Tag: ಕೈದಿಗಳು

  • ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

    ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

    ಕಠ್ಮಂಡು: ಸಾಮಾಜಿಕ ಮಾಧ್ಯಮ ನಿಷೇಧ ಖಂಡಿಸಿ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ, ನೇಪಾಳದ (Nepal Protest) ವಿವಿಧ ಜೈಲುಗಳಿಂದ ಕೈದಿಗಳು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

    18 ಜಿಲ್ಲೆಗಳಲ್ಲಿ 6,000 ಕ್ಕೂ ಹೆಚ್ಚು ಕೈದಿಗಳು ಜೈಲುಗಳಿಂದ ಪರಾರಿಯಾಗಿದ್ದಾರೆ. ಅನೇಕ ಸ್ಥಳಗಳಲ್ಲಿ ಕೈದಿಗಳು ಜೈಲಿನ ಬಾಗಿಲುಗಳನ್ನು ಮುರಿದಿದ್ದಾರೆ. ಕೆಲವು ಸ್ಥಳಗಳಲ್ಲಿ ಅವರು ಹೊರಬರಲು ಗೋಡೆಗಳನ್ನು ನೆಲಸಮಗೊಳಿಸಿದ್ದಾರೆ. ಇದನ್ನೂ ಓದಿ: Nepal | 120 ವರ್ಷಗಳಷ್ಟು ಹಳೆಯದಾದ, ಏಷ್ಯಾದ ಅತಿದೊಡ್ಡ ಅರಮನೆ ʻಸಿಂಹ ದರ್ಬಾರ್‌ʼ ಧಗಧಗ

    ಈ ಘಟನೆಯು ದೇಶದಲ್ಲಿ ಈಗಾಗಲೇ ತಲೆದೋರಿರುವ ಅವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದಾಗಿ ಅಧಿಕಾರಿಗಳು ನಿಯಂತ್ರಣ ಪಡೆಯಲು ಹೆಣಗಾಡುತ್ತಿದ್ದಾರೆ.

    ಶೀತಲ್ ನಿವಾಸ್ ಎಂದೇ ಹೆಸರಾಗಿರುವ ರಾಷ್ಟ್ರಪತಿ ಭವನವನ್ನು ನೇಪಾಳ ಸೇನೆ ವಶಪಡಿಸಿಕೊಂಡಿದೆ. ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಪ್ರತಿಭಟನಾಕಾರರು ರಾಷ್ಟ್ರಪತಿ ಭವನವನ್ನು ಹಾನಿಗೊಳಿಸಿ ಬೆಂಕಿ ಹಚ್ಚಿದರು. ಬಳಿಕ ನೇಪಾಳ ಸೇನೆಯು ಅದನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಜನರ ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಸರ್ಕಾರಿ ಆಸ್ತಿಯ ಮೇಲಿನ ದಾಳಿಯ ಘಟನೆಗಳು ದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಸರ್ಕಾರಿ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಈಗ ಪ್ರದೇಶವನ್ನು ಸುತ್ತುವರೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ನೇಪಾಳ ಧಗ ಧಗ – ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸಿಎಂ ಸೂಚನೆ

    ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನೇಪಾಳಗಂಜ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಆದಾಗ್ಯೂ, ತುರ್ತು ಸೇವೆಗಳು ಮುಂದುವರಿಯಲಿದ್ದು, ಅಗತ್ಯ ಕೆಲಸಗಳಿಗಾಗಿ ಪ್ರಯಾಣಿಸುವವರನ್ನು ತಡೆಯಲಾಗುತ್ತಿಲ್ಲ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಭಾರತೀಯ ಭದ್ರತಾ ಪಡೆಗಳು ನೇಪಾಳಿ ಸೇನೆಯೊಂದಿಗೆ ಸಂಪರ್ಕದಲ್ಲಿವೆ ಎಂದು ವರದಿಯಾಗಿದೆ.

  • ಕೈದಿಗಳು 6 ಸಾವಿರ ಕೊಟ್ರೆ ಕೀ ಪ್ಯಾಡ್ ಫೋನ್, 15,000ಕ್ಕೆ ಆ್ಯಂಡ್ರಾಯ್ಡ್‌ ಫೋನ್ – ಮೈಸೂರು ಕೇಂದ್ರ ಕಾರಾಗೃಹದ ಸ್ಥಿತಿ ಬಿಚ್ಚಿಟ್ಟ ಸರ್ಕಾರಿ ಸದಸ್ಯ

    ಕೈದಿಗಳು 6 ಸಾವಿರ ಕೊಟ್ರೆ ಕೀ ಪ್ಯಾಡ್ ಫೋನ್, 15,000ಕ್ಕೆ ಆ್ಯಂಡ್ರಾಯ್ಡ್‌ ಫೋನ್ – ಮೈಸೂರು ಕೇಂದ್ರ ಕಾರಾಗೃಹದ ಸ್ಥಿತಿ ಬಿಚ್ಚಿಟ್ಟ ಸರ್ಕಾರಿ ಸದಸ್ಯ

    ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದ ಒಳಗೆ ಕೈದಿಗಳು ಕೀ ಪ್ಯಾಡ್‌ ಫೋನ್ ಬೇಕು ಅಂದರೆ 6 ಸಾವಿರ ರೂ. ಕೊಡಬೇಕು. ಆ್ಯಂಡ್ರಾಯ್ಡ್‌ ಫೋನ್ ಬೇಕು ಅಂದ್ರೆ 15 ರಿಂದ 20 ಸಾವಿರ ರೂ. ಕೊಡಬೇಕು. ಇಂತಹ ಮಾಹಿತಿಯನ್ನು ಖುದ್ದು ಜೈಲು ಸಂದರ್ಶಕ ಮಂಡಳಿ ಸದಸ್ಯರೇ ಅಧಿಕೃತವಾಗಿ ಹೇಳಿದ್ದಾರೆ.

    ಜೈಲು ಸಂದರ್ಶಕ ಮಂಡಳಿ ಸದಸ್ಯ ಪವನ್ ಸಿದ್ದರಾಮು ಈ ರೀತಿಯ ಸ್ಫೋಟಕ ಹೇಳಿಕೆ ನೀಡಿ, ಮೈಸೂರು ಕಾರಾಗೃಹದಲ್ಲಿನ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ಜೈಲಿನಲ್ಲಿರುವ ಕೈದಿಗಳೇ ನನಗೂ ಬಹಳಷ್ಟು ಸಾರಿ ಒಳಗಿನಿಂದ ಕರೆ ಮಾಡಿದ್ದಾರೆ. ಮೈಸೂರು ಜೈಲಿನಲ್ಲಿ ಅಕ್ರಮಕ್ಕೆ ಜೈಲು ಅಧೀಕ್ಷಕರಾಗಿದ್ದ ರಮೇಶ್ ಕುಮಾರ್, ಜೈಲರ್ ಧರಣೇಶ್ ನೇರ ಕಾರಣ ಎಂದು ಆರೋಪಿಸಿದ್ದಾರೆ‌.

    ಬೀಡಿ, ಸಿಗರೇಟ್ ರಾಜಾರೋಷವಾಗಿ ಜೈಲಿನ ಒಳಗೆ ಹೋಗುತ್ತಿದೆ. ಕೈದಿಗಳು ಸಿಗರೇಟ್, ಬೀಡಿ ಸೇಯೋದು ನನಗೆ ಗೊತ್ತಿದೆ. ಕೂಡಲೇ ಮೈಸೂರು ಕೇಂದ್ರ ಕಾರಾಗೃಹದ ಅವ್ಯವಹಾರದ ತನಿಖೆ ಆಗಬೇಕು ಎಂದು ಮೈಸೂರು ಕೇಂದ್ರ ಕಾರಾಗೃಹ ಮಂಡಳಿ ಸದಸ್ಯ ಪವನ್ ಸಿದ್ದರಾಮು ಒತ್ತಾಯಿಸಿದ್ದಾರೆ.

  • ಮೈಸೂರು ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮೂವರು ಕೈದಿಗಳು ಸಾವು

    ಮೈಸೂರು ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮೂವರು ಕೈದಿಗಳು ಸಾವು

    – ಕೇಕ್‌ಗೆ ಬಳಸುವ ಎಸ್ಸೆನ್ಸ್‌ ಸೇವಿಸಿದ್ದ ಕೈದಿಗಳು

    ಮೈಸೂರು: ಇಲ್ಲಿನ ಕಾರಾಗೃಹದಲ್ಲಿ (Mysuru Jail) ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮೂವರು ಕೈದಿಗಳು ಮೃತಪಟ್ಟಿದ್ದಾರೆ. ಕೇಕ್ ತಯಾರಿಕೆಗೆ ಬಳಸುವ ಎಸ್ಸೆನ್ಸ್‌ (Cake Essence) ದ್ರವ ಕುಡಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.

    ವಿವಿಧ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಕೈದಿಗಳು ಮೃತಪಟ್ಟಿದ್ದಾರೆ. ಡಿಸೆಂಬರ್ 26 ರಂದು ಮೈಸೂರು ಕಾರಾಗೃಹದಲ್ಲಿ ಬೇಕರಿ ಪದಾರ್ಥಗಳನ್ನು ತಯಾರಿಸುವಾಗ ಕೈದಿಗಳಾದ ಮಾದೇಶ್, ನಾಗರಾಜ್ ಮತ್ತು ರಮೇಶ್ ಪದಾರ್ಥಗಳಿಗೆ ಬಳಸುವ ಎಸ್ಸೆನ್ಸಿಯಲ್ ದ್ರವವನ್ನು ಕುಡಿದಿದ್ದರು. ಪರಿಣಾಮ ಮೂವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು.

    ಮೂವರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ಗುಂಡ್ಲುಪೇಟೆಯ ಮಾದೇಶ್ ಮೃತಪಟ್ಟಿದ್ದ. ನಿನ್ನೆ ಚಾಮರಾಜನಗರ ಮೂಲದ ನಾಗರಾಜ್ ಮೃತಪಟ್ಟಿದ್ದ. ಇವತ್ತು ಮಂಡ್ಯ ಮೂಲದ ರಮೇಶ್ ಮೃತಪಟ್ಟಿದ್ದಾನೆ. ದನ್ನೂ ಓದಿ: ಸ್ಟ್ರಾಂಗ್‌ ಆಗಿರಿ – ರೋಹಿತ್‌ ಕ್ರಿಕೆಟ್‌ ಲೋಕದ ಸೂಪರ್‌ ಸ್ಟಾರ್‌ ಎಂದ ಪೋರ್ನ್‌ ಸ್ಟಾರ್‌

    ಮೃತ ದೇಹಗಳ ಮರಣೋತ್ತರ ಪರೀಕ್ಷೆ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆಸಿ ನಂತರ ಮೃತ ದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಪ್ರಕರಣ ಬಗ್ಗೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಇಲಾಖಾ ಮಟ್ಟದ ತನಿಖೆ ಕೂಡ ಶುರು ಮಾಡಿದ್ದಾರೆ. ದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಅಲ್ಲ, ಇಂದು ಸಿಎಂ ಸಮ್ಮುಖದಲ್ಲೇ ಶರಣಾಗಲಿದ್ದಾರೆ ನಕ್ಸಲರು

  • ದುರ್ಗಾ ಪೂಜೆ – ಜೈಲಲ್ಲಿರೋ ಕೈದಿಗಳಿಗೆ ಮಟನ್‌ ಬಿರಿಯಾನಿ, ಚಿಕನ್‌ ಕರಿ ಊಟ

    ದುರ್ಗಾ ಪೂಜೆ – ಜೈಲಲ್ಲಿರೋ ಕೈದಿಗಳಿಗೆ ಮಟನ್‌ ಬಿರಿಯಾನಿ, ಚಿಕನ್‌ ಕರಿ ಊಟ

    ಕೋಲ್ಕತ್ತಾ: ದುರ್ಗಾ ಪೂಜೆ ಹಬ್ಬದಿಂದ ಹೊರಗುಳಿಯಂತೆ ನೋಡಿಕೊಳ್ಳಲು ಕೈದಿಗಳಿಗೆ ಆ ದಿನದಂದು ಮಟನ್‌ ಬಿರಿಯಾನಿ, ಚಿಕನ್‌ ಕರಿ ನೀಡಲು ಪಶ್ಚಿಮ ಬಂಗಾಳ ಕ್ರಮವಹಿಸಿದೆ.

    ಕೈದಿಗಳಿಗೆ ನೀಡುವ ಆಹಾರದ ಮೆನುವಿನಲ್ಲಿ ಬದಲಾವಣೆ ತರಲಾಗಿದೆ. ಮಟನ್‌ ಬಿರಿಯಾನಿ, ಬಸಂತಿ ಪಲಾವ್‌, ಚಿಕನ್‌ ಕರಿ ನೀಡಲಾಗುವುದು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

    ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಬದಲಾಗಿರುವ ಮೆನುವು ಷಷ್ಠಿ (ಅ.9) ರಿಂದ ದಶಮಿ (ಅ.12) ವರೆಗೆ ದುರ್ಗಾ ಪೂಜೆಯ ಪ್ರಾರಂಭ ಮತ್ತು ಅಂತ್ಯದ ವರೆಗೂ ಈ ವಿಶೇಷ ಭೋಜನಾ ಇರಲಿದೆ.

    ಪ್ರತಿ ಹಬ್ಬದ ಸಮಯದಲ್ಲಿ ಉತ್ತಮ ಆಹಾರಕ್ಕಾಗಿ ಕೈದಿಗಳು ವಿನಂತಿ ಮಾಡಿಕೊಳ್ಳುತ್ತಿದ್ದರು. ನಾವು ಈ ವರ್ಷ ಹೊಸ ಮೆನುವನ್ನು ತಂದಿದ್ದೇವೆ. ಇದು ಅವರ ಮುಖದಲ್ಲಿ ನಗು ತಂದಿದೆ ಎಂಬ ಭರವಸೆ ಇದೆ. ನಾವು ವೈಯಕ್ತಿಕವಾಗಿ ಅವರನ್ನು ಸುಧಾರಿಸಲು ಇದು ಅತ್ಯಂತ ಸಕಾರಾತ್ಮಕ ಕ್ರಮ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

    ಅಡುಗೆ ಕೆಲಸ ಮಾಡುವ ಕೈದಿಗಳೇ ದುರ್ಗಾ ಪೂಜೆಯ ಸಂದರ್ಭದಲ್ಲಿ ಖಾದ್ಯಗಳನ್ನು ತಯಾರಿಸಲಿದ್ದಾರೆ. ಮೆನುವಿನಲ್ಲಿ ಮಚರ್ ಮಾತಾ ದಿಯೆ ಪುಯಿ ಶಕ್, ಮಾಚರ್ ಮಾತಾ ದಿಯೆ ದಾಲ್, ಲುಚಿ- ಚೋಲರ್ ದಾಲ್, ಪಯೇಶ್ (ಬಂಗಾಳಿ ಗಂಜಿ), ಚಿಕನ್ ಕರಿ, ಆಲು ಪೊಟೋಲ್ ಚಿಂಗ್ರಿ, ‘ರೈತಾ’ (ಮಿಶ್ರಿತ ಮೊಸರು) ಮತ್ತು ‘ಬಸಂತಿ ಪಲಾವ್ ಜೊತೆ ಮಟನ್ ಬಿರಿಯಾನಿ ಇದೆ.

    ಕೈದಿಗಳ ಧಾರ್ಮಿಕ ಭಾವನೆ ಗೌರವಿಸಲು ಎಲ್ಲರಿಗೂ ಮಾಂಸಾಹಾರ ನೀಡಲಾಗುವುದಿಲ್ಲ. ಕೈದಿಗಳು ತಮಗೆ ಬೇಕಾದ ಖಾದ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

  • ಜೈಲಿನಲ್ಲಿ ಶ್ರೀರಾಮೋತ್ಸವ ಆಚರಿಸಿದ್ದಕ್ಕೆ ಹಿಂದೂ ಕೈದಿಗಳ ಮೇಲೆ ಹಲ್ಲೆ ಆರೋಪ!

    ಜೈಲಿನಲ್ಲಿ ಶ್ರೀರಾಮೋತ್ಸವ ಆಚರಿಸಿದ್ದಕ್ಕೆ ಹಿಂದೂ ಕೈದಿಗಳ ಮೇಲೆ ಹಲ್ಲೆ ಆರೋಪ!

    – ಖುದ್ದು ಜೈಲರ್ ಸಮ್ಮುಖದಲ್ಲೇ ಮುಸ್ಲಿಂ ಕೈದಿಗಳಿಂದ ಹಲ್ಲೆ ನಡೆಸಿರುವ ಆರೋಪ
    – ಹಿಂದೂ ಸಂಘಟನೆಗಳಿಂದ ಕ್ರಮಕ್ಕೆ ಒತ್ತಾಯ

    ವಿಜಯಪುರ: ಇದೇ ಜನವರಿ 22ರಂದು ಅಯೋಧ್ಯೆ ಶ್ರೀರಾಮಮಂದಿರದಲ್ಲಿ (Ram Mandir) ಬಾಲಕ ರಾಮನ ಪ್ರಾಣಪ್ರತಿಷ್ಠೆ ನೆರವೇರಿತು. ಇದೇ ಸಮಯಕ್ಕೆ ಶ್ರೀರಾಮನ ಭಕ್ತರು ದೇಶಾದ್ಯಂತ ವಿಶೇಷ ಪೂಜೆ-ಪುನಸ್ಕಾರಗಳನ್ನ ನೆರವೇರಿಸಿದ್ದರು.

    ಅದರಂತೆ ವಿಜಯಪುರದ ಜೈಲಿನಲ್ಲಿಯೂ (Vijaypura Jail) ಕೆಲ ಕೈದಿಗಳು ಜೈಲಿನಲ್ಲಿ ರಾಮೋತ್ಸವ ಆಚರಣೆ ಮಾಡಿದ್ದರು. ಇದನ್ನು ಸಹಿಸದ ಕೆಲವು ಅಧಿಕಾರಿಗಳು ಮುಸ್ಲಿಂ ಖೈದಿಗಳಿಂದ ಹಿಂದೂ ಕೈದಿಗಳ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ವಿಜಯಪುರದ ಕೇಂದ್ರ ಕಾರಾಗೃಹದ ದರ್ಗಾ ಜೈಲ್‌ನಲ್ಲಿ ಘಟನೆ ನಡೆದಿದ್ದು, ಜೈಲಿನಲ್ಲಿ ರಾಮೋತ್ಸವ ಆಚರಿಸಿದ್ದಕ್ಕಾಗಿ ಹಿಂದೂ ಕೈದಿಗಳ (Prisoners) ಮೇಲೆ ಹಲ್ಲೆ ಮಾಡಿಸಿದ್ದಾರೆ ಎನ್ನಲಾಗಿದೆ.

    ಜ.22ರಂದು ಪ್ರಾಣಪ್ರತಿಷ್ಠೆ ಸಮಯಕ್ಕೆ ಜೈಲಿನಲ್ಲಿದ್ದ ಮಹಾರಾಷ್ಟ್ರ ಮೂಲದ ಪರಮೇಶ್ವರ ಜಾಧವ (ದೇವಾ), ರಮೇಶ ದಳವಿ, ಪ್ರದೀಪ ಮಾನೆ ಎಂಬ ಹಿಂದೂ ಕೈದಿಗಳು ಸೆಲ್‌ನಲ್ಲೇ ಶ್ರೀರಾಮೋತ್ಸವ ಆಚರಣೆ ಮಾಡಿದ್ದರು. ಇದರಿಂದ ಕೋಪಗೊಂಡ ಜೈಲರ್ ತನ್ನ ಕಚೇರಿಗೆ ಕರೆಸಿ ಮುಸ್ಲಿಂ ಕೈದಿಗಳಿಂದ ಹಲ್ಲೆ ಮಾಡಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲ್‌ನಲ್ಲಿರುವ ಶೇಖ್ ಅಹ್ಮದ್ ಹಾಗೂ ಸಹಚರರಿಂದ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಹಲ್ಲೆಗೆ ಜೈಲಿನಲ್ಲಿರುವ ಇತರ ಮುಸ್ಲಿಂ ಅಧಿಕಾರಿಗಳೂ ಸಾಥ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಆರೋಪ ಮಾಡಿರುವ ವೀಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಜೈಲರ್ ನಡೆಯನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಸಂಬಂಧ ಪಟ್ಟ ಅಧಿಕಾರಿ ಹಾಗೂ ಹಲ್ಲೆ ನಡೆಸಿದ ಇತರ ಕೈದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ.

  • ಕೈದಿಗಳಿಗೆ ಮಂತ್ರಾಕ್ಷತೆ, ರಾಮ ಕಥಾ ಪುಸ್ತಕ ವಿತರಣೆ – ವಿಭಿನ್ನ ಆಚರಣೆಗೆ ಸಾಕ್ಷಿಯಾಯ್ತು ಚಾಮರಾಜನಗರದ ಜೈಲು

    ಕೈದಿಗಳಿಗೆ ಮಂತ್ರಾಕ್ಷತೆ, ರಾಮ ಕಥಾ ಪುಸ್ತಕ ವಿತರಣೆ – ವಿಭಿನ್ನ ಆಚರಣೆಗೆ ಸಾಕ್ಷಿಯಾಯ್ತು ಚಾಮರಾಜನಗರದ ಜೈಲು

    ಚಾಮರಾಜನಗರ: ಅತ್ತ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜಾಮರಾಜನಗರ ಬಂಧಿಖಾನೆ ವಿಭಿನ್ನ ಆಚರಣೆಗೆ ಸಾಕ್ಷಿಯಾಗಿದೆ.

    ವಿಚಾರಣಾಧೀನ ಕೈದಿಗಳಿಗೆ ಅಯೋಧ್ಯೆಯ ಮಂತ್ರಾಕ್ಷತೆ, ರಾಮ ಕಥಾ ಮಹಿಮೆ ಪುಸ್ತಕ ಹಾಗೂ ತುಳಸಿಮಾಲೆ ವಿತರಿಸಲಾಗಿದ್ದು ಕೈದಿಗಳ ಬಾಯಲ್ಲಿ ರಾಮ ನಾಮ ಜಪ ಮೂಡಿಬಂದಿದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣಗೆ ಅಗ್ನಿ ಪರೀಕ್ಷೆ; ಚುನಾವಣೆಯಲ್ಲಿ ಅಕ್ರಮ ಆರೋಪ ಪ್ರಕರಣ ಸುಪ್ರೀಂನಲ್ಲಿ ಇಂದು ವಿಚಾರಣೆ

    ನಗರದ ಜನಾರ್ಧನ ಪ್ರತಿಷ್ಠಾನ ಆಯೋಜಿಸಿದ್ದ ಈ ವಿಭಿನ್ನ ಕಾರ್ಯಕ್ರಮದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳೂ ಆದ ನ್ಯಾಯಾಧೀಶ ಎಂ.ಶ್ರೀಧರ್ ಭಾಗಿಯಾಗಿ ಕೈದಿಗಳಿಗೆ ಅಯೋಧ್ಯೆಯ ಮಂತ್ರಾಕ್ಷತೆ, ರಾಮ ಕಥಾ ಮಹಿಮೆ ಪುಸ್ತಕ, ತುಳಸಿ ಜಪಮಾಲೆ ವಿತರಿಸಿದರು. ಇದನ್ನೂ ಓದಿ: Annapoorni: ರಾಮನ ಕುರಿತು ವಿವಾದಾತ್ಮಕ ಡೈಲಾಗ್- ಕೊನೆಗೂ ಮೌನ ಮುರಿದ ನಯನತಾರಾ

    ಯಾವುದೋ ಸಂದರ್ಭದಲ್ಲಿ ಮಾಡಿದ ತಪ್ಪಿಗೆ ಮನಃ ಪರಿವರ್ತನೆಯಾಗಿ ಹೊಸ ಜೀವನ ನಡೆಸಿ ಎಂದು ನ್ಯಾಯಾಧೀಶರು ತಿಳಿಹೇಳಿದರು. ಕೈದಿಗಳಿಗೆ ಜನಾರ್ಧನ ಪ್ರತಿಷ್ಠಾನದ ಅರ್ಚಕ ಅನಂತ್ ಪ್ರಸಾದ್‌ರಿಂದ ರಾಮ ನಾಮ ಮಂತ್ರ ಬೋಧನೆ ಮಾಡಿಸಲಾಯಿತು. ರಾಮನಾಮ ಜಪಿಸಿದ ಕೈದಿಗಳು ಭಾವುಕರಾದರು ಕಾರ್ಯಕಮಕ್ಕೂ ಮುನ್ನ ಹರಳುಕೋಟೆ ಜನಾರ್ಧನಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಇದನ್ನೂ ಓದಿ: ಆನೇಕಲ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡ ಕುಸಿತ – 20ಕ್ಕೂ ಹೆಚ್ಚು ಕಾರ್ಮಿಕರು ಗಂಭೀರ 

  • ಜೈಲಿನಲ್ಲಾಯ್ತು ಲವ್- ಪೆರೋಲ್ ಪಡೆದು ಮದುವೆಯಾದ ಕೊಲೆ ಆರೋಪಿಗಳು!

    ಜೈಲಿನಲ್ಲಾಯ್ತು ಲವ್- ಪೆರೋಲ್ ಪಡೆದು ಮದುವೆಯಾದ ಕೊಲೆ ಆರೋಪಿಗಳು!

    ಕೋಲ್ಕತ್ತಾ: ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೈಲು (Jail) ಸೇರಿದ್ದ ಇಬ್ಬರು ಆರೋಪಿಗಳಿಗೆ ಜೈಲಿನಲ್ಲೇ ಪ್ರೇಮಾಂಕುರವಾಗಿ ಬಳಿಕ ಅವರು ಪೆರೋಲ್ (Parole) ಮೂಲಕ ಹೊರಬಂದು ಮದುವೆಯಾಗಿರುವ (Marriage) ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ.

    ಅಸ್ಸಾಂ ಮೂಲದ ಅಬ್ದುಲ್ ಹಸೀಮ್ ಹಾಗೂ ಪಶ್ಚಿಮ ಬಂಗಾಳದ ಶಹನಾರಾ ಖಾತುನ್ ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೈಲು ಸೇರಿದ್ದರು. ಆರೋಪಿಗಳಿಗೆ ಬಂಧನಕ್ಕೂ ಮೊದಲು ಪರಸ್ಪರ ಪರಿಚಯ ಇರಲಿಲ್ಲ. ಹಾಸಿಮ್‌ಗೆ 8 ವರ್ಷ ಹಾಗೂ ಶಹನಾರ್‌ಗೆ 6 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇಬ್ಬರೂ ಕೈದಿಗಳು ಬರ್ಧಮಾನ್ ಕೇಂದ್ರ ತಿದ್ದುಪಡಿ ಸಂಸ್ಥೆಯಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

    ಇಬ್ಬರನ್ನೂ ಒಂದೇ ಸುಧಾರಣಾ ಗೃಹದಲ್ಲಿ ಇಡಲಾಗಿತ್ತು. ಇಬ್ಬರ ಕುಟುಂಬದವರೂ ಒಂದೇ ಸಮಯಯದಲ್ಲಿ ಅವರನ್ನು ಭೇಟಿಯಾಗಲು ಬಂದಿದ್ದ ಸಂದರ್ಭ ಕೈದಿಗಳು ಒಬ್ಬರಿಗೊಬ್ಬರು ಪರಿಚಯವಾದರು. ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಇಬ್ಬರಿಗೂ ಪರಸ್ಪರ ಪ್ರೇಮ ಹುಟ್ಟಿತ್ತು. ಇದನ್ನೂ ಓದಿ: ಕಾವೇರಿ ಹಿನ್ನೀರಿನಲ್ಲಿ ಈಜಲು ಹೋದ ಮೂವರು ಯುವಕರು ನಾಪತ್ತೆ

    ಈ ಬಗ್ಗೆ ಜೋಡಿ ಬಳಿಕ ತಮ್ಮ ಕುಟುಂಬಸ್ಥರಿಗೆ ತಿಳಿಸಿ ಮದುವೆಯಾಗುವ ನಿರ್ಧಾರ ಮಾಡಿದರು. ಹಾಸಿಮ್ ಹಾಗೂ ಶಹನಾರಾ 5 ದಿನಗಳ ಪೆರೋಲ್ ಪಡೆದು ಬುಧವಾರ ಬರ್ಧಮಾನ್‌ನ ಮಾಂಟೇಶ್ವರ ಬ್ಲಾಕ್‌ನ ಕುಸುಮ್‌ಗ್ರಾಮ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

    ಇದೀಗ ಪೆರೋಲ್ ಮೇಲೆ ಹೊರ ಬಂದು ಮದುವೆಯಾದ ದಂಪತಿ ಮತ್ತೆ ಜೈಲಿಗೆ ತೆರಳಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಬೇಕಿದೆ. ಇದನ್ನೂ ಓದಿ: ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈಲಿನ ಮೇಲೆ ಗುಂಡಿನ ದಾಳಿ – 10 ಭದ್ರತಾ ಸಿಬ್ಬಂದಿ ಸೇರಿ 14 ಮಂದಿ ಸಾವು, 24 ಕೈದಿಗಳು ಎಸ್ಕೇಪ್‌

    ಜೈಲಿನ ಮೇಲೆ ಗುಂಡಿನ ದಾಳಿ – 10 ಭದ್ರತಾ ಸಿಬ್ಬಂದಿ ಸೇರಿ 14 ಮಂದಿ ಸಾವು, 24 ಕೈದಿಗಳು ಎಸ್ಕೇಪ್‌

    ಮೆಕ್ಸಿಕೊ: ಇಲ್ಲಿನ ಸಿಯುಡಾಡ್ ಜುವಾರೆಜ್‌ನಲ್ಲಿ ಬಂದೂಕುಧಾರಿಗಳು ಜೈಲಿನ ಮೇಲೆ (Mexican Border Prison) ಗುಂಡಿನ ದಾಳಿ ನಡೆಸಿದ್ದು, 10 ಭದ್ರತಾ ಸಿಬ್ಬಂದಿ ಮತ್ತು 4 ಮಂದಿ ಕೈದಿಗಳು ಮೃತಪಟ್ಟಿದ್ದಾರೆ.

    ಕೈದಿಗಳ ಕುಟುಂಬದವರು ತಮ್ಮ ಸದಸ್ಯರನ್ನು ಭೇಟಿ ಮಾಡಲು ಜೈಲಿಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಂದೂಕುಧಾರಿಗಳು ಪೆನಿಟೆನ್ಷಿಯರಿ ಸೆಂಟರ್‌ಗೆ ವಾಹನಗಳಲ್ಲಿ ಬಂದಿದ್ದಾರೆ. ನಂತರ ಭದ್ರತಾ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಸನ್ನಿವೇಶದಲ್ಲಿ 24 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ ಹಾಜರಾದ 32 ಸಾವಿರ ಜನ – ಪೆನ್ನು, ಪೇಪರ್ ಹಿಡಿದು ಸ್ಟೇಡಿಯಂನಲ್ಲೆ ಕುಳಿತ್ರು

    ಮೆಕ್ಸಿಕನ್ ಸೈನಿಕರು ಮತ್ತು ರಾಜ್ಯ ಪೊಲೀಸರು ತಕ್ಷಣ ಜೈಲಿನ ನಿಯಂತ್ರಣ ಪಡೆದಿದ್ದಾರೆ. ದಾಳಿ ನಡೆಸಿದವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಮೆಕ್ಸಿಕನ್ ಜೈಲುಗಳಲ್ಲಿ ಈ ಹಿಂದೆಯೂ ಹಲವಾರು ಹಿಂಸಾಚಾರದ ದಾಳಿಗಳಾಗಿವೆ.

    ಜೈಲಿನ ಮೇಲೆ ದಾಳಿ ಮಾಡುವುದಕ್ಕೂ ಮೊದಲು, ಮುನ್ಸಿಪಲ್ ಪೊಲೀಸರನ್ನು ಗುರಿಯಾಗಿಸಿ ದಾಳಿ ನಡೆದಿತ್ತು. ದಾಳಿಕೋರರನ್ನು ಹಿಂಬಾಲಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಂದೂಕುಧಾರಿಗಳನ್ನು ಹತ್ಯೆಗೈದಿದ್ದರು. ಇದನ್ನೂ ಓದಿ: ಕಾಬೂಲ್‌ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ಸ್ಫೋಟ – 10 ಮಂದಿ ಸಾವು

    Live Tv
    [brid partner=56869869 player=32851 video=960834 autoplay=true]

  • ನಾಗಾಲ್ಯಾಂಡ್ ಜೈಲಿನಿಂದ 9 ಕೈದಿಗಳು ಎಸ್ಕೇಪ್

    ನಾಗಾಲ್ಯಾಂಡ್ ಜೈಲಿನಿಂದ 9 ಕೈದಿಗಳು ಎಸ್ಕೇಪ್

    ಕೊಹಿಮಾ: ನಾಗಾಲ್ಯಾಂಡ್‌ನ (Nagaland) ಮೋನ್ ಜಿಲ್ಲಾ ಕಾರಾಗೃಹದಿಂದ (Jail) 9 ಕೈದಿಗಳು (Prisoners) ಪರಾರಿಯಾಗಿದ್ದು (Escape), ಅವರ ಪತ್ತೆಗಾಗಿ ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

    ಶನಿವಾರ ಮುಂಜಾನೆ ಕೈದಿಗಳು ತಮ್ಮ ಸೆಲ್‌ನ ಕೀಗಳನ್ನು ಉಪಾಯದಿಂದ ಪಡೆದು, ನಂತರ ಪಲಾಯನ ಮಾಡಿದ್ದಾರೆ. ಎಸ್ಕೇಪ್ ಆಗಿರುವ ಕೈದಿಗಳಲ್ಲಿ ವಿಚಾರಣಾಧೀನ ಕೈದಿಗಳು ಹಾಗೂ ಕೊಲೆ ಅಪರಾಧಿಗಳು ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲರಿಗೂ ದೇವರು: ಫಾರೂಕ್ ಅಬ್ದುಲ್ಲಾ

    ಘಟನೆಯ ಕುರಿತು ಸೋಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತೀವ್ರವಾದ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಲುಕ್‌ಔಟ್ ನೋಟೀಸ್ ಹೊರಡಿಸಲಾಗಿದ್ದು, ಸಂಬಂಧಿಸಿದ ವಿವಿಧ ಏಜೆನ್ಸಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೇರೆಲ್ಲೋ ಸ್ಫೋಟವಾಗಬೇಕಿದ್ದ ಕುಕ್ಕರ್ ಬಾಂಬ್ ಹಂಪ್ಸ್ ಕಾರಣದಿಂದ ಆಟೋದಲ್ಲೇ ಬ್ಲಾಸ್ಟ್!

    ಜೈಲಿನಿಂದ ತಪ್ಪಿಸಿಕೊಂಡಿರುವವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಪೊಲೀಸರನ್ನು ಸಂಪರ್ಕಿಸುವಂತೆ ಕೈದಿಗಳ ಗ್ರಾಮ ಸಭೆಗಳಿಗೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಾಜಿಯಾಬಾದ್‌ನ ದಾಸ್ನಾ ಜೈಲಲ್ಲಿರುವ 140 ಕೈದಿಗಳಿಗೆ ಹೆಚ್‌ಐವಿ ಪಾಸಿಟಿವ್‌

    ಗಾಜಿಯಾಬಾದ್‌ನ ದಾಸ್ನಾ ಜೈಲಲ್ಲಿರುವ 140 ಕೈದಿಗಳಿಗೆ ಹೆಚ್‌ಐವಿ ಪಾಸಿಟಿವ್‌

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ (Gaziabad) ಜಿಲ್ಲೆಯ ದಾಸ್ನಾ ಜೈಲಿನಲ್ಲಿ ಕನಿಷ್ಠ 140 ಕೈದಿಗಳಿಗೆ ಹೆಚ್‌ಐವಿ (HIV) ದೃಢಪಟ್ಟಿರುವ ಆಘಾತಕಾರಿ ವಿಷಯ ಹೊರಬಿದ್ದಿದೆ.

    ಜೈಲಿನಲ್ಲಿ ಒಟ್ಟು 5,500 ಕೈದಿಗಳಿದ್ದಾರೆ. ಆರೋಗ್ಯ ತಪಾಸಣೆ ವೇಳೆ 140 ಕೈದಿಗಳಿಗೆ ಹೆಚ್‌ಐವಿ ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೇ 35 ಕೈದಿಗಳಿಗೆ ಟಿಬಿ ಇರುವುದು ಪತ್ತೆಯಾಗಿದೆ. ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯಿಂದ ಹೆಚ್‌ಐವಿ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವರನ ಕಡೆಯವರು ನೀಡಿದ ಲೆಹೆಂಗಾ ಚೀಪ್ ಕ್ವಾಲಿಟಿ – ಮದುವೆ ಬೇಡವೆಂದ ವಧು

    ಆರೋಗ್ಯ ಇಲಾಖೆಯಿಂದ ತನಿಖೆ: ಹೆಚ್‌ಐವಿ ಹರಡಿರುವ ವಿಚಾರ ತಿಳಿಯುತ್ತಿದ್ದಂತೆ ಜೈಲಿನಲ್ಲಿರುವ ಕೈದಿಗಳಲ್ಲಿ ಆತಂಕ ಮನೆ ಮಾಡಿದೆ. ಹೆಚ್‌ಐವಿ ಹರಡಿರುವ ಬಗ್ಗೆ ಆರೋಗ್ಯ ಇಲಾಖೆ ವೈದ್ಯರು ತನಿಖೆ ಕೈಗೊಂಡಿದ್ದಾರೆ.

    2018ರಲ್ಲಿ ಇದೇ ಜೈಲಿನಲ್ಲಿ 27 ಕೈದಿಗಳಲ್ಲಿ ಹೆಚ್‌ಐವಿ ದೃಢಪಟ್ಟಿತ್ತು. ಆಗ ಜೈಲಿನಲ್ಲಿ 5,000 ಕೈದಿಗಳಿದ್ದರು. ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ- ಸಾಕ್ಷಿ ನಾಶಕ್ಕೆ OLXನಲ್ಲಿ ಫೋನ್ ಮಾರಿದ್ದ ಅಫ್ತಾಬ್!

    Live Tv
    [brid partner=56869869 player=32851 video=960834 autoplay=true]