Tag: ಕೇಶ ವಿನ್ಯಾಸ

  • ಕ್ಯೂಟ್ ಆಗಿ ಕಾಣಿಸಲು ಬಳಸಿ ಈ ಹೇರ್ ಆ್ಯಕ್ಸಸರೀಸ್

    ಕ್ಯೂಟ್ ಆಗಿ ಕಾಣಿಸಲು ಬಳಸಿ ಈ ಹೇರ್ ಆ್ಯಕ್ಸಸರೀಸ್

    ಕೂದಲಿನ ವಿಷಯಕ್ಕೆ ಬಂದಾಗ ನೀವು ಕ್ಯೂಟ್ ಅಥವಾ ಆಕರ್ಷಕವಾಗಿ ಕಾಣಿಸಲು ಹೆಚ್ಚಿನ ಆ್ಯಕ್ಸಸರಿ ಆಯ್ಕೆಯನ್ನು ಹೊಂದಿರಬೇಕಾಗುತ್ತದೆ. ಪ್ರತಿ ಹುಡುಗಿಯರೂ ಹೊಂದಬೇಕಾದ ಕೆಲವು ಮುದ್ದಾದ ಕೂದಲಿನ ಆ್ಯಕ್ಸಸರೀಸ್ ಪಟ್ಟಿ ಇಲ್ಲಿವೆ.

    ಕೂದಲಿನ ಆ್ಯಕ್ಸಸರೀಸ್ ಯಾವಾಗಲಾದರೋ ಬಳಸಿದರೇನೇ ಚಂದ. ನಿಮ್ಮ ದಿನನಿತ್ಯದ ನೋಟಕ್ಕಿಂತಲೂ ಯಾವಾಗಲಾದರೂ ಒಮ್ಮೆ ಬಳಸಿದಾಗ ನಿಮ್ಮ ಸಂಪೂರ್ಣ ಲುಕ್ ಬದಲಾದಂತೆ ಹಾಗೂ ಮುದ್ದಾಗಿ ಕಾಣಿಸುವಂತೆ ಮಾಡುತ್ತದೆ. ನಿಮ್ಮ ಡೈಲಿ ಲುಕ್‌ಗಿಂತಲೂ ಭಿನ್ನವಾಗಿ ಕಾಣಿಸಲು ಕೂದಲಿನ ಪರಿಕರಗಳು ಉಪಯುಕ್ತ. ಕೂದಲಿನ ಆ್ಯಕ್ಸಸರೀಸ್ ಯಾವುದೇ ಸಮಯದಲ್ಲೂ ನಿಮ್ಮ ನೋಟವನ್ನು ಕಂಡಿತಾ ಹೆಚ್ಚಿಸುತ್ತದೆ. ನೀವು ಭಿನ್ನವಾಗಿ ಕಾಣಿಸಬೇಕೆಂದರೆ ಹೊಂದಿರಲೇ ಬೇಕಾದ ಕೆಲವು ಕ್ಯೂಟ್ ಕ್ಯೂಟ್ ಆ್ಯಕ್ಸಸರಿಗಳನ್ನು ನೋಡೋಣ.

    ಬಕೆಟ್ ಹ್ಯಾಟ್:
    ಮೀನುಗಾರರು ಬಳಸುವ ಟೋಪಿಯಂತೆ ಕಾಣಿಸುತ್ತಾದರೂ ಟ್ರೆಂಡಿಯಾಗಿರುವ, ಹಲವು ವಿನ್ಯಾಸಗಳಲ್ಲಿ ಬರುವ ಬಕೆಟ್ ಹ್ಯಾಟ್ ನಿಮ್ಮ ದೈನಂದಿನ ಲುಕ್‌ಗಿಂತಲೂ ವಿಭಿನ್ನವಾಗಿ ಕಾಣಿಸುವಂತೆ ಮಾಡುತ್ತದೆ. ಇವು 90ರ ದಶಕದ ಫ್ಯಾಶನ್ ಆಗಿದ್ದರೂ ಓಲ್ಡ್ ಈಸ್ ಗೋಲ್ಡ್ ಎಂಬಂತೆ ಆಕರ್ಷಕ ನೋಟವನ್ನು ಪಡೆಯಲು ಸಾಧ್ಯವಿದೆ. ಟೋಪಿ ಮೊದಲ ಬಾರಿ ಬಳಸುವಾಗ ಚೆನ್ನಾಗಿ ಕಾಣಿಸಲ್ಲ ಎನಿಸಿದರೂ ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನೂ ಓದಿ: ನಿಮ್ಮ ಫೇಸ್‌ಕಟ್‌ಗೆ ಸರಿಯಾದ ಹೇರ್‌ಸ್ಟೈಲ್ ಇರಲಿ

    ಹೆಡ್‌ಬ್ಯಾಂಡ್:
    ಹೆಡ್‌ಬ್ಯಾಂಡ್‌ಗಳು ಇತ್ತೀಚೆಗೆ ಹೆಚ್ಚಿನ ಜನಪ್ರಿಯತೆ ಹೊಂದಿದೆ. ಹೆಚ್ಚಾಗಿ ಹೆಡ್ ಬ್ಯಾಂಡ್‌ಗಳನ್ನು ತಲೆಯ ಕೂದಲು ಮುಖಕ್ಕೆ ಬರಬಾರದು ಎಂಬ ಕಾರಣಕ್ಕೆ ಬಳಸುತ್ತಾರೆ. ಇದೀಗ ಮಾರುಕಟ್ಟೆಗಳಲ್ಲಿ ವಿಭಿನ್ನ ಶೈಲಿಯ ಹೆಡ್ ಬ್ಯಾಂಡ್‌ಗಳು ಲಭ್ಯವಿದೆ. ಕೇವಲ ಕೂದಲು ಮುಖಕ್ಕೆ ಬೀಳಬಾರದು ಎಂದು ಬಳಸುವುದಕ್ಕಿಂತಲೂ ಟ್ರೆಂಡಿ ಎಂಬ ಕಾರಣಕ್ಕೂ ಬಳಸಬಹುದು. ಇವು ನಿಮ್ಮನ್ನು ಮಕ್ಕಳಂತೆ ಮುದ್ದಾಗಿ ಕಾಣಿಸುವಂತೆ ಮಾಡಲು ಸಹಾಯ ಮಾಡುತ್ತದೆ.

    ಸ್ಕಾರ್ಫ್:
    ಅತ್ಯಂತ ಬ್ಯುಸಿ ಲೈಫ್ ಅಥವಾ ಜನನಿಬಿಡ ಪ್ರದೇಶಗಳಲ್ಲಿ ದಿನ ಕಳೆಯುತ್ತಿದ್ದಿರಿ ಎಂದಾದರೆ ಪೋನಿ ಟೇಲ್ ಹೇರ್ ಸ್ಟೈಲ್ ಯಾವಾಗಲೂ ಆಯ್ಕೆ ಮಾಡಬಹುದಾದ ಸುಲಭದ ಕೇಶ ವಿನ್ಯಾಸ. ಆದರೆ ಪ್ರತೀ ದಿನ ಪೋನಿ ಟೇಲ್ ಹಾಕಿಕೊಳ್ಳುತ್ತಿದ್ದೀರಿ ಎಂದರೆ ಅದಕ್ಕೆ ಸ್ವಲ್ಪ ಸೊಬಗು ನೀಡಲು ಸ್ಕಾರ್ಫ್ ಕಟ್ಟಿಕೊಳ್ಳಬಹುದು. ಪೋನಿ ಟೇಲ್ ಸುಲಭ ಹಾಗೂ ತಕ್ಷಣವೇ ಕಟ್ಟಿಕೊಳ್ಳಬಹುದು ಹಾಗೂ ಅದು ನಿಮ್ಮನ್ನು ಎಂತಹ ಸ್ಥಳಗಳಲ್ಲೂ ಕಂಫರ್ಟೇಬಲ್ ಆಗಿ ಇರಿಸುತ್ತದೆ. ಅದರ ಮೇಲೆಯೇ ಒಂದು ಸಣ್ಣ ಸ್ಕಾರ್ಫ್ ಮೂಲಕ ಗಂಟು ಹಾಕಿದರೆ, ದಿನನಿತ್ಯದ ಲುಕ್‌ಗಿಂತಲೂ ಭಿನ್ನವಾಗಿ ತೊರುತ್ತೀರಿ. ಇದನ್ನೂ ಓದಿ: ಇಂಡಿಯನ್ ಸ್ಕಿನ್ ಟೋನ್‌ಗೆ ಈ ಬಣ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್

    ಹೇರ್ ಪಿನ್:
    ನೀವು 90ರ ದಶಕದ ಫ್ಯಾಶನ್ ಅನ್ನು ಮತ್ತೆ ಟ್ರೈ ಮಾಡಲು ಬಯಸಿದರೆ ಹೇರ್ ಪಿನ್‌ಗಳು ಹೆಚ್ಚು ಸಹಾಯಕವಾಗಿವೆ. ನಿಮ್ಮ ಮುದ್ದಾದ ಡ್ರೆಸ್‌ಗಳಿಗೆ ಮ್ಯಾಚ್ ಮಾಡಿಕೊಂಡು, ಭಿನ್ನ ವಿಭಿನ್ನ ಶೈಲಿಯ ಹೂವಿನ, ಚಿಟ್ಟೆಯ ಅಥವಾ ಇನ್ನಿತರ ಡಿಸೈನ್‌ನಲ್ಲಿ ಹೇರ್ ಪಿನ್‌ಗಳನ್ನು ಆಯ್ದುಕೊಳ್ಳಬಹುದು.

    ಹೂವಿನ ಕಿರೀಟ:
    ಪುಟ್ಟ ಪುಟ್ಟ ಗಾತ್ರದ, ಬಣ್ಣ ಬಣ್ಣದ ಹೂವುಗಳಿರುವ ಬಳ್ಳಿಯ ಕಿರೀಟ ಅಪರೂಪದ ನೋಟಕ್ಕೆ ಮೆರುಗು ನೀಡುತ್ತದೆ. ತಿಳಿ ಬಣ್ಣದ ಫ್ರಾಕ್ ಅಥವಾ ಯಾವುದೇ ಹಗುರ ಬಟ್ಟೆಗಳೊಂದಿಗೆ ವಿಶೇಷ ಪ್ರವಾಸದ ಸಂದರ್ಭ ಮ್ಯಾಚ್ ಮಾಡಿಕೊಂಡು ಹೋಗಬಹುದು.

    Live Tv

  • ಜಪಾನ್ ಶಾಲೆಗಳಲ್ಲಿ ಪೋನಿಟೇಲ್ ಹೇರ್‌ಸ್ಟೈಲ್ ಬ್ಯಾನ್!

    ಜಪಾನ್ ಶಾಲೆಗಳಲ್ಲಿ ಪೋನಿಟೇಲ್ ಹೇರ್‌ಸ್ಟೈಲ್ ಬ್ಯಾನ್!

    ಟೋಕಿಯೋ: ಹುಡುಗಿಯರಿಗೆ ಹೆಚ್ಚು ಸುಲಭ ಹಾಗೂ ಆರಾಮ ಎನಿಸುವ ಕೇಶವಿನ್ಯಾಸವೆಂದರೆ ಪೋನಿಟೇಲ್. ನೀಳವಾದ ಕೂದಲಿದ್ದೂ ಪೋನಿಟೇಲ್ ಹಾಕದಿರುವ ಮಹಿಳೆ ಇರಲು ಸಾಧ್ಯವೇ ಇಲ್ಲ. ಹೀಗಿರುವಾಗ ಜಪಾನ್ ದೇಶದ ಶಾಲೆಗಳಲ್ಲಿ ಪೋನಿಟೇಲ್ ಹೇರ್ ಸ್ಟೈಅನ್ನು ಬ್ಯಾನ್ ಮಾಡಲಾಗಿದೆ. ಇದಕ್ಕೆ ಕಾರಣ ಇಲ್ಲಿದೆ.

    ಮಹಿಳೆಯರ ಕತ್ತಿನ ಭಾಗ ಪುರುಷರಿಗೆ ಹೆಚ್ಚಿನ ಲೈಂಗಿಕ ಪ್ರಚೋದನೆ ನೀಡುತ್ತದೆ. ಮಹಿಳೆಯರು ಪೋನಿಟೇಲ್ ಹಾಕಿಕೊಂಡಲ್ಲಿ ಕತ್ತು ಸಂಪೂರ್ಣವಾಗಿ ಕಾಣಿಸಿಕೊಳ್ಳುತ್ತದೆ ಎಂಬ ಕಾರಣಕ್ಕೆ ಜಪಾನ್‌ನ ಶಾಲೆಗಳಲ್ಲಿ ಮಕ್ಕಳು ಪೋನಿಟೇಲ್ ಹೇರ್ ಸ್ಟೈಲ್ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಭಾರತದ ರಫೇಲ್ ಯುದ್ಧ ವಿಮಾನ ಎದುರಿಸಲು ಚೀನಾದ ಜೆ-10ಸಿ ಫೈಟರ್ ಜೆಟ್ ಖರೀದಿಸಿದ ಪಾಕಿಸ್ತಾನ

    ಜಪಾನ್ ಕೇವಲ ಕೇಶವಿನ್ಯಾಸದ ಬಗ್ಗೆ ನಿರ್ಬಂಧ ಹೇರಿರದೇ ಹುಡುಗಿಯರ ಒಳ ಉಡುಪುಗಳ ಬಗ್ಗೆಯೂ ನಿರ್ಬಂಧ ಹೇರಿದೆ. ಶಾಲೆಗೆ ಹೋಗುವ ಹುಡುಗಿಯರು ಕೇವಲ ಬಿಳಿ ಬಣ್ಣದ ಒಳ ಉಡುಪುಗಳನ್ನು ಮಾತ್ರವೇ ಧರಿಸುವಂತೆ ತಿಳಿಸಿದೆ. ಇದನ್ನೂ ಓದಿ: ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ

    ಈ ಹಿಂದೆ ಜಪಾನ್‌ನ ಪುಕುವೋಕಾ ಪ್ರದೇಶದಲ್ಲಿ ಒಂದು ಸಮೀಕ್ಷೆ ನಡೆಸಲಾಗಿತ್ತು. ಹುಡುಗಿಯರ ಕತ್ತು ಹುಡುಗರಿಗೆ ಹೆಚ್ಚು ಲೈಂಗಿಕ ಪ್ರಚೋದನೆ ನೀಡುತ್ತದೆ ಎಂಬ ವಿಚಾರ ಸಮೀಕ್ಷೆಯ ಮುಖಾಂತರ ಕಂಡುಕೊಳ್ಳಲಾಗಿತ್ತು. ಬಳಿಕ ಅಲ್ಲಿನ ಕೆಲವು ಶಾಲೆಗಳಲ್ಲಿ ಪೋನಿಟೇಲ್ ಅನ್ನು ನಿರ್ಬಂಧಿಸಲಾಗಿತ್ತು. ಅದರೊಂದಿಗೆ ಲಂಗದ ಉದ್ದ, ಸಾಕ್ಸ್ಗಳ ಬಗ್ಗೆಯೂ ನಿಯಮಗಳನ್ನು ಮಾಡಲಾಗಿತ್ತು.

  • ನಿಮ್ಮ ಬಜೆಟ್‌ನಲ್ಲಿ ಚಂದಕಾಣಿಸುವ ಟಿಪ್ಸ್

    ನಿಮ್ಮ ಬಜೆಟ್‌ನಲ್ಲಿ ಚಂದಕಾಣಿಸುವ ಟಿಪ್ಸ್

    ಅಂದವಾಗಿ ಕಾಣಿಸಬೇಕು ಎಂಬ ಆಸೆ ಯಾರಿಗೆ ತಾನೇ ಇಲ್ಲ? ಜನ ಸಮೂಹದ ನಡುವೆ ಇತರರ ಗಮನ ಸೆಳೆಯಬೇಕು ಎಂಬ ಹಂಬಲ ಎಲ್ಲರಿಗೂ ಇರುತ್ತೆ. ಆದರೆ ಒಳ್ಳೆಯ ಬಟ್ಟೆ, ಆಕ್ಸಸರೀಸ್ ಕೊಳ್ಳುವ ಬಜೆಟ್ ಎಲ್ಲರಲ್ಲೂ ಇರುತ್ತೆ ಎನ್ನಲಾಗುವುದಿಲ್ಲ.

    ನಿಮ್ಮ ಬಳಿ ಇರುವಂತಹ ಬಟ್ಟೆ ಹಾಗೂ ಆಕ್ಸಸರಿಗಳಲ್ಲೇ ಹೇಗೆ ಚೆನ್ನಾಗಿ ಕಾಣಿಸಬಹುದು ಎಂಬುದರ ಬಗ್ಗೆ ಕೆಲವು ಟಿಪ್ಸ್ ಇಲ್ಲಿದೆ. ಈ ಟಿಪ್ಸ್‌ಗಳು ಕೇವಲ ಹುಡುಗಿಯರಿಗೆ ಅಥವಾ ಹುಡುಗರಿಗೆ ಎನ್ನುವಂತಹ ಬೇಧವಿಲ್ಲ. ಹಲವು ಟಿಪ್ಸ್‌ಗಳು ಇಬ್ಬರಿಗೂ ಅನ್ವಯವಾಗುವಂತಿದೆ.

    ನಿಮ್ಮ ಬಟ್ಟೆ ಫಿಟ್ ಆಗಿರಲಿ:
    ನೀವು ಧರಿಸುವಂತಹ ಬಟ್ಟೆ ಯಾವುದೇ ಇರಲಿ. ಅದು ನಿಮಗೆ ಚೆನ್ನಾಗಿ ಕಾಣಿಸಬೇಕು ಎಂದರೆ ನಿಮ್ಮ ಸೈಜ್‌ಗೆ ಫಿಟ್ ಆಗಿರುವುದು ಮುಖ್ಯ. ನೀವು ಹೊಸ ಬಟ್ಟೆ ಕೊಂಡಿದ್ದೀರಿ ಎಂದಾದಲ್ಲಿ ಹೆಚ್ಚಿನ ಸಂದರ್ಭದಲ್ಲಿ ಅವು ನಿಮ್ಮ ಪರ್ಫೆಕ್ಟ್ ಸೈಜ್‌ನಲ್ಲಿ ಇರುವುದಿಲ್ಲ. ಹೀಗಿರುವಾಗ ಅದನ್ನು ನಿಮ್ಮ ಸೈಜ್‌ಗೆ ಸ್ಟಿಚ್ ಮಾಡಿಸಿಕೊಳ್ಳಿ. ನಿಮ್ಮ ಹತ್ತಿರದ ಟೈಲರ್‌ಗಳು ಖಂಡಿತಾ ಅದನ್ನು ಕಡಿಮೆ ಬೆಲೆಗೆ ಸ್ಟಿಚ್ ಮಾಡಿಸಿ ಕೊಡುತ್ತಾರೆ. ಇದನ್ನೂ ಓದಿ: ಮಹಿಳೆಯರಿಗೆ ಸೂಟ್ ಆಗುವಂತಹ 5 ಬೆಸ್ಟ್ ಆರ್ಟಿಫಿಶಿಯಲ್ ಫ್ಲವರ್ ಹೇರ್ ಸ್ಟೈಲ್‍ಗಳು

    ಕೆಲವೊಮ್ಮೆ ನಿಮ್ಮ ಹಳೆಯ ಬಟ್ಟೆಗಳು ಲೂಸ್ ಅಥವಾ ಟೈಟ್ ಆಗಿರುವಾಗಲೂ ಟೈಲರ್ ಬಳಿ ಹೋಗಿ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಈ ರೀತಿ ನೀವು ನಿಮ್ಮ ಬಟ್ಟೆಗಳನ್ನು ನಿಮ್ಮ ಸೈಜ್‌ಗೆ ಫಿಟ್ ಮಾಡಿಸಿಕೊಳ್ಳುವುದರಿಂದ ನಿಮಗೆ ಸ್ಟ್ಯಾಂಡರ್ಡ್ ಲುಕ್ ಬರುವುದು ಖಂಡಿತಾ.

    ಆಕ್ಸಸರಿ ಟಿಪ್ಸ್:
    ನೀವು ಯಾವುದೇ ಒಂದು ಬಟ್ಟೆ ಧರಿಸಿದಾಗ ಅದರೊಂದಿಗೆ ತೊಡುವ ಚಿಕ್ಕ ಪುಟ್ಟ ಆಕ್ಸಸರಿ ಕೂಡಾ ಮುಖ್ಯವಾಗಿರುತ್ತೆ. ಅವುಗಳಲ್ಲಿ ನಿಮ್ಮ ಬ್ಯಾಗ್, ಜುವೆಲ್ಲರಿ, ವಾಚ್, ಕೂಲಿಂಗ್‌ಗ್ಲಾಸ್‌ಗಳೂ ಸೇರಿಕೊಳ್ಳುತ್ತದೆ. ಇದನ್ನೂ ಓದಿ: ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಹಳ್ಳಿ ಸುಂದರಿ ನವ್ದೀಪ್ ಕೌರ್

    ಈ ಚಿಕ್ಕ ಪುಟ್ಟ ವಸ್ತುಗಳ ಮೇಲೆ ಜನರ ಗಮನ ಹರಿಯುತ್ತಲೇ ಇರುತ್ತದೆ. ಹೀಗಾಗಿ ಅವುಗಳನ್ನು ನೀಟ್ ಆಗಿ ಧರಿಸುವುದೂ ಮುಖ್ಯವಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಹರಿದ ಅಥವಾ ಕಿತ್ತು ಹೋಗಿರುವ ಆಕ್ಸಸರಿಗಳನ್ನು ಎಂದಿಗೂ ಧರಿಸಬೇಡಿ. ನಿಮ್ಮ ಬಟ್ಟೆ ಚೆನ್ನಾಗಿದ್ದರೂ ಹಾಳಾಗಿರುವ ಆಕ್ಸಸರಿ ನಿಮ್ಮ ಇಡೀ ಲುಕ್ಕನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ.

    ಶೂಗಳು ನೀಟಾಗಿರಲಿ:
    ಲೆದರ್, ರಬ್ಬರ್ ಅಥವಾ ಬಟ್ಟೆ. ಚಪ್ಪಲಿಗಳನ್ನು ಯಾವುದರಿಂದ ತಯಾರಿಸಿದ್ದಾರೆ, ಯಾವ ಬ್ರ್ಯಾಂಡ್ ಎಂಬುದು ಮುಖ್ಯವಲ್ಲ. ಬದಲಿಗೆ ಅವು ಎಷ್ಟು ನೀಟ್ ಆಗಿದೆ ಎಂಬುದೇ ಮುಖ್ಯ. ಇದನ್ನೂ ಓದಿ: ಮಗು ಪಡೆಯುವುದು ನಮ್ಮ ಜೀವನದ ಅತಿ ದೊಡ್ಡ ಕನಸು: ಪ್ರಿಯಾಂಕಾ ಚೋಪ್ರಾ

    ಹೆಚ್ಚಿನವರು ತಮ್ಮ ಗಮನವನ್ನು ಇತರರು ಧರಿಸುವ ಪಾದರಕ್ಷೆಗಳ ಮೇಲೆ ಹರಿಸುತ್ತಾರೆ ಎನ್ನುವುದು ಫ್ಯಾಕ್ಟ್. ಹೀಗಾಗಿ ಅವುಗಳನ್ನು ಕ್ಲೀನ್ ಹಾಗೂ ನೀಟ್ ಆಗಿ ಧರಿಸಬೇಕಾಗುತ್ತದೆ. ಶೂ ಆಗಿದ್ದಲ್ಲಿ ಅದನ್ನು ಪಾಲಿಶ್ ಮಾಡಿ ಧರಿಸಿ. ಬಟ್ಟೆಯ ಚಪ್ಪಲಿಗಳಾಗಿದ್ದರೆ ಇಂತಿಷ್ಟು ದಿನಗಳಿಗೊಮ್ಮೆ ಸ್ವಚ್ಛಗೊಳಿಸಿ ಧರಿಸಿ. ಇದರೊಂದಿಗೆ ಅವುಗಳನ್ನು ಸರಿಯಾದ ರೀತಿಯಲ್ಲಿ ತೊಡಿ. ಚಪ್ಪಲಿಗಳ ಬೆಲ್ಟ್ ಅರ್ಧ ಹಾಕಿಕೊಳ್ಳುವುದು ಅಥವಾ ಶೂಗಳ ಲೇಸ್ ಬೇಕಾ ಬಿಟ್ಟಿ ಗಂಟು ಹಾಕಿಕೊಳ್ಳುವುದು ಎಂದಿಗೂ ಮಾಡಬೇಡಿ.

    ಕೇಶ ವಿನ್ಯಾಸ:
    ನೀವು ತೊಟ್ಟಿರುವ ಉಡುಗೆಗೆ ಸರಿಯಾಗಿ ಮ್ಯಾಚ್ ಆಗುವಂತಹ ಕೇಶವಿನ್ಯಾಸ ಮಾಡಿಕೊಳ್ಳುವುದು ಅಗತ್ಯ. ಇದರಲ್ಲಿ ಮುಖ್ಯವಾಗಿ ಹುಡುಗಿಯರು ಚೂಡಿದಾರ್ ಗಳಂತಹ ಎತ್ನಿಕ್ ಬಟ್ಟೆಗಳಿಗೆ ಪೋನಿ ಟೇಲ್ ಗಳಂತಹ ವೆಸ್ಟರ್ನ್ ಫ್ಯಾಶನ್ ಮಾಡಿಲು ಎಂದಿಗೂ ಹೋಗದಿರಿ. ಇದು ನಿಮ್ಮ ಲುಕ್ ಅನ್ನು ಸಂಪೂರ್ಣವಾಗಿ ಹಾಳುಗೆಡವುತ್ತದೆ. ಯಾವ ರೀತಿಯ ಬಟ್ಟೆಗಳಿಗೆ ಯಾವ ರೀತಿಯ ಕೇಶವಿನ್ಯಾಸ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಜ್ಞಾನ ಇರುವುದು ಪ್ರತಿಯೊಬ್ಬರಿಗೂ ಮುಖ್ಯ. ಇದನ್ನೂ ಓದಿ: ಪಡ್ಡೆಗಳ ನಿದ್ದೆಗೆ ಕಿಚ್ಚು ಹತ್ತಿಸುವ ಸನ್ನಿ ಲಿಯೋನ್- Video Viral

    ಸಂದರ್ಭಕ್ಕೆ ತಕ್ಕಂತೆ ಬಟ್ಟೆ:
    ನೀವು ಎಲ್ಲಿಗಾದರೂ ಹೋಗುತ್ತಿರುವಾಗ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂಬುದರ ಬಗ್ಗೆ ಜ್ಞಾನ ನಿಮಗೆ ಇರಲಿ. ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಉಡಗೆ, ಮಾಡರ್ನ್ ಈವೆಂಟ್‌ಗಳಿಗೆ ಮಾಡರ್ನ್ ಉಡುಗೆ ಧರಿಸುವುದರ ಬಗ್ಗೆ ತಿಳಿದಿರಲಿ. ಇವುಗಳ ಬಗ್ಗೆ ಎಂದಗೂ ಗೊಂದಲ ಬೇಡ. ನೀವು ಇನ್ನೊಬ್ಬರ ಗಮನ ಸೆಳೆಯಬೇಕು ಎಂಬ ಕಾರಣಕ್ಕೆ ಮಿಸ್ ಮ್ಯಾಚ್ ಉಡುಗೆ ತೊಡುವುದು ಖಂಡಿತಾ ಸರಿಯಲ್ಲ. ಇದರಿಂದ ಇತರರು ನಿಮ್ಮ ಉಡುಗೆಯ ಬಗ್ಗೆ ಆಡಿಕೊಳ್ಳುವಂತಹ ಸಾಧ್ಯತೆ ಇರುತ್ತದೆ.

  • ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್, ಟ್ರಿಮ್‍ಗೂ ತಾಲಿಬಾನ್ ನಿಷೇಧ

    ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್, ಟ್ರಿಮ್‍ಗೂ ತಾಲಿಬಾನ್ ನಿಷೇಧ

    ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನಿಗಳು ತಮ್ಮ ವಿಕೃತ ಕಾನೂನುಗಳ ಮೂಲಕ ಜನರನ್ನು ಭಯಭೀತಗೊಳಿಸುವ ಜೊತೆಗೆ ಕಿರುಕುಳ ನೀಡುತ್ತಿರುವ ವಿಷಯ ಹೊಸತೇನು ಅಲ್ಲ. ಇದೀಗ ಕೇಶ ವಿನ್ಯಾಸಕ್ಕೂ ನಿಷೇಧ ಹೇರಿರುವುದು ಸುದ್ದಿಯಾಗುತ್ತಿದೆ.

    ಪುರುಷರ ಕೇಶ ವಿನ್ಯಾಸ ಮೇಲೂ ನಿಷೇಧ ಹೇರಿರುವುದಾಗಿ ಘೋಷಿಸಿದೆ. ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಪುರುಷರು ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್ ಮಾಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ:  ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ

    ಸ್ಲಾಮಿಕ್ ಓರಿಯಂಟೇಶನ್ ಸಚಿವಾಲಯದ ಅಧಿಕಾರಿಗಳು, ಪ್ರಾಂತೀಯ ರಾಜಧಾನಿ ಲಷ್ಕರ್ ಗಾಹ್‍ನಲ್ಲಿರುವ ಪುರುಷರ ಸಲೂನ್‍ಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ, ಸ್ಟೈಲಿಷ್ ಕೇಶ ವಿನ್ಯಾಸ, ಸಂಪೂರ್ಣ ದಾಡಿ ತೆಗೆಯುವುದು ಹಾಗೂ ಟ್ರಿಮ್ ಮಾಡಬಾರದು ಎಂದು ಸೂಚಿಸಿದೆ. ಇದನ್ನೂ ಓದಿ:  ಹೋಟೆಲ್‍ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಇನ್ಸ್​ಪೆಕ್ಟರ್ ಎಸಿಬಿ ಬಲೆಗೆ!

    ಕ್ಷೌರದ ಅಂಗಡಿಗಳಲ್ಲಿ ಜನಪ್ರಿಯ ಸಂಗೀತ ಇಲ್ಲವೇ ಶ್ಲೋಕಗಳನ್ನು ಬಳಸಬಾರದು ಎಂದು ಸಹ ತಾಲಿಬಾನ್ ಆದೇಶಿಸಿದೆ. ಪ್ರಸ್ತುತ ತಾಲಿಬಾನ್ ಆಡಳಿತದಲ್ಲಿ ಅನುಸರಿಸುತ್ತಿರುವ ದಮನಕಾರಿ ಕಾನೂನು ನೋಡಿದರೆ ಮತ್ತೆ ಹಳೆಯ ನೀತಿಗಳಿಗೆ ಮರಳುತ್ತಿವೆ. ನಾವು ಬದಲಾಗಿದ್ದೇವೆ ಎಂದು ಹೇಳುತ್ತಲೇ ತಮ್ಮ ಹಳೆಯ ಧೋರಣೆಯನ್ನು ಪಾಲಿಸುತ್ತಾ ತಾಲಿಬಾನ್, ಅಫ್ಘಾನಿಸ್ತಾನದಲ್ಲಿ ದೊಡ್ಡ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮುಂದುವರಿಸಿದೆ. ಈ ಗುಂಪು ಇತ್ತೀಚೆಗೆ ಪಶ್ಚಿಮ ಹೆರಾತ್ ನಗರದಲ್ಲಿ ಅಪಹರಿಸಲು ಯತ್ನಿಸಿದ ನಾಲ್ವರ ಹತ್ಯೆ ನಡೆಸಿ ಅವರ ಮೃತ ದೇಹಗಳನ್ನು ಬಹಿರಂಗ ಸ್ಥಳದಲ್ಲಿ ಪ್ರದರ್ಶಿಸಿತ್ತು.