Tag: ಕೊಡಚಾದ್ರಿ ಬೆಟ್ಟ

  • ಚಾರಣ ಸ್ನೇಹಿ ಬೆಟ್ಟ ಕೊಡಚಾದ್ರಿಯ ಪ್ರಮುಖ ಆಕರ್ಷಣೀಯ ಸ್ಥಳಗಳು

    ಚಾರಣ ಸ್ನೇಹಿ ಬೆಟ್ಟ ಕೊಡಚಾದ್ರಿಯ ಪ್ರಮುಖ ಆಕರ್ಷಣೀಯ ಸ್ಥಳಗಳು

    ಭೂಮಿ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ ಕೊಡಚಾದ್ರಿ (Kodachadri) ಬೆಟ್ಟವು ತನ್ನದೇ ಆದ ಪ್ರಾಕೃತಿಕ ಪರಂಪರೆಯನ್ನು ಹೊಂದಿರುವ ತಾಣವಾಗಿದೆ. ಪಶ್ಚಿಮ ಘಟ್ಟಗಳ ಭಾಗವಾಗಿರುವ ಇಲ್ಲಿನ ಅದ್ಭುತವಾದ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಕಾತರರಾಗಿರುತ್ತಾರೆ.

    ಪುರಾತನ ಕಾಲದಿಂದಲೂ ಜನ ಕೊಡಚಾದ್ರಿಗೆ ಜನ ಹೋಗುತ್ತಿದ್ದರಂತೆ. ಈ ಸ್ಥಳಕ್ಕೆ ಕ್ರಿ.ಶ 7ನೇ ಶತಮಾನದಲ್ಲಿ ಶಂಕರಾಚಾರ್ಯರು (Shankaracharya)   ಭೇಟಿ ಕೊಟ್ಟಿದ್ದರು. ಮೂಲ ಮೂಕಾಂಬಿಕೆಯನ್ನು (Kolluru Mookambika) ಪರ್ವತದ ತಳದಲ್ಲಿರುವ ಕೊಲ್ಲೂರಿನಲ್ಲಿ ಪ್ರತಿಷ್ಠೆ ಮಾಡಿದರು ಎಂದು ಇತಿಹಾಸ ಹೇಳುತ್ತದೆ.

    ಆಕರ್ಷಣೀಯ ಸ್ಥಳಗಳು: ನಾಗರ ಕೋಟೆ, ಕೊಲ್ಲೂರು ಮೂಕಾಂಬಿಕಾ ದೇವಾಲಯ, ಸಿಂಗದೂರು ದೇವಾಲಯ ಮತ್ತು ಜೋಗ್ ಜಲಪಾತ ಇವೆಲ್ಲವೂ ಕೊಡಚಾದ್ರಿ ಸಮೀಪದಲ್ಲಿರುವ ಪ್ರವಾಸಿ ಆಕರ್ಷಣೀಯ ಸ್ಥಳಗಳಾಗಿವೆ.

    ಇಷ್ಟು ಮಾತ್ರವಲ್ಲದೇ ಇಲ್ಲಿನ ತಂಪಾದ ಗಾಳಿ, ಪ್ರಕೃತಿಯ ಸೌಂದರ್ಯ, ಆಧ್ಯಾತ್ಮವನ್ನು ಇಮ್ಮಡಿಗೊಳಿಸುವ ಶ್ರೀ ಶಂಕರಾಚಾರ್ಯರ ಸರ್ವಜ್ಞ ಪೀಠ, ಗಣಪತಿ ಗುಹೆ ಅದ್ಭುತವಾದುದು. ನವವಧುವಿನಂತೆ ಸಿಂಗಾರಗೊಂಡಿರುವಂತೆ ಈ ಕೊಡಚಾದ್ರಿಯು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೊಡಚಾದ್ರಿ ಟ್ರಕ್ಕಿಂಗ್ ಹೋಗುವ ಪ್ಲಾನ್ ಇದ್ದರೆ ಗಣೇಶ ಗುಹೆಗೂ ಒಂದು ಬಾರಿ ಭೇಟಿ ಕೊಡಬಹುದು. ಆದಿ ಶಂಕರಾಚಾರ್ಯರು ಧ್ಯಾನ ಮಾಡಿದ್ದಾರೆಂದು ಹೇಳಲಾಗುತ್ತಿರುವ ಗಣೇಶ ಗುಹೆ ಬೆಟ್ಟದ ಮೇಲಿದೆ. ಇದರ ಜೊತೆ ಸರ್ವಜ್ಞ ಪೀಠ ನೋಡಲೇಬೇಕಾದ ತಾಣವಾಗಿದೆ.

    ಹೀಗೆ ಟ್ರೆಕ್ಕಿಂಗ್ ಮಾಡಿ ಕೊಡಚಾದ್ರಿಯಿಂದ 5 ಕಿ.ಮೀ ದೂರ ಇರುವ ಹಿಡ್ಲುಮನೆ ಜಲಪಾತವನ್ನೂ ನೋಡಬಹುದಾಗಿದೆ. ಜೊತೆಗೆ ಕೊಡಚಾದ್ರಿಯಿಂದ ಅರಬ್ಬೀ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡುವುದು ಈ ಚಾರಣದಲ್ಲಿ ಮರೆಯಲಾಗದ ಒಂದು ಅತ್ಯದ್ಭುತ ಅನುಭವವಾಗಿರುತ್ತದೆ. ಒಟ್ಟಿನಲ್ಲಿ ಬೆಟ್ಟದ ತುದಿಯವರೆಗೆ ಟ್ರೆಕ್ಕಿಂಗ್ ಹೋಗಲು ಎಲ್ಲೆಡೆಯಿಂದಲೂ ಜನ ಬರುತ್ತಿರುತ್ತಾರೆ.

    ಕೊಡಚಾದ್ರಿಗೆ ಹೋಗುವುದು ಹೇಗೆ?: ಸಿಲಿಕಾನ್ ಸಿಟಿಯಿಂದ ಕೊಡಚಾದ್ರಿ ಸುಮಾರು 430 ಕಿ.ಮೀ ದೂರದಲ್ಲಿದೆ. ಹೀಗಾಗಿ ಬೆಂಗಳೂರಿನಿಂದ ಕೊಡಚಾದ್ರಿಗೆ ಬಸ್ಸು, ಖಾಸಗಿ ವಾಹನದ ಮೂಲಕ ಹೊರಡಬಹುದು. ವಿಮಾನದ ಮೂಲಕ ಮಂಗಳೂರಿಗೆ ತೆರಳಿದರೆ ಸಮೀಪವಾಗುತ್ತದೆ. ಮಂಗಳೂರಿನಿಂದ ಸುಮಾರು 130 ಕಿ.ಮೀ ದೂರದಲ್ಲಿ ಕೊಡಚಾದ್ರಿ ಇದೆ. ಮಂಗಳೂರು ಹಾಗೂ ಕೊಲ್ಲೂರಿನ ನಡುವೆ ಹಲವಾರು ಖಾಸಗಿ ಬಸ್ಸುಗಳಿವೆ.

    ಗುಂಪು ಟ್ರೆಕ್ಕಿಂಗ್ ಮಾಡಲು ಕೊಡಚಾದ್ರಿ ಬೆಸ್ಟ್ ಪ್ಲೆಸ್ ಆಗಿರುತ್ತದೆ. ಅಕ್ಟೋಬರ್ ತಿಂಗಳಿನಿಂದ ಮೇ ತಿಂಗಳವರೆಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯ. ಆದರೆ ಮಳೆಗಾಲದಲ್ಲಿ ಜಿಗಣೆ ಮತ್ತು ಕಡಿದಾದ ಇಳಿಜಾರು ಇರುವುದರಿಂದ ಸ್ವಲ್ಪ ಜಾಗೃತೆ ವಹಿಸಿಕೊಳ್ಳಬೇಕು. ಜೀಪಿನಲ್ಲಿ ತೆರಳಿದರೆ ಈ ಟ್ರಕ್ಕಿಂಗ್‍ನ ಮಜಾನೇ ಬೇರೆಯಾಗಿರುತ್ತದೆ.

    ಉಳಿದುಕೊಳ್ಳಲು ವ್ಯವಸ್ಥೆ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕೊಡಚಾದ್ರಿ ಸಮೀಪ ಪ್ಯಾರಡೈಸ್ ವೈಲ್ಡ್ ಹಿಲ್ ರೆಸಾರ್ಟ್ ನಡೆಸುತ್ತಿದೆ. ಅಲ್ಲದೆ ಹತ್ತಿರದ ಪಟ್ಟಣವಾದ ಕೊಲ್ಲೂರಿನಲ್ಲಿ ಹೋಟೆಲ್‍ಗಳು ಮತ್ತು ಹೋಂ ಸ್ಟೇಗಳು ಲಭ್ಯವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಡಚಾದ್ರಿ ಸೇರಿದಂತೆ ದೇಶದ 18 ಕಡೆ ರೋಪ್‌ವೇ ನಿರ್ಮಿಸಲು ಕೇಂದ್ರ ಯೋಜನೆ

    ಕೊಡಚಾದ್ರಿ ಸೇರಿದಂತೆ ದೇಶದ 18 ಕಡೆ ರೋಪ್‌ವೇ ನಿರ್ಮಿಸಲು ಕೇಂದ್ರ ಯೋಜನೆ

    ನವದೆಹಲಿ: ಉಡುಪಿಯ (Udupi) ಕೊಡಚಾದ್ರಿ ಬೆಟ್ಟ (Kodachadri Hill) ಸೇರಿದಂತೆ ದೇಶಾದ್ಯಂತ ಸುಮಾರು 18 ಕಡೆಗಳಲ್ಲಿ ರೋಪ್‌ವೇ (Ropeway) ಯೋಜನೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

    ಕರ್ನಾಟಕದ ಕೊಡಚಾದ್ರಿ ಬೆಟ್ಟಕ್ಕೆ ಸುಮಾರು 7 ಕಿ.ಮೀ ಉದ್ದದ ರೋಪ್‌ವೇಯನ್ನು ನಿರ್ಮಿಸಲು ಕೇಂದ್ರ ಯೋಜಿಸಿದೆ. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಾದ ತ್ರಿಪುರಾ, ಅರುಣಾಚಲ ಪ್ರದೇಶ, ಮಣಿಪುರ, ತಮಿಳುನಾಡು, ಆಂಧ್ರಪ್ರದೇಶ, ತಮಿಳುನಾಡು, ಲೇಹ್, ಸೇರಿದಂತೆ ಒಟ್ಟು 18 ಕಡೆಗಳಲ್ಲಿ ರೋಪ್‌ವೇ ನಿರ್ಮಾಣದ ಯೋಜನೆ ಒಳಗೊಂಡಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಟ್ಟದ ಮೇಲಿರುವ ಪ್ರಾಚೀನ ಶಂಕರಾಚಾರ್ಯ ದೇವಾಲಯಕ್ಕೆ 1 ಕಿ.ಮೀ ಉದ್ದದ ರೋಪ್‌ವೇ, ಜಮ್ಮು ಪ್ರದೇಶದ ಮಾತಾ ವೈಷ್ಣೋ ದೇವಿ ದೇವಸ್ಥಾನದ ಬಳಿ ಶಿವಖೋರಿ ದೇವಸ್ಥಾನದವರೆಗೆ 2 ಕಿ.ಮೀ, ಪುಣೆಯ ರಾಜ್‌ಗಡ್ ಕೋಟೆಗೆ 1.4 ಕಿ.ಮೀ, ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನಕ್ಕೆ 2.3 ಕಿ.ಮೀ, ತೆಲಂಗಾಣದ ಈಗಳಪೆಂಟಾದಿಂದ ಕೃಷ್ಣಾ ನದಿಗೆ ಅಡ್ಡಲಾಗಿ, ಉತ್ತರ ಪ್ರದೇಶದ ಗಾಜಿಯಾಬಾದ್‌ನ ವೈಶಾಲಿ ಮೆಟ್ರೋ ನಿಲ್ದಾಣದಿಂದ ಮೋಹನ್ ನಗರ ಮೆಟ್ರೋ ನಿಲ್ದಾಣದವರೆಗೆ 10 ಕಿ.ಮೀ ಉದ್ದದ ರೋಪ್‌ವೇ ನಿರ್ಮಾಣದ ಬಗ್ಗೆಯೂ ಕೇಂದ್ರ ಮುಂದಾಗಿದೆ. ಇದನ್ನೂ ಓದಿ: ರಿಲಯನ್ಸ್ ಆಸ್ಪತ್ರೆಯನ್ನು ಸ್ಫೋಟಿಸುತ್ತೇನೆ- ಮುಖೇಶ್ ಅಂಬಾನಿ, ಕುಟುಂಬಸ್ಥರಿಗೆ ಜೀವ ಬೆದರಿಕೆ

    ರೋಪ್‌ವೇ ಯೋಜನೆ ಯಾಕೆ?
    ರೋಪ್‌ವೇ ಯೋಜನೆ ಕೇಬಲ್ ಕಾರ್‌ಗಳ (Cable Car) ಮೂಲಕ ಗಂಟೆಗೆ ಸುಮಾರು 6,000-8,000 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದು ಗುಡ್ಡಗಾಡು ಪ್ರದೇಶದಲ್ಲಿಯೂ ನೇರ ರೇಖೆಯಲ್ಲಿ ನಿರ್ಮಿಸಬಹುದಾಗಿದೆ. ಇವು ಗಂಟೆಗೆ 15-30 ಕಿ.ಮೀ ವೇಗದಲ್ಲಿ ಸಾಗಬಲ್ಲುದಾಗಿದ್ದು, ಮೂಲ ಹಾಗೂ ಗಮ್ಯಸ್ಥಾನವನ್ನು ಸಂಪರ್ಕಿಸುವ ದೂರ ರಸ್ತೆ ಮಾರ್ಗಗಳಿಗಿಂತ ಕಡಿಮೆಯಾಗುತ್ತದೆ. ರೋಪ್‌ವೇಗಳು ಪ್ರವಾಸೋದ್ಯಮಕ್ಕೆ, ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಕ್ಕೆ ಉತ್ತಮವಾಗಿರುವುದು ಮಾತ್ರವಲ್ಲದೇ ಆಕರ್ಷಕ ಸಾರಿಗೆ ವಿಧಾನವೂ ಆಗಿದೆ. ಇದನ್ನೂ ಓದಿ: ಸೇನೆಯ ಚೀತಾ ಹೆಲಿಕಾಪ್ಟರ್ ಪತನ- ಪೈಲಟ್ ಹುತಾತ್ಮ

    Live Tv
    [brid partner=56869869 player=32851 video=960834 autoplay=true]

  • ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದ ಕೇರಳದ ಯುವಕ ನಾಪತ್ತೆ

    ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದ ಕೇರಳದ ಯುವಕ ನಾಪತ್ತೆ

    ಶಿವಮೊಗ್ಗ: ಮಲೆನಾಡ ಸುಂದರ ಪ್ರವಾಸಿ ತಾಣ ಕೊಡಚಾದ್ರಿ ಬೆಟ್ಟಕ್ಕೆ ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಯುವಕ ನಾಪತ್ತೆಯಾಗಿದ್ದಾನೆ.

    ಕೇರಳದ ಕಣ್ಣೂರು ಜಿಲ್ಲೆಯ ತಲಚ್ಚೇರಿಯ ಲಿವಿಲ್ ರಾಜ್(27) ನಾಪತ್ತೆಯಾಗಿದ್ದಾನೆ. ಕಳೆದ 3 ದಿನಗಳ ಹಿಂದೆ ಮಲೆನಾಡ ಸುತ್ತಮುತ್ತಲ ಪ್ರದೇಶಕ್ಕೆ ಪ್ರವಾಸಕ್ಕೆಂದು 7 ಮಂದಿ ಸ್ನೇಹಿತರ ಜೊತೆ ಲಿವಿಲ್ ಬಂದಿದ್ದನು. ಆದರೆ ಭಾನುವಾರ ಕೊಡಚಾದ್ರಿ ಬೆಟ್ಟಕ್ಕೆ ಸ್ನೇಹಿತರ ಜೊತೆ ಲಿವಿಲ್ ಹೋಗಿದ್ದ ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಸ್ನೇಹಿತ ನಾಪತ್ತೆ ಹಿನ್ನೆಲೆಯಲ್ಲಿ ಇತರೆ ಸ್ನೇಹಿತರು ಕೆಲ ಕಾಲ ಆತ ನಾಪತ್ತೆಯಾದ ಸ್ಥಳದಲ್ಲೇ ಹುಡುಕಾಟ ನಡೆಸಿದ್ದಾರೆ. ಆದರೆ ಯಾರಿಗೂ ಕೂಡ ಲಿವಿಲ್ ಸಿಕ್ಕಿಲ್ಲ. ತಮ್ಮ ಜೊತೆಗೇ ಇದ್ದವನು ಎಲ್ಲಿಗೆ ಹೋದ, ಏನಾದ ಎಂದು ಸ್ನೇಹಿತರಿಗೆ ತಿಳಿಯಲಿಲ್ಲ.

    ಈ ಘಟನೆಯಿಂದ ಗಾಬರಿಗೊಂಡ ಸ್ನೇಹಿತರು ಲಿವಿಲ್ ಬಗ್ಗೆ ಆತನ ಪೋಷಕರಿಗೆ ವಿಷಯ ತಿಳಿಸಿ, ಕೇರಳಕ್ಕೆ ವಾಪಾಸ್ಸಾಗಿದ್ದಾರೆ. ಇತ್ತ ಮಗ ನಾಪತ್ತೆಯಾಗಿದ್ದಕ್ಕೆ ಸ್ವತಃ ಲಿವಿಲ್ ಪೋಷಕರು ಹಾಗು ಕೇರಳ ಪೊಲೀಸರು ಕೊಡಚಾದ್ರಿ ಬೆಟ್ಟಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಗೆ ಸ್ಥಳೀಯ ಪೊಲೀಸರು ಕೂಡ ಸಾಥ್ ಕೊಟ್ಟಿದ್ದಾರೆ. ಆದರೆ ಈವರೆಗೂ ಲಿವಿಲ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

    ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರ ಪರ್ವತದಲ್ಲಿ ಚಾರಣಕ್ಕೆ ತೆರಳಿದ್ದ ಬೆಂಗಳೂರಿನ ಯುವಕನೊಬ್ಬ ನಾಪತ್ತೆಯಾಗಿದ್ದನು. ಬಿಕ ಆತನ ಪತ್ತೆಗೆ ಸಾಕಷ್ಟು ಹುಡುಕಾಟ ನಡೆದಿತ್ತು. ಆದರೆ ಎರಡು ದಿನಗಳ ಬಳಿಕ ಯುವಕ ತೀರ್ಥದ ಪೈಪ್ ಗುರುತಿನ ಮೂಲಕ ಸುಬ್ರಹ್ಮಣ್ಯಕ್ಕೆ ವಾಪಸ್ಸಾಗುವ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿತ್ತು.