Tag: ಕೇಸ್

  • ಬಿಗ್ ಬಾಸ್ ವಿನ್ನರ್ ವಿರುದ್ಧ ED ಕೇಸ್ ದಾಖಲು

    ಬಿಗ್ ಬಾಸ್ ವಿನ್ನರ್ ವಿರುದ್ಧ ED ಕೇಸ್ ದಾಖಲು

    ಕ್ರಮವಾಗಿ ಹಣ ಸಾಗಾಣಿಕೆ ವಿಚಾರವಾಗಿ ಬಿಗ್ ಬಾಸ್ ಒಟಿಟಿ ವಿನ್ನರ್ ಎಲ್ವಿಶ್ ಯಾದವ್ (Elvish Yadav) ವಿರುದ್ಧ ಜಾರಿ ನಿರ್ದೇಶನಾಲಯವು (ED) ಕೇಸ್ ದಾಖಲಿಸಿದೆ. ಅಕ್ರಮ ಹಣ ವರ್ಗಾವಣೆ ಕುರಿತಂತೆ ಉತ್ತರ ಪ್ರದೇಶದ ಗೌತಮ್ ಬುದ್ಧನಗರ ಜಿಲ್ಲೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ದಾಖಲಾದ ಎಫ್.ಐ.ಆರ್ (FIR) ಮತ್ತು ಜಾರ್ಜ್ ಶೀಟ್ ಗಳ ಆಧಾರದಲ್ಲಿ ಇಡಿ ಪ್ರಕರಣವನ್ನು ದಾಖಲಿಸಿಕೊಂಡಿದೆ.

    ಈ ಹಿಂದೆ ಎಲ್ವಿಶ್ ಪಾರ್ಟಿಯೊಂದರಲ್ಲಿ ಹಾವಿನ ವಿಷ ಬಳಸಿದ ಪ್ರಕರಣದಲ್ಲಿ ನೋಯ್ಡಾ ಪೊಲೀಸರು ಬಂಧಿಸಿದ್ದರು. ಕೋರ್ಟ್‌ಗೆ ಹಾಜರು ಪಡಿಸಿದ್ದರು. ಪಾರ್ಟಿಯೊಂದರಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಎಲ್ವಿಶ್ ಯಾದವ್ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಇವರ ಗ್ಯಾಂಗ್‌ನ ಐವರು ಸದಸ್ಯರನ್ನು ನೋಯ್ಡಾದಲ್ಲಿ ಬಂಧಿಸಲಾಗಿತ್ತು. ಸೆಕ್ಟರ್ 51ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವಿನ ವಿಷ ಲಭ್ಯವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು.

    ರೇವ್ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಕೆಲವರು ಹಾವಿನ ವಿಷವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ವಿವಿಧ ಸ್ಥಳಗಳಿಂದ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುತ್ತಿದ್ದರು, ಎಲ್ವಿಶ್ ಯಾದವ್ ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಪಾರ್ಟಿಗಳಲ್ಲಿ ವಿಷವನ್ನು ಪೂರೈಸಲು ಅವರು ಭಾರಿ ಮೊತ್ತದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಪೊಲೀಸರು ಸಲ್ಲಿಸಿದ್ದ ಜಾರ್ಜ್ ಶೀಟ್ ನಲ್ಲಿ ಅಕ್ರಮ ಹಣದ ಕುರಿತಂತೆ ಉಲ್ಲೇಖವಾಗಿತ್ತು. ಹಾಗಾಗಿ ಈ ಪ್ರಕರಣಕ್ಕೆ ಇಡಿ ಎಂಟ್ರಿ ಕೊಟ್ಟಿದೆ.

  • ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು

    ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು

    ಕಾರವಾರ: ಉತ್ತರಕನ್ನಡ ಜಿಲ್ಲಾ ಸಂಸದ ಅನಂತ್ ಕುಮಾರ್ ಹೆಗ್ಡೆ (BJP MP Anantkumar Hegde) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ದ್ವೇಷ ಭಾಷಣ ಹಾಗೂ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನ ಮಾಡಿರುವುದಾಗಿ ಸಂಸದರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಹಾಗೂ 153 (ಗಲಭೆಗೆ ಪ್ರಚೋದನೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಬಾಬರಿ ಮಸೀದಿಯಂತೆ ದೇವಸ್ಥಾನಗಳ ಕುರುಹು ಇರುವ ಇತರ ಮಸೀದಿಗಳನ್ನು ಒಡೆಯುವುದಾಗಿ ಸಂಸದರು ಸುಳಿವು ನೀಡಿದ್ದರು. ಜೊತೆಗೆ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಏಕವಚನ ಹಾಗೂ ಟೀಕಾಸ್ತ್ರ ಪ್ರಯೋಗಿಸಿದ್ದರು. ಅಲ್ಲದೇ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಸಂತರ ಶಾಪವಿತ್ತು ಎಂದು ಹೇಳಿಕೆ ನೀಡಿದ್ದರು.

    ಈ ಹೇಳಿಕೆಗಳನ್ನು ಸಂಸದರು ನೀಡಿದ ಬಳಿಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೂಡಾ ಪ್ರಕರಣ ದಾಖಲಿಸಲು ಸಾಕಷ್ಟು ಒತ್ತಡ ಹಾಕಿದ್ದರು. ಅಲ್ಲದೇ ಸಂಸದರ ಹೇಳಿಕೆ ಮಾಧ್ಯಮಗಳಲ್ಲಿಯೂ ಪ್ರಸಾರವಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಅನಂತ್ ಕುಮಾರ್‌ಗೆ ಹೆಚ್ಚು ಕಮ್ಮಿ ಆಗಿದೆ, ಜನರೇ ಬುದ್ಧಿ ಕಲಿಸ್ತಾರೆ: ಡಿಕೆಶಿ ತಿರುಗೇಟು

    ಹೆಗ್ಡೆ ಹೇಳಿದ್ದೇನು..?: ಶಿರಸಿಯ ಸಿಪಿ ಬಜಾರ್ ನಲ್ಲಿರುವ ಮಸೀದಿ, ಅದು ವಿಜಯ ವಿಠ್ಠಲ ದೇವಸ್ಥಾನ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಕೂಡು ಮಾರುತಿ ದೇವಸ್ಥಾನ. ಇದೇ ರೀತಿ ದೇಶದ ಹಳ್ಳಿಯ ಮೂಲೆ-ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ, ಅದನ್ನು ಕಿತ್ತುಹಾಕುವ ತನಕ ಹಿಂದೂ ಸಮಾಜ ಸುಮ್ಮನೆ ಕೂರಲ್ಲ. ಈಗ ರಣಭೈರವ ಎದ್ದಾಗಿದೆ. ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಹಿಂದೂ ಧರ್ಮ ಯಾರ ಋಣವನ್ನು ಇಟ್ಟುಕೊಳ್ಳುವ ಧರ್ಮವಲ್ಲ, ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದಿದ್ದರೇ ಇದು ಹಿಂದೂ ರಕ್ತವೇ ಅಲ್ಲ ಎಂದು ಕೆಂಡ ಕಾರಿದ್ದರು.

    ಇಂದಿಗೂ ಮೂರ್ಖ ರಾಮಯ್ಯನಂಥವರು ಹಿಂದೂ ಸಮಾಜ ಒಡೆಯುತ್ತಿದ್ದಾರೆ. ಶತಮಾನಗಳು ಕಳೆದ ಬಳಿಕವೂ ಹಿಂದೂ ಸಮಾಜ ಒಡೆಯುವ ಕೆಲಸ ಆಗಬಾರದು. ಮತ್ತೆ ನಾವೇ ಪ್ರಯತ್ನಿಸಿದರೂ ಸಮಾಜ ಒಡೆಯದಂತೆ ಸದೃಢಗೊಳಿಸಬೇಕು ಎಂದು ಕರೆ ನೀಡಿದ್ದರು.

    ಕಾಂಗ್ರೆಸ್ ನಮ್ಮ ವಿರೋಧಿ ಅಲ್ವೆ ಅಲ್ಲ, ಅವರು ಹಿಂದೂ ವಿರೋಧಿಗಳು, ಸನಾತನ ಧರ್ಮ ವಿರೋಧಿಗಳು. ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ, ಆದ್ರೆ ಸಿದ್ದರಾಮಯ್ಯ (Siddaramaiah) ನಮ್ಮ ವಿರೋಧಿ. ಅಲ್ಪಸಂಖ್ಯಾತರ ವೋಟಿಗೆ ಹರಾಜಾಗಿ ಹೋದವರು ನಮ್ಮ ವಿರೋಧಿಗಳು ಎಂದು ಅಸಮಾಧಾನ ಹೊರಹಾಕಿದ್ದರು.

  • ಬಿಜೆಪಿ ಸರ್ಕಾರ ಮಾಡಿದ ತಪ್ಪನ್ನು ಮುಂದುವರಿಸಲು ಆಗಲ್ಲ: ಪರಮೇಶ್ವರ್

    ಬಿಜೆಪಿ ಸರ್ಕಾರ ಮಾಡಿದ ತಪ್ಪನ್ನು ಮುಂದುವರಿಸಲು ಆಗಲ್ಲ: ಪರಮೇಶ್ವರ್

    – ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆಯುವ ಸರ್ಕಾರದ ನಡೆಗೆ ಗೃಹಸಚಿವ ಸ್ಪಷ್ಟನೆ

    ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ಕಾನೂನು ಲೋಪವನ್ನು ನಮ್ಮ ಸರ್ಕಾರ ಸರಿ ಮಾಡಿದೆ ಎಂದು ಡಿಕೆ ಶಿವಕುಮಾರ್ (DK Shivakumar) ವಿರುದ್ಧದ ಸಿಬಿಐ (CBI) ಕೇಸ್ ವಾಪಸ್ ಪಡೆಯುವ ಸರ್ಕಾರದ ನಡೆಯನ್ನು ಗೃಹಸಚಿವ ಜಿ ಪರಮೇಶ್ವರ್ (G Parameshwara) ಸಮರ್ಥನೆ ಮಾಡಿಕೊಂಡಿದ್ದಾರೆ.

    ಡಿಕೆಶಿ ಸಿಬಿಐ ಕೇಸ್ ವಾಪಸ್ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ರಾಜಕೀಯ ಪ್ರೇರಿತ ಅಲ್ಲ. ಯಡಿಯೂರಪ್ಪ ಅವರು ಮೌಖಿಕ ನಿರ್ದೇಶನ ಕೊಟ್ಟು ಸಿಬಿಐಗೆ ಕೇಸ್ ಕೊಡಿ ಎಂದು ಸಿಎಸ್‌ಗೆ ಮೌಖಿಕ ಆದೇಶ ಕೊಟ್ಟಿದ್ದು ರಾಜಕೀಯ ಪ್ರೇರಿತ ಅಲ್ಲವಾ? ನಾವು ಮಾಡಿರೋದು ಕಾನೂನಿನ ಚೌಕಟ್ಟಿನಲ್ಲಿ. ಅಂದಿನ ಅಡ್ವೊಕೇಟ್ ಜನರಲ್ ಅವರು ಹೇಳಿದ್ರು, ಈಗ ನಮ್ಮ ಎಜಿ ಅವರು ನಮಗೆ ಅದನ್ನು ಹೇಳಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ನಮ್ಮ ಇತಿಮಿತಿಯಲ್ಲಿ ತೀರ್ಮಾನ ಮಾಡಿದ್ದೇವೆ. ಹಾಗಾಗಿ ಇದು ರಾಜಕೀಯ ಪ್ರೇರಿತ ಅಲ್ಲ ಎಂದಿದ್ದಾರೆ.

    ರಾಜಕೀಯ ಪ್ರೇರಿತ ಬಿಜೆಪಿ ಅವರು ಮಾಡಿದಾಗ ಒಂದು, ನಾವು ಮಾಡಿದಾಗ ಒಂದು ಆಗೋದಿಲ್ಲ. ಎಲ್ಲವೂ ಒಂದೇ ರೀತಿ ಆಗುತ್ತೆ. ಸರ್ಕಾರ ಕೇಸ್ ವಾಪಸ್ ಪಡೆದಿದೆ. ಮುಂದೆ ಏನ್ ಆಗುತ್ತೆ ಗೊತ್ತಿಲ್ಲ. ನಾವು ಕೋರ್ಟ್ಗೆ ಕ್ಯಾಬಿನೆಟ್ ನಿರ್ಧಾರ ಸಲ್ಲಿಕೆ ಮಾಡ್ತೀವಿ. ಕಾನೂನು ಚೌಕಟ್ಟಿನಲ್ಲಿ ಏನಾಗಿದೆ ಅಂತ ಕೋರ್ಟ್ಗೆ ತಿಳಿಸುತ್ತೇವೆ. ಮುಂದೆ ಕೋರ್ಟ್, ಸಿಬಿಐ ಏನು ಮಾಡುತ್ತೆ ಅವರಿಗೆ ಬಿಟ್ಟ ವಿಚಾರ. ನಾವು ಅದರ ಬಗ್ಗೆ ಮೊದಲೇ ಮಾತಾಡೋದು ಸರಿಯಲ್ಲ ಎಂದರು.

    ಶಾಸಕಾಂಗ-ನ್ಯಾಯಾಂಗದ ನಡುವೆ ತಿಕ್ಕಾಟ ವಿಚಾರ ಅಲ್ಲ. ಈ ಬಗ್ಗೆ ಮೊದಲೇ ಕೇಸ್ ತನಿಖೆಗೆ ಕೊಟ್ಟವರಿಗೆ ಗೊತ್ತಾಗಬೇಕಿತ್ತು. ಒಬ್ಬ ಎಂಎಲ್‌ಎ ಮೇಲೆ ಕೇಸ್ ಮಾಡೋವಾಗ ಸ್ಪೀಕರ್ ಅನುಮತಿ ಪಡೆಯಬೇಕು ಎಂಬ ನಿಯಮ ಮಾಡಿದ್ದಾರೆ. ಅದು ವ್ಯವಸ್ಥೆಯಲ್ಲಿ ಇರೋ ನಿಯಮ. ಅದನ್ನು ಮಾಡಿದ್ರೆ ಪ್ರಕ್ರಿಯೆ ಲೋಪ ಆಗ್ತಿರಲಿಲ್ಲ. ಹೀಗಾಗಿ ನಾವು ತಪ್ಪಾಗಿದ್ದನ್ನು ಸರಿ ಮಾಡಿದ್ದೇವೆ. ಮೆರಿಟ್ ಆಫ್ ಕೇಸ್‌ಗೆ ನಾವು ಹೋಗೇ ಇಲ್ಲ. ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಅನ್ನೋದು ನಮಗೆ ಸಂಬಂಧವಿಲ್ಲ. ಕಾನೂನು ಲೋಪದ ವಿಚಾರ ಬಂದಾಗ ಸರ್ಕಾರಕ್ಕೆ ಜವಾಬ್ದಾರಿ ಇದೆ. ಹೀಗಾಗಿ ಅದರ ಬಗ್ಗೆ ಕ್ರಮವಹಿಸಲಾಗಿದೆ ಎಂದು ಸರ್ಕಾರದ ನಿಲುವನ್ನು ಸಮರ್ಥನೆ ಮಾಡಿಕೊಂಡರು.

    ಬಿಜೆಪಿ-ಜೆಡಿಎಸ್ ವ್ಯಾಖ್ಯಾನ ಅವರಿಗೆ ಬಿಟ್ಟಿದ್ದು. ನಾವು ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಮಾಡಿದ್ದೇವೆ. ಹಿಂದಿನ ಸರ್ಕಾರ ಮಾಡಿದ ನಿರ್ಧಾರ ಸರಿಯಿಲ್ಲ ಅಂತ ನಾವು ಕೇಸ್ ವಾಪಸ್ ಪಡೆದಿದ್ದೇವೆ. ಅಂದಿನ ಸಿಎಂ ಅವರು ಯಾವ ಕಾರಣಕ್ಕೆ ಮೌಖಿಕ ಆದೇಶ ಕೊಟ್ಟರು? ಅದನ್ನು ಸಿಎಸ್ ಹೇಗೆ ಪಾಲನೆ ಮಾಡಿದ್ರು? ಸಿಎಸ್ ಆದವರು ಸಿಎಂ ಹೇಳಿದ್ದನ್ನು ಬರವಣಿಗೆಯಲ್ಲಿ ತೆಗೆದುಕೊಳ್ಳಬೇಕಿತ್ತು. ಇಂತಹ ಸೂಕ್ಷ್ಮ ವಿಚಾರದಲ್ಲಿ ಬರವಣಿಗೆಯ ಮೂಲಕ ತೆಗೆದುಕೊಳ್ಳದೇ ಇದ್ದರೆ ಹೇಗೆ? ಇದೆಲ್ಲವನ್ನು ಹಿಂದಿನ ಸರ್ಕಾರ ಯೋಚನೆ ಮಾಡಬೇಕಿತ್ತು. ಬಿಜೆಪಿ ಸರ್ಕಾರ ತಪ್ಪು ಮಾಡಿತ್ತು ಅಂತ ನಾವು ಅದನ್ನು ಮುಂದುವರಿಸಲು ಆಗಲ್ಲ. ಬಿಜೆಪಿ ಮಾಡಿದ ತಪ್ಪನ್ನು ನಾವು ಮುಂದುವರಿಸಿಕೊಂಡು ಹೋಗಬೇಕು ಅಂತ ಇಲ್ಲ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಡಿಕೆಶಿ ಮೇಲಿನ CBI ಕೇಸ್‌ ಅನುಮತಿ ವಾಪಸಿಗೆ ನಿರ್ಧಾರ – ವಿಜಯೇಂದ್ರ ಕಿಡಿ

    ಕ್ಯಾಬಿನೆಟ್ ತೆಗೆದುಕೊಂಡಿರೋ ನಿರ್ಧಾರ ಕಾನೂನು ಸಂದೇಶ ಕೊಡುತ್ತದೆ. ಕಾನೂನು ಲೋಪ ಆಗಿತ್ತು. ಅದನ್ನು ಸರಿ ಮಾಡಿದ್ದೇವೆ. ಕ್ಯಾಬಿನೆಟ್‌ನ ಈ ನಿರ್ಧಾರ ಕಾನೂನಿನ ಸಂದೇಶ ಕೊಡುತ್ತದೆ. ನಾವು ಕ್ಯಾಬಿನೆಟ್ ನಿರ್ಧಾರವನ್ನು ಕೋರ್ಟ್ಗೆ ಸಲ್ಲಿಕೆ ಮಾಡ್ತೀವಿ. 2-3 ದಿನಗಳಲ್ಲಿ ಸರ್ಕಾರದ ಆದೇಶ ಮಾಡ್ತೀವಿ. ಅದಾದ ಮೇಲೆ ಕೋರ್ಟ್ ಯಾವ ಡೈರೆಕ್ಷನ್ ಕೊಡುತ್ತೆ ನೋಡೋಣ. ಇದನ್ನು ಸ್ವೀಕಾರ ಮಾಡ್ತಾರಾ? ಮಾಡೊಲ್ಲವಾ? ಸರ್ಕಾರಕ್ಕೆ ಏನ್ ನಿರ್ದೇಶನ ಕೊಡುತ್ತೋ ನೋಡೋಣ ಎಂದರು.

    ಡಿಕೆಶಿ ಕೇಸ್ ವಾಪಸ್ ಪಡೆದು ಕರಾಳ ಇತಿಹಾಸ ಕಾಂಗ್ರೆಸ್ ಹುಟ್ಟು ಹಾಕುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆಗೆ ಗರಂ ಆದ ಪರಮೇಶ್ವರ್, ಹೌದು ಅವರ ತಂದೆಯವರನ್ನು ಕೇಳಿದ್ರೆ ಕರಾಳ ಹುಟ್ಟು ಹಾಕಿದವರು ಯಾರು ಎಂದು ಹೇಳ್ತಾರೆ. ಈ ಪರಿಸ್ಥಿತಿಯನ್ನು ಯಾರು ಹುಟ್ಟು ಹಾಕ್ತಿದ್ದಾರೆ ಅಂತ ನೂತನ ಅಧ್ಯಕ್ಷ ಆಗಿರೋ ವಿಜಯೇಂದ್ರ ಅವರು ತಮ್ಮ ತಂದೆ ಮೌಖಿಕ ಆದೇಶ ಕೊಟ್ಟು ಮಾಡಿದ್ದಾರೆ ಅಂತ ಅವರಿಗೆ ಈಗ ಗೊತ್ತಾಗಿರಬೇಕು. ಮೊದಲು ಗೊತ್ತಾಗಿರಲಿಲ್ಲ ಅನ್ನಿಸುತ್ತೆ. ಈಗ ಗೊತ್ತಾಗುತ್ತಿದೆ ಅನ್ನಿಸುತ್ತೆ.ವಿಜಯೇಂದ್ರ ಅವರ ಮಾತಿನಲ್ಲೆ ಉತ್ತರ ಇದೆ ಎಂದರು.

    ಕಳ್ಳರ ಗುಂಪು ಒಬ್ಬ ಕಳ್ಳನನ್ನು ರಕ್ಷಣೆ ಮಾಡ್ತಿದೆ ಎಂಬ ಸಿಟಿ ರವಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾತನಾಡಬೇಕಾದ್ರೆ ಏನ್ ಬೇಕಾದ್ರೂ ಮಾತಾಡಬಹುದು. ಸಂವಿಧಾನದಲ್ಲಿ ಮಾತಾಡೋಕೆ ಹಕ್ಕಿದೆ ಅಂತ ಏನ್ ಬೇಕಾದ್ರು ಮಾತಾಡೋದಲ್ಲ. ಟೀಕೆ ಟಿಪ್ಪಣಿಗಳನ್ನು ಇತಿಮಿತಿಯಲ್ಲಿ ಮಾಡಬೇಕು ಎಂದು ಸಿಟಿ ರವಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಕಳ್ಳ ಯಾವತ್ತಿದ್ದರೂ ಕಳ್ಳನೇ; ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಅನುಮತಿ ಹಿಂಪಡೆದ ನಿರ್ಧಾರಕ್ಕೆ ಈಶ್ವರಪ್ಪ ಕಿಡಿ

  • ನಿರ್ಮಾಣ ಹಂತದಲ್ಲಿದ್ದ ಸೇತುವೆ ಉದ್ಘಾಟಿಸಿದ ಆದಿತ್ಯ ಠಾಕ್ರೆ ವಿರುದ್ಧ ದೂರು

    ನಿರ್ಮಾಣ ಹಂತದಲ್ಲಿದ್ದ ಸೇತುವೆ ಉದ್ಘಾಟಿಸಿದ ಆದಿತ್ಯ ಠಾಕ್ರೆ ವಿರುದ್ಧ ದೂರು

    ಮುಂಬೈ: ಕಾಮಗಾರಿ ಪೂರ್ಣವಾಗದ ಸೇತುವೆಯನ್ನು ಉದ್ಘಾಟಿಸಿದ ಶಿವಸೇನೆ ನಾಯಕ ಆದಿತ್ಯ ಠಾಕ್ರೆ (Aaditya Thackeray) ವಿರುದ್ಧ ದೂರು ದಾಖಲಾಗಿದೆ.

    ಮುಂಬೈ ಮಹಾನಗರ ಪಾಲಿಕೆ (BMC)ಯು ಠಾಕ್ರೆ ವಿರುದ್ಧ ಈ ದೂರು ನೀಡಿದೆ. ದೂರಿನಲ್ಲಿ ಗುರುವಾರ ರಾತ್ರಿ ಪೂರ್ಣಗೊಳ್ಳದ ಲೋವರ್ ಪರೇಲ್‍ನಲ್ಲಿ ಡೆಲಿಸ್ಲೆ ಸೇತುವೆಯ ಎರಡನೇ ಕ್ಯಾರೇಜ್‍ವೇಯನ್ನು ಆದಿತ್ಯ ಠಾಕ್ರೆ ಅವರು ಉದ್ಘಾಟಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

    ಸೇತುವೆಯ (Bridge Inauguration) ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ ಬಳಕೆಗೆ ಸುರಕ್ಷಿತವೆಂದು ಪ್ರಮಾಣೀಕರಿಸಲಾಗಿಲ್ಲ. ಸೇತುವೆಯನ್ನು ಅಕಾಲಿಕವಾಗಿ ಬಳಸುವ ವಾಹನ ಚಾಲಕರಿಗೆ ಸಂಭವನೀಯ ಅಪಾಯಗಳ ಬಗ್ಗೆ ನಾಗರಿಕ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ಶಮಿ ತವರಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ

    ಸದ್ಯ ದೂರಿನ ಹಿನ್ನೆಲೆಯಲ್ಲಿ ಆದಿತ್ಯ ಠಾಕ್ರೆ ಜೊತೆಗೆ ಸುನಿಲ್ ಶಿಂದ್ ಹಾಗೂ ಸಚಿನ್ ಅಹಿರ್ ವಿರುದ್ಧ ಐಪಿಸಿ ಸೆಕ್ಷನ್ 143 (ದಂಡನೆ), 149 (ಅಕ್ರಮವಾಗಿ ಗುಂಪುಗೂಡುವಿಕೆ), 336 ಜೀವನ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯಿದೆ) ಹಾಗೂ 447 (ಕ್ರಿಮಿನಲ್ ಅತಿಕ್ರಮಣಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ದಕ್ಷಿಣ ಮುಂಬೈ ಮತ್ತು ಲೋವರ್ ಪರೇಲ್ ನಡುವಿನ ನಿರ್ಣಾಯಕ ಸಂಪರ್ಕವಾದ ಡೆಲಿಸ್ಲೆ ಸೇತುವೆಯನ್ನು ಜೂನ್‍ನಲ್ಲಿ ಭಾಗಶಃ ತೆರೆಯಲಾಯಿತು. ಕರಿ ರಸ್ತೆಯನ್ನು ಲೋವರ್ ಪರೇಲ್‍ಗೆ ಸಂಪರ್ಕಿಸುವ ಮತ್ತೊಂದು ಹಂತವು ಸೆಪ್ಟೆಂಬರ್ ನಲ್ಲಿ ತೆರೆಯಲ್ಪಟ್ಟಿತು.

  • ಖ್ಯಾತ ಗಾಯಕ ಹನಿ ಸಿಂಗ್ ವಿರುದ್ಧ ಹಲ್ಲೆ, ಅಪಹರಣ ಕೇಸ್ ದಾಖಲು

    ಖ್ಯಾತ ಗಾಯಕ ಹನಿ ಸಿಂಗ್ ವಿರುದ್ಧ ಹಲ್ಲೆ, ಅಪಹರಣ ಕೇಸ್ ದಾಖಲು

    ಬಾಲಿವುಡ್ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಯೋ ಯೋ ಹನಿ ಸಿಂಗ್ (Yo Yo Honey Singh) ವಿರುದ್ಧ ಪ್ರತಿಷ್ಠಿತ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಮಾಲೀಕರು ಹಲ್ಲೆ (Assault) ಹಾಗೂ ಅಪಹರಣ (Kidnapping) ಪ್ರಕರಣಗಳನ್ನು (Case) ದಾಖಲಿಸಿದ್ದಾರೆ. ತಮ್ಮನ್ನು ಹನಿ ಸಿಂಗ್ ಅಪಹರಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಹನಿ ಸಿಂಗ್ ಇದೇ ತಿಂಗಳು ಒಂದನೇ ತಾರೀಖಿನಂದು ಹೊಸ ಆಲ್ಬಂನ ಸಿಂಗಲ್ ಹಾಡೊಂದು ರಿಲೀಸ್ ಮಾಡಿದ್ದರು. ಎರಡನೇ ಹಾಡು ಏಪ್ರಿಲ್ 15ರಂದು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿ ಪ್ರಚಾರ ಕೂಡ ಮಾಡಿದ್ದರು. ಹಣಕಾಸು ವ್ಯವಹಾರದಲ್ಲಿ ಗೊಂದಲವಾದ ಕಾರಣದಿಂದಾಗಿ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿ ಮಾಲೀಕ ವಿವೇಕ್ ರಾಮನ್ (Vivek Raman) ಮತ್ತು ಹನಿಸಿಂಗ್ ನಡುವೆ ಗಲಾಟೆ ಆಗಿತ್ತು. ಇದೇ ವಿಚಾರವಾಗಿ ವಿವೇಕ್ ಅವರನ್ನು ಅಪಹರಣ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ವಿವೇಕ್ ರಾಮನ್ ಕೊಟ್ಟಿರುವ ದೂರಿನ ಅನ್ವಯ ಮುಂಬೈನ ಬಿಕೆಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಹನಿ ಸಿಂಗ್ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ದೂರು ದಾಖಲಾದ ಬೆನ್ನಲ್ಲೇ ಹನಿ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿವೇಕ್ ರಾಮನ್ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿದ್ದಾರಂತೆ. ಅದೆಲ್ಲವೂ ಸುಳ್ಳು ಎಂದಿದ್ದಾರೆ ವಿವೇಕ್. ಇದನ್ನೂ ಓದಿ:ಐಟಂ ಸಾಂಗ್‌ಗೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ‘ಕಬ್ಜ’ ಸುಂದರಿ

    ತಮ್ಮ ಮೇಲೆ ಆರೋಪ ಮಾಡಿರುವ ಹನಿ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ವಿವೇಕ್ ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ಅವರು ಕಾನೂನು ಸಲಹೆಯನ್ನೂ ಪಡೆಯುತ್ತಿದ್ದಾರಂತೆ. ಬಾಲಿವುಡ್ ನಲ್ಲಿ ವಿಶೇಷ ಗಾಯಕ ಎಂದೇ ಪ್ರಸಿದ್ಧಿಯಾಗಿರುವ ಯೋ ಯೋ ಹನಿ ಸಿಂಗ್, ಸಲ್ಲದ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.

  • ಆಂಟಿ ಅಂದ್ರೆ ಕೇಸ್ ಬೀಳತ್ತೆ: ಗರಂ ಆದ ನಟಿ ಅನಸೂಯ

    ಆಂಟಿ ಅಂದ್ರೆ ಕೇಸ್ ಬೀಳತ್ತೆ: ಗರಂ ಆದ ನಟಿ ಅನಸೂಯ

    ತೆಲುಗು ಚಿತ್ರೋದ್ಯಮದ ನಟಿ, ನಿರೂಪಕಿ ಅನಸೂಯ ಭಾರದ್ವಾಜ್ (Anasuya Bhardwaj) ಅತೀ ಹೆಚ್ಚು ಟ್ರೋಲ್ ಆಗುವ ವ್ಯಕ್ತಿಗಳ ಸಾಲಿನಲ್ಲಿ ಸದಾ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕುತ್ತಾ, ತಮ್ಮ ಹಿಂಬಾಲಕರಿಗೆ ಮನರಂಜನೆ ನೀಡುವ ಅನಸೂಯ, ಕೆಲವು ವಿಷಯಗಳಿಗೆ ತುಂಬಾ ಕಟ್ಟುನಿಟ್ಟು. ಅದರಲ್ಲೂ ಅಪಮಾನ ಮಾಡುವಂತಹ ಪದ ಬಳಕೆ ಮಾಡಿದರೆ, ಅವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಈ ನಟಿ.

    ಸೋಷಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಮಾಡುವ ಫೋಟೋಗಳಿಗೆ ಕೆಲ ದಿನಗಳಿಂದ ನೆಗೆಟಿವ್ ಕಾಮೆಂಟ್ ಬರುತ್ತಿವೆ. ಅದರಲ್ಲೂ ಕೆಲವರು ‘ಆಂಟಿ’ (Aunty) ಎಂದು ಕರೆಯುತ್ತಿದ್ದಾರೆ. ಈ ಆಂಟಿ ಪದಕ್ಕೆ ಅವರು ಗರಂ ಆಗಿದ್ದಾರೆ. ಈ ಪದವನ್ನು ಹೇಳುವುದರ ಹಿಂದಿನ ಉದ್ದೇಶದ ಬಗ್ಗೆ ಅವರು ಮಾತನಾಡಿದ್ದಾರೆ. ಈ ರೀತಿಯಲ್ಲಿ ಕರೆದರೆ ಕೇಸ್ ದಾಖಲಿಸುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ನಗ್ಮಾ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ : ನಟ ರವಿಕಿಶನ್

    ಆಂಟಿ ಎಂಬ ಪದವು ಕಿರುಕುಳದ ವ್ಯಾಪ್ತಿಗೆ ಬರುತ್ತದೆ. ಆ ರೀತಿಯಲ್ಲಿ ಕಾಮೆಂಟ್ ಮಾಡುವವರಿಗೆ ಕಾನೂನು (Complaint) ರೀತಿಯ ಕ್ರಮಕ್ಕೆ ಮುಂದಾಗುತ್ತೇನೆ. ನೀವು ಹಾಗೆ ಕರೆಯುವುದರ ಹಿಂದಿನ ಉದ್ದೇಶವನ್ನು ನಾನು ಬಲ್ಲೆ. ಹಾಗಾಗಿ ಎಚ್ಚರಿಕೆಯಿಂದ ಕಾಮೆಂಟ್ ಮಾಡಿ ಎಂದು ಹೇಳಿದ್ದಾರೆ. ಯಾರಿಗೂ ಆಂಟಿ ಅಂತ ಕರೆಯಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಆದರೂ, ಈ ಕಿರುಕುಳ ನಿಂತಿಲ್ಲ.

    ಕೆಲವರಂತೂ ಈ ರೀತಿ ಹೇಳಿದ ಮೇಲೆ ಇನ್ನೂ ಜಾಸ್ತಿ ಕೀಟಲೆ ಮಾಡುತ್ತಿದ್ದಾರೆ. ಬೇಕು ಅಂತಾನೇ ಅನಸೂಯ ಅವರ ಫೋಟೋಗಳನ್ನು ಹುಡುಕಿ, ಹುಡುಕಿ ಫೋಟೋಗಳು ಆಂಟಿ ಎಂದು ಬರೆದು ಪೋಸ್ಟ್ ಮಾಡುತ್ತಿದ್ದಾರೆ. ಈ ಎಲ್ಲ ನಡೆಯನ್ನೂ ತಾವು ಗಂಭೀರವಾಗಿ ತಗೆದುಕೊಳ್ಳುವುದಾಗಿ ಅನಸೂಯ ಬರೆದುಕೊಂಡಿದ್ದಾರೆ.

  • ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾವಿನ ರಹಸ್ಯ ಬಯಲು

    ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾವಿನ ರಹಸ್ಯ ಬಯಲು

    ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾನಿಯಾನ್ ಸಾವಿನ ಬೆನ್ನಲ್ಲೇ ಸುಶಾಂತ್ ಕೂಡ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದರು. ಹಾಗಾಗಿ ಮ್ಯಾನೇಜರ್ ಸಾವಿಗೆ ಸುಶಾಂತ್ ಸಾವನ್ನು ತಳುಕು ಹಾಕಲಾಗಿತ್ತು. ದಿಶಾ ಸಾವಿನಿಂದಾಗಿಯೇ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

    ದಿಶಾ ಸಾವಿಗೆ ಸಂಬಂಧಿಸಿದಂತೆ ದೂರು ದಾಖಲಾಗದೇ ಇದ್ದರೂ, ಸಿಬಿಐ ಸ್ವತಂತ್ರವಾಗಿ ತನಿಖೆ ಆರಂಭಿಸಿತ್ತು. ಎರಡು ಸಾವುಗಳಿಗೆ ಏನಾದರೂ ಸಂಬಂಧ ಇದೆಯಾ ಎಂದು ಪರಿಶೀಲನೆ ನಡೆಸಿತ್ತು. ಕೇವಲ ಸಿಬಿಐ ಮಾತ್ರವಲ್ಲ, ಇಡಿ ಮತ್ತು ಎನ್.ಸಿ.ಬಿ ಕೂಡ ಈ ವಿಚಾರಣೆಗೆ ಕೈ ಜೋಡಿಸಿದ್ದವು. ಈ ಎಲ್ಲ ವಿಚಾರಣೆಗಳು ಮುಗಿದಿದ್ದು, ಕೊನೆಗೂ ದಿಶಾ ಅವರ ಸಾವಿನ ರಹಸ್ಯ ಬಯಲಾಗಿದೆ. ಇದನ್ನೂ ಓದಿ: ಗುರೂಜಿ ಮಾಡಿದ ಆ ಒಂದು ತಪ್ಪಿನಿಂದ, ಮನೆ ಮಂದಿಗೆ ಬಿಗ್ ಬಾಸ್ ಗುನ್ನ

    ಜೂನ್ ಎರಡನೇ ವಾರದಲ್ಲಿ ದಿಶಾ ಅವರ ಮೃತದೇಹ ಮುಂಬೈನ ಅಪಾರ್ಟಮೆಂಟ್ ವೊಂದರಲ್ಲಿ 14ನೇ ಮಹಡಿಯ ಕೋಣೆಯಲ್ಲಿ ಪತ್ತೆಯಾದ ಕೇವಲ 5 ದಿನಗಳ ನಂತರ ಸುಶಾಂತ್ ಶವವಾಗಿ ಪತ್ತೆಯಾಗಿದ್ದ. ಹಾಗಾಗಿ ಎರಡೂ ಸಾವುಗಳ ಕುರಿತು ತನಿಖೆಗೆ ಅನೇಕರು ಆಗ್ರಹಿಸಿದ್ದರು. ಸಿಬಿಐ ಸಲ್ಲಿಸಿರುವ ವರದಿಗಳ ಪ್ರಕಾರ ದಿಶಾ ಅತಿಯಾದ ಮದ್ಯಪಾನ ಸೇವಿಸಿ, ನಿಯಂತ್ರಣ ಸಿಗದೇ ಬಿದ್ದಿರುವುದು ಬೆಳಕಿಗೆ ಬಂದಿದೆ. ಈ ಎರಡೂ ಸಾವಿಗೆ ಒಂದಕ್ಕೊಂದು ಸಂಬಂಧವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

    ತನಿಖೆಯನ್ನು ಕೈಗೆತ್ತಿಕೊಂಡ ನಂತರ ದಿಶಾ ಪ್ರಿಯತಮ ರೋಹನ್ ರೈ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಕೆಲ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗಿತ್ತು. ಸಮಗ್ರ ಕೋನದಿಂದ ತನಿಖೆ ಮಾಡಿರುವ ಅಧಿಕಾರಿಗಳು ಸುಶಾಂತ್ ಸಾವಿಗೆ ದಿಶಾ ಸಾವು ಕಾರಣವಲ್ಲ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೇಸ್ ವಾಪಸ್ ತೆಗೆದುಕೋ, ಮುಂದುವರಿಸುವುದು ಬೇಡ – ಸಂತ್ರಸ್ತೆಗೆ ಆಮಿಷ ಒಡ್ಡಿದ್ರಾ ಮುರುಘಾ ಶ್ರೀ?

    ಕೇಸ್ ವಾಪಸ್ ತೆಗೆದುಕೋ, ಮುಂದುವರಿಸುವುದು ಬೇಡ – ಸಂತ್ರಸ್ತೆಗೆ ಆಮಿಷ ಒಡ್ಡಿದ್ರಾ ಮುರುಘಾ ಶ್ರೀ?

    ಚಿತ್ರದುರ್ಗ: ದಿನ ಕಳೆದಂತೆ ಮುರುಘಾ ಶ್ರೀಗಳ (Murugha Sri) ವಿರುದ್ಧ ಪೋಕ್ಸೋ ಕೇಸ್ ಕೂಡ ಹಲವು ತಿರುವು ಪಡೆಯುತ್ತಿದೆ. ಶ್ರೀಗಳ ವಿರುದ್ಧ ದೂರು ನೀಡಿದ್ದ ಸಂತ್ರಸ್ತೆಗೆ ಆಮಿಷ ಒಡ್ಡಿದ ಆರೋಪ ಕೇಳಿ ಬಂದಿದೆ.

    ಆಮಿಷ ಒಡ್ಡಿರುವ ಬಗ್ಗೆ ವಿಸೃತ ತನಿಖೆ ನಡೆಸುವಂತೆ ಕೋರಿ ಒಡನಾಡಿ ಸಂಸ್ಥೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ ಬರೆದಿದೆ. ಸಂತ್ರಸ್ತ ಬಾಲಕಿಗೆ ಆಕೆಯ ತಂದೆ ಬಾಲ ಭವನದ ದೂರವಾಣಿಗೆ ಕರೆ ಮಾಡಿದ್ರು. ಸ್ವಾಮಿಗಳು ನಮ್ಮನ್ನು ನೋಡಿಕೊಂಡಿದ್ದಾರೆ. ಹಣ ಕೊಟ್ಟಿದ್ದಾರೆ. ನೀನು ಕೇಸ್ ಮುಂದುವರಿಸುವುದು ಬೇಡ. ದೂರನ್ನು ವಾಪಾಸ್‌ ತೆಗೆದುಕೊಂಡು ನನ್ನ ಜೊತೆ ಬರಲು ನೋಡು ಎಂದು ಹೇಳುತ್ತಿದ್ದುದನ್ನು ಕೇಳಿಸಿಕೊಂಡೆ ಅಂತಾ ಸಂತ್ರಸ್ತೆಯ ಜೊತೆಗಾರ್ತಿ ಹೇಳಿರೋದಾಗಿ ಪತ್ರದಲ್ಲಿ ಒಡನಾಡಿ ಸಂಸ್ಥೆ ಉಲ್ಲೇಖಿಸಿದೆ. ಇದನ್ನೂ ಓದಿ: ಇನ್ಮುಂದೆ ಖಾಸಗಿ ಜಾಗದಲ್ಲಿ ಶ್ರೀಗಂಧ ಬೆಳೆದು ರೈತರೇ ಮಾರಾಟ ಮಾಡಬಹುದು

    ಈ ದೂರವಾಣಿ ಕರೆ ಬಂದ ಮೇಲೆಯೆ ಆ ಬಾಲಕಿಯನ್ನು ಆರೋಪಿಯ ಪರ ನಿಂತಿದ್ದ ಚಿಕ್ಕಪ್ಪ ಹಾಗೂ ತಂದೆಯೊಡನೆ ಚಿತ್ರದುರ್ಗದ ಸಿಡಬ್ಲ್ಯೂಸಿ (CWC) ಕಳುಹಿಸಿ ಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಇವರ ಈ ಹೆಜ್ಜೆಗೆ ಮತ್ತೋರ್ವ ಬಾಲಕಿ ನೀಡಿರುವ ಹೇಳಿಕೆಯು ಪೂರಕವಾಗಿ ನಿಂತಿದೆ. ಮಕ್ಕಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಹಣದ ಆಮಿಷ ಒಡ್ಡಿ ಮುಚ್ಚಿ ಹಾಕಲು ಆರೋಪಿಗಳು ಪ್ರಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಒಡನಾಡಿ ಸಂಸ್ಥೆ ದೂರಿದೆ. ಇದನ್ನೂ ಓದಿ: ದುಬೈ ಅಥವಾ ನ್ಯೂಯಾರ್ಕ್‌ನಲ್ಲಿ ಕುಟುಂಬದ ಕಚೇರಿ ತೆರೆಯಲು ಮುಂದಾದ ಅದಾನಿ

    Live Tv
    [brid partner=56869869 player=32851 video=960834 autoplay=true]

  • IAS ಅಧಿಕಾರಿ ಅನುರಾಗ್ ತಿವಾರಿ ಸಾವು ಕೇಸ್ – ಸಹಜ ಸಾವು ಎಂದ ಸಿಬಿಐ ವರದಿ ತಿರಸ್ಕೃತ

    IAS ಅಧಿಕಾರಿ ಅನುರಾಗ್ ತಿವಾರಿ ಸಾವು ಕೇಸ್ – ಸಹಜ ಸಾವು ಎಂದ ಸಿಬಿಐ ವರದಿ ತಿರಸ್ಕೃತ

    ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ (IAS officer Anurag Tiwari) ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ತಿವಾರಿ ಅವರ ಸಾವು ಸಹಜ ಎಂದು ನೀಡಿದ್ದ ಸಿಬಿಐ ವರದಿಯನ್ನು ಲಖನೌ ಸಿಬಿಐ ವಿಶೇಷ ನ್ಯಾಯಾಲಯ (CBI special court) ತಿರಸ್ಕರಿಸಿದ್ದು, ಮರು ತನಿಖೆಗೆ (Re-investigation) ಆದೇಶಿಸಿದೆ.

    ಅನುರಾಗ್ ಕುಟುಂಬಸ್ಥರ ದೂರಿನನ್ವಯ ಮರು ತನಿಖೆಗೆ ಕೋರ್ಟ್ ಆದೇಶ ಹೊರಡಿಸಿದೆ. ಕೋರ್ಟ್ ಆದೇಶದಿಂದ ಸಿಬಿಐಗೆ (CBI) ಭಾರೀ ಹಿನ್ನಡೆಯಾಗಿದೆ. ಇದೇ ಅಕ್ಟೋಬರ್ 22ರಂದು ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ತಿವಾರಿ ಸಾವಿನ ಹಿಂದೆ ಐಎಎಸ್ ಮಾಫಿಯಾದ ಕೈವಾಡವಿದೆ, ನನಗೂ ಜೀವ ಬೆದರಿಕೆ ಇತ್ತು: ನಿವೃತ್ತ ಅಧಿಕಾರಿ ವಿಜಯಕುಮಾರ್

    Law

    2007ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿ ಮೃತದೇಹ 2017ರಲ್ಲಿ ಲಖನೌದ (Lucknow) ಹಜರತ್ ಗಂಜ್ ಗೆಸ್ಟ್ ಹೌಸ್‍ನಲ್ಲಿ (Hazrat Ganj Guest House) ಪತ್ತೆಯಾಗಿತ್ತು. ಆಗ ತಿವಾರಿ ರಾಜ್ಯದ ಆಹಾರ ಸರಬರಾಜು ಇಲಾಖೆಯ ಆಯುಕ್ತರಾಗಿದ್ದರು. ಅನ್ನಭಾಗ್ಯ ಅಕ್ಕಿ ಹಗರಣದ ಬಗ್ಗೆ ತನಿಖೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಸಜ್ಜಾಗಿದ್ದರು. ಸದ್ಯ ಸಾವಿಗೂ ಕೆಲ ದಿನಗಳ ಹಿಂದೆ ಸಹೋದರ ಮಯಾಂಕ್‍ಗೆ, ಕರ್ನಾಟಕ ಸರ್ಕಾರದಲ್ಲಿ ದಕ್ಷ ಐಎಎಸ್ ಅಧಿಕಾರಿಗಳಿಗೆ ಕೆಲಸ ಮಾಡಲು ಆಗುತ್ತಿಲ್ಲ. ನನಗೂ ಸಹ ಜೀವ ಭಯವಿದೆ. ಆದಷ್ಟು ಬೇಗ ಮರಳಿ ಉತ್ತರಪ್ರದೇಶಕ್ಕೆ ಬರುವುದಾಗಿ ಮೆಸೇಜ್ ಮಾಡಿದ್ದರು. ಇದನ್ನೂ ಓದಿ: ಅನ್ನಭಾಗ್ಯ ಅಕ್ರಮ: 34 ಲಕ್ಷ ಕೆಜಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟ – ಅನುರಾಗ್ ತಿವಾರಿ ಬಲಿ ಪಡೀತಾ ಹಗರಣ?

    ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ (36) ಅವರ ಶವ ಉತ್ತರಪ್ರದೇಶದ ಹಜರತ್‍ಗಂಜ್‍ನಲ್ಲಿ ಮೇ 17ರಂದು ಪತ್ತೆಯಾಗಿತ್ತು. ಅನುರಾಗ್ ತಿವಾರಿ ಅವರ ಜನ್ಮದಿನದಂದೇ ಇಲ್ಲಿನ ಮೀರಾ ಬಾಯಿ ಗೆಸ್ಟ್‍ಹೌಸ್ ಬಳಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. 2007ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಇವರು ಸದ್ಯ ಆಹಾರ ಸರಬರಾಜು ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಉತ್ತರಪ್ರದೇಶದ ಬಾಹ್ರಿಯಾಚ್‍ನಲ್ಲಿ ನೆಲೆಸಿದ್ದು, ಸಾವಿಗೂ ಎರಡು ದಿನಗಳಿಂದ ಮೀರಾಬಾಯಿ ಗೆಸ್ಟ್ ಹೌಸ್‍ನಲ್ಲಿ ತಂಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮನೆಯೊಂದರಲ್ಲಿ ಸಾಮೂಹಿಕ ನಮಾಜ್‌ ಮಾಡಿದ್ದಕ್ಕೆ ಕೇಸ್‌ – ಪ್ರಕರಣ ರದ್ದುಗೊಳಿಸಿದ ಪೊಲೀಸರು

    ಮನೆಯೊಂದರಲ್ಲಿ ಸಾಮೂಹಿಕ ನಮಾಜ್‌ ಮಾಡಿದ್ದಕ್ಕೆ ಕೇಸ್‌ – ಪ್ರಕರಣ ರದ್ದುಗೊಳಿಸಿದ ಪೊಲೀಸರು

    ಲಕ್ನೋ: ಅನುಮತಿಯಿಲ್ಲದೇ ಮನೆಯೊಂದರಲ್ಲಿ ಸಾಮೂಹಿಕವಾಗಿ ನಮಾಜ್‌ ಮಾಡಿದ್ದನ್ನು ವಿರೋಧಿಸಿ ದಾಖಲಿಸಲಾಗಿದ್ದ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ರದ್ದುಗೊಳಿಸಿದ್ದಾರೆ. ತನಿಖೆ ನಡೆಸುವಂತಹ ಯಾವುದೇ ಘಟನೆ ಅಲ್ಲಿ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಆಗಸ್ಟ್ 24 ರಂದು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ದುಲ್ಹೇಪುರ್ ಗ್ರಾಮದಲ್ಲಿ 26 ಮುಸ್ಲಿಮರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಮನೆಯೊಂದರಲ್ಲಿ ಮುಸ್ಲಿಮರ ಸಾಮೂಹಿಕ ನಮಾಜ್‌ಗೆ ನೆರೆಹೊರೆಯವರು ವಿರೋಧ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಮನೆಯಲ್ಲಿ ಸಾಮೂಹಿಕ ನಮಾಜ್ – 26 ಮಂದಿಯ ವಿರುದ್ಧ ಪ್ರಕರಣ ದಾಖಲು

    ಮೊರಾದಾಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ಮಸೀದಿ ಇರಲಿಲ್ಲ. ಹೀಗಾಗಿ ಕೆಲವು ನಿವಾಸಿಗಳು ಸಭೆ ಹಿನ್ನೆಲೆಯಲ್ಲಿ ಒಂದೇ ಮನೆಯೊಳಗೆ ಸೇರಿದ್ದಾರೆ. ಈ ಸಂದರ್ಭದಲ್ಲಿ ನಮಾಜ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

    ಇಂದು ಮೊರಾದಾಬಾದ್ ಪೊಲೀಸರು ಹಿಂದಿಯಲ್ಲಿ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗ್ರಾಮದಲ್ಲಿ ತನಿಖೆ ನಡೆಸಿದ ನಮ್ಮ ಪೊಲೀಸ್‌ ತಂಡವು ದೂರು ಆಧಾರರಹಿತ ಎಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಲವಂತವಾಗಿ ದನದ ಮಾಂಸ ತಿನ್ನಿಸಿದ ಮುಸ್ಲಿಂ ಪತ್ನಿ, ಆಕೆಯ ಸಹೋದರ- ವ್ಯಕ್ತಿ ಆತ್ಮಹತ್ಯೆ

    ಸಾಮೂಹಿಕವಾಗಿ ನಮಾಜ್‌ ಮಾಡುವ ಮೂಲಕ ಜನರಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಆಗಸ್ಟ್ 24 ರಂದು ಸ್ಥಳೀಯ ನಿವಾಸಿ ಚಂದ್ರ ಪಾಲ್ ಸಿಂಗ್ ದೂರು ನೀಡಿದ್ದರು. 26 ಮಂದಿಯಲ್ಲಿ 16 ಜನರ ಹೆಸರನ್ನು ಉಲ್ಲೇಖಿಸಿದ್ದರು. ಉಳಿದ 10 ಮಂದಿ ಅಪರಿಚಿತರಾಗಿದ್ದು, ಎಲ್ಲರೂ ಸ್ಥಳೀಯರೇ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

    Live Tv
    [brid partner=56869869 player=32851 video=960834 autoplay=true]