Tag: ಕೈರೋ

  • ಕೈರೋದ ಗಿಜಾ ಪಿರಮಿಡ್‌ಗೆ ಭೇಟಿ ನೀಡಿದ ಮೋದಿ

    ಕೈರೋದ ಗಿಜಾ ಪಿರಮಿಡ್‌ಗೆ ಭೇಟಿ ನೀಡಿದ ಮೋದಿ

    ಕೈರೋ: ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿರುವ ಈಜಿಪ್ಟ್ (Egypt) ರಾಜಧಾನಿಯ ಹೊರವಲಯದಲ್ಲಿರುವ ಗಿಜಾದ ದೈತ್ಯ ಪಿರಮಿಡ್‌ಗಳನ್ನು (Giza Pyramid) ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ವೀಕ್ಷಿಸಿದ್ದಾರೆ.

    ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್‌ಬೌಲಿ ಅವರೊಂದಿಗೆ ತೆರಳಿದ ಮೋದಿ ಉತ್ತರ ಈಜಿಪ್ಟ್‌ನ ಅಲ್-ಜಿಜಾ (ಗಿಜಾ) ಬಳಿ ನೈಲ್ ನದಿಯ ಪಶ್ಚಿಮ ದಂಡೆಯಲ್ಲಿ ಕಲ್ಲಿನ ಪ್ರಸ್ಥಭೂಮಿಯ ಮೇಲೆ ನಿರ್ಮಿಸಲಾದ 4ನೇ ರಾಜವಂಶದ 3 ಪಿರಮಿಡ್‌ಗಳಿಗೆ ಭೇಟಿ ನೀಡಿದರು.

    ಈಜಿಪ್ಟಿನ ಅತಿದೊಡ್ಡ ಪಿರಮಿಡ್ ಹಾಗೂ ಪ್ರಾಚೀನ ಸಾಮ್ರಾಜ್ಯದ 4ನೇ ರಾಜವಂಶದ ಅಡಿಯಲ್ಲಿ ಆಳಿದ ಫೇರೋ ಖುಫು ಅವರ ಸಮಾಧಿಯ ಬಗ್ಗೆ ಮೋದಿ ಮಾಹಿತಿಗಳನ್ನು ಪಡೆದುಕೊಂಡರು. 26ನೇ ಶತಮಾನದಲ್ಲಿ ಸುಮಾರು 27 ವರ್ಷಗಳ ಅವಧಿಯಲ್ಲಿ ನಿರ್ಮಿಸಲಾದ ಈ ಪಿರಮಿಡ್ ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿದೆ. ಮಾತ್ರವಲ್ಲದೆ ಇದು ಹಳೆಯದೂ ಆಗಿದ್ದು, ಬಹುಮಟ್ಟಿಗೆ ಹಾಗೇ ಉಳಿದುಕೊಂಡಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಅತ್ಯುನ್ನತ ‘ಆರ್ಡರ್ ಆಫ್ ದಿ ನೈಲ್’ ನೀಡಿ ಗೌರವಿಸಿದ ಈಜಿಪ್ಟ್

    ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ 2 ದಿನಗಳ ಈಜಿಪ್ಟ್ ಪ್ರವಾಸದಲ್ಲಿದ್ದಾರೆ. 26 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಈಜಿಪ್ಟ್‌ಗೆ ಭೇಟಿ ನೀಡಿದ್ದಾರೆ.

    ಮೋದಿ ಭಾನುವಾರ ಮುಂಜಾನೆ ಈಜಿಪ್ಟ್‌ನ 11ನೇ ಶತಮಾನದ ಐತಿಹಾಸಿಕ ಅಲ್-ಹಕೀಮ್ ಮಸೀದಿ ಹಾಗೂ ಕೈರೋದಲ್ಲಿನ ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧಸ್ಮಾರಕಕ್ಕೆ ಭೇಟಿ ನೀಡಿದರು. ಬಳಿಕ ಅವರಿಗೆ ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವವಾದ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ಈಜಿಪ್ಟ್‌ನಲ್ಲಿ 1,000 ವರ್ಷ ಹಳೆಯ ಮಸೀದಿಗೆ ಪ್ರಧಾನಿ ಮೋದಿ ಭೇಟಿ

  • ಚರ್ಚ್‌ಗೆ ಬೆಂಕಿ ಬಿದ್ದು 41 ಮಂದಿ ದುರ್ಮರಣ

    ಚರ್ಚ್‌ಗೆ ಬೆಂಕಿ ಬಿದ್ದು 41 ಮಂದಿ ದುರ್ಮರಣ

    ಕೈರೋ: ಈಜಿಪ್ಟ್‌ನ ರಾಜಧಾನಿ ಕೈರೋದಲ್ಲಿರುವ ಕಾಪ್ಟಿಕ್ ಕ್ರಿಶ್ಚಿಯನ್ ಚರ್ಚ್‌ನಲ್ಲಿ ಭಾನುವಾರ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಚರ್ಚ್‌ನಲ್ಲಿದ್ದ 41 ಜನರು ಸಾವನ್ನಪ್ಪಿದ್ದಾರೆ ಎಂದು ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ.

    ರಾಜಧಾನಿಯ ವಾಯುವ್ಯ, ಕಾರ್ಮಿಕ ವರ್ಗದ ಜಿಲ್ಲೆಯ ಇಂಬಾಬಾದಲ್ಲಿರುವ ಅಬು ಸಿಫೈನ್ ಚರ್ಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಉದ್ಭವಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ. ಇದನ್ನೂ ಓದಿ: ರಸ್ತೆ ಬದಿಯಲ್ಲಿ ಮೂಟೆಗಟ್ಟಲೇ ಗುಟ್ಕಾ, ತಂಬಾಕು ಪ್ಯಾಕೆಟ್‍ ಪತ್ತೆ

    ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಸದ್ಯ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲಾ ಪ್ರದೇಶಗಳಿಂದ ಸೇವೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಹಿಂದೆ ಆಪ್ತ ಸ್ನೇಹಿತರೂ ಸೇರಿದ್ದಾರೆ: ತಂದೆ ಆರೋಪ

    ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್‌ನಲ್ಲಿ ಹಲವಾರು ಮಾರಣಾಂತಿಕ ಬೆಂಕಿ ಅವಘಡಗಳು ನಡೆದಿವೆ. 2021ರ ಮಾರ್ಚ್‌ನಲ್ಲಿ ಕೈರೋದ ಜವಳಿ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದರು. 2020ರಲ್ಲಿ 2 ಆಸ್ಪತ್ರೆಗಳಲ್ಲಿ ಬೆಂಕಿ ಹೊತ್ತಿದ್ದರಿಂದ 14 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದರು.

    Live Tv
    [brid partner=56869869 player=32851 video=960834 autoplay=true]

  • ಯುವಕನನ್ನು ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿನಿ ವಿವಿಯಿಂದ ಡಿಬಾರ್: ವಿಡಿಯೋ ವೈರಲ್

    ಯುವಕನನ್ನು ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿನಿ ವಿವಿಯಿಂದ ಡಿಬಾರ್: ವಿಡಿಯೋ ವೈರಲ್

    ಕೈರೋ: ವಿದ್ಯಾರ್ಥಿನಿಯೊಬ್ಬಳು ಯುವಕನನ್ನು ತಬ್ಬಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆಕೆಯನ್ನು ವಿಶ್ವವಿದ್ಯಾಲಯದಿಂದಲೇ ಡಿಬಾರ್ ಮಾಡಿದ ಘಟನೆಯೊಂದು ಈಜಿಪ್ಟ್ ನಲ್ಲಿ ನಡೆದಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಮಂಡಿಯೂರಿ ಯುವತಿಗೆ ಹೂಗೂಚ್ಚ ನೀಡುವ ಮೂಲಕ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಬಳಿಕ ಯುವಕ ತನ್ನ ಉತ್ಸಾಹವನ್ನು ತಾಳಲಾರದೇ ಯುವತಿಯನ್ನು ತಬ್ಬಿಕೊಂಡಿದ್ದಾನೆ. ಯುವಕನನ್ನು ತಬ್ಬಿಕೊಂಡಿದ್ದಕ್ಕೆ ಯುವತಿ ತನ್ನ ಸಂಸ್ಥೆಯ ಗೌರವವನ್ನು ಹಾಳು ಮಾಡಿದ್ದಾಳೆಂದು ಅಲ್- ಅಜರ್ ವಿಶ್ವವಿದ್ಯಾಲಯ ಆಕೆಯನ್ನು ಡಿಬಾರ್ ಮಾಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ : ಕನ್ಯತ್ವದ ಬಗ್ಗೆ ಪ್ರೊಫೆಸರ್ ಪೋಸ್ಟ್

    ವರದಿಗಳ ಪ್ರಕಾರ ಯುವತಿ ಯುವಕನನ್ನು ತಬ್ಬಿಕೊಂಡ ವಿಡಿಯೋ ಅಲ್-ಅಜರ್ ವಿಶ್ವವಿದ್ಯಾಲಯದಲ್ಲಿ ಸೆರೆಯಾಗಿಲ್ಲ. ಬದಲಿಗೆ ಈ ವಿಡಿಯೋ ಮನ್ಸೌರಾ ವಿಶ್ವವಿದ್ಯಾಲಯದಲ್ಲಿ ಸೆರೆ ಹಿಡಿಯಲಾಗಿದೆ. ಅಲ್ – ಅಜರ್ ಈಜಿಪ್ಟಿನ ಅತ್ಯುನ್ನತ ಸುನ್ನಿ ಮುಸ್ಲಿಂ ಜನಾಂಗದ ಪ್ರಮುಖ ಶಾಖೆಯಾಗಿದ್ದು, ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಯಮವಿದೆ. ಇದನ್ನೂ ಓದಿ: ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕೆಲ ಸೆಕೆಂಡ್ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿ ಸಸ್ಪೆಂಡ್!

    ಈ ವಿಚಾರದ ಬಗ್ಗೆ ಅಲ್-ಅಜರ್ ವಿವಿಯ ವಕ್ತಾರ ಅಹ್ಮದ್ ಜರೈ ಮಾತನಾಡಿ, “ನಾವು ಆ ವಿದ್ಯಾರ್ಥಿನಿಯನ್ನು ಡಿಬಾರ್ ಮಾಡಲು ನಿರ್ಧರಿಸಿದ್ದೇವೆ. ವಿಡಿಯೋದಿಂದಾಗಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಯುವತಿ ದೇಶದಲ್ಲೇ ಪ್ರತಿಷ್ಠಿತವಾಗಿರುವ ನಮ್ಮ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ತಂದಿದ್ದಾಳೆ. ಮದುವೆ ಆಗದ ಯುವಕನನ್ನು ಯುವತಿ ತಬ್ಬಿಕೊಂಡು ಸಮಾಜದ ಮೌಲ್ಯಗಳು ಹಾಗೂ ತತ್ವಗಳನ್ನು ಉಲ್ಲಂಘಿಸಿದ್ದಾಳೆ” ಎಂದು ಹೇಳಿ ವಿವಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೋತಿಯ ಜನನಾಂಗ ಮುಟ್ಟಿ ಲೈಂಗಿಕ ಕಿರುಕುಳ – ಮಹಿಳೆಗೆ 3 ವರ್ಷ ಜೈಲು

    ಕೋತಿಯ ಜನನಾಂಗ ಮುಟ್ಟಿ ಲೈಂಗಿಕ ಕಿರುಕುಳ – ಮಹಿಳೆಗೆ 3 ವರ್ಷ ಜೈಲು

    ಕೈರೋ: ಕೋತಿಗೆ ಲೈಂಗಿಕವಾಗಿ ಕಿರುಕುಳ ನೀಡಿದ ಆರೋಪದ ಮೇರೆಗೆ 25 ವರ್ಷದ ಮಹಿಳೆಯೊಬ್ಬಳಿಗೆ ಈಜಿಪ್ಟಿನ ಕೋರ್ಟ್ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸುವಂತೆ ತೀರ್ಪು ನೀಡಿದೆ.

    ಬಸ್ಮಾ ಅಹ್ಮದ್ ಶಿಕ್ಷೆಗೆ ಗುರಿಯಾಗಿರುವ ಮಹಿಳೆ. ಕೋತಿಗೆ ಲೈಂಗಿಕವಾಗಿ ಹಿಂಸೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈಕೆಯನ್ನು ಬಂಧಿಸಲಾಗಿತ್ತು. ನಂತರ ತನಿಖೆ ಮಾಡಿ ಮನ್ಸೌರಾ ನಗರದಲ್ಲಿನ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿದೆ.

    ವಿಡಿಯೋ ದಲ್ಲಿ ಏನಿದೆ?
    ಮ್ಯಾನ್ಸೌರದಲ್ಲಿರುವ ನೈಲ್ ಡೆಲ್ಟಾ ನಗರದಲ್ಲಿ ಪ್ರಾಣಿಗಳ ಅಂಗಡಿಗೆ ಬಸ್ಮಾ ಅಹ್ಮದ್ ಹೋಗಿದ್ದಳು. ಈ ವೇಳೆ ಅಲ್ಲಿದ್ದ ಕೋತಿಯ ಜನನಾಂಗವನ್ನು ಮುಟ್ಟಿ ಹಿಂಸಿಸುತ್ತಿದ್ದಳು. ಅಲ್ಲಿದ್ದ ಸುತ್ತಮುತ್ತಲಿನ ಜನರು ಈಕೆಯ ವರ್ತನೆಯನ್ನು ನೋಡಿ ನಕ್ಕಿದ್ದಾರೆ. ಅಲ್ಲದೇ ಮಹಿಳೆಯ ಈ ಕುಚೇಷ್ಟೆಯನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ಗಳಲ್ಲಿ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಹೀಗಾಗಿ ಈ ವಿಡಿಯೋ ವೈರಲ್ ಆಗಿದೆ.

    ವಿಡಿಯೋ 30 ಸೆಕೆಂಡ್ ಗಳಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮಹಿಳೆಯ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಬಳಿಕ ಅಕ್ಟೋಬರ್ ನಲ್ಲಿ ಮಹಿಳೆಯನ್ನು ಬಂಧಿಸಲಾಗಿತ್ತು. ಮೊದಲು ತನ್ನ ಮೇಲಿನ ಆರೋಪವನ್ನು ಮಹಿಳೆ ನಿರಾಕರಿಸಿದ್ದಳು. ಬಳಿಕ ಕೋರ್ಟ್ ನಲ್ಲಿ ಮಹಿಳೆ ತಪ್ಪೊಪ್ಪಿಕೊಂಡಿದ್ದು, ನಾನು ಕೋತಿಯನ್ನು ನಗಿಸಲು ಈ ತಮಾಷೆ ಮಾಡಿದ್ದೇನೆ. ಆದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರು ಅಪ್ಲೋಡ್ ಮಾಡಿದ್ದಾರೆ ಗೊತ್ತಿಲ್ಲ ಎಂದು ಹೇಳಿಕೆ ಕೊಟ್ಟಿದ್ದಳು.

    ಈ ಕುರಿತು ತನಿಖೆ ನಡೆಸಿದ ಮ್ಯಾನ್ಸೌರಾ ನ್ಯಾಯಾಲಯ ಮಹಿಳೆಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಿರಮಿಡ್ ಮೇಲೆ ಹತ್ತಿ ಬೆತ್ತಲಾಗಿ ಸೆಕ್ಸ್ – ಯೂಟ್ಯೂಬಿನಲ್ಲಿ ವಿಡಿಯೋ ಅಪ್ಲೋಡ್

    ಪಿರಮಿಡ್ ಮೇಲೆ ಹತ್ತಿ ಬೆತ್ತಲಾಗಿ ಸೆಕ್ಸ್ – ಯೂಟ್ಯೂಬಿನಲ್ಲಿ ವಿಡಿಯೋ ಅಪ್ಲೋಡ್

    ಕೈರೋ: ಈಜಿಪ್ಟ್ ವಿಶ್ವ ಪ್ರಸಿದ್ಧ ಗೀಝಾ ಕುಫು ಪಿರಮಿಡ್ ಮೇಲೆ ಹತ್ತಿರದ ಡ್ಯಾನಿಷ್ ಜೋಡಿಯೊಂದು ಬಟ್ಟೆ ಬಿಚ್ಚಿ ಬೆತ್ತಲಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಜೋಡಿಯ ಅಸಭ್ಯ ವರ್ತನೆಯಿಂದ ಈಜಿಪ್ಟ್ ಅಧಿಕಾರಿಗಳು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಡ್ಯಾನಿಷ್ ಜೋಡಿಯ 3 ನಿಮಿಷಗಳ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

    ವಿಡಿಯೋದಲ್ಲಿ ಏನಿದೆ?
    ಈ ವಿಡಿಯೋದಲ್ಲಿ ಯುವತಿಯೊಬ್ಬಳು ಪಿರಮಿಡ್ ಮೇಲೆ ಕಿರಿದಾದ ಜಾಗದ ಮೂಲಕ ಕತ್ತಲೆಯಲ್ಲಿ ಮೇಲೆ ಹತ್ತಿ ಹೋಗಿದ್ದಾಳೆ. ಬಳಿಕ ಮೇಲೆ ನಿಂತು ಕೈರೋ ಪಟ್ಟಣವನ್ನು ನೋಡಿ ಸಂತೋಷ ಪಟ್ಟಿದ್ದಾಳೆ. ಆದರೆ ಈ ವೇಳೆ ತನ್ನ ಬಟ್ಟೆ ಬಿಚ್ಚಿ ನಗ್ನಳಾಗಿದ್ದಾಳೆ. ಬಳಿಕ ಪಿರಮಿಡ್ ಮೇಲೆ ಜೋಡಿ ಬೆತ್ತಲಾಗಿ ಸೆಕ್ಸ್ ಮಾಡುತ್ತಿರುವ ಫೋಟೋ ಮತ್ತು ಇಬ್ಬರು ಜೋಡಿಯಾಗಿ ನಿಂತು ಪೋಸ್ ಕೊಟ್ಟಿರುವ ಫೋಟೋವನ್ನು ಹಾಕಲಾಗಿದೆ.

    ಈಜಿಪ್ಟ್ ದೇಶದ ಕಾನೂನಿನ ಪ್ರಕಾರ ಈ ರೀತಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಲ್ಲಿನ ಪುರಾತತ್ವ ಇಲಾಖೆಗಳ ಸಚಿವ ಖಲೀದ್ ಅಲ್ ಅನಾನಿ ಈ ಕುರಿತು ತನಿಖೆ ಮಾಡುವಂತೆ ಆದೇಶಿಸಿದ್ದಾರೆ. ಇಬ್ಬರು ವಿದೇಶಿಗರು ರಾತ್ರಿ ವೇಳೆ ಪಿರಮಿಡ್ ಮೇಲೆ ಹತ್ತಿ ಅಸಭ್ಯವಾಗಿ ವರ್ತಿಸಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಲಾಗಿದೆ. ಆದ್ದರಿಂದ ಶೀಘ್ರವೇ ಆ ಜೋಡಿಯನ್ನು ಪತ್ತೆ ಮಾಡಿ ತನಿಖೆ ಮಾಡುವಂತೆ ಅನಾನಿ ತಿಳಿಸಿದ್ದಾರೆ.

    ಈ ವಿಡಿಯೋವನ್ನು ಬುಧವಾರ ಡ್ಯಾನಿಷ್ ಛಾಯಾಗ್ರಾಹಕ ಆಂಡ್ರಿಯಾಸ್ ಹ್ವಿಡ್ ಅಪ್ಲೋಡ್ ಮಾಡಿದ್ದಾರೆ. ಅವರು ಪ್ರಪಂಚದಾದ್ಯಂತ ಅಧಿಕ ಎತ್ತರದ ವೀವ್ ಪಾಯಿಂಟ್ ಗಳಿಗೆ ಹೋಗಿ ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡುತ್ತಾರೆ. ಕೆಲವೊಮ್ಮೆ ನಗ್ನ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ ಎಂದು ಈಜಿಪ್ಟ್ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಬರೆದು 15ರ ಬಾಲಕ ಆತ್ಮಹತ್ಯೆ!

    ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಬರೆದು 15ರ ಬಾಲಕ ಆತ್ಮಹತ್ಯೆ!

    ಕೈರೋ: 15 ವರ್ಷದ ಬಾಲಕನೊಬ್ಬ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಜಿಪ್ಟ್ ನಲ್ಲಿ ನಡೆದಿದೆ.

    ಮೊಹಮ್ಮದ್ ಯಾಸೀರ್(15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಯಾಸೀರ್ ಖಿನ್ನತೆಯಿಂದ ಬಳಲುತ್ತಿದ್ದನು ಹಾಗೂ ತನ್ನ ಜೀವನವನ್ನು ಕೊನೆಗಳಿಸಲು ನಿರ್ಧರಿಸಿದ್ದನು ಎಂದು ವರದಿಯಾಗಿದೆ.

    ಫೇಸ್‍ಬುಕ್ ಸ್ಟೇಟಸ್‍ನಲ್ಲಿ ಏನಿದೆ?
    ನಾನು ನಿಜವಾಗಲೂ ಆತ್ಮಹತ್ಯೆ ಮಾಡಿಕೊಳ್ಳಬೇಕು. ಈ ದುಃಸ್ವಪ್ನ ನನಗೆ ಸಾಕಾಗಿ ಹೋಗಿದೆ. ನಾನೇನಾದರೂ ಆತ್ಮಹತ್ಯೆ ಮಾಡಿಕೊಂಡರೆ, ನಾನು ಅಪ್ರಾಪ್ತ ಹಾಗೂ ಜವಾಬ್ದಾರಿ ಇಲ್ಲದ ಬಾಲಕ ಎಂದು ತಿಳಿಯಬೇಡಿ. ಏಕೆಂದರೆ ನಾನು ಸಾಕಷ್ಟು ನೋವನ್ನು ಸಹಿಸಿಕೊಂಡಿದ್ದೇನೆ. ನನ್ನಷ್ಟು ನೋವನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ನನಗಾಗಿ ಪ್ರಾರ್ಥನೆ ಮಾಡಿ ಎಂದು ಯಾಸೀರ್ ತನ್ನ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದ್ದ.

    ಯಾಸೀರ್ ನ ಈ ಸ್ಟೇಟಸ್ ನೋಡಿ ಆತನ ಸ್ನೇಹಿತರು ಹಾಗೂ ಫಾಲೋವರ್ಸ್ ಆತನಿಗೆ ಬುದ್ಧಿವಾದ ಹೇಳಿದ್ದರು. ದೇವರಲ್ಲಿ ನಂಬಿಕೆಯಿಡು. ತಾಳ್ಮೆಯಿಂದ ನಿನ್ನ ಸಮಸ್ಯೆಗಳಿಂದ ಹೊರ ಬರುವುದಕ್ಕೆ ಪ್ರಯತ್ನ ಮಾಡು ಎಂದು ಯಾಸೀರ್ ಗೆ ಬುದ್ಧಿವಾದ ಹೇಳಿದ್ದರು.

    ತನ್ನ ಸ್ಟೇಟಸ್‍ಗೆ ಪ್ರತಿಕ್ರಿಯಿಸಿದ ತನ್ನ ಸ್ನೇಹಿತರ ಮಾತನ್ನು ಕೇಳದೆ ಭಾನುವಾರ ಜಗಾಜಿಗ್‍ನ ಮೋಯಿಸ್ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿ ಮಾಡಿದೆ.

    ಯಾಸೀರ್ ಸಮುದ್ರಕ್ಕೆ ಜಿಗಿಯುವುದ್ದನ್ನು ನೋಡಿದ ಅಲ್ಲಿನ ಸ್ಥಳಿಯರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ನಂತರ ಆತ್ಮಹತ್ಯೆ ಮಾಡಿಕೊಂಡ ಬಾಲಕ ಯಾಸೀರ್ ಎಂಬುದು ತಿಳಿದು ಬಂದಿದೆ.

  • ಸಮುದ್ರ ನೀರಿನಲ್ಲೇ ಮಗುವಿಗೆ ಜನ್ಮ: ರಷ್ಯಾ ಮಹಿಳೆಯಿಂದ ವಿಶೇಷ ಸಾಧನೆ

    ಸಮುದ್ರ ನೀರಿನಲ್ಲೇ ಮಗುವಿಗೆ ಜನ್ಮ: ರಷ್ಯಾ ಮಹಿಳೆಯಿಂದ ವಿಶೇಷ ಸಾಧನೆ

    ಕೈರೋ: ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡುವ ಸಲುವಾಗಿ ರಷ್ಯಾ ಮಹಿಳೆ ರೆಸಾರ್ಟ್ ಗೆ ಪ್ರಯಾಣಿಸಿ ನಂತರ ಈಜಿಪ್ಟಿನ ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪರೂಪದ ಸಂಗತಿವೊಂದು ನಡೆದಿದೆ.

    ಹದಿಯಾ ಹೋಸ್ನಿ ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಉತ್ತರ ಶಹರ್ ಎಲ್-ಶೇಖ್ ನ ಡಹಾಬ್ ನಲ್ಲಿರುವ ತನ್ನ ಚಿಕ್ಕಪ್ಪನ ಅಪಾರ್ಟ್ ಮೆಂಟ್‍ನ ಬಾಲ್ಕನಿಯಿಂದ ಡೆಲಿವರಿ ಸಮಯದಲ್ಲಿನ ಫೋಟೋಗಳನ್ನು ತೆಗೆಯಲಾಗಿದೆ.

    ಮಗುವಿಗೆ ಸಮುದ್ರದಲ್ಲಿ ಜನ್ಮ ನೀಡಬೇಕು ಎಂದು ಮೊದಲೇ ತಯಾರಿ ಮಾಡಿಕೊಂಡಿದ್ದೇವು, ಫೋಟೋಗಳಲ್ಲಿ ವೃದ್ಧರೊಬ್ಬರು ಮಗುವನ್ನು ಹಿಡಿದುಕೊಂಡಿರುವುದನ್ನು ನೀವು ನೋಡಬಹುದು. ಈ ವ್ಯಕ್ತಿ ನೀರಿನಲ್ಲಿ ಡೆಲಿವರಿ ಮಾಡಿಸುವುದರಲ್ಲಿ ಸ್ಪೆಷಲಿಸ್ಟ್ ಎಂದು ಹದಿಯಾ ಹೇಳಿದ್ದಾರೆ.

    ಮಗುವಿಗೆ ಜನ್ಮ ನೀಡಿ ಕೆಲವೇ ನಿಮಿಷಗಳಲ್ಲಿ ಹದಿಯಾ ಕೂಡ ಸಮುದ್ರದಿಂದ ಹೊರಬಂದಿದ್ದಾರೆ. ಅವರು ಸಮುದ್ರದಿಂದ ಹೊರಬಂದಿದ್ದನ್ನು ನೋಡಿದ್ದರೆ, ಈಜಲು ಹೋಗಿ ಹಿಂತಿರುಗಿ ಬಂದ ಮಹಿಳೆಯಂತೆ ಆರಾಮಾಗಿ ಸಮುದ್ರದಿಂದ ಹೊರಬಂದಿರುವುದನ್ನು ಕಾಣಬಹುದು.

    ಹದಿಯಾ ಮಗುವಿಗೆ ಜನ್ಮ ನೀಡಲು ಮೊದಲು ಸಮುದ್ರಕ್ಕೆ ಈಜಲು ಹೋದರು. ಅವರ ಹಿಂದೆಯೇ ಆಕೆಯ ಪತಿ ಹಾಗೂ ನೀರಿನಲ್ಲಿ ಡೆಲಿವರಿ ಮಾಡುವ ವೈದ್ಯರು ಹಿಂದೆ ಹೋಗಿ ಡೆಲಿವರಿ ಮಾಡಿಸಿದ್ದರು ಎಂದು ವರದಿಯಾಗಿದೆ.

    ಮಗು ಜನಿಸಿದ ಮೇಲೆ ಶಿಶುವನ್ನು ಬೌಲ್‍ನಲ್ಲಿಟ್ಟರು. ನಂತರ ವೈದ್ಯರು ಹಾಗೂ ಪತಿ ಶಿಶುವನ್ನು ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ಸ್ವಲ್ಪ ಸಮಯದ ನಂತರ ಹದಿಯಾ ಕೂಡ ತಮ್ಮ ಕುಟುಂಬದ ಜೊತೆ ಸೇರಿಕೊಂಡರು ಎಂದು ಪತ್ರಿಕೆವೊಂದು ವರದಿ ಮಾಡಿದೆ.

    ಹದಿಯಾ ಈ ಫೋಟೋಗಳನ್ನು ಶನಿವಾರ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. 2,000ಕ್ಕೂ ಹೆಚ್ಚು ಶೇರ್ ಆಗಿ, ಕಮೆಂಟ್ಸ್ ಗಳು ಬಂದಿವೆ. ಡೆಲಿವರಿ ಆದ ಬಳಿಕ ತಾಯಿ ಮಗು ಕ್ಷೇಮವಾಗಿದ್ದಾರೆ ಎಂದು ವರದಿಯಾಗಿದೆ.