Tag: ಕೈಲಾಶ್ ವಿಜಯವರ್ಗಿಯಾ

  • ಧರ್ಮದ ಆಧಾರದಲ್ಲೇ ದೇಶ ವಿಭಜನೆಯಾಗಿದೆ; ಭಾರತ ಹಿಂದೂ ರಾಷ್ಟ್ರ – ಕೈಲಾಶ್ ವಿಜಯವರ್ಗಿಯಾ

    ಧರ್ಮದ ಆಧಾರದಲ್ಲೇ ದೇಶ ವಿಭಜನೆಯಾಗಿದೆ; ಭಾರತ ಹಿಂದೂ ರಾಷ್ಟ್ರ – ಕೈಲಾಶ್ ವಿಜಯವರ್ಗಿಯಾ

    ಇಂದೋರ್: ಭಾರತ-ಪಾಕಿಸ್ತಾನ (India-Pakistan) ವಿಭಜನೆಗೆ ಧರ್ಮವೇ ಆಧಾರವಾಗಿತ್ತು. ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಮುಸ್ಲಿಂ ದೇಶವಾದರೆ, ಭಾರತ ಹಿಂದೂ ದೇಶವಾಗಿದೆ (Hindu Nation) ಎಂದು ಬಿಜೆಪಿ (BJP) ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ (Kailash Vijayvargiya) ಹೇಳಿದ್ದಾರೆ.

    ಮಧ್ಯಪ್ರದೇಶದ (Madhyapradesh) ಇಂದೋರ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದೂ ರಾಷ್ಟ್ರವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಭೋಪಾಲ್‌ನಲ್ಲಿ ವಾಸಿಸುವ ಅವರ ಮುಸ್ಲಿಂ ಸ್ನೇಹಿತ ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸುತ್ತಾನೆ ಮತ್ತು ಶಿವ ದೇವಾಲಯಕ್ಕೂ ಭೇಟಿ ನೀಡುತ್ತಾನೆ ಎಂದು ಅವರು ಹೇಳಿಕೊಂಡಿದ್ದಾರೆ. ತಮ್ಮ ಮುಸ್ಲಿಂ ಸ್ನೇಹಿತನಂತೆ, ತಮ್ಮ ಪೂರ್ವಜರು ಹನುಮಾನ್ ಚಾಲೀಸಾವನ್ನು ಪಠಿಸುತ್ತಾರೆ ಎಂದು ಭಾವಿಸುವ ಅನೇಕ ಜನರಿದ್ದಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: 2 ಸಾವಿರಕ್ಕೂ ಅಧಿಕ ಮೋದಿ ವಿರೋಧಿ ಪೋಸ್ಟರ್‌ಗಳು – ನಾಲ್ವರು ಅರೆಸ್ಟ್

    ಹನುಮಾನ್ ಮತ್ತು ಶಿವನನ್ನು ಪೂಜಿಸಲು ಹೇಗೆ ಪ್ರೇರಿತನಾದೆ ಎಂದು ನಾನು ನನ್ನ ಮುಸ್ಲಿಂ ಸ್ನೇಹಿತನನ್ನು ಕೇಳಿದೆ. ಅವರ ಕುಟುಂಬದ ಇತಿಹಾಸವನ್ನು ಓದಿದಾಗ, ಅವರ ಪೂರ್ವಜರು ರಾಜಸ್ಥಾನದ ರಜಪೂತರು ಮತ್ತು ಅವರ ಕೆಲವು ಸಂಬಂಧಿಕರು ಇನ್ನೂ ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ವಾಸಿಸುವ ರಜಪೂತರೆಂದು ನನ್ನ ಸ್ನೇಹಿತ ಉತ್ತರಿಸಿದ ಎಂದರು.

    ಇದಕ್ಕೂ ಮೊದಲು ಜೂನ್ 2022 ರಲ್ಲಿ ಕೈಲಾಶ್ ವಿಜಯವರ್ಗಿಯಾ ಅವರು ಅಗ್ನಿವೀರರ ಕುರಿತಾದ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಅಗ್ನಿವೀರರನ್ನು ತಮ್ಮ ಬಿಜೆಪಿ ಕಚೇರಿಯಲ್ಲಿ ಭದ್ರತಾ ಕೆಲಸಗಳಿಗೆ ನೇಮಿಸಿಕೊಳ್ಳುವುದಾಗಿ ಹೇಳಿದ್ದರು. ಈ ಹೇಳಿಕೆ ಟೀಕೆಗೆ ಗುರಿಯಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ನಾಡಿನ ಸಮಸ್ತ ಜನತೆಗೆ ಕನ್ನಡದಲ್ಲೇ ಯುಗಾದಿ ಶುಭಾಶಯ ತಿಳಿಸಿದ ಮೋದಿ

  • ಮಹಿಳೆಯರು ಬಾಯ್‍ಫ್ರೆಂಡ್‍ನ ಯಾವಾಗ ಬೇಕಾದ್ರೂ ಚೇಂಜ್ ಮಾಡ್ತಾರೆ – ನಿತೀಶ್ ಕುಮಾರ್‌ಗೆ ಬಿಜೆಪಿ ನಾಯಕನ ಟಾಂಗ್

    ಮಹಿಳೆಯರು ಬಾಯ್‍ಫ್ರೆಂಡ್‍ನ ಯಾವಾಗ ಬೇಕಾದ್ರೂ ಚೇಂಜ್ ಮಾಡ್ತಾರೆ – ನಿತೀಶ್ ಕುಮಾರ್‌ಗೆ ಬಿಜೆಪಿ ನಾಯಕನ ಟಾಂಗ್

    ಪಾಟ್ನಾ: ವಿದೇಶಿ ಮಹಿಳೆಯರು ತಮ್ಮ ಬಾಯ್‍ಫ್ರೆಂಡ್‍ನನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ವಿದೇಶಿ ಮಹಿಳೆಯರಿಗೆ ಹೋಲಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    NITHISH KUMAR

    ಗುರುವಾರ ಇಂದೋರ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ವಿದೇಶ ಪ್ರವಾಸದಲ್ಲಿದ್ದಾಗ, ಅಲ್ಲಿನ ಮಹಿಳೆಯರು ತಮ್ಮ ಬಾಯ್‍ಫ್ರೆಂಡ್‍ಗಳನ್ನು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳುತ್ತಾರೆ ಎಂದು ಒಬ್ಬರು ಹೇಳಿದ್ದರು. ಬಿಹಾರದ ಮುಖ್ಯಮಂತ್ರಿ ಕೂಡ ಅದೇ ರೀತಿ ಆಗಿದ್ದಾರೆ, ಅವರು ಯಾವಾಗ ಯಾರ ಕೈ ಹಿಡಿಯುತ್ತಾರೆ ಅಥವಾ ಬಿಡುತ್ತಾರೆ ಎಂಬುವುದೇ ತಿಳಿಯುವುದಿಲ್ಲ ಎಂದು ಹೇಳಿದ್ದಾರೆ.

    ಈ ವೀಡಿಯೋವನ್ನು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಿಳೆಯರಿಗೆ ಯಾವ ರೀತಿ ಗೌರವ ತೋರಿಸುತ್ತಿದ್ದಾರೆ ಎಂಬುವುದಕ್ಕೆ ಇಂದೊಂದು ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ನೆಲೆಸಲು ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಗೊತಬಯ ರಾಜಪಕ್ಸೆ

    ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‍ಡಿಎ ಸಮ್ಮಿಶ್ರ ಸರ್ಕಾರದಿಂದ ಬೇರ್ಪಟ್ಟು ಜೆಡಿಯು ಮತ್ತು ಬಿಜೆಪಿ ಜೊತೆಗೆ ವಾರಗಟ್ಟಲೆ ಹಗ್ಗಜಗ್ಗಾಟ ನಡೆಸಿದ ನಂತರ ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಕೈಜೋಡಿಸಿದೆ. ಕಳೆದ ವಾರ, ನಿತೀಶ್ ಕುಮಾರ್ ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಮರುದಿನ ಆರ್‌ಜೆಡಿ ಬೆಂಬಲದೊಂದಿಗೆ ಮತ್ತೆ ಸಿಎಂ ಕುರ್ಚಿಯನ್ನು ಅಲಂಕರಿಸಿದರು. ಇದನ್ನೂ ಓದಿ: ಕೊರೋನಾ ಬಳಿಕ ಶಾಲೆಗೆ ಬರುತ್ತಿಲ್ಲ 5 ಸಾವಿರ ಮಕ್ಕಳು!

    Live Tv
    [brid partner=56869869 player=32851 video=960834 autoplay=true]

  • ನಾಯಿ ಜೊತೆ ಕೈಲಾಶ್ ವಿಜಯವರ್ಗಿಯಾ ಫೋಟೋ ಕೊಲಾಜ್ – ವಿವಾದ ಸೃಷ್ಟಿಸಿದ ತಥಾಗತ ರಾಯ್

    ನಾಯಿ ಜೊತೆ ಕೈಲಾಶ್ ವಿಜಯವರ್ಗಿಯಾ ಫೋಟೋ ಕೊಲಾಜ್ – ವಿವಾದ ಸೃಷ್ಟಿಸಿದ ತಥಾಗತ ರಾಯ್

    ಅಗರ್ತಲಾ: ತ್ರಿಪುರಾದ ಮಾಜಿ ಗವರ್ನರ್ ತಥಾಗತ ರಾಯ್ ನಾಯಿ ಫೋಟೋ ಜೊತೆಗೆ ಬಿಜೆಪಿಯ ಪಶ್ಚಿಮ ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಫೋಟೋವನ್ನು ಕೊಲಾಜ್ ಮಾಡಿ ಟ್ವೀಟ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

    ಫೋಟೋ ಜೊತೆಗೆ, ಮತ್ತೆ ಪಶ್ಚಿಮ ಬಂಗಾಳದಲ್ಲಿ ವೊಡಾಫೋನ್ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಹಲವಾರು ವರ್ಷಗಳ ಹಿಂದೆ ವೊಡಾಫೋನ್ ತನ್ನ ಕಂಪನಿಯ ಜಾಹೀರಾತಿನಲ್ಲಿ ಪಗ್‍ಗಳನ್ನು ಬಳಸಲಾಗಿತ್ತು.

    ಚುನಾವಣಾ ಸೋಲಿನ ಹೊರತಾಗಿಯೂ ಕೈಲಾಶ್ ವಿಜಯವರ್ಗಿಯಾ ಇನ್ನೂ ಬಿಜೆಪಿ ಬಂಗಾಳದ ಉಸ್ತುವಾರಿಯಾಗಿದ್ದಾರೆ ಎಂಬ ನೆಟ್ಟಿಗರೊಬ್ಬರ ಟ್ವೀಟ್‍ಗೆ ಪ್ರತಿಕ್ರಿಯೆಯಾಗಿ ತಥಾಗತ ರಾಯ್ ಈ ಪೋಸ್ಟ್ ಅನ್ನು ಮಾಡಿದ್ದಾರೆ. ಇದನ್ನೂ ಓದಿ: 5 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ವಶ – ಇಬ್ಬರ ಬಂಧನ

    “ಕೈಲಾಶ್ ವಿಜಯವರ್ಗಿಯಾ ಅವರನ್ನು ಯಾರೂ ಉಲ್ಲೇಖಿಸಿಲ್ಲ. ಆದರೆ ಉನ್ನತ ನಾಯಕರೊಂದಿಗೆ ಅವರಿಗಿರುವ ನಿಕಟ ಬಾಂಧವ್ಯ ಬಹುಶಃ ಅವರನ್ನು ಸ್ಥಾನದಲ್ಲಿಯೇ ಉಳಿಸುತ್ತಿದೆ. ಕುತೂಹಲಕಾರಿ ವಿಚಾರವೆಂದರೆ, ಅವರು ಇನ್ನೂ ಬಿಜೆಪಿ ಬಂಗಾಳದ ಉಸ್ತುವಾರಿಯಾಗಿದ್ದಾರೆ. ಈ ಬಗ್ಗೆ ಬಿಜೆಪಿ ಕೊಲ್ಕತ್ತಾದಲ್ಲಿ ಸ್ಪಷ್ಟವಾದ ಮಾಹಿತಿಯಿಲ್ಲ,” ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

    ಈ ವರ್ಷದ ಆರಂಭದಲ್ಲಿ ನಡೆದ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಗೆಲುವು ಸಾಧಿಸಿತು, 294 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗಳಿಸಿತು ಮತ್ತು ಬಿಜೆಪಿಯನ್ನು 77ಕ್ಕೆ ಹಿಂದಿಕ್ಕಿತು. ಇದನ್ನೂ ಓದಿ: ಪ್ರತಿಭಟನಾ ಸ್ಥಳದಲ್ಲಿಯೇ ದೀಪಾವಳಿ ಆಚರಿಸಲಿದ್ದಾರೆ: ರಾಕೇಶ್ ಟಿಕಾಯತ್

    ಈ ಚುನಾವಣೆ ಸೋಲಿಗೆ ರಾಜ್ಯ ಪಕ್ಷದ ಅಧ್ಯಕ್ಷ ದಿಲೀಪ್ ಘೋಷ್ ಮತ್ತು ಪಕ್ಷದ ಕೇಂದ್ರ ವೀಕ್ಷಕರಾದ ಕೈಲಾಶ್ ವಿಜಯವರ್ಗಿಯಾ, ಶಿವಪ್ರಕಾಶ್ ಮತ್ತು ಅರವಿಂದ್ ಮೆನನ್ ಕಾರಣ ಎಂದು ತಥಾಗತ ರಾಯ್ ಆರೋಪಿಸಿದ್ದಾರೆ.