Tag: ಕೇಶ ಮುಂಡನ

  • ಮಾತೆ ಮಹಾದೇವಿ ದೊಡ್ಡವರು, ಕೇಶಮುಂಡನಕ್ಕೆ ನಾವು ಯಾರಿಗೂ ಹೇಳಿಲ್ಲ: ಸಿದ್ದಲಿಂಗ ಶ್ರೀಗಳು

    ಮಾತೆ ಮಹಾದೇವಿ ದೊಡ್ಡವರು, ಕೇಶಮುಂಡನಕ್ಕೆ ನಾವು ಯಾರಿಗೂ ಹೇಳಿಲ್ಲ: ಸಿದ್ದಲಿಂಗ ಶ್ರೀಗಳು

    ತುಮಕೂರು: ನಮ್ಮ ಪರಮಪೂಜ್ಯರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಬಲವಂತವಾಗಿ ಕೇಶಮುಂಡನಕ್ಕೆ ನಾವು ಯಾರಿಗೂ ಹೇಳಿಲ್ಲ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

    ಸಿದ್ದಗಂಗಾ ಮಠದಲ್ಲಿ 8 ಸಾವಿರ ಮಕ್ಕಳ ಸಾಮೂಹಿಕ ಕೇಶ ಮುಂಡನ ಮೂರ್ಖತನ ಎಂದ ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ವರ್ಷದಂತೆ ಸವಿತಾ ಸಮಾಜದವರು ಮಕ್ಕಳಿಗೆ ಕಟಿಂಗ್ ಮಾಡ್ತಾರೆ. ಮಾತೆ ಮಹಾದೇವಿ ದೊಡ್ಡವರು. ತಿಳಿದವರು ಹೇರ್ ಕಟಿಂಗ್ ಮಾಡುವುದನ್ನು ಕೇಶಮುಂಡನ ಅಂತ ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದು ಹೇಳಿದರು.

    ನಮ್ಮ ಪರಮಪೂಜ್ಯರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಹಿಂದೂ ಮುಸಲ್ಮಾನ್, ಕ್ರಿಶ್ಚಿಯನ್ ಎಲ್ಲರು ಅವರನ್ನು ಪ್ರೀತಿಸುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸವಿತಾ ಸಮಾಜದ ಬಂಧುಗಳು ಶಿಬಿರವನ್ನು ಆಯೋಜಿಸಿ ನಮ್ಮ ಮಕ್ಕಳಿಗೆ ಕಟಿಂಗ್ ಮಾಡುತ್ತಾರೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ವರ್ಷ ಇದು ಹೊಸದೆನಲ್ಲ ಎಂದು ತಿಳಿಸಿದರು.

    ಕೇಶಮುಂಡನ ಅಲ್ಲ. ಪ್ರತಿ ವರ್ಷ ಸವಿತಾ ಸಮಾಜದವರು ಶಿಬಿರವನ್ನು ಆಯೋಜಿಸಿ ತಲೆ ಕೂದಲನ್ನು ಕತ್ತರಿಸುತ್ತಾರೆ. ಬಲವಂತವಾಗಿ ಯಾರ ತಲೆ ಕೂದಲನ್ನು ಕತ್ತರಿಸುವುದಿಲ್ಲ. ಸ್ವ ಇಚ್ಛೆಯಿಂದ ಮಕ್ಕಳೇ ತಲೆ ಕೂದಲನ್ನು ಕತ್ತರಿಸಿಕೊಳ್ಳುತ್ತಾರೆ ಎಂದು ಹೇಳಿದರು.

    https://www.youtube.com/watch?v=thcpuuazfB8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಮಾನ ವೇತನಕ್ಕಾಗಿ ಆಗ್ರಹಿಸಿ ಶಿಕ್ಷಕಿಯರಿಂದ ಕೇಶ ಮುಂಡನ

    ಸಮಾನ ವೇತನಕ್ಕಾಗಿ ಆಗ್ರಹಿಸಿ ಶಿಕ್ಷಕಿಯರಿಂದ ಕೇಶ ಮುಂಡನ

    ಭೋಪಾಲ್: ಸಮಾನ ವೇತನಕ್ಕಾಗಿ ಆಗ್ರಹಿಸಿ ಶಿಕ್ಷಕಿಯರು ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ಪುರುಷರಿಗಿಂತ ಕಡಿಮೆ ವೇತನ ನೀಡಲಾಗುತ್ತಿದ್ದು, ಸಂಬಳದಲ್ಲಿ ಸಮಾನತೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

    ಶನಿವಾರ ರಾಜಧಾನಿ ಭೋಪಾಲ್ ಸೇರಿದಂತೆ ರಾಜ್ಯಾದ್ಯಂತ ‘ಅಧ್ಯಾಪಕ ಅಧಿಕಾರ ಯಾತ್ರಾ’ ಎಂಬ ಪ್ರತಿಭಟನೆ ನಡೆಸಿದ್ದಾರೆ. ಭೋಪಾಲ್‍ನ ಜಂಬೂರಿ ಮೈದಾನದಲ್ಲಿ ಸೇರಿದ ಪ್ರತಿಭಟನಾಕರರು ಸರ್ಕಾರಕ್ಕೆ ತಮ್ಮ ಕೇಶವನ್ನು ಮುಡಿಯಾಗಿ ಕೊಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕೆಲವು ಶಿಕ್ಷಕರು ತಮ್ಮ ಕೇಶ ಮುಂಡನ ಮಾಡಿಕೊಳ್ಳುವ ಮೂಲಕ ಪ್ರತಿಭಟನಾ ನಿರತ ಶಿಕ್ಷಕಿಯರಿಗೆ ಸಾಥ್ ನೀಡಿದ್ರು. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಿಕ್ಷಕ ವರ್ಗ ಪ್ರತಿಭಟನೆ ನಡೆಸಿದೆ.

    ಬೇಡಿಕೆಗಳೇನು?: ಪ್ರತಿಭಟನಾನಿರತರು ಸಮಾನ ವೇತನ, ಇತರೆ ಸರ್ಕಾರಿ ಉದ್ಯೋಗಸ್ಥರಿಗೆ ದೊರೆಯುವ ಸವಲತ್ತುಗಳು, ಉದ್ಯೋಗ ಭದ್ರತೆ, ಕ್ರಮಬದ್ಧ ವರ್ಗಾವಣೆಯ ಪಾಲಿಸಿ ಸೇರಿದಂತೆ ಮುಂತಾದ ಬೇಡಿಕೆಗಳನ್ನು ಪೂರ್ಣಗೊಳಿಸಬೇಕೆಂದು ಪ್ರತಿಭಟನೆ ಮಾಡಿದ್ದಾರೆ.

    ಪ್ರತಿಭಟನೆಯಲ್ಲಿ ಮುಂಡನದಿಂದ ಸಂಗ್ರಹವಾಗಿರುವ ಕೇಶವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪತ್ನಿ ಸಾಧನಾ ಸಿಂಗ್ ಅವರಿಗೆ ಉಡುಗೊರೆಯಾಗಿ ನೀಡಲಾಗುವುದು ಎಂದು ಆಜಾದ್ ಅಧ್ಯಾಪಕ ಸಂಘದ ಅಧ್ಯಕ್ಷ ಶಿವರಾಜ್ ವರ್ಮಾ ತಿಳಿಸಿದ್ದಾರೆ.