Tag: ಕೊಕ್ಕರ್ ಸ್ಫೋಟ

  • ಉಗ್ರರು ಮಂಗಳೂರು, ಕೊಯಮತ್ತೂರಿನಲ್ಲಿ ಓಡಾಡಿರುವ ಶಂಕೆ – ಇದೊಂದು ವ್ಯವಸ್ಥಿತ ಜಾಲ ಎಂದ ಸಿಎಂ

    ಉಗ್ರರು ಮಂಗಳೂರು, ಕೊಯಮತ್ತೂರಿನಲ್ಲಿ ಓಡಾಡಿರುವ ಶಂಕೆ – ಇದೊಂದು ವ್ಯವಸ್ಥಿತ ಜಾಲ ಎಂದ ಸಿಎಂ

    ಬಳ್ಳಾರಿ: ಇದೊಂದು ಉಗ್ರರ ಕೃತ್ಯ ಅಂತ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇದೊಂದು ವ್ಯವಸ್ಥಿತ ಜಾಲ, ಆ ಜಾಲವನ್ನು ಪತ್ತೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.

    ಮಂಗಳೂರು (Mangaluru) ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ (Bellary) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಇದೊಂದು ಉಗ್ರರ ಕೃತ್ಯ ಅಂತ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ನಕಲಿ ಐಡಿ ಕಾರ್ಡ್, ನಕಲಿ ವಿಳಾಸ ಬಳಸಿ, ಈ ಕೃತ್ಯ ನಡೆಸಲಾಗಿದೆ. ನಕಲಿ ವಿಳಾಸ ಹುಬ್ಬಳ್ಳಿದೆಂದು ಗೊತ್ತಾಗಿದೆ. ಎನ್‍ಐಎ, ಐಬಿ ಸ್ಥಳದಲ್ಲೇ ಬೀಡು ಬಿಟ್ಟಿದೆ, ಅವರ ಜಾಡನ್ನು ಹಿಡಿಯಲು ಎನ್‍ಐಎ, ತನಿಖೆ ಮುಂದುವರೆಸಿದೆ. ಉಗ್ರರು ಮಂಗಳೂರು, ಕೊಯಮತ್ತೂರಿನಲ್ಲಿ ಓಡಾಡಿರುವ ಶಂಕೆ ಇದೆ. ಇದೊಂದು ವ್ಯವಸ್ಥಿತ ಜಾಲ, ಆ ಜಾಲವನ್ನು ಪತ್ತೆ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ಮಂಗಳೂರಿನಲ್ಲಿ ಇರುವಾಗಲೇ ಸ್ಕೆಚ್ – ಟೈಮರ್ ಕೈಕೊಟ್ಟು ದಾರಿ ಮಧ್ಯೆ ಬಾಂಬ್ ಸ್ಫೋಟ

    ಶನಿವಾರ ಸಂಜೆ 5 ಗಂಟೆಯ ವೇಳೆ ಮಂಗಳೂರಿನ ಪಂಪ್‍ವೆಲ್‍ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋ ನಿಗೂಢ ಸ್ಫೋಟಗೊಂಡಿದೆ. ದಾರಿ ಮಧ್ಯೆ ಸವಾರನೋರ್ವ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದು ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆಯ ಎದುರು ಆಟೋದ ಒಳಗೆ ಸ್ಫೋಟಗೊಂಡಿದ್ದು ಸವಾರನ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿತ್ತು. ಇದನ್ನೂ ಓದಿ: ಮಂಗಳೂರಿನ ಆಟೋದಲ್ಲಿ ಕುಕ್ಕರ್‌ ಅನಿರೀಕ್ಷಿತವಾಗಿ ಸ್ಪೋಟಗೊಂಡಿಲ್ಲ, ಇದೊಂದು ಉಗ್ರ ಕೃತ್ಯ: ಪ್ರವೀಣ್‌ ಸೂದ್

    ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿರುವಾಗಲೇ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗುತ್ತಿದ್ದು, ಈ ವಿಚಾರ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಸದ್ಯ ಈ ಸ್ಫೋಟವನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]