Tag: ಕೇಸರಿ ಬಿಕಿನಿ

  • ಹುಲ್ಲು ಹಸಿರಾಗಿತ್ತು, ನೀರು ನೀಲಿಯಾಗಿತ್ತು ಅದಕ್ಕೆ ಕೇಸರಿ ಬಿಕಿನಿ ಹಾಕಿಸಿದೆ : ಸಿದ್ಧಾರ್ಥ್

    ಹುಲ್ಲು ಹಸಿರಾಗಿತ್ತು, ನೀರು ನೀಲಿಯಾಗಿತ್ತು ಅದಕ್ಕೆ ಕೇಸರಿ ಬಿಕಿನಿ ಹಾಕಿಸಿದೆ : ಸಿದ್ಧಾರ್ಥ್

    ಶಾರುಖ್ ಖಾನ್ (Shahrukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ನ ‘ಪಠಾಣ್’ (Pathan) ಸಿನಿಮಾದ ಕೇಸರಿ ಬಿಕಿನಿ (Kesari Bikini) ವಿವಾದದ ಬಗ್ಗೆ ಈಗ ನಿರ್ದೇಶಕ ಸಿದ್ದಾರ್ಥ್ ಆನಂದ್ (Siddharth Anand) ಮೌನ ಮುರಿದಿದ್ದಾರೆ. ಆ ಹಾಡಿನಲ್ಲಿ ದೀಪಿಕಾ ಪಡುಕೋಣೆಗೆ ಯಾಕೆ ಕೇಸರಿ ಬಿಕಿನಿ ಹಾಕಿಸಿದೆ ಎನ್ನುವ ಕುರಿತು ಅವರು ಮಾತನಾಡಿದ್ದಾರೆ. ಅದಕ್ಕೆ ಬಲವಾದ ಕಾರಣವನ್ನೂ ಕೊಟ್ಟಿದ್ದಾರೆ.

    ಈ ಹಾಡಿನ ಶೂಟಿಂಗ್ ನಡೆದದ್ದು ಸ್ಪೇನ್ ನಲ್ಲಿ. ಆಗ ಅಲ್ಲಿನ ವಾತಾವರಣಕ್ಕೆ ಹೊಂದುವಂತಹ ಬಣ್ಣ ಆಯ್ಕೆ ಮಾಡಿಕೊಳ್ಳಬೇಕಿತ್ತು. ಬಿಸಿಲಿತ್ತು. ಹುಲ್ಲು ಹಸಿರಾಗಿತ್ತು. ನೀರು ನೀಲಿಯಾಗಿತ್ತು. ಕೇಸರಿ ಬಣ್ಣ ಎದ್ದು ಕಾಣುತ್ತದೆ ಎನ್ನುವ ಕಾರಣಕ್ಕಾಗಿ ಕೇಸರಿ ಬಣ್ಣವನ್ನು ಆಯ್ಕೆ ಮಾಡಿಕೊಂಡರಂತೆ. ಅದರ ಹೊರತಾಗಿ ಬೇರೆ ಯಾವ ಆಲೋಚನೆಯೂ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

    ಕೇಸರಿ ಬಿಕಿನಿ ಆರಿಸುವ ಧಾರ್ಮಿಕ ಭಾವನೆ, ಬೇರೆಯವರಿಗೆ ನೋವಾಗತ್ತೆ ಏನೂ ಯೋಚಿಸಲಿಲ್ಲ. ಒಬ್ಬ ನಿರ್ದೇಶಕನಾಗಿ ಯಾವ ಬಣ್ಣ ಹೈಲೈಟ್ ಆಗತ್ತೆ ಅಂತ ಮಾತ್ರ ಯೋಚನೆ ಮಾಡಿದೆ. ಆದರೆ, ಕೇಸರಿ ಬಿಕಿನಿ ಈ ರೀತಿಯಲ್ಲಿ ವಿವಾದ ಎಬ್ಬಿಸುತ್ತೆ ಎನ್ನುವ ಸಣ್ಣ ಅಂದಾಜು ಕೂಡ ನನಗೆ ಇರಲಿಲ್ಲ. ಸಿನಿಮಾದಲ್ಲಿ ಯಾರ ಭಾವನೆಯನ್ನೂ ಕೆರಳಿಸುವ ಕಥೆಯೂ ಇಲ್ಲ. ಆದರೂ, ವಿವಾದ ಮಾಡಲಾಯಿತು.

    ಸಿನಿಮಾ ಚೆನ್ನಾಗಿದ್ದರೆ, ಯಾರ ಮನಸ್ಸಿಗೂ ನೋವು ಮಾಡದೇ ಇದ್ದರೆ ಸಿನಿಮಾವನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ ಎನ್ನುವುದಕ್ಕೆ ಪಠಾಣ್ ಸಿನಿಮಾ ಸಾಕ್ಷಿ. ಸಿನಿಮಾ ಬಗ್ಗೆ ನನಗೆ ನಂಬಿಕೆಯಿತ್ತು. ಬಾಯ್ಕಾಟ್ ನಡೆಯಲ್ಲ ಅನ್ನುವ ವಿಶ್ವಾಸವಿತ್ತು. ಕೊನೆಗೂ ಪ್ರೇಕ್ಷಕ ಗೆಲ್ಲಿಸಿದ ಎಂದು ಅವರು ಮಾತನಾಡಿದ್ದಾರೆ.

  • ಪ್ರವಾದಿ ಮೊಹಮ್ಮದ್ ಬಗ್ಗೆ ಸಿನಿಮಾ ಮಾಡಿದ್ರೆ ವಿಶ್ವದಾದ್ಯಂತ ರಕ್ತಪಾತ ಆಗುತ್ತೆ – ಗಿರೀಶ್ ಗೌತಮ್

    ಪ್ರವಾದಿ ಮೊಹಮ್ಮದ್ ಬಗ್ಗೆ ಸಿನಿಮಾ ಮಾಡಿದ್ರೆ ವಿಶ್ವದಾದ್ಯಂತ ರಕ್ತಪಾತ ಆಗುತ್ತೆ – ಗಿರೀಶ್ ಗೌತಮ್

    ಭೋಪಾಲ್: ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ನಂತರ, ರಾಜ್ಯದ ವಿಧಾನಸಭಾ ಸ್ಪೀಕರ್ ಗಿರೀಶ್ ಗೌತಮ್ (Girish Gautam) ಅವರು ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ನಟನೆಯ `ಪಠಾಣ್’ (Pathan) ಸಿನಿಮಾದ `ಬೇಷರಂ ರಂಗ್’ ಹಾಡಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಚಿತ್ರಮಂದಿರದಲ್ಲಿ ಪಠಾಣ್ ಸಿನಿಮಾ (Cinema) ನಿಷೇಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಶಾರುಖ್ (Shah Rukh Khan) ಈ ಚಿತ್ರವನ್ನು ತನ್ನ ಮಗಳೊಂದಿಗೆ ನೋಡಬೇಕು. ಮಗಳ ಜೊತೆಗಿನ ಫೋಟೋ ಅಪ್‌ಲೋಡ್ ಮಾಡಿ, ಈ ಸಿನಿಮಾವನ್ನು ತನ್ನ ಮಗಳ ಜೊತೆ ನೋಡುತ್ತಿದ್ದೇನೆ ಎಂದು ಜಗತ್ತಿಗೇ ಹೇಳಬೇಕು ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ‘ಪಠಾಣ್’ ಬಿಕಿನಿ ವಿವಾದ: ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಡಿಯೋ ವೈರಲ್

    ನಾನು ಮುಕ್ತವಾಗಿ ಹೇಳಬಯಸುತ್ತೇನೆ. ಪ್ರವಾದಿ ಮೊಹಮ್ಮದ್ (Prophet Muhammad) ಅವರ ಮೇಲೆ ಅಂತಹ ಒಂದು ಚಲನಚಿತ್ರವನ್ನು ಮಾಡಿ, ಅದನ್ನು ಅಭಿವ್ಯಕ್ತಿ ಸ್ವಾತಂತ್ರ‍್ಯದ ಹೆಸರಿನಲ್ಲಿ ಬಿಡುಗಡೆ ಮಾಡಿ ನೋಡೋಣ? ವಿಶ್ವದಾದ್ಯಂತ ರಕ್ತಪಾತವಾಗುತ್ತದೆ ಎಂದು ಹೇಳಿದ್ದಾರೆ.

    ವಿರೋಧ ಪಕ್ಷದ ನಾಯಕ ಡಾ.ಗೋವಿಂದ್ ಸಿಂಗ್ ಹಾಗೂ ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ ಸೇರಿದಂತೆ ಹಿರಿಯ ಕಾಂಗ್ರೆಸ್ (Congress) ನಾಯಕರು ಈ ಚಿತ್ರದ ಹಾಡನ್ನು ವಿರೋಧಿಸಿದ್ದಾರೆ. ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

    ಇದಕ್ಕೆ ದನಿಗೂಡಿಸಿರುವ ಸುರೇಶ್ ಪಚೌರಿ, ವಿರೋಧ ಇರುವುದು ಪಠಾಣ್ ಸಿನಿಮಾ ಬಗ್ಗೆ ಅಲ್ಲ, ಹಾಡಿನಲ್ಲಿ ಧರಿಸಿರೋ ಬಟ್ಟೆಯ ಬಗ್ಗೆ. ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ, ಮುಸ್ಲಿಂ ಅಥವಾ ಯಾವುದೇ ಧರ್ಮದ ಅನುಯಾಯಿಗಳಿರಲಿ, ಮಹಿಳೆ ಅಂತಹ ಬಟ್ಟೆಗಳನ್ನು ಧರಿಸುವುದು ಹಾಗೂ ಅಂತಹ ದೃಶ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ಯಾರೂ ಅನುಮತಿಸೋದಿಲ್ಲ ಎಂದು ಹೇಳಿದ್ದಾರೆ.

    `ಪಠಾಣ್’ ಸಿನಿಮಾದ `ಬೇಷರಂ ರಂಗ್’ ಹಾಡನ್ನು ಬಿಡುಗಡೆಗೊಳಿಸಿದ ಎರಡು ದಿನಗಳ ನಂತರ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಹೇಳಿಕೆ ನಂತರ ಕೇಸರಿ ವಿವಾದದ ಅಲೆ ಜೋರಾಗಿದೆ.

    Live Tv
    [brid partner=56869869 player=32851 video=960834 autoplay=true]