Tag: `ಕೈವ’

  • ಶಿಲಾಬಾಲಿಕೆಯಂತೆ ಕಂಗೊಳಿಸಿದ ಮೇಘಾ ಶೆಟ್ಟಿ

    ಶಿಲಾಬಾಲಿಕೆಯಂತೆ ಕಂಗೊಳಿಸಿದ ಮೇಘಾ ಶೆಟ್ಟಿ

    ರಾವಳಿ ಬ್ಯೂಟಿ ಮೇಘಾ ಶೆಟ್ಟಿ (Megha Shetty) ಹೊಸ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಮೇಘಾ ನಯಾ ಲುಕ್ ಪಡ್ಡೆಹುಡುಗರ ಗಮನ ಸೆಳೆಯುತ್ತಿದೆ.

    ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ ಮಸ್ತ್ ಆಗಿ ಕ್ಯಾಮೆರಾ ಕಣ್ಣಿಗೆ ‘ಕೈವ’ ಬ್ಯೂಟಿ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಯಲ್ಲಿ ಗ್ಲ್ಯಾಮರಸ್‌ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಫೋಟೋ ನೋಡ್ತಿದ್ದಂತೆ ಬೇಲೂರ ಶಿಲಾಬಾಲಿಕೆಯಂತೆ ಮಿಂಚ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

    ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾಗೆ ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ಇದನ್ನೂ ಓದಿ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಪತ್ರಕರ್ತ ಬಾನಾಸುಗೆ ತವರಿನ ಗೌರವ

    ಧನ್ವೀರ್ ಗೌಡ ಜೊತೆ ಕೈವ ಸಿನಿಮಾ, ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾಗಳನ್ನ ನಟಿ ಮುಗಿಸಿ ಕೊಟ್ಟಿದ್ದಾರೆ. ಹೊಸ ಬಗೆಯ ಕಥೆಗಳನ್ನ ನಟಿ ಕೇಳುತ್ತಿದ್ದಾರೆ.

    ‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಫೇಮಸ್ ಆಗಿರುವ ನಟಿ ಈಗಾಗಲೇ ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

  • ಧನ್ವೀರ್ ನಟನೆಯ ‘ಕೈವ’ ಚಿತ್ರದ ಟೀಸರ್ ರಿಲೀಸ್

    ಧನ್ವೀರ್ ನಟನೆಯ ‘ಕೈವ’ ಚಿತ್ರದ ಟೀಸರ್ ರಿಲೀಸ್

    ವೀಂದ್ರಕುಮಾರ್ ನಿರ್ಮಾಣದ, ಜಯತೀರ್ಥ (Jayathirtha) ನಿರ್ದೇಶನದ ಹಾಗೂ ಧನ್ವೀರ್ (Dhanveer) ನಾಯಕರಾಗಿ ನಟಿಸಿರುವ ‘ಕೈವ’ (Kaiva) ಚಿತ್ರದ ಆಕ್ಷನ್ ಟೀಸರ್ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಅಭಿಷೇಕ್ ಅಂಬರೀಶ್ ಹಾಗೂ ದಿನಕರ್ ತೂಗುದೀಪ ಈ ಚಿತ್ರದ ಆಕ್ಷನ್ ಟೀಸರ್ (Teaser) ಬಿಡುಗಡೆ ಮಾಡಿ ಶುಭ ಕೋರಿದರು. ನಿರ್ದೇಶಕ ಮದಗಜ ಮಹೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ಕೈವ ಇದು ಒಬ್ಬ ವ್ಯಕ್ತಿಯ ಹೆಸರು. 1983 ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು. ನನಗೆ  ಮಾರ್ಚುರಿಯಲ್ಲಿ ಕೆಲಸ ಮಾಡುವವರಿಂದ ಈ ಕಥೆ ಸಿಕ್ಕಿತು. ಆನಂತರ ತಿಗಳರಪೇಟೆಗೆ ಹೋಗಿ ಅಲ್ಲಿ  ಈ ಘಟನೆ ಬಗ್ಗೆ ಕುಲಂಕುಶವಾಗಿ ತಿಳಿದುಕೊಂಡೆ. ಈ ಘಟನೆ ಕಂಡಿದ್ದ ಅನೇಕರು ಈಗಲೂ ಇದ್ದಾರೆ. ಇದೇ ಇಸವಿಯಲ್ಲಿ ನಡೆದ ಗಂಗಾರಾಮ್ ಕಟ್ಡಡದ ದುರಂತಕ್ಕು ಹಾಗೂ  ಈ ಚಿತ್ರದ ಕಥೆಗೂ ಸಂಬಂಧವಿದೆ. ಚಿತ್ರದ ನಾಯಕನಾಗಿ ಧನ್ವೀರ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಮೇಘ ಶೆಟ್ಟಿ ನಟಿಸಿದ್ದಾರೆ. ದಿನಕರ್ ತೂಗುದೀಪ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶ್ವೇತಪ್ರಿಯ ಛಾಯಾಗ್ರಹಣ ಮಾಡಿದ್ದಾರೆ. ಮೈಸೂರಿನಲ್ಲಿ ನಲವತ್ತೆಂಟು ದಿನಗಳ ಚಿತ್ರೀಕರಣ ನಡೆದಿದೆ. ಕೆಲವು ಭಾಗಗಳನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಚಿತ್ರೀಕರಿಸಲಾಗಿದೆ. ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದರು.

    ಕೈವ ನನ್ನ ನಟನೆಯ ನಾಲ್ಕನೇ ಚಿತ್ರ ಎಂದು ಮಾತು ಆರಂಭಿಸಿದ ನಾಯಕ ಧನ್ವೀರ್, ಈ ಕಥೆ ಎಲ್ಲ ಕಡೆ ಸುತ್ತಿ ದ್ರೌಪದಿ ತಾಯಿ ಆಶೀರ್ವಾದದಿಂದ ನನ್ನ ಬಳಿ ಬಂತು. ಜಯತೀರ್ಥ ಅವರು ತುಂಬಾ ಅದ್ಛುತವಾಗಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದವರು ಚಿತ್ರ ಚೆನ್ನಾಗಿದೆ ಎನ್ನುತ್ತಿದ್ದಾರೆ. ನಿಮ್ಮ  ಪ್ರೋತ್ಸಾಹವಿರಲಿ ಎಂದರು.

    ದಿನಕರ್ ತೂಗುದೀಪ್ ರವರು ಮಾತನಾಡುತ್ತಾ, ನನಗೆ ಸಂಭಾಷಣೆಕಾರ ರಘು ನಿಡವಳ್ಳಿ,  ನಿರ್ದೇಶಕ ಜಯತೀರ್ಥ ಅವರು  ಭೇಟಿಯಾಗಬೇಕಂತೆ ಅಂದರು. ಆಗ ಜಯತೀರ್ಥ ಅವರು ಈ ಪಾತ್ರದ ಬಗ್ಗೆ ಹೇಳಿದರು. ನನ್ನ ಪಾತ್ರ ನೋಡಿದವರು ನಮ್ಮ ತಂದೆ ತೂಗುದೀಪ ಶ್ರೀನಿವಾಸ್ ಅವರ ಹಾಗೆ ಕಾಣುತ್ತಿರಾ ಎನ್ನುತ್ತಿದ್ದಾರೆ. ಅದು ನಮ್ಮ ತಂದೆಯವರ ಆಶೀರ್ವಾದ. ನಮ್ಮ ಅಮ್ಮ ಕೂಡ ನನ್ನ ಪಾತ್ರ ನೋಡಿ ಸಂತೋಷಪಟ್ಟರು ಎಂದು ತಿಳಿಸಿದರು.

    ನಾಯಕಿ ಮೇಘ ಶೆಟ್ಟಿ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಟ ರಾಘು ಶಿವಮೊಗ್ಗ, ಸಂಭಾಷಣೆಕಾರ ರಘು ನಿಡವಳ್ಳಿ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಬಾಲಕೃಷ್ಣ ಹಾಗೂ ಕೃಷ್ಣ ಅವರು ಚಿತ್ರದ ಕುರಿತು ಮಾತನಾಡಿದರು.

  • ಬೆಂಗಳೂರಿಗರನ್ನೇ ಬೆಚ್ಚಿಬೀಳಿಸಿದ ಘಟನೆಯನ್ನು ಸಿನಿಮಾ ಮಾಡ್ತಿದ್ದಾರೆ ನಿರ್ದೇಶಕ ಜಯತೀರ್ಥ

    ಬೆಂಗಳೂರಿಗರನ್ನೇ ಬೆಚ್ಚಿಬೀಳಿಸಿದ ಘಟನೆಯನ್ನು ಸಿನಿಮಾ ಮಾಡ್ತಿದ್ದಾರೆ ನಿರ್ದೇಶಕ ಜಯತೀರ್ಥ

    ಬೆಲ್ ಬಾಟಮ್ ಚಿತ್ರ ಖ್ಯಾತಿಯ ನಿರ್ದೇಶಕ ಜಯತೀರ್ಥ (Jayathirtha) ಇದೀಗ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಈ ಬಾರಿ ಅವರು ನೈಜ ಘಟನೆಯನ್ನು ಆಧರಿಸಿದ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. 1983ರಲ್ಲಿ ನಡೆದ ರೋಚಕ ಘಟನೆಯನ್ನು ತಮ್ಮ ಹೊಸ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು 1983 ಸೆಪ್ಟೆಂಬರ್ 13 ರಂದು ಮಧ್ಯಾಹ್ನ 3.20ಕ್ಕೆ ಬೆಂಗಳೂರಿಗರನ್ನೇ ಬೆಚ್ಚಿಬೀಳಿಸಿದ ಘಟನೆ ಇದಾಗಿದೆಯಂತೆ. ಈ ಘಟನೆ ನಡೆದರೂ, ಆಕೆ ಕೈವನಿಗಾಗಿ ಕಾಯುತ್ತಿದ್ದಳು ಎಂದು ಕುತೂಹಲದ ಟ್ಯಾಗ್ ಲೈನ್ ಕೂಡ ನೀಡಿದ್ದಾರೆ.

    ಅಂದಹಾಗೆ ಈ ಹೊಸ ಸಿನಿಮಾಗೆ ಕೈವ (Kaiva) ಎಂದು ಹೆಸರಿಟ್ಟಿರುವ ನಿರ್ದೇಶಕರು, ಆ ಘಟನೆ ನಡೆದಾಗ ಆಕೆ ಕೈವನಿಗಾಗಿ ಕಾಯುತ್ತಿದ್ದಳು. ಅವನು ಬಂದೇ ಬರುತ್ತಾನೆ ಎನ್ನುವ ನಂಬಿಕೆ ಆಕೆಗಿತ್ತು ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಕೈವ ಚಿತ್ರದ ಫಸ್ಟ್ ಲುಕ್ ರಿಲೀಸ್ ಮತ್ತು ಮುಹೂರ್ತ ಸಮಾರಂಭ ಇಂದು ನಡೆದಿದ್ದು, ಕಂಠೀರವ ಸ್ಟುಡಿಯೋ ಬಳಿ ಇರುವ ಡಾ.ರಾಜ್ ಕುಮಾರ್ ಪುಣ್ಯಭೂಮಿಯಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದನ್ನೂ ಓದಿ:ಸೋಮಣ್ಣ – ಗುರೂಜಿ ಗೆಲುವು ನೋಡಿ, ಗಳಗಳನೆ ಅತ್ತ ಸಾನ್ಯ ಅಯ್ಯರ್

    ಬಜಾರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಧನ್ವೀರ್ (Dhanvir) ಈ ಚಿತ್ರಕ್ಕೆ ನಾಯಕ. ಇಂದು ಇವರ ಹುಟ್ಟು ಹಬ್ಬವೂ ಆಗಿರುವುದರಿಂದ ಹೊಸ ರೀತಿಯ ಗಿಫ್ಟ್ ನೀಡಿದ್ದಾರೆ ಜಯತೀರ್ಥ. 1983ರ ಕಾಲಘಟ್ಟದಲ್ಲಿ ಈ ಕಥೆ ನಡೆಯುವುದರಿಂದ ಬೆಂಗಳೂರನ್ನು ಮರುಸೃಷ್ಟಿ ಮಾಡಲಾಗುತ್ತಿದೆಯಂತೆ. ಅಲ್ಲದೇ, ಕರಗ ಸೇರಿದಂತೆ ಬೆಂಗಳೂರಿನ ಸಂಪ್ರದಾಯಿಕ ಉತ್ಸವವನ್ನು ಚಿತ್ರಕ್ಕಾಗಿ ಬಳಕೆ ಮಾಡಲಾಗುತ್ತಿದೆಯಂತೆ.

    ಈ ಘಟನೆ ತಿಗಳರ ಪೇಟೆಯಲ್ಲಿ ನಡೆದಿರುವುದರಿಂದ, ಸಂಪೂರ್ಣವಾಗಿ ಈ ಪೇಟೆಯ ಸುತ್ತಮುತ್ತಲು ಕಥೆ ಇರಲಿದೆಯಂತೆ. ಧ್ವನಿರ್ ನಾಯಕನಾಗಿ ನಟಿಸುತ್ತಿದ್ದರೆ, ಮೇಘಾ ಶೆಟ್ಟಿ (Megha Shetty) ನಾಯಕಿಯಂತೆ. ಈ ಜೋಡಿ ರೆಟ್ರೊ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಬಡತನದ ಜೋಡಿಯೊಂದು, ಶ್ರೀಮಂತರ ಕಿರುಕುಳಕ್ಕೆ ಹೇಗೆ ತಿರುಗಿ ಬೀಳುತ್ತಾರೆ ಎನ್ನುವುದೇ ಸಿನಿಮಾದ ಕಥೆ.

    Live Tv
    [brid partner=56869869 player=32851 video=960834 autoplay=true]

  • ಜಯತೀರ್ಥ ನಿರ್ದೇಶನದ `ಕೈವ’ದಲ್ಲಿ ಧನ್ವೀರ್ ನಟನೆ

    ಜಯತೀರ್ಥ ನಿರ್ದೇಶನದ `ಕೈವ’ದಲ್ಲಿ ಧನ್ವೀರ್ ನಟನೆ

    ಸ್ಯಾಂಡಲ್‌ವುಡ್‌ನಲ್ಲಿ `ಬಜಾರ್’, `ಬೈ ಟು ಲವ್’ ಸಿನಿಮಾಗಳ ಮೂಲಕ ಮೋಡಿ ಮಾಡಿರೋ ನಟ ಧನ್ವೀರ್ ಗೌಡ, ಜಯತೀರ್ಥ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ `ಕೈವ’ ಅನ್ನೋ ಟೈಟಲ್ ಫಿಕ್ಸ್ ಆಗಿದ್ದು, ಈ ಚಿತ್ರದ ಮೂಲಕ ಪವರ್‌ಫುಲ್ ಪಾತ್ರದಲ್ಲಿ ಧನ್ವೀರ್ ಕಾಣಿಸಿಕೊಳ್ಳಲಿದ್ದಾರೆ.

    `ಒಲವೇ ಮಂದಾರ’, `ಬ್ಯೂಟಿಫುಲ್ ಮನಸುಗಳು’, `ಬೆಲ್‌ಬಾಟಂ’ ಚಿತ್ರದ ಮೂಲಕ ಈಗಾಗಲೇ ಪರಿಚಿತರಾಗಿರೋ ಜಯತೀರ್ಥ `ಕೈವ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. 1980ರ ಕಾಲಘಟ್ಟದ ನೈಜ ಕಥೆಯಲ್ಲಿ ಪ್ರಮುಖ ಪಾತ್ರದಲ್ಲಿ ಧನ್ವೀರ್ ನಟಿಸಲಿದ್ದಾರೆ. ಡಿಫರೆಂಟ್ ಟೈಟಲ್ ಜೊತೆ ಭಿನ್ನ ಕಥೆಯೊಂದಿಗೆ ಬರುತ್ತಿದ್ದಾರೆ.

    1980ರ ಕಾಲಘಟ್ಟದ ಕಥೆಯಾಗಿರುವುದರಿಂದ ಕಥೆಗೆ ತಕ್ಕಂತೆ ಕೆಲವು ಸನ್ನೀವೇಷದಲ್ಲಿ ನಟ ಧನ್ವೀರ್ ರೆಟ್ರೋ ಸ್ಟೈಲಿನಲ್ಲಿ ಕಾಣಿಸಿಕೊಳ್ತಿದ್ದಾರೆ. ಮಾಸ್ ಆಕ್ಷನ್ ಕಥೆಯ ಜೊತೆ ರೊಮ್ಯಾಂಟಿಕ್ ಲವ್ ಸ್ಟೋರಿಯಿದೆ. ಒಂದೊಳ್ಳೆ ಪಾತ್ರ ವಿಭಿನ್ನ ಕಥೆಯ ಕಾರಣದಿಂದಾಗಿ ನಿರ್ದೇಶಕರಿಗೆ ನಟ ಧನ್ವೀರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನು ಓದಿ:ಶಾರೂಖ್ ಜೊತೆಗಿನ ಸಿನಿಮಾಗೆ ನಯನ ಶೆಡ್ಯೂಲ್ ಮುಗಿಸಿಯೋದು ಯಾವಾಗ? – ಇಲ್ಲಿದೆ ಅಪ್ಡೇಟ್

    ಧನ್ವೀರ್ `ವಾಮನ’ ಚಿತ್ರದಲ್ಲಿ ನಟಿಸುತ್ತಿದ್ದು, `ಕೈವ’ ಧನ್ವೀರ್ ನಟನೆಯ ನಾಲ್ಕನೇ ಚಿತ್ರವಾಗಿದೆ. ಇದೇ ಮೊದಲ ಬಾರಿಗೆ ಜಯತೀರ್ಥ ಮತ್ತು ಧನ್ವೀರ್ ಕಾಂಬಿನೇಷನ್‌ನ ಚಿತ್ರ ಸೆಟ್ಟೇರಿದ್ದು, ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ.ಇನ್ನು ಶೋಕ್ದಾರ್ ಧನ್ವೀರ್ ನಟನೆಯ ನಯಾ ಅವತಾರ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.