Tag: ಕೈಲಾಸ ಪರ್ವತ

  • ಕೈಲಾಸ – ಮಾನಸ ಸರೋವರ ಯಾತ್ರೆ ಪುನರಾರಂಭಕ್ಕೆ ಭಾರತ, ಚೀನಾ ನಿರ್ಧಾರ

    ಕೈಲಾಸ – ಮಾನಸ ಸರೋವರ ಯಾತ್ರೆ ಪುನರಾರಂಭಕ್ಕೆ ಭಾರತ, ಚೀನಾ ನಿರ್ಧಾರ

    – ಬೀಜಿಂಗ್‌-ದೆಹಲಿ ನಡುವೆ ನೇರ ವಿಮಾನ ಸಂಪರ್ಕಕ್ಕೆ ತಾತ್ವಿಕ ಒಪ್ಪಿಗೆ

    ನವದೆಹಲಿ: 2025ರ ಬೇಸಿಗೆಯಲ್ಲಿ ಕೈಲಾಸ-ಮಾನಸ ಸರೋವರ ಯಾತ್ರೆಯನ್ನು (Kailash Mansarovar Yatra) ಪುನರಾರಂಭಿಸಲು ಭಾರತ-ಚೀನಾ ಒಪ್ಪಿಕೊಂಡಿವೆ. 2020ರ ನಂತರ ನಿಲ್ಲಿಸಲಾಗಿದ್ದ ಈ ಯಾತ್ರೆಯನ್ನು ಪುನರಾರಂಭಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.

    ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವಿನ ಸಭೆಯಲ್ಲಿ ಎರಡೂ ರಾಷ್ಟ್ರಗಳ ನಡುವೆ ನೇರ ವಿಮಾನ ಪುನಾರಂಭಿಸಲು ತಾತ್ವಿಕ ಒಪ್ಪಿಗೂ ಸಿಕ್ಕಿದೆ. ಇದನ್ನೂ ಓದಿ: ಸಿಎಂ ಪತ್ನಿಗೆ ಇಡಿ ನೋಟಿಸ್ ರಾಜಕೀಯ ಅನ್ನೋಕ್ಕಾಗಲ್ಲ, ಉತ್ತರ ಕೊಡಲಿ – ಸತೀಶ್ ಜಾರಕಿಹೊಳಿ

    ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಇದೇ ಜನವರಿ 26-27 ರಂದು ಬೀಜಿಂಗ್‌ಗೆ ಭೇಟಿ ನೀಡಿ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿ, ಉಪ ವಿದೇಶಾಂಗ ಸಚಿವರ ಕಾರ್ಯವಿಧಾನ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಭಾರತ ಮತ್ತು ಚೀನಾ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿವೆ.

    ಅಕ್ಟೋಬರ್‌ನಲ್ಲಿ ಕಜಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಮಾಡಿಕೊಂಡ ಒಪ್ಪಂದಗಳಿಗೆ ಅನುಗುಣವಾಗಿ ನಡೆದ ಈ ಸಭೆಯಲ್ಲಿ, ಸಂಬಂಧಗಳನ್ನು ಸ್ಥಿರಗೊಳಿಸಲು ಮತ್ತು ಪುನರ್ನಿರ್ಮಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

    2020ರ ಕೋವಿಡ್‌ ಬಳಿಕ ಟಿಬೆಟ್‌ನ ಕೈಲಾಸ ಪರ್ವತ ಮತ್ತು ಮಾನಸ ಸರೋವರಕ್ಕೆ ಭೇಟಿ ನೀಡುವ ಈ ಯಾತ್ರೆಯನ್ನು ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ಗಲ್ವಾನ್‌ ಘರ್ಷಣೆಯ ಬಳಿಕ ಬೀಜಿಂಗ್ ಮತ್ತು ನವದೆಹಲಿ ನಡುವಿನ ಮುನಿಸು ಮತ್ತೆ ಮುಂದುವರಿದಿತ್ತು. ಇದೀಗ ಚೀನಾ ದ್ವಿಪಕ್ಷೀಯ ಒಪ್ಪಂದಗಳು ಬಲಗೊಂಡ ಬೆಲ್ಲನ್ನೇ ಮಹತ್ವದ ಬೆಳವಣಿಗೆ ಕಂದುಬಂದಿದೆ.

    ಎರಡೂ ದೇಶಗಳ ನಡುವೆ ನೇರ ವಿಮಾನ ಸೇವೆ ಪುನರಾರಂಭಿಸಲು ಇಂದಿನ ಸಭೆಯು ತಾತ್ವಿಕ ಒಪ್ಪಿಗೆ ನೀಡಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಜಾಲ ಪತ್ತೆ – 2ನೇ ಮದ್ವೆ ಮಾಡಿಸಿ ಲಕ್ಷ ಲಕ್ಷ ಹಣಕ್ಕೆ ಮಗು ಮಾರಾಟ ಮಾಡಿದ್ದ ಗ್ಯಾಂಗ್‌

  • ಕೈಲಾಸಕ್ಕೆ ಹೋಗುತ್ತಿದ್ದ 40 ಯಾತ್ರಾರ್ಥಿಗಳ ರಕ್ಷಣೆ

    ಕೈಲಾಸಕ್ಕೆ ಹೋಗುತ್ತಿದ್ದ 40 ಯಾತ್ರಾರ್ಥಿಗಳ ರಕ್ಷಣೆ

    ಡೆಹ್ರಾಡೂನ್: ಕೈಲಾಸ ಮಾನಸ ಸರೋವರ ರಸ್ತೆ ಬಂದ್ ಆಗಿದ್ದರಿಂದ, ಬುಂದಿ ಗ್ರಾಮದಲ್ಲಿ ಸಿಲುಕಿದ್ದ 40 ಯಾತ್ರಾರ್ಥಿಗಳನ್ನು ಉತ್ತರಖಂಡ ಸರ್ಕಾರ ಭಾನುವಾರ ರಕ್ಷಿಸಿದೆ.

    ಕೈಲಾಸ ಯಾತ್ರೆಯ ಮಾರ್ಗದಲ್ಲಿ ದೊಡ್ಡ ಬಂಡೆಗಳು ಬಿದ್ದಿರುವುದರಿಂದ ರಸ್ತೆಯನ್ನು ಮುಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಕೈಲಾಸ ಯಾತ್ರೆಗೆಂದು ಹೋಗಿದ್ದ 40 ಯಾತ್ರಾರ್ಥಿಗಳನ್ನು ಹೆಲಿಕಾಪ್ಟರ್ ಬಳಸಿ ಧಾರ್ಚುಲಾಗೆ ಕರೆತರಲಾಯಿತು. ಎಲ್ಲಾ ಯಾತ್ರಾರ್ಥಿಗಳನ್ನು 8 ಹೆಲಿಕಾಪ್ಟರ್‌ ಮೂಲಕ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ.

    ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಬಿಗಿ ಭದ್ರತೆಯ ನಡುವೆ ರಾಜ್ಯದಲ್ಲಿ ಕನ್ವರ್ ಯಾತ್ರೆ ಆರಂಭವಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಶಾಸಕರ ಕಾರನ್ನೇ ಎಗರಿಸಿ ಖತರ್ನಾಕ್ ಕಳ್ಳರು

    ಯಾತ್ರಾರ್ಥಿಗಳಿಗೆ ಕೈಲಾಸ ಪರ್ವತ ತೆರಳಲು ಎರಡು ಮಾರ್ಗಗಳಿದೆ. ಅದರಲ್ಲಿ ಒಂದು ಉತ್ತರಾಖಂಡದ ಲಿಪುಲೇಖ್ ಪಾಸ್ ಹಾಗೂ ಇನ್ನೊಂದು ಸಿಕ್ಕಿಂನ ನಾಥು ಲಾ ಪಾಸ್ ಆಗಿದೆ. ಗಡಿಯೊಳಗೆ ಬಂದ ಪಾಕಿಸ್ತಾನದ ಡ್ರೋನ್ ಓಡಿಸಿದ ಭದ್ರತಾ ಪಡೆ

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದಲ್ಲಿ ಹೇಳಿಕೊಂಡಿದ್ದ ಹರಕೆ ತೀರಿಸಲು ಕೈಲಾಸ ಯಾತ್ರೆಗೆ ಅನುಮತಿ ಕೇಳಿದ ರಾಹುಲ್ ಗಾಂಧಿ

    ಕರ್ನಾಟಕದಲ್ಲಿ ಹೇಳಿಕೊಂಡಿದ್ದ ಹರಕೆ ತೀರಿಸಲು ಕೈಲಾಸ ಯಾತ್ರೆಗೆ ಅನುಮತಿ ಕೇಳಿದ ರಾಹುಲ್ ಗಾಂಧಿ

    ನವದೆಹಲಿ: ಕೈಲಾಸ ಯಾತ್ರೆ, ಮಾನಸ ಸರೋವರಕ್ಕೆ ಹೋಗಲು ನಿಗದಿಗೊಳಿಸಿದ್ದ ಅವಧಿ ಮುಗಿದಿದ್ರೂ ವಿಶೇಷ ಅನುಮತಿ ನೀಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿನಂತಿಸಿಕೊಂಡಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣಾ ವೇಳೆ ನಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕೊಂಚ ಏರುಪೇರಾಗಿತ್ತು. ಸುರಕ್ಷಿತವಾಗಿ ವಿಮಾನ ಭೂಸ್ಪರ್ಶ ಮಾಡಿದರೆ ಕೈಲಾಸ ಪರ್ವತಕ್ಕೆ ಬರುತ್ತೇನೆಂದು ಹರಕೆ ಹೊತ್ತುಕೊಂಡಿದ್ದೆ. ಆಗ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿದರು. ಹಾಗಾಗಿ ನನಗೆ ಹರಕೆ ತೀರಿಸಲು ವಿಶೇಷ ಅನುಮತಿ ನೀಡಬೇಕೆಂದು ರಾಹುಲ್ ಗಾಂಧಿ ಕೇಳಿಕೊಂಡಿದ್ದಾರೆ. ಇದನ್ನು ಓದಿ: ವಿಮಾನ ಕುಸಿಯುತ್ತಿದ್ದಾಗ ಎಲ್ಲಾ ಮುಗೀತು ಅಂದ್ಕೊಂಡೆ – ಹುಬ್ಬಳ್ಳಿ ಘಟನೆ ಬಗ್ಗೆ ರಾಹುಲ್ ಮಾತು

    ಕೈಲಾಸ ಪರ್ವತ ಯಾತ್ರೆಗೆ ನೊಂದಣಿ ಮಾಡಿಸಲು ಫೆಬ್ರವರಿ 20ಕ್ಕೆ ಪ್ರಾರಂಭವಾಗಿ ಮಾರ್ಚ್ 20ಕ್ಕೆ ಮುಕ್ತಾಯವಾಗಿದೆ. ಅಲ್ಲದೇ ಜೂನ್ 8ರಂದು ಯಾತ್ರೆ ಪ್ರಾರಂಭವಾಗಿ ಸೆಪ್ಟೆಂಬರ್ 8 ರವರೆಗೆ ನಡೆಯುತ್ತದೆ. ಅಲ್ಲದೇ ಮೌಂಟ್ ಅಬು ಪರ್ವತವನ್ನು ಹಿಂದೂ, ಮುಸ್ಲಿಂ, ಬೊನ್(ಟಿಬೆಟ್‍ನ ಧರ್ಮ) ಹಾಗೂ ಜೈನ್ ನಾಲ್ಕೂ ಧರ್ಮಗಳಲ್ಲಿ ಪವಿತ್ರ ಕ್ಷೇತ್ರ ಎಂದು ಹೇಳಲಾಗುತ್ತದೆ.

    ಕರ್ನಾಟಕ ಚುನಾವಣೆ ಪ್ರಚಾರದ ವೇಳೆಯಲ್ಲಿ ರಾಹುಲ್ ಗಾಂಧಿ ತಾವು ಕೈಲಾಸ ಯಾತ್ರೆ ಕೈಗೊಳ್ಳುತ್ತೇನೆ ಅಂತಾ ಹೇಳಿದ್ದರು. ಅಂದು ಬಿಜೆಪಿ ನಾಯಕ ಚಂದ್ರಶೇಖರ್, ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ರಾಹುಲ್ ಗಾಂಧಿ ಗಿಮಿಕ್ ಮಾಡ್ತಿದ್ದಾರೆ ಅಂತಾ ಟೀಕಿಸಿದ್ದರು.