Tag: ಕೇಸರಿ

  • ಅಖಂಡ ಭಾರತ ಕೇಸರಿಮಯ ಆಗಲಿದೆ – ವಿಶ್ವ ಹಿಂದೂ ಪರಿಷತ್‌ ಮುಖಂಡ ಗುಡುಗು

    ಅಖಂಡ ಭಾರತ ಕೇಸರಿಮಯ ಆಗಲಿದೆ – ವಿಶ್ವ ಹಿಂದೂ ಪರಿಷತ್‌ ಮುಖಂಡ ಗುಡುಗು

    – ಭಗವಾಧ್ವಜ ಅಳವಡಿಸಲು 20 ಲಕ್ಷದ ಬಾಂಡ್ ಬರೆಸಿಕೊಂಡರೆಂದು ದಿನೇಶ್ ಮೆಂಡನ್ ಅಸಮಾಧಾನ

    ಉಡುಪಿ: ಇಲ್ಲಿನ ಹಿಂದೂ ಸಮಾಜೋತ್ಸವಕ್ಕೆ ನಗರದಲ್ಲಿ ಕೇಸರಿ ಪತಾಕೆ ಮತ್ತು ಭಗವಾಧ್ವಜ (Bhagwa Flag) ಅಳವಡಿಸಲು ಪೊಲೀಸ್ ಇಲಾಖೆ (Udupi Police Department) 10 ಮತ್ತು 20 ಲಕ್ಷದ ಬಾಂಡ್ ಬರೆಸಿಕೊಂಡಿದ್ದಾರೆ ವಿಶ್ವ ಹಿಂದೂ ಪರಿಷತ್‌ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್ ಅಸಮಾಧಾನ ಹೊರಹಾಕಿದ್ದಾರೆ.

    ಉಡುಪಿ (Udupi) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2024ರಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಭಗವಾಧ್ವಜ ಹಾಕುತ್ತೇವೆ. ಆಗ ಎಷ್ಟು ಲಕ್ಷ ಬಾಂಡ್‌ ಬರೆಸಿಕೊಳ್ಳುತ್ತೀರಿ..? ಎಂದು ಪ್ರಶ್ನಿಸಿದರಲ್ಲದೇ, ನಾಉ ಒಂದು ಕೋಟಿ ರೂಪಾಯಿ ಬಾಂಡ್‌ ಕೊಡಲು ಸಿದ್ಧರಿದ್ದೇವೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಪ್ರತಿಭಟನಾ ನಿರತ ಕಾರ್ಯಕರ್ತರು ಪೊಲೀಸ್ ವಶಕ್ಕೆ – ಮುನಿರತ್ನ ಏಕಾಂಗಿಯಾಗಿ ಪ್ರತಿಭಟನೆ

    2024ಕ್ಕೆ ಶ್ರೀರಾಮಂದಿರ (Sri Rama Mandira) ಉದ್ಘಾಟನೆಗೊಳ್ಳಲಿದೆ. ಆಗ ನಗರ ಮಾತ್ರವಲ್ಲ, ಪ್ರತಿಯೊಬ್ಬರ ಮನೆಯಲ್ಲೂ ಭಗವಾಧ್ವಜ ಹಾರಾಡುತ್ತದೆ. ಆಗ ಪೊಲೀಸ್ ಇಲಾಖೆ ಹಿಂದೂಗಳ ಮನೆ-ಮನೆಗೆ ಭೇಟಿ ನೀಡಿ 10 ಲಕ್ಷ ಅಲ್ಲ, 10 ಕೋಟಿ ರೂ. ಬಾಂಡ್ ಬರೆಸಿಕೊಂಡರೂ ನಾವು ಸಹಿ ಹಾಕಲು ಸಿದ್ಧರಿದ್ದೇವೆ. ಮುಂದೊಂದು ದಿನ ಅಖಂಡ ಭಾರತ ಕೇಸರಿಮಯ ಆಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲಂಕಾ ವಿರುದ್ಧ ಮೋಸದಾಟವಾಡಿತಾ ಪಾಕ್‌? – ಮತ್ತೆ ಮತ್ತೆ ಟೀಕೆಗೆ ಗುರಿಯಾಗ್ತಿರೋದೇಕೆ?

    ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಪೊಲೀಸರ ಮೂಲಕ ಕಿರುಕುಳ ನೀಡುತ್ತಿದೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದೆ. ವಿಹೆಚ್‌ಪಿ ಮುಖಂಡ ಶರಣ್ ಪಂಪ್ ವೆಲ್‌ಗೂ ನಿರ್ಬಂಧ ಹಾಕಿದೆ. ಹಿಂದೂಗಳನ್ನು ಕೆಣಕಿದರೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಹೈಪರ್ ಟೆನ್ಷನ್, ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರೋ ಪತ್ನಿಯಿಂದ ಪತಿಗೆ ಕಿರುಕುಳ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಂದೇ ಭಾರತ್ ರೈಲಿಗೆ ಹೊಸ ಬಣ್ಣ – ಫೋಟೋ ಹಂಚಿಕೊಂಡ ಅಶ್ವಿನಿ ವೈಷ್ಣವ್

    ವಂದೇ ಭಾರತ್ ರೈಲಿಗೆ ಹೊಸ ಬಣ್ಣ – ಫೋಟೋ ಹಂಚಿಕೊಂಡ ಅಶ್ವಿನಿ ವೈಷ್ಣವ್

    ಚೆನ್ನೈ: ದೇಶೀಯ ನಿರ್ಮಿತ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನ (Vande Bharat Express Train) 28ನೇ ರೈಲು ಕೇಸರಿ ಬಣ್ಣದ್ದಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹೊಸ ಬಣ್ಣದೊಂದಿಗೆ ಕಂಗೊಳಿಸುತ್ತಿರೋ ರೈಲಿನ ಫೋಟೋವನ್ನು ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಒಟ್ಟು 25 ರೈಲುಗಳು ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 2 ರೇಕ್‌ಗಳನ್ನು ಸದ್ಯ ಕಾಯ್ದಿರಿಸಲಾಗಿದೆ. ಇದೀಗ 28ನೇ ರೈಲಿನ ಬಣ್ಣವನ್ನು ಪ್ರಾಯೊಗಿಕವಾಗಿ ಬದಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

    ಹೊಸ ಬಣ್ಣದ ವಂದೇ ಭಾರತ್ ರೈಲು ಪ್ರಸ್ತುತ ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿದೆ. ವಂದೇ ಭಾರತ್ ರೈಲುಗಳನ್ನು ತಯಾರಿಸುವ ಕೇಂದ್ರ ಇದಾಗಿದೆ. ಅಶ್ವಿನಿ ವೈಷ್ಣವ್ ಶನಿವಾರ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿ, ಸುರಕ್ಷತಾ ಕ್ರಮ, ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿನ ಸುಧಾರಣೆಗಳನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಹಂಪಿಯಲ್ಲಿ ಇಂದಿನಿಂದ ಜಿ-20 ಶೃಂಗಸಭೆ

    ಪರಿಶೀಲನೆ ಬಳಿಕ ಅಶ್ವಿನಿ ವೈಷ್ಣವ್, ವಂದೇ ಭಾರತ್ 28ನೇ ರೇಕ್‌ನ ಹೊಸ ಬಣ್ಣ ಭಾರತೀಯ ತ್ರಿವರ್ಣ ಧ್ವಜದಿಂದ ಪ್ರೇರಿತವಾಗಿದೆ ಮಾತ್ರವಲ್ಲದೇ ವಂದೇ ಭಾರತ್ ರೈಲುಗಳಲ್ಲಿ 25 ಸುಧಾರಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಇದು ಮೇಕ್ ಇನ್ ಇಂಡಿಯಾದ ಪರಿಕಲ್ಪನೆಯಾಗಿದೆ, ಎಂದರೆ ನಮ್ಮದೇ ಎಂಜಿನಿಯರ್‌ಗಳು ಇದನ್ನು ಭಾರತದಲ್ಲಿ ವಿನ್ಯಾಸಗೊಳಿಸಿದ್ದಾರೆ. ರೈಲುಗಳ ಕಾರ್ಯಾಚರಣೆಯ ಸಮಯದಲ್ಲಿ ಎಸಿ, ಶೌಚಾಲಯ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಘಟಕಗಳಿಂದ ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತಿದ್ದೇವೆ. ಆ ಎಲ್ಲಾ ಸುಧಾರಣೆಗಳನ್ನು ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಲು ಬಳಸಲಾಗುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದನ್ನೂ ಓದಿ: ಗುಡ್‌ನ್ಯೂಸ್‌ – 24 ಗಂಟೆಗಳಲ್ಲಿ KRSನಲ್ಲಿ 2.50 ಅಡಿ ನೀರು ಭರ್ತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಪಠಾಣ್’ ಕೇಸರಿ ವಿವಾದಕ್ಕೆ ಚೇತನ್ ಎಂಟ್ರಿ : ವಿರೋಧಿಸುವವರಿಗೆ ಪಾಠ ಮಾಡಿದ ನಟ

    ‘ಪಠಾಣ್’ ಕೇಸರಿ ವಿವಾದಕ್ಕೆ ಚೇತನ್ ಎಂಟ್ರಿ : ವಿರೋಧಿಸುವವರಿಗೆ ಪಾಠ ಮಾಡಿದ ನಟ

    ಶಾರುಖ್ ಖಾನ್ ನಟನೆಯ ‘ಪಠಾಣ್’ (Pathan) ಸಿನಿಮಾದ ಹಾಡೊಂದರಲ್ಲಿ ಕೇಸರಿ (Saffron) ಬಣ್ಣದ ಬಿಕಿನಿ (Bikini) ಧರಿಸಲಾಗಿದೆ ಎನ್ನುವ ಕಾರಣಕ್ಕಾಗಿ ಹಿಂದೂಪರ ಸಂಘಟನೆಗಳು ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಪಟ್ಟು ಹಿಡಿದಿದ್ದವು. ಅಲ್ಲದೇ ಈ ಹಾಡಿನಲ್ಲಿ ಕೇಸರಿ ಬಣ್ಣಕ್ಕೂ ಅಪಮಾನ ಮಾಡಲಾಗಿದೆ ಎಂದು ಆರೋಪ ಮಾಡಿದ್ದವು. ದೇಶದ ನಾನಾ ಭಾಗಗಳಲ್ಲಿ ಈ ಸಿನಿಮಾ ಕುರಿತು ವಿರೋಧ ವ್ಯಕ್ತವಾಗಿತ್ತು. ಹಿಂದೂಪರ ಸಂಘಟನೆಗಳು ಮಾತ್ರವಲ್ಲ, ರಾಜಕೀಯ ಮುಖಂಡರು ಮತ್ತು ಕಲಾವಿದರು ಕೂಡ ಈ ಕುರಿತು ತಮ್ಮ ಪ್ರತಿಕ್ರಿಯೆ ದಾಖಲಿಸಿದ್ದವು.

    ಇದೀಗ ಕನ್ನಡದ ನಟ, ಹೋರಾಟಗಾರ ಚೇತನ್ (Chetan) ಕೂಡ ಈ ವಿವಾದದ (Controversy) ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯಾವ ಬಣ್ಣವೂ ಯಾವುದರ ಸಂಕೇತ ಆಗಬಾರದು ಎಂದು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ‘ಕೇಸರಿ ಹಿಂದೂಗಳ ಸಂಕೇತವಲ್ಲ. ಹಿಂದೂಗಳ ಬಣ್ಣ ಆಗಬಾರದು. ಕೇಸರಿ ಬಣ್ಣ ತ್ಯಾಗದ ಸಂಕೇತ. ಅದು ಭಾರತದ ರಾಷ್ಟ್ರ ಧ್ವಜದಲ್ಲೂ ಇದೆ. ಹಸಿರು ಬಣ್ಣ ಕೂಡ ಅಷ್ಟೇ, ಅದು ಕೂಡ ಯಾರದೋ ಬಣ್ಣವಲ್ಲ. ಇದೊಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಷ್ಟೇ’ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ

    ಪಠಾಣ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದರು. ಆ ಹಾಡಿನ ಸಾಹಿತ್ಯದಲ್ಲೂ ಕೇಸರಿ ಬಣ್ಣಕ್ಕೆ ಅವಮಾನಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಕೂಡ ಹಾಡಿನಲ್ಲಿಯ ಕೆಲವು ಚಿತ್ರಿಕೆಗಳಿಗೆ ಕತ್ತರಿ ಹಾಕುವಂತೆ ಹೇಳಿತ್ತು. ಕೆಲವು ಕಡೆ ಈ ಸಿನಿಮಾವನ್ನು ರಿಲೀಸ್ ಮಾಡದಂತೆ ಥಿಯೇಟರ್ ಗೂ ಮುತ್ತಿಗೆ ಹಾಕಲಾಯಿತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಜೆಪಿ ಕೇಸರಿ ಬಟ್ಟೆಯನ್ನಿಟ್ಟುಕೊಂಡು ಅದರ ಪಾವಿತ್ರ್ಯತೆ ಹಾಳು ಮಾಡುತ್ತಿದೆ: ಹೆಚ್‌ಡಿಕೆ

    ಬಿಜೆಪಿ ಕೇಸರಿ ಬಟ್ಟೆಯನ್ನಿಟ್ಟುಕೊಂಡು ಅದರ ಪಾವಿತ್ರ್ಯತೆ ಹಾಳು ಮಾಡುತ್ತಿದೆ: ಹೆಚ್‌ಡಿಕೆ

    – ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ
    – ರವಿ ಬಂಧನದ ಹೆಸರಲ್ಲಿ ಬಿಜೆಪಿ ಜನರಿಗೆ ಟೋಪಿ ಹಾಕ್ತಿದೆ

    ಕಲಬುರಗಿ: ಬಿಜೆಪಿ (BJP) ಪಕ್ಷದವರು ಪವಿತ್ರವಾದ ಕೇಸರಿ (Saffron) ಬಟ್ಟೆಯನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ವಿಷಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಬುಧವಾರ ಜಿಲ್ಲೆಯ ಸೇಡಂ ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್‌ಡಿಕೆ, ಬಿಜೆಪಿಯವರು ಪವಿತ್ರ ಕೇಸರಿ ಬಟ್ಟೆ ಹಾಕಿ, ಅದರ ಪಾವಿತ್ರ‍್ಯತೆಯನ್ನು ಹಾಳು ಮಾಡುತ್ತಿದ್ದಾರೆ. ಇಂತಹವರು ದೇಶಕ್ಕೆ ಉಪದೇಶ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಇದೇ ವೇಳೆ ಸ್ಯಾಂಟ್ರೋ ರವಿ (Santro Ravi) ವಿಚಾರವಾಗಿ ಮಾತನಾಡಿದ ಅವರು, ಜಗದೀಶ್ ಎಂಬ ವ್ಯಕ್ತಿ ಕಳೆದ ವರ್ಷ ಜನವರಿ 22 ರಂದು ಸ್ಯಾಂಟ್ರೋ ರವಿ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ವೇಳೆ ಸ್ಯಾಂಟ್ರೋ ರವಿ ನಾನು ಬಿಜೆಪಿಯ ಸಕ್ರಿಯ ಕಾರ್ಯಕರ್ತ ಎಂದು ಬರೆದು ಕೊಟ್ಟಿದ್ದಾನೆ ಎಂದು ಹೇಳಿದರು. ಇದನ್ನೂ ಓದಿ: ನನ್ನ ರಕ್ತನೇ ಕಾಂಗ್ರೆಸ್, ನಾನು ‘ಕೈ’ ಪಕ್ಷ ಸೇರುತ್ತೇನೆ: ಹೆಚ್‌. ವಿಶ್ವನಾಥ್

    ಆತ 3-4 ವರ್ಷಗಳಿಂದಲೂ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ. ಬಿಜೆಪಿಯ ಹಲವು ಶಾಸಕರು, ಸಚಿವರ ಜೊತೆಗೆ ಆತನ ಒಡನಾಟ ಇದ್ದು, ಹೀಗಾಗಿ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದಾಗಿ ಆತ ಪೋಲಿಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ ಎಂದು ಕುಮಾರಸ್ವಾಮಿ ಹೇಳಿದರು.

    ಬಿಜೆಪಿಯವರು ಒಂದು ವರ್ಷದಿಂದ ಅವನನ್ನು ಬಿಟ್ಟು, ಈಗ ಅರೆಸ್ಟ್ ಮಾಡುತ್ತೇವೆ ಎಂದು ಹೇಳುವ ಮೂಲಕ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್ ರಸ್ತೆ ಸ್ವಚ್ಛಗೊಳಿಸಿದ ಡಿಕೆಶಿ, ಸಿದ್ದರಾಮಯ್ಯ!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉರ್ಫಿ ಜಾವೇದ್ ಹುಚ್ಚಾಟ: ಕೇಸರಿ ತುಂಡುಡುಗೆ ತೊಟ್ಟು ‘ಬೇಷರಂ ರಂಗ್’ ಗೀತೆಗೆ ಕ್ಯಾಟ್ ವಾಕ್

    ಉರ್ಫಿ ಜಾವೇದ್ ಹುಚ್ಚಾಟ: ಕೇಸರಿ ತುಂಡುಡುಗೆ ತೊಟ್ಟು ‘ಬೇಷರಂ ರಂಗ್’ ಗೀತೆಗೆ ಕ್ಯಾಟ್ ವಾಕ್

    ಠಾಣ್ ಸಿನಿಮಾದ ‘ಬೇಷರಂ ರಂಗ್’ (Besharam Rang)  ಗೀತೆಯ ವಿವಾದ (controversy) ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದರೂ, ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ (Urfi Javed) ಕೊಂಚವೂ ಭಯಗೊಂಡಂತೆ ಕಾಣುತ್ತಿಲ್ಲ. ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ (saffron) ಬಿಕಿನಿ (bikini) ತೊಟ್ಟು ಬಣ್ಣಕ್ಕೆ ಅವಮಾನಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಅಲ್ಲಲ್ಲಿ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಸೆನ್ಸಾರ್ ಮಂಡಳಿ ಕೂಡ ಅಶ್ಲೀಲ ಎನ್ನುವಂತಹ ಚಿತ್ರಿಕೆಗಳನ್ನು ಕಟ್ ಮಾಡಿಸಿದೆ. ಈ ನಡುವೆಯೂ ಉರ್ಫಿ ಜಾವೇದ್ ಹುಚ್ಚಾಟ ಮರೆದಿದ್ದಾರೆ.

    ಯಾವ ಬಣ್ಣ ಮತ್ತು ಹಾಡಿನಿಂದ ಪಠಾಣ್ ಸಿನಿಮಾ ವಿವಾದಕ್ಕೀಡಾಗಿತ್ತೋ, ಅದೇ ಬಣ್ಣದ ತುಂಡುಡುಗೆ ತೊಟ್ಟು, ಅದೇ ಹಾಡಿಗೆ ಕ್ಯಾಟ್ ವಾಕ್ ಮಾಡಿದ್ದಾರೆ ಉರ್ಫಿ. ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕೆಲವರು ಎಚ್ಚರಿಕೆಯ ಸಂದೇಶಗಳನ್ನೂ ಕಳುಹಿಸಿದ್ದಾರೆ. ಪ್ರಚಾರಕ್ಕಾಗಿ ಈ ರೀತಿ ಮಾಡಿದರೆ ಕಾನೂನು ರೀತಿಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?

    ಉರ್ಫಿ ಹಾಕುವ ಕಾಸ್ಟ್ಯೂಮ್ ವಿವಾದ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈಗಾಗಲೇ ಅವರ ವಿರುದ್ಧ ಅನೇಕ ದೂರುಗಳು ಸಲ್ಲಿಕೆಯಾಗಿವೆ. ಮೊನ್ನೆಯಷ್ಟೇ ದುಬೈನಲ್ಲಿ ಪೊಲೀಸರು ಉರ್ಫಿಯನ್ನು ವಶಕ್ಕೆ ಪಡೆದಿದ್ದರು. ಅಲ್ಲದೇ, ಬಿಜೆಪಿಯ ಮಹಿಳಾ ಸದಸ್ಯರೊಬ್ಬರು ಉರ್ಫಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಹತ್ತಿದ್ದಾರೆ. ಇಷ್ಟೊಂದು ಘಟನೆಗಳಾದರೂ, ಉರ್ಫಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ತಾವು ಏನು ಮಾಡಬೇಕೋ ಅದನ್ನು ಮಾಡುತ್ತಲೇ ಇದ್ದಾರೆ.

    ನಿನ್ನೆಯಷ್ಟೇ ಪಠಾಣ್ ಸಿನಿಮಾಗೆ ಸೆನ್ಸಾರ್ ಮಂಡಳಿಯು ಕೊನೆಗೂ ಪ್ರಮಾಣ ಪತ್ರವನ್ನು ಕೊಟ್ಟಿದ್ದು, ಕೆಲವು ಚಿತ್ರಿಕೆಗಳಿಗೆ ಕತ್ತರಿ ಪ್ರಯೋಗ ಮಾಡಿದೆ. ದೀಪಿಕಾ ಪಡುಕೋಣೆಯು ಕುಣಿದ ‘ಬೇಷರಂ ರಂಗ್’ ಹಾಡಿನ ಅಶ್ಲೀಲ ಭಂಗಿಗಳನ್ನು ತಗೆದು ಹಾಕುವಂತೆ ಸೂಚಿಸಿದೆ. ಈ ಹಾಡಿನಲ್ಲಿ ಅಶ್ಲೀಲವಾಗಿ, ಒಳ ಉಡುಪುಗಳು ಕಾಣುವಂತೆ ಮತ್ತು ಕೇಸರಿ ಬಣ್ಣಕ್ಕೆ ಅವಮಾನ ಮಾಡುವಂತಹ ಎಲ್ಲ ಸಂಗತಿಗಳನ್ನೂ ಕಟ್ ಮಾಡಿಸಿದೆ. ಇಷ್ಟೆಲ್ಲ ಮುಗಿದ ನಂತರವೇ ಈ ಚಿತ್ರಕ್ಕೆ ಯು/ ಎ ಸರ್ಟಿಫಿಕೇಟ್ ಪ್ರಮಾಣಪತ್ರವನ್ನು ನೀಡಿದೆ.

    ಅಲ್ಲದೇ, ಸಿನಿಮಾದ ಡೈಲಾಗ್ ಮೇಲೂ ಸೆನ್ಸಾರ್ ಮಂಡಳಿಯು ಅಧಿಕಾರ ಚಲಾಯಿಸಿದ್ದು, ಕೆಲವು ಪದಗಳನ್ನು ಮಾರ್ಪಾಡು ಮಾಡುವಂತೆ ಸೂಚಿಸಿದೆ. ಬಾಲಿವುಡ್ ಮಾಧ್ಯಮಗಳು ವರದಿ ಮಾಡಿದಂತೆ. ‘ಲಂಗ್ಡೆ ಲುಲ್ಲೆ’ ಪದದ ಬದಲು ‘ಟೂಟೆ ಪೂಟೆ’ ಎಂದು ಬದಲಾಯಿಸಲು, 13 ಕಡೆ ‘ಪಿಎಂಓ’ ಪದವನ್ನು ತಗೆದು ಹಾಕುವಂತೆ ಸೂಚಿಸಿದೆ. ‘ಮಿಸಸ್ ಭಾರತ್ ಮಾತಾ’ ಎನ್ನುವ ಮಾತಿನ ಬದಲಾಗಿ ‘ಹಮಾರಿ ಭಾರತ್ ಮಾತಾ’ ಎಂದು ಡಬ್ ಮಾಡುವಂತೆ ಸೂಚಿಸಿದೆ. ಹೀಗೆ ಸಾಕಷ್ಟು ಪದಗಳನ್ನು ಬದಲಿಸಿ, ಬೇರೆ ಪದವನ್ನು ಬಳಸುವಂತೆ ಸೆನ್ಸಾರ್ ಮಂಡಳಿಯು ಸೂಚಿಸಿತ್ತು ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಬಿಕಿನಿ ವಿವಾದ: ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಡಿಯೋ ವೈರಲ್

    ‘ಪಠಾಣ್’ ಬಿಕಿನಿ ವಿವಾದ: ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಡಿಯೋ ವೈರಲ್

    ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿ ಹಾಕಿದ್ದ ವಿವಾದವು ಇದೀಗ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಈ ಹಿಂದೆ ಕೇವಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಾಯ್ಕಾಟ್ ಮಾತುಗಳನ್ನು ಆಡಿದ್ದರು. ಇದೀಗ ನೇರವಾಗಿ ರಾಜಕೀಯ ವ್ಯಕ್ತಿಗಳೇ ಅಖಾಡಕ್ಕೆ ಇಳಿದು ಪರ ವಿರೋಧದ ಮಾತುಗಳನ್ನು ಆಡುತ್ತಿದ್ದಾರೆ. ಅದರಲ್ಲೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಈ ಹಿಂದಿನ ವಿಡಿಯೋವೊಂದನ್ನು ಪೋಸ್ಟ್ ಮಾಡುವ ಮೂಲಕ ವಿವಾದದಲ್ಲಿ ಸುಖಾಸುಮ್ಮನೆ ಸಚಿವೆಯನ್ನು ಎಳೆತಂದಿದ್ದಾರೆ.

    ಬಿಜೆಪಿಯ ಹಲವು ಮುಖಂಡರು ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದರು. ಶಾರುಖ್ ಖಾನ್ ಮತ್ತು ತಂಡವನ್ನು ತರಾಟೆಗೆ ತಗೆದುಕೊಂಡಿದ್ದರು. ತರಾಟೆಗೆ ತಗೆದುಕೊಂಡವರ ಪಕ್ಷದಲ್ಲೇ ಇರುವ ಸ್ಮೃತಿ ಇರಾನಿ 1998ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕೇಸರಿ ತುಂಡುಡುಗೆಯಲ್ಲೇ ಕಾಣಿಸಿಕೊಂಡಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ಅವರು ಆ ವಿಡಿಯೋವನ್ನು ಬಳಸಿಕೊಳ್ಳಲಾಗುತ್ತಿದೆ. ಆ ವಿಡಿಯೋ ವೈರಲ್ ಕೂಡ ಆಗಿದೆ.

    ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಹಾಡಿನ ಬಗ್ಗೆ ಈವರೆಗೂ ವಿವಾದ ಎದ್ದಿತ್ತು. ಈ ಬಾರಿ ಟೈಟಲ್ ಬಗ್ಗೆಯೂ ಅಪಸ್ವರ ಶುರುವಾಗಿದೆ. ಈ ಟೈಟಲ್ ಇಡುವ ಮೂಲಕ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಈ ಶೀರ್ಷಿಕೆಯನ್ನು ಬದಲಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಮುಸ್ಲಿಂ ಸಮುದಾಯದಲ್ಲಿ ಪಠಾಣರು ಎಂದರೆ ಗೌರವದಿಂದ ಇರುವವರು ಎಂದರ್ಥ. ಆದರೆ, ಈ ಸಿನಿಮಾದಲ್ಲಿ ಅದನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಯತ್ನ ಮಾಡಲಾಗಿದೆ. ಕೂಡಲೇ ಶೀರ್ಷಿಕೆಯನ್ನು ಬದಲಾಯಿಸಿ ಎಂದು ಹಲವು ಮುಸ್ಲಿಂ ಸಂಘಟನೆಗಳು ಒತ್ತಾಯಿಸಿವೆ. ಅಲ್ಲದೇ, ಈ ಟೈಟಲ್ ಇಟ್ಟುಕೊಂಡು ನಾಯಕಿಗೆ ಬಿಕಿನಿ ಹಾಕಿಸುವ ಮೂಲಕ ಗೌರವವನ್ನು ಕಳೆಯುವ ಪ್ರಯತ್ನ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಬಾಲಿವುಡ್ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದ ವಿಚಾರ, ಇದೀಗ ದೇಶಭಕ್ತಿಯನ್ನು ಪ್ರಶ್ನಿಸುವಲ್ಲಿಗೆ ಹೋಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿಯೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ನಟ ಶಾರುಖ್ ಖಾನ್ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ಈ ಕುರಿತು ಶಾರುಖ್ ಖಾನ್ ಮತ್ತೊಂದು ಟ್ವಿಟ್ ಮಾಡಿದ್ದು, ‘ಪಠಾಣ್ ಸಿನಿಮಾ ಕೂಡ ದೇಶಭಕ್ತಿಯನ್ನು ಸಾರುತ್ತದೆ’ ಎಂದು ಬರೆದುಕೊಂಡಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಪಠಾಣ್’ ಟೈಟಲ್ ಬದಲಾಯಿಸಿ: ಮುಸ್ಲಿಂ ಮುಖಂಡರ ಒತ್ತಾಯ

    ‘ಪಠಾಣ್’ ಟೈಟಲ್ ಬದಲಾಯಿಸಿ: ಮುಸ್ಲಿಂ ಮುಖಂಡರ ಒತ್ತಾಯ

    ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಹಾಡಿನ ಬಗ್ಗೆ ಈವರೆಗೂ ವಿವಾದ ಎದ್ದಿತ್ತು. ಈ ಬಾರಿ ಟೈಟಲ್ ಬಗ್ಗೆಯೂ ಅಪಸ್ವರ ಶುರುವಾಗಿದೆ. ಈ ಟೈಟಲ್ ಇಡುವ ಮೂಲಕ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಈ ಶೀರ್ಷಿಕೆಯನ್ನು ಬದಲಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಮುಸ್ಲಿಂ ಸಮುದಾಯದಲ್ಲಿ ಪಠಾಣರು ಎಂದರೆ ಗೌರವದಿಂದ ಇರುವವರು ಎಂದರ್ಥ. ಆದರೆ, ಈ ಸಿನಿಮಾದಲ್ಲಿ ಅದನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಯತ್ನ ಮಾಡಲಾಗಿದೆ. ಕೂಡಲೇ ಶೀರ್ಷಿಕೆಯನ್ನು ಬದಲಾಯಿಸಿ ಎಂದು ಹಲವು ಮುಸ್ಲಿಂ ಸಂಘಟನೆಗಳು ಒತ್ತಾಯಿಸಿವೆ. ಅಲ್ಲದೇ, ಈ ಟೈಟಲ್ ಇಟ್ಟುಕೊಂಡು ನಾಯಕಿಗೆ ಬಿಕಿನಿ ಹಾಕಿಸುವ ಮೂಲಕ ಗೌರವವನ್ನು ಕಳೆಯುವ ಪ್ರಯತ್ನ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಮಗು ಯಾವ ಧರ್ಮಕ್ಕೆ ಸೇರುತ್ತೆ ಎಂದು ಕೇಳಿದವರಿಗೆ ಖಡಕ್ ಉತ್ತರ ಕೊಟ್ಟ ನಟಿ ದೆವೊಲೀನಾ

    ಬಾಲಿವುಡ್ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದ ವಿಚಾರ, ಇದೀಗ ದೇಶಭಕ್ತಿಯನ್ನು ಪ್ರಶ್ನಿಸುವಲ್ಲಿಗೆ ಹೋಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿಯೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ನಟ ಶಾರುಖ್ ಖಾನ್ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ಈ ಕುರಿತು ಶಾರುಖ್ ಖಾನ್ ಮತ್ತೊಂದು ಟ್ವಿಟ್ ಮಾಡಿದ್ದು, ‘ಪಠಾಣ್ ಸಿನಿಮಾ ಕೂಡ ದೇಶಭಕ್ತಿಯನ್ನು ಸಾರುತ್ತದೆ’ ಎಂದು ಬರೆದುಕೊಂಡಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದಿದ್ದಾರೆ.

    ಪಠಾಣ್ ಸಿನಿಮಾ ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಈ ಬಿಕಿನಿ ತೊಟ್ಟ ಸಂದರ್ಭದಲ್ಲಿ ಬರುವ ಹಾಡೊಂದರ ಸಾಹಿತ್ಯ ‘ನಾಚಿಕೆ ಇಲ್ಲದ ಬಣ್ಣ’ ಎನ್ನುವುದಾಗಿದೆ. ಇದು ಹಿಂದೂಗಳನ್ನು ಹೀಯಾಳಿಸುವ ಉದ್ದೇಶದಿಂದಲೇ ಮಾಡಿದ ಕೃತ್ಯ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಧ್ವನಿ ಜೋರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದೀಪಿಕಾ ಹಾಕಿದ ಬಿಕಿನಿ ಪ್ರಚೋದನಕಾರಿ, ಅಶ್ಲೀಲಕಷ್ಟೇ ಸೀಮಿತ ಮಾಡಬೇಡಿ : ಶಕ್ತಿಮಾನ್ ಹೊಸ ಬಾಂಬ್

    ದೀಪಿಕಾ ಹಾಕಿದ ಬಿಕಿನಿ ಪ್ರಚೋದನಕಾರಿ, ಅಶ್ಲೀಲಕಷ್ಟೇ ಸೀಮಿತ ಮಾಡಬೇಡಿ : ಶಕ್ತಿಮಾನ್ ಹೊಸ ಬಾಂಬ್

    ಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಕಿರುವ ಬಿಕಿನಿ ಕೇವಲ ಅಶ್ಲೀಲವಷ್ಟೇ ಅಲ್ಲ, ಅದು ಪ್ರಚೋದನಕಾರಿ ಕೂಡ ಆಗಿದೆ ಎಂದು ಶಕ್ತಿಮಾನ್ ಪಾತ್ರಧಾರಿ ಮುಕೇಶ್ ಖನ್ನಾ ಪ್ರತಿಕ್ರಿಯೆ ನೀಡಿದ್ದಾರೆ. ಬೇಷರಂ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿದ್ದಾರೆ ಎನ್ನುವುದು ಪ್ರಶ್ನೆಯಲ್ಲ. ಅದು ಚರ್ಚೆಯ ವಿಷಯ ಕೂಡ ಆಗಬಾರದು. ಚರ್ಚೆ ಮಾಡಬೇಕಾಗಿದ್ದು ಪ್ರಚೋದನಕಾರಿ ಆಗುವಂತಹ ಬಟ್ಟೆಗಳನ್ನು ಹಾಕಿದ್ದಾರೆ ಎನ್ನುವುದು ಎಂದಿದ್ದಾರೆ ಖನ್ನಾ.

    ನಟಿಯೊಬ್ಬಳು ಪ್ರಚೋದನಕಾರಿ ಆಗುವಂತಹ ಬಟ್ಟೆ ಮತ್ತು ಭಂಗಿಯಲ್ಲಿ ಇದ್ದಾರೆ ಎನ್ನುವ ಅಂಶವನ್ನು ಸೆನ್ಸಾರ್ ಮಂಡಳಿಯು ಗಮನಿಸದೇ ಇರುವುದು ಅಚ್ಚರಿ ತಂದಿದೆ ಎಂದಿರುವ ಖನ್ನಾ. ವಿವೇಚನೆ ಇಲ್ಲದೇ ಈ ಹಾಡನ್ನು ಸೆನ್ಸಾರ್ ಮಾಡಲಾಯಿತಾ ಎಂದು ಪ್ರಶ್ನೆ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಲ್ಲಿ ಇರುವವರು ವಿವೇಚನೆ ಬಳಸಿಕೊಂಡು ಸೆನ್ಸಾರ್ ಮಾಡಬೇಕು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ

    ಬಾಲಿವುಡ್ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದ ವಿಚಾರ, ಇದೀಗ ದೇಶಭಕ್ತಿಯನ್ನು ಪ್ರಶ್ನಿಸುವಲ್ಲಿಗೆ ಹೋಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿಯೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ನಟ ಶಾರುಖ್ ಖಾನ್ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ಈ ಕುರಿತು ಶಾರುಖ್ ಖಾನ್ ಮತ್ತೊಂದು ಟ್ವಿಟ್ ಮಾಡಿದ್ದು, ‘ಪಠಾಣ್ ಸಿನಿಮಾ ಕೂಡ ದೇಶಭಕ್ತಿಯನ್ನು ಸಾರುತ್ತದೆ’ ಎಂದು ಬರೆದುಕೊಂಡಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದಿದ್ದಾರೆ.

    ಪಠಾಣ್ ಸಿನಿಮಾ ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಈ ಬಿಕಿನಿ ತೊಟ್ಟ ಸಂದರ್ಭದಲ್ಲಿ ಬರುವ ಹಾಡೊಂದರ ಸಾಹಿತ್ಯ ‘ನಾಚಿಕೆ ಇಲ್ಲದ ಬಣ್ಣ’ ಎನ್ನುವುದಾಗಿದೆ. ಇದು ಹಿಂದೂಗಳನ್ನು ಹೀಯಾಳಿಸುವ ಉದ್ದೇಶದಿಂದಲೇ ಮಾಡಿದ ಕೃತ್ಯ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಧ್ವನಿ ಜೋರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪಠಾಣ್ ದೇಶಭಕ್ತಿ ಸಿನಿಮಾ ಎಂದು ಟ್ವೀಟ್ ಮಾಡಿದ ನಟ ಶಾರುಖ್ ಖಾನ್

    ಪಠಾಣ್ ದೇಶಭಕ್ತಿ ಸಿನಿಮಾ ಎಂದು ಟ್ವೀಟ್ ಮಾಡಿದ ನಟ ಶಾರುಖ್ ಖಾನ್

    ಬಾಲಿವುಡ್ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದ ವಿಚಾರ, ಇದೀಗ ದೇಶಭಕ್ತಿಯನ್ನು ಪ್ರಶ್ನಿಸುವಲ್ಲಿಗೆ ಹೋಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿಯೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ನಟ ಶಾರುಖ್ ಖಾನ್ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ಈ ಕುರಿತು ಶಾರುಖ್ ಖಾನ್ ಮತ್ತೊಂದು ಟ್ವಿಟ್ ಮಾಡಿದ್ದು, ‘ಪಠಾಣ್ ಸಿನಿಮಾ ಕೂಡ ದೇಶಭಕ್ತಿಯನ್ನು ಸಾರುತ್ತದೆ’ ಎಂದು ಬರೆದುಕೊಂಡಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದಿದ್ದಾರೆ.

    ಪಠಾಣ್ ಸಿನಿಮಾ ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಈ ಬಿಕಿನಿ ತೊಟ್ಟ ಸಂದರ್ಭದಲ್ಲಿ ಬರುವ ಹಾಡೊಂದರ ಸಾಹಿತ್ಯ ‘ನಾಚಿಕೆ ಇಲ್ಲದ ಬಣ್ಣ’ ಎನ್ನುವುದಾಗಿದೆ. ಇದು ಹಿಂದೂಗಳನ್ನು ಹೀಯಾಳಿಸುವ ಉದ್ದೇಶದಿಂದಲೇ ಮಾಡಿದ ಕೃತ್ಯ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಧ್ವನಿ ಜೋರಾಗಿದೆ. ಇದನ್ನೂ ಓದಿ: ನಾನು ಪಠಾಣ್ ಸಿನಿಮಾ ನೋಡುತ್ತೇನೆ: ಬಹಿರಂಗವಾಗಿ ಘೋಷಿಸಿಕೊಂಡ ನಟ ಪ್ರಕಾಶ್ ಬೆಳವಾಡಿ

    ಈ ಕುರಿತು ನಟ ಪ್ರಕಾಶ್ ಬೆಳವಾಡಿ ಮಾಧ್ಯಮವೊಂದರ ಜೊತೆ ಮಾತನಾಡಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಸಿನಿಮಾ ರಂಗದಲ್ಲಿ ಬಿಗುವಿನ ವಾತಾವರಣವಿದೆ. ಸಿನಿಮಾವನ್ನು ಬಾಯ್ಕಾಟ್ ಮಾಡಬೇಕಾ ಅಥವಾ ಬೇಡವಾ ಎನ್ನುವುದರ ಕುರಿತು ಚರ್ಚೆಯಾಗುತ್ತಿದೆ. ಚರ್ಚೆ ಆಗುತ್ತಿರುವ ವಿಷಯ ಎಷ್ಟು ಸಭ್ಯ ಎಂದು ಯೋಚಿಸಬೇಕಿದೆ. ಮಾತಾಡೋಕೆ ತುಂಬಾ ವಿಷಯ ಇದೆ. ಆದರೆ, ಪರಿಸ್ಥಿತಿ ಕೆಟ್ಟದಾಗಿದೆ. ಚರ್ಚೆ, ವಿವಾದ ಏನೇ ಇರಲಿ, ನಾನು ಆ ಸಿನಿಮಾವನ್ನು ನೋಡುತ್ತೇನೆ’ ಎಂದು ಹೇಳಿದ್ದಾರೆ. ಅಂದಹಾಗೆ ಪ್ರಕಾಶ್ ಬೆಳವಾಡಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

    ವಿವಾದದ ಕುರಿತು ಮಾತನಾಡಿರುವ ಶಾರುಖ್ ಖಾನ್. ನಾವು ಸಿನಿಮಾವನ್ನು ಸಿನಿಮಾದಂತೆ ನೋಡಬೇಕು. ನಾನಂತೂ ಸಿನಿಮಾವಾಗಿಯೇ ಅಲ್ಲಿ ಕೆಲಸ ಮಾಡಿದ್ದೇನೆ. ಈ ವಿವಾದವನ್ನು ಯಾಕೆ ಎಬ್ಬಿಸುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತು. ನನ್ನ ಮನಸ್ಸಲ್ಲಂತೂ ಯಾವುದೇ ಕೆಟ್ಟ ಆಲೋಚನೆಗಳು ಇಲ್ಲ. ಈ ವಿವಾದದಿಂದ ಸಿನಿಮಾ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಹಾಗಾಗಿ ಜನರು ಚಿತ್ರವನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಪಠಾಣ್ ಸಿನಿಮಾ ನೋಡುತ್ತೇನೆ: ಬಹಿರಂಗವಾಗಿ ಘೋಷಿಸಿಕೊಂಡ ನಟ ಪ್ರಕಾಶ್ ಬೆಳವಾಡಿ

    ನಾನು ಪಠಾಣ್ ಸಿನಿಮಾ ನೋಡುತ್ತೇನೆ: ಬಹಿರಂಗವಾಗಿ ಘೋಷಿಸಿಕೊಂಡ ನಟ ಪ್ರಕಾಶ್ ಬೆಳವಾಡಿ

    ಠಾಣ್ ಸಿನಿಮಾ ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಈ ಬಿಕಿನಿ ತೊಟ್ಟ ಸಂದರ್ಭದಲ್ಲಿ ಬರುವ ಹಾಡೊಂದರ ಸಾಹಿತ್ಯ ‘ನಾಚಿಕೆ ಇಲ್ಲದ ಬಣ್ಣ’ ಎನ್ನುವುದಾಗಿದೆ. ಇದು ಹಿಂದೂಗಳನ್ನು ಹೀಯಾಳಿಸುವ ಉದ್ದೇಶದಿಂದಲೇ ಮಾಡಿದ ಕೃತ್ಯ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಧ್ವನಿ ಜೋರಾಗಿದೆ.

    ಈ ಕುರಿತು ನಟ ಪ್ರಕಾಶ್ ಬೆಳವಾಡಿ ಮಾಧ್ಯಮವೊಂದರ ಜೊತೆ ಮಾತನಾಡಿ, ‘ಸಿನಿಮಾ ರಂಗದಲ್ಲಿ ಬಿಗುವಿನ ವಾತಾವರಣವಿದೆ. ಸಿನಿಮಾವನ್ನು ಬಾಯ್ಕಾಟ್ ಮಾಡಬೇಕಾ ಅಥವಾ ಬೇಡವಾ ಎನ್ನುವುದರ ಕುರಿತು ಚರ್ಚೆಯಾಗುತ್ತಿದೆ. ಚರ್ಚೆ ಆಗುತ್ತಿರುವ ವಿಷಯ ಎಷ್ಟು ಸಭ್ಯ ಎಂದು ಯೋಚಿಸಬೇಕಿದೆ. ಮಾತಾಡೋಕೆ ತುಂಬಾ ವಿಷಯ ಇದೆ. ಆದರೆ, ಪರಿಸ್ಥಿತಿ ಕೆಟ್ಟದಾಗಿದೆ. ಚರ್ಚೆ, ವಿವಾದ ಏನೇ ಇರಲಿ, ನಾನು ಆ ಸಿನಿಮಾವನ್ನು ನೋಡುತ್ತೇನೆ’ ಎಂದು ಹೇಳಿದ್ದಾರೆ. ಅಂದಹಾಗೆ ಪ್ರಕಾಶ್ ಬೆಳವಾಡಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ‘ಕೋಟಿಗೊಬ್ಬ’ ಕ್ಯಾಲೆಂಡರ್ ರಿಲೀಸ್: 20 ಕಲಾವಿದರ ಕುಂಚದಲ್ಲಿ ಮೂಡಿಬಂದ ವಿಷ್ಣುವರ್ಧನ್