Tag: ಕೈಗಳು

  • ಏಷ್ಯಾದಲ್ಲೇ ಫಸ್ಟ್- ಎರಡೂ ಕೈಗಳ ಶಸ್ತ್ರಚಿಕಿತ್ಸೆ ಯಶಸ್ವಿ

    ಏಷ್ಯಾದಲ್ಲೇ ಫಸ್ಟ್- ಎರಡೂ ಕೈಗಳ ಶಸ್ತ್ರಚಿಕಿತ್ಸೆ ಯಶಸ್ವಿ

    ಮುಂಬೈ: ಎರಡೂ ಕೈಗಳನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಇದೀಗ ಎರಡೂ ತೋಳುಗಳನ್ನು ಶಸ್ತ್ರಚಿಕಿತ್ಸೆಯ (Arm Transplant) ಮೂಲಕ ಜೋಡಣೆ ಮಾಡುವಲ್ಲಿ ಮುಂಬೈ ವೈದ್ಯರು ಯಶಸ್ವಿಯಾಗಿದ್ದಾರೆ.

    ಪ್ರೇಮಾ ರಾವ್ (33) ಎರಡೂ ಕೈಗಳನ್ನು ಕಳೆದುಕೊಂಡಿರುವ ವ್ಯಕ್ತಿ. ರಾಜಸ್ಥಾನದ ಅಜ್ಮೀರ್ (Rajasthan’s Ajmer) ಮೂಲದವರಾಗಿರುವ ಇವರಿಗೆ ಸದ್ಯ ಯಶಸ್ವಿಯಾಗಿ ತೋಳುಗಳ ಕಸಿ ಮಾಡಲಾಗಿದ್ದು, ಏಷ್ಯಾ (Asia) ದಲ್ಲಿಯೇ ಇದು ಮೊದಲ ಯಶಸ್ವಿ ಪ್ರಯತ್ನವಾಗಿದೆ.

    ಮುಂಬೈನ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡವು ನಿರಂತರವಾಗಿ 16 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ತೋಳುಗಳ ಕಸಿಯನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಕೋಲಾರ ಬೇಡ, ವರುಣಾದಿಂದ್ಲೇ ಸ್ಪರ್ಧಿಸಿ- ಸಿದ್ದರಾಮಯ್ಯಗೆ ಖರ್ಗೆ, ರಾಹುಲ್ ಗಾಂಧಿ ಸಲಹೆ

    ಕೈಗಳನ್ನು ಕಳೆದುಕೊಂಡಿದ್ದು ಹೇಗೆ..?: ಕಳೆದ 10 ವರ್ಷದ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರೇಮಾ ರಾಮ್ ಅವರಿಗೆ ವಿದ್ಯುತ್ ಕಂಬ ತಾಗಿ ಶಾಕ್‍ನಿಂದ ಎರಡೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದವು. ಪರಿಣಾಮ ಎರಡೂ ಕೈಗಳನ್ನು ಕತ್ತರಿಸುವ ಅನಿವಾರ್ಯ ಎದುರಾಯಿತು. ಸದ್ಯ 10 ವರ್ಷಗಳ ಬಳಿಕ ಇದೀಗ ಎರಡೂ ಕೈಗಳನ್ನು ಕಸಿ ಮಾಡಿಸಿಕೊಂಡಿದ್ದಾರೆ. ಈ ರೀತಿ ಕಸಿ ಮಾಡಿಕೊಂಡ ಏಷ್ಯಾದ ಮೊದಲ ವ್ಯಕ್ತಿ ಪ್ರೇಮ್‍ರಾವ್ ಆಗಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಪ್ರೇಮಾ ರಾವ್, ನನ್ನ ಎರಡೂ ಕೈಗಳನ್ನು ಕಳೆದುಕೊಂಡ ನಂತರ ನಾನು ತುಂಬಾ ನೊಂದುಕೊಂಡಿದ್ದೆ. ಇದೀಗ ನನಗೆ ಎರಡೂ ಕೈಗಳು ಬಂದಿದ್ದು, ಕುಟುಂಬ ಹಾಗೂ ವೈದ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

  • ಚಿಕನ್ ಬೇಯಿಸಲು ಕುದಿಯೋ ಎಣ್ಣೆಗೆ ಕೈ ಹಾಕಿದ – ವೀಡಿಯೋ ವೈರಲ್

    ಚಿಕನ್ ಬೇಯಿಸಲು ಕುದಿಯೋ ಎಣ್ಣೆಗೆ ಕೈ ಹಾಕಿದ – ವೀಡಿಯೋ ವೈರಲ್

    ಸ್ತೆಬದಿಯಲ್ಲಿ ಆಹಾರ ವ್ಯಾಪಾರ ಮಾಡುವ ವ್ಯಕ್ತಿಯೊರ್ವ ಬಾಣಲಿಯಲ್ಲಿ ಕುದಿಯುವ ಎಣ್ಣೆಗೆ ಕೈ ಹಾಕಿ ಚಿಕನ್ ಬೇಯಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ನಾನ್‍ವೆಜ್ ಫುಡ್ಡಿ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ವ್ಯಕ್ತಿಯೋರ್ವ ತನ್ನ ಕೈಗಳನ್ನು ಕುದಿಯುವ ಎಣ್ಣೆಗೆ ಅದ್ದಿ ನಂತರ ಅದನ್ನು ತಕ್ಷಣ ತೆಗೆಯುವುದನ್ನು ಕಾಣಬಹುದಾಗಿದೆ. ವ್ಯಕ್ತಿ ಬಿಸಿ ಎಣ್ಣೆಗೆ ಕೈ ಅದ್ದಿ ಕರಿದ ಚಿಕನ್ ತುಂಡುಗಳನ್ನು ಒಂದೊಂದಾಗಿ ಹೊರಗೆ ತೆಗೆದು ಅದನ್ನು ಪಾತ್ರೆಯಲ್ಲಿ ಹಾಕುತ್ತಾನೆ. ಬಳಿಕ ಅದಕ್ಕೆ ಒಂದಷ್ಟು ಮಸಾಲೆಗಳನ್ನು ಬೆರೆಸುತ್ತಾನೆ. ಇದನ್ನೂ ಓದಿ: ನೀವಿಬ್ಬರು ಇಲ್ಲ ಅನ್ನೋದು ನಂಬಲಾಗ್ತಿಲ್ಲ – ಅಪ್ಪು, ಅಂಬಿ ನೆನೆದು ಸುಮಲತಾ ಭಾವುಕ

     

    View this post on Instagram

     

    A post shared by SHAILESH | JAIPUR (@nonvegfoodie)

    ಈ ವೀಡಿಯೋ ಜೊತೆಗೆ ಚಿಕನ್ ಹೊರಗೆ ತೆಗೆಯಲು ಕುದಿಯುವ ಎಣ್ಣೆಗೆ ಕೈ ಹಾಕುವ ಇವರಿಗೆ ಕೈ ಸುಡುವುದಿಲ್ಲವೇ ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಪ್ರಶ್ನಿಸಲಾಗಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ ಸುಮಾರು 59,000ಕ್ಕೂ ಹೆಚ್ಚು ಲೈಕ್ ಹಾಗೂ ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹಾಟ್ ಬೆಡಗಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು