Tag: ಕೊಂಕಣಿ

  • ರಣ್‌ವೀರ್ ಸಿಂಗ್ ಕೊಂಕಣಿ ಕಲಿಯುವ ಇಚ್ಛೆ ಹಿಂದಿನ, ವಿಚಿತ್ರ ಕಾರಣ ತಿಳಿಸಿದ ದೀಪಿಕಾ ಪಡುಕೋಣೆ

    ರಣ್‌ವೀರ್ ಸಿಂಗ್ ಕೊಂಕಣಿ ಕಲಿಯುವ ಇಚ್ಛೆ ಹಿಂದಿನ, ವಿಚಿತ್ರ ಕಾರಣ ತಿಳಿಸಿದ ದೀಪಿಕಾ ಪಡುಕೋಣೆ

    ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೇ ಕೊಂಕಣಿ ಸಮುದಾಯದ ಕಾರ್ಯಕ್ರಮವೊಂದಲ್ಲಿ ಭಾಗಿಯಾಗಿದ್ದರು. ಈ ವೇಳೆ ರಣ್‌ವೀರ್‌ಗೆ ಕೊಂಕಣಿ ಕಲಿಯುವ ಇಚ್ಛೆ ಇದ್ದು, ಈ ಹಿಂದಿನ ಉದ್ದೇಶವನ್ನ ದೀಪಿಕಾ ಪಡುಕೋಣೆ ರಿವೀಲ್ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ನಟಿ ದೀಪಿಕಾ ಕರ್ನಾಟಕದ ಮೂಲದವರು, ಅವರ ಮಾತೃ ಭಾಷೆ ಕೊಂಕಣಿ ಹಾಗಾಗಿ ಇತ್ತೀಚೆಗಷ್ಟೇ ಕೊಂಕಣಿ ಸಮುದಾಯದ ಕ್ಯಾಲಿಫೋರ್ನಿಯಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ದೀಪಿಕಾ ಕೊಂಕಣಿ ಇಚ್ಛೆಯ ಹಿಂದಿರುವ ವಿಚಾರವನ್ನ ರಿವೀಲ್ ಮಾಡಿದ್ದಾರೆ. ಈ ಮೊದಲು ಕೊಂಕಣಿ ಕಲಿಯುವ ಇಚ್ಛೆ ವ್ಯಕ್ತಪಡಿಸಿದರ ಅಸಲಿ ವಿಚಾರ ಕೇಳಿ ದೀಪಿಕಾ ಅಚ್ಚರಿ ಪಟ್ಟಿದ್ದರಂತೆ. ಇದನ್ನೂ ಓದಿ:ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ಗೆ ಕರ್ನಾಟಕದಲ್ಲಿ ಧರ್ಮ ಸಂಕಟ

    ನಾನು ಕೊಂಕಣೆ ಅರ್ಥಮಾಡಿಕೊಳ್ಳುತ್ತೇನೆ. ಇದರ ಹಿಂದೆ ಒಂದು ಕಾರಣವಿದೆ. ನನಗೆ ಮಕ್ಕಳು ಹುಟ್ಟಿದ ನಂತರ ದೀಪಿಕಾ ಮತ್ತು ಮಕ್ಕಳು ಕೊಂಕಣಿಯಲ್ಲಿ ಮಾತನಾಡಿದರೆ ನನಗೆ ಅರ್ಥವಾಗದಿದ್ದರೆ ಎಂಬ ಭಯ ಹಾಗಾಗಿ ಸ್ಪಷ್ಟವಾಗಿ ಕೊಂಕಣಿ ಕಲಿಯಲು ಬಯಸುತ್ತೇನೆ ಎಂದು ಈ ವೇಳೆ ರಣ್‌ವೀರ್ ಮಾತನಾಡಿದ್ದಾರೆ.

    ನಂತರ ದೀಪಿಕಾ, ರಣ್‌ವೀರ್ ನನ್ನ ಬಳಿ ಬಂದು ಕೊಂಕಣಿ ಕಲಿಯಲು ಆಸೆ ಎಂದಾಗ ಖುಷಿಪಟ್ಟೆ ಆದರೆ ನಂತರ ಕಾರಣ ತಿಳಿಸಿದ್ದು ಅಚ್ಚರಿ ಮೂಡಿಸಿತ್ತು. ರಣ್‌ವೀರ್‌ಗೆ ನಿಜಕ್ಕೂ ಕೊಂಕಣಿ ಕಲಿಯಬೇಕು ಎಂಬ ಇಚ್ಛೆಯಿಲ್ಲ. ನಮ್ಮ ಮಕ್ಕಳು ಅವರ ವಿರುದ್ಧ ತಿರುಗಿ ಬಿದ್ದರೆ ಎಂಬ ಭಯವಿದೆ ಎಂದು ದೀಪಿಕಾ ತಿಳಿಸಿದ್ದಾರೆ. ಒಟ್ನಲ್ಲಿ ಇದೀಗ ಇಬ್ಬರು ಕೊಂಕಣಿ ವಿಚಾರವಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • `ವಿ ಲವ್ ಯೂ’ ಎಂದ ಅಭಿಮಾನಿಗೆ ದೀಪಿಕಾ ಖಡಕ್ ರಿಯಾಕ್ಷನ್

    `ವಿ ಲವ್ ಯೂ’ ಎಂದ ಅಭಿಮಾನಿಗೆ ದೀಪಿಕಾ ಖಡಕ್ ರಿಯಾಕ್ಷನ್

    ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಅಪಾರ ಅಭಿಮಾನಿಗಳ ಬಳಗವಿದೆ. ದೇಶದೆಲ್ಲೆಡೆ ನಟಿ ದೀಪಿಕಾಗೆ ಅದ್ಭುತ ಫ್ಯಾನ್ಸ್ ಫಾಲೋವಿಂಗ್ ಇದೆ. ಹೀಗಿರುವಾಗ ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕೊಂಕಣಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ದೀಪಿಕಾ ಭಾಗವಹಿಸಿದ್ದರು. ಈ ವೇಳೆ ಓರ್ವ ಅಭಿಮಾನಿಯೊಬ್ಬ ನಾವು ನಿಮ್ಮನ್ನು ಪ್ರೀತಿಸುತ್ತೇವೆ ದೀಪಿಕಾ ಎಂದು ಕೂಗಿದ್ದಾರೆ. ದೀಪಿಕಾ ಕೂಡ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಬಿಟೌನ್‌ನ ಸ್ಟಾರ್ ನಟಿಯಾಗಿ ಮಿಂಚ್ತಿರುವ ದೀಪಿಕಾ, ಮಾತೃಭಾಷೆ ಕೊಂಕಣಿ ಹಾಗಾಗಿ ಇತ್ತೀಚೆಗೆಷ್ಟೇ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕೊಂಕಣಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ದೀಪಿಕಾ ಪಡುಕೋಣೆ ಪತಿ ಜತೆ ಭಾಗವಹಿಸಿದ್ದರು. ಶಂಕರ್ ಮಹಾದೇವ ಅವರ ಸಂಗೀತ ಕಾರ್ಯಕ್ರಮ ಕೂಡ ನಡೆಯುತ್ತಿತ್ತು. ಈ ವೇಳೆ ಓರ್ವ ಅಭಿಮಾನಿಯೊಬ್ಬ ನಾವು ನಿಮ್ಮನ್ನು ಪ್ರೀತಿಸುತ್ತೇವೆ ದೀಪಿಕಾ ಎಂದು ಜೋರಾಗಿ ಕೂಗಿದ್ದಾರೆ. ಅದಕ್ಕೆ ನಟಿ ಕೂಡ ನಾನು ಮದುವೆಯಾಗಿರುವ ಗೃಹಿಣಿ ಎಂದು ಅಭಿಮಾನಿಗೆ ಉತ್ತರಿಸಿದ್ದಾರೆ. ನಂತರ ಪತಿಯ ಸಮಾರಂಭದಲ್ಲಿ ದೀಪಿಕಾ ಮಿಂಚಿದ್ದಾರೆ.ಇದನ್ನೂ ಓದಿ:ಮೈಸೂರಿನಲ್ಲಿ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ನ ಆರ್ಭಟ

    ಇದೀಗ ನಟಿ ದೀಪಿಕಾ ತನ್ನ ಕೊಂಕಣಿ ಭಾಷೆ ಮತ್ತು ಸಮುದಾಯದ ಜನರಿಗೆ ಧನ್ಯವಾದ ತಿಳಿಸಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಹಿಂದಿನ ಇತಿಹಾಸ, ಮೂಲ ಮತ್ತು ಸಂಸ್ಕೃತಿಯ ಅರಿವಿಲ್ಲದ ಜನರು ಬೇರುಗಳಿಲ್ಲದ ಮರದಂತೆ ಎಂದು ಕೊಂಕಣಿ ಸಮುದಾಯದವರಿಗೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ನಾನು ಕೊಂಕಣಿ ಸಮುದಾಯಕ್ಕೆ ಸೇರಿದವಳು ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಂತ ಹಂತವಾಗಿ ತುಳು, ಬ್ಯಾರಿ, ಕೊಂಕಣಿ ಭವನಗಳ ನಿರ್ಮಾಣ: ಕೋಟ

    ಹಂತ ಹಂತವಾಗಿ ತುಳು, ಬ್ಯಾರಿ, ಕೊಂಕಣಿ ಭವನಗಳ ನಿರ್ಮಾಣ: ಕೋಟ

    ಮಂಗಳೂರು: ಹಂತ ಹಂತವಾಗಿ ತುಳು, ಬ್ಯಾರಿ, ಕೊಂಕಣಿ ಸಾಂಸ್ಕೃತಿಕ ಭವನಗಳನ್ನು ನಿರ್ಮಾಣ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಹಿಂದು ಧಾರ್ಮಿಕ ದತ್ತಿ ಹಾಗೂ ಧರ್ಮಾದಾಯ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತುಳು ಬ್ಯಾರಿ, ಕೊಂಕಣಿ ಅಕಾಡೆಮಿ ಅಧ್ಯಕ್ಷರೊಂದಿಗೆ ಭವನಗಳ ನಿರ್ಮಾಣ ಕುರಿತ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ರಂಗಮಂದಿರದ ಜೊತೆಗೆ ತುಳು, ಬ್ಯಾರಿ ಹಾಗೂ ಕೊಂಕಣಿ ಸಾಂಸ್ಕೃತಿಕ ಭವನದ ನಿರ್ಮಾಣಕ್ಕೆ ಸರ್ಕಾರದಿಂದ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಆಯಾ ಅಕಾಡೆಮಿ ಭವನಗಳ ನಿರ್ಮಾಣಕ್ಕೆ ಸಂಬಂಧಿಸಿದವರು ಒಪ್ಪಿಗೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ತುಳು ಲಿಪಿ ಯೂನಿಕೋಡ್ ನಕಾಶೆ ಸೇರ್ಪಡೆಗೆ ಕ್ರಮ- ಅರವಿಂದ ಲಿಂಬಾವಳಿ

    ಜಿಲ್ಲಾ ರಂಗಮಂದಿರಕ್ಕೆ ಮೊದಲ ಹಂತದಲ್ಲಿ 5 ಕೋಟಿರೂ., ತುಳು ಭವನ ನಿರ್ಮಾಣಕ್ಕೆ ಎರಡನೇ ಹಂತದಲ್ಲಿ 3.5 ಕೋಟಿ ರೂ., ಕೊಂಕಣಿ ಮತ್ತು ತುಳು ಅಕಾಡೆಮಿಯ ಭವನಕ್ಕಾಗಿ ಮೊದಲ ಹಂತದಲ್ಲಿ ತಲಾ 3 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಶಾಸಕ ಡಾ.ಭರತ್ ಶೆಟ್ಟಿ, ಉಪವಿಭಾಗಾಧಿಕಾರಿ ಮದನ್ ಮೋಹನ್, ತುಳು ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಡಾ.ಜಗದೀಶ್ ರೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ತಹಶೀಲ್ದಾರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.