Tag: ಕೇಶವ ಗೌಡ

  • ಅನಾಮಿಕ ವ್ಯಕ್ತಿ ನಟೋರಿಯಸ್ ಕೆಲಸ ಮಾಡಿ ಕ್ಷೇತ್ರದಿಂದ ಉಚ್ಚಾಟನೆಗೊಂಡಿದ್ದ: ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ

    ಅನಾಮಿಕ ವ್ಯಕ್ತಿ ನಟೋರಿಯಸ್ ಕೆಲಸ ಮಾಡಿ ಕ್ಷೇತ್ರದಿಂದ ಉಚ್ಚಾಟನೆಗೊಂಡಿದ್ದ: ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ

    ಮಂಗಳೂರು: ಅನಾಮಿಕ ವ್ಯಕ್ತಿ ಯಾರು ಅಂತ ಇಡೀ ಧರ್ಮಸ್ಥಳದವರಿಗೆ (Dharmasthala) ಈಗ ಗೊತ್ತಾಗಿದೆ. ಆತ ನಟೋರಿಯಸ್ ಕೆಲಸ ಮಾಡಿದ ಕ್ಷೇತ್ರದಿಂದ ಉಚ್ಚಾಟನೆ ಆಗಿದ್ದ ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ವಕೀಲ ಕೇಶವ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿ (Dharmasthala Mass Burials) ಪ್ರಕರಣ ಸಂಬಂಧ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಪ್ರತಿದಿನ 30 ಸಾವಿರದಷ್ಟು ಪ್ರವಾಸಿಗರು ಧರ್ಮಸ್ಥಳಕ್ಕೆ ಬರುತ್ತಾರೆ. ಅನೇಕ ಸಮಸ್ಯೆಗಳಿಂದ ಬಂದು ಜೀವನವನ್ನು ಅಂತ್ಯ ಮಾಡುತ್ತಿದ್ದರು. ಪ್ರವಾಸಿಗರು ಮೃತಪಟ್ಟರೆ ಅಂತ್ಯಸಂಸ್ಕಾರ ಮಾಡುವುದೇ ದೊಡ್ಡ ಸಾಹಸವಾಗಿತ್ತು. ಅನಾಮಿಕ ವ್ಯಕ್ತಿ ಹೆಣದ ಮೇಲೆ ಇದ್ದ ಚಿನ್ನ, ಹಣ ಕದಿಯುತ್ತಿದ್ದ. ಈ ಕಾರಣಕ್ಕೆ ಆತನನ್ನು 2014ರಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಈ ಬೆಳವಣಿಗೆ ಹಿಂದೆ ಇರುವ ಷಡ್ಯಂತ್ರ ಯಾರದ್ದು ಎಂದು ಗೊತ್ತಿದೆ. ಕ್ಷೇತ್ರದ ಮೇಲೆ ಆರೋಪ ಮಾಡುವವರಿಗೆ ದೇವರು ತಕ್ಕ ಬುದ್ಧಿ ಕೊಡಲಿ ಎಂದರು. ಇದನ್ನೂ ಓದಿ: ಗಾಳಿ ಆಂಜನೇಯ ದೇಗುಲ ಭಕ್ತರಿಗೆ ಗುಡ್‌ನ್ಯೂಸ್ – ಶೀಘ್ರದಲ್ಲೇ ಹೋಮ, ಹವನ ಮಾಡಿಸೋಕೆ ಆನ್‌ಲೈನ್ ಸೇವೆ ಆರಂಭ

    ಅನಾಮಿಕ ವ್ಯಕ್ತಿಯ ಹಿಂದೆ ಯಾರಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಈ ವ್ಯಕ್ತಿಯನ್ನು ವಿಚಾರಣೆ ಮಾಡಬೇಕು, ಮಂಪರು ಪರೀಕ್ಷೆ ಮಾಡಬೇಕು. ಆತನ ಹಿನ್ನೆಲೆಯಲ್ಲಿರುವವರ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಅನಾಮಿಕ ಹೇಳಿದ ಹಾಗೆ ಕೊಲೆ, ಅತ್ಯಾಚಾರ, ಅನ್ಯಾಯ ಪ್ರಕರಣ ನಡೆದಿಲ್ಲ. ಉತ್ಖನನ ಸಂದರ್ಭ ಒಂದೆರಡು ಮೃತ ದೇಹ ಸಿಕ್ಕರೂ ಅಚ್ಚರಿಯಿಲ್ಲ. ಎಸ್‌ಐಟಿ (SIT) ಮೂಲಕ ಎಲ್ಲಾ ರೀತಿಯ ಸಮಗ್ರ ತನಿಖೆಯಾಗಲಿ ಎಂದು ತಿಳಿಸಿದರು. ಇದನ್ನೂ ಓದಿ: 10,000 ಕೊಡ್ತೀನಿ ಬಾ – ಯುವತಿಯನ್ನು ಮಂಚಕ್ಕೆ ಕರೆದ ಕಾಮುಕ ಪ್ರಿನ್ಸಿಪಾಲ್ ಅರೆಸ್ಟ್

    ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ರಾಜೀನಾಮೆ ಕೊಡಲು ಒತ್ತಾಯಿಸುತ್ತಾರೆ. ರಾಜೀನಾಮೆ ಕೊಡಲು ಮುಖ್ಯಮಂತ್ರಿ ಅಥವಾ ಶಾಸಕರಲ್ಲ, ಅವರು ಕ್ಷೇತ್ರದ ಧರ್ಮಾಧಿಕಾರಿಗಳು. ವಕೀಲರು ಹತ್ತಾರು ಹೆಣಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ, ಇಂತಹ ಬಣ್ಣದ ಕಾಗೆಗಳನ್ನು ಹಾರಿಸುತ್ತಾರೆ. ಎಲ್ಲರ ತನಿಖೆ ಆಗಬೇಕು, ಎಲ್ಲಾ ಸತ್ಯಗಳು ಹೊರಬರಬೇಕು ಎಂದು ಹೇಳಿದರು. ಇದನ್ನೂ ಓದಿ: ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಹೋದ್ರೆ ಎಸ್‌ಐಟಿ ಮುಖ್ಯಸ್ಥರ ಬದಲಾವಣೆ – ಸಿಎಂ