Tag: ಕೊಟ್ಟೂರು

  • ಬಳ್ಳಾರಿಯ ಕೊಟ್ಟೂರೇಶ್ವರನಿಗೆ ಸಿದ್ಧವಾಗುತ್ತಿದೆ ಹೊಸ ರಥ

    ಬಳ್ಳಾರಿಯ ಕೊಟ್ಟೂರೇಶ್ವರನಿಗೆ ಸಿದ್ಧವಾಗುತ್ತಿದೆ ಹೊಸ ರಥ

    ಬಳ್ಳಾರಿ: ಜಿಲ್ಲೆಯ ಕೊಟ್ಟೂರು ಬಸವೇಶ್ವರನ ರಥೋತ್ಸವಕ್ಕಾಗಿ ಈ ಬಾರಿ ಹೊಸ ರಥ ನಿಮಾರ್ಣವಾಗುತ್ತಿದೆ. ಕಳೆದ ಫೆಬ್ರವರಿ 21 ರಂದು ರಥದ ಅಚ್ಚು ಮುರಿದು ರಥೋತ್ಸವದ ವೇಳೆಯೇ ತೇರು ಮಗುಚಿ ಬಿದ್ದಿತ್ತು. ಇದರಿಂದಾಗಿ ನೂತನ ರಥ ನಿರ್ಮಾಣ ಕಾರ್ಯ ಯಾವಾಗ ನಡೆಯುತ್ತೋ ಅಂತಾ ಭಕ್ತರು ಆತಂಕಗೊಂಡಿದ್ದು, ಇದೀಗ ನೂತನ ರಥ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

    ಸರ್ಕಾರ ನೂತನ ರಥ ನಿರ್ಮಾಣಕ್ಕಾಗಿ 2 ಕೋಟಿ ರೂಪಾಯಿ ಅನುದಾನ ನೀಡಿದ್ದು, ಈಗಾಗಲೇ ರಥ ನಿರ್ಮಾಣ ಕಾರ್ಯ ಅರ್ಧ ಮುಕ್ತಾಯಗೊಂಡಿದೆ. ಫೆಬ್ರುವರಿ 14ರಂದು ರಥೋತ್ಸವವನ್ನು ನೂತನ ರಥದಲ್ಲೆ ನಡೆಸಲಾಗುವುದು ಅಂತ ಉಜ್ಜೈನಿ ಶ್ರೀಗಳು ಹೇಳಿದ್ದಾರೆ.

    ಈ ಬಾರಿ ನೂತನ ರಥದೊಂದಿಗೆ ಬಸವೇಶ್ವರನ ಜಾತ್ರೆ ಅದ್ಧೂರಿಯಾಗಿ ನಡೆಸಲು ದೇವಾಲಯದ ಆಡಳಿತ ಮಂಡಳಿ ಕೂಡ ಸಜ್ಜಾಗಿದೆ. ನೂತನ ರಥವನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.

  • ಹಂಪಿಯಲ್ಲಿ ರಥ ಕೊಂಡೊಯ್ಯುವ ವೇಳೆ ಜೆಸಿಬಿ ಆಕ್ಸಿಲ್ ಕಟ್- ಸಹಾಯಕ್ಕೆ ಬಂದ ಗಜರಾಜ!

    ಹಂಪಿಯಲ್ಲಿ ರಥ ಕೊಂಡೊಯ್ಯುವ ವೇಳೆ ಜೆಸಿಬಿ ಆಕ್ಸಿಲ್ ಕಟ್- ಸಹಾಯಕ್ಕೆ ಬಂದ ಗಜರಾಜ!

    ಬಳ್ಳಾರಿ: ಕೊಟ್ಟೂರು ಜಾತ್ರೆ ಹಾಗೂ ಕುರುಗೋಡು ಜಾತ್ರೆಯಲ್ಲಿ ನಡೆದ ಅವಘಡದ ನೆನಪುಗಳು ಮಾಸುವ ಮುನ್ನವೇ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭಾರೀ ಅವಘಡವೊಂದು ತಪ್ಪಿದೆ.

    ಹಂಪಿಯ ವಿರೂಪಾಕ್ಷೇಶ್ವರನ ರಥ ಕೊಂಡೊಯ್ಯುವ ವೇಳೆ ಜೆಸಿಬಿ ಯಂತ್ರದ ಆಕ್ಸಿಲ್ ಕಟ್ ಆಗಿದೆ. ಈ ವೇಳೆ ಸಹಾಯಕನಾಗಿ ಬಂದ ಹಂಪಿ ದೇಗುಲದ ಗಜರಾಜ ರಥವನ್ನು ಎಳೆದು ಮುಂದೆ ಸಾಗಿಸಿದೆ. ಈ ಮೂಲಕ ಸ್ಥಳೀಯರು ಕ್ರೇನ್ ಹಾಗೂ ಆನೆಯ ಸಹಾಯದಿಂದ ರಥವನ್ನು ಮುನ್ನಡೆಸಿಕೊಂಡು ಹೋಗಿದ್ದಾರೆ. ಆದ್ರೆ ಬಳ್ಳಾರಿ ಜಿಲ್ಲೆಯಲ್ಲಿ ಒಂದರ ಮೇಲೊಂದು ಇಂತಹ ಅವಘಡಗಳು ನಡೆಯುತ್ತಿರುವುದರಿಂದ ಇದೀಗ ಭಕ್ತರಲ್ಲಿ ಆತಂಕ ಸೃಷ್ಟಿಸಿದೆ.

    ಕೊಟ್ಟೂರು ಜಾತ್ರೆ: ಕಳೆದ ಫೆ.22ರಂದು ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಗುರು ಬಸವೇಶ್ವರ ರಥೋತ್ಸವದ ವೇಳೆ ಚಕ್ರದ ಅಚ್ಚು ಮುರಿದು 60 ಅಡಿ ಎತ್ತರದ ರಥ ಮಗುಚಿ ಬಿದ್ದಿತ್ತು. ಅದೃಷ್ಟವಶಾತ್ ಘಟನೆಯಿಂದ ಯಾರಿಗೂ ಅಪಾಯವುಂಟಾಗಿರಲಿಲ್ಲ.

    ಕುರುಗೋಡು: ಜಿಲ್ಲೆಯ ಕುರುಗೋಡಿನಲ್ಲಿ ನಡೆದ ದೊಡ್ಡಬಸವೇಶ್ವರ ರಥೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿ ಓರ್ವ ಮೃತಪಟ್ಟ ಘಟನೆ ಮಾ. 13ರಂದು ನಡೆದಿತ್ತು.

  • ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

    ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

     

    ಬಳ್ಳಾರಿ: ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಗುರು ಬಸವೇಶ್ವರ ರಥೋತ್ಸವ ವೇಳೆಯಲ್ಲಿ ಚಕ್ರದ ಅಚ್ಚು ಮರಿದು ರಥ ಮುಗುಚಿ ಬಿದ್ದಿದೆ.

    ಚಕ್ರದ ಅಚ್ಚು ಮುರಿದು 60 ಅಡಿ ಎತ್ತರದ ರಥ ಬಿದ್ದಿದೆ. ರಥದ ಕೆಳಗೆ 50 ಕ್ಕೂ ಹೆಚ್ಚು ಭಕ್ತಾದಿಗಳು ಸಿಲುಕಿರುವ ಶಂಕೆಯಿದ್ದು, ಪರಿಹಾರ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

    ರಥದ ಕೆಳಗೆ ಸಿಲುಕಿರುವ ಭಕ್ತಾದಿಗಳನ್ನು ರಕ್ಷಿಸುವ ಕಾರ್ಯ ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಸಾಗಿದೆ. ರಥ ಕೆಳಗೆ ಸಿಲುಕಿರುವ ಭಕ್ತರ ನರಳಾಟ, ಚೀರಾಟ ಜೋರಾಗಿದೆ.

    ಪ್ರತಿ ವರ್ಷ ನಡೆಯುವ ಗುರು ಬಸವೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಿದ್ದು, ಈ ವರ್ಷವೂ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

    .

    https://www.youtube.com/watch?v=iwUr8Y0qoQQ

     

     

    https://www.youtube.com/watch?v=oOGOlAPVqEE