Tag: ಕೇಸರಿ

  • ದೀಪಿಕಾ ಕೇಸರಿ ಬಿಕಿನಿ ವಿವಾದ: ವಿರೋಧಿಗಳಿಗೆ ಸಮಸ್ಯೆಯಿದೆ ಎಂದ ಸಂಸದೆ ನುಸ್ರತ್ ಟ್ರೋಲ್

    ದೀಪಿಕಾ ಕೇಸರಿ ಬಿಕಿನಿ ವಿವಾದ: ವಿರೋಧಿಗಳಿಗೆ ಸಮಸ್ಯೆಯಿದೆ ಎಂದ ಸಂಸದೆ ನುಸ್ರತ್ ಟ್ರೋಲ್

    ಠಾಣ್ ಸಿನಿಮಾದ ಹಾಡೊಂದರಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ ವಿವಾದ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪರ ವಿರೋಧದ ಚರ್ಚೆಗೆ ದಿನಕ್ಕೊಬ್ಬರು ಪ್ರವೇಶ ಮಾಡುತ್ತಿದ್ದಾರೆ. ಈ ವಿವಾದ ಸಿನಿಮಾದಾಚೆ ರಾಜಕೀಯ ಬಣ್ಣ ಕೂಡ ಪಡೆದುಕೊಳ್ಳುತ್ತಿದೆ. ಕೇಸರಿ ಬಿಕಿನಿ ಹಾಕಿದ್ದಕ್ಕೆ ಗರಂ ಆಗಿರುವ ಬಿಜೆಪಿ ಜನಪ್ರತಿನಿಧಿಗಳಿಗೆ ಟಿಎಂಸಿ ಸಂಸದೆ ನುಸ್ರತ್, ತಿರುಗೇಟು ನೀಡಿದ್ದು ‘ಬಿಜೆಪಿ ಅವರಿಗೆ ಏನೇ ಹಾಕಿದರೂ ಸಮಸ್ಯೆ. ಬಿಕಿನಿ ಹಾಕಿದರೂ ಮಾತಾಡ್ತಾರೆ, ಹಿಜಬ್ ಧರಿಸಿದ್ರೂ ಸಮಸ್ಯೆ ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಈಗ ಅವರ ಮಾತು ಟ್ರೋಲ್ ಆಗುತ್ತಿದೆ.

    ಬಾಲಿವುಡ್ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ ವಿಚಾರ ದೇಶಾದ್ಯಂತ ಚರ್ಚೆ ಆಗುತ್ತಿದೆ. ಈ ಸಿನಿಮಾವನ್ನು ಬ್ಯಾನ್ ಮಾಡಿ ಎಂದು ಒಂದು ಗುಂಪು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದರೆ, ಸಿನಿಮಾಗೆ ಬಣ್ಣದ ರಾಜಕೀಯ ತರಬೇಡಿ ಎಂದು ಮತ್ತೊಂದು ಗುಂಪು ವಾದ ಮಾಡುತ್ತಿದೆ. ಪಠಾಣ್ ಸಿನಿಮಾದ ಹಾಡು ರಿಲೀಸ್ ಆದ ದಿನದಿಂದ ಈ ತಿಕ್ಕಾಟ ನಡೆದಿದೆ. ಆದರೆ, ಈವರೆಗೂ ಸಿನಿಮಾ ತಂಡವಾಗಲಿ ಅಥವಾ ಶಾರುಖ್ ಖಾನ್ ಆಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದನ್ನೂ ಓದಿ: ಬಾಡಿಗೆ ತಾಯಿಯ ಮೂಲಕ ಮಗು ಪಡೆಯುತ್ತಿದ್ದಾರಾ ರಾಮ್‌ಚರಣ್ ದಂಪತಿ?

    ಇದೇ ಮೊದಲ ಬಾರಿಗೆ ವಿವಾದದ ಕುರಿತು ಮಾತನಾಡಿರುವ ಶಾರುಖ್ ಖಾನ್. ನಾವು ಸಿನಿಮಾವನ್ನು ಸಿನಿಮಾದಂತೆ ನೋಡಬೇಕು. ನಾನಂತೂ ಸಿನಿಮಾವಾಗಿಯೇ ಅಲ್ಲಿ ಕೆಲಸ ಮಾಡಿದ್ದೇನೆ. ಈ ವಿವಾದವನ್ನು ಯಾಕೆ ಎಬ್ಬಿಸುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತು. ನನ್ನ ಮನಸ್ಸಲ್ಲಂತೂ ಯಾವುದೇ ಕೆಟ್ಟ ಆಲೋಚನೆಗಳು ಇಲ್ಲ. ಈ ವಿವಾದದಿಂದ ಸಿನಿಮಾ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಹಾಗಾಗಿ ಜನರು ಚಿತ್ರವನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಅವರು ಹೇಳಿದ್ದಾರೆ.

    ಪಠಾಣ್ ಸಿನಿಮಾದ ಬೇಷರಂ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿದೆ. ಇದು ಬೇಕು ಅಂತಾನೇ ಮಾಡಿದ ಹುನ್ನಾರ ಎಂದು ಹಿಂದೂಪರ ಸಂಘಟನೆಗಳು ಆರೋಪಿಸುತ್ತಿವೆ. ಕೆಲ ಪ್ರಗತಿಪರ ಹೋರಾಟಗಾರರ ಜೊತೆ ದೀಪಿಕಾ ಪಡುಕೋಣೆ ಗುರುತಿಸಿಕೊಂಡಿದ್ದಾರೆ ಎಂದು ಜೆಎನ್ಯು ಹೋರಾಟದಲ್ಲಿ ದೀಪಿಕಾ ಭಾಗಿಯಾಗದ್ದ ಫೋಟೋವನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಶಾಂತ್ ಸಂಬರಗಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಬಂದಿರುವ ಪ್ರಶಾಂತ್ ಸಂಬರಗಿ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಕಿರುವ ಕೇಸರಿ ಬಿಕಿನಿ ಬಗ್ಗೆ ತಕರಾರು ಎತ್ತಿದ್ದಾರೆ. ಬಾಲಿವುಡ್ ಚಿತ್ರೋದ್ಯಮ ಹಿಂದೂಗಳ ಭಾವನೆಗೆ ಹೀಗೆ ನೋವು ಮಾಡುತ್ತಿರುವುದು ಹೊಸದೇನೂ ಅಲ್ಲ, ಬಾಲಿವುಡ್ ನಟರ ಮದುವೆಗಳನ್ನು ನೋಡಿದರೆ ಲವ್ ಜಿಹಾದ್ ಬಗ್ಗೆ ಅನುಮಾನ ಮೂಡುತ್ತದೆ ಎಂದು ಅವರು ಮಾತನಾಡಿದ್ದಾರೆ. ದೀಪಿಕಾ ಅವರಿಗೆ ಬೇಕು ಅಂತಾನೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಪಠಾಣ್’ ಚಿತ್ರಕ್ಕೆ ಒಳ್ಳೆಯ ಪ್ರಚಾರ ಸಿಕ್ತು, ಸಿನಿಮಾ ಗೆಲ್ಲುತ್ತೆ ಎಂದ ಶಾರುಖ್ ಖಾನ್

    ‘ಪಠಾಣ್’ ಚಿತ್ರಕ್ಕೆ ಒಳ್ಳೆಯ ಪ್ರಚಾರ ಸಿಕ್ತು, ಸಿನಿಮಾ ಗೆಲ್ಲುತ್ತೆ ಎಂದ ಶಾರುಖ್ ಖಾನ್

    ಬಾಲಿವುಡ್ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ ವಿಚಾರ ದೇಶಾದ್ಯಂತ ಚರ್ಚೆ ಆಗುತ್ತಿದೆ. ಈ ಸಿನಿಮಾವನ್ನು ಬ್ಯಾನ್ ಮಾಡಿ ಎಂದು ಒಂದು ಗುಂಪು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದರೆ, ಸಿನಿಮಾಗೆ ಬಣ್ಣದ ರಾಜಕೀಯ ತರಬೇಡಿ ಎಂದು ಮತ್ತೊಂದು ಗುಂಪು ವಾದ ಮಾಡುತ್ತಿದೆ. ಪಠಾಣ್ ಸಿನಿಮಾದ ಹಾಡು ರಿಲೀಸ್ ಆದ ದಿನದಿಂದ ಈ ತಿಕ್ಕಾಟ ನಡೆದಿದೆ. ಆದರೆ, ಈವರೆಗೂ ಸಿನಿಮಾ ತಂಡವಾಗಲಿ ಅಥವಾ ಶಾರುಖ್ ಖಾನ್ ಆಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

    ಇದೇ ಮೊದಲ ಬಾರಿಗೆ ವಿವಾದದ ಕುರಿತು ಮಾತನಾಡಿರುವ ಶಾರುಖ್ ಖಾನ್. ನಾವು ಸಿನಿಮಾವನ್ನು ಸಿನಿಮಾದಂತೆ ನೋಡಬೇಕು. ನಾನಂತೂ ಸಿನಿಮಾವಾಗಿಯೇ ಅಲ್ಲಿ ಕೆಲಸ ಮಾಡಿದ್ದೇನೆ. ಈ ವಿವಾದವನ್ನು ಯಾಕೆ ಎಬ್ಬಿಸುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತು. ನನ್ನ ಮನಸ್ಸಲ್ಲಂತೂ ಯಾವುದೇ ಕೆಟ್ಟ ಆಲೋಚನೆಗಳು ಇಲ್ಲ. ಈ ವಿವಾದದಿಂದ ಸಿನಿಮಾ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಹಾಗಾಗಿ ಜನರು ಚಿತ್ರವನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಅವರು ಹೇಳಿದ್ದಾರೆ.

    ಪಠಾಣ್ ಸಿನಿಮಾದ ಬೇಷರಂ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿದೆ. ಇದು ಬೇಕು ಅಂತಾನೇ ಮಾಡಿದ ಹುನ್ನಾರ ಎಂದು ಹಿಂದೂಪರ ಸಂಘಟನೆಗಳು ಆರೋಪಿಸುತ್ತಿವೆ. ಕೆಲ ಪ್ರಗತಿಪರ ಹೋರಾಟಗಾರರ ಜೊತೆ ದೀಪಿಕಾ ಪಡುಕೋಣೆ ಗುರುತಿಸಿಕೊಂಡಿದ್ದಾರೆ ಎಂದು ಜೆಎನ್‌ಯು ಹೋರಾಟದಲ್ಲಿ ದೀಪಿಕಾ ಭಾಗಿಯಾಗದ್ದ ಫೋಟೋವನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಶಾಂತ್ ಸಂಬರಗಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಸಿನಿಮಾ ಮೂಲಕ ಪತಿಯ ಪ್ರಜಾಕೀಯಕ್ಕೆ ಸಾಥ್ ನೀಡಿದ ಪ್ರಿಯಾಂಕ ಉಪೇಂದ್ರ

    ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಬಂದಿರುವ ಪ್ರಶಾಂತ್ ಸಂಬರಗಿ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಕಿರುವ ಕೇಸರಿ ಬಿಕಿನಿ ಬಗ್ಗೆ ತಕರಾರು ಎತ್ತಿದ್ದಾರೆ. ಬಾಲಿವುಡ್ ಚಿತ್ರೋದ್ಯಮ ಹಿಂದೂಗಳ ಭಾವನೆಗೆ ಹೀಗೆ ನೋವು ಮಾಡುತ್ತಿರುವುದು ಹೊಸದೇನೂ ಅಲ್ಲ, ಬಾಲಿವುಡ್ ನಟರ ಮದುವೆಗಳನ್ನು ನೋಡಿದರೆ ಲವ್ ಜಿಹಾದ್ ಬಗ್ಗೆ ಅನುಮಾನ ಮೂಡುತ್ತದೆ ಎಂದು ಅವರು ಮಾತನಾಡಿದ್ದಾರೆ. ದೀಪಿಕಾ ಅವರಿಗೆ ಬೇಕು ಅಂತಾನೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೀಪಿಕಾ ಕೇಸರಿ ಬಿಕಿನಿ ವಿವಾದ : ಅಖಾಡಕ್ಕಿಳಿದ ನಟ ಚೇತನ್

    ದೀಪಿಕಾ ಕೇಸರಿ ಬಿಕಿನಿ ವಿವಾದ : ಅಖಾಡಕ್ಕಿಳಿದ ನಟ ಚೇತನ್

    ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ನಾಲ್ಕೈದು ದಿನಗಳಿಂದ ಸಾಕಷ್ಟು ಚರ್ಚೆ ಆಗುತ್ತಿದೆ. ನಟಿ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಹಿಂದೂ ಕಾರ್ಯಕರ್ತರು ದೀಪಿಕಾ ಮೇಲೆ ಮುಗಿಬಿದ್ದಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಬಹಳಷ್ಟು ಈ ನಡೆಗೆ ವಿರೋಧ ವ್ಯಕ್ತ ಪಡಿಸುತ್ತಿದ್ದರೆ, ಕೆಲವರು ಸಿನಿಮಾ ಪರವಾಗಿ ಮಾತನಾಡುತ್ತಿದ್ದಾರೆ.

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟ ಚೇತನ್, ‘ಪಠಾಣ್ ಚಿತ್ರದ ಹಾಡು ಈಗ ಅದರ ಕೇಸರಿ ಬಿಕಿನಿ ಮತ್ತು ಹಸಿರು ಶರ್ಟ್ ಕಾರಣದಿಂದ ರಾಜಕೀಯಗೊಳ್ಳುತ್ತಿದೆ. ಬಟ್ಟೆಯ ಬಣ್ಣದ ಕಾರಣಕ್ಕೆ ವ್ಯಕ್ತಿಸುತ್ತಿರುವ ವಿರೋಧವು ಬಹಳ ಕ್ಷುಲ್ಲಕವಾಗಿದೆ. ಬುದ್ಧ ಮತ್ತು ಬಸವನವರ ಬಣ್ಣವಾದ ಕೇಸರಿಯನ್ನು  ಹಿಂದುತ್ವವು ತನ್ನದಾಗಿಸಿಕೊಳ್ಳುತ್ತಿದೆ. ಪ್ರಕೃತಿ ಮತ್ತು ರೈತರ ಸಂಕೇತವಾದ ಹಸಿರು ಬಣ್ಣವು ಇಸ್ಲಾಮೀಕರಣಗೊಳ್ಳುತ್ತಿದೆ. ಮಾಡಬೇಕೆಂದೇ ಮಾಡುತ್ತಿರುವ ವಿವಾದವಿದು’ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರೆಗ್ನೆನ್ಸಿ ಬಗ್ಗೆ ಸೀಕ್ರೆಟ್ ಮಾಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ `ಕಬ್ಜ’ ಸುಂದರಿ

    ಪಠಾಣ್ ಸಿನಿಮಾದ ಬೇಷರಂ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿದೆ. ಇದು ಬೇಕು ಅಂತಾನೇ ಮಾಡಿದ ಹುನ್ನಾರ ಎಂದು ಹಿಂದೂಪರ ಸಂಘಟನೆಗಳು ಆರೋಪಿಸುತ್ತಿವೆ. ಕೆಲ ಪ್ರಗತಿಪರ ಹೋರಾಟಗಾರರ ಜೊತೆ ದೀಪಿಕಾ ಪಡುಕೋಣೆ ಗುರುತಿಸಿಕೊಂಡಿದ್ದಾರೆ ಎಂದು ಜೆ.ಎನ್.ಯೂ ಹೋರಾಟದಲ್ಲಿ ದೀಪಿಕಾ ಭಾಗಿಯಾಗದ್ದ ಫೋಟೋವನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಶಾಂತ್ ಸಂಬರಗಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಬಂದಿರುವ ಪ್ರಶಾಂತ್ ಸಂಬರಗಿ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಕಿರುವ ಕೇಸರಿ ಬಿಕಿನಿ ಬಗ್ಗೆ ತಕರಾರು ಎತ್ತಿದ್ದಾರೆ. ಬಾಲಿವುಡ್ ಚಿತ್ರೋದ್ಯಮ ಹಿಂದೂಗಳ ಭಾವನೆಗೆ ಹೀಗೆ ನೋವು ಮಾಡುತ್ತಿರುವುದು ಹೊಸದೇನೂ ಅಲ್ಲ, ಬಾಲಿವುಡ್ ನಟರ ಮದುವೆಗಳನ್ನು ನೋಡಿದರೆ ಲವ್ ಜಿಹಾದ್ ಬಗ್ಗೆ ಅನುಮಾನ ಮೂಡುತ್ತದೆ ಎಂದು ಅವರು ಮಾತನಾಡಿದ್ದಾರೆ. ದೀಪಿಕಾ ಅವರಿಗೆ ಬೇಕು ಅಂತಾನೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಸರಿ ಬಟ್ಟೆ ಧರಿಸಿ ಅಶ್ಲೀಲ ನೃತ್ಯ – ದೀಪಿಕಾ ವಿರುದ್ಧ ಮುತಾಲಿಕ್ ಕಿಡಿ

    ಕೇಸರಿ ಬಟ್ಟೆ ಧರಿಸಿ ಅಶ್ಲೀಲ ನೃತ್ಯ – ದೀಪಿಕಾ ವಿರುದ್ಧ ಮುತಾಲಿಕ್ ಕಿಡಿ

    ಧಾರವಾಡ: ಪಠಾಣ್ ಸಿನಿಮಾದಲ್ಲಿ (Pathan Cinema) `ಬೇಷರಂ ರಂಗ್’ ಶಾರುಖ್‌ಖಾನ್ (Shah Rukh Khan) ಹಾಗೂ ದೀಪಿಕಾ ಪಡುಕೋಣೆ (Deepika Padukone) ಹಾಟ್ ನೃತ್ಯದಿಂದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಸಿಡಿಮಿಡಿಗೊಂಡಿದ್ದಾರೆ.

    ಧಾರವಾಡದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಇತ್ತೀಚೆಗೆ ರಿಲೀಸ್ ಆಗಿರುವ ಪಠಾಣ್ ಸಿನೆಮಾದ `ಬೇಷರಂ ರಂಗ್’ ಹಾಡಿನ ನೃತ್ಯ ಅಶ್ಲೀಲ ಹಾಗೂ ಅಸಭ್ಯವಾಗಿದೆ, ಇದು ನಾಚಿಗೇಡಾಗುವಂತಹದ್ದು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ‘ಅಸಹ್ಯಕರ.. ಬಣ್ಣದ ಕುರುಡುತನ’ ಎನ್ನುತ್ತಾ ದೀಪಿಕಾ ಪರ ಬ್ಯಾಟ್ ಮಾಡಿದ ಪ್ರಕಾಶ್ ರಾಜ್

    ದೇಶಾದ್ಯಂತ ಪಠಾಣ್ ಸಿನಿಮಾ ಹಾಡಿಗೆ ಬೈಕಾಟ್ ಅಭಿಯಾನ ಆರಂಭಿಸಿದ್ದು, ಶ್ರೀರಾಮಸೇನೆ (Sriramsena) ಸಹ ಬೈಕಾಟ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಹಿಂದಿ ಚಿತ್ರರಂಗ ಮುಂಬೈನ ದಾವುದ್ ಕೈಯಲ್ಲಿದೆ. ಕಮ್ಯುನಿಸ್ಟರು ಹಾಗೂ ನಾಸ್ತಿಕವಾದಿಗಳ ಹಿಡಿತದಲ್ಲಿದೆ. ಇಲ್ಲಿವರೆಗೂ ಹಿಂದೂಗಳನ್ನೇ ಟಾರ್ಗೆಟ್ ಮಾಡಿ, ನಂಬಿಕೆಗಳನ್ನು ಕೆಡಿಸುವ ಪ್ರವೃತ್ತಿ ಬೆಳೆದುಬಂದಿದೆ. ಪಠಾಣ್ ಸಿನಿಮಾದಲ್ಲೂ ಕೇಸರಿ (Saffron) ಬಣ್ಣವನ್ನು ಟಾರ್ಗಟ್ ಮಾಡಿ ಬೇಷರಂ ರಂಗ್ ಹಾಡಿನಲ್ಲಿ ಈ ಬಣ್ಣ ತರಲಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

    ಈ ರೀತಿಯ ಮಾನಸಿಕತೆಯ ಚಿತ್ರಗಳಿಂದಲೇ ಲಿವಿಂಗ್ ಟುಗೆದರ್ (Live In Relationship), ಲವ್‌ಜಿಹಾದ್ (Love Jihad), ರೇಪ್, ಕಿಡ್ನ್ಯಾಪ್‌ಗಳು ಆಗುತ್ತದೆ. ಸೆನ್ಸಾರ್ ಮಂಡಳಿ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಸಮಾಜ ಹಾಳು ಮಾಡುವ ಇಂಥ ಚಲನಚಿತ್ರಗಳನ್ನ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೇಸರಿ ಬಿಕಿನಿ ವಿವಾದ: ಅಕ್ಷಯ್ ಕುಮಾರ್ ಮಾಡಿದ್ರೆ ಓಕೆನಾ? ಅಂತಿದೆ ಮತ್ತೊಂದು ಟೀಮ್

    ಹಿಂದೂ ದೇವತೆಗಳನ್ನ (Hindu Gods) ಅಸಭ್ಯವಾಗಿ ತೋರಿಸುವುದು ಅವಹೇಳನ ಮಾಡುವುದು ನಡೆದುಕೊಂಡೇ ಬಂದಿದೆ. ಪಿ.ಕೆ ಸಿನಿಮಾದಲ್ಲಿ ನಮ್ಮ ದೇವರುಗಳನ್ನ ಅಸಭ್ಯವಾಗಿ ಮಾಡಿದ್ದಾರೆ. ಪಾಕಿಸ್ತಾನದ ಹುಡುಗ ಹಾಗೂ ಭಾರತದ ದೇಶದ ಹುಡುಗಿಯ ಜೊತೆ ಪ್ರೀತಿ-ಪ್ರೇಮ ತೋರಿಸ್ತಾರೆ. ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಲಾಗುತ್ತಿದೆ. ಸಿನಿಮಾದಲ್ಲಿ ಗುಂಡಾ ರೋಲ್‌ನಲ್ಲಿ ಹಿಂದೂಗಳನ್ನ ತೋರಿಸ್ತಾರೆ. ನಮ್ಮನ್ನೆ ಪ್ರಚೋದನೆ ಮಾಡ್ತಾರೆ. ನಾವು ಎಷ್ಟು ದಿನ ತಾಳ್ಮೆಯಿಂದ ಇರಬೇಕು ಎಂದು ಪ್ರಶ್ನಿಸಿದ್ದಾರೆ.

    ಇನ್ನೂ ದೀಪಿಕಾ ಪಡುಕೋಣೆ ಪರ ಬ್ಯಾಟಿಂಗ್ ಮಾಡಿರುವ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ವಿರುದ್ಧ ಮುತಾಲಿಕ್ ಗರಂ ಆಗಿದ್ದಾರೆ. ಸ್ವಾಮಿ ನಾವು ಸಹನೆ ಮಾಡಿಕೊಳ್ಳುತಿದ್ದೇವೆ. ನಾವು ಎಷ್ಟು ದಿನ ಹಿಂದೂ ವಿರೋಧಿ ನೀತಿ ಸಹಿಸಬೇಕು? ಕಳೆದ 50 ವರ್ಷಗಳಿಂದ ಇದನ್ನೆ ಮಾಡುತ್ತಾ ಬಂದಿದ್ದೀರಿ. ನಮ್ಮನ್ನೆ ಟಾರ್ಗೆಟ್ ಮಾಡಿದ್ದೀರಿ. ಮುಸ್ಲಿಮರು ಬುರ್ಕಾ ಹಾಕಿಕೊಂಡು ಕುಣಿಯಲಿ, ಕ್ರಿಶ್ಚಿಯನ್ನರು ಚರ್ಚ್ನಲ್ಲಿ ಡಾನ್ಸ್ ಮಾಡಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಸರಿ ಬಿಕಿನಿ ವಿವಾದ: ಅಕ್ಷಯ್ ಕುಮಾರ್ ಮಾಡಿದ್ರೆ ಓಕೆನಾ? ಅಂತಿದೆ ಮತ್ತೊಂದು ಟೀಮ್

    ಕೇಸರಿ ಬಿಕಿನಿ ವಿವಾದ: ಅಕ್ಷಯ್ ಕುಮಾರ್ ಮಾಡಿದ್ರೆ ಓಕೆನಾ? ಅಂತಿದೆ ಮತ್ತೊಂದು ಟೀಮ್

    ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದರು ಎನ್ನುವ ಕಾರಣಕ್ಕಾಗಿ ಮೂರು ದಿನದಿಂದ ವಿವಾದ ಭುಗಿಲೆದ್ದಿದೆ. ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಶುರು ಮಾಡಿದ್ದಾರೆ. ಶಾರುಖ್ ಖಾನ್ ಬೇರೆ ಧರ್ಮದವರು ಎನ್ನುವ ಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಇದೆ. ಕೆಲವರು ಶಾರುಖ್  ಪರವಾಗಿ ನಿಂತಿದ್ದು, ಅಕ್ಷಯ್ ಕುಮಾರ್ ನಟನೆಯ ಸಿನಿಮಾವೊಂದನ್ನು ಈ ಪ್ರಕರಣದಲ್ಲಿ ಎಳೆತಂದಿದ್ದಾರೆ.

    ಅಕ್ಷಯ್ ಕುಮಾರ್ ಮತ್ತು ಕತ್ರೀನಾ ಕಾಂಬಿನೇಷನ್ ನ ‘ದೆ ದನಾ ದನ್’ ಸಿನಿಮಾದಲ್ಲೂ ಕತ್ರೀನಾ ಕೇಸರಿ ಬಣ್ಣದ ತುಂಡುಡುಗೆ ತೊಟ್ಟು ಸೆಕ್ಸಿಯಾಗಿ ಡಾನ್ಸ್ ಮಾಡಿದ್ದಾರೆ. ಆಗ ಮೌನವಹಿಸಿದವರು ಈಗೇಕೆ ಕೂಗಾಡುತ್ತಿದ್ದಾರೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಏನೇ ಮಾಡಿದರೂ ಅದು ಸರೀನಾ? ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ದೇ ದನಾ ದನ್ ಸಿನಿಮಾದ ಫೋಟೋವನ್ನೂ ಸಾಕ್ಷಿಯಾಗಿ ನೀಡಿದ್ದಾರೆ. ಹಾಗಾಗಿ ಕೇಸರಿ ಬಿಕಿನಿಗೆ ಸಂಬಂಧಿಸಿದಂತೆ ಅಕ್ಷಯ್ ಕುಮಾರ್ ನನ್ನು ಎಳೆತರಲಾಗಿದೆ. ಇದನ್ನೂ ಓದಿ: ಆಲ್ವಿನ್ ಹೆನ್ರಿ ನಿರ್ದೇಶನದ ‘ಕ್ರಿಸ್ಟಿ’ ಚಿತ್ರದ ಫಸ್ಟ್ ಲುಕ್ ರಿಲೀಸ್

    ಪಠಾಣ್ ಸಿನಿಮಾದ ಬೇಷರಂ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿದೆ. ಇದು ಬೇಕು ಅಂತಾನೇ ಮಾಡಿದ ಹುನ್ನಾರ ಎಂದು ಹಿಂದೂಪರ ಸಂಘಟನೆಗಳು ಆರೋಪಿಸುತ್ತಿವೆ. ಕೆಲ ಪ್ರಗತಿಪರ ಹೋರಾಟಗಾರರ ಜೊತೆ ದೀಪಿಕಾ ಪಡುಕೋಣೆ ಗುರುತಿಸಿಕೊಂಡಿದ್ದಾರೆ ಎಂದು ಜೆಎನ್‌ಯು ಹೋರಾಟದಲ್ಲಿ ದೀಪಿಕಾ ಭಾಗಿಯಾಗಿದ್ದ ಫೋಟೋವನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಶಾಂತ್ ಸಂಬರಗಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಬಂದಿರುವ ಪ್ರಶಾಂತ್ ಸಂಬರಗಿ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಕಿರುವ ಕೇಸರಿ ಬಿಕಿನಿ ಬಗ್ಗೆ ತಕರಾರು ಎತ್ತಿದ್ದಾರೆ. ಬಾಲಿವುಡ್ ಚಿತ್ರೋದ್ಯಮ ಹಿಂದೂಗಳ ಭಾವನೆಗೆ ಹೀಗೆ ನೋವು ಮಾಡುತ್ತಿರುವುದು ಹೊಸದೇನೂ ಅಲ್ಲ. ಬಾಲಿವುಡ್ ನಟರ ಮದುವೆಗಳನ್ನು ನೋಡಿದರೆ ಲವ್ ಜಿಹಾದ್ ಬಗ್ಗೆ ಅನುಮಾನ ಮೂಡುತ್ತದೆ ಎಂದು ಅವರು ಮಾತನಾಡಿದ್ದಾರೆ. ದೀಪಿಕಾ ಅವರಿಗೆ ಬೇಕು ಅಂತಾನೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಸರಿ ಬಿಕಿನಿಗೆ ನೆಟ್ಟಿಗರು ಗರಂ: ಬೈಕಾಟ್ ಪಠಾಣ್ ಟ್ರೆಂಡ್

    ಕೇಸರಿ ಬಿಕಿನಿಗೆ ನೆಟ್ಟಿಗರು ಗರಂ: ಬೈಕಾಟ್ ಪಠಾಣ್ ಟ್ರೆಂಡ್

    ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಹಾಡು ಎರಡು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿದೆ. ಈ ಹಾಡನ್ನು ಹದಿನೈದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಆದರೆ, ಈ ಹಾಡಿನಲ್ಲಿ ದೀಪಿಕಾ ಹಾಕಿರುವ ಡ್ರೆಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಕೇಸರಿಯ ಬಿಕಿನಿಯಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಈ ಹಾಡಿನ ಸಾಲಿಗೆ ಹಾಕಿರುವ ಡ್ರೆಸ್ ಗೂ ಹೊಂದಾಣಿಕೆ ಮಾಡಿಕೊಂಡು ನೆಟ್ಟಿಗರು ಗರಂ ಆಗಿದ್ದಾರೆ. ಈ ಕಾರಣದಿಂದಾಗಿ ಚಿತ್ರಕ್ಕೆ ಬಹಿಷ್ಕಾರ ಹಾಕುವಂತೆ ಸೋಷಿಯಲ್ ಮೀಡಿಯಾದಲ್ಲಿ ಕರೆ ನೀಡುತ್ತಿದ್ದಾರೆ.

    ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ತುಂಡುಡುಗೆ ತೊಟ್ಟಿದ್ದಾರೆ. ‘ಬೇಷರಂ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದಾರೆ. ಬೇಕು ಅಂತಾನೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಹೀಗಾಗಿ ಬೈಕಾಟ್ ಪಠಾಣ್ ಟ್ರೆಂಡ್ ಹೆಚ್ಚಿದೆ.

    ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಮೂಲಕ ಸಾಕಷ್ಟು ಭರವಸೆ ಮೂಡಿಸಿರುವ ಈ ಸಿನಿಮಾ, ಮೊದಲ ಹಾಡಿನ ಮೂಲಕ ಪ್ರಚಾರ ಆರಂಭಿಸಲಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಂಬಿಷೇನ್ ನ ಸಿನಿಮಾ ಇದಾಗಿದ್ದು, ಶುರುವಿನಿಂದ ಈವರೆಗೂ ಕುತೂಹಲವನ್ನು ಕಾಪಾಡಿಕೊಂಡೇ ಬರುತ್ತಿದೆ. ಶಾರುಖ್ ಈ ಸಿನಿಮಾದಲ್ಲಿ ಮತ್ತೆ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿದ್ದಾರೆ. ಇದನ್ನೂ ಓದಿ: `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ

    ಹಾಡು ರಿಲೀಸ್ ಆಗುತ್ತಿರುವ ವಿಷಯವನ್ನು ಸ್ವತಃ ಶಾರುಖ್ ಖಾನ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಈ ಹಾಡನ್ನು ನೋಡಲು ತಾವೂ ಕೂಡ ಕಾತರದಿಂದ ಕಾಯುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದರು. ಅಲ್ಲದೇ ಅಭಿಮಾನಿಗಳು ಕೂಡ  ಅಷ್ಟೇ ಕುತೂಹಲದಿಂದಲೇ ಹಾಡಿಗಾಗಿ ಕಾದಿದ್ದರು. ಬಿಡುಗಡೆಯಾದ ಹಾಡಿಗೆ ಅಭಿಮಾನಿಗಳು ಕೂಡ ಜೈಕಾರ ಹಾಕಿದ್ದಾರೆ.

    ಇದು ಶಾರುಖ್ ಖಾನ್ ವೃತ್ತಿ ಜೀವನದ ಮಹತ್ವದ ಸಿನಿಮಾ ಎನ್ನಲಾಗುತ್ತಿದ್ದು, ಸತತ ಸೋಲಿನ ಬಳಿಕೆ ಬಾಲಿವುಡ್ ಗೆ ಈ ಸಿನಿಮಾ ಶಕ್ತಿ ತುಂಬಲಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಕಾಂಬಿನೇಷನ್ ಇರುವುದರಿಂದ ಬಾಕ್ಸ್ ಆಫೀಸಿನಲ್ಲೂ ಈ ಸಿನಿಮಾ ಹಿಟ್ ಆಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಇಂದು ಬಿಡುಗಡೆ ಆಗಿರುವ ಹಾಡು ಅಂಥದ್ದೊಂದು ಭರವಸೆಯನ್ನೂ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‌ನಿಂದ `ಸಿಎಂ ಅಂಕಲ್’ ಅಭಿಯಾನ – ಭುಗಿಲೆದ್ದ ಕೇಸರಿ ವಿವಾದ, ಸರ್ಕಾರಕ್ಕೆ ಹಲವು ಪ್ರಶ್ನೆ

    ಕಾಂಗ್ರೆಸ್‌ನಿಂದ `ಸಿಎಂ ಅಂಕಲ್’ ಅಭಿಯಾನ – ಭುಗಿಲೆದ್ದ ಕೇಸರಿ ವಿವಾದ, ಸರ್ಕಾರಕ್ಕೆ ಹಲವು ಪ್ರಶ್ನೆ

    ಬೆಂಗಳೂರು: ವಿವೇಕ ಶಾಲೆಗಳಿಗೆ ಕೇಸರಿ (Saffron) ಬಣ್ಣ ಹೊಡೆಸುವ ವಿಚಾರ ವಿವಾದಕ್ಕೆ ತಿರುಗುತ್ತಿದ್ದಂತೆ ಕಾಂಗ್ರೆಸ್ (Congress) `ಸಿಎಂ ಅಂಕಲ್’ (CM Uncle) ಅಭಿಯಾನ ಆರಂಭಿಸಿದ್ದು, ಬೊಮ್ಮಾಯಿ (Basavaraj Bommai) ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನಿಟ್ಟಿದೆ.

    ತನ್ನ ಆಧಿಕೃತ ಟ್ವಿಟ್ಟರ್ (Twitter) ಖಾತೆಯಲ್ಲಿ ಸಿಎಂ ಅಂಕಲ್ ಹ್ಯಾಶ್‌ಟ್ಯಾಗ್‌ನೊಂದಿಗೆ ಅಭಿಯಾನ ಆರಂಭಿಸಿರುವ ಕರ್ನಾಟಕ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಎತ್ತಿದೆ. ಇದನ್ನೂ ಓದಿ: ದಲಿತರು, ಆದಿವಾಸಿ ಹಕ್ಕುಗಳ ಮೇಲೆ BJP, RSS ಆಕ್ರಮಣ – ರಾಹುಲ್ ಕಿಡಿ

    ಟ್ವೀಟ್‌ನಲ್ಲಿ ಏನಿದೆ?
    ಸಿಎಂ ಅಂಕಲ್ ಶಾಲೆಗೆ ಯಾವ ಬಣ್ಣನಾದ್ರೂ ಹೊಡಿರಿ, ನಮ್ಮ ಉಡುಪಿಯಲ್ಲಿ ಶಾಲೆಗೆ ಬರಲು ರಸ್ತೆಯೇ ಸರಿ ಇಲ್ಲ, ನಾವು ಶಾಲೆಗೆ ಬಂದರೆ ತಾನೆ ನಿಮ್ಮ ಬಣ್ಣ ನೋಡಲು ಸಾಧ್ಯವಾಗುವುದು? ನಾವೇ ನಮ್ ಕೈಲಾದಷ್ಟು ಸರಿಪಡಿಸಿದ್ದೇವೆ, ನೀವ್ ಯಾವಾಗ ನಿಮ್ಮ ಜವಾಬ್ದಾರಿ ನಿರ್ವಹಿಸುವುದು ಸಿಎಂ ಅಂಕಲ್? ಇದನ್ನೂ ಓದಿ: ದೊಡ್ಮನೆಯಲ್ಲಿ ರಂಪಾಟ: ಕೈ ಕೈ ಮಿಲಾಯಿಸಿದ ಸಂಬರ್ಗಿ-ಗೊಬ್ಬರಗಾಲ

    ಶಾಲೆಗಳಿಗೆ ಬಣ್ಣ ಬಳಿಯುವ ರಾಜಕೀಯಕ್ಕೆ (Politics) ಮುಂದಾದ ಬಿಜೆಪಿ (BJP) ನಾಯಕರು ಉತ್ತರಿಸಲಿ. ಏಕೆ ತಮ್ಮ ಕಾರುಗಳಿಗೆ ಕೇಸರಿ ಪೈಂಟ್ ಬಳಸಿಲ್ಲ? ಎಷ್ಟು ಬಿಜೆಪಿ ನಾಯಕರು ತಮ್ಮ ಮನೆಗೆ ಕೇಸರಿ ಬಣ್ಣ ಬಳಿದುಕೊಂಡಿದ್ದಾರೆ? ಮನೆ ಇರಲಿ ಕನಿಷ್ಠ ಕಂಪೌಂಡ್‌ಗೂ ಕೇಸರಿ ಬಣ್ಣ ಬಳಸಿಲ್ಲ ಏಕೆ? ಮೊದಲು ತಮ್ಮ ಮನೆಗೆ ಕೇಸರಿ ಬಳಿದುಕೊಳ್ಳಲಿ, ನಂತರ ಶಾಲೆಗಳತ್ತ ಬರಲಿ.

    ಸರ್ಕಾರಿ ಶಾಲೆಗಳಷ್ಟೇ (Government School) ಅಲ್ಲ, ಖಾಸಗಿ ಶಾಲೆಗಳಿಗೂ ಸಂಪೂರ್ಣ ಪಠ್ಯಪುಸ್ತಕ ಕೊಡಲಿಲ್ಲ ಏಕೆ? ನಾವು ಶಾಲೆಗಳಿಗೆ ಬಣ್ಣ ನೋಡಲು ಬರಬೇಕಾ, ಪಾಠ ಕಲಿಯಲು ಬರಬೇಕಾ ಅಂಕಲ್? ಅರ್ಧ ವರ್ಷ ಕಳೆದರೂ ಪುಸ್ತಕವನ್ನೇ ಕೊಟ್ಟಿಲ್ಲ ಅಂದ್ರೆ ನಾವು ಓದಿ ಎಕ್ಸಾಮ್ ಬರೆಯೋದು ಹೇಗೆ ಸಿಎಂ ಅಂಕಲ್?

    ಶಿಕ್ಷಣ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಕರ್ನಾಟಕ 14ನೇ ಸ್ಥಾನಕ್ಕೆ ಕುಸಿದಿದೆಯಂತೆ, ಹಾಗಂತ ಪೇಪರ್‌ನಲ್ಲಿ ಬಂದಿತ್ತು..ನಮಗೆ ಸೂಚ್ಯಂಕದ ಬಗ್ಗೆ ಗೊತ್ತಿಲ್ಲ, ಆದ್ರೆ ನಮಗೆ ಶಾಲೆಯಲ್ಲಿ ಯಾವ ಸೌಕರ್ಯವೂ ಸಿಗ್ತಿಲ್ಲ, ಶಾಲೆಗೆ ಬಂದರೆ ಯಾವುದೋ ಬಸ್ ಸ್ಟ್ಯಾಂಡ್‌ಗೆ ಬಂದಂತೆ ಆಗುತ್ತಿದೆ. ಯಾಕೆ ಈ ಅನ್ಯಾಯ ಮಾಡ್ತಿದೀರಿ ಸಿಎಂ ಅಂಕಲ್?

    ಕೋವಿಡ್ ಹೆಸರಲ್ಲಿ 2 ವರ್ಷ ನಮ್ಮ ವಿದ್ಯಾಭ್ಯಾಸ ಹಾಳು ಮಾಡಿದ್ರಿ, ಈಗ ಶೈಕ್ಷಣಿಕ ಸವಲತ್ತು, ಮೂಲಭೂತ ಸೌಕರ್ಯ ಕೊಡದೇ ನಮ್ಮ ವಿದ್ಯಾಭ್ಯಾಸ ಹಾಳು ಮಾಡ್ತಿದೀರಿ.. ನಿಮ್ ಮಕ್ಳು ಮಾತ್ರ ಓದಿ ದೊಡ್ಡ ದೊಡ್ಡ ಸಾಧನೆ ಮಾಡ್ಬೇಕು, ಉದ್ಯಮ ಕಟ್ಟಬೇಕು, ನಾವೂ ಆ ಸಾಧನೆ ಮಾಡೋದು ನಿಮಗೆ ಇಷ್ಟ ಇಲ್ವಾ ಸಿಎಂ ಅಂಕಲ್?

    ಹೆಣ್ಮಕ್ಕಳು ಶಾಲೆಗೆ ಬರೋದಾದ್ರೂ ಹೇಗೆ? ರಾಜ್ಯದ ಹಲವು ಶಾಲೆಗಳಲ್ಲಿ ಹೆಣ್ಮಕ್ಳಿಗೆ ಶೌಚಾಲಯ ಇಲ್ಲದೆ ತುಂಬಾ ಕಷ್ಟ ಆಗ್ತಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಅಂತ ಪಿಎಂ ಅಂಕಲ್ ಹೇಳ್ತಿದ್ರು, ಆದರೆ ಇಲ್ಲಿ `ಬಚಾವೋ’ ಆಗ್ತಿಲ್ಲ, `ಪಡಾವೋ’ನೂ ಆಗ್ತಿಲ್ಲ ಏಕೆ ಸಿಎಂ ಅಂಕಲ್? ಕೇಸರಿ ಬಣ್ಣದ್ದದರೂ ಸರಿ ನಮಗೊಂದು ಶೌಚಾಲಯ ಕಟ್ಟಿಸಿಕೊಡಿ.

    ಕರ್ನಾಟಕದಲ್ಲಿ ದೊಡ್ಡವರಲ್ಲಿ ಇದ್ದ ತಾರತಮ್ಯ ಶಾಲೆಗಳಲ್ಲಿ ಮಕ್ಕಳ ವಿಚಾರದಲ್ಲೂ ಹೆಚ್ಚಾಗಿದೆ ಅಂತ ಪಿಎಂ ಅಂಕಲ್ ಅವರೇ ಹೇಳ್ತಿದಾರಲ್ಲ ಏಕೆ? ಅಂಬೇಡ್ಕರ್ ಅವರ ಪಾಠದಲ್ಲಿ ಸಮಾನತೆ ಅನ್ನೋ ಪದವನ್ನ ತುಂಬಾ ಓದಿದ್ದೇವೆ, ನಾವೆಲ್ಲ ಒಂದೇ ಆದರೂ ಪರಿಶಿಷ್ಟ ಜಾತಿ ಮಕ್ಕಳು ಇತರ ಸಮುದಾಯದ ಮಕ್ಕಳೊಂದಿಗೆ ಸಮವಾಗಿರಲು ಸಾಧ್ಯವಾಗ್ತಿಲ್ಲ ಏಕೆ ಅಂಕಲ್?

    ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಅಸಮಾನತೆ ಹೆಚ್ಚಿದೆ ಏಕೆ? ಸಬ್ ಕ ಸಾತ್ ಸಬ್ ಕ ವಿಕಾಸ್ ಅಂತ ಹೇಳ್ತಿದ್ರು ಪಿಎಂಅಂಕಲ್, ಆದರೆ ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿವೇತನ ನೀಡದೆ ನಮ್ಮನ್ನು ಶೈಕ್ಷಣಿಕವಾಗಿ ಹಿಂದೆಯೇ ಉಳಿಸುತ್ತಿರುವುದೇಕೆ? ನಾವೂ ಎಲ್ಲರಂತೆ ಶಿಕ್ಷಿತರಾಗುವುದು ಬೇಡವೇ? ಸಿಎಂ ಅಂಕಲ್ ಎಂದು ಸರಣಿ ಪ್ರಶ್ನೆಗಳನ್ನ ಸರ್ಕಾರದ ಮುಂದಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಮರ ವೋಟು ಪಡೆಯೋಕೆ ಕಾಂಗ್ರೆಸ್‌ ಕೇಸರಿ ವಿರೋಧ ಮಾಡ್ತಿದೆ – ಬಿ.ಸಿ.ನಾಗೇಶ್‌ ಕಿಡಿ

    ಮುಸ್ಲಿಮರ ವೋಟು ಪಡೆಯೋಕೆ ಕಾಂಗ್ರೆಸ್‌ ಕೇಸರಿ ವಿರೋಧ ಮಾಡ್ತಿದೆ – ಬಿ.ಸಿ.ನಾಗೇಶ್‌ ಕಿಡಿ

    ಬೆಂಗಳೂರು: ಮುಸ್ಲಿಮರ ವೋಟು ಪಡೆಯೋಕೆ ಕಾಂಗ್ರೆಸ್‌ (Congress) ಕೇಸರಿ (Saffron) ವಿರೋಧ ಮಾಡುತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (B.C.Nagesh) ಹರಿಹಾಯ್ದಿದ್ದಾರೆ.

    ಸೂರ್ಯ ಕೂಡಾ ಕೇಸರಿ ಬಣ್ಣ ಇದ್ದಾನೆ. ಹಾಗಾಂತ ಕೇಸರಿ ಬಣ್ಣ ವಿರೋಧ ಮಾಡ್ತಾರಾ? ಸಿದ್ದರಾಮಯ್ಯ ಕಾಲದಲ್ಲಿ ‌ಮಾಡದ‌ ಸಾಧನೆಯನ್ನು ನಾವು ಮಾಡಿದ್ದೇವೆ. ಜನರ ಮುಂದೆ ಮುಖ ತೋರಿಸಲು ಆಗದೇ ವಿರೋಧ ಮಾಡ್ತಿದ್ದಾರೆ. ನಾವು ಯಾವ ಬಣ್ಣ ಹೊಡೆಯಬೇಕು ಅಂತ ತೀರ್ಮಾನ ಮಾಡಿಲ್ಲ. ಆರ್ಟಿಕಲ್ಚರ್‌ನವರು ಯಾವ ಬಣ್ಣ ಹೇಳ್ತಾರೋ ಅದನ್ನ ಹೊಡೆಯುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಾಮಿಯ ವಿವಾದ- ನಾಳೆ ಹೈಕೋರ್ಟ್‍ನಲ್ಲಿ PIL ಸಲ್ಲಿಕೆ

    ಕಾಂಗ್ರೆಸ್ ವಿರೋಧ ಮಾಡುತ್ತೆ ಅಂತ ನಾವು ಕೇಸರಿ ಬಣ್ಣ ಹೊಡೆಯದೆ ಇರುವುದಿಲ್ಲ. ಕಾಂಗ್ರೆಸ್ ಧ್ಯಾನ ವಿರೋಧ ಮಾಡುತ್ತೆ ಅಂತ ಧ್ಯಾನ ನಿಲ್ಲಿಸೋಕೆ ಆಗಲ್ಲ. ಕಾಂಗ್ರೆಸ್ ರಾಜಕೀಯ ಮಾಡಿ ವಿರೋಧ ಮಾಡ್ತಿದೆ. ಇದಕ್ಕೆ ನಾವು ಹೆದರಲ್ಲ ಎಂದು ಹೇಳಿದ್ದಾರೆ.

    ವಿವೇಕ ಯೋಜನೆಯ ಕೊಠಡಿಗಳಲ್ಲಿ ವಿವೇಕಾನಂದ ಭಾವಚಿತ್ರ ಮುದ್ರಿಸುತ್ತೇವೆ. ಪ್ರತಿ ಕೊಠಡಿಯ ಹೊರಗೆ ವಿವೇಕಾನಂದರ ಭಾವಚಿತ್ರ ಮುದ್ರಣ ಮಾಡ್ತೀವಿ. ಈ ನಿಟ್ಟಿನಲ್ಲಿ ಚರ್ಚೆ ಆಗುತ್ತೆ. ವಿವೇಕಾನಂದರು ಜ್ಞಾನದ ಸಂಕೇತ‌. ಅವರ ಜೀವನದ ಮಾರ್ಗವನ್ನು ಮಕ್ಕಳು ಕಲಿಬೇಕು. ಹೀಗಾಗಿ ಅವರ ಫೋಟೋ ಮುದ್ರಣ ಮಾಡುವುದರಲ್ಲಿ ತಪ್ಪೇನು ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ASI ಮನೆಯಲ್ಲಿ ದರೋಡೆ- ಮೂವರು ಆರೋಪಿಗಳ ಅರೆಸ್ಟ್

    ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮಾಡದ ಅಭಿವೃದ್ಧಿ ಕೆಲಸ‌ ನಾವು 3 ವರ್ಷಗಳಲ್ಲಿ ಮಾಡಿದ್ದೇವೆ. ನಾವು ಹೆಚ್ಚು ಕೊಠಡಿ ಕಟ್ಡಿದ್ದೇವೆ, ಶಿಕ್ಷಕರ ನೇಮಕಾತಿ ‌ಮಾಡಿದ್ದೇವೆ. ಕೊರೊನಾ ಸಮಯದಲ್ಲಿ ಉತ್ತಮ ಶಿಕ್ಷಣ ನೀಡಿದ್ದೇವೆ. ಕೇಸರಿ ಜ್ಞಾನ, ತ್ಯಾಗದ ಸಂಕೇತ. ಇದಕ್ಕೆ ಯಾಕೆ ವಿರೋಧ ಮಾಡ್ತಾರೆ? ಕಾಂಗ್ರೆಸ್ 1947 ರಿಂದಲೂ ದೇಶದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಿಲ್ಲ. ಚುನಾವಣೆಗೆ ಮಾತ್ರ ಅವರು ಯೋಚನೆ ಮಾಡಿದವರು. BPL ಕಾರ್ಡ್ ಮೇಲೆ ಇಂದಿರಾ ಗಾಂಧಿ ಫೋಟೋ ಹಾಕಿದವರು ಕಾಂಗ್ರೆಸ್‌ನವರು. ಕೇಸರಿ ಬಣ್ಣ ಯಾಕೆ ಹೊಡೆಯಬಾರದು ಅಂತ ಜನಕ್ಕೆ ಹೇಳಲಿ. ಕಾಂಗ್ರೆಸ್‌ಗೆ ಕೇಸರಿ ಬಣ್ಣ ಆಗಲ್ಲ ಅಂತ ಅಂದ್ರೆ ನಾವು ಅದನ್ನ ಕೇಳೋಕೆ ಸಿದ್ಧ ಇಲ್ಲ. ಮುಸ್ಲಿಮರ ಓಲೈಕೆಗಾಗಿ, ಅವರ ಮತ ಪಡೆಯೋಕೆ ಅಭಿವೃದ್ಧಿ ಕೆಲಸವನ್ನ ವಿರೋಧ ಮಾಡ್ತಿದೆ ಕಾಂಗ್ರೆಸ್ ಎಂದು ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಸರಿ ಕಂಡರೆ ಕಾಂಗ್ರೆಸ್‌ಗೆ ಅಲರ್ಜಿ ಯಾಕೆ?- ವಿವೇಕ ಯೋಜನೆ ಸಮರ್ಥನೆ ಮಾಡಿಕೊಂಡ ಸಿಎಂ ಬೊಮ್ಮಾಯಿ

    ಕೇಸರಿ ಕಂಡರೆ ಕಾಂಗ್ರೆಸ್‌ಗೆ ಅಲರ್ಜಿ ಯಾಕೆ?- ವಿವೇಕ ಯೋಜನೆ ಸಮರ್ಥನೆ ಮಾಡಿಕೊಂಡ ಸಿಎಂ ಬೊಮ್ಮಾಯಿ

    ಬೆಂಗಳೂರು: ಶಾಲಾ ಕೊಠಡಿಗಳಿಗೆ ಕೇಸರಿ (Saffron) ಬಣ್ಣ ಹೊಡೆಯುವ ಸರ್ಕಾರದ ನಿರ್ಧಾರವನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸಮರ್ಥನೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ಗೆ (Congress) ಕೇಸರಿ ಬಣ್ಣ ಕಂಡರೆ ಯಾಕೆ ಅಲರ್ಜಿ ಎಂದು ಕಿಡಿಕಾರಿದ್ದಾರೆ.

    ವಿವೇಕ ಯೋಜನೆಯಡಿ (Viveka Yojana) ನಿರ್ಮಾಣವಾಗುತ್ತಿರುವ ಶಾಲೆಗಳ ಕೊಠಡಿಗಳಿಗೆ ಕೇಸರಿ ಬಣ್ಣ ಹೊಡೆಯಲು ಸರ್ಕಾರ ಮುಂದಾಗಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಮುಸ್ಲಿಂ ಸಂಘಟನೆಗಳು ವಿರೋಧ ಮಾಡಿವೆ. ವಿರೋಧ ಮಾಡಿದ ಕಾಂಗ್ರೆಸ್ ಮತ್ತು ಮುಸ್ಲಿಂ ಸಂಘಟನೆ ವಿರುದ್ಧ ಮುಖ್ಯಮಂತ್ರಿಗಳು ಕಿಡಿಕಾರಿದರು.

    ಎಲ್ಲದರಲ್ಲೂ ರಾಜಕಾರಣ ಮಾಡುವುದು ಇಂದು ಬಹಳ ಕೆಳಹಂತಕ್ಕೆ ಹೋಗುತ್ತಿದೆ. ಕೇಸರಿ ಬಣ್ಣ ನಮ್ಮ ಭಾರತದ ಬಾವುಟದಲ್ಲೇ ಇದೆ. ಕೇಸರಿ ಕಂಡರೆ ಅವರಿಗೆ ಯಾಕೆ ಅಷ್ಟೊಂದು ಅಲರ್ಜಿ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಇನ್ಮುಂದೆ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ: ಪ್ರತಾಪ್ ಸಿಂಹ

    ಈ ಯೋಜನೆಯನ್ನು ಸ್ವಾಮಿ ವಿವೇಕಾನಂದ (Swami Vivekananda) ಅವರ ಹೆಸರಿನಲ್ಲಿ ಮಾಡುತ್ತಿದ್ದೇವೆ. ಸ್ವಾಮಿ ವಿವೇಕಾನಂದ ಒಬ್ಬ ಸನ್ಯಾಸಿ. ಅವರು ತೊಡುತ್ತಿದ್ದ ಎಲ್ಲಾ ವಸ್ತ್ರಗಳೂ ಕೇಸರಿ. ಹೀಗಾಗಿ ಅವರ ಹೆಸರಿನಲ್ಲಿ ಮಾಡುತ್ತಿರುವ ಯೋಜನೆಯಾದ್ದರಿಂದ ಶಾಲೆಗಳ ಕೊಠಡಿಗೆ ಕೇಸರಿ ಬಣ್ಣ ಹಚ್ಚಲಾಗುತ್ತಿದೆ. ಅದರಲ್ಲಿ ಬೇರೆ ಯಾವುದೇ ಅರ್ಥವಿಲ್ಲ. ವಿವೇಕ ಎಂದರೆ ಎಲ್ಲರಿಗೂ ಜ್ಞಾನ. ಇದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಬೊಮ್ಮಾಯಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಮುಂದಿನ ವಾರದಿಂದ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ: ಹೆಚ್‌.ಡಿ ದೇವೇಗೌಡ

    Live Tv
    [brid partner=56869869 player=32851 video=960834 autoplay=true]

  • ಡ್ರೈ ಫ್ರೂಟ್ಸ್ ಹಾಲಿನ ಶರಬತ್ತು ಮಾಡುವ ಟೇಸ್ಟಿ ವಿಧಾನ

    ಡ್ರೈ ಫ್ರೂಟ್ಸ್ ಹಾಲಿನ ಶರಬತ್ತು ಮಾಡುವ ಟೇಸ್ಟಿ ವಿಧಾನ

    ಹಾಲು ಮತ್ತು ಡ್ರೈ ಫ್ರೂಟ್ಸ್ ಮಕ್ಕಳಿಂದ ವೃದ್ಧರವರೆಗೂ ತುಂಬಾ ಅಗತ್ಯವಾದ ಪೌಷ್ಟಿಕ ಆಹಾರವಾಗಿದೆ. ಇವೆರೆಡನ್ನು ಸೇರಿಸಿ ನಿಮಗೆ ಇಂದು ಅದ್ಭುತ ಮತ್ತು ಆರೋಗ್ಯಕರವಾದ ರೆಸಿಪಿಯನ್ನು ಕೇಳಿಕೊಡುತ್ತಿದ್ದೇವೆ. ಇದನ್ನು ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಜೊತೆಗೆ ಎಲ್ಲರಿಗೂ ತುಂಬಾ ಅವಶ್ಯಕವಾದ ಪೋಷಕಾಂಶವನ್ನು ಈ ರೆಸಿಪಿ ಹೊಂದಿದೆ. ನಾವು ಇಂದು ಕೇಳಿಕೊಡುವ ‘ಡ್ರೈ ಫ್ರೂಟ್ಸ್ ಹಾಲಿನ ಶರಬತ್ತುನ್ನು ವಾರಕ್ಕೊಮ್ಮೆಯಾದರು ಮಾಡಿಕೊಂಡು ಕುಡಿದರೆ ದೇಹಕ್ಕೆ ತುಂಬಾ ಒಳ್ಳೆಯದು.

    ಡ್ರೈ ಫ್ರೂಟ್ ಪೇಸ್‍ಗಾಗಿ ಬೇಕಾಗಿರುವ ಪದಾರ್ಥಗಳು:
    * ಬಾದಾಮಿ – 2 ಟೇಬಲ್ಸ್ಪೂನ್
    * ಪಿಸ್ತಾ – 2 ಟೇಬಲ್ಸ್ಪೂನ್
    * ಗೋಡಂಬಿ – 2 ಟೇಬಲ್ಸ್ಪೂನ್
    * ಬಿಸಿನೀರು (ನೆನೆಸಲು)
    * ಹಾಲು – 2 ಟೇಬಲ್ಸ್ಪೂನ್

    ಶರಬತ್ತುಗೆ ಬೇಕಾಗಿರುವ ಪದಾರ್ಥಗಳು:
    * ಹಾಲು – ಒಂದುವರೆ ಲೀಟರ್
    * ಕೇಸರಿ – ಸ್ವಲ್ಪ
    * ಕಸ್ಟರ್ಡ್ ಪುಡಿ – 2 ಟೀಸ್ಪೂನ್
    * ಸಕ್ಕರೆ – ಅರ್ಧ ಕಪ್
    * ಪಿಸ್ತಾ(ಅಲಂಕರಿಸಲು)

    ಮಾಡುವ ವಿಧಾನ:
    * ಮೊದಲನೆಯದಾಗಿ, ಒಂದು ಬಟ್ಟಲಿನಲ್ಲಿ ಬಾದಾಮಿ, ಪಿಸ್ತಾ, ಗೋಡಂಬಿ ತೆಗೆದುಕೊಳ್ಳಿ. ಬಿಸಿನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿ.
    * ಬಾದಾಮಿಯ ಸಿಪ್ಪೆಯನ್ನು ತೆಗೆದು ಡ್ರೈ ಫ್ರೂಟ್ಸ್‍ಗಳನ್ನು ಮಿಕ್ಸರ್ ಜಾರ್‌ಗೆ  ಹಾಕಿ ಹಾಲು ಸೇರಿಸಿ ರುಬ್ಬಿಕೊಳ್ಳಿ. ಇದನ್ನು ಪಕ್ಕಕ್ಕೆ ಇರಿಸಿ.
    * ದೊಡ್ಡ ಕಡಾಯಿಯಲ್ಲಿ ಹಾಲು ಹಾಕಿ ಅದಕ್ಕೆ ಕೇಸರಿ ಹಾಕಿ ಹಾಲನ್ನು ಕುದಿಸಿ.
    * ಈಗ ತಯಾರಾದ ನಟ್ಸ್ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಾಲು ಸ್ವಲ್ಪ ಗಟ್ಟಿಯಾಗುವವರೆಗೂ ಕುದಿಸಿ.
    * ಸಣ್ಣ ಬಟ್ಟಲಿನಲ್ಲಿ ಕಸ್ಟರ್ಡ್ ಪುಡಿ ಮತ್ತು ಹಾಲು ತೆಗೆದುಕೊಳ್ಳಿ. ನಂತರ ಕಸ್ಟರ್ಡ್ ಪುಡಿಯನ್ನು ಹಾಲಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಕಸ್ಟರ್ಡ್ ಮಿಶ್ರಣವನ್ನು ಹಾಲಿನ ಮಿಶ್ರಣಕ್ಕೆ ಸುರಿದು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸಕ್ಕರೆಯನ್ನು ಸೇರಿಸಿ ಸರಿಯಾಗಿ ಸಂಯೋಜಿಸಿ. ಗ್ಯಾಸ್ ಆಫ್ ಮಾಡಿ.
    * ಹಾಲು ಸಂಪೂರ್ಣವಾಗಿ ತಣ್ಣಗಾದ ಮೇಲೆ ಅದನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ ಮತ್ತು 4 ಗಂಟೆಗಳ ಕಾಲ ರೆಫ್ರಿಜೆರೇಟ್‍ನಲ್ಲಿ ಹಿಡಿ.
    * 4 ಗಂಟೆಗಳ ನಂತರ ಹಾಲಿನ ಶರ್ಬತ್‍ನ್ನು ಚೆನ್ನಾಗಿ ಮಿಕ್ಸ್ ಮಾಡಿ.

    – ಅಂತಿಮವಾಗಿ, ಹಾಲಿನ ಶರಬತ್ತನ್ನು ಐಸ್ ಕ್ಯೂಬ್, ಪಿಸ್ತಾ ಮತ್ತು ಕೇಸರಿ ಹಾಕಿ ಸರ್ವ್ ಮಾಡಿ.

    Live Tv