನಿಮಾ ಹಾಗೂ ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ನೀಡಿರುವ ಜೋಡಿ,  ಸಿಎಂ ಸಿದ್ದರಾಮಯ್ಯ,  ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ಗಣ್ಯರನ್ನು ಮದುವೆಗೆ ಈ ಜೋಡಿ ಆಹ್ವಾನಿಸಿದೆ. ಇದನ್ನೂ ಓದಿ:ಫೋನ್ ಸ್ವಿಚ್ ಆಫ್ ಮಾಡಿಕೊಂಡ ನಟ: ಉಪೇಂದ್ರಗಾಗಿ ಪೊಲೀಸರಿಂದ ತೀವ್ರ ಶೋಧ

    ಸಿನಿಮಾ ತಾರೆಯರಾದ ಶಿವರಾಜ್ ಕುಮಾರ್, ರವಿಚಂದ್ರನ್, ಗಣೇಶ್ , ದೊಡ್ಡಣ್ಣ, ಶ್ರೀನಾಥ್  ಜಯಮಾಲ, ಸುಧಾರಾಣಿ, ತಾರಾ, ಮಾಲಾಶ್ರೀ, ಅನುಪ್ರಭಾಕರ್,  ಅಮೂಲ್ಯ, ದಿಗಂತ್, ಅಶ್ವಿನಿ ಪುನೀತ್ ರಾಜ್ ಕುಮಾರ್ , ರಾಘವೇಂದ್ರ ರಾಜ್ ಕುಮಾರ್, ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ, ದುನಿಯಾ ವಿಜಯ್ ಸೇರಿದಂತೆ ಅನೇಕ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ ಭುವನ್ ಮತ್ತು ಹರ್ಷಿಕಾ.

     

    ಇಬ್ಬರೂ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ ಮತ್ತು ರಾಜಕೀಯ ಗಣ್ಯರ ಜೊತೆಯೇ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ಎರಡೂ ಕ್ಷೇತ್ರಗಳಿಂದಲೇ ಅನೇಕ ಗಣ್ಯರು ಮದುವೆಗೆ ಬರುವ ಸಾಧ್ಯತೆಯಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪರವಾನಗಿ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ  ಸುಪ್ರೀಂ ನೋಟಿಸ್‌

    ಪರವಾನಗಿ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

    ನವದೆಹಲಿ: ಪರವಾನಗಿ ಇಲ್ಲದೆ ಬಂದೂಕುಗಳನ್ನು ಹೊಂದಲು ಮತ್ತು ಸಾಗಿಸಲು ಕೊಡವ ಸಮುದಾಯದವರಿಗೆ ನೀಡಿದ ಅವಕಾಶವನ್ನು ಪ್ರಶ್ನೆ ಮಾಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾ. ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

    ಕೊಡವರಿಗೆ ನೀಡಿದ ಅನುಮತಿ ಸಾಂವಿಧಾನಿಕ ಸಿಂಧುತ್ವ ಹೊಂದಿದೆ. ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ನಿವೃತ್ತ ಕ್ಯಾಪ್ಟನ್ ಚೇತನ ವೈ.ಕೆ. ಎನ್ನುವರು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ಈ ಸಂಬಂಧ ಉತ್ತರಿಸಲು ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

    ಜಾತಿ, ಜನಾಂಗದ ಪೂರ್ವಿಕರ ಭೂ ಒಡೆತನದ ಮೇಲೆ ತಾರತಮ್ಯ ಮಾಡಲಾಗುತ್ತಿದೆ. ಇದು ಸಂವಿಧಾನದ 14, 15 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 41ರ ಪ್ರಕಾರ, ಸಾರ್ವಜನಿಕ ಹಿತಾಸಕ್ತಿಯಿಂದ ಮಾತ್ರ ಶಸ್ತ್ರಾಸ್ತ್ರ ಪರವಾನಗಿ ಪಡೆಯುವುದರಿಂದ ವಿನಾಯಿತಿ ನೀಡಬಹುದು. ಆದರೆ, ಕೊಡವ ಸಮುದಾಯಕ್ಕೆ ಅಂತಹ ವಿನಾಯಿತಿ ನೀಡುವ ಕುರಿತು ಅಧಿಸೂಚನೆಯಲ್ಲಿ ಯಾವುದೇ ಕಾರಣವನ್ನು ನೀಡಲಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕಾರವಾರ ಬಂದರು ವಿಸ್ತರಣೆ ಕಾಮಗಾರಿ ಮುಂದುವರಿಸಬೇಡಿ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ

    ಸಮರ ಸಮುದಾಯವಾಗಿರುವ ಕೊಡವ ಸಮುದಾಯವು ಸ್ವಾತಂತ್ರ್ಯ ಪೂರ್ವದಿಂದಲೂ ಜುಮ್ಮಾ ಹಿಡುವಳಿದಾರರು, ಅಂದಿನಿಂದ ಅವರು ಈ ವಿನಾಯಿತಿಯ ಲಾಭವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಈಗಲೂ ಅವರಿಗೆ ಅನಿರ್ದಿಷ್ಟ ಅವಧಿಗೆ ವಿನಾಯಿತಿ ನೀಡಲಾಗಿದೆ. ಈ ವಿನಾಯಿತಿ ಕೆಲವು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ, ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಲಾಗಿದೆ ಎಂದು ಈ ಹಿಂದೆ ಹೈಕೋರ್ಟ್ ಆದೇಶದಲ್ಲಿ ತಿಳಿಸಿತ್ತು. ಇದನ್ನೂ ಓದಿ: ನನ್ನ ಮೇಲೆ ಯಾವ ಕೇಸ್ ಇತ್ತು, ಹೆಂಗೆ ನನ್ನ ಜೈಲಿಗೆ ಕಳಿಸಿದ್ರು, ನನ್ನ ಮೇಲೆ ಯಾವ ದಾಖಲೆ ಇದೆ: ಡಿಕೆಶಿ

    ಕೊಡಗಿನ ಜನರ ವಿಶಿಷ್ಟ ಸಂಸ್ಕೃತಿಯ ಭಾಗ ಕೋವಿ. ಯೋಧ ಪರಂಪರೆಯ ಜನಾಂಗ ಕೊಡವರಿಗೆ ಕೋವಿ ಬಳಸಲು ವಿಶೇಷ ವಿನಾಯಿತಿಯ ಅನುಮತಿಯಿದೆ. ಇಂಡಿಯನ್ ಆರ್ಮ್ಸ್ ಆಕ್ಟ್ ಸೆಕ್ಷನ್ ಮೂರರ ಪ್ರಕಾರ ಯಾರಿಗೂ ಇಲ್ಲದ ಅನುಮತಿ ಕೊಡವರಿಗೆ ಇದೆ. ಕೊಡಗಿನ ಜನರ ಹಬ್ಬ ಹರಿದಿನ. ಹುಟ್ಟು, ಸಾವು ಎಲ್ಲದರಲ್ಲಿಯೂ ಕೋವಿಯ ಮಹತ್ವವಿದೆ. ಬಂದೂಕು ಕೊಡವರಿಗೆ ಕೇವಲ ಒಂದು ಅಯುಧವಲ್ಲ, ಇದು ಇಲ್ಲಿನ ಜನರ ಧಾರ್ಮಿಕ ಸಂಕೇತ ಕೊಡವರಲ್ಲಿ ಕೋವಿಗೆ ಪೂಜ್ಯಭಾವನೆಯಿದೆ, ಪವಿತ್ರ ಸ್ಥಾನವಿದೆ.

  • ಸಂಸ್ಕೃತ ಭಾಷೆಯ ಮೇಲಿನ ಮಮತೆಯನ್ನು ತುಳು, ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ.ಕೆ. ಹರಿಪ್ರಸಾದ್

    ಸಂಸ್ಕೃತ ಭಾಷೆಯ ಮೇಲಿನ ಮಮತೆಯನ್ನು ತುಳು, ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ.ಕೆ. ಹರಿಪ್ರಸಾದ್

    ಬೆಂಗಳೂರು: ಬಿಜೆಪಿ ಸರ್ಕಾರ ರಾಜ್ಯದ ಕೇವಲ 24,821 ಸಂಸ್ಕೃತ ಭಾಷಿಗರ ಮೇಲೆ ತೋರಿಸುತ್ತಿರುವ ಅಗಾಧ ಮಮತೆಯನ್ನು ನಮ್ಮ ರಾಜ್ಯದಲ್ಲಿ ಮೂಲೆ ಗುಂಪಾಗಿರುವ ತುಳು ಮತ್ತು ಕೊಡವ ಭಾಷೆಗಳ ಮೇಲೆ ತೋರಿಸಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ.

    ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿರುವ ಒಟ್ಟು ತುಳುವರ ಸಂಖ್ಯೆ 18,46,427 ಹಾಗೆಯೇ ಕೊಡವ ಭಾಷೆಯನ್ನಾಡುವವರ ಸಂಖ್ಯೆ 1,13,857. ಆದರೆ, ಸಂಸ್ಕೃತ ಭಾಷೆಯನ್ನು ತಮ್ಮ ಮಾತೃಭಾಷೆಯೆಂದು ದಾಖಲಿಸಿದವರ ಸಂಖ್ಯೆ 24,821 ಮಾತ್ರ. ಇಷ್ಟು ಕಡಿಮೆ ಜನಸಂಖ್ಯೆಯ ಮೇಲೆ ಬಿಜೆಪಿ ಸರ್ಕಾರ ತನ್ನ ಅಗಾಧ ಪ್ರೀತಿಯನ್ನು ತೋರಿಸುತ್ತಾ ಬಂದಿದೆ. ಈಗಾಗಲೇ ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವಿದೆ. ಅದಕ್ಕೆ ಬೇಕಾದಂತಹ ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ತುಳು ಮತ್ತು ಕೊಡವ ಭಾಷೆಗಳ ಅಭಿವೃದ್ದಿಯತ್ತ ಮಾತ್ರ ದಿವ್ಯ ನಿರ್ಲಕ್ಷವನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಆಕ್ಟ್ -1978’ ಸಿನಿಮಾ ಪ್ರೇರಣೆ – ಬ್ಯಾಂಕ್ ಮುಂದೆ ಪ್ರತಿಭಟಿಸಿ ನ್ಯಾಯ ಪಡೆದ ಮಹಿಳೆ

    ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಪ್ರಭಾವಿ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಬಂದವು. ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾಗಿವೆ. ದೇಶದಲ್ಲಿ ಹಲವಾರು ರಾಜ್ಯಗಳು ತಮ್ಮ ಒಂದಕ್ಕೂ ಹೆಚ್ಚು ಭಾಷೆಗಳನ್ನು ಅಧಿಕೃತವಾಗಿ ಘೋಷಿಸಿಕೊಂಡಿವೆ. ಆದರೆ ಕರ್ನಾಟಕ ರಾಜ್ಯ ಕನ್ನಡವನ್ನು ಹೊರತುಪಡಿಸಿ ಬೇರೆ ಭಾಷೆಗಳಿಗೆ ಅಧಿಕೃತ ಸ್ಥಾನ ನೀಡಿಲ್ಲ. ಬಹುಜನರು ದಿನನಿತ್ಯ ಉಪಯೋಗಿಸುವ ಕೊಡವ, ತುಳು ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಮಾನ್ಯ ಮಾಡಬಹುದಾಗಿದೆ. ಮಾನ್ಯ ಮಾಡದೇ ಇರುವುದರಿಂದ ಕೇಂದ್ರ ಸರ್ಕಾರ ಸುಲಭವಾಗಿ ನುಣುಚಿಕೊಳ್ಳುತ್ತಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಭಾಷೆಗಳಾದ ತುಳು ಮತ್ತು ಕೊಡವ ಭಾಷೆಗಳನ್ನು ರಾಜ್ಯ ಸರ್ಕಾರ ಮೊದಲು ತನ್ನ ಅಧಿಕೃತ ಭಾಷೆಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ

    ಸಂಸ್ಕೃತಕ್ಕೆ ನೀಡುತ್ತಿರುವಷ್ಟೇ ಮಹತ್ವವನ್ನು ನಮ್ಮ ಕನ್ನಡ, ತುಳು ಹಾಗೂ ಕೊಡವ ಭಾಷೆಗೂ ನೀಡುವ ಮೂಲಕ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿಯನ್ನು ಬಿಡಬೇಕು. ಹಾಗೆಯೇ ನಮ್ಮ ಭಾಷೆಗಳ ಅಭಿವೃದ್ದಿಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನೆಚ್ಚಿನ ಶಿಕ್ಷಕನ ವರ್ಗಾವಣೆ – ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು

  • ಕೊಡವ ಸಂಪ್ರದಾಯದಂತೆ ನಟಿ ಸೌಜನ್ಯ ಅಂತ್ಯಕ್ರಿಯೆ

    ಕೊಡವ ಸಂಪ್ರದಾಯದಂತೆ ನಟಿ ಸೌಜನ್ಯ ಅಂತ್ಯಕ್ರಿಯೆ

    ಮಡಿಕೇರಿ: ಕುಟುಂಬಸ್ಥರ ಆಕ್ರಂದನದ ಮಧ್ಯೆ ನಟಿ ಸೌಜನ್ಯ ಅವರ ಅಂತ್ಯಕ್ರಿಯೆ ಕೊಡಗಿನ ಸುಂಟಿಕೊಪ್ಪದ ಅಂದಗೋವೆಯಲ್ಲಿ ನಡೆದಿದೆ. ಸೌಜನ್ಯ ನೇಣು ಹಾಕಿಕೊಂಡೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಪೊಲೀಸರಿಗೆ ಮೌಖಿಕ ಮಾಹಿತಿ ಸಿಕ್ಕಿದೆ.

    ಮೃತ ದೇಹ ಸ್ವಗ್ರಾಮಕ್ಕೆ ಅಗಮಿಸುತ್ತಿರುವ ವೇಳೆಗೆ ಗ್ರಾಮಸ್ಥರ ಹಾಗೂ ಕುಟುಂಬ ಸದಸ್ಯರ ರೋದನೆ ಮುಗ್ಗಿಲು ಮುಟ್ಟಿತು. ನಟಿ ಸೌಜನ್ಯ ಮೃತ ದೇಹವನ್ನು ಚಿಕ್ಕಂಡ ಕುಟುಂಬದ ಐನ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅವಿವಾಹಿತಳಾಗಿದ್ದ ಕಾರಣ ಕೊಡವ ಸಾಂಪ್ರದಾಯದಂತೆ ಬಾಳೆ ವಿವಾಹ ಮಾಡಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇದನ್ನೂ ಓದಿ: ನಾನು, ಸೌಜನ್ಯ ಲಿವಿಂಗ್ ಟುಗೆದರ್‌ನಲ್ಲಿ ಇರಲಿಲ್ಲ: ವಿವೇಕ್

    ಈ ನಡುವೆ ನಟಿ ಸೌಜನ್ಯ ಮಾದಪ್ಪ ಗ್ರಾಮಕ್ಕೆ ಬಂದಾಗಲ್ಲೆಲ್ಲ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾನಾಡಿಸುತ್ತಿದ್ರು. ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದ ದಿನಗಳನ್ನು ಗ್ರಾಮಸ್ಥರು ಅಂತಿಮ ಕ್ಷಣದ ಘಟನೆಗಳನ್ನು ನೆನಪಿಸಿಕೊಂಡರು. ಇದನ್ನೂ ಓದಿ: ಚಪಾತಿ, ಪಲ್ಯ ಮಾಡಿದ್ದೆ, ತಿನ್ನೋಕೆ ಮಗಳೇ ಬರಲಿಲ್ಲ- ನಟಿ ಸೌಜನ್ಯ ತಾಯಿ ಕಣ್ಣೀರು

    ತಂದೆ ಪ್ರಭುಮಾದಪ್ಪ ಅವರು ಸೌಜನ್ಯ ಗೆಳೆಯ ವಿವೇಕ್ ಹಾಗೂ ಪಿಎ ಮಹೇಶ್ ಮೇಲೆ ಅನುಮಾನ ವ್ಯಕ್ತಪಡಿಸಿ ಕುಂಬಳಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್‍ಐಆರ್ ಕೂಡ ದಾಖಲಾಗಿದೆ. ಆದರೆ, ಆರೋಪವನ್ನು ವಿವೇಕ್, ಪಿ ಮಹೇಶ್ ಅಲ್ಲಗೆಳೆದಿದ್ದಾರೆ. ಗೆಳೆಯ ವಿವೇಕ್ ಜೊತೆ ಮದುವೆ ಪೋಷಕರು ವಿರೋಧಿಸಿದ್ದರು. ಜೊತೆಗೆ, ಸಿನಿಮಾ, ಸೀರಿಯಲ್‍ಗಳಲ್ಲಿ ಅವಕಾಶ ಸಿಗದ ಕಾರಣ ಸೆಲೆಬ್ರಿಟಿ ಜೀವನ ನಡೆಸೋದು ಕಷ್ಟವಾಗಿ ಪೋಷಕರಿಂದ ಹಣ ಪಡೆಯುತ್ತಿದ್ದರು. ಈ ಬಗ್ಗೆ ಸೌಜನ್ಯಗೆ ಕೊರಗಿತ್ತು. ಆರೋಗ್ಯ ಸಮಸ್ಯೆಯೂ ಕಾಡ್ತಿತ್ತು ಅಂತ ಮೂಲಗಳು ತಿಳಿಸಿವೆ. ಸೌಜನ್ಯ ರೂಮ್‍ನಲ್ಲಿದ್ದ ಹಣ, ಮೊಬೈಲ್ ಎಲ್ಲ ಕಾಣೆಯಾಗಿದೆ. ಅವು ಸಿಕ್ಕರೆ ಮತ್ತಷ್ಟು ಸಾಕ್ಷ್ಯ ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು

  • ಕೊಡಗಿನಲ್ಲಿ ಇಂದು ಕೋವಿ ಉತ್ಸವದ ಸಂಭ್ರಮ

    ಕೊಡಗಿನಲ್ಲಿ ಇಂದು ಕೋವಿ ಉತ್ಸವದ ಸಂಭ್ರಮ

    ಮಡಿಕೇರಿ: ಕೊಡಗಿನ ಕೊಡವರ ಪ್ರತಿಯೊಂದು ಅಚರಣೆಗಳು ಭಿನ್ನ, ವಿಶಿಷ್ಟ. ಇಂತಹ ಅಚರಣೆಗಳ ಸಾಲಿಗೆ ಹೊಸ ಸೇರ್ಪಡೆ ಎಂಬಂತೆ ಕೋವಿ ಉತ್ಸವ ಭರ್ಜರಿಯಾಗಿ ನಡೆಯಿತು.

    ಕೊಡಗಿನ ಜನರ ವಿಶಿಷ್ಟ ಸಂಸ್ಕ್ರತಿಯ ಭಾಗ ಕೋವಿ. ಯೋಧ ಪರಂಪರೆಯ ಜನಾಂಗ ಕೊಡವರಿಗೆ ಕೋವಿ ಬಳಸಲು ವಿಶೇಷ ವಿನಾಯಿತಿಯ ಅನುಮತಿಯಿದೆ. ಇಂಡಿಯನ್ ಆರ್ಮ್ಸ್ ಆಕ್ಟ್ ಸೆಕ್ಷನ್ ಮೂರರ ಪ್ರಾಕಾರ ಯಾರಿಗೂ ಇಲ್ಲದ ಅನುಮತಿ ಕೊಡವರಿಗೆ ಇದೆ. ಕೊಡಗಿನ ಜನರ ಹಬ್ಬ ಹರಿದಿನ. ಹುಟ್ಟು, ಸಾವು ಎಲ್ಲದರಲ್ಲಿಯೂ ಕೋವಿಯ ಮಹತ್ವವಿದೆ. ಬಂದೂಕು ಕೊಡವರಿಗೆ ಕೇವಲ ಒಂದು ಅಯುಧವಲ್ಲ, ಇದು ಇಲ್ಲಿನ ಜನರ ಧಾರ್ಮಿಕ ಸಂಕೇತ ಕೊಡವರಲ್ಲಿ ಕೋವಿಗೆ ಪೂಜ್ಯಭಾವನೆಯಿದೆ, ಪವಿತ್ರ ಸ್ಥಾನವಿದೆ.

    ಪ್ರತಿ ಮನೆಯಲ್ಲಿಯೂ ಹಬ್ಬ ಹರಿದಿನಗಳಂದು ದೇವರಂತೆಯೇ ಕೋವಿಗೂ ಪೂಜೆ ಸಲ್ಲುತ್ತದೆ. ಇದೆಲ್ಲದರ ಸಂಕೇತವಾಗಿ ಕೋವಿ ಉತ್ಸವ ಶುರುವಾಗಿದೆ. ಕಳೆದ 10 ವರ್ಷದಿಂದ ಈ ಕೋವಿ ಉತ್ಸವಕ್ಕೆ ಕೊಡಗಿನಲ್ಲಿ ಚಾಲನೆ ಸಿಕ್ಕಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೊಳಗೇರಿಯಲ್ಲಿ ಇಂದು ನಡೆದ ಈ ವಿಶಿಷ್ಟ ಉತ್ಸವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಪುರುಷ, ಮಹಿಳೆ ಎಂಬ ಭೇದವಿಲ್ಲದೆ ಎಲ್ಲರೂ ಗುಂಡು ಸಿಡಿಸಿ ಸಂಭ್ರಮಿಸಿದರು.

    ಸಾಂಪ್ರದಾಯಿಕ ಉಡುಗೆತೊಟ್ಟ ನೂರಾರು ಕೊಡವರು ಮೈದಾನದಲ್ಲಿ ಜಮಾಯಿಸಿ, ಎಲ್ಲ ಬಂದೂಕುಗಳನ್ನು ಒಂದೆಡೆ ಇಟ್ಟು, ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ನಂತರ ತೆಂಗಿನ ಕಾಯಿಗೆ ಗುಂಡು ಹೊಡೆಯೋ ಆಟವಾಡಿ, ಬಂದೂಕು ತಮ್ಮ ಹಕ್ಕು ಎಂಬುದನ್ನು ಸಾರುತ್ತಾರೆ. ಮಹಿಳೆಯರು, ಪುರುಷರು ಎಲ್ಲರೂ ಗುರಿಯಿಟ್ಟು ತೆಂಗಿನ ಕಾಯಿಗೆ ಹೊಡೆಯುತ್ತಾ ಕೇಕೆ ಹಾಕಿ ಕುಣಿದು ಕುಪ್ಪಳಿಸಿ ಕೋವಿ ಉತ್ಸವವನ್ನು ಎಂಜಾಯ್ ಮಾಡುತ್ತಾರೆ.

    ಡಿಸೆಂಬರ್ 18 ವಿಶ್ವ ಅಲ್ಪ ಸಂಖ್ಯಾತರ ದಿನಾಚರಣೆ ಹಾಗಾಗಿ ಕಳೆದ 10 ವರ್ಷದಿಂದ ಈ ದಿನದಂದು ಸಿ.ಎನ್.ಸಿ ಕೋವಿ ಉತ್ಸವ ಆಚರಿಸುತ್ತಾ ತಮ್ಮ ಸಂಸ್ಕ್ರತಿಯ ಭಾಗವೇ ಅದ ಕೋವಿಯನ್ನು ಸಾರ್ವಜನಿಕವಾಗಿ ಬಳಸುತ್ತ ಕೋವಿ ತಮ್ಮ ಹಕ್ಕು ಎಂಬುದನ್ನು ಸಾರುತ್ತಿದೆ. ಇದನ್ನು ನಾವು ಬಳಸೋದು ಪ್ರಾಣ ರಕ್ಷಣೆಗಾಗಿ ಅಲ್ಲ. ಬದಲಾಗಿ ಕೋವಿಗೆ ಕೊಡವರಲ್ಲಿ ಪೂಜ್ಯಭಾವನೆಯು ಇದೆ ಎನ್ನುತ್ತಾರೆ ಕೊಡವರು.

  • ಕೊಡವರಿಂದ ಅದ್ಧೂರಿಯಾಗಿ ಕಕ್ಕಡ ಹಬ್ಬ ಆಚರಣೆ-ಫೋಟೋಗಳಲ್ಲಿ ನೋಡಿ

    ಕೊಡವರಿಂದ ಅದ್ಧೂರಿಯಾಗಿ ಕಕ್ಕಡ ಹಬ್ಬ ಆಚರಣೆ-ಫೋಟೋಗಳಲ್ಲಿ ನೋಡಿ

    ಕೊಡಗು: ಜಿಲ್ಲೆಯಲ್ಲಿ ಇಂದು ಕೊಡವ ಸಮುದಾಯದ ಜನರು ಎಲ್ಲಡೆ ‘ಕಕ್ಕಡ ಪದಿನೆಟ್’ ಎಂದು ಕರೆಯಲಾಗುವ ಆಟಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

    18 ಔಷದ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪನ್ನು ಮನೆಗೆ ತಂದು ಅದರಿಂದ ರುಚಿ ರುಚಿಯಾದ ಖಾದ್ಯಗಳನ್ನು ತಯಾರು ಮಾಡುತ್ತಾರೆ. ಈ ಮದ್ದು ಸೊಪ್ಪಿನಿಂದ ತಯಾರಿಸುವ ಪಾಯಸವನ್ನು ಸೇವಿಸುವದರಿಂದ ಶೀತಕ್ಕೆ ಸಂಬಂಧಿಸಿದ ರೋಗಗಳು ಬರುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

    ಉದ್ದನೆಯ ಕಡ್ಡಿಯಲ್ಲಿ ಎಲೆಗಳನ್ನು ತುಂಬಿರುವ ಈ ಗಿಡಗಳು ಕೊಡಗಿನ ಅರಣ್ಯ ಪ್ರದೇಶಗಳಲ್ಲಿ ಬೆಳೆಯುತ್ತವೆ. ಈ ಎಲೆಗಳನ್ನು ಮಡಿಕೇರಿ, ವಿರಾಜಪೇಟೆ ಸೇರಿದಂತೆ ನಗರದ ವಿವಿಧೆಡೆ ಮಾರಾಟ ಮಾಡಲಾಗುತ್ತದೆ. ಆಟಿ ಅಥವಾ ಅಷಾಡಮಾಸದ 18 ನೇ ದಿನ 18 ಗಿಡಮೂಲಿಕೆ ಔಷಧಿಗಳ ಗುಣಗಳನ್ನು ಮೈದುಂಬಿಕೊಳ್ಳೋ ಈ ವಿಶೇಷ ಸೊಪ್ಪನ್ನು ಮಾರುಕಟ್ಟೆಯಿಂದ ಖರೀದಿಸಿ ಮನೆಗೆ ತಂದು ಅದರಿಂದ ಪಾಯಸ ಹಾಗೂ ಹಲ್ವಾ ಸೇರಿದಂತೆ ಹಲವು ಬಗೆ ಬಗೆಯ ತಿಂಡಿಗಳನ್ನ ತಯಾರಿಸಿ ಸವಿಯುತ್ತಾರೆ.

    ಆಧುನೀಕತೆಯಲ್ಲಿ ಜನರು ಇಂತಹ ಗ್ರಾಮೀಣ ಹಬ್ಬಗಳನ್ನು ಆಚರಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪ್ರದಾಯವನ್ನು ಉಳಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸಾರ್ವಜನಿಕವಾಗಿ ಆಟಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಂಡು ಬರುತ್ತಿದೆ. ಈ ಹಬ್ಬವನ್ನು ಇನ್ನೂ ನಾಲ್ಕೈದು ದಿನಗಳವರೆಗೆ ಆಚರಿಸಲಾಗುತ್ತದೆ.

  • ಕೊಡಗಿನ ಕೌಟುಂಬಿಕ ಹಾಕಿ ಉತ್ಸವಕ್ಕೆ ಚಾಲನೆ

    ಕೊಡಗಿನ ಕೌಟುಂಬಿಕ ಹಾಕಿ ಉತ್ಸವಕ್ಕೆ ಚಾಲನೆ

    ಕೊಡಗು: ಜಿಲ್ಲೆಯ ಪ್ರಸಿದ್ಧ ಕೌಟುಂಬಿಕ ಹಾಕಿ ಉತ್ಸವಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ. ಸಂಭ್ರಮ ಸಡಗರದ ನಡುವೆ ಸಹಸ್ರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಹಾಕಿ ಹಬ್ಬ ಪ್ರಾರಂಭಗೊಂಡಿದೆ. ಇಂದಿನಿಂದ ಒಂದು ತಿಂಗಳು ನಡೆಯುವ ಹಾಕಿ ಹಬ್ಬದಲ್ಲಿ 306 ಕೊಡವ ಕುಟುಂಬದ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

    ಒಲಿಂಪಿಯನ್ ಎ.ಬಿ ಸುಬ್ಬಯ್ಯ ಅವರು ಕಾರ್ಯಕ್ರಮ ಉದ್ಘಾಟಿಸೋ ಮೂಲಕ ಸಹಸ್ರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಹಾಕಿ ಹಬ್ಬಕ್ಕೆ ಚಾಲನೆ ನೀಡಿದರು. ಹಾಕಿ ಉತ್ಸವದ ಸಂಸ್ಥಾಪಕ ಪಾಂಡಂಡ ಕುಟ್ಟಪ್ಪಾ ಬೆಳ್ಳಿ ಹಾಕಿ ಸ್ಟಿಕ್‍ನಲ್ಲಿ ಬೆಳ್ಳಿ ಚೆಂಡನ್ನು ಹೊಡೆಯೋ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಮಡಿಕೇರಿ ತಾಲೂಕಿನ ನಾಪೋಕ್ಲುವಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ಭಾರತ ವಿಶ್ರಾಂತ ತಂಡ ಹಾಗೂ ಕೂರ್ಗ್ ರೆಜಿಮೆಂಟ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಿತು.

    ಕಳೆದ 21 ವರ್ಷಗಳಿಂದ ನಡೆಯುತ್ತಿರುವ ಕೊಡಗಿನ ಈ ಹಾಕಿ ಉತ್ಸವ ವರ್ಷದಿಂದ ವರ್ಷಕ್ಕೆ ರಂಗೇರುತ್ತಿದೆ. ಕೊಡಗಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ ಶುರುವಾದ ಈ ಹಾಕಿ ಹಬ್ಬ ಉತ್ತಮ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ಒಂದೊಂದು ಕುಟುಂಬಗಳು ಆಯೋಜನೆ ಮಾಡೋ ಕೌಟುಂಬಿಕ ಹಾಕಿಯನ್ನು ಈ ಬಾರಿ ಬಿದ್ದಾಟಂಡ ಕುಟುಂಬಸ್ಥರು ನಡೆಸುತ್ತಿದ್ದಾರೆ. ಮುಂದಿನ ಒಂದು ತಿಂಗಳು ಇದೇ ಮೈದಾನದಲ್ಲಿ ರೋಮಾಂಚನಕಾರಿ ಪಂದ್ಯಗಳು ನಡೆಯಲಿವೆ.

  • ಕೊಡವ ಸಮುದಾಯದ ಜನ್ರಿಂದ ಸೌರಮಾನ ಯುಗಾದಿ ಆಚರಣೆ

    ಕೊಡವ ಸಮುದಾಯದ ಜನ್ರಿಂದ ಸೌರಮಾನ ಯುಗಾದಿ ಆಚರಣೆ

    ಕೊಡಗು: ಕೊಡವ ಸಮುದಾಯದ ಜನರು ತಮ್ಮ ಸಂಪ್ರದಾಯದಂತೆ ಇಂದು ಸೌರಮಾನ ಯುಗಾದಿಯನ್ನು ಆಚರಿಸಿದರು.

    ಕೊಡವ ಸಮುದಾಯದ ಜನ ಈ ಹಬ್ಬವನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಇಂದು ಗದ್ದೆಯಲ್ಲಿ ಸಾಂಕೇತಿಕವಾಗಿ ಉಳುಮೆ ಮಾಡಿದರೆ ಮುಂದೆ ಕೃಷಿ ಚಟುವಟಿಯಕೆಯಲ್ಲಿ ತೊಡುಗಲು ಶುಭ ದಿನವನ್ನು ಮತ್ತೆ ನೋಡಬೇಕಿಲ್ಲ ಎಂಬುವುದು ಕೊಡವ ಸಮುದಾಯದ ಜನರ ನಂಬಿಕೆ.

    ಇಂದು ಎಲ್ಲರೂ `ಎಡಮ್ಯಾರ್ ಒಂದ್’ ಹಬ್ಬವನ್ನು ಆಚರಣೆ ಮಾಡಿದರು. ಕೊಡವರ ಎಲ್ಲ ಆಚರಣೆಗಳ ಮೂಲ ಕೃಷಿ. ಬೆಳಗ್ಗೆ ದೇವರನ್ನು ಪ್ರಾರ್ಥಿಸಿ ಕೊಟ್ಟಿಗೆಯಲ್ಲಿದ್ದ ಎತ್ತುಗಳು ಹಾಗೂ ನೇಗಿಲುಗಳನ್ನು ಪೂಜಿಸಲಾಯಿತು. ಬಳಿಕ ಗದ್ದೆ ಉಳುಮೆ ಮಾಡುವ ಮೂಲಕ ವರ್ಷದ ಉಳುಮೆಗೆ ಚಾಲನೆ ನೀಡಲಾಯಿತು.

    ಮಡಿಕೇರಿ ತಾಲೂಕಿನ ಹೋದ್ದೂರು ಗ್ರಾಮದ ಐನ್ ಮನೆಯಲ್ಲಿ ಇಂದು ದೇವರಿಗೆ ಅಕ್ಕಿ ಹಾಕಿ ನಮಿಸಿ, ಗದ್ದೆಯಲ್ಲಿ ಎತ್ತುಗಳನ್ನು ಪೂಜಿಸಲಾಯಿತು.