Tag: ಕೈಲಾಶ್ ವಿಜಯವರ್ಗೀಯ

  • ರಾಹುಲ್, ಪ್ರಿಯಾಂಕಾ ಬಾಂಧವ್ಯದ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ಕೈಲಾಶ್

    ರಾಹುಲ್, ಪ್ರಿಯಾಂಕಾ ಬಾಂಧವ್ಯದ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ಕೈಲಾಶ್

    ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಹೋದರಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬಾಂಧವ್ಯದ ಬಗ್ಗೆ ಮಧ್ಯಪ್ರದೇಶ ನಗಾರಾಭಿವೃದ್ಧಿ ಸಚಿವ, ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ನಾಲಿಗೆ ಹರಿಬಿಟ್ಟಿದ್ದಾರೆ.

    ಭೋಪಾಲ್‌ನಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾಡಿ, ನಮ್ಮ ಸಹೋದರಿಯರ ಹಳ್ಳಿಯಲ್ಲಿ ನಾವು ನೀರನ್ನು ಕೂಡ ಕುಡಿಯಲ್ಲ. ಆದರೆ, ಇಂದಿನ ವಿರೋಧ ಪಕ್ಷದ ನಾಯಕರು ತಮ್ಮ ತಂಗಿಯನ್ನು ರಸ್ತೆಯಲ್ಲಿ ಮುದ್ದಿಸುತ್ತಾರೆ. ನಮ್ಮಲ್ಲಿ ಯಾರಾದರೂ ಈ ರೀತಿ ಮಾಡ್ತಾರಾ..? ಅದು ಅವರ ವಿದೇಶಿ ಮೌಲ್ಯಗಳನ್ನು ತೋರಿಸುತ್ತೆ ಅಂದಿದ್ದಾರೆ.

    ಇದಕ್ಕೆ ಕಾಂಗ್ರೆಸ್ ಕಿಡಿಕಾರಿದೆ. ಕೈಲಾಶ್ ವಿಜಯವರ್ಗೀಯವರು ಪವಿತ್ರ ಸಹೋದರ-ಸಹೋದರಿಯರ ಬಾಂಧವ್ಯವನ್ನು ಅವಮಾನಿಸಿದ್ದಾರೆ. ಇಂತಹ ನಾಚಿಕೆಯಿಲ್ಲದ ಹೇಳಿಕೆಗೆ ಪ್ರತಿಕ್ರಿಯಿಸಲು ನಮಗೆ ನಾಚಿಕೆಯಾಗುತ್ತದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತು ಪಟ್ವಾರಿ ಕಿಡಿಕಾರಿದ್ದಾರೆ.

  • ಹುಡುಗಿಯರು ಕೆಟ್ಟ ಉಡುಪಿನಲ್ಲಿ ಶೂರ್ಪನಖಿಯಂತೆ ಕಾಣ್ತಾರೆ: ಕೈಲಾಶ್

    ಹುಡುಗಿಯರು ಕೆಟ್ಟ ಉಡುಪಿನಲ್ಲಿ ಶೂರ್ಪನಖಿಯಂತೆ ಕಾಣ್ತಾರೆ: ಕೈಲಾಶ್

    ಇಂದೋರ್: ಹುಡುಗಿಯರು ಕೆಟ್ಟ ಉಡುಪಿನಲ್ಲಿ ಶೂರ್ಪನಖಿಯಂತೆ ಕಾಣುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿ (BJP) ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ (Kailash Vijayvargiya) ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

    ಇತ್ತೀಚೆಗೆ ನಡೆದ ಹನುಮಾನ್ ಮತ್ತು ಮಹಾವೀರ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಇವರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ರಾತ್ರಿ ಮನೆಯಿಂದ ಹೊರಗೆ ಬಂದಾಗ ಮದ್ಯದ ಅಮಲಿನಲ್ಲಿ ಯುವಜನತೆ ತೇಲಾಡುತ್ತಿರುವುದನ್ನು ಗಮನಿಸಿದೆ. ದೇವ್ರಾಣೆ ಹೇಳ್ತೀನಿ ಅವರನ್ನು ನೋಡಿದಾಗ ಕಾರಿಂದ ಇಳಿದು ಎರಡು ಏಟು ಹೊಡೆಯಬೇಕು ಅನಿಸುವಷ್ಟು ಸಿಟ್ಟು ಬಂತು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಟಿಕೆಟ್‍ಗಾಗಿ ದೈವದ ಮೊರೆ ಹೋದ ಮಡಿಕೇರಿ ಆಕಾಂಕ್ಷಿ ಭರತೀಶ್

    ನಾವು ಮಹಿಳೆಯರನ್ನು ದೇವತೆ ಎಂದು ಭಾವಿಸುತ್ತೇವೆ. ಆದರೆ ಹುಡುಗಿಯರು ಕೊಳಕು ಬಟ್ಟೆಗಳನ್ನು ಧರಿಸುತ್ತಾರೆ. ಇಂತಹ ಹೆಣ್ಮಕ್ಕಳು ಶೂರ್ಪನಖಿಯಂತೆ ಕಾಣುತ್ತಾರೆ, ದೇವರು ನಿಮಗೆ ಒಳ್ಳೆಯ ದೇಹವನ್ನು ನೀಡಿದ್ದಾನೆ, ಒಳ್ಳೆಯ ಬಟ್ಟೆಗಳನ್ನು ಧರಿಸಿ, ದಯವಿಟ್ಟು ನಿಮ್ಮ ಮಕ್ಕಳಿಗೆ ಚೆನ್ನಾಗಿ ಕಲಿಸಿ. ನಾನು ತುಂಬಾ ಚಿಂತಿತನಾಗಿದ್ದೇನೆ ಎಂದು ಅವರು ಹೇಳಿದರು.