Tag: ಕೇಸರಿ ಬಣ್ಣ

  • ಪ್ರತಿಪಕ್ಷಗಳಿಗೆ ಕೇಸರಿ ಬಣ್ಣ ಎಂದರೆ ಏಕೆ ತಲೆ ಕೆಡುತ್ತೆ?: ಚಕ್ರವರ್ತಿ ಸೂಲಿಬೆಲೆ

    ಪ್ರತಿಪಕ್ಷಗಳಿಗೆ ಕೇಸರಿ ಬಣ್ಣ ಎಂದರೆ ಏಕೆ ತಲೆ ಕೆಡುತ್ತೆ?: ಚಕ್ರವರ್ತಿ ಸೂಲಿಬೆಲೆ

    ಧಾರವಾಡ: ಪ್ರತಿಪಕ್ಷಗಳಿಗೆ ಕೇಸರಿ ಬಣ್ಣ (Saffron Colour) ಎಂದರೆ ಏಕೆ ತಲೆ ಕೆಡುತ್ತದೆಯೋ ಗೊತ್ತಿಲ್ಲ, ನಮ್ಮ ಧ್ವಜದಲ್ಲಿ ಕೇಸರಿ ಬಣ್ಣ ಇದೆ. ಕೇಸರಿ ಬಣ್ಣ ಸೂಕ್ತವಾಗಿ ಬಳಸಿಕೊಂಡು ಪೇಂಟ್ ಮಾಡಿದ್ರೆ ಅದಕ್ಕೆ ಹಿಂದುತ್ವ ಛಾಯೆ ಕೊಡುವುದು ಕೆಟ್ಟದ್ದು ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಹೇಳಿದರು.

    ಧಾರವಾಡದಲ್ಲಿ ಈ ಕುರಿತು ಮಾತನಾಡಿದ ಅವರು, ಬಣ್ಣಗಳಲ್ಲಿ ಎಲ್ಲವೂ ಇರುವುದರಿಂದ ಅದನ್ನು ಸೂಕ್ತವಾಗಿ ಬಳಸಿಕೊಂಡರೆ ಯಾವುದೇ ಸಮಸ್ಯೆ ಇಲ್ಲ. ಕೇಸರಿ ಬಣ್ಣದ ಮೇಲೆ ಇರುವಂತೆ ಸ್ವಾಮಿ ವಿವೇಕಾನಂದರ ಮೇಲೆ ಕೂಡ ಇವರ ಆಕ್ರೋಶ ಇದೆ. ಇದು ದುರಂತಕಾರದ ಸಂಗತಿ. ವಿವೇಕಾನಂದರು ಅತ್ಯಂತ ಶ್ರೇಷ್ಠ ವ್ಯಕ್ತಿ. ಜಗತ್ತಿಗೆ ಭಾರತವನ್ನು ಮತ್ತೊಮ್ಮೆ ತೋರಿಸಿಕೊಟ್ಟಂತಹ ವ್ಯಕ್ತಿ ಎಂದರು.

    ಭಾರತ ಎಂದರೆ ಕೆಟ್ಟದ್ದು ಎಂದು ಆಲೋಚನೆ ಇತ್ತು. ಅಂತಹ ಸ್ಥಿತಿಯಲ್ಲಿ ಭಾರತವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಪ್ರಸ್ತುತಪಡಿಸಿ ಭಾರತವನ್ನು ಕಟ್ಟುವ ಕೆಲಸವನ್ನು ಅಂದು ವಿವೇಕಾನಂದರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಫೋಟೋ ಇಡುವುದು ಮುಂದಿನ ಪೀಳಿಗೆಯ ಭಾರತ ನಿರ್ಮಾಣಕ್ಕೆ ಸಹಾಯವಾಗಲಿದೆ. ಕೇವಲ ವಿವೇಕಾನಂದ ಅಷ್ಟೇ ಅಲ್ಲ, ದೊಡ್ಡ ಸಾಧನೆ ಮಾಡಿದಂತಹ ಶಿವಾಜಿ ಮಹಾರಾಜ್, ಕೃಷ್ಣದೇವರಾಯ, ಅರವಿಂದರು ಶಾಲಾ ಮಕ್ಕಳಿಗೆ ಪರಿಚಯ ಆಗಬೇಕು. ಸರ್ಕಾರ ಈ ಬಗ್ಗೆ ಹೆಜ್ಜೆ ಇಡುತ್ತಿರುವುದು ಹೆಮ್ಮೆ ಎಂದು ಅಭಿಪ್ರಾಯ ಪಟ್ಟರು.

    ಬಸ್ ನಿಲ್ದಾಣದ ಮೇಲೆ ಗುಂಬಜ್‌ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೈಸೂರಿನಲ್ಲಿ ಅಷ್ಟೇ ಅಲ್ಲದೇ, ಬೆಂಗಳೂರಿನಲ್ಲಿ ವಿದ್ಯುತ್ ಇಲಾಖೆಗೆ ಸೇರಿದ ಕಟ್ಟಡದಲ್ಲೂ ಇದೆ. ಶಿವಾನಂದ ಸರ್ಕಲ್‍ನಲ್ಲಿ ಇರುವ ಈ ಕಟ್ಟಡಕ್ಕೆ ನೋಡಿದಾಗ ಗಲ್ಫ್ ರಾಷ್ಟ್ರೀಯ ಸ್ವರೂಪ ತರುವ ಕೆಲಸ ಮಾಡಲಾಗುತ್ತಿದೆ ಎನಿಸುತ್ತಿದೆ ಎಂದ ಅವರು, ಬಸ್ ನಿಲ್ದಾಣವನ್ನು ಬಸ್ ನಿಲ್ದಾಣ ಆಗಿ ಇರಲು ಬಿಡಬೇಕು ಎಂದು ಒತ್ತಾಯಿಸಿದರು.

    ಕಟ್ಟುವ ಅನುಮತಿ ಕೊಡುವಾಗ ಯೋಚನೆ ಮಾಡಬೇಕಿತ್ತು. ಆದರೆ ಈಗ ಯೋಚನೆ ಮಾಡುವುದು ಕೂಡಾ ಸರಿ ಇದೆ, ಗುಂಬಜ್‌ ಕಳಶದ ಸ್ವರೂಪದಲ್ಲಿ ಇದೆ. ಘಟನೆ ಕುರಿತು ಸಂಸದ ಪ್ರತಾಪ ಸಿಂಹ ವಿರೋಧ ಮಾಡಿದ್ದಾರೆ. ಅದರಲ್ಲಿ ಡಬಲ್ ಸ್ಟ್ಯಾಂಡರ್ಡ್ ಪ್ರಶ್ನೆಯೇ ಇಲ್ಲ, ಎಂಪಿಯಾಗಿ ಆ ಗುಂಬಜ್‌ ಬಗ್ಗೆ ವಿರೋಧ ಮಾಡುವ ಹಕ್ಕು ಅವರಿಗೆ ಇದೆ. ಅದನ್ನು ಅವರು ಮಾಡಿದ್ದಾರೆ ಎಂದರು.

    ರೈಲ್ವೆ ನಿಲ್ದಾಣದಲ್ಲಿ ಘೋರಿ ಹಾಕಿಕೊಂಡು ದರ್ಗಾ ಮಾಡುವುದು, ಹಂಪಿಯಲ್ಲಂತೂ ಗಲ್ಲಿ ಗಲ್ಲಿಗೂ ದರ್ಗಾ ಮಾಡುವಂತ ಪರಿಸ್ಥಿತಿ ತಂದಿದ್ದಾರೆ. ಏನೂ ಇಲ್ಲದ ಕಡೆ ದರ್ಗಾ ಕಟ್ಟಬಹುದಾದರೆ, ನಾಳೆ ಬಸ್ ನಿಲ್ದಾಣವನ್ನೇ ದರ್ಗಾ ಎಂದು ಹೇಳಿ ಕುಳಿತುಕೊಳ್ಳಬಹುದು. ಆಗ ಅದನ್ನು ತೆರವು ಮಾಡೋಕೆ ಆಗದೇ ಇರುವ ಸ್ಥಿತಿ ನಿರ್ಮಾಣ ಆಗಬಹುದು ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್‍ಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ ಎಸ್.ಕೆ ಬಸವರಾಜನ್

    ಉಡುಪಿ ಕ್ರೈಸ್ತ ಶಾಲೆಯಲ್ಲಿ ಅಜಾನ್ ನೃತ್ಯ ಮಾಡಿದ ವಿಚಾರಕ್ಕೆ ಮಾತನಾಡಿದ ಅವರು, ಈ ರೀತಿ ಆಗಬಾರದು, ಸಮಾಜದಲ್ಲಿ ಜಾಗೃತಿ ಇರಬೇಕು. ಹಿಂದೂ ಸಮಾಜ ಜಾಗೃತ ಆಗಬೇಕು. ಎಚ್ಚರಿಕೆಯಿಂದ ಇರಬೇಕು, ಅಫ್ತಾಬ್ ಎನ್ನುವಂತ ವ್ಯಕ್ತಿ ಹಿಂದೂ ಹೆಣ್ಣು ಮಗಳನ್ನ 35 ಬಾರಿ ತುಂಡರಿಸಿ ಅದರನ್ನು ಫ್ರಿಡ್ಜನಲ್ಲಿಟ್ಟು ಬಿಸಾಕುವ ವಾತಾವರಣ ನಿರ್ಮಾಣ ಆಗಿದೆ. ನಾವು ಇನ್ನು ಹೆಚ್ಚು ಜಾಗೃತ ಆಗಬೇಕು, ಮುಂದಿನ ಪೀಳಿಗೆಗೆ ಇದಕ್ಕೆ ಬೇಕಾದ ಶಿಕ್ಷಣ ನೀಡಬೇಕಿದೆ ಎಂದು ಆಗ್ರಹಿಸಿದರು. ಇದನ್ನೂ ಓದಿ: ಅಫ್ತಾಬ್‌ಗೆ ಮಂಪರು ಪರೀಕ್ಷೆ ಸಾಧ್ಯತೆ – ಕೋರ್ಟ್ ಆದೇಶಕ್ಕೆ ಕಾಯುತ್ತಿರುವ ಪೊಲೀಸರು

    Live Tv
    [brid partner=56869869 player=32851 video=960834 autoplay=true]

  • ಕೇಸರಿ ರಾಜಕೀಯ ಬಣ್ಣವಾಗೋದು ಬೇಡ – ಸರ್ಕಾರಕ್ಕೆ ಶ್ರೀನಿವಾಸ್ ಪ್ರಸಾದ್ ಸಲಹೆ

    ಕೇಸರಿ ರಾಜಕೀಯ ಬಣ್ಣವಾಗೋದು ಬೇಡ – ಸರ್ಕಾರಕ್ಕೆ ಶ್ರೀನಿವಾಸ್ ಪ್ರಸಾದ್ ಸಲಹೆ

    ಚಾಮರಾಜನಗರ: ಕೇಸರಿ ಬಣ್ಣ (Saffron Colour) ಬಳಿಯುವ ವಿಚಾರದಲ್ಲಿ ಸರ್ಕಾರಕ್ಕೆ ಸಂಸದ ಶ್ರೀನಿವಾಸ್ ಪ್ರಸಾದ್ (V Shrinivas Prasad) ಸಲಹೆ ನೀಡಿದ್ದಾರೆ.

    ಶಾಲೆಗಳಿಗೆ (Schools) ಕೇಸರಿ ಬಣ್ಣ ಬಳಿಯುವ ಸರ್ಕಾರದ (Government Of Karnataka) ಚಿಂತನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಈಗಾಗಲೇ ಅಸಮಾಧಾನ ವ್ಯಕ್ತವಾಗಿದೆ. ಸರ್ಕಾರ ಆತುರದ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇರಲಿಲ್ಲ. ಕೇಸರಿ ಬಣ್ಣಕ್ಕೆ ಎಲ್ಲರೂ ಗೌರವ ಕೊಡುತ್ತಾರೆ. ಕೇಸರಿಬಣ್ಣ ತ್ಯಾಗದ ಪ್ರತೀಕವಾಗಿದೆ. ಈ ವಿಚಾರವನ್ನು ರಾಜಕೀಯವಾಗಿ (Politics) ಬಳಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಿರೋಧ

    ಆಲೋಚನೆ ಮಾಡಲಿ: 
    ಟಿಪ್ಪು ಪ್ರತಿಮೆ (Tippu Statue) ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಟಿಪ್ಪು ಪ್ರತಿಮೆ ಅವರ ಸ್ವಂತಕ್ಕೆ ಮಾಡಿಕೊಳ್ಳಲಿ ಅದರಲ್ಲಿ ತಪ್ಪಿಲ್ಲ, ತೊಂದರೆಯೂ ಇಲ್ಲ. ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬಾರದೆಂದು ಈಗಾಗಲೇ ತೀರ್ಮಾನವಾಗಿದೆ. ಮುಸ್ಲಿಂ ಸಮುದಾಯದವವರು (Muslim Community) ಟಿಪ್ಪು ಪ್ರತಿಮೆಯನ್ನಾಗಲಿ ಜಯಂತಿಯನ್ನಾಗಲಿ ಮಾಡಿಕೊಳ್ಳಲು ಯಾರ ಅಭ್ಯಂತರವೂ ಇಲ್ಲ. ಆದರೆ ಮುಸ್ಲಿಮರಲ್ಲಿ ಪ್ರತಿಮೆ ಸ್ಥಾಪಿಸುವ ಸಂಸ್ಕೃತಿ ಇಲ್ಲ, ವಿಗ್ರಹ ಆರಾಧಕರು ಅಲ್ಲ ಅವರು ಇನ್ನೊಮ್ಮೆ ಯೋಚನೆ ಮಾಡಲಿ ಎಂದು ತಿಳಿವಳಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]